September 5, 2012

ಗುರುಗಳಿಗೆ ವಂದನೆ

ಶಿಕ್ಷಕರ ದಿನಾಚರಣೆ ಅಂತ ಒಂದು ಹಳೆ ಪೋಸ್ಟ್ ಒಂದು ಇದೆ. ಈ ಎರಡು ದಿನಗಳಲ್ಲಿ 200 ಕ್ಕೂ ಹೆಚ್ಚು ಮಂದಿ ಅದನ್ನು ವೀಕ್ಷಿಸಿದ್ದಾರೆ. ಮಾಲವಿಕಳ ಬಳಿ ಇದನ್ನು ಹೇಳಿಕೊಂಡಾಗ ’ಏನಿಲ್ಲಮ್ಮ -ಟೀಚರ್ಸ್ ಡೇ ಹತ್ತಿರ ಬಂದಿದೆಯಲ್ಲವಾ? ಶಾಲೆಗಳಲ್ಲಿ ಸ್ಪೀಚ್ ಅದೂ ಇದೂ ಇರುತ್ತವೆ..ನೆಟ್ ನಲ್ಲಿ ಏನಾದರೂ ಹೊಸತು ಸಿಗುತ್ತ ಅಂತ ಸರ್ಚ್ ವರ್ಡ್ಸ್ ಹಾಕಿ ಹುಡುಕುತ್ತಿರುತ್ತಾರೆ ಅಂದ್ಲು. ಇರಬಹುದೇನೋ ಅನ್ನಿಸ್ತು. ನೋಡಿ ಮಾಲವಿಕಳಿಂದ ಇಷ್ಟು  ಗೊತ್ತಾಯಿತು ಅಂದ್ರೆ ಅವಳು ನನಗೆ ಗುರು ಆದಳಲ್ಲವಾ??:-)
ನನಗಿಂತ ಚಿಕ್ಕವರಿಂದಲೂ ಎಷ್ಟೊಂದು ಕಲಿತಿದ್ದೇನೆ..ನಮ್ಮ ಮೇಲಿನ ಮನೆಯ ಪುಟ್ಟು 5 ವರ್ಷದ ದಿಶಾಂತ್, ತಮ್ಮನ ಮಗಳು ಮೂರುವರೆ ವರ್ಷದ ಸ್ಯಾಮಿ,  ನಿಹಾರಿಕಾ ಮತ್ತು ಇತ್ತೀಚೆಗೆ Facebook ಮೂಲಕ ಪರಿಚಯರಾದ ಕಿರಿಯ ಮಿತ್ರ  ರೊಬ್ಬರು..ಇವರಿಂದೆಲ್ಲ ಕಲಿತ ಹಲವಾರು ಪಾಠಗಳು- wit, ಪ್ರೀತಿ, ಸಹನೆ, ತಾಳ್ಮೆ,ಜೀವನ ಪ್ರೀತಿ ಮುಂತಾದವು.ಈ face book ತಮ್ಮನಿಂದ  ಕಲಿತ ದೊಡ್ಡ ಪಾಠ: simple living simple thinking...ಈ ತರಹ ಆಲೋಚಿಸುವವರೂ ಈಗಿನ ಕಾಲದಲ್ಲಿ ಸಿಗುತ್ತಾರ ಅನ್ನುವಷ್ಟು..:-))
we are what our teachers have made us.. A great big salute to all of them..
ನಿಹಾರಿಕಾ ಇವತ್ತು ಅವಳ ಕಾಲೇಜಿನ ಲೆಕ್ಚರರ್ಸ್ ಅವರಿಗೆಲ್ಲ ಹ್ಯಾಂಡ್ಮೇಡ್ ಬುಕ್ ಮಾರ್ಕ(Handmade bookmarks) ಮಾಡಿದ್ದಾಳೆ. ಒಟ್ಟು ಮುವತ್ತೈದು.. ಕೆಲವು ಚಿತ್ರ ಗಳನ್ನು ಇಲ್ಲಿ ಹಾಕಿದ್ದೀನಿ.
ಹಾಗೆ ಆಸಕ್ತಿಯಿದ್ದರೆ ನನ್ನ ಹಳೆಯ ಪೋಸ್ಟ್ ಕೂಡ ಓದಬಹುದು. 
ಶಿಕ್ಷಕರ ದಿನಾಚರಣೆ

