February 23, 2013

ಚಿತ್ರಸಂತೆ 2013

ಕೇವಲ ಒಂದು ತಿಂಗಳಷ್ಟು ವಿಳಂಬ. ಅದೇಕೆಂದರೆ ಕ್ಯಾಮರಾದಿಂದ ಚಿತ್ರಗಳನ್ನು ಇನ್ನೊಂದು ಲ್ಯಾಪ್ ಟಾಪ್ ನಲ್ಲಿ ಸೇವ್ ಆಗಿದೆ. ಚಿಕ್ಕ laptop ಅದು. ಆದ್ದರಿಂದ ಇಬ್ಬರೂ ಹುಡುಗಿಯರಿಂದ ಅದಕ್ಕೆ ಡಿಮ್ಯಾಂಡ್ ಹೆಚ್ಚು. ಪ್ರಾಜೆಕ್ಟ್ ವರ್ಕ್ ಅದೂ ಇದೂ ಅಂತ. ನಿನ್ನೆ ಇವತ್ತು ಎರಡು ದಿನ ಇಬ್ಬರಿಗೂ ರಜೆ ಹಾಗಾಗಿ ಇವತ್ತು ನನ್ನ ಕೈಗೆ ಸಿಕ್ಕಿದೆ ಅದು. 
ಚಿತ್ರಸಂತೆಯ ಹಿಂದಿನ ರಾತ್ರಿ ನನ್ನ ಫೇಸ್ ಬುಕ್ ಮಿತ್ರ ರವೀಂದ್ರ ಮಾವಖಂಡ ಅವರು , ಭಾರತೀಯ ವಿದ್ಯಾ ಭವನದಲ್ಲಿ ನಡೆಯುವ ಪಂಡಿತ್ ಗಣಪತಿ ಭಟ್ ಹಾಸಣಗಿ ಅವರ ಸಂಗೀತ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದರು. ಅದರ ಬಗ್ಗೆ ಮೈಲ್ ಕೂಡ ಮಾಡಿದ್ದರು ಅವರು, ಆದರೆ ನಾನು ಮರೆತಿದ್ದೆ. ಅವರು ನೆನಪಿಸಿದ್ದು ಒಳ್ಳೆಯದಾಯ್ತು ಹಾಗಾಗಿ ಬೆಳಿಗ್ಗೆ ನನ್ನ ನಿಹಾನ ಸವಾರಿ ಅಲ್ಲಿಗೆ. ನಿಹಾರಿಕಾ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ವಿಧ್ಯಾರ್ಥಿನಿ. ಬಸವೇಶ್ವರನಗರದ ಶುಭಾ ಧನಂಜಯ್ ಅವರ 'ಕರಣಂ' ನಲ್ಲಿ. ಅವಳ ಸಂಗೀತ ಗುರುಗಳು ಶ್ರೀಮತಿ ಸರೀತಾ ಕಟ್ಟಿ. ಹಾಗಾಗಿ ನಾವು ಸಂಗೀತ ಕಾರ್ಯಕ್ರಮಗಳನ್ನು ಮಿಸ್ ಮಾಡಿಕೊಳ್ಳುವುದು ಕಡಿಮೆ. ಅದೂ ಮುಂಜಾನೆ ಸಂಗೀತ ಕಾರ್ಯಕ್ರಮ ಕೇಳುವುದಕ್ಕಿಂತ ಆಹ್ಲಾದಕರವಾದದ್ದೂ ಎನೂ ಇಲ್ಲ. ಬೆಳ್ಳಿಗೆ ಎದ್ದು ತಿಂಡಿ ಅಡುಗೆ ಎಲ್ಲ ಮಾಡಿ, ಅವರೆಲ್ಲ್ಲ ಬ್ರೇಕ್ ಫಾಸ್ಟ್ -ಮಸಾಲೆ ದೋಸೆ - ಮಾಡ್ತಿರಬೇಕಾದ್ರೆ ನಾನು ರೆಡಿ ಯಾದೆ . ಬಂದ ಮೇಲೆ ತಿಂಡಿ ತಿಂದರಾಯಿತೆಂದು.
ಚೆನ್ನಾಗಿತ್ತು ಕಾರ್ಯಕ್ರಮ. ಬೆಳಿಗ್ಗೆ ಬೆಳಿಗ್ಗೆ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ತಲೆ ಕೆರೆದುಕೊಳ್ಳುತ್ತ, ಆಕಳಿಸುತ್ತ ಅವರು ಕಾರ್ಯಕ್ರಮವನ್ನು ಅಸ್ವಾದಿಸುತ್ತಿದ್ದರು. ಕಾರ್ಯಕ್ರಮದ ನಂತರ ರವೀಂದ್ರ ಅವರನ್ನು ಭೆಟ್ಟಿ ಮಾಡಿದೆ. ಪರಿಚಯ ಆಗಿ ಸುಮಾರು ಸಮಯ ಆಗಿದ್ದರೂ ಭೆಟ್ಟಿಯಾಗಿದ್ದು ಮೊದಲ ಸಲ. ಹಾಯ್ ಹಲ್ಲೋ ಅಂತ ಮಾತಾಡಿ ನಾವು ಹೊರಗೆ ಬಂದೆವು, ಅವರಿಗೂ ಕಛೇರಿಗೆ ಹೋಗಲಿಕ್ಕಿತ್ತು.
ನಾವು ಅಲ್ಲಿಂದ ಆಕೃತಿಗೆ ಬಂದೆವು ಅಲ್ಲಿ ಪ್ರತಿಭಾ ನಂದಕುಮಾರ್ ಅವರ ಪುಸ್ತಕ 'ಅನುದಿನದ ಅಂತರಗಂಗೆ' ಬಗ್ಗೆ ಸಂವಾದ ಕಾರ್ಯಕ್ರಮ ಇತ್ತು. ನಾವು ತಲುಪುವ ಮುಂಚೆನೇ ಶ್ರೀಕಾಂತರಿಂದ ಎಸ್ ಎಮ್ ಎಸ್ ಬಂತು' come home soon, lets us visit  the chitrasante, my friends daughter is exhibiting her works' ಅಂತ. ನಾನು ಓಕೆ ಅಂತ ಕಳಿಸಿದೆ. ನಾವು ಆಕೃತಿ ತಲುಪಿದಾಗ  ಪ್ರತಿಭಾ ಮತ್ತು ವಿಜಯಮ್ಮ ಆಗಲೇ ಬಂದಿದ್ದರು.
ಅನುದಿನದ ಅಂತರಗಂಗೆ ಎರಡನೇ ಆವೃತಿ ಬಿಡುಗಡೆ

