“Kabhi kabhi galat train bhi sahi jagah pahuncha deti hai” (Sometimes even a wrong train can get you to the right destination). ಕೆಲವೊಮ್ಮೆ ತಪ್ಪು ಟ್ರೈನ್ ಕೂಡ ನಮ್ಮನ್ನು ಸರಿಯಾದ ಸ್ಥಳಕ್ಕೆ ಕರೆದೊಯ್ಯುವುದು. ಇದು ಲಂಚ್ ಬಾಕ್ಸ್ ಸಿನಿಮಾದ tag ಲೈನ್.
ಏನಿದು ಲಂಚ್ ಬಾಕ್ಸ್ ಅಂದು ಕೊಂಡಿರಾ?? ಹೌದು ನಾನು ಬ್ಲಾಗ್ ನಲ್ಲಿ ಆವಾಗಾವಾಗ ನಿಹಾಳ ಲಂಚ್ ಬಾಕ್ಸ್ ಬಗ್ಗೆ ಕೊರಿತಾ ಇರ್ತೀನಿ. ಆದರೆ ಇದು ಸಧ್ಯಕ್ಕೆ ಹೆಸರು ಮಾಡ್ತಾ ಇರುವ ಸಿನಿಮಾ ಲಂಚ್ ಬಾಕ್ಸ್ ಬಗ್ಗೆ.
ಸರಳ ಸುಂದರ, ಅಚಾನಕ್ಕಾದ ತಿರುವು ಮುರುವುಗಳಿಲ್ಲದ ಸಿನಿಮಾ, ನಿಮ್ಮನ್ನು ಎರಡು ಚಿಲ್ಲರೆ ಗಂಟೆ ಹಿಡಿತದಲ್ಲಿರಿಸುವ ಕಥಾನಕ ಇದರಲ್ಲಿದೆ. ಇಲ್ಲಿ ಸಿನಿಮಾದ ಪೂರ್ಣ ಕತೆ ಹೇಳಲ್ಲ. ಯಾಕಂದ್ರೆ ನೀವೆಲ್ಲ ಇದನ್ನು ನೋಡ ಬೇಕು. ಮುಖ್ಯವಾಗಿ ಇದರಲ್ಲಿ ಹಾಡಿಲ್ಲ. mushy mushy ಲವ್ ಸ್ಟೋರಿ ಇಲ್ಲ.
ಗಂಡನ ಹೃದಯಕ್ಕೆ ಹೊಟ್ಟೆಯೇ ದಾರಿ ಅಂದುಕೊಂಡು ರುಚಿರುಚಿಯಾದ ಅಡಿಗೆ ಮಾಡಿ ಕಳಿಸುವ ಇಳಾ. ಆದರೆ ಡಬ್ಬ್ಬಾವಾಲಾನ (ಮುಂಬೈ ಮತ್ತು ಡಬ್ಬಾವಾಲ ಬಗ್ಗೆ ಗೊತ್ತಿಲ್ಲದವರಿಗೆ- ಡಬ್ಬಾವಾಲ ಅಂತ ಸರ್ಚ್ ಕೊಟ್ಟರೆ ಇವರ ಬಗ್ಗೆ ನಿಮಗೆ ಗೂಗಲ್ ನಲ್ಲಿ ಧಾರಾಳವಾದ ಮಾಹಿತಿ ಸಿಗುತ್ತೆ) ಕೃಪೆ ಅದು ತಪ್ಪು ಮನುಷ್ಯನಿಗೆ ತಲುಪುತ್ತದೆ. ಅವನ ಹೆಸರು ಸಾಜನ್ ಫರ್ನಾಂಡಿಸ್. ಆ ಸಂಸ್ಥೆಯಲ್ಲಿ 35 ವರ್ಷಗಳ ಸೇವೆ ಸಲ್ಲಿಸಿ, ರಿಟೈರ್ ಮೆಂಟ್ ಗೆ ಕೆಲವೇ ತಿಂಗಳು ಇರುವ ವಿದುರ. ಇವರ ಮಧ್ಯೆ ಶುರುವಾಗುವ ಪತ್ರವ್ಯವಹಾರವೆ ಸಿನಿಮಾದ ತಿರುಳು.