ದಿನಾ ನಾನು ಸಂಜೆ ಮಕ್ಕಳೊಂದಿಗೆ ವಾಕ್ ಮಾಡ್ತೇನೆ. ನಿಹಾ ಗೆ ಸ್ಟಡಿ ಹಾಲಿಡೆ ಮತ್ತು ಮಾಲವಿಕ ಅವಳ ಎಮ್ ಬಿ ಎ ಗೆ ತಯಾರಿ ನಡೆಸ್ತಿದ್ದಾಳೆ. ಹಾಗಾಗಿ ಸಂಜೆ ಅವರೂ ನನ್ನ ಜತೆ ವಾಕ್. ಮೊನ್ನೆ ರಾಯರು ಬೀಗದ ಕೈ ಮರೆತಿದ್ದರು. ಅದಕ್ಕೆ ಗಾರ್ಡನ್ ಗೆ ಬಂದು ಬೀಗದ ಕೈ ಒಯ್ದು, - ' ವಾಕ್ ಮಾಡ್ತಾ ಇರಿ ನಾನು ಲ್ಯಾಪ್ ಟಾಪ್ ಬ್ಯಾಗ್ ಮನೆಯೊಳಗಿಟ್ಟು ಫ್ರೆಶ್ ಆಗಿ ಬರ್ತೇನೆ'. 'ಸ್ವಲ್ಪ ಹೊತ್ತು ನಾನೂ ನಿಮ್ಮ ಜತೆ ವಾಕ್ ಮಾಡಿ ನಂತರ ನಿಮಗೆ 'ಮಾಮಾ ಮಿಯಾ' ಗೆ ಕರೆದುಕೊಂಡು ಹೋಗ್ತೇನೆ.' ಅವರು ಮನೆಯಿಂದ ಬರುವಷ್ಟರಲ್ಲಿ ನನ್ನ ವಾಕ್ ಮುಗಿದು ಸುಸ್ತಾಗಿ ಕೂತಿದ್ದೆ. ಮಕ್ಕಳು ವಾಕ್ ಮುಂದುವರೆಸಿದ್ರು. ಶ್ರೀಕಾಂತ ಬಂದು ಏನೇ ಸೋಂಬೇರಿ ಇಷ್ಟೇನಾ ನಿನ್ನ ವಾಕ್ ಅಂದ್ರು. ನನ್ನ ಕೈ ಯಲ್ಲಿ ಅಷ್ಟೆ ಆಗೋದು (ಗೊತ್ತು ಕಾಲಲ್ಲಿ ವಾಕ್ ಮಾಡೋದು ಅಂತ, ಸುಮ್ನೆ ಈಗ ಪನ್ ನೆನಸ್ಕೋಬೇಡಿ ಪ್ಲೀಸ್).
"ಇದೆಂತಾ ವಾಕ್ ನಾಳೆ ಲಾಲ್ ಬಾಗ್ ಗೆ ಹೋಗುವಾ ಬೆಳಿಗ್ಗೆ' ಅಂದ್ರು
ನಾನು ಹೂಂ ಅಂದ್ರೂ ಬೆಳಿಗ್ಗೆ ಎದ್ದರೆ ತಾನೆ ವಾಕ್ ಹೋಗೋದು ಅಂತ (ಮನಸ್ಸಲ್ಲೇ ಹಾ ಹಾ ಹಾ ಅಂತ evil laughterಇಸಿದೆ)
ಈ ವಾಕ್ ಫಂಡಾ ಎಲ್ಲ ನನಗೋಸ್ಕರ. ಆಫಿಸ್ ಗೆ ಹೋಗೋದು ಬಿಟ್ಟ ಮೇಲೆ , ನನ್ನ ಮನೆ ಕೆಲಸ ಎಲ್ಲ ಮುಗಿಸ್ಕೊಂ,ಡು ಇಲ್ಲ ಕುರುಂ ತಿಂಡಿ ಮೆಲ್ತಾ ಮಲಕ್ಕೊಂಡು ಪುಸ್ತಕ ಓದೋದು, ಇಲ್ಲದಿದ್ದರೆ ಕಂಪ್ಯೂಟರ್ ಬಳಿ ಕೂತು ಫಿಲ್ಮ್/ you tube ಹಾಕ್ಕೊಂಡು ಕುರೋದು ಅಷ್ಟೆ ಅಲ್ಲ ತಿಂಡಿ-ತೀರ್ಥ (ತೀರ್ಥ = ಟೀ ಟೀ ಅನ್ದ್ ಟೀ) ಎಲ್ಲ ಸಿಸ್ಟಮ್ ಎದುರುಗಡೆ. ಪೊಗದಸ್ತಾಗಿ ತಿನ್ನ ಬೇಕಪ್ಪ ನಂಗೆ. ಮನೆದೂ as well as ಹೊರಗಿನದ್ದು :-(. ಸೋ ಸಿಕ್ಕಾಪಟ್ಟೆ ವೈಟ್ ಜಾಸ್ತಿ ಆಗೋಗಿದೆ.