ನಾನು, ನಿಹಾ, ಜಯಲಕ್ಷ್ಮಿ ಪಾಟೀಲ  ರನ್ನು ನೋಡಬಹುದು

ನಿಹಾರಿಕ 'ನಮ್ಮ ಮಾನಸ' ಪತ್ರಿಕೆಯ ಎಡಿಟೋರಿಯಲ್ ಟೀಮ್ ನಲ್ಲಿದ್ದುದರಿಂದ ಅವಳಿಗೆ ವಿಜಯಮ್ಮ ಮೊದಲೆ ಪರಿಚಯ. ಅವಳು ಅವರನ್ನು ನನ್ನನ್ನು ಪರಸ್ಪರ ಪರಿಚಯಿಸಿದಳು. ನಿಧಾನಕ್ಕೆ ಜನರು ಆಗಮಿಸಲಾರಂಭಿಸಿದರು. ಅಂಜಲಿ ರಾಮಣ್ಣ, ಜಯಲಕ್ಷ್ಮೀ ಪಾಟೀಲ್, ಉಷಾ ಕಟ್ಟೆಮನೆ ನನ್ನ ಅಂತ:ಪುರದ ಸಖೀಯರನ್ನು ಅಲ್ಲಿ ಕಂಡು ನನಗೆ ಆಶ್ಚರ್ಯದ ಜತೆ ಸಂತಸ, ಅವರು ಬರುವವರಿದ್ದಾರೆಂದು ಮೊದಲೇ ಗೊತ್ತಿದ್ದರೆ ಅವರಿಗೆಲ್ಲ ನನ್ನ ಮನೆಯಲ್ಲೇ ಲಂಚ್ ಎರೆಂಜ್ ಮಾಡ್ಬಹುದಿತ್ತು ಅಂತ ಹಳಹಳಿಸಿದೆ. 


