ಶ್ರೀಕಾಂತ ಆಫಿಸ್ ನಿಂದ ಬರ್ತಾ ಇತ್ತೀಚಿಗೆ ಸುಮಾರು ಸಲ ನಾನು ಫೇಸ್ ಬುಕ್ ನಲ್ಲಿರೋದು ನೋಡ್ತಿದ್ದಾರೆ. ಮೊನ್ನೆ ಅವರು 'ಎಷ್ಟು ದಿನ ಆಯ್ತು ಬ್ಲಾಗ್ ಅಪ್ ಡೇಟ್ ಮಾಡ್ದೆ? ಅಂತ ಕೇಳಿದರು. ಅರೇ ನಾನು ವಾರಕ್ಕೊಂದು ಪೋಸ್ಟ್ ಹಾಕ್ತೀನಲ್ಲ್ವಾ? ಐ ಯಾಮ್ ನಾಟ್ ಎಡಿಕ್ಟಡ್ ಟು ಫೇಸ್ ಬುಕ್ ಅಂದೆ. ಸರಿ ಬಿಡು ನಾನು ನಿನ್ನ ಬ್ಲಾಗ್ ಗೆ ಇತ್ತೀಚಿಗೆ ಹೋಗಿಲ್ಲ ,ಯಾಕೋ ಪುರುಸೊತ್ತೆ ಆಗ್ಲಿಲ್ಲ. ಹೂಂ ರಾಯರು ನಿನ್ನ ಬರಹ ಚೆನ್ನಾಗಿಲ್ಲ ಅಂತ ಹೇಳ್ತಾ ಆಫಿಸ್ ನಲ್ಲಿ ನನ್ನ ಬ್ಲಾಗ್ ಓದ್ತಾರಂತಾಯ್ತು. ಅವರಿಗೊಂದು ಗರ್ ರ್ ರ್ ರ್..
ಈಗಂತು ವಸುಧೇಂದ್ರರ ವರ್ಣಮಯ ಓದಿ ಇನ್ನಷ್ಟು ಸರಕು ಸಿಕ್ಕಿವೆ ನನ್ನ ಬ್ಲಾಗ್ ನ್ನು ತುಂಬಿಸಲು. ಅವರಿಗೊಂದು ಥ್ಯಾಂಕ್ಸ್. ಅವರ ಬರಹವೇ ಹಾಗೆ. ಅವರು ಪರಿಚಯ ಮಾಡಿಸಿರುವ ಪಾತ್ರಗಳೆಲ್ಲವೂ ಒಂದಲ್ಲ ಒಂದ್ಸಲ ನಮ್ಮೆಲ್ಲರ ಅನುಭವಕ್ಕೆ ಅನುಭಾವಕ್ಕೆ ಬಂದು ಹೋಗಿರ್ತಾರೆ. ಎಲ್ಲರಿಂದಲೂ ಏನಾದರೂ ಕಲಿಯಲಿಕ್ಕೆ ಇರುತ್ವೆ. ಡ್ರೈವರ್ ಆಗ್ಲೀ ಅಡಿಗೆಮಾಡುವ ಗೌರಮ್ಮನೇ ಆಗಲಿ,ಹೈರ್ ಕಟಿಂಗ್ ಸೇಲೂನ್ ನವನೇ ಆಗಲಿ ಅಲ್ವಾ? ಅವರ ದೃಷ್ಟಿಕೋನದ ಪರಿಚಯ, ಒಂದೆ ವಿಷಯ ಅಥವ ಸಂದರ್ಭಗಳನ್ನು ಅವರುಗಳು ನೋಡುವ ಪರಿ etc.. ವಸುಧೇಂದ್ರ ಇಂತಹ ಜೀವನ ಪ್ರೀತಿಯ ವಿಷಯದ ಆಯ್ಕೆಯಲ್ಲಿ ನಿಸ್ಸೀಮರು.ಕತೆಯನ್ನು ಶಬ್ಧಗಳಲ್ಲಿ ಕಟ್ಟಿಕೊಡುವ ಸಿದ್ದಿ ಅವರಿಗೆ ಸಾಧಿಸಿದೆ. ಪುಸ್ತಕ ಒಂದು ಸಲ ಕೈಗೆ ಬಂತೆಂದರೆ ಅದನ್ನು ಓದಿ ಮುಗಿಸಿದರೆ ಮನಸ್ಸಿಗೆ ನೆಮ್ಮದಿ.ಅವರ ಬರಹಗಳ ಮೂಲಕ ಯಾಕೋ ಹೆಚ್ಚು ಹೆಚ್ಚು ಇಷ್ಟ ಆಗ್ತಾರೆ ವಸುಧೇಂದ್ರ...ಒಂದು ಸಮಾಧಾನದ ಸಂಗತಿಯೆಂದರೆ ಈ ಸಲ ಅಡಿಗೆಮನೆಯಲ್ಲಿ ಯಾವುದೇ ಪಾತ್ರೆ ಸುಡದೆ ಓದಿದ್ದು. :-)
