July 28, 2013

ಇಂತಪ್ಪ ಒಬ್ಬ ಕಂಡಕ್ಟರಪ್ಪ- ಮತ್ತು ಒಂದು ಲಹರಿ

ಬಸ್ಸ್ ನಲ್ಲಿ ಹೋಗುವಾಗ ನನ್ನ ಬಳಿ ಯಾವತ್ತೂ ಪುಸ್ತಕ ಇರುತ್ತದೆಂದು ಹೇಳಿದ್ದೇನಷ್ಟೆ (ಮುಂಚಿನ ಹಲವಾರು ಪೋಸ್ಟ್ ಗಳಲ್ಲಿ). ಯಾರೊಂದಿಗೂ ಮಾತು ಬೇಡವಾದಾಗ ನಾನು ಸಹಜವಾಗಿ ಪುಸ್ತಕದ ಮೊರೆ ಹೋಗುತ್ತೇನೆ. ಆದರೆ ಈ 'ಕಂಡಕ್ಟರ್' ಬಸ್ ನಲ್ಲಿದ್ದರೆ ನನ್ನ ಪುಸ್ತಕ ನೆಪಮಾತ್ರಕ್ಕೆ ತೆರೆದಿರುತ್ತದೆ.
ನಮ್ಮ ಬಳಿ ಬಂದು "ಪಾಸ್ ಆ ಕಾಸ್ ಆ"? ಪಾಸ್ ಇದ್ರೆ ಪಾಸ್ ತೋರಿಸಿ ಇಲ್ಲದಿದ್ದರೆ ಕಾಸ್ ತೋರಿಸಿ ಅಂತಾನೆ
ಮೊಬೈಲ್ ನಲ್ಲಿ ಮಾತಾನಾಡುವುದರಲ್ಲಿ ಯಾರಾದರೂ ತಲ್ಲೀನರಾಗಿದ್ದರೆ " ಎಲೈ ಮೊಬೈಲ್ ಸುಂದರಿ, ಮೊದಲಿಗೆ ಕಾಸ್ ಆ ಪಾಸ್ ಆ ಹೇಳಿ ಆಮೇಲೆ ನಿನ್ನ ಸಂಭಾಷಣೆಯನ್ನು ಮುಂದುವರೆಸು"
ಅಥವಾ:
ದೊಡ್ಡ ಬ್ಯಾಕ್ ಪ್ಯಾಕ್ ಇದ್ದ ಹುಡುಗಿಯರಿದ್ದರೆ "ಅಮ್ಮಾ ವಿದ್ಯಾಲಕ್ಷ್ಮಿ ಪಾಟೀ ಚೀಲ ಸ್ವಲ್ಪ ಆ ಕಡೆ ಇಟ್ಟುಕೋ, ಬರೋ ಹೋಗೋರಿಗೆ ತೊಂದರೆಯಾಗುತ್ತೆ" ಅಂತಲೋ
ಸಡನ್ ಆಗಿ ಅನಂತಾಪದ್ಮನಾಭನ ಶ್ಲೋಕ ಉಚ್ಚರಿಸುತ್ತಾ ಇದ್ದಾಗ ಮರಿಯಪ್ಪನಪಾಳ್ಯ ಸ್ಟಾಪ್ ಬಂದಾಗ " ಬಾರಪ್ಪ ಅನಂತಪದ್ಮನಾಭಾ ಬೇಗ ಬಾ" ಅಂತ ಪ್ಯಾಸೆಂಜರ್ ಅನ್ನು ಕರೆಯುತ್ತಾನೆ.
