August 8, 2013

ಬ್ರೆಡ್ ಉಪ್ಪಿಟ್ಟು

ಒಂದು ಪೌಂಡ್ whole wheat Atta ಬ್ರೆಡ್ ಅಥವಾ ಬ್ರೌನ್ ಬ್ರೆಡ್. ಅದನ್ನು ಮಿಕ್ಸಿಯಲ್ಲಿ ರವೆ ಗಾತ್ರಕ್ಕೆ ಪುಡಿ ಮಾಡಿಡಿ.

ಒಗ್ಗರಣೆಗೆ: ತುಪ್ಪ, ಸಾಸಿವೆ, ಕರಿಬೇವಿ, ಜೀರಿಗೆ, ಹಸಿಮೆಣಸಿನಕಾಯಿ, ತಾಜಾ ಶುಂಠಿ, ಈರುಳ್ಳಿ.

ತರಕಾರಿ : ಕ್ಯಾರೆಟ್, ಬಟಾಣಿ ಅಥವಾ ಬೇಯಿಸಿದ ಆಲೂಗಡ್ಡೆ.

ಸ್ವಲ್ಪ ಕಾಯಿ ತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ

ಬ್ರೆಡ್ ಅನ್ನು ಮಿಕ್ಸಿ ಅಲ್ಲಿ ಹಾಕಿದಾಗ ಹೀಗೆ ಕಾಣುತ್ತೆ.

ಉಳಿದ ವಿಧಾನ ಉಪ್ಪಿಟ್ಟು ಮಾಡುವಂತೆ. ನೀರು ಹಾಕಲಿಕ್ಕಿಲ್ಲ ಅಷ್ಟೆ. ನಿಮಗೆ ಮೆತ್ತಗಿನ ಉಪ್ಪಿಟ್ಟು ಬೇಕಿದ್ದಲ್ಲಿ ಸ್ವಲ್ಪವೇ ಸ್ವಲ್ಪ ನೀರು ಚಿಮುಕಿಸಿ. ಇದು ನಾನೇ ಕಂಡು ಕೊಂಡ ವಿಧಾನ. ನಿಹಾನ ಟಿಫಿನ್ ಬಾಕ್ಸ್ಗೆ ಹೊಸ ಹೊಸ ಉಪಾಯ. ಅವಳಿಗೆ ಅವಳ ಸ್ನೇಹಿತೆಯರಿಗೆ ಮಾತ್ರವಲ್ಲ ಅಕ್ಕನಿಗೂ ಇದು ತುಂಬ ಇಷ್ಟ ಆಯಿತಂತೆ. ನನಗೆ?? ನನಗೆ ಉಳಿಯಲಿಲ್ಲ. ನಾನು ಟ್ರಯಲ್ ಗೋಸ್ಕರ ಸ್ವಲ್ಪವೇ ತಯಾರಿಸಿದ್ದೆ. ಮಾತ್ರವಲ್ಲ ನಮಗೆ ದೋಸೆ part-2 ಇತ್ತು. :-)
ನೀವು ಮಾಡಿ ನೋಡಿ. ಸಂಜೆ ತಿಂಡಿಗೆ ಚೆನ್ನಾಗಿರುತ್ತೆ.

ಇರಲಿ ಡೀಟೈಲ್ ಆಗಿ ಹೇಗೆ ಮಾಡುವುದೆಂದು ಬರೆದೇ ಬಿಡುತ್ತೇನೆ:
ತುಪ್ಪ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಜೀರಿಗೆ, ಹಸಿಮೆಣಸಿನಕಾಯಿ ಒಗ್ಗರಣೆಗೆ ಇಡಿ. ಇದಕ್ಕೆ ನೀರುಳ್ಳಿ ಬೆರೆಸಿ ಕೆಂಪಗಾಗುವ ತನಕ ಕೈಯಾಡಿಸಿ, ಬಳಿಕ ಸಣ್ಣಕ್ಕೆ ತುರಿದಿಟ್ಟ ಶುಂಠಿ ಬೆರೆಸಿ. ಕೊನೆಗೆ ಬ್ರೆಡ್ ಪುಡಿ, ಉಪ್ಪಿ, ಚಿಟಿಕೆ ಸಕ್ಕರೆ ಬೆರೆಸಿ ಮುಚ್ಚಿಡಿ. 5 ನಿಮಿಷ ಒಲೆಮೇಲಿರಲಿ. ಆಫ್ ಮಾಡಿ ಪಾತ್ರೆ ಕೆಳಗಿಟ್ಟ ಮೇಲೆ ಕಾಯಿತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ.

