September 24, 2016

ಗೋವಾದ ಸಮುದ್ರತಟದಲ್ಲಿ ಮೀನು ಹಿಡಿಯುವ ನೋಟ

ಮಳೆಗಾಲದಲ್ಲಿ ಗೋವಾ ತುಂಬಾ ssss ಚಂದ ಇರ್ತದೆ ಅಂತ ಕೇಳಿದ್ದೆ. ಹಾಗಾಗಿ  ಹಿಂದಿನ ತಿಂಗಳು ಗೋವಾಕ್ಕೆ ಹೋಗುವ ಪ್ಲ್ಯಾನ್ ಹಾಕಿದೆವು. ಅಲ್ಲೊಂದು ಮದುವೆಯಿತ್ತು. ಮದುವೆಯನ್ನು ಸೇರಿಸಿ ಒಂದು ನಾಲ್ಕು ದಿನ ಗೋವಾದಲ್ಲಿ ಇರುವುದೆಂದಾಯಿತು. ಟ್ರೈನ್ ನಲ್ಲಿ ಟಿಕಟ್ ಕೂಡ ಕಾದಿರಿಸಲಾಯಿತು . ಮಧ್ಯಾಹ್ನ ಮೂರೂ ಗಂಟೆಯ ಟ್ರೈನ್ , ಮಡಗಾಂವ್ ಮುಂದಿನ ದಿನ ಬೆಳಿಗ್ಗೆ ೫. ೦೦ ಕ್ಕೆ ತಲುಪತ್ತದೆಂದು ಅಲ್ಲಿನ ಲೋಕಲ್ ಟ್ಯಾಕ್ಸಿ ಕೂಡ ಬುಕ ಮಾಡಿದ್ದೆ.  ಪ್ರಯಾಣಿಸುವ ದಿನ ಶ್ರೀಕಾಂತ ಗೆ ಎಷ್ಟು ಸಮಯಕ್ಕೆ ಆಫಿಸ್ ನಿಂದ ಬರಬೇಕು, ಊಟ ಮಾಡಿ ಎಷ್ಟು ಹೊತ್ತಿಗೆ ಹೊರಡಬೇಕೆಂದು ಹೇಳಿದ್ದೆ ಬಂತು. ರಾಯರು ಮನೆಗೆ ಬಂದು ಊಟ ಮಾಡಿ ನಾನು ಅಡಿಗೆ ಮನೆಯನ್ನು ಚೊಕ್ಕಟಗಳಿಸುವಷ್ಟರಲ್ಲಿ ತುಂಬಾ ನೇ ವಿಳಂಬವಾಗಿಹೋಯಿತು. ಟ್ರೈನ್ ಹೊರಡಲು ಐದು ನಿಮಿಷ ಮೊದಲು ತಲುಪಬಹುದೆಂದು ಅಂದಾಜಿಸಿ ಓಲಾ ಕ್ಯಾಬ್ ಬುಕ್ ಮಾಡಿ ಹೊರಟೆವು. ಆದರೆ ಕೋರಮಂಗಲದಲ್ಲಿ ವಿಪರೀತ ವಾಹನ ದಟ್ಟಣೆ ಹಾಗು ಟ್ರಾಫಿಕ್ ಜಾಮ್  ನಿಂದಾಗಿ ಟ್ರೈನ್ ಮಿಸ್ ಆಯಿತು. ಟ್ರೈನ್ ನಾವು ಯಶವಂತಪುರದಿಂದ ಹಿಡಿದಕೊಳ್ಳಬೇಕಿತ್ತು. ನಮ್ಮ ಓಲಾ ಕ್ಯಾಬ್ ನವನಿಗೆ ಸಖತ್ ಬೇಜಾರಾಗಿ ನಮಗೆ ತುಮಕೂರು ವರೆಗೂ ಡ್ರಾಪ್  ಕೊಡುವ ಉಮ್ಮೇದು. ನನಗ್ಯಾಕೋ ಅಲ್ಲಿ ಕೂಡ ವಿಳಂಬವಾಗೇ ತಲುಪುತ್ತೇವೆಂದು ಗೊತ್ತಾಯಿತು. ಇನ್ನೇನು ಮನೆಗೆ ವಾಪಸ್ ಆಗೋದು ಅಂದೆ. ಈ ತರಹದ್ದು ನಮಗೇನು ಹೊಸತಲ್ಲ. :-) ಆದರೆ ಶ್ರೀಕಾಂತ ಗೆ ಏನನ್ನಿಸಿತ್ತೋ ..ಬೇಡ ಪ್ರಯಾಣದ ತಯಾರಿ ಎಲ್ಲಾ ಆಗಿದೆ, ನಾನು ರಜೆ ಹಾಕಿ ಆಗಿದೆ , ಹರೀಶ್ ಫ್ರೀ ಇದ್ದರೆ ಅವರ ಗಾಡಿ ಬಾಡಿಗೆಗೆ ತೆಗೊಂಡು ಹೋಗುವ ಅಂತ ಓಲಾ ದವನಿಗೆ ಯಶವಂತಪುರದ ಬಿಡಲಿಕ್ಕೆ ಹೇಳಿದೆವು. ಹರೀಶ ಬಂದು ನಮ್ಮನ್ನು ಯಶವಂತಪುರದಿಂದ ಗೋವಾಕ್ಕೆ ಕರೆದುಕೊಂಡು ಹೋಗಲು  ಬರುವ 'ತನಕ ರಿಟರ್ನ್  ಟಿಕೆಟ್, ಅಲ್ಲಿನ ಗಾಡಿ ಕ್ಯಾನ್ನ್ಸಲ್ ಮಾಡೋದು ಮುಂತಾದ ಕೆಲಸ ಮಾಡಿದೆವು. ಸರಿಯಾಗಿ ೩. ೪೫ ಕ್ಕೆ ನಾವು ಬೆಂಗಳೂರು ಬಿಟ್ಟೆವು. ಸಂಜೆ ಒಂದು ಟಿ ಗೆ ನಿಲ್ಲಿಸಿದ್ದೆ ಸೀದಾ ಗೋವಾಕ್ಕೆ ಪ್ರಯಾಣ. ನಾವು ಧಾರವಾಡ ದಿಂದ ರಾಮನಗರ  ರೋಡ ಅನಮೋಡ್  ಘಾಟ  ಹಿಡಿದುಕೊಂಡು ಹೋದೆವು. ಕಾಡು ಪ್ರದೇಶದಲ್ಲಿ ನಮಗೆ ಹಲವಾರು ಕಾಡು ಪ್ರಾಣಿ ನೋಡಲು ಸಿಕ್ಕಿದವು.  ರಾತ್ರಿ ೧ ಗಂಟೆಗೆ  ನಾವು ಮಾರ್ದೋಳ ದೇವಸ್ಥಾನ ತಲುಪಿದೆವು. ಆ ರಾತ್ರಿ ನಾವು ದೇವಸ್ಥಾನದ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡೆವು.