ಯಾವುದು ಹೆಚ್ಚು ವರ್ಣಮಯ? ಪುಸ್ತಕದ ಮುಖಪುಟ, ನಿಹಾಳ ಬುಕ್ ಮಾರ್ಕ್ ಅಥವಾ ನಾ ಮಾಡಿದ ಡೀಲಕ್ಸ್ ಉಪ್ಪಿಟ್ಟು? ನಮ್ಮಲ್ಲಿ ಮೂರು ತರಹದ ಉಪ್ಪಿಟ್ಟು. ಒಂದು plain-jane ಉಪ್ಪಿಟ್ಟು ಅಂದ್ರೆ ಸೀದಾ ಸಾದ, ಇನ್ನೊಂದು A-1 ಉಪ್ಪಿಟ್ಟು ತರಕಾರಿ ಹಾಕಿ. ಗೇರುಬೀಜ ಹಾಕಿದ್ರೆ ಅದು ಡೀಲಕ್ಸ್ ಉಪ್ಪಿಟ್ (ಚಿತ್ರದಲ್ಲಿರೋದು)
ಪಾಂಡಿಚೆರ್ರಿ ಟ್ರಿಪ್ ಅಂತ ವಸುಧೇಂದ್ರರ ಬಗ್ಗೆ ಯಾಕೆ ಬರಿತಿದ್ದೀನಿ ಅಂದುಕೊಂಡ್ರಾ?? ಅದಕ್ಕೆ ಕಾರಣ ಇದೆ. ನಾವು ಗಾಯತ್ರಿ ಟ್ರಾವಲ್ಸ್ ನ ಗಾಡಿ ಬುಕ್ ಮಾಡುವಾಗ ಅವರಲ್ಲಿ ಮೊದಲು ಕೇಳುವ ಪ್ರಶ್ನೆ ರವಿ ಯಿದ್ದಾರಾ ಅಂತ. ನಮ್ಮ ರವಿ ಈ ಮೊದಲು ಒಂದು ಸಲ ಬ್ಲಾಗ್ ನಲ್ಲಿ ನಮೂದಿಸಿದ ಹಾಗೆ warehouse of information. ಅವರು ಗಾಡಿ ನಡೆಸುತ್ತಾರೆಂದರೆ ಏನೋ ನೆಮ್ಮದಿ. ನಾವು ನಮ್ಮ ಸಂಸ್ಥೆ ಪ್ರಾರಂಭವಾಗಿದ್ದಾಗಿನಿಂದ ಗಾಯತ್ರಿ ಟ್ರಾವೆಲ್ಸ್ ನಮ್ಮ official carriers. :-) ಇನ್ನೊಂದು ಖುಶಿಯ ವಿಚಾರ ಅಂದ್ರೆ ಗಾಯತ್ರಿ ಟ್ರಾವೆಲ್ಸ್ ನ ಮಾಲೀಕರು ಈಶ್ವರ್, ಅವರು ತೀರ್ಥಹಳ್ಳಿಯವರು. 'ನಿಮ್ಮದೇ ಗಾಡಿ ಸರ್ ಯಾವಾಗ ಬೇಕಾದ್ರೂ ತೆಗೆದುಕೊಂಡು ಹೋಗಬಹುದು' ಎಂಬುದು ಅವರ ಟ್ಯಾಗ್ ಲೈನ್ ಬೇರೆ. ರವಿಗೆ ನಮ್ಮ ಹಳ್ಳಿ ಪ್ರಾಜೆಕ್ಟ್ ಕೆಲಸ ಗಳಲ್ಲಿ ತುಂಬ ಮುತುವರ್ಜಿ. ಮತ್ತು ನಮ್ಮನ್ನು esp family ಯನ್ನು ಎಲ್ಲಾದರೂ ಕರೆದುಕೊಂಡು ಹೋಗುವುದಾದರೆ ನಮಗಿಂತ ಅವರಿಗೆ ನಮ್ಮ ಬಗ್ಗೆ ಹೆಚ್ಹಿನ ಕಾಳಜಿ.
