maggi ಬಗ್ಗೆ 2 ಹಳೆ ಪೋಸ್ಟ್
http://malathisanchiyinda.blogspot.in/2012/04/maggie-20-minute-noodles.html
http://malathisanchiyinda.blogspot.in/2013/09/blog-post_24.html
http://malathisanchiyinda.blogspot.in/2013/09/blog-post_24.html
ನನ್ನ ತಮ್ಮ ಆಫಿಸ್ ಕೆಲಸ ಮೇಲೆ ಹೊರ ದೇಶಕ್ಕೆ ತುಂಬಾ ಟೂರ ಹೋಗುತ್ತಿರುತ್ತಾನೆ. ಎರಡು ಮೂರು ವರ್ಷದ ಹಿಂದೆ ಅವನು ಮ್ಯಾಗಿ ಎಲ್ಲ ತಿನ್ನಬೇಡ್ರೇ...ಅದಕ್ಕೆ ವ್ಯಾಕ್ಸ್ ಕೋಟಿಂಗ್ ಹಾಕ್ತಾರೆ. ಅದು ನಮ್ಮ ಕರುಳಿಗೆ ಅಂಟಿಕೊಂಡು ಹಲವಾರು ರೋಗ ಬರುತ್ತೆ ಅಂತಂದಿದ್ದ. ಅವನಿಗೆ ಮ್ಯಾಗಿ ಇಷ್ಟ ಆಗಲ್ಲ ಅಂತ ಸುಮ್ಮನೆ ನಮ್ಮನ್ನು ಹೆದರಿಸಲು ಅನ್ನುತ್ತಿದ್ದಾನೆ ಅನ್ನಿಸಿದ್ದರೂ, ಯಾಕೋ ನಾನು ಮ್ಯಾಗಿ ತರುವುದನ್ನು ತುಂಬಾ ಕಡಿಮೆ ಮಾಡಿದ್ದೆ.
ನಿಹಾರಿಕಾ ಸಾವಯವ ಜೀವನ ಪದ್ದತಿ ತರಬೇತಿ ಮುಗಿಸಿ ಬಂದ ಮೇಲಂತು ಮ್ಯಾಗಿ ಅಥವಾ ಹೊರಗಿನ ಸಂಸ್ಕರಿಸಿದ (Processed food)ತಿನಿಸು ಯಾವುದೂ ತಿನ್ನುತ್ತಿರಲಿಲ್ಲ. ಆದ್ದರಿಂದ ನಾನು ಮ್ಯಾಗಿ ತರುವುದು ತುಂಬಾ ಅಂದರೆ ತುಂಬಾ ಕಡಿಮೆಯಾಯ್ತು. ಮನೆಯಲ್ಲಿ ಸ್ಟಾಕ್ ಇಟ್ಟುಕೊಂಡಿರುತ್ತಿರಲಿಲ್ಲ. ತಿನ್ನಬೇಕೆನಿಸಿದಾಗ ಒಂದು ಪ್ಯಾಕೆಟ್ ತಂದು ತಿನ್ನುತ್ತಿದೆ. ಮೊದಲೆಲ್ಲ ಮೆಟ್ರೋ ಕ್ಯಾಶ್ & ಕ್ಯಾರಿ ಗೆ ಹೋದಾಗಲೆಲ್ಲ ನಾನು ಬೇರೆ ಬೇರೆ flavor ನ ಬಗೆ ಬಗೆಯ ನೂಡಲ್ಸ್ ತಂದಿಟ್ಟಿರುತ್ತಿದ್ದೆ. ಒಂದು ದೊಡ್ಡ ಡಬ್ಬ ಇಡೀ ನೂಡಲ್ಸ್.
