ದೇವರ ಪಟದ ಮೇಲಿಂದ ಹೂ ಅವನ ತಲೆ ಮೇಲೆ ಬಿದ್ದ ಕೂಡಲೆ ಆತ ಸತ್ತು ಹೋದ.
ಆತನಿಗೆ ಹಲ್ಲಿಗಳೆಂದರೆ ವಿಪರೀತ ಭಯ. ಹೂ ಬಿದ್ದಾಗ ಹಲ್ಲಿ ನೆತ್ತಿ ಮೇಲೆ ಬಿದ್ದಿದ್ದೆಯೆಂದುಕೊಂಡು ಹೃದಯಾಘಾತವಾಯಿತು.
aShTe kate
(ದೇವರ ಕಪಾಟು ಕ್ಲೀನ್ ಮಾಡುವಾಗ ಪಂಚಾಂಗದಲ್ಲಿ 'ಹಲ್ಲಿ ಶಕುನ' ಓದ್ತಾ ಇದ್ದೆ. ಅದರಲ್ಲಿ ತಲೆ ಮಧ್ಯ ಹಲ್ಲಿ ಬಿದ್ದರೆ ತಕ್ಷಣ ಸಾವು ಎಂದು ಬರೆದಿತ್ತು. ) :-)ನನ್ನ ತಲೆ ಮೇಲೆ ಎರಡು ಮೂರು ಸಲ ಹಲ್ಲಿ ಬಿದ್ದಿದ್ದೆ. ಕಲ್ಲುಗುಂಡಿನತರಾ ಇದ್ದೀನಪ್ಪಾ ...
ಹಿ ಹಿ ಬಯ್ಯ್ ಬ್ಯಾಡ್ರೀ ಮತ್ತ)
ಒಂದೆಸಳು ಕತೆ
ನಿನ್ನೆ ಪೇಪರ್ ಸರಿಯಾಗಿ ಜೋಡಿಸಿ ಇಡುತ್ತಿದ್ದಾಗ 2011 ರ ವಿಜಯ ಕರ್ನಾಟಕ ಯುಗಾದಿ ಸಂಚಿಕೆ ಕೈಗೆ ಹತ್ತಿತು. ಅದು ನಮ್ಮ ಮನೇಲಿ ಹೇಗೆ ಬಂತು ಗೊತ್ತಾಗಲಿಲ್ಲ. ಸುಮ್ಮನೆ ಪುಟ ತಿರುವುತ್ತಿದ್ದಾಗ ಅದರಲ್ಲಿ ಒಂದೆಸಳು ಕತೆ ಶೀರ್ಷಿಕೆಯಡಿ ನಾಲ್ಕು-ಐದು ಸಾಲಿನ ಕತೆಗಳನ್ನು ಹಾಕಿದ್ದರು
ಹಾಗೇ ಇವತ್ತು ಬೆಳಿಗ್ಗೆ ನನ್ನ ಫಿಶ್ ಬೌಲ್ ಕ್ಲೀನ್ ಮಾಡ್ತಾ ಇದ್ದೆ. ಮಾಲವಿಕ ತಿಂಡಿ ತಿನ್ನುತ್ತ ಇದ್ದಳು. ನಾನು 'ಛೆ! ನಿಮಗೆಲ್ಲ ಚಿಕ್ಕಂದಿನಲ್ಲಿ- ನನ್ನ ಪರೀಕ್ಷೆ- ಓದಿನ ಗಡಿಬಡಿಯಲ್ಲಿ ಕತೆನೆ ಹೇಳಿಲ್ಲವಲ್ಲ' ಅಂತಂದೆ. ಅದಕ್ಕೆ ಅವಳು ಟೆಲ್ ಮಿ ಎ ಸ್ಟೊರೀ ನೌ & ಮೇಕ್ ಇಟ್ ಕ್ವಿಕ್ , ನನಗೆ ಕೆಲ್ಸಕ್ಕೆ ಹೋಗಲು ಲೇಟ್ ಆಗುತ್ತೆ ಅಂದಳು
ಹಾಗಾಗಿ ನನ್ನ ಒಂದೆಸಳಿನ ಕತೆ:
"ಪಿಕ್ ನಿಕ್ ಗೆ ಅಂತ ಒಂದು ಫ್ಯಾಮಿಲಿ ಸಮುದ್ರದ ಹತ್ತಿರ ಹೋಗುತ್ತೆ. ಸಮದ್ರದಲ್ಲಿ ದೊಡ್ಡ ದೊಡ್ಡ ಮೀನುಗಳನ್ನು ನೋಡಿ ಮಕ್ಕಳಿಗೆ ಬೆಣ್ಣೆಯಲ್ಲಿ ಫ್ರೈ ಮಾಡಿದ ಮೀನು ತಿನ್ನುವ ಆಸೆ ಯಾಯಿತು. ಅಮ್ಮನ ಬಳಿ ಮೊಸರೇನೋ ಇತ್ತು ಆದರೆ ಅದರಿಂದ ಬೆಣ್ನೆತೆಗೆಯುವ ಪರಿ ಹೇಗೆ? ಬೌಲ್ ಒಂದರಲ್ಲಿ ಮೊಸರು ನೀರು ಹಾಕಿ ಅದರಲ್ಲಿ ಒಂದು ಮೀನನ್ನು ಈಜಲು ಬಿಟ್ಟಳು ಅಮ್ಮ. ಮೀನು ಈಜುತ್ತ ಈಜುತ್ತ ಇದ್ದ ಹಾಗೆ ಮೊಸರಿನಿಂದ ಬೆಣ್ಣೆ ತೇಲಿ ಬಂತು' ".............. ಅದಕ್ಕೆ ಮಾಲವಿಕ 'ಆ ಬೆಣ್ಣೆಯಿಂದಲೆ ಆ ಮೀನನ್ನೆ ಹುರಿದು ತಿಂದರು' ಅಂತ ಕತೆ ಮತ್ತು ಬ್ರೇಕ್ ಫಸ್ಟ್ ಎರಡೂ ಮುಗಿಸಿದಳು
ನಿಹಾ ಸೆಡ್ ' ಯುವರ್ ಸ್ಟೋರಿ stinks' ..