ರವಿ ಚೆನೈ ನ ಜಯಲಲಿತಾ ಅವರ ನಿಕಟವರ್ಗ, ಬೆಂಗಳೂರಿನ ಸಿನಿಮಾದವರಿಂದ ಹಿಡಿದು ರೋರಿಕ್ ಎಸ್ಟೇಟ್ ವರೆಗೂ ಡ್ರೈವರ್ ಆಗಿ ಕೆಲಸ ಮಾಡಿದ ಅನುಭವವುಳ್ಳವರು. ಅವರ ಮಾತು ಕೇಳುವುದು ಹಿತವಾಗಿರುತ್ತೆ. ತೀರಾ ಇತ್ತೀಚಿಗಿನ ನಮ್ಮ ಟೂರ್ ಟ್ರಾವೆಲ್ ನಲ್ಲಿ ಮಾಲವಿಕ ನಮ್ಮ ಜತೆ ಇಲ್ಲದ್ದು ಅವರಿಗೆ ತುಂಬ ಚಿಂತೆ. ಶನಿವಾರ ಭಾನುವರ ಕೂಡ ಅಕ್ಕನಿಗೆ ಕೆಲಸ ಇರುತ್ತಾ?' ಅದಕ್ಕೆ ನಾನು 'ನೀವು ಭಾನುವರ ಬರುತ್ತೀರಲ್ಲವಾ ಹಾಗೆ? ಅವಳದ್ದು ಚಾಕಲೇಟ್ ಫ್ಯಾಕ್ಟರಿ ಅವಳಿಗೆ ವಾರದ ಮಧ್ಯ ರಜೆ, ವಾರಾಂತ್ಯದಲ್ಲಿಲ್ಲ ಅಂದರೆ, ನಮ್ಮ ಹೆಂಡರು ನಮಗೆ ಯಾವಾಗ ರಜೆ ತೆಗೆದುಕೋ ಬೇಕು ಅನ್ನುತ್ತಾರೋ ಆವಾಗ ನಾವು ರಜೆ ಹಾಕ್ಕೊಂಡು ಬಿಡೋದು ಮ್ಯಾಡಂ. ಮೊನ್ನೆ ದೇವಸ್ಥಾನಕ್ಕೆ ಕರಕೊಂಡು ಹೋಗಿ ಅಂದ್ಲು, ಕರಕೊಂಡು ಹೋದೆ ಅದಕ್ಕೆ ಇವತ್ತು ಭಾನುವಾರ ಆದ್ರೂ ಸುಮ್ಮಕಿದ್ದಾಳೆ ಅಂತ ಹೇಳಿ ನನ್ನನ್ನು ನಗಿಸ್ತಾರೆ.ಒಂಚೂರು ರೋಡ್ ರೇಜ್ಲ್ಲ ಇಲ್ಲ, ಸಾವಧಾನವಾಗಿ ಗಾಡಿ ಚಲಾಯಿಸುತ್ತಾರೆ. ಅಷ್ಟಲ್ಲದೇ ರಾತ್ರಿ ನೂ ತುಂಬ ಸೇಫ್ ಆಗಿ ಡ್ರೈವ್ ಮಾದುತ್ತಾರಾದ್ದರಿಂದ ರವಿ ನಮ್ಮೆಲ್ಲರ ಫೇವರಿಟ್
ಮೊದಲೆಲ್ಲ ನಮಗೆ ದೊಡ್ಡ ದೊಡ್ಡ ಹೋಟಲ್ ಗೆಲ್ಲ ಕರೆದುಕೊಂಡು ಹೋಗೋವ್ರು. ಅದಕ್ಕೆ ನಾವು ಬೇಡ ರವಿ ನಾವು ಸಾಮಾನ್ಯ ಜನರು ಸ್ವಲ್ಪ ಕ್ಲೀನ್ ಇದ್ರೆ ಆಯ್ತು. ಹಳ್ಳಿಗಳ ಚಿಕ್ಕ ಹೋಟಲ್ ನಲ್ಲೇ ಹೆಚ್ಚು ರುಚಿ ಹಾಗೂ ಕಾಸಿಗೆ ತಕ್ಕ ಹೊಟ್ಟೆ ತುಂಬ ತಿನ್ನ ಬಹುದು ಅಂತ ಗೊತ್ತಾದದ್ದೆ, ತನಗೆ ಗೊತ್ತಿರುವ ಹೋಟಲ್.ಖಾನಾವಳಿ ಇಲ್ಲದಿದ್ದರೆ ಯಾರನ್ನಾದರೂ ಕೇಳಿ ನಮಗೆ ಒಳ್ಳೆಯ ಹೋಟಲ್ ಗಳಿಗೆ ಕರೆದುಕೊಂಡು ಹೋಗುತ್ತಾರೆ. ಮಾಹಿತಿ ಕಲೆ ಹಾಕುವುದನ್ನು ಅವರ ಬಳಿ ಕಲಿಯಬೇಕು.