ಫೂಟ್ ಬೋರ್ಡ್ ಮೇಲೆ ತೂಗಾಡುವ ಹುಡುಗನಿಗೆ " ಮಗಾ ಏಕಲವ್ಯನ ಬಾಣದ ತರಾ ಸೀದ ಬಸ್ ನ ಹಿಂಭಾಗಕ್ಕೆ ಹೋಯ್ತಾ ಇರಬೇಕು" ಅಥವಾ "ಹೋ ವಿದ್ಯಾವಾಚಸ್ಪತಿ ಚೀಟಿ ಪಡಕೊಂಡ್ಯಾ ತಮ್ಮಾ? ಅಂತಲೋ ಕೇಳ್ತಾ ಮುಂದುವರೆಯುತ್ತಾನೆ. ಹರಿಶ್ಚಂದ್ರ ಘಾಟ್ ಬಂದಾಗ 'ರೀ ಯಾರಿಗ್ರೀ ಅದು ಮೋಕ್ಷ ಸಿಗಬೇಕಿದ್ದು, ಘಾಟ್ ಬಂತು ನೋಡ್ರಿ, ಇಳೀರಿ ರಿ" ಅಂತ ಕೂಗು ಹಾಕ್ತಾನೆ. 
ನವರಂಗ್ ಟಾಕೀಸ್ ನಲ್ಲಿ ಯಾವ ಫಿಲ್ಮ್ ಇರುತ್ತೋ ಅದರ ಮೇಲೆ ಒಂದು ಸಣ್ಣ ಲೆಕ್ಚರ್..ನಾನು ಕೇಳಿಸಿಕೊಂಡಿದ್ದು ಹ್ಯಾರಿ ಪೋಟರ್ (harry potter) ಸಿನಿಮಾ ಬಗ್ಗೆ ಹೀಗಿತ್ತು: "ನವರಂಗ್ ಚಿತ್ರಮಂದಿರದಲ್ಲಿ ಮೊದಲ ಬಾರಿ ಹರೀ ಪಟ್ಟರ್, ಥ್ರೀ ಡಿಯಲ್ಲಿ, ಹೋಗಿ ನೋಡಿ ಹರಿ ಪೋಟ್ ನ ಮಾಯಾಲೋಕದಲ್ಲಿ ಮರೆಯಾಗಿ" ಇನ್ನೊಮ್ಮೆ 'ಈ ಶುಕ್ರವಾರದಿಂದ ತೂಗೂದೀಪ ಅವರ ಮಗ ದರ್ಶನ್ ನಟಿಸಿರುವ ಸಿನಿಮಾ 'ಸಾರಥಿ', ಅದರ ಬಗ್ಗೆ ಹೇಳುವಾಗಲಂತೂ  ಪತ್ನೀ ಮೇಲೆ ಹಲ್ಲೆ ನಡಿಸಿ ಜೈಲ್ ಸೇರಿ ಬಿಡುಗಡೆ ಹೊಂದಿದ್ದು, ಕಂಡಕ್ಟರ್ ಆ ಸಿನಿಮಾ ನೋಡಿದ್ದು , ಅದನ್ನು ಇಷ್ಟಪಟ್ಟಿದ್ದು, ಸಿನಿಮಾದ ಡೈಲೋಗ್ಸು, ಮಾತ್ರವಲ್ಲ ನಿರ್ದೇಶಕರ, ನಿರ್ಮಾಪಕರು, ತಾರಗಣದಲ್ಲಿರುವವರು, ಪದ್ಯ ಬರೆದವರು ..ಹೀಗೆ ಪಟ್ ಪಟಾ ಅಂತ ಅವರ ಹೆಸರುಗಳನ್ನು ಉದುರಿಸ್ತಾರೆ.
ಕೆಲವೊಮ್ಮೆ ಕನ್ನಡ ಇಂಗ್ಲೀಷ್ ಹಿಂದಿಯಲ್ಲೂ ಮಾತನಾಡುವುದಿದೆ
ಚೀಟಿ ಪಾಸ್ ಕೇಳಿ ಪಡೆದುಕೊಳ್ಳಿ,  ಆಸ್ಕ್ ಎಂಡ್ ಟೇಕ್ ಟಿಕೆಟ್, ಟಿಕೆಟ್ ಪೂಚ್ ಕೆ ಲೀಜೀಯೆ' ವಗೈರೆ!!