ಹಿಂದಿನ ವರ್ಷ ತಮ್ಮನ ಮನೆಗೆ ಹೋದಾಗ ತಮ್ಮನ 5 ವರ್ಷದ ಮಗಳು ಮ್ಯಾಗಿ ತಿನ್ನುತ್ತಿರುವುದನ್ನು ನೋಡಿದೆ. ಅವಳು ಊಟ ತಿಂಡಿ ಎಂದರೆ ಮಾರು ದೂರ. ಮ್ಯಾಗಿ ಅಂದರೆ ಬಾಯಲ್ಲಿ ಜೊಲ್ಲು ಸುರೀತಿತ್ತು. ಅವಳು ಊಟ ತಿಂಡಿ ಮಾಡಬೇಕಾದರೆ ಅವಳಿಗೆ ಅವಳ ಅಮ್ಮ ಅಥವಾ ನನ್ನ ಅಮ್ಮ ಮ್ಯಾಗಿಯ ಆಮಿಶ ತೋರಿಸುತ್ತಿದ್ದರು. ದಿನಾ ಮ್ಯಾಗಿ ಮಾತ್ರವಲ್ಲ ಕೆಲವೊಮ್ಮೆ ಶಾಲೆಗೂ ತೆಗೆದುಕೊಂಡು ಹೋಗುತ್ತಿದ್ದಳು. ಮ್ಯಾಗಿ ತಿನ್ನುವಾಗ ನೆಲದ ಮೇಲೆ ಬಿದ್ದರೆ ಅದನ್ನು ಹೆಕ್ಕಿ ತಿನ್ನುತ್ತಿದ್ದಳು ಮಾತ್ರವಲ್ಲ, ಮ್ಯಾಗಿಯ ಪ್ಲೇಟ್ ಅಥವಾ ಬಟ್ಟಲನ್ನು ನೆಕ್ಕಿ ನೆಕ್ಕಿ ಆಮೇಲೆ ಸಿಂಕ್ ನಲ್ಲಿ ಹಾಕುತ್ತಿದ್ದಳು. ನನ್ನ ತಮ್ಮ ಅವಳಿಗೆ’ ನಾಯಿ ಕೂಡ ಇಷ್ಟು ಕ್ಲೀನ್ ಆಗಿ ನೆಕ್ಕಲ್ಲ, ಅದೇನು ಇದೆಯೋ ಈ ಮ್ಯಾಗಿನಲ್ಲಿ’ ಅಂತ ಹೇಳುತ್ತಿದ್ದಾಗ ನನಗೇ ಅನುಮಾನ ಶುರು ಆಯ್ತು. ಮ್ಯಾಗಿ ಮಾಡಿಕೊಡದಿದ್ದಲ್ಲಿ ಅತ್ತು ರಂಪ ಮಾಡುತ್ತಿದ್ದಳು ನಾನು ಇನ್ನು ಮುಂದೆ ಮ್ಯಾಗಿ ತಿನ್ನಲ್ಲ ಅಂತ ಪಣ ತೊಟ್ಟೆ. ಮ್ಯಾಗಿ ಮಾಡಿ ತಿನ್ನಿಸುವುದರಲ್ಲಿ/ತಿನ್ನುವುದರಲ್ಲಿ ನಾನೇ ಎಲ್ಲರಿಗೆ ಮಾದರಿಯಾಗಿದ್ದೆ.
ಈಗ ತಮ್ಮ ಅವನ ಮಗಳಿಗೆ ’ಮಾಲತಿ ಅಕ್ಕ ಮ್ಯಾಗಿ ತಿನ್ನುವುದನ್ನು ಬಿಟ್ಟಿದ್ದಾಳೆ ನೀನು ತಿನ್ನಬಾರದು ’ ಅಂತ ತಾಕೀತು ಮಾಡಿದಾನೆ. ಮನೆಯಲ್ಲಿ ಮ್ಯಾಗಿ ತರಿಸುವುದನ್ನು ಅವನು ನಿಲ್ಲಿಸಿದ್ದಾನೆ. ಹಿಂದಿನ ತಿಂಗಳು ಅವಳು ಇಲ್ಲಿ ಬಂದಾಗ 15 ದಿನ ಇಲ್ಲಿದ್ದರು. ಅಗ ಒಂದು ದಿನ ನನ್ನ ಬಳಿ ’ಕೆಲವೊಮ್ಮೆ ಮ್ಯಾಗಿ ತಿನ್ನ ಬೇಕು ಅನ್ನಿಸುತ್ತೆ’ ಅಂದಿದ್ದಳು. ಪಾಪ ಅನ್ನಿಸಿತು.
ಮ್ಯಾಗಿ ಮಾಡಲು ಸುಲಭ ಅಲ್ಲದೆ ಹೊಟ್ಟೆ ತುಂಬುತ್ತಿತ್ತು ಕೂಡ. ಆದರೆ ಇತ್ತೀಚಿನ ವರದಿ ನನ್ನನ್ನು ತೀರ ದೃತಿ ಗೆಡೆಸಿದೆ. ಎಮ್ ಎಸ್ ಜಿ /ಮೊನೊ ಸೋಡಿಯಂ ಗ್ಲುಟಮೇಟ್ ಅಥವಾ ಅಜಿನೋಮೋಟೊ ಇದೆಯಲ್ಲ ಅದಕ್ಕಿಂತ ಅಪಾಯಕಾರಿ ಬೇರೆ ಇಲ್ಲ. ಚೈನೀಸ್ ಮತ್ತು ರಸ್ತೆ ಬದಿ ಸಿಗುವ ಗೋಬೀ ಮಂಚುರೀ ಗೆಲ್ಲ ಕ್ರಿಸ್ಪ್ ಆಗಲು ಇದೇ ಬಳಸುವುದು. ಮಕ್ಕಳಲ್ಲಿ ಒಬೇಸಿಟಿಗೆ ಇದೂ ಒಂದು ಕಾರಣ.
