ವಾಕ್ ಮುಗಿಸಿ ಬರುವಾಗ ಕಣ್ಣು ಪೋಸ್ಟ್ ಬಾಕ್ಸ್ ಕಡೆ ಹೊರಳಿತು. . ಪೋಸ್ಟ್ ಬಾಕ್ಸ್ ತುಂಬಿ ತುಳುಕುತ್ತಾ ಇತ್ತು. ಸಿಕ್ಕ ಎಡೆಯಲ್ಲೆಲ್ಲಾ ಕಾಗದ ಸರ್ಕ್ಯುಲರ್ ಗಳನ್ನು ತುರುಕಿಸಿಟ್ಟಿದ್ದರು. ಕಸದವರ ಪಾಲಿಗೆ ಎಷ್ಟು ಹೋದವೋ ಗೊತ್ತಿಲ್ಲ . ಅದರೂ ನಾನು ತಲೆ ಕೆಡಿಸಿಕೊಂಡಿರಲಿಲ್ಲ. ಪೋಸ್ಟ್ ಬಾಕ್ಸ್ ನ ಬೀಗದ ಕೈ ಕಳೆದು ಹೋಗಿ ಸುಮಾರು ಸಮಯ ಆಗಿತ್ತು. ಅಸಲಿ ಬೀಗದ ಕೈ ಜತೆ ಕೊಟ್ಟ ಕಾಪಿ ಕೂಡ ಒಂದೇ ಕೀಲಿಕೈ ಗೊಂಚಲಿನಲ್ಲಿದ್ದುದರಿಂದ ಪೋಸ್ಟ್ ಬಾಕ್ಸ್ ತೆರೆಯಲು ನಕಲಿ ಬೀಗದ ಕೈ ಮಾಡುವವರನ್ನೇ ಕರೆ ತರ ಬೇಕಿತ್ತು. ಕೊನೆಗೆ ಸೆಕ್ಯೂರಿಟಿ ಯವರಿಗೆ ಹೇಳಿಟ್ಟೆ ನಮ್ಮ ಪೋಸ್ಟ್ ಏನಾದರೂ ಇದ್ದಲ್ಲಿ ನಿಮ್ಮ ಕಡೆ ಇಟ್ಟುಕೊಳ್ಳಿ ನಾ ವಾಕ್ ಮುಗಿಸಿ ಬಂದಾಗ ಕೊಡಿ ಅಂತ. ಅವರು ಠೀಕ್ ಹೈ ಮೇಡಂ ' ಅಂದು , ನೆನಪಲ್ಲಿಟ್ಟು ಕೊಂಡು ಹಾಗೆ ಮಾಡುತ್ತಿದ್ದರು ಕೂಡ .
ಪರ ಊರಲ್ಲಿದ್ದ ನಿಹಾ ಫೋನ್ ಮಾಡಿದಳು 'ಅಮ್ಮ ನನ್ನದೊಂದು ಕಾಂಟ್ರಾಕ್ಟ್ ಪೋಸ್ಟ್ ನಲ್ಲಿ ಕಳುಹಿಸಿದ್ದಾರೆ ' ಪ್ಲೀಸ್ ಚೆಕ್ ಮಾಡಿ ಹೇಳು ಅಂದಾಗ ನನಗೆ ಆತಂಕ. ಸುಮಾರು ಸಲ ಫೋನ್ ಮಾಡಿ ಕೇಳಿದಳು.ನಾನು ಅವಳಿಗೆ ಕಾಂಟ್ರಾಕ್ಟ್ ಎಲ್ಲಾ ಹಾಗೆ ಪೋಸ್ಟ್ ನಲ್ಲಿ ಕಳುಹಿಸಲ್ಲ ಕೊರಿಯರ್ ಮಾಡ್ತಾರೆ. ಅಂದೆ. ಇಲ್ಲ ಆದ್ರೂ ಚೆಕ್ ಮಾಡು ಅಂದ್ಲು . ಮನೆ ಎಲ್ಲ ತಲೆ ಕೆಳ್ಗೆ ಮಾಡಿ ಬೀಗದ ಕೈ ಹುಡುಕಿದೆ. ಅಕ್ಕ ಕೂಡ ಹುಡುಕಿದಳು . ಪುಟ್ಟ ಬೀಗದ ಕೈ , ಕೆಲವೊಮ್ಮೆ ನಾನು ಪೇಟೆ ಗೆ ಹೋಗುವಾಗ ಪೋಸ್ಟ್ ಬಾಕ್ಸ್ ನಿಂದ ಕಾಗದಗಳನ್ನು ತೆಗೆದು ಕೊಳ್ಳಲು ಅಂತ ಪರ್ಸ್ ನಲ್ಲಿ ಹಾಕಿಕೊಂಡು ಹೋಗಿದ್ದುಂಟು. ಹಾಗೆ ದುಡ್ಡು/ಚಿಲ್ಲರೆ ತೆಗೆಯುವಾಗ ಅದು ಬಿದ್ದು ಹೋಗಿರಬಹುದೆಂದು ಅನುಮಾನ. ನಿಹಾ 'ಅಮ್ಮ ತುಂಬಾ important ಕಾಂಟ್ರಾಕ್ಟ್ ಅಂದಕೂಡಲೇ ನನಗೆ ದಿಗಿಲಾಯಿತು.