ಪಾಂಡಿಚೆರ್ರಿ ಗೆ ಹೋಗುವ ಕನಸು ನಾನು ಹಿಂದಿನ 5-6 ವರ್ಷದಿಂದ ಕಾಣುತ್ತಿದ್ದೇನೆ. ಏನಾದರೂ ಕಾರಣದಿಂದ ಮುಂದೂಡತ್ತ ಬಂದಿದ್ದೇವೆ. ಮತ್ತು ಪ್ರತೀ ಸಲ ರವಿ ಗೆ ನಾನು 'ನಮ್ಮ ಪಾಂಡಿಚೆರ್ರಿ ಟ್ರಿಪ್ ಹಾಗೆ ಉಳೀತು' ಅಂತ ಹೇಳಿದಾಗ ಹೋಗುವ ಮ್ಯಾಡಂ ನಾನೇ ಕರೆದುಕೊಂಡು ಹೋಗುತ್ತೇನೆ' ಅನ್ನುತ್ತಿದ್ದರು.
ಹಾಗೆ ಏನದರಾಗಲೀ ಅಂತ ಮಾಲವಿಕನಿಗೆ ರಜೆ ಹಾಕಲು ಹೇಳಿದೆ ನಿಹಾ ಗೆ ಹೇಗೂ ರಜೆ ಇತ್ತು.ಆ ದಿನ ಶುಕ್ರವಾರ ಶ್ರೀಕಾಂತ್ ಗೆ ವಾರ್ನಿಂಗ್ ಕೊಟ್ಟೆ, ನೀವು ಬರುವುದಿಲ್ಲವಾದ್ರೂ ನಾನಂತೂ ಹೋಗೋದೆ ಅಂತ. ಶ್ರೀಕಾಂತ ತುಂಬ ಕೆಲಸದ ಒತ್ತಡ ಇದ್ದರೂ ಹೊರಟರು. ಆದರೆ ರವಿ ಬೇರೆ ಟ್ರಿಪ್ ಗೆ ಹೋಗಿದ್ದು ಬರುವುದು ಇನ್ನೂ ನಾಲ್ಕು ದಿನ ಆಗುತ್ತೆ ಅಂದಾಗ ನನ್ನ ಮೂಡ್ ಆಫ್ ಆಗಿದ್ದು ಹೌದು. ಆದರೆ ರವಿ ಅವರೆ 'ಪೆರುಮಾಳ್' ಅವರನ್ನು ನಮ್ಮಲ್ಲಿಗೆ ಕಳುಹಿಸಿದರು. ನನಗ್ಯಾಕೋ ಕಿರಿ ಕಿರಿ ಆಲ್ಮೋಸ್ಟ್ ಕ್ಯಾನ್ಸೆಲ್ ಕೂಡ ಮಾಡಿದೆ. ಆದರೆ ಈ ಸಲ ಯಾಕೋ ಪಾಂಡಿಚೆರ್ರಿ ಗೆ ಹೋಗಲೇ ಬೇಕೆಂಬ ಹಠ ನೇ ಗೆದ್ದಿತು.
