April 8, 2013

ಗಿಂಗಿ ಫೋರ್ಟ್

Finally ಗಿಂಗಿ ಫೋರ್ಟ್ ಕಡೆ ಬಂದೆ.ಅದಕ್ಕಿಂತ ಮುಂಚಿನ ಪೊಂಡಿಚೆರ್ರಿ ಟ್ರಿಪ್ ಬಗ್ಗೆ ಓದಬೇಕಾದ್ರೆ ಕೆಳಗಿನ ಲಿಂಕ್ ನಲ್ಲಿವೆ

ತಿರುವಣ್ಣಮಲೈ ನಿಂದ ಹೊರಟು ವಿಲ್ಲಿಪುರಂ ತಲುಪುವಷ್ಟರಲ್ಲಿ ಗಿಂಗಿ ಫೋರ್ಟ್ ಅನ್ನುವ ಸೈನ್ ಬೋರ್ಡ್ ಕಾಣಿಸಿತು. ಗಿಂಗಿ ಫೋರ್ಟ್ ಗೆ ವಿಸಿಟ್ ಕೊಟ್ಟು ಮುಂದೆ ಪೊಂಡಿಚೆರಿ ಗೆ ಹೋದ್ರೆ ತುಂಬ ತಡವಾಗುತ್ತ ಅಂತ ಪೆರುಮಾಳ್ ಗೆ ಕೇಳಿದ್ರೆ ಅವನು ಚೆಂಜಿ ಅಂತ ಸುಮ್ಮನಾದ. ಒಹ್ ಸಂಜೆ ಅಂದ್ರೆ ಬಹುಶ: ಪೊಂಡಿಚೆರಿ ಗೆ ತಲುಪಿ ಹೋಟಲ್ ನಲ್ಲಿ ಚೆಕ್ ಇನ್ ಆದ ನಂತರ ಇವರು ನಮಗೆ ಗಿಂಗಿ ಫೋರ್ಟ್ ಗೆ ಕರೆದು ಕೊಂಡು ಹೋಗ್ತಾರ ಅನ್ನುವಷ್ಟರಲ್ಲಿ ಅವರು ಕಾರ್ ಸ್ಲೋ ಮಾಡಿ, 'ನಿಮ್ಮ ಲೆಫ್ಟ್ ಗೆ ನೋಡಿ, ಅದು ರಾಣಿ ಫೋರ್ಟ್ ನಾವು ಚೆಂಜಿಯಲ್ಲಿ ನೋಡೋದು ರಾಜಾ ಫೋರ್ಟ್ ಅಂತ ಹೇಳಿ ಅಲ್ಲೆ ಸ್ವಲ್ಪ ಮುಂದೆ ಸ್ವಲ್ಪ ನೆರಳು ಇರುವ ಜಾಗದಲ್ಲಿ ಗಾಡಿ ನಿಲ್ಲಿಸಿದರು. ನನಗೋ ಈಗಲೇ ಫೋರ್ಟ್ ನೋಡಿ ಹೋಗಬಹುದೇನೋ ಅನ್ನುವ ಹುಮ್ಮಸ್ಸು. ಆದರೆ ಹೇಳಲಿಲ್ಲ. ಆ ಮೇಲೆ ನೋಡಿದ್ರೆ ಅವರು ಗಿಂಗಿ ಗೆ ಚೆಂಜಿ ಅಂತ ಕರೆದಿದ್ದು ಗೊತ್ತಾಗಿ ನನ್ನಷ್ಟಕ್ಕೆ ನಾನು ನಕ್ಕಿದ್ದೆ ನಕ್ಕಿದ್ದು. ಮೊಡ ಮುಸುಕಿದ ವಾತಾವರಣ ಇದ್ದು ಸ್ವ್ಲಲ್ಪ  ಸಮಯಕ್ಕೆ ಮಳೆ ಕೂಡ ಬಂದು ಮಳೆ ಬಂದಷ್ಟೆ ವೇಗದಲ್ಲಿ ನಿಂತೂ ಹೋಗಿ ನಮ್ಮ ಬಟ್ಟೆಗಳು ಒಣಗಲು ಕೂಡ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ಇಲ್ಲಿವೆ ಕೆಲವು ಚಿತ್ರಗಳು
ರಾಣಿ ಫೋರ್ಟ್ ತೋರಿಸಿದ ಪೆರುಮಾಳ್
ಕೊಟೆಯೊಳಗೆ ಹೋಗುವ ಮುಂಚಿನ ದೃಷ್ಯ