ನಮ್ಮ ಮನೆ ಹತ್ತಿರ ಎಲ್ಲೂ ಡೂಪ್ಲಿಕೇಟ್ ಬೀಗದ ಕೈ ಮಾಡುವವರನ್ನು ನಾನು ನೋಡಿರಲಿಲ್ಲ. ಶ್ರೀಕಾಂತ ಗೆ ಹೇಳಿದರೂ ಅವರಿಗೆ ನೆನಪಲ್ಲಿರುತ್ತಿರಲಿಲ್ಲ. ಹಾಗೆ ಕನಸಲ್ಲಿ ಈ ಪರ್ಸ್ ಬರಲು ಆರಂಭಿಸಿತು. ಅದು ಅಕ್ಕನ ಪರ್ಸ್ . ಅವಳು ಇದನ್ನು ನನ್ನ ಎದುರಿಗೆ ಚೆಕ್ ಮಾಡಿದ್ದಳು ಮಾತ್ರವಲ್ಲ ಅದನ್ನು ಉಲ್ಟಾ ಪಲ್ಟಾ ಕೂಡ ಮಾಡಿದ್ದಳು. ನನಗೆ ಉದಾಸೀನ. ಆದರೂ ಎರಡು ಮೂರು ಸಲ ಇದೇ ಕನಸು ಪುನರಾವರ್ತನೆ ಆದಾಗ ನಾನು ಆ ಪರ್ಸ್ ತೆಗೆದು ಜಾಲಾಡಿದೆ. ಏನಾಶ್ಚರ್ಯ ಪರ್ಸ್ ಒಳಗಡೆ ಅದು ಸಿಕ್ಕಿ ಹಾಕಿಕೊಂಡಿದ್ದು ಕಾಣಿಸಿತು. ನಾನೇ ಒಂದು ಸಲ ಅವಳು ಅಂಗಡಿಗೆ ಸಾಮಾನು ತರಲು ಹೊರಟಾಗ ವಿದ್ಯುತ್ ಬಿಲ್ ತರಲು ಬೀಗದ ಕೈ ಕೊಟ್ಟಿದ್ದು ನೆನಪಾಯಿತು . ಅವಳು ಮರೆತು ಅದನ್ನು ಪರ್ಸ್ ನಲ್ಲೆ ಹಾಗೆ ಬಿಟ್ಟಿದ್ದಳು. ಅವಳು ಹುಡುಕಿದಾಗ ಸಿಗದ ಬೀಗದ ಕೈ , ನನಗೆ ಸಿಕ್ಕಿತ್ತು
ಬೇಗ ಹೋಗಿ ಬಾಕ್ಸ್ ಚೆಕ್ ಮಾಡಿದಾಗ ಅದರಲ್ಲಿ ಎರಡು ದೊಡ್ಡ ಮೊತ್ತದ ಚೆಕ್, ಮೂರು ಮದುವೆಯ ಕರೆಯೋಲೆ, (ಒಂದು ಮದುವೆ ಆಗಲೇ ಮುಗಿದಿತ್ತು :-) :-)) , ಒಂದು ವೈಕುಂಠದ ಪತ್ರಿ , ಎರಡು 'ಸಂಕಥನ ' ಸಂಚಿಕೆ , ಬಿಲ್ಡಿಂಗ್ ನ ಕಾಗದ ಪತ್ರಗಳು , ಉಳಿದವು ಬರೀ ಕಚ್ರಾ ಇದ್ದವು.
ನಿಹಾಳ ಕಾಂಟ್ರಾಕ್ಟ್ ಕೊನೆಗೂ ಕೋರಿಯರ್ ನಲ್ಲೆ ಬಂದಿದ್ದು. ಉಸ್ಸಪ್ಪ.
3 comments:
Good one! After a long time visited your blog. It is so refreshing to read your posts Malathi :-)
ditto !
shee kar
thank you Radhika and Shree Kar!!
:-)
malathi S
Post a Comment