ನಮ್ಮ ತಯಾರಿ ಶುರು. ನಾಲ್ಕು ದೊಡ್ಡ ದೊಡ್ಡ ಪೆಪ್ಸಿ ಬಾಟಲ್ ನಲ್ಲಿ ನೀರು, ಎರಡು ಗ್ಲಾಸ್, ಮೂರು ನಾಲ್ಕು ಅಡಿಕೆ ಹಾಳೆ ತಟ್ಟೆ, ಮಕ್ಕಳ ಕ್ಯಾಪ್, ನನ್ನ ಚಿವೀಂಗ್ ಗಮ್, ಬಿಸ್ಕಟ್, ಚಾಕೋಲೇಟ್, ಬಾಳೆ ಹಣ್ಣು, ಕಿತ್ತಳೆ, ನನ್ನ ಫರ್ಸ್ಟ್ ಏಇಡ್ ಕಿಟ್, ಚಾಕು, ಬಟ್ಟೆ ಬರೆ ಮುಂತಾದವುಗಳನ್ನೆಲ್ಲ ಅರ್ಧದಿನಕ್ಕೆ ಪ್ಯಾಕಿಂಗ್ ಮುಗಿಸಿ, ಶನಿವಾರ ಬೆಳಿಗ್ಗೆ 6.00 ಗಂಟೆ ಹೊರಟಿತು ನಮ್ಮ ಸವಾರಿ ಮಾರುತಿ ಇಂಡಿಕಾ ದಲ್ಲಿ.
ನಾವು ಆಯ್ದುಕೊಂಡ ಮಾರ್ಗ ಬೆಂಗಳೂರು-ಕೃಷ್ಣಗಿರಿ-ಗಿಂಗಿ-ಪಾಂಡಿಚೆರ್ರಿ ರೂಟ್
ನಿಧಾನಕ್ಕೆ ಪೆರುಮಾಳ್ ಕೂಡ ಇಷ್ಟ ಆದ್ರು. ವಯಸ್ಸಾದವರಾದ್ದರಿಂದ ರಾಯರಿಂದ ಹಿಡಿದು ನಮ್ಮನ್ನೆಲ್ಲ ಪುಟ್ಟ ಮಕ್ಕಳಂತೆ ನೋಡಿಕೊಂಡರು
ಈ ಚಿತ್ರಗಳೆಲ್ಲ ಚಲಿಸುವ ಗಾಡಿಯಿಂದ ನಾನೇ ತೆಗೆದದ್ದು. ಪರ್ಮಿಟ್ ಎಲ್ಲ ಚೆಕ್ಕಿಂಗ್ ಆದ ನಂತರ ನಾವು ಕೃಷ್ಣಾಗಿರಿಯ ಸರವಣ ಭವನದಲ್ಲಿ ಪೊಂಗಲ್/ದೋಸೆ ಹೊಡೆದು ನನಗೆ ಫೋಟೊ ತೆಗೆಯುವ ಹುಮ್ಮಸ್ಸು ಬಂತು.

ಬೈ ಬೈ ಬೆಂಗಳೂರು dashboard ಮೇಲೆ ಪುಟ್ಟ ಗಣಪ
ಲತಾ ಮಂಗೇಶಕರ್ ಹಾಡಿದ ಬೆಳ್ಳನೆ ಬೆಳಕಾಯಿತು ಹಾಡು ನೆನಪಾಯಿತು
ಮೋಡದಿಂದ ಕೂಡಿದ ಆಕಾಶದ ಚಿತ್ರ
ಗುಡ್ಡಕ್ಕೆ ನೈದಿಲೆ ಬಂದಿದೆ ಅಂತ ತಿಳ್ಕೋಬೇಡಿ, ಎದುರಿನ ಗಾಜಲ್ಲಿ ಏನೋ ನೀರು ಇಳಿತಾ ಇತ್ತು. :-)
took a pot shot at everything that caught my fancy
ಇದು ನನ್ನ ಫೇವರಿಟ್ ಚಿತ್ರ. ದೂರದಿಂದಲೇ ಇದನ್ನು ಸೆರೆಹಿಡಿಯುವ ಸ್ಕೆಚ್ ಹಾಕಿ,am glad i could manage it.