ಈ ಪತ್ರವನ್ನು ಲಂಚ್ ಬಾಕ್ಸ್ ಮೂಲಕ ಆ ಕಡೆಯಿಂದ ಈ ಕಡೆ and vice versa ರವಾನಿಸಲ್ಪಡುತ್ತದೆ. ಏಕತಾನತೆಯಿಂದ ಕೂಡಿದ ಬದುಕಿನಲ್ಲಿ ಸ್ವಲ್ಪ ರಂಗು ಬರಿಸುತ್ತದೆ ಈ ಪತ್ರವ್ಯವಹಾರ. ಇದೆಲ್ಲದರ ಮಧ್ಯೆ ಒಂದು ಇಂಟೆರೆಸ್ಟಿಂಗ್ ಪಾತ್ರ ಅಸ್ಲಮ್ ಶೇಕ್ ಮತ್ತು ಕೇವಲ ದನಿಮಾತ್ರದಿಂದ ಪರಿಚಯವಾಗುವ ಇಳಾನ ಮೇಲಿನ ಮನೆ flat ನಿವಾಸಿ ಶ್ರೀಮತಿ ದೇಶಪಾಂಡೆಯವರದ್ದು. ಸಿನಿಮಾದ ಮುಕ್ತಾಯವನ್ನು ನಮ್ಮ ನಿಮ್ಮ ಊಹೆಗೆ imagination ಗೆ ಬಿಟ್ಟಿದ್ದಾರೆ. :-)
ನಂಗಿಷ್ಟ ಆಯಿತು. review ಎಲ್ಲ ಬರೆಯುವ ಕಲೆ ನನಗಿಲ್ಲ. ನೀವೆ ನೋಡಿ ಬಂದು ಹೇಗಿತ್ತು ಅಂತ ಹೇಳಿ.
ಈ ವೀಕ್ ಎಂಡ್ ನೀವು ನೋಡಿ ಬರಬಹುದು ಅಂತ ಇಲ್ಲಿ ಹಾಕ್ತಿದ್ದೇನೆ. ಏನೂ expectations ಇಟ್ಟುಕೊಳ್ಳದೇ ಹೋಗಿ
ಎಂಜಾಯ್.
P.S: the lunch looked absolutely delicious........mmmmm
:-)
6 comments:
idu review tharane ide.
Rajesh!!
haagadre nOdtiraa illaa??
:-)
ms
Lalbag daaLimbe mELakke hOgbEku anta andkonDidde. eega ee movie ge hOgbEku anstide :-)
Radhika:
ivattu sanje/ raatri ee film nOdi naaLe daLimbe meLakke hOgi banni
:-)
malathi S
ವಾಹ್..ನನಗೂ ಈ ಮೂವಿ ನೋಡಲೇ ಬೇಕು. ನೀವು ಹಾಕಿದ ಈ ಫೋಸ್ಟರ್ ತುಂಬಾ ಇಷ್ಟವಾಯಿತು. ಧನ್ಯವಾದಗಳು ಮಾಲತಿ ಮೇಡಮ್.
ಹಾಗೆಯೇ ನನ್ನ ಬ್ಲಾಗಿನ ಒಂದು ವಿಭಿನ್ನ ಕತೆ 'ಒಂದು ವಿಲಕ್ಷಣ ವೃತ್ತಿ' ಓದಿ.
ನನ್ನ ಇಷ್ಟದ ಬ್ಲಾಗ್ ಗಳಲ್ಲಿ ನಿಮ್ಮದೂ ಒಂದು. ನಿಮ್ಮ ಬ್ಲಾಗ್ ನ ಲಿಂಕನ್ನು ಕೆಳಗಿನ ಫೇಸ್ ಬುಕ್ ನ 3K ಕವಿತೆ ಕಥೆ ಕಥನ ಸಮುದಾಯಲ್ಲಿ ಹಂಚಿಕೊಂಡಿದ್ದೇನೆ.
https://www.facebook.com/photo.php?fbid=490907424350219&set=o.191375717613653&type=3&theater
Post a Comment