 ಶ್ರೀಕಾಂತ ರಾಯರ ಕ್ಲಿಕ್ಕು

 kalyana mantapa on the right side

ಒಳಗೆಯೊಳಗೆಒಳಗೆ.......

rock formation

 ನನ್ನ ಕ್ಲಿಕ್

gingee fort/ ಗಿಂಗಿ/ಚೆಂಜಿ/ಜಿಂಜಿ ಕೋಟೆ. ತುಂಬ ಎತ್ತರಲ್ಲಿದೆ ದೇವಸ್ಥಾನ

 ಗಿಂಗಿ ಫೋರ್ಟ್ ಒಳಗಡೆ

ಅಲ್ಲಿ ಅಸಂಖ್ಯಾತ ಗಿಳಿಗಳು. ನಾನು ಮನೆಯಿಂದ ಹುರಿದು ತಂದ ಕಡಲೇ ಬೀಜ ಹಿಡಿದು ಅವನ್ನು attract ಮಾಡಲು ಪ್ರಯತ್ನಿಸಿದೆ. ಒಂದೂ ಗಿಳಿ ಹತ್ತಿರ ಬರಲಿಲ್ಲ. i was royally ignored by them..:-)
ವಸುಧೇಂದ್ರರ ಕೆಂಪುಗಿಣಿ ಕತೆ ನೆನಪಾಯ್ತು ಯಾಕೋ :-(
ಇದರ ತುಂಬೆಲ್ಲ ಗಿಳಿಗಳ ಕಲರವ


ಇದು ಏನು/ಯಾರ ಕ್ಲಿಕ್ ಗೊತ್ತಾಗಲಿಲ್ಲ


ರಾಯರು ತೆಗೆದ ಚಿತ್ರ

ಸೆರೆಮನೆ ಇದ್ದಿರಬಹುದೇನೋ!! ಕೆಲವು ಕಡೆ ಸರಳುಗಳು ತೆಗೆದಿದ್ದಾರೆ
 Srikanth clicks

 ನೆಲಮಾಳಿಗೆಗೆ ಹೋಗುವ ಮೆಟ್ಟಿಲು
 ಮೆಟ್ಟಿಲು ಇಳಿಯಲು ಕಾತುರಳಾಗಿದ್ದ ಮಾಲವಿಕ. ಆ ದಿನ ತುಂಬ adventurous mood ನಲ್ಲಿದ್ದಳು





elephant watering tank. ಅಗೋ ದೂರದಲ್ಲಿ ಮಾಲವಿಕ
 Elephant watering tank

hehehe romantic ಪೋಸ್ ಅಲ್ಲ. ರಾಯರು ಟ್ಯಾಂಕ್ ದಂಡೆಯ ಮೇಲೆ ಕೂತಿದ್ದರು. ಕೊಳದಲ್ಲಿ ಬೀಳದ ಹಾಗೆ ಹಿಡಿದುಕೊಂಡಿದ್ದೇನೆ
 triggerhappy Srikanth

srikanth special shot..loved it

ditto comment from the above photo. ನಿಹಾ ಕ್ಲಿಕ್ಕು
 ಉದ್ದಾನುಉದ್ದ ಗರಡಿ ಮನೆ

 ಮೇಲೆ ಹಲವಾರು ಬೆಳಕಿಂಡಿಗಳು ಕೆಳಗಡಿ ಕಿಟಕಿ ಕಂಡಿ. ಆ ಬೆಳಕಲ್ಲೇ ನಿಹಾ ಫೋಟೊ
ವ್ಯಾಯಾಮ ಶಾಲೆ /ಗರಡಿ ಮನೆ entrance