ಧಡೂತಿ ಹೆಂಗಸಿನ ಕಡೆ ಬಟ್ಟು ಮಾಡಿ: ಹೆಂಗಸರಂದ್ರೆ ಚಿಟ್ಟೆ - ಚಿಟ್ಟೆ ತರ ಇರ್ಬೆಕು. ಇವರು ನೋಡಿ ಚಿಟ್ಟೆನೂ ಅಲ್ಲ ಬಿಟ್ಟೆನೂ ಅಲ್ಲ ಅಂದಾಗ ಮಾತ್ರ ಸ್ವಲ್ಪ ಓವರ್ ಆಯ್ತು ಈಯಪ್ಪಂದು ಅಂತ ಅನ್ನಿಸ್ತು. ಬಹುಶ: ಆ ಹೆಂಗಸಿಗೆ ಕನ್ನಡ ಬರುತ್ತಿರಲಿಲ್ಲವೇನೋ ಅದಕ್ಕೆ ಆತನಿಗೆ ಆ ಧೈರ್ಯ ಅಂದುಕೊಂಡೆ.
ನನ್ನನ್ನೂ ಅಣಕಿಸುತ್ತಾರೆ "ಸೋದರಿ ಎಲ್ಲಿಗೆ ಅಂದ್ರೆ" ನಾನು 'ಒಂದು ಮೆಜಿಸ್ಟಿಕ್'ಅಂದಾಗ ನನ್ನ ತರಹನೇ ಉಚ್ಚಾರ ಮಾಡುತ್ತ : 'ಸೋದರಿಗೊಂದು ಮೆಜೆಸ್ಟಿಕ್' ಅಂತ ಚೀಟಿ ಕೊಡುತ್ತಾನೆ. ಇಳಿಯುವಾಗ ಮೋದಿ ಹಾಸ್ಪಿಟಲ್ ಸ್ಟಾಪ್ ಬಂದಾಗ "ಯಾರ್ರೀ ಕಣ್ಣಿನ ಆಸ್ಪತ್ರೆ ಬಂತು ನೋಡಿ" ಅಂತ ಆವಾಜ್ ಹಾಕ್ತಾರೆ.
ಅವನು ಉದುರಿಸುವ ನನ್ನ ಫೇವರಿಟ್ ಡಯಲೋಗ್ " ಏ ಬುಲ್ ಬುಲ್ ಮಾತಾಡಕಿಲ್ಲ್ವಾ" ಇದು ಇಯರ್ ಫೋನ್ ಹಾಕಿಕೊಂಡಿರುವ ಹುಡುಗಿಯರಿಗೆ ಮೀಸಲು
KBS to KBS ಬಸ್ ಸಂಖ್ಯೆ 96 ಎ ನಲ್ಲಿ ಕಾಣಸಿಗುತ್ತಾರೆ. ಹೆಸರಿನ ಬ್ಯಾಚ್ ಹಾಕಿ ಕೊಳ್ಳುವುದಿಲ್ಲದ್ದರಿಂದ ಅವರ ಹೆಸರು ಗೊತ್ತಿಲ್ಲ.ನೀವು ಈ ರೂಟ್ ನಲ್ಲಿ ಟ್ರಾವೆಲ್ ಮಾಡಿದ್ರೆ ನಿಮಗೆ ಅವರ ಪರಿಚಯ ಇರಬಹುದು.
ನಿಮ್ಮ ಸ್ಟಾಪ್ ಬಂದಿದ್ದೆ ಅರಿವಾಗುವುದಿಲ್ಲ.
ಜಗಳ ಆಡಿ ಮಾತಿಗೆ ಮಾತು ಬೆಳೆಸುವ ಕಂಡಕ್ಟರ್ ಗಿಂತ ಇಂತಹವರು ಲೇಸು