ಬೆಳಿಗ್ಗೆ ಅವರೆಲ್ಲ ಎದ್ದಿದ್ದೆ 6.30 ಗೆ ಇನ್ನು ಯಾರು ವಾಕ್ ಹೋಗ್ತಾರೆ ಅಂತ ನಾನು ದೋಸೆಗೆ ರೆಡಿ ಮಾಡ್ತಾ ಇದ್ದೆ. ಇಲ್ಲ ರಿಕ್ಷಾದಲ್ಲಿ ಲಾಲ್ ಬಾಗ್ ಗೆ ಹೋಗೋದು ಅಂತ ಆಯ್ತು. ರೆಡಿಯಾಗಿ ಹೋದ್ವಿ. ಅರ್ಧ ರೌಂಡ್ ಆದ ಕೂಡಲೆ ನನ್ನ ಗಾಡಿ ಸ್ಲೋ. ನಾಲಕ್ಕು ಜನ ನಾಲ್ಕು ದಿಕ್ಕು. ಅಂತದರಲ್ಲಿ ನಿಹಾ ಸೆಲ್ ಫೋನ್ ತಂದಿರಲಿಲ್ಲ. ಎಲ್ಲರನ್ನೂ ಹುಡುಕಿ ನಿಹಾ ಕೆಲವು ಫೋಟೊ ತೆಗೆದು ಮನೆಗೆ ಹೋಗುವಾ ಅಂದ್ರೆ, ಶ್ರೀಕಾಂತ ಇಷ್ಟು ದೂರ ಬಂದು MTR ಗೆ ಹೋಗದಿದ್ರೆ ಹೇಗೆ ಅಂದ್ರು??
MTR ಸೇರಿ ಶ್ರೀಕಾಂತ ಹೆಸರು ಕೊಟ್ಟಾಗ 15 ನಿಮಿಷ ವೈಟಿಂಗ್ ಅಂದ್ರು. ಹಾಗೂ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲ್ಲ ಅಂದಿದ್ದಕ್ಕೆ ರಾಯರು ದುಡ್ಡು ಡ್ರಾ ಮಾಡಲು ಹೋದರು. ಅವರು ಲಾಲ್ ಬಾಗ್ ಗೇಟ್ ಬಳಿ ಅಂಜೀರ ಹಣ್ಣನ್ನು ಕೊಂಡುಕೊಂಡಿದ್ದರು. ಅದನ್ನು ತಿನ್ನುತ್ತ ಅಲ್ಲಿ ನೆರೆದ ಜನರನ್ನು ನೋಡ್ತಾ ಅವರ ಸಂಭಾಷಣೆ ಕೇಳ್ತಾ, ಒಟ್ಟು ಮೂರು ಮರಾಠಿ ಮಾತನಾಡುವ ಕುಟುಂಬದವರ ಮಾತು ಕೇಳಲು ಖುಶಿ ಅನ್ನಿಸ್ತು. MTR ಎಷ್ಟು ದೊಡ್ಡದಿದೆ ಅಂತ ಮೊನ್ನೆನೆ ಗೊತ್ತಾಗಿದ್ದ್ದು.ಬಹುಶಃ week end ಗೆ ಅಷ್ಟೊಂದು ರೂಮ್ ಗಳನ್ನು ತೆರವು ಮಾಡ್ತಾರೋ ಏನೋ...ನಮ್ಗೆ ಸುತ್ತು ಹಾಕಿಸ್ತಾ ಹಾಕಿಸ್ತಾ ಒಳssssಗಡೆ ಒಂದು ರೂಮಿಗೆ ಕರೆದುಕೊಂಡು ಹೋದ್ರು. ನಮ್ಮ ಜತೆ ಒಂದು ಮರಾಠಿ ಫ್ಯಾಮಿಲಿ, ಇನ್ನೊಂದು ಯಾವುದೋ ಕಾರ್ಯಕ್ರಮದ delegates ಇರಾನ್, ಫ್ರಾಂಸ್, ಜಪಾನ್ ದೇಶದವರೆಲ್ಲ ಇದ್ರು. ಒಟ್ಟು 15 ಜನ ಆರಾಮಾಗಿ ಕೂರುವಂತಹ ಜಾಗ.