ವ್ಯಾಯಾಮ ಶಾಲೆ/ಗರಡಿ ಮನೆ ಕಿಟಕಿ
 ನಮ್ಮ ರಾಯರ photography. ಆ ವೃಕ್ಷದ ಕೆಳಗೆ ಸುಮಾರು ಹೊತ್ತು ಕೂತಿದ್ದೆ ಏನಾದರೂ ಜ್ಝಾನೊದಯವಾಗಬಹುದೇ ಅಂತ .ಹಸಿವೆಯೊಂದು ಆಗಿದ್ದು ಬಿಟ್ಟರೆ ಇನ್ನೇನೂ ಆಗಲಿಲ್ಲ :-)



ರಾಯರ ಫೋಟೊಗ್ರಾಫಿ ಅಂದ್ರೆ ದೂಸ್ರಾ ಮಾತಿಲ್ಲ

ತಂದೆ ತಾಯಿ ಜತೆಗಿದ್ದ ಹುಡುಗ ಫೋಟೊಗೆ ಪೋಸ್ ಕೊಡುತ್ತಿರುವುದು
ನನಗಿಷ್ಟವಾಗಿ ರಾಯರಿಂದ ಕ್ಲಿಕ್ಕಿಸಿದ್ದು

ಮೇಲಿದೆ ದೇವಸ್ಥಾನ
:-) ಮರವನ್ನು ಬಗ್ಗಿಸುವ ಪುಟ್ಟ ಯತ್ನ...

ಇದೂ ನನ್ನ ಕ್ಲಿಕ್
 ನಿಹಾ ಳ experimental shot 1

  ನಿಹಾ ಳ experimental shot 2

  ನಿಹಾ ಳ experimental shot 3
 ನಿಹಾ ಳ experimental shot 4 ಒಳ್ಳೆ ಕವರ್ ಪೇಜ್ material

malavika clicks

this lovely shot by Niha

ಗಿಂಗಿ ಫೋರ್ಟ್ ಬಗ್ಗೆ ಪೋಸ್ಟ್ ಹಾಕಿದೆ ಯಾಕೆಂಅರೆ ಈಗ ಮಕ್ಕಳಿಗೆ ಎಲ್ಲ ಸಮ್ಮರ್ ಹೊಲಿಡೇ ಅಲ್ಲವಾ?? ಚಿತ್ರ ನೋಡಿ ಇಂಪ್ರೆಸ್ ಆದರೆ ಹೋಗಿ ಬರಬಹುದು ಅಲ್ಲವಾ?? ನಾವು ಅಲ್ಲಿ ಕೇವಲ ಎರಡು ಗಂಟೆ ಸ್ಪೆಂಡ್ ಮಾಡಿದ್ದು. ಮತ್ತೆ ಕೋಟೆ ದೇವಾಲಯ ನೋಡಲು ಹೋಗಲಿಲ್ಲ. ನನ್ನ ಮಂಡಿ ನೋವು ಪೂರ್ತಿ ವಾಸಿಯಾಗಿರಲಿಲ್ಲ. ನನ್ನನ್ನು ಬಿಟ್ಟು ಹೋಗಲು ಅವರು ಮೂರು ಜನರಿಗೆ ಮನಸ್ಸಿರಲಿಲ್ಲ. ಪುನ: ಅಲ್ಲಿಗೇ ಅಂತಲೇ ಹೋದರಾಯಿತೆಂದು ವಾಪಸ್ ಬಂದ್ವಿ. ನಿಜಕ್ಕೂ ಅಲ್ಲಿ ಒಳ್ಳೆಯ ಎನರ್ಜಿ ಇದೆ. ಆ ದಿನ ರಜೆಯಾದ್ದರಿಂದ ಗೈಡ್ ವಗೈರೆ ಯಾರೂ ಇರಲಿಲ್ಲ. ಹಾಗಾಗಿ ನಾವು ಆ ಫೋರ್ಟ್ ಬಗ್ಗೆ ಮನೆಗೆ ಮರಳಿದ ಮೇಲೆ ನೆಟ್ ನಲ್ಲಿ ಓದಿದ್ದು.
ಇನ್ನೂ ಬೇಗ ಪೋಸ್ಟ್ ಮಾಡುವ ಅಂದ್ರೆ ಮಳೆ ಬಂದು ಗುಡುಗಿಗೆ ಇಂಟರ್ ನೆಟ್ ಪ್ರಾಬ್ಲಮ್ ಆಗಿತ್ತು. enjoy Gingee Fort
Coming up 'Pebble garden' my favorite of all the spots in this tour and then finally Pondicherri
:-)