episode -2

ನನ್ನ ಆಫೀಸ್ ಜಯನಗರ ನಾಲ್ಕನೆ ಬಡವಾಣೆಯಲ್ಲಿತ್ತು ಆಗ. ಮಹಾಲಕ್ಷ್ಮೀ ಪುರಂ ನಿಂದ ಮೊದಲು ಮೆಜಿಸ್ಟಿಕ್ ಆಮೇಲೆ ಜಯನಗರ ಬಸ್ ಹಿಡಿಬೇಕಿತ್ತು. ಜಯನಗರಕ್ಕೆ ಹೋಗುವಾಗಿನ ಘಟನೆ. ನನ್ನ ಎದುರಿಗೆ ಸ್ಮಾರ್ಟ್ ಆಗಿ ಡ್ರೆಸ್ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಬಂದು ಕುಳಿತರು. ಕಂಡಕ್ಟರ್ ಟಿಕೆಟ್ ಅಂತ ಅವಳ ಬಳಿ ಸಾರಿದಾಗ ಆಕೆ 100 ರ ನೋಟ್ ಕೊಟ್ಟಳು. ಎಲ್ಲಿತ್ತೊ ಸಿಟ್ಟು ಕಂಡಕ್ಟರ್ ಬಳಿ. ಸಿಕ್ಕಾಪಟ್ಟೆ ಒದರಾಡಿದ. ಬಸ್ , ನಿಲ್ದಾಣದಿಂದ ಸುಮಾರು ದೂರ ಸಾಗಿತ್ತು. ಬೆಳಿಗ್ಗೆ ಬೆಳಿಗ್ಗೆ ಚಿಲ್ಲರೆ ಕೊಡದೆ ಸತಾಯಿಸ್ತೀರಾ. ನನ್ನ ಬಳಿ ಚಿಲ್ಲರೆ ಇಲ್ಲ ಅಂತೆಲ್ಲ. ಆಕೆ ತನ್ನ ಪರ್ಸ್ ತೆರೆದು ತೋರಿಸಿದಳು ಎಲ್ಲ ನೂರರ ನೋಟ್ ಗಳು. 'ನನ್ನ ಬಳಿ ಕೂಡ ಚಿಲ್ಲರೆ ಇಲ್ಲ' ಅಂತ ಹೇಳಿದಳು. ಏನ್ ಮಾಡಕಾಗಲ್ಲ ಇಳೀರಿ ಮ್ಯಾಡಂ ಅಂದ. ಆಕೆ ಪ್ಲೀಸ್ ಆಫೀಸ್ ಗೆ ಈಗಾಗಲೇ ಲೇಟ್ ಆಗಿದೆ. ಮುಖ್ಯವಾದ ಮೀಟಿಂಗ್ ಇದೆ ಅಂತ ಚೆನ್ನಾಗಿಯೇ ಹೇಳಿದಳು. ಆದರು ಅವನು ಡ್ರೈವರ್ ಗೆ 'ರೀ ನಿಲ್ಲಿಸರಿ. ಬಂದ್ಬಿಡತಾರೆ ಬೆಳಿಗ್ಗೆ ಬೆಳಿಗ್ಗೆ' ಅಂತ. ಡ್ರೈವರ್ ಬಸ್ ನಿಲ್ಲಿಸಿದ. ಆಕೆ ಸುಮ್ಮನೆ ಇಳಿಲಿಕ್ಕೆ ಹೋದರು. ಆದರೆ ನಾನು ಕಂಡಕ್ಟರ್ ಬಳಿ ಬೆರಳಿಗೆ ಹಾಕಿಕೊಂಡ 10 ರ ಸುಮಾರು ನೋಟುಗಳನ್ನು ನೋಡಿದ್ದೆ. ಅರೇ ಅನ್ಸಿ "ಮ್ಯಾಡಂ, ನಾನು ಕೊಡ್ತೇನೆ ಕೂತುಕೊಳ್ಳಿ ಅಂತ 8 ರೂ ಕೊಟ್ಟೆ. 