-- ನಿನ್ನೆ ಪೇಪರ್ ಸರಿಯಾಗಿ ಜೋಡಿಸಿ ಇಡುತ್ತಿದ್ದಾಗ 2011 ರ ವಿಜಯ ಕರ್ನಾಟಕ ಯುಗಾದಿ ಸಂಚಿಕೆ ಕೈಗೆ ಹತ್ತಿತು. ಅದು ನಮ್ಮ ಮನೇಲಿ ಹೇಗೆ ಬಂತು ಗೊತ್ತಾಗಲಿಲ್ಲ. ಸುಮ್ಮನೆ ಪುಟ ತಿರುವುತ್ತಿದ್ದಾಗ ಅದರಲ್ಲಿ ಒಂದೆಸಳು ಕತೆ ಶೀರ್ಷಿಕೆಯಡಿ ನಾಲ್ಕು-ಐದು ಸಾಲಿನ ಕತೆಗಳನ್ನು ಹಾಕಿದ್ದರು
ಹಾಗೇ ಇವತ್ತು ಬೆಳಿಗ್ಗೆ ನನ್ನ ಫಿಶ್ ಬೌಲ್ ಕ್ಲೀನ್ ಮಾಡ್ತಾ ಇದ್ದೆ. ಮಾಲವಿಕ ತಿಂಡಿ ತಿನ್ನುತ್ತ ಇದ್ದಳು. ನಾನು 'ಛೆ! ನಿಮಗೆಲ್ಲ ಚಿಕ್ಕಂದಿನಲ್ಲಿ- ನನ್ನ ಪರೀಕ್ಷೆ- ಓದಿನ ಗಡಿಬಡಿಯಲ್ಲಿ ಕತೆನೆ ಹೇಳಿಲ್ಲವಲ್ಲ' ಅಂತಂದೆ. ಅದಕ್ಕೆ ಅವಳು ಟೆಲ್ ಮಿ ಎ ಸ್ಟೊರೀ ನೌ & ಮೇಕ್ ಇಟ್ ಕ್ವಿಕ್ , ನನಗೆ ಕೆಲ್ಸಕ್ಕೆ ಹೋಗಲು ಲೇಟ್ ಆಗುತ್ತೆ ಅಂದಳು
ಹಾಗಾಗಿ ನನ್ನ ಒಂದೆಸಳಿನ ಕತೆ:
"ಪಿಕ್ ನಿಕ್ ಗೆ ಅಂತ ಒಂದು ಫ್ಯಾಮಿಲಿ ಸಮುದ್ರದ ಹತ್ತಿರ ಹೋಗುತ್ತೆ. ಸಮದ್ರದಲ್ಲಿ ದೊಡ್ಡ ದೊಡ್ಡ ಮೀನುಗಳನ್ನು ನೋಡಿ ಮಕ್ಕಳಿಗೆ ಬೆಣ್ಣೆಯಲ್ಲಿ ಫ್ರೈ ಮಾಡಿದ ಮೀನು ತಿನ್ನುವ ಆಸೆ ಯಾಯಿತು. ಅಮ್ಮನ ಬಳಿ ಮೊಸರೇನೋ ಇತ್ತು ಆದರೆ ಅದರಿಂದ ಬೆಣ್ನೆತೆಗೆಯುವ ಪರಿ ಹೇಗೆ? ಬೌಲ್ ಒಂದರಲ್ಲಿ ಮೊಸರು ನೀರು ಹಾಕಿ ಅದರಲ್ಲಿ ಒಂದು ಮೀನನ್ನು ಈಜಲು ಬಿಟ್ಟಳು ಅಮ್ಮ. ಮೀನು ಈಜುತ್ತ ಈಜುತ್ತ ಇದ್ದ ಹಾಗೆ ಮೊಸರಿನಿಂದ ಬೆಣ್ಣೆ ತೇಲಿ ಬಂತು' ".............. ಅದಕ್ಕೆ ಮಾಲವಿಕ 'ಆ ಬೆಣ್ಣೆಯಿಂದಲೆ ಆ ಮೀನನ್ನೆ ಹುರಿದು ತಿಂದರು' ಅಂತ ಕತೆ ಮತ್ತು ಬ್ರೇಕ್ ಫಸ್ಟ್ ಎರಡೂ ಮುಗಿಸಿದಳು
ನಿಹಾ ಸೆಡ್ ' ಯುವರ್ ಸ್ಟೋರಿ stinks' ..
:-)
malathi S
malathi S
1 comment:
ಮೊದಲ ಕಥೆ, ಹಲವು ಕಡೆ ನಿಜವಾಗಿದೆ ಕಣ್ರೀ.
Infact ನನಗೂ ಹಲ್ಲಿ ಕಂಡರೆ ಒಂತರಾ ಭಯ!
ಮೀನು ಮೊಸರಲ್ಲಿ ಈಜೋ ಕಲ್ಪನೆ ಮತ್ತು ಬೆಣ್ಣೆ ಮಂಥನ ರೋಚಕವಾಗಿದೆ.
Post a Comment