ಶ್ರೀಮತಿ ಅವರ ಮನೆಗೆ ಹೋದಾಗ ಬಾಗಿಲು ತೆರೆದೆ ಇತ್ತು. ಅವಳು ಸೀದಾ ಒಳಗೆ ಹೋದಳು. ಆದರೆ ನೋಡಿದ್ದೇನು. ಗಂಡ ಆಕೆಯನ್ನು ಹಿಡಿದು ’ನಿನ್ನಿಂದಲೆ ..ನಿನ್ನಿಂದಲೇ ಇದೆಲ್ಲ ಆಗಿದ್ದು ಅಂತ ಮಣಮಣಿಸುತ್ತ’ ಚಚ್ಚುತ್ತಲಿದ್ದ. ಹಿರಿ ಮಗಳು ಅವರಿಬ್ಬರನ್ನು ನೋಡುತ್ತಾ ಅಳುತ್ತಾ ನಿಂತಲ್ಲೆ ಉಚ್ಚೆಹೊಯ್ದುಗೊಂಡಿದ್ದಳು. ಪುಟ್ಟ ಮಗ ಇಲ್ಲೇನೋ ತಮಾಷೆ ನಡೀತಾ ಇದೆ ಅಂತ ಸುಮ್ಮನೆ ನೋಡುತ್ತಾ ನಿಂತಿದ್ದ. ಇವಳಿಗೆ ಗೊತ್ತಿಲ್ಲದೆ ಬಾಯಿಯಿಂದ ಚೀತ್ಕಾರ ಹೊರಟಿತು. ಅದನ್ನು ಕೇಳಿ ಅವನು ಹೆಂಡತಿಯನ್ನು ದೂಡಿ ಅಳುತ್ತಾ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಕ್ಕರಿಸಿದ.
ಶ್ರೀಮತಿಗೆ ಅವರ ಪರಿಚಯವೇನೂ ಇಲ್ಲ. ಅದು ಹೊಸ ಬಹುಮಹಡಿ ಸಂಕೀರ್ಣ. ಅಲ್ಲಿ ಬಂದವರೆಲ್ಲ ಹೊಸಬರೆ ಮತ್ತು ಅಲ್ಲಿನ ಮನೆಗಳಲ್ಲಿ ವಾಸಿಸುವ ಪರವಾನಗಿ ಇತ್ತೀಚಿನ ಎರಡು ತಿಂಗಳಲ್ಲಿ ಸಿಕ್ಕಿದೆಯಷ್ಟೆ. ಲಿಫ್ಟ್ ಬಳಿ ಇಬ್ಬರೂ ಮಾತಿಗೆ ಸಿಕ್ಕಿದಾಗ ’ಇಲ್ಲಿನ ನೀರು ಕುಡಿಯಲು ಆಗುತ್ತಿಲ್ಲ, ನೀವು ಏನು ಮಾಡ್ತಿದ್ದೀರಾ ಅಂತ ಕೇಳಿದಾಗ, ಶ್ರೀಮತಿ, ಬಾಟಲ್ಡ್ ನೀರು ಬಳಸುತ್ತಿರುವುದರ ಬಗ್ಗೆ ಹೇಳಿದ್ದಳು. ಅದನ್ನು ಸರಬರಾಜು ಮಾಡುವವರ ನಂಬರ್ ಬೇಕೆಂದಾಗ, ಮನೆಯಲ್ಲಿದೆ ನಂತರ ತಂದು ಕೊಡುತ್ತೇನೆ ಎಂದಿದ್ದಳು ಶ್ರೀಮತಿ. ಮನೆಗೆ ಬಂದು ನಂಬರ್ ಬರೆದುಕೊಂಡು ಅವಳ ಮನೆಗೆ ಹೋದಾಗ ಹೀಗೆಲ್ಲ ನಡೆಯುತ್ತಿತ್ತು.
ಶ್ರೀಮತಿ ಈಗ ನಿಧಾನವಾಗಿ ಅವನ ಬಳಿ ಸಾಗಿ, ರೀ ಮಿಸ್ಟರ್ ನೀವು ಹೊಡೆದ್ರೆ ಬಡಿದ್ರೆ ಆ ಮಗು ಸರಿಯಾಗುತ್ತ? ಮಗುವಿಗೆ ಇರೋದು ಡವ್ನ್ಸ್ ಸಿಂಡ್ರೋಮ್. ನೋಡಿ ಅಲ್ಲಿ ಮಗಳು ಹೇಗೆ ಹೆದರಿಕೊಂಡು ನಿಂತಿದ್ದಾಳೆ. ನಿಮ್ಮ ಹೊಡೆದಾಟದಿಂದ ಆಕೆಯ ಮನಸ್ಸಿನ ಮೇಲೂ ಪರಿಣಾಮವಾಗುತ್ತೆ. ಹಾಗೆ ನೋಡಿದ್ರೆ ಆ ಮಗು ಹಾಗಾಗಲು ನೀವೆ ಕಾರಣ ಅಂದಾಗ ಅವನು ಆಘಾತಕ್ಕೆ ಒಳಗಾಗಿದ್ದನು. ಅದು ಹೇಗೆ ಅಂತ ಕೇಳಿದಾಗ ’ಗಂಡಸಿನ ಕ್ರೋಮೋಸೋಮ್ ಇದನ್ನು ಡಿಸೈಡ್ ಮಾಡುತ್ತೆ. ಹಾಗಾಗಿ ನೀವು ಹೆಂಡತಿಯನ್ನು ಹೊಡೆಯುವ ಹಾಗಿಲ್ಲ. ಅವನ ಮುಖ ಪೆಚ್ಚಾಯಿತು.