5 ರೂ ನ ನೋಟ ಮತ್ತು ನನ್ನ ಪುಟಣಿ ಬ್ಯಾಗ್ ನಿಂದ ಸ್ಟೈಲ್ ಆಗಿ (ಮನೆಯಲ್ಲಿದ್ದರೆ ಅದಕ್ಕೆ ಟೆಂಟಡೆಂ ಅಂತ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಕೂಡ ಹೊರಡಿಸ್ತೇನೆ) 1 ರೂ ನ ಮೂರು coin. ಅವನು ಆಕೆಗೆ ಟಿಕೆಟ್ ಕೊಟ್ಟು ನನ್ನ ಬಳಿ 100 ನೋಟ್ ಕೊಟ್ಟು ಚಿಲ್ಲರೆ ಕಾಸು ನನಗೆ ಕೊಡಿ ಅಂತ ಹೇಳಿದ. ನನಗೆ ಬೆಳಿಗ್ಗೆ ಬೆಳಿಗ್ಗೆ ಜಗಳ ಎಲ್ಲ ಆಡೋರನ್ನು ಅದೂ ಏನೂ ಬಲವಾದ ಕಾರಣ ಇಲ್ಲದೆ ಬಾಯಿ ಜೋರು ಮಾಡುವವರನ್ನು ಕಂಡರೆ ಆಗಲ್ಲ. ನಾನು ನನ್ನ ಬ್ಯಾಗ್ ನಿಂದ ಪುಸ್ತಕ ತೆಗೆದು ಕಂಡಕ್ಟರ್ ನ ಮಾತು ಕೇಳಿಸಿಕೊಳ್ಳದವಳ ಹಾಗೆ ಓದಲು ಶುರು ಮಾಡಿದೆ.ೆರಡು ಮೂರು ಸಲ ನನ್ನನ್ನು ಮಾತನಾಡಿಸಿದ್ರೂ ನಾನು ignore ಮಾಡಿದೆ. ಇನ್ನೂ ನನ್ನ ಮುಂದೆನೇ ನಿಂತುಕೊಂಡಿದ್ದ, ಆಗ ನಾನು ಅವನಿಗೆ ಹೇಳಿದೆ 'ಮೊದಲು ಮಾತನಾಡುವ ರೀತಿ ಕಲೀರಿ. ನಾನು ನಿಮಗೆ ನನ್ನ ಬಳಿಯಿರುವ ಕಾಸು ಕೊಡಲ್ಲ' ಅಂತ ಆಮೇಲೆ ಅವನು ಬಸ್ ನ ಹಿಂದಕ್ಕೆ ಹೋದ.
ಇಳಿಯುವಾಗ ಆ ಹೆಂಗಸು ಪುನ: ನನಗೆ ಥ್ಯಾಂಕ್ಸ್ ಅಂದು, ನನ್ನ ಆಫಿಸ್ ಎಲ್ಲಾಗುತ್ತೆ ಅಂತ ಕೇಳಿದಳು. ಹೇಳಿದೆ. ಅರೇ ನನ್ನ ಆಫಿಸ್ ನಿಮ್ಮ ಆಫಿಸ್ ಮೇಲೆನೆ ಬರುತ್ತೆ.
"ಹೌದಾ? ನಾನು ನಿಮ್ಮನ್ನು ನೋಡಲೇ ಇಲ್ಲ"
"ಹೌದು, ನಾನು ಟೂ ವ್ಹೀಲರ್ ನಲ್ಲಿ ಬರೋದು. ಬೇಸ್ ಮೆಂಟ್ ನಲ್ಲಿ ಪಾರ್ಕ್ ಮಾಡಿ ಸೀದಾ ನನ್ನ ಮಹಡಿಗೆ ಲಿಫ್ಟ್ ನಲ್ಲಿ ಹೋಗೋದು"
ಆಕೆಯ ಹೆಸರು ಶೋಭಾ. ನಮ್ಮ ಆಫಿಸ್ ನ ಮೇಲಿರುವ ಹೌಸಿಂಗ್ ಫೈನಾನ್ಸ್ ನಲ್ಲಿ ಕೆಲಸ. ಆ ದಿನ ಅರ್ಧ ದಾರಿಯಲ್ಲಿ ಸ್ಕೂಟರ್ ಹಾಳಾಗಿ ಇಷ್ಟೆಲ್ಲ ಅವಾಂತರ. ನನ್ನ ಹೆಸರು ಹೇಳಿದ ಮೇಲೆ ಆಕೆ 'ಮಾಲತಿ ನನ್ನ ಬಳಿ ಚೆಂಜ್ ಇದ್ದದ್ದು ಮಕ್ಕಳು ಎತ್ತಿಕೊಂಡು ಹೋಗ್ತಾರೆ ಅದಕ್ಕೆ ಯಾವತ್ತೂ ನನ್ನ ಪರ್ಸ್ ನಲ್ಲಿ ಚಿಲ್ಲರೆ ಕಾಸು ಇರಲ್ಲ ಅಂದ್ರು
ಹೀಗೆ ಪರಿಚಯ ಬೇಳಿತು. ಆಕೆ ನನಗೆ ಕೆಲವೊಮ್ಮೆ ಮಧ್ಯಾಹ್ನದ ಊಟಕ್ಕೆ ಹೊರಗೆ ಆಹ್ವಾನಿಸುತ್ತಿದ್ದಳು. ಮತ್ತು ಅವಳ ಟಿಫನ್ ನಮ್ಮ ಜತೆ ನಮ್ಮ ಆಫಿಸ್ ನಲ್ಲಿ ತಿಂದು ಶೇರ್ ಮಾಡುತ್ತಿದ್ದಳು.