ವಿಜಯಮ್ಮ ಪ್ರತಿಭಾ ಪರಸ್ಪರ ಹೊಗಳಿಕೆಯ ಮಾತನ್ನಾಡುತ್ತಿದ್ದರೆ ನಾನು ಅವರ ಚಂದದ ಸೀರೆ, ಅವರ ದೊಡ್ಡ ಬಿಂದಿ ಇದರಲ್ಲೇ ತಲ್ಲೀನಳಾಗಿದ್ದೆ. ಪ್ರತಿಭಾ ರ ಮಾತಿನಿಂದ ಅವರು ತುಂಬ ಒನೆಸ್ಟ್ (honest) ಮತ್ತು sensitive annistu. ಆತ್ಮಕತೆ/ಕಥೆ ಯೆಲ್ಲ 60 ವರ್ಷದ ಬಳಿಕ ಬರೀಬೇಕು ನನ್ನ ಪ್ರಕಾರ. ದಯಾನಂದ ಟಿ.ಕೆ ಕೂಡ ಏನೇನೋ ಮಾತಾಡಿದರಪ್ಪ. ನನಗೊಂದೂ ಅರ್ಥ ಆಗಲಿಲ್ಲ. ನಿಧಾನಕ್ಕೆ ಕನ್ನಡದಲ್ಲಿ ಮಾತನಾಡಿದ್ರೆ ಮಾತ್ರ ನನಗೆ ಅರ್ಥ ಆಗೋದು. ಅಷ್ಟರ ಮಧ್ಯೆ ನಾನು ಈಗಾಗಲೇ ಹಲವಾರು ಸಲ ಭೇಟ್ಟಿಯಾಗಿದ್ದ ನನ್ನ ಫೇಸ್ ಬುಕ್ ಪರಿಚಯದ ಕುಮಾರ್ ರೈತ ಫೋಟೊ ತೆಗೆಯುವಾಗ ನನ್ನ ಒಡೆದ ಕಾಲುಗಳು ಏನಾದರೂ ಕಂಡಾವೂ ಅಂತ ಮುಜುಗರ ಪಟ್ಟುಕಂಡು ನನ್ನ ಕಾಲನ್ನು ಸರಕ್ಕನೆ ಕುರ್ಚಿ ಕೆಳಗಡೆ ಅವಿತಿಟ್ಟೆ. :-)
ಅಂಜಲಿ ರಾಮಣ್ಣ ಅವರ ಮಾತು ಕಿವಿಯಲ್ಲಿ ಬೀಳಿತ್ತಿದ್ದರು ನಾನು ಅವರ ದನಿ ಅವರ ಹಾವಭಾವವನ್ನಷ್ಟೆ ಗಮನಿಸಿದ್ದು. ಯಾರಾದರೂ ಕಾರ್ಯಕ್ರಮದ ಬಗ್ಗೆ ವರದಿ ಹೇಗೂ ಒಪ್ಪಿಸುತ್ತಾರಲ್ಲವೇ, ಅದನ್ನೆ ನಿಧಾನಕ್ಕೆ ಓದಿದರಾಯ್ತು ಅಂದುಕೊಂಡೆ . ಒಂದು ಮಾತನಂತೂ ಅವರು ಸರಿಯಾಗೇ ಹೇಳಿದರು 'ಆತ್ಮಕತೆ' ಬಗ್ಗೆ ಸಂವಾದ ಮಾಡುವುದು ನನ್ನ ಪ್ರಕಾರ ಸರಿಯಿಲ್ಲ' ಅಂತ. ಅದು ನನಗೂ ಒಪ್ಪಿಗೆ.
ಜಯಲಕ್ಷ್ಮಿಯವರ ಸೀರೆ ಬ್ಲೌಸ್ ಕೂಡ ಸಕತ್ ಆಗಿತ್ತು. ಅವರನ್ನ compliment ಮಾಡಲು ಮರೆತುಬಿಟ್ಟೆ.
ಕಾರ್ಯಕ್ರಮ ಮುಗಿದ ತಕ್ಷಣ ಎಲ್ಲರಿಗೂ ಬೈ ಹೇಳಿ (ಕೆಲವು ಪುಸ್ತ್ಕಕಗಳು ಬೇಕಾಗಿದ್ದವು, ಆದರೆ ಬಿಲ್ಲಿಂಗ್ ಕೌಂಟರ್ ನಲ್ಲಿ ರಶ್ ಇತ್ತು. ಅದಲ್ಲದೇ ನಿಹಾರಿಕಾ ಗೆ 'ನಮ್ಮ ಮಾನಸ' ದ ಮೀಟಿಂಗ್ ಗೆ ಹೋಗ ಬೇಕಿತ್ತು