ಇಂತಹ ಮಕ್ಕಳು ಸುಮಾರು ಸಮಯ ಬದುಕಿರಲ್ಲ. ಇದ್ದ ದಿನಗಳನ್ನು ಸಮಾಧಾನವಾಗಿ ವ್ಯಯಿಸಿ. ಅದನ್ನು ನೋಡಿಕೊಳ್ಳಲು ಜನ ನೇಮಿಸಿ. ನಾಲ್ಕು ದಿನ ಎಲ್ಲಾದರೂ ತಿರುಗಾಡಿಕೊಂಡು ಬನ್ನಿ. ಕಾಯಿಲೆಯಿಂದ ಬಳಲುವ ಮಗುವಿಗೆ ಇದೆಲ್ಲ ಅರ್ಥ ಆಗಲ್ಲ. ನೀವು ಎಲ್ಲಾದರು ಅದನ್ನು ಬಿಟ್ಟು ಹೋದರೆ ಅದರ ಗಮನಕ್ಕೇ ಬರುವುದಿಲ್ಲ. ಆದಷ್ಟು ನಿಮ್ಮ ಜೀವನದಲ್ಲಿ normalcy ತನ್ನಿ . ಇದರಿಂದ ನಿಮಗೆಲ್ಲರಿಗೂ ಸಮಾಧಾನ. ನಿಮ್ಮ ಜಗಳ ಹೊಡೆದಾಟದಿಂದ ಸರಿಯಿರುವ ಮಗಳ ಮನಸ್ಸನ್ನು ಕೆಡಿಸಬೇಡಿ.
ಈಗ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಒಬ್ಬರಿದ್ದಾರೆ. ಮಗಳನ್ನೂ ನೋಡಿಕೊಳ್ತಾರಾದ್ದರಿಂದ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಿ ಬಂದು ಸ್ವಲ್ಪ ನೆಮ್ಮದಿಯಿಂದ ಇರ್ತಾರೆ.
p.s: (Downs syndrome ಕಾಯಿಲೆಗೆ ಅವನ ಕ್ರೋಮೋಸೋಮ್ ಕಾರಣವಾ ಶ್ರೀಮತಿಗೆ ಸರಿಯಾಗಿ ಗೊತ್ತಿಲ. ಆದರೆ ಗಂಡು ಮಗು ಹುಟ್ಟಲು ಖಂಡಿತ ಗಂಡಸಿನ ಕ್ರೋಮೋಸೋಮ್ ಕಾರಣ ಅಂತ ಅವಳಿಗೆ ನಿಖರವಾಗಿ ಗೊತ್ತಿತ್ತು. ಅವನಿಗೆ temporary shock ಕೊಡುವುದಷ್ಟೆ ಅವಳಿಗೆ ಬೇಕಾಗಿತ್ತು. ಮತ್ತು ಡವ್ನಸ್ ಸಿಂಡ್ರೋಮ್ ಮಕ್ಕಳ life expectancy ಇತ್ತಿಚ್ಚಿಗೆ ಹೆಚ್ಚಿದೆ)
p.s: (Downs syndrome ಕಾಯಿಲೆಗೆ ಅವನ ಕ್ರೋಮೋಸೋಮ್ ಕಾರಣವಾ ಶ್ರೀಮತಿಗೆ ಸರಿಯಾಗಿ ಗೊತ್ತಿಲ. ಆದರೆ ಗಂಡು ಮಗು ಹುಟ್ಟಲು ಖಂಡಿತ ಗಂಡಸಿನ ಕ್ರೋಮೋಸೋಮ್ ಕಾರಣ ಅಂತ ಅವಳಿಗೆ ನಿಖರವಾಗಿ ಗೊತ್ತಿತ್ತು. ಅವನಿಗೆ temporary shock ಕೊಡುವುದಷ್ಟೆ ಅವಳಿಗೆ ಬೇಕಾಗಿತ್ತು. ಮತ್ತು ಡವ್ನಸ್ ಸಿಂಡ್ರೋಮ್ ಮಕ್ಕಳ life expectancy ಇತ್ತಿಚ್ಚಿಗೆ ಹೆಚ್ಚಿದೆ)
1 comment:
ಶ್ರೀಮತಿಯವರ ಮಾತಿನಿಂದ ಆ ಸಂಸಾರ ತಹಬಡಿಗೆ ಬಂದದ್ದೇ ಸಂತಸದ ವಿಚಾರ.
Post a Comment