ಮೇಲಿನದೇ ಗುಡ್ಡ but ಸ್ವಲ್ಪ ದೂರ ಕ್ರಯಿಸಿದ ಮೇಲೆ
ಇದೊಂದು fluke ಶಾಟ್, ಶ್ರೀಕಾಂತ ಗೆ ಕಡಿದು ಹಾಕಿದ ಮರಗಳ ಚಿತ್ರ ಬೇಕಿತ್ತು, ಆದರೆ ಹಿಂದಗಡೆ ಚೆಂದದ ಬೆಟ್ಟಕೂಡ ಬಂದಿದ್ದು ಬೈ fault :-) am happy with this pic
ಕಿಟಕಿ ಗಾಜು ಮೂಲಕ ಹಾಯ್ದು ಬಂದ ಚಿತ್ರ :-)
ಆ ಮೋಡವನ್ನಷ್ಟೆ crop ಮಾದಿ ತೆಗೆದು ನನ್ನ ಬ್ಲಾಗ್ ಗೆ ಮಾಸ್ಟ್ ಹೆಡ್ ಮಾಡುವ ಅಂದಾಜಲ್ಲಿ ತೆಗೆದದ್ದು. ಆದರೆ ನಿಹಾ ಇದು ಚೆನ್ನಾಗಿಲ್ಲ ನಾನು ಫೋಟೋ ತೆಗೆದು ನಿನಗೆ ಮಾಸ್ಟ್ ಹೆಡ್ ಮಾಡಿಕೊಡ್ತೀನಿ ಅಂದಾಗ ನಾ ಖುಶ್ :-)
ಕೃಷ್ಣಾಗಿರಿ ತಲುಪುವ ತನಕ ಈ ರೀತಿ ಹುಣಸೆ ಮರಗಳನ್ನು ಬುಡ ಸಮೇತ ಕತ್ತರಸಿ ಹಾಕಿದ್ದರು. ನಮ್ಮ ರಾಯರಿಗಂತು ಕಸಿವಿಸಿ. ಒಂತರಹ ಹಸಿ ಹಸಿ ವಾಸನೆ ಮರ ಕಡಿದ ಜಾಗದಲ್ಲಿ. ಇಲ್ಲಿ ನನ್ನ aim ತಪ್ಪಿ ಕೆಲವೇ ಮರದ ಬೊಡ್ಡೆಗಳನ್ನು ಕಾಣಬಹುದು
ನಮ್ಮ ರಾಯರ ಇಷ್ಟದ ಪಾನೀಯ ಎಳನೀರು.
ತಿರುಳನ್ನು ನಾ ತಿಂದೆ ಸಕತ್ ಟೇಸ್ಟಿ ಯಾಗಿತ್ತು
ಅಲ್ಲೇ ಪಕ್ಕದಲ್ಲಿ ಯಾರದೋ ತೋಟಕ್ಕೆ ನುಗ್ಗಿ ನಾ ತೆಗೆದ ಚಿತ್ರ
ಬಿಸಿಲಿನಿಂದ ರಕ್ಷಿಸಲೋಸುಗ ನೇಯ್ದ ತೆಂಗಿನ ಗರಿ. ನನ್ನ ಇಂಟರೆಸ್ಟ್ ನೋಡಿ ತಾತಂಗೆ explain ಮಾಡೋ ಖುಶಿ
up close
ಈ ಫೋಟೋ ಫೇಸ್ ಬುಕ್ ನಲ್ಲಿ ಹಾಕಲಿಕ್ಕೆ...ನಿಹಾ ತೆಗೆದದ್ದು. :-)
ರಾಯರು & ಪೆರುಮಾಳ್
ಇವಿಷ್ಟು ನಾವು ಗಿಂಗಿ ತಲುಪುವ ಮುನ್ನ. ಇನ್ನು ಬಹುಶ: ಎರಡು ಮೂರು ಪಾರ್ಟ್ ಸ್ ನಲ್ಲಿ ಪೋಸ್ಟ್ ಮಾಡ್ತೇನೆ. ಮುಂದಿನ ಪೋಸ್ಟ್ ಗೆ ಸ್ವಲ್ಪ ವಿಳಂಬ. ನಿಹಾ ಮತ್ತು ಫ್ರೆಂಡ್ಸ್ ಕಾಲೇಜ್ ನಲ್ಲಿ 'ರೊಶೊಮೋನ್' ನಾಟಕ ಆಡುತ್ತಿದ್ದಾರೆ. ಅದಕ್ಕೆ ತಯಾರಿ ನಡೆಸಲು ನಾನು ಕೂಡ ಅವಳಿಗೆ assist ಮಾಡ್ತಿದ್ದೇನೆ.ಹಾಗಾಗಿ ನನ್ನ ಅಕ್ಕನ ಬೆಳಗಾಂ ಟೂರ್ ಕ್ಯಾನ್ಸಲ್. ಒಂದು ಖುಶಿಯ ವಿಷಯ ಅಂದ್ರೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೂ ಅವಳು ಓದಲ್ಲಿ ಮುಂದಿದ್ದಾಳೆ. ನನಗೆ ಸಮಾಧಾನ. ಅವಳ ನಾಟಕ ಚೆನ್ನಾಗಾಗಲಿ ಅಂತ ನೀವು ಕೂಡ ತುಂಬು ಮನಸ್ಸಿನಿಂದ ಹಾರೈಸ ಬೇಕು.