ನಾ ವಾಕ್ ಮಾಡಿ ಏನು ಪ್ರಯೋಜನ? ನಾನು ಏನು ತಿನ್ನಲ್ಲ, only coffee for me ಅಂದೆ. ಛೆ ಅದು ಹೇಗೆ ನಾವು ತಿನ್ನುವಾಗ ನೀ ಸುಮ್ಮನಿದ್ದರೆ ನಮಗೆ ಸರಿಯಾಗಲ್ಲ ಅಂದ್ರು.ನೀವು ತಿನ್ನಿ ನಾನು ನಿಮ್ಮ ತಲೆ ತಿನ್ತೀನಿ ಅಂದ್ರೂ ಕೇಳಲಿಲ್ಲ.
ಆಯ್ತು ಇನ್ನು ಅಲ್ಲಿ ಕೂತು ವಾದ ಮಾಡೋದು ಬೇಡ ಅಂತ ಖಾರ ಭಾತ್ ಹೇಳಿದೆ, ಸರ್ವರ್ 'ಮ್ಯಾಡಂ ಬಿಸಿ ಬಿಸಿ ರವೆ ಇಡ್ಲಿ ಇದೆ ಟೇಸ್ಟ್ ನೋಡಿ ಅಂದ
"ಬೇಡ'
"ತರ್ತೀನಿ ಮ್ಯಾಡಂ, ಸ್ಯಾಂಪಲ್ ಅಷ್ಟೆ' ಅಂದ
ನಾನು ಎರಡು ಸಲ ಬೇಡ ಅಂದ್ರು ಮೂರನೆ ಸಲ ನೂ ಅದೇ ರಿಪೀಟ್ ಮಾಡಿದಾಗ ಶ್ರೀಕಾಂತ್ ಸರಿ ಅಂದ್ರು
ಬಿಸಿ ಬಿಸಿ ರವೆ ಇಡ್ಲಿ, ಅದಕ್ಕೆ ಆಲೂ ಗಡ್ಡೆ ಪಲ್ಯ ಚಿಕ್ಕ ವಾಟಿಯಲ್ಲಿ ತುಪ್ಪ, ಅಲ್ಲದೇ ತಟ್ಟೆ straight ನನ್ನ ಮೂಗಿನಡಿ.. ಎಲ್ಲಿತ್ತೋ ಹಸಿವು ಗಬ ಗಬನೆ ತಿಂದು ಮುಗಿಸಿದೆ, ಮ್ಮ್ಮ್ಮ್ yummy. ಅದರೊಂದಿಗೆ ಮಸಾಲೆ ದೋಸೆ, ಅವರು ಮೂರು ಜನರ ತಟ್ಟೆಯಲ್ಲಿನ ತಿಂಡಿಯ ಸ್ಯಾಂಪಲ್, extra strong ಕಾಫಿ ಕೂಡ. ಆಹಾ ವಾಕ್ ಮಾಡಿದ್ದು ಸಾರ್ಥಕ ಆಯ್ತು. ನಿಹಾ ಮತ್ತು ಶ್ರೀಕಾಂತ 'ನೀನು ಮಾಡಿದ ಕಾಫಿ ನೆ ಬೆಸ್ಟ್' ಅಂದಾಗ ಜಂಬದಿಂದ ಗಾಳಿಯಲ್ಲಿ ಹಾರಾಡಲಿಕ್ಕೆ ಆಗದಷ್ಟು ವೈಟ್ ಬಂದಿದೆ ಕಣ್ರೀ....:-(
ನನ್ನ ವಾಕ್ ಪ್ರವರ ಸ್ವಲ್ಪ ಜಾಸ್ತಿ ಆಯ್ತು.