ನಾನು ಒಂದು ಸಲ ಕೇಳಿದ್ದೆ. ಇಷ್ಟು ಟಿಪ್ ಟಾಪ್ ಆಗಿ ಮ್ಯಾಂಚಿಂಗ್, ಮೇಕ್ ಅಪ್  ಎಲ್ಲ ಮಾಡಕ್ಕೆ ನಿಮಗೆ ಸಮಯ ಸಿಗುತ್ತ ಅಂತ?
"ಹೌದು ರಾತ್ರಿ ಮಲಗುವ ಮುಂಚೆ ನಾನು ಎಲ್ಲ ರೆಡಿ ಮಾಡಿ ಮಲಗುತ್ತೇನೆ. ಮತ್ತೆ ಮನೆಯಲ್ಲಿ ನನಗೆ ಅಡಿಗೆಯವಳು, ಮನೆ ಕೆಲಸಕ್ಕೆಲ್ಲ ಇದ್ದಾರೆ ಅಂತ. ನನಗೇನೂ ದುಡೀ ಬೇಕಂತ ಇಲ್ಲ. ಆದರೆ ನನಗೆ ಮನೆಯಲ್ಲಿ ಸುಮ್ಮನೆ ಕೂರಲಿಕ್ಕೆ ಆಗಲ್ಲ"
ನಾನು ಜಯನಗರದ ಆಫಿಸ್ ನಲ್ಲಿರುವ ತನಕ ನಮ್ಮ ಒಡನಾಟ ಹೀಗೆ ಮುಂದುವರೆದಿತ್ತು. ಅವರ ಆಫಿಸ್ ಸ್ಟಾಫ್ ಬಗ್ಗೆ ಅಲ್ಲಿಗೆ ಬರುವ ಕ್ಲಯಂಟ್ಸ್ ಬಗ್ಗೆ ಎಲ್ಲ ಮಜವಾಗಿ ನಗುತ್ತ ನಗುತ್ತ ಹೇಳುವವಳು. ನಮ್ಮ ಆಫಿಸ್ ಎಲ್ಲ ಈ ಕಡೆ ಶಿಫ್ಟ್ ಆಗುವಾಗ ಅವರು ಕುಟುಂಬದ ಜತೆ ಹೊರದೇಶಕ್ಕೆ ಪ್ರವಾಸ ಹೋಗಿದ್ದಳು. ಬೈ ಹೇಳಲಿಕ್ಕೆ ಆಗಿರಲಿಲ್ಲ. ಇತ್ತೀಚಿಗೆ ತಂಗಿ ಜತೆ ಶಾಪಿಂಗ್ ಹೋದಾಗ ಮಾಲ್ ಒಂದರಲ್ಲಿ ಸಿಕ್ಕಿದಳು ಶೋಭಾ. ಹಾಗೆ ಟಿಪ್ ಟಾಪ್ ಸ್ಮಾರ್ಟ್ ,ಪಟ ಪಟ ಮಾತು. ನನ್ನ ತಂಗಿ ಕೂಡ ಸಕತ್ ಇಂಪ್ರೆಸ್ ಆದ್ಲು. ಅವರು ಅದೇ ಆಫಿಸ್ ನಲ್ಲಿದ್ದಾಳಂತೆ. ಈಗಂತೂ ಸೆಲ್ ಫೋನ್ ಇದೆಯಲ್ಲವಾ? ನಂಬರ್ ವಿನಿಮಯ ಮಾಡಿಕೊಂಡು ಈಗ ನಮ್ಮ ಒಡನಾಟ ಮೊಬೈಲ್ ನಲ್ಲಿ. ಈಗಲೂ ಗಮ್ಮತ್ತು ಮಾತು ಕತೆ...
ಅಂತರಮುಖಿಯಾದ ನನಗೆ ಅವರ ಪರಿಚಯ ಆದದ್ದು ಒಂದು breath of fresh air. ನಾನು ಮಾತಾಡಬೇಕಂತ್ಲೇ ಇಲ್ಲ. ಎಲ್ಲ ಶೋಭಾ ನೆ ಮಾಡ್ತಾಳೆ.ಕೇಳಿಸಿಕೊಳ್ಳುವುದು ಮಾತ್ರ ನನ್ನ ಕೆಲಸ. ಅವಳ ಪರಿಚಯ ಆಗಿದ್ದಕ್ಕೆ ಜಗಳಗಂಟ ಕಂಡಕ್ಟರ್ ಗೆ ಒಂದು ಥ್ಯಾಂಕ್ಸ್ ಹೇಳಲೇ ಬೇಕು.
ಅಷ್ಟೆ
:-)