ಮರುದಿನ ಮದುವೆ  ರಾಮನಾಥಿಯಲ್ಲಿ. ಅಲ್ಲೇ ಹತ್ತಿರದಲ್ಲಿದ್ದ  ಕೆಲವು ದೇವಸ್ಥಾನಗಳಿಗೆ ಭೇಟಿ ನೀಡಿ , ಕೊಲ್ವಾ ಬೀಚ್ ನಲ್ಲಿ ನಿಗದಿಪಡಿಸಿದ ಲಾಂಗಿನ್ಹಾಸ್  ರಿಸಾರ್ಟ್ ನಲ್ಲಿ ತಂಗಿದ್ದೆವು. ಗೋವಾದಲ್ಲಿ ಪೂರ್ತಿ ಮಳೆ. ಸಂಜೆ ಮಳೆಯಲ್ಲಿ ಒಂದು ರೌಂಡ್ ಬಿಚ ಗೆ ಆಮೇಲೆ ಕತ್ತಲಾದ  ಮೇಲೆ ಬೀಚ್ ಬಳಿ ಇರುವ ಮಾರ್ಕೆಟ್ ಗೆ ಹೋದೆವು. ಮರುದಿನ ಬೆಳಿಗ್ಗೆ ನಾವು ಬೀಚ್ ವಾಕ್ ನನ್ನ ಯೋಗ ಮುಂತಾದವುಗಳನ್ನು ಹಮ್ಮಿಕೊಂಡಿದ್ದೆವು. ನಾವು ಬೀಚ್ ಗೆ ಹೋಗುವಾಗ ಆಗಲೇ ಅಲ್ಲಿ ಮೀನು ಹಿಡಿಯುವ ತಯಾರಿ ನಡೆಯುತ್ತಿತ್ತು. ನಾವು  ಒಂದೂವರೆ  ಗಂಟೆ ಅವರು ಗಾಳ  ಹಾಕಿ ನಿಲ್ಲುತ್ತಾರೆ. ಒಂದು ದೋಣಿ ಸಮುದ್ರದಲ್ಲಿ  ಬಲೆ ಯಾ ತುದಿಯನ್ನು ಹಿಡಿದುಕೊಂಡು ಹೋಗುತ್ತೆ. ದಂಡೆಯ ಮೀಮೇಲೆ  ಸುಮಾರು ೬೦ ಜನರ ತಂಡ ಬಲೆಯ ಉಳಿದ ಭಾಗ   ಹಿಡಿದುಕೊಂಡಿದ್ದರು. ಆವಾಗಾವಾಗ  ಕ್ಯಾಚ್ ಈ  excitement ಎಷ್ಟು contagious ಇತ್ತಂದ್ರೆ ನಾವೇ ಮೀನು   ಹಿಡಿಯಲು ನಿಂತವರ ತರಹ. ಕೆಲವೊಮ್ಮೆ ಏನು ಸಿಗದೇ ಮರಳುತ್ತಾರಂತೆ. ಆಗ ಬೇಜಾರಾಗುವುದುಲ್ಲವಾ ಅಂದ್ರೆ, "ಅದರಲ್ಲೇನು ಬೇಜಾರು ಒಂದು ದಿನ  ತುಂಬಾ ಮೀನು ಇನ್ನೊಂದು ದಿನ ಸ್ವಲ್ಪ ಕೆಲವೊಮ್ಮೆ ಏನು ಸಿಗಲ್ಲ ಆದರೂ ನಮಗೆ ಜೀವನದಲ್ಲಿ ನಿರಾಸೆ ಆಗುವ ಸಂಭವ ಬಂದಿಲ್ಲ ಅಂದ ಅವರ ಲೀಡರ್.
ಅಲೆಗಳ ಹೊಡೆತಕ್ಕೆ ಬಲೇ ಆ ಕಡೆ ಈ ಕಡೆ   ತೇಲಿದಾಗ  ನಿಂತವರು ಬೇಗ ಬೇಗ ಜಾಗ ಬದಲಾಯಿಸುತ್ತಾ ಇರಬೇಕು ಇಲ್ಲದಿದ್ದರೆ ಬಲೆಯಲ್ಲಿ ಗಂಟುಗಳಾಗುವ ಸಂಭವ ಹೆಚ್ಚು. ಮತ್ತೆ ತೋಳುಬಲ ಕೂಡ ಬೇಕು. ಕೆಲಸಗಾರರಲ್ಲಿ ತಮಿಳು, ತೆಲುಗು ಕನ್ನಡ ಮಾತನಾಡುವವರು ಇದ್ದರು.
ಬಲೇ ಒಂದು ಸಲ ದಡಕ್ಕೆ ಬಂದ ಮೇಲೆ ಅದನ್ನು  ನೀಟಾಗಿ ಮಧ್ಯಕ್ಕೆ ತಂದು ಅಕ್ಕ ಪಕ್ಕ ಸಿಕ್ಕಿ ಹಾಕಿಕೊಂಡ ಮೀನನ್ನು ಒಂದು ಕಟ್ಟಿಗೆಯ ತುಂಡಿನಿಂದ ಹೊಡೆದು ಬಲೆಯ  ಮಧ್ಯ ಬೀಳುವಂತೆ ಮಾಡುತ್ತಾರೆ. ತುಂಬಾ ಚಿಕ್ಕ ಚಿಕ್ಕ ಮೀನುಗಳನ್ನು ಪುಟ್ಟ ಪುಟ್ಟ ಉಡುಗ ಹುಡುಗಿಯರು ಆರಿಸಿ ಮನೆಗೆ ತೆಗೆದುಕೊಂಡು ಹೋಗುತ್ತಾರೆ. ಒಂದು ದಿಂದ ಸಾರಿಗೆ ಸಾಕಾಗುವಷ್ಟು.
ಇಲ್ಲಿವೆ ಕೆಲವು ಚಿತ್ರಗಳು
 ನಾವಿದ್ದ ಮೂರೂ ದಿನವೂ ನನ್ನನ್ನು ಹಿಂಬಾಲಿಸಿದ ನಾಯಿ. ಮಳೆಯಿಂದ ರಕ್ಷಿಸಲು ಅಕ್ಕ ಅವನಿಗೆ ಕೊಡೆ ಹಿಡಿದಿದ್ದು