ನನ್ನ ಬಳಿ ಕ್ಯಾರೆಟ್ ಇರಲಿಲ್ಲ ಹಾಗಾಗಿ ಓನ್ಲಿ ಹಸಿ ಬಟಾಣಿ ಮಾತ್ರ ಸೇರಿಸಿದ್ದೇನೆ. ( ಹುಡುಕ್ತಾ ಕೂರಬೇಡಿ ಮತ್ತೆ. ಮತ್ತು ಫೋಟೊ ತೆಗೆದದ್ದು ನಾನು. ಸರಿ ಬಂದಿಲ್ಲ. ಬೇರೆ ಕ್ಯಾಮರಾದಿಂದ ತೆಗೆದಾಗ ಈ ಫೋಟೊ ರಿಪ್ಲೇಸ್ ಮಾಡ್ತೇನೆ.) ಮಕ್ಕಳ ಬಳಿ ನಾನು ತಮಾಷೆ ಮಾಡುವುದಿತ್ತು - ಕ್ಯಾರೆಟ್ ಬಟಾಣಿ ಎಲ್ಲ ಸೇರಿಸಿದ್ದೇನೆ. ಕ್ಯಾರೆಟ್ ಸಿಕ್ಕರೆ ಒಂದು ಗೋಲ್ಡ್ ಕಾಯ್ನ್ ಅಂತ ಈಗ ನನ್ನ ಮಕ್ಕಳು ದೊಡ್ಡವರಾಗಿದ್ದರೆ, ಅದಕ್ಕೆ ಈಗೀಗ ನನ್ನ ಕೆಟ್ಟ ಜೋಕ್ ಗಳ ಪ್ರಯೋಗ ನನ್ನ ತಂಗಿ ಮಕ್ಕಳ ಮೇಲೆ.ಸಧ್ಯಕ್ಕಂತು ಅವರು ಎಂಜಾಯ್ ಮಾಡ್ತಿದ್ದಾರೆ ಮುಂದಿನ ಸಲ ಬಂದಾಗ ದೊಡ್ಡಾಮ್ s please grow up ಅನ್ನುಬಹುದೇನೋ...ಹಾಗಾಗಿ ಅಲ್ಲಿ ತನಕ ನಾನು ಹೀಗೇsssssssssssssss.. :-)

@ ಗೀತಾ: ಇದನ್ನು ಬಾಣಲೆಯಲ್ಲಿ ಹಾಕಿ ಹುರಿದರೆ ಕಟ್ ಲೆಟ್ ಗೆ ಬ್ರೆಡ್ ಕ್ರಂಬ್ಸ್ ಮಾಡುವುದು ಇನ್ನೂ ಸುಲಭ. ನಾನು ಮೈಕ್ರೋವೇವ್ ನಲ್ಲಿ ಎರಡು ನಿಮಿಷ ಇಟ್ಟು ಕ್ರಂಬ್ಸ್ ಮಾಡಿಟ್ಟು ಕೊಂಡೆ

6 comments:

Badarinath Palavalli said...

ಈ ತಿನಿಸನ್ನು ನಾವು ಬೇರೆ ರೀತಿ ಮಾಡುತ್ತಿದ್ದೆವು. ಈ ರೀತಿಯಲ್ಲಿ ಮಾಡಿ ನೋಡುತ್ತೇವೆ.

Sushrutha Dodderi said...

ಮೊದ್ಲೇ ಉಪ್ಪಿಟ್ಟಿಗೂ ನಂಗೂ ಅಷ್ಟಕ್ಕಷ್ಟೇ. ಈಗ ನೀವು ಫೋಟೋ ಗೀಟೋ ಹಾಕಿ ಚನಾಗಾಗತ್ತೆ ಅಂತ ಬೇರೆ ಹೇಳಿದೀರ. ನನ್ ಹೆಂಡತಿ ನಾಳೆ 'ಒಂದು ಪೌಂಡ್ ಬ್ರೆಡ್ ತನ್ನಿ' ಅಂತ ಹೇಳಿದ್ರೆ ನಾನೇನ್ರೀ ಮಾಡ್ಲೀ? ಛೇ!

nenapina sanchy inda said...
This comment has been removed by the author.
Radhika said...

Malathi, more than the recipe, liked your rhyming shaayiri in the comment!

nenapina sanchy inda said...

ಬದರಿ : ಮಾಡಿ ನೋಡಿ ಹೇಳಿಯಪ್ಪಾ:

ಶುಶ್ರುತ ದೊಡ್ಡೇರಿ, ಹೇಗೂ3 days
ಹಾಲಿಡೇ ರಿ...
ಬೀದಿಗೊಂದು ಬೇಕರಿ
ಬ್ರೆಡ್ ಒಂದು take ರೀ
ಮಾಡಿ ನೋಡಿ ಹೇಳಿರಿ

:-)
ಅಕ್ಕ

nenapina sanchy inda said...

thank u Radhika...u r right it just some rhyming asTe...:-)