:-( ಇದು ಒಂದೇ ನನ್ನ ಕ್ಲಿಕ್. ಇಲ್ಲೊಂದು ಕೊಳ ಇತ್ತು. ಮಳೆ ಇಲ್ಲದೆ ಒಣಗಿದೆ. ನಿಕೊನ್ ಕ್ಯಾಮರ ಮತ್ತು ನನಗೆ ಕೂಡಿ ಬರೋದೆ ಇಲ್ಲ. ಅದಕ್ಕೆ camera ನಿಹಾ ಗೇ ರವಾನಿಸಿದೆ.
ಕೆಳಗಿದೆ ನೀಹಾ ಕ್ಲಿಕ್ಕಿಸಿದ ಚಿತ್ರಗಳು.
ಬೋಗನ್ ವಿಲ್ಲ
ಗುಲ್ ಮೊಹರ್ ಗರ್ ತುಮ್ಹಾರಾ ನಾಮ್ ಹೋಗಾsss ಹಾಡು ನೆನಪಾಯಿತು.
trees - Niha's pet subject
ಹತ್ತಿ ಮರ..ಅಲ್ಲ. ಮರ ಹತ್ತಲಿಕ್ಕೆ ಅಲ್ಲ ಹೇಳಿದ್ದು ಮಾರಾಯ್ರೆ..silk cotton tree ಅಂತ
ನನ್ನ fav ಚಿತ್ರ
ಬಾತು ಕೋಳಿ
ಯಪ್ಪಾ ಎಂತ ಸೆಕೆ ನನಗೂ ನೀರಡಿಕೆ!!
parrot
ನೋಡಿ ಹೇಗೆ ಫೋಟೊ ಗೆ ಪೋಸ್ ಕೊಡುತ್ತೆ ತೋತಾರಾಮ್??