5 comments:

Badarinath Palavalli said...

ಪ್ರವಾಸ ಕತನದ ಮೊದಲ ಭಾಗಕ್ಕೆ ಸ್ವಾಗತ. ಸಮಗ್ರ ಚಿತ್ರಣವನ್ನು ಕೊಡುವ ಮತ್ತು ಪ್ರವಾಸಕ್ಕೆ ಮನಸ್ಸುಗಳನ್ನು ಸ್ಜ್ಜುಗೊಳಿಸಿ ಪ್ರೇರೇಪಿಸುವ ಈ ಬರಹ ಖುಷಿ ಕೊಟ್ಟಿತು. ಒಳ್ಳೆಯ ಚಿತ್ರಗಳ ಸಾಥ್ ಚೆನ್ನಾಗಿದೆ.

Srikanth Manjunath said...

ಸರ್ವ ದೇವ ನಮಸ್ಕಾರಃ ಕೇಶವಂ ಪ್ರತಿಗಚ್ಛತಿ ಎನ್ನುವ ಹಾಗೆ ಎಲ್ಲೆಲ್ಲಿ ರೌಂಡ್ ಹೊಡೆದರೂ, ಕಡೆಗೆ ಪ್ರವಾಸಕ್ಕೆ ಬಂದು ನಿಲ್ಲಿಸಿದ್ದೀರ. ನಮ್ಮನ್ನು ಪೊಂಡಿ ಟ್ರಿಪ್ನಲ್ಲಿ ದಾರಿಯಲ್ಲೇ ನಿಲ್ಲಿಸಿದ್ದರೂ.. ಮಧ್ಯೆ ಮಧ್ಯೆ ಪಾನೀಯಂ ಸಮರ್ಪಯಾಮಿ ಎನ್ನುವ ಹಾಗೆ ಊಟ ತಿಂಡಿಗಳ ಲೇಖನಗಳಿಂದ ನಮ್ಮ ನಾಲಿಗೆಗೆ ರುಚಿ ಹತ್ತಿಸಿ.. ಮತ್ತೆ ಮರಳಿ ಕಣ್ಣು ತಂಪು ಮಾಡಲು ಪ್ರವಾಸಕ್ಕೆ ಕರೆದುಕೊಂಡು ಬಂದಿದ್ದೀರಾ.
ಸುಂದರವಾದ ಚಿತ್ರಗಳು... ಕಲಾವಿದರ ಕುಟುಂಬ ನೋಡಿದಾಗ ಸಂತಸವಾಗುತ್ತೆ. ಮುಂದುವರೆಯಲಿ ಪಯಣ.

ಮನಸು said...

ಪ್ರವಾಸ ಕಥನ ಜೊತೆ ಅಬ್ಬಾ ಎಂಥಾ ಪೋಟೋಗಳು ನಿಜಕ್ಕೂ ನಾವು ಹೋಗಿ ನೋಡಬೇಕು ಎಂದೆನಿಸಿದೆ ಅಕ್ಕಾ.

Digital Eyes said...

Good write-up, nice location and pics.

nenapina sanchy inda said...

thank you Badari bhaiyya, Srikanth Manjunath, Suguna and Rajesh!!
:-)
malathi S