ಒಂದಂತು ನಿಜ.ಹೀಗೆ ಪುಸ್ತಕದ ಮಳಿಗೆಯಲ್ಲಿ ಸಂವಾದ ಕಾರ್ಯಕ್ರಮಗಳನ್ನು ಇಟ್ಟರೆ ಹಲವು ಮಂದಿ ಪುಸ್ತಕಗಳನ್ನು ಖರೀದಿಸುತ್ತಾರೆ. ಹಿಂದಿನ ಸಲ ನಾನು ನನ್ನ ಫ್ರೆಂಡ್ ಇಬ್ಬರದ್ದೇ ಖರೀದಿಯ ಬಿಲ್ಲ್ 1000ರೂ ಆಗಿತ್ತು. ಇನ್ನೂ ಹಲವರು ನಮ್ಮ ಹಿಂದೆ ಸರತಿ ಸಾಲಿನಲ್ಲಿದ್ದರು. good idea
ಸಧ್ಯ ಬೇಗ ರಿಕ್ಷಾ ಸಿಕ್ಕಿ, ನಾವು ಮನೆಗೆ ತಲುಪಿ ನೀಹಾ ಊಟ ಮಾಡಿ ರವೀಂದ್ರ ಕಲಾಕ್ಷೇತ್ರದ ಕಡೆ ಹೊರಟಳು. ನಮ್ಮ ರಾಯರು ಊಟ ಮಾಡಿ ಸಣ್ಣ ನಿದ್ರೆ ಹೊಡೆಯುವುದರಲ್ಲಿ ನಾನು ಬೆಳಿಗ್ಗಿನ ಗಡಿಬಿಡಿಯಲ್ಲಿ ಅಲ್ಲಲ್ಲೆ ಚೆಲ್ಲಿದ ಬಟ್ಟೆ ಪಾತ್ರೆ ಎಲ್ಲ ವಾಶ್ ಮಾಡಿ ಚಿತ್ರಸಂತೆಗೆ ಹೊರಡಲು ಅನುವಾದೆ.
ನಾಲ್ಕು ವರ್ಷದಿಂದ ಸತತವಾಗಿ ನಾವು ಚಿತ್ರ ಸಂತೆಗೆ ಹೋಗುತ್ತಿದ್ದೇವೆ. ಆದರೆ ಪ್ರಾಮಾಣಿಕವಾಗಿ ಹೇಳ್ತೇನೆ ಯಾಕೋ ಬೋರ್ ಆಗ್ತಾ ಇದೆ. ಇಷ್ಟ್ತು ವರ್ಷ ನಾನು-ನಿಹಾ-ಶ್ರೀಕಾಂತ ಬೆಳಿಗ್ಗೆ ಹೋಗ್ತ್ದಿದ್ದದ್ದು. ಅಷ್ಟು ರಶ್ ಇರಲ್ಲ.ಈ ಸಲ ನಿಹಾ ಇಲ್ಲದೇ ಏನೋ ಕಳಕೊಂಡ ಅನುಭವ. ನಾವು ತಲುಪುವಾಗ 3.30 ಅಬ್ಬಬ್ಬಾ ಅದೇನು ರಶ್. ನನಗಂತೂ ಒಳಗಡೆ ಹೋಗಕ್ಕೆ ಇಷ್ಟ ಇರಲಿಲ್ಲ. ನನಗೆ ಹೆದರಿಕೆ. ಮತ್ತು ಯಾರದಾದರು ಮೈಕೈ ತಾಗಿದರೆ ನನಗದು ಆಗೋದೆ ಇಲ್ಲ. 'ಬೇಡ ಶ್ರೀಕಾಂತ, ವಾಪಸ್ ಹೋಗುವ 'ಅಂದ್ರೆ ನನ್ನ ಕೈ ಗಟ್ಟಿ ಹಿಡಿದುಕೋ ಅಂದ್ರು. ಕೈ ಯೆನೋ ಹಿಡಿದೆ. ಆದರೆ ಅವರಿಗೆ ಫೋಟೊ ತೆಗಿಲಿಕ್ಕೆ ಕಷ್ಟ ಆಗ್ತಿತ್ತು. ಅದಕ್ಕ ನಾನು ಅವರ T-ಶರ್ಟ್ ಗಟ್ಟಿಯಾಗಿ ಹಿಡಿದುಕೊಂಡು ಅವರ ಫೇವರಿಟ್ t-ಶರ್ಟ್ ಈಗ ಒಂದು ಕಡೆ ಉದ್ದ ಸೊಟ್ಟಗಾಗಿ ಆ portion ಹಿಂಜಿದೆ:-) ಉತ್ತರಕನ್ನಡ ಜಿಲ್ಲೆಯಿಂದ ಒಂದು ದೊಡ್ಡ ಗುಂಪು ಬಂದಿತ್ತು ಅವರೆಲ್ಲ ಕೈ ಕೈ ಹಿಡಿದು ಚೈನ್ ಮಾಡಿಕೊಂಡು ಸಂತೆಯೊಳಗೆಲ್ಲ ಹೋಗಿದ್ದು ಮಜವಾಗಿತ್ತು.
ಈ ಸಲ ಚಿತ್ರಕ್ಕಿಂತ ಇತರೇ ಸಂಗತಿಗಳನ್ನು ಕ್ಯಾಮರಾದಲ್ಲಿ ಹಿಡಿದುಕೊಂಡಿದ್ದೇನೆ. ನೋಡಿ ಎಂಜಾಯ್ ಮಾಡಿ'