ಸಾಯುವುದು ಹೇಗೂ ಇದೆ ಆದರೆ ಹೇಗೆ ಸಾಯುತ್ತೇವೆ ಅದೂ ಮುಖ್ಯ. ಕಾಯಿಲೆ ಕಸಾಲೆ ಇಲ್ಲದೆ ಬಾಳಬೇಕು. ನಾನಂತು ಮ್ಯಾಗಿ ಗೆ ಗುಡ್ ಬೈ ಹೇಳಿಯಾಗಿದೆ. ನನ್ನ ಓದುಗರಲ್ಲಿ ಯಾರಾದರೂ ಮ್ಯಾಗಿ ಫ್ಯಾನ್ಸ್ ಇದ್ದರೆ ದಯವಿಟ್ಟು ಮ್ಯಾಗಿ ನೂಡಲ್ಸ್ ತಿನ್ನುವುದನ್ನು ನಿಲ್ಲಿಸಿ.
ಇವತ್ತು ಫೇಸ್ ಬುಕ್ ಇನ್ಬಾಕ್ಸ್ ನಲ್ಲಿ ಬಂದ ಒಂದು ಜೋಕ್
Q. What is the gender of Maggi?
a) MALE b) FEMALE
Ans. a) MALE. Because MAGGI get ready in 2 minutes...!!
ಇವತ್ತು ಫೇಸ್ ಬುಕ್ ಇನ್ಬಾಕ್ಸ್ ನಲ್ಲಿ ಬಂದ ಒಂದು ಜೋಕ್
Q. What is the gender of Maggi?
a) MALE b) FEMALE
Ans. a) MALE. Because MAGGI get ready in 2 minutes...!!
5 comments:
ಈ ನಿರ್ಧಾರಕ್ಕೆ ಅಭಿನಂದನೆಗಳು. ನಾನೂ ಗಮನಿಸಿದ್ದೇನೆ. ಒಮ್ಮೆ ಇದರ ರುಚಿಗೆ ಬಿದ್ದ ಮಕ್ಕಳು ಇದಕ್ಕೆ 'ಅಡಿಕ್ಟ್' ಆಗುತ್ತಾರೆ. ಸಣ್ಣ ಮಕ್ಕಳು ಏನಾದರೂ ಸ್ವಲ್ಪ ತಿನ್ನಲಿ ಎಂಬ ದೃಷ್ಟಿಯಿಂದ ಪೋಷಕರು ಒಮ್ಮೆ ಇದರ ರುಚಿ ತೋರಿಸಿಬಿಟ್ಟರೆ ಸಾಕು, ಮಕ್ಕಳು ದಿನಾ ಅದನ್ನೇ ಕೇಳುತ್ತಾರೆ. ! ಹಾಗಾಗಿ ಮಕ್ಕಳಿಗೆ ೬-೭ ವರ್ಷ ಆಗುವವರೆಗೆ ಮ್ಯಾಗಿ ಅಂದರೇನು ಅಂತ ಗೊತ್ತಿರದಂತೆ ಇಡುವುದು ಒಳ್ಳೆಯದು. ಸತ್ವವಿಲ್ಲದ ಮತ್ತು ಅಪಾಯಕಾರಿ ಅಂಶಗಳಿರುವ ಇಂತಹ ಆಹಾರಗಳಿಂದ ಮಕ್ಕಳನ್ನು (ದೊಡ್ಡವರನ್ನೂ) ದೂರವಿಡಬೇಕಿದೆ.
Thanks for this writeup Malathi. I'm sure many would follow your stance after reading this. At home Maggi is not very frequently made. May be once in 6 months or so. Ananay's friend gets it for snack time everyday it seems. So she too wanted to take it once. I packed it for her once but she said she didn't like the taste as it was very cold. It tastes good only when it is piping hot. Will read this article along with Ananya. And definitely the message will reach all her friends :-)
Nanu Maggi thinthene... 1 sala Kudisi wash madudre wax tholedu hogutte anno bramenalli. EGA.. Adannu bidabekannistha ide.
ನಾವಂತು ಇದರಿಂದ ಬಹು ದೂರ
E article aakshanagalu.blogspot.in/2015/06/blog-post_8.html?m=1
bareyokke spoorthi thumbiddakke dhanyavadagalu...
Post a Comment