ಎಳೆ ಬಿಸಿಲಿಗೆ ನೀವೆಲ್ಲ ವಾಕ್ ಮಾಡಿ. ನನಗೋ ಸುಖದ ನಿದ್ರೆ!! ಒಂದೆರಡು ಒಳ್ಳೆ ಕನಸು :-)
ತನ್ನ ತಂದೆ ಜತೆ ಬಂದ ಪುಟ್ಟ್ ಪುಟಾಣಿ
ನಮ್ಮ ಜತೆ ರಸ್ತೆ ಕ್ರಾಸ್ ಮಾಡಲು ಕಾಯುತ್ತಿದ್ದ ಬೀಟಲ್. ಆಹಾ ಬಣ್ಣ ನೋಡಿ. amazing nature's amazing creatures. ನಿಹಾ ಫೋಟೊ ತೆಗೆಯುವಾಗ ಮಹಾ ಪೋಸ್ ಬೇರೆ ಕೊಡ್ತು. :-)
up close
15 minutes to tindi please..:-)
ತಿಂಡಿ ತಿಂದು ಆದ ಮೇಲೆ ಪ್ಲೇಟ್ ಮಾತ್ರ ಉಳಿದಿದೆ (ಮಳೆ ನಿಂತು ಹೋದ ಮೇಲೆ...ಹಾಡಿನ style ನಲ್ಲಿ. ಸಧ್ಯ ಜಯಂತ್ ಕಾಯ್ಕಿಣಿಯವರು ನನ್ನ ಬ್ಲಾಗ್ ಓದಲ್ಲ ಅದಕ್ಕೆ ಬಚಾವ್ ಆದೆ)
ವಾಪಸ್ ಮನೆಗೆ ನಾವು ಬಸ್ ನಲ್ಲಿ ಬರುವುದೆಂದು ಅಲ್ಲಿ ನಿಂತಿದ್ದ ಒಬ್ಬರಿಗೆ ಮೆಜೆಸ್ಟಿಕ್ ಗೆ ಇಲ್ಲಿ ಬಸ್ ಸಿಗುತ್ತ ಅಂತ ಕೇಳಿದ್ರೆ , ಈ ರೋಡ್ ನಲ್ಲಿ ಸ್ತ್ರೈಟ್ ಹೋಗಿ, ಅಲ್ಲಿ ಸಿಗ್ನಲ್ ಬಳಿ ಮೆಜೆಸ್ಟಿಕ್ ಗೆ ಹೋಗಲು 'ಬೇಜಾನ್' ಬಸ್ ಸಿಗುತ್ತೆ ಅಂದಾಗ ನನಗೆ ಅವರ ಬೇಜಾನ್ ಪದ ಪ್ರಯೋಗ ಖುಶಿ ಅನ್ನಿಸ್ತು.
ನಾವು ರೋಡ್ ಕ್ರಾಸ್ ಮಾಡಲು ನಿಂತಾಗ ನನ್ನ ಇಷ್ಟದ ಬರಹಗಾರರು ನನ್ನನ್ನು ನೋಡಿದರಂತೆ. ಈ ದಿನ ಹೀಗೆ ಮೈಲ್ ಹಾಕಿದರು.
Dear Malathi,
Were you near Lalbag yesterday morning? I was passing by in a car and I thought I saw you waiting to cross the road. It happened so suddenly and unexpectedly that there was no time to reconfirm or stop the car.
ಈ ಮೈಲ್ ಓದಿ ಮಕ್ಕಳಿಗೆ ನಾನು ಕೇಳಿದ ಮೊದಲ ಪ್ರಶ್ನೆ 'ಹೆ guys was i on my best behavior' ಅಂತ,ಯಾಕಂದರೆ ನಾವು ನಾಲ್ಕು ಜನ ಒಟ್ಟಿಗಿದ್ದಾಗ ಅದು ಬೇರೇನೆ ಲೋಕ. ಆದರೆ ಮಕ್ಕಳು ಹಾ ಹಾ ಹಾ ಅಂತ evil laughter ನಿಂದ ಉತ್ತರಿಸಿದರು..:-(
How are you? Hope all wll with you and family.
xxxxxxxx
:-)
11 comments:
ಈ ಲೋಕವೆಲ್ಲ ನೀನೆ ಇರುವ ಪೂಜಾ ಮಂದಿರ
ನಾ ನೋಡೋ ನೋಟವೆಲ್ಲ ಸತ್ಯ ಸುಂದರ!