ಶಿವಾನಂದಾ ಸರ್ಕಲ್ ನಿಂದ ಒಳಗಡೆ ಹೋಗ್ತಾ

ಕಲರ್ ಲೆಸ್ cotton candy. ನಿಹಾ ಮಾಲು ಇದ್ರೆ ಕೊಂಡು ತಿನ್ನಬಹುದಿತ್ತು

ಮಾವಿನಕಾಯಿ, ಸೌತೆಕಾಯಿ take your pick

ಹೆಚ್ಚಿನ ಜನರನ್ನು ಆಕರ್ಷಿಸಿದ ಚಿತ್ರ

ನನ್ನ ಫೇವರಿಟ್

ಚಿತ್ರಕಲಾ ಪರಿಷತ್ ನ entrance

ಮುಖವಾಡ up-close

Ssssssssss Burning Artists


ಮುರಳಿ

ಬಿಸಿಬೇಳೆ ಬಾತ್, ಖಾರಾ ಬಾತ್, ಅಕ್ಕಿ ರೊಟ್ಟಿ, ಪಲಾವ್, ಜಾಮೂನು, ಹೋಳಿಗೆ, ಮಿರ್ಚಿ ಬೋಂಡ ಯಾವುದು ಬೇಕು?
ಹಾ ಮಿರ್ಚಿ ಬೋಂಡ ಕೊಡಿಸಿ ,ನಾ ಬೇಡ ಬೇಡ ಅಂದ್ರೂ ಫೋಟೊ ಕೂಡ ಹೊಡೆದರು ನಮ್ಮ ರಾಯರು
ಇನ್ನೂ ಕೆಲವು ಚಿತ್ರಗಳು ಎಲ್ಲಿಹೋದವು ಗೊತ್ತಾಗ್ತಾ ಇಲ್ಲ..:-)ಅವರ ಫ್ರೆಂಡ್ ಮಗಳಿಗೆ ಕೊಟ್ಟ ಸ್ಟಾಲ್ ಸಂಖ್ಯೆಯಲ್ಲಿ ಬೇರೆ ಯಾರೋ ಇದ್ದರು. ಆದ್ದರಿಂದ ಅವರ ಚಿತ್ರಗಳನ್ನು ವೀಕ್ಷಿಸಲು ಆಗಲೇ ಇಲ್ಲ. ಚಿತ್ರ ಸಂತೆಯಲ್ಲಿ ನನಗೆ ಇನ್ನೋರ್ವ ಅಂತ:ಪುರದ ಸ್ನೇಹಿತೆ ಸಂಧ್ಯಾರಾಣಿ ಸಿಕ್ಕಿದರು.
 so ಇಷ್ಟೆ. ನೀವೆಲ್ಲ ಇದನ್ನು ನೋಡ್ತಾ ಇರಿ ನಾನು ಅಕ್ಕ ಒಂದು ರೌಂಡ್ ಊರಿಗೆ ಹೋಗಿ ಬರ್ತೇವೆ...
:-)

4 comments:

Srikanth Manjunath said...

ನಿಮ್ಮ ಕೈಗಳು, ಬೆರಳುಗಳು, ಮನಸು ರೀತಿಯ ಡಿಪಾರ್ಟ್ಮೆಂಟಲ್ ಸ್ಟೋರ್ ಇದ್ದ ಹಾಗೆ...ಒಂದು ಲೇಖನ ತಿಂಡಿ ತಿನಿಸುಗಳಿಂದ ಬಾಯಿ ಒದ್ದೆ ಆದ್ರೆ..ಇನ್ನೊಂದು ಲೇಖನ ಕಣ್ಣನ್ನು ಒದ್ದೆ ಮಾಡುತ್ತದೆ..ಮತ್ತೊಂದು ಮನದಾಳಕ್ಕೆ ಇಳಿದು ಕೂತು ಬಿಡುತ್ತದೆ. ಒಂದು ಪುಟ್ಟ ಪುಟ್ಟ ಘಟನೆಗಳನ್ನು, ಕಾರ್ಯಕ್ರಮಗಳನ್ನು ಸುಂದರ ಕಾವ್ಯವಾಗಿ ಮಾಡುವ ನಿಮ್ಮ ಬರಹದ ಶೈಲಿಗೆ ನಾ ಶರಣಾದೆ. ಸುಂದರ ಲೇಖನ ಮೇಡಂ, ಪುಸ್ತಕದ ಸಂವಾದ, ಹೆಣ್ಣು ಮಕ್ಕಳ ಟ್ರಂಪ್ ಕಾರ್ಡ್ ಆದ ಸೀರೆ, ಬ್ಲೌಸ್ ಬಗ್ಗೆ ಬರಹ, ಚಿತ್ರಸಂತೆಯ ತಿಂಡಿ ತಿನಿಸುಗಳು ಎಲ್ಲವು ಸೊಗಸು. ಉತ್ತಮ ಲೇಖನ ಇಷ್ಟವಾಯಿತು

swapnageleya said...

ಲೇಖನ ಚೆನ್ನಾಗಿದೆ. ಇಷ್ಟ ಆಯ್ತು.

nenapina sanchy inda said...

thank you Srikanth and Ravindra
:-)
malathi S

Sudeepa ಸುದೀಪ said...

U are tooooo...much pacchi... :-)ha..ha.. i enjoy everything here...