ಓಹ್ ಆಗಲೇ ಮಾರ್ಚ್ ಒಂದನೆ ತಾರೀಕು ಕೂಡ ಬಂತು. ಶ್ರೀಕಾಂತ ಓರ್ವ ತಂಗಿಯ ಹುಟ್ಟುಹಬ್ಬ, ಇನ್ನೊಬ್ಬ ತಂಗಿಯ ಮಗ muscular dystrophy ಯಿಂದ ತೀರಿಕೊಂಡ ದಿನ, ನನ್ನ ಮೊಮ್ಮಗಳ ಹುಟ್ಟಿದ ಹಬ್ಬ..ಆ ಮೊಮ್ಮಳಿಗೆ ಒಂದು ಮಗ ಕೂಡ ಹುಟ್ಟಿದ್ದಾನೆ. ಶ್ರೀಕಾಂತ ಮತ್ತು ಸ್ನೇಹಿತರು ಬ್ಯಾಂಕ್ ಕೆಲಸ ಬಿಟ್ಟು ಜನಪರ ಕಾರ್ಯಗೋಸ್ಕರ ಸಂಸ್ಥೆ ಪ್ರಾರಂಭ ಮಾಡಲು ನಿರ್ಧಾರ ಮಾಡಿದ ದಿನ ಕೂಡ. ಆಹ್ ಎಷ್ಟೊಂದು ನೆನಪುಗಳು. ಕುಚ್ ಖಟ್ಟಿ ಕುಛ್ ಮೀಠಿ....
ಪುನ: ಬೇಗನೆ ಸಿಗುವ, ಅಲ್ಲಿ ತನಕ ಬೈ ಬೈ....
:-)
:-)

3 comments:
ನೀವು ಹಾಕಿರುವ ಕಿತ್ರದಲ್ಲಿರುವ ಗುಡ್ಡ ನಮ್ಮ ನಂದಿ ಬೆಟ್ಟದ ಪಕ್ಕದಲ್ಲಿರುವ ಕಳವಾರ ಬೆಟ್ಟ ನೆನಪಿಸಿತು.
ಒಳ್ಳೆಯ ಬರಹ.
ಪ್ರವಾಸವನ್ನು ಹವ್ಯಾಸವಾಗಿ ಮಾಡಿಕೊಳ್ಳಲು ಪ್ರೇರೇಪಿಸುವಷ್ಟು ಸುಂದರವಾಗಿದೆ ನಿಮ್ಮ ಲೇಖನ. ನನಗನ್ನಿಸಿದಂತೆ ನೀವು perfectionist. ಸುಂದರ ಪ್ರವಾಸದ ಮುನ್ನುಡಿ, ಅದಕ್ಕೆ ತಗಲಿಕೊಂಡ ತಯಾರಿಕೆ ಎಲ್ಲವನ್ನು ಹದವಾಗಿ ಬೇರೆಸಿದ್ದೀರ ಒಳ್ಳೆಯ A-೧ ಉಪ್ಪಿಟ್ಟಿನ ಹಾಗೆ. Rashomon ಒಂದು ಅದ್ಭುತ ಚಿತ್ರ. ನಾಟಕ ಯಶಸ್ವಿಯಾಗಿ ಮೂಡಿ ಬರಲಿ. ಸುಂದರ ಲೇಖನ ಕೊಟ್ಟದ್ದಕ್ಕೆ ನಮಸ್ಕಾರಗಳು. ಮುಂದಿನ ಸಂಚಿಕೆಗೆ ಕಾಯುತ್ತಿರುವೆ
What is the play about? Best wishes to Niha :-)
Post a Comment