12 comments:

Srikanth Manjunath said...

ಜನಗಳ ಮಧ್ಯೆ ಬದುಕುವ ಈ ರೀತಿ ನಿರ್ವಾಹಕರು ಪ್ರಯಾಣದ ಹಾದಿಯನ್ನು ಕಡಿಮೆ ಮಾಡುತ್ತಾರೆ ಎನ್ನುವುದು ಸುಳ್ಳಲ್ಲ. ಪಯಣಿಗರ ದಿನ ನಿತ್ಯದ ಜಂಜಾಟವನ್ನು ನಿರ್ವಾಹಕ ಇಲ್ಲವೇ ಚಾಲಕರ ಮೇಲೆ ತೀರಿಸಿಕೊಳ್ಳುವುದು ಸಹಜ. ಹಾಗೆಯೇ ನಿರ್ವಾಹಕರು, ಚಾಲಕರು ತಮ್ಮ ಮನೆ ಮನದ ದುಗಡವನ್ನು ಪಯಣಿಗರ ಮೇಲೆ ದಾಟಿಸುವುದು ನಿಜವೇ ಸರಿ. ಆದರೆ ಇಂತಹ ಜನಾನುರಾಗಿ ಅಥವಾ ನೊಂದ/ಬೆಂದ/ಬಳಲಿದ ಪಯಣಿಗರಿಗೆ ತುಸು ಮನರಂಜನೆ ನೀಡುವುದು (ಎಲ್ಲೇ ಮೀರದೆ) ಶ್ಲಾಘನೀಯ. ಸುಂದರ ಚರಿತೆ ಮೇಡಂ

ಆದೇಶ್ ಕುಮಾರ್ ಸಿ ಟಿ - Adesh Kumar C T said...