ಮನೆಗೆ ಬಂದಿರುವ ಮದುವೆ ಆಮಂತ್ರಣ ಪತ್ರಗಳು, ಚಾಕೋಲೇಟಿನ್ ಸಿಪ್ಪೆ, gift wrapper ಗಳು ಇವೇ ಎಲ್ಲ ಅವಳ ಕಲೆಗೆ ಬಳಕೆಯಾದವುಗಳು. ಫೆವಿಕಾಲ್ ಮತ್ತು ಕೆ ಜಿ ಕಾರ್ಡ್ ಬೋರ್ಡ್ ಮಾತ್ರ ಅವಳು ಖರೀದಿಸಿ ತಂದದ್ದು...proud of her..












ರಾತ್ರಿ ಇಡಿ ಕೂತು ಮಾಡಿದ್ದಾಳೆ. I hope they appreciate it ಅಂದ್ರೆ, ನನಗೆ ಖುಶಿ ಮಾಡಿ ಕೊಡೊಕ್ಕೆ thats all that matters ಅಂತಾಳೆ ನನ್ನ ಹುಡುಗಿ..a hug for her...ಸನ್ಮಾನ ಕಾರ್ಯಕ್ರಮಗಳನ್ನು ಹೊಮ್ಮಿಕೊಂಡಿದ್ದಾರೆ. ಹೂವಿನ bouquet ಯೊಂದಿಗೆ ಈ ಬುಕ್ ಮಾರ್ಕ ಕೊಡೋದಂತೆ...
:-)



7 comments:

N said...

Wonderful designs.. Happy teacher's day boss.. :))

Sudeepa ಸುದೀಪ said...

Lovely art by Niha...Convey my love 2 her... :) love u sis.. :) and ಮಾಲತಿ ಚಿಕ್ಕಮ್ಮ...ನಿಮಗೂ ಸಹ....ಶಿಕ್ಷಕರ ದಿನಾಚರಣೆ ಶುಭಾಷಯಗಳು... :)

Sheela Nayak said...

Malathi,

proud of Niharika! god bless her! lucky U Malathi! me too lucky..with multi talented kids....miss ur posts in FB!

nenapina sanchy inda said...

Yes Sheela u r right..everybody should count their blessings!!
thanks for dropping by
:-)
ms

Anonymous said...

ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರುವು !

ನಿಮ್ಮ ಅಭಿಪ್ರಾಯ ಸರಿಯಾಗೇ ಇದೆ - ಸಣ್ಣವರು, ದೊಡ್ಡವರು, ಹಗೆಗಳು, ಮಿತ್ರರು ಎಲ್ಲರಿಂದಲೂ ನಾವು ಒಂದಲ್ಲ ಒಂದು ವಿಷಯ ಕಲಿಯಬಹುದು!
ಬನ್ನಂಜೆಯವರ ಒಂದು ಪ್ರವಚನ, ಪ್ರಕ್ರತಿಯ ಪಾಠಗಳು ಇದರಲ್ಲಿ ಪಂಚಭೂತಗಳಿಂದ ನಾವು ಏನನ್ನೆಲ್ಲ ಕಲಿಯಬಹುದು ಎಂಬ ಬಗ್ಗೆ ಇದೆ.

http://www.kannadaaudio.com/Songs/Discourses/home/Prakruthiya-Pata.php

-- A. Ram

nenapina sanchy inda said...

Definitely A Ram!
We can learn a lot from our enemies too...missed adding that!!
thank you will listen to the audio link later...
:-)
ms

Radhika said...

Nice book marks Malathi!