ಈ ಹಾಡು ನೆನಪಿಗೆ ಬಂತು. ವಾಕಿಂಗ್ ಅನ್ನುವ ವ್ಯಾಯಾಮ ಎಂ ಟಿ ಅರ್ ನಲ್ಲಿ ಮುಗಿದದ್ದೇ ಒಂದು ದೊಡ್ಡ ಪ್ರಹಸನ. :-). ಆದರೂ ಆ ಬೆಳಗಿನ ಹೊತ್ತಿನಲ್ಲಿ ಬಿಸಿ ಬಿಸಿ ರವೆ ಇಡ್ಲಿ, ಕಾಫಿ ಆಹಾ.. ಅದರ ಸ್ವಾದವೇ ಬಿಡಿ ಅದರ ಮಾತು. ಹೊಟ್ಟೆ ಹಸಿಯಲು ಶುರುವಾಗುತ್ತೆ. ಚಿತ್ರಗಳು ಸೂಪರ್ ಬರಹ ಇನ್ನೂ ಸೂಪರ್. ತಿಂಡಿ ತಿನಿಸುಗಳ ಬಗ್ಗೆ ಒಂದು ಮಾತಿಲ್ಲದೆ ಹೋದರೆ ನಿಮ್ಮ ಲೇಖನ ಅಪೂರ್ಣ ಅನ್ನುವಷ್ಟು ಪರಿಚಯವಾಗಿಬಿಟ್ಟಿದೆ ನಿಮ್ಮ ಬ್ಲಾಗ್ :-)
ಒಳ್ಳೆಯ ಸಚಿತ್ರ ಲೇಖನ ಮಾಲತಿಯವರೇ.
How abt this... Walk mugidada mele MTR karedide... Tindi tindada mele tatte matra ulidide... Innu ondu kappu coffee bekide... KeLali hege tiLiyadagide ;)
Reading ur blog I remembered one of my relative... Who used to have diabetics, wud go to canteen after his morning walk and order suger less tea with kesari bath :))
We also had the privilege of seeing the part of MTR which is not open for customer on regular days, when we went for bangaloregreen walk . MTR ge hOgi how can you not eat anything!
Thank you Srikanth and Badari!!
Anonymous ji
We had an office boy - Bhootesh. when he was new to his job he was asked to make coffee. 2 with sugar and 1 sugar less. so he got the coffee. A colleague Mr S was the one who wanted Sugarless, but when he tasted his coffee it had sugar. so we surmised that there must have been a mix up and S drank up his coffee. this happened a couple of times. once, S wanted coffee so bhootesh had to prepare only one cup and inspite of the request for sugarless, S found it had sugar in it. So bhootesh was summoned and was questioned, his answer was 'houdu saar, sugar less..
'adhengO maaraaya?'
"ade saar sugar andre sakkare, less andre kaDime" so kaDme sakkare haaki tandivni...:-) :-)
well technically he was right alwaa?? amele sakkare haakabedvo maaraaya anta heLbekaaytu..
then i am the universal mother with a ma in my name 'ma'lathi, so i keep mothering everybody at the workplace irrespective of their age.
we had been to the engagement ceremony of a colleague's son and another colleague who had sugar was eating Kesaribhath. so i approached him and said Sir, sugar ide asTella kesaribath tinbEDi andre, he said aadre sugarless coffee kuditeeni alwaa..
(i do not have ur mail id so i had put my looooong comment here...)
enjoy
Radhika: :-)
ms
Btw u only made me think this ma laThi... Ma when mothering and LaThi when beatings ?! ;)
ಅನಾ'ಮಿಕ'ರೆ ಏನಿದು 'ಲಾಠಿ' ಪ್ರಾಹಾರ.
:-) ಇನ್ನು ಕೆಲವೇ ವರ್ಷದಲ್ಲಿ ಲಾಠಿ ಕೆ ಸಹಾರೆ ವಾಕ್ ಮಾಡಬೇಕಾಗಬಹುದು...:-);-)
Nice pictures and interesting comments :-)
I was planning to give my mail id to be able have this comment bazi in emails... But looks like ur blog readers are njoying comments too... How abt making u little more popular ?!
Anonymous:
Decipher this : !@~#$%^&*(
:-)
thank you Rajesh!! photo credit goes to Niharika
:-)
Madam, nan kelsadalli dinada at least 10-12 ghante shift matte control jote iratte... Avaga yenadru yardru sikka patte sittu barsidre nanu stress aag bardu anta 123456789 count madtini... Aadre aaga shift illa ashte :)
Neevu nantara count madtira anstide... But with a shift! Forgive me if I am driving u nuts :) hoping u are njoying this as much I am...
Post a Comment