 ಕೊಂಕಣಿಯಲ್ಲಿ ನಾವು ಖಮ್ಮಟೆ ಅನ್ನುವ ಮೀನು. ಇದನ್ನು ಒಣಗಿಸಿ ಇದರ ಚಟ್ನಿ ಮಾಡುತ್ತಾರೆ. 



ಸಂಸ್ಥೆ ಬಿಟ್ಟು ಇದನ್ನೇ ಉದ್ದಿಮೆಯನ್ನಾಗಿ ಪರಿಗಣಿಸಿದರೆ ಹೇಗೆ?? :-) 

1 comment:

Srikanth Manjunath said...

ವಾರೆ ವಾ ಈ ತರಹ ಪಯಣ ಮಾಡಬೇಕು.. ನಿಗದಿ ಮಾಡಿದ್ದು ಗೊತ್ತು ಮಾಡಿದ್ದು ಎಲ್ಲಾ ಉಲ್ಟಾ ಪುಲ್ಟಾ ಆಗಿ ಕಡೆಗೆ ಇನ್ನೊಂದು ರೀತಿಯಲ್ಲಿ ಖುಷಿ ಪಡುವ ಪ್ರವಾಸದ ಮಜವೇ ಬೇರೆ..

ಪುಟ್ಟದಾಗಿ ಚಿತ್ರಗಳ ಮೂಲಕ ನಿಮ್ಮ ಗೋವಾದ ಕಥನ ಸೊಗಸು ಮೇಡಂ