Aa bul bul anno dialogue helbekadre bere hudgir reaction nodbeku anta bejan aase agbittide

Badarinath Palavalli said...

ಈ ಕಂಡೆಕ್ಟರನ್ನು ನಾನು ನೋಡಲೇ ಬೇಕಲ್ಲ,
"ಈ ಸೋಡಾ ಬುಡ್ಡಿ ಕಾಸು ಕಾಸು" ಅಂತಾನೇನೋ, ನನ್ನ ನೋಡಿ! :-D

Radhika said...

Enjoyed reading the post. There used to be a conductor in vijayanagar/malleshwaram route(not sure of the bus number) who used to talk completely in Kannada.
For Navarang he would say 'navaranga', Bhashyam circle would be 'Bhasyam vrutta' .

nenapina sanchy inda said...

thank you Srikanth. ಜಗಳ ಬೈಯುವ ಕಂಡಕ್ಟರ್ ಗಿಂತ ಇದು ಒಳ್ಳೆಯದಲ್ಲವಾ?
ಬದರಿ ಭೈಯ್ಯಾ: :-)
ಆದೇಶ C. T. 96 A bus hatti yaavaaglaadroo nim mulakat avara jate aagabahudu. thanks for reading my ramblings
Radhika: chennagiruttalvaa?? naane esTo padagaLannu avariMda kalitiddene.
:-)
thanks all
malathi S

Swarna said...

ವಿಜಯನಗರ ಮೆಜಸ್ಟಿಕ್ ಮಾರ್ಗದಲ್ಲಿ ಒಬ್ಬರು ಇದ್ದರು , ಚಾಲಕರೇ ಚಲಿಸಿ ...ನಿಲ್ಲಿಸಿ ಅಂತ ಪೂರ್ತಾ ಕನ್ನಡ.
ಅವರ ಬಿಡುವಿಲ್ಲದ ಕೆಲಸಡ ನಡುವೆಯೂ ನಗುತ್ತಾ ನಗಿಸುತ್ತಾ ಇರೋರನ್ನ ನೋಡೋದು ಖುಷಿ.
ಈಗ ೯೬ರಲ್ಲಿ ಒಮ್ಮೆ ಹೋಗ್ಬೇಕು ...ಚೆನ್ನಾಗಿದೆ

Sudeepa ಸುದೀಪ said...

Enjoy each and every line :-)

ವಿ.ರಾ.ಹೆ. said...

ಹೌದು. ಆರೇಳು ವರ್ಷದ ಹಿಂದಿ ಇವರು ೯೬ಡಿ ಬಸ್ಸಲ್ಲಿದ್ರು. ಆಗ ಕೆಲವೊಮ್ಮೆ ನೋಡಿದ್ದೇನೆ. ಈ ತರಹ ಉತ್ಸಾಹಿ ಕಂಡಕ್ಟರ್ ಇದ್ರೆ ಚೆನ್ನಾಗಿರತ್ತೆ ಬಸ್ ಪ್ರಯಾಣ. ! :)

nenapina sanchy inda said...

:-) ಧನ್ಯವಾದಗಳು ಸ್ವರ್ಣ, ಮುನ್ನ & ವಿಕಾಸ

Shree Kar said...

nice post glorifying the BMTC conductors. Reminded me of the most famous one of them all - Shivajirao Gaikwad !

- Kar

nenapina sanchy inda said...

Shree Kar:
Shivaji Rao Gaikwad: none other than the great Rajani bhaiyya!!!!..:-)
thank you

ಚಿನ್ಮಯ ಭಟ್ said...

vaw ...chenag ide :-):-)..odsikond hogatte medam ee baraha. ista aaytu :-)