September 1, 2012

To Ananya with love:तितली रानी बोलो बोलो

British Library ಗೆ ಹೋಗ್ತಾ ಮೊನ್ನೆ ನನ್ನ ಇಷ್ಟದ ಈ ಹೂವಿನ ಮರದ ಕೆಳಗೆ ನಿಂತು, ’ನೀಹಾ ಎಷ್ಟು ಚಂದ ಅಲ್ಲ, ಈ ಹೂಗಳು? ತಾರೆಗಳನ್ನೆಲ್ಲ ಕೆಳಗಡೆ ತಂದು ಪೋಣೀಸಿದಂತಿದೆಯಲ್ಲಾ? ಒಂದು ದಿನ ಇದರ ಫೋಟೊ ತೆಗೆದು ಕೊಡೆ’ ಅಂದೆ...ಅದಕ್ಕೆ ಅವಳು -ಒಂದು ದಿನ ಯಾಕೆ? ಈಗಲೆ ತೆಗೀತೀನಿ ಅಂತ ಅವಳ ಬ್ಯಾಗ್ ನಿಂದ ಮ್ಯಾಜಿಶಿಯನ್ ತರಹ ಕ್ಯಾಮರಾ ಹೊರ ತೆಗೆದಾಗ ನನಗಾದ ಸಂತೋಷ ಅಷ್ಟಿಷ್ಟಲ್ಲ....




ನಂಬ್ತೀರಾ?? ನಾನು ಜಂಪ್ ಹೊಡೆದು ಒಂದು ಕೊಂಬೆಯನ್ನು ಕೆಳಗಡೆ ಎಳೆದು ಈ ಫೋಟೊ ತೆಗೆಸಿದ್ದು. ಸಧ್ಯ ನನ್ನ ಕಸರತ್ತು ಯಾರೂ ನೋಡಲಿಲ್ಲ..:-))
ಅಷ್ಟರೊಳಗೆ ಎಲ್ಲಿಂದಲೋ ಬಂದವು ಈ ಚಿಟ್ಟೆಗಳು. ಇವನ್ನು ನೋಡಿ ನನ್ನ ತಮ್ಮಂದಿರು ಬಿಹಾರ ನ ಶಾಲೆಗೆ ಹೋಗುತ್ತಿದ್ದಾಗ ಹಾಡುತ್ತಿದ್ದ ಈ ಬಾಲ ಪದ್ಯ ನೆನಪಾಯಿತು..ತಿತಲೀ ರಾನಿ ಬೊಲೊ ಬೊಲೊ.....



तितली रानी बोलो बोलो
कौन दॆश से आती हॊ
कितना सुंदर रूप तुम्हारा
सब का मन बेहलाती हो

कौन तुम्हारे इन पंखॊं में
भर देता है चंचलता?
रंग बिरंगे  इन पंखॊं को
रंग देता है कौन बता?
ಈ ಪದ್ಯ ಇಷ್ಟೇನಾ ಅಥವಾ ಇನ್ನೂ ಇದೆಯಾ ಸರಿ ಗೊತ್ತಿಲ್ಲ. ನನಗೆ ನೆನಪಿರೋದು ಇಷ್ಟೆ...



ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ
ಯಾವ ದೇಶದಿಂ ಬಂದಿಹೆ ನೀ
ಎಷ್ಟು ಚಂದವಿದು ರೂಪವ ನಿನ್ನದು
ಎಲ್ಲರ ಮನಸನು ತಣಿಸುವೆ ನೀ


ಯಾರು ನಿನ್ನ ಪಕ್ಕಗಳಲ್ಲಿ
ಚಂಚಲತೆಯನ್ನು ತುಂಬಿಹರು
ಕಾಮನಬಿಲ್ಲಿನ  ರೆಕ್ಕೆಗಳಲ್ಲಿ
ಬಣ್ಣ ತುಂಬಿದ್ದು ಯಾರವರು?

Photographs : Niharika Shenoy

ಹಿಂದಿ ಕವನ ಕನ್ನಡಿಕರಿಸಿದ್ದು : ನಾನೇ....:-)
Dear Radhika: This post is especially for Ananya. i still replay the occasion when we met..:-))))Tell her I love her..
:-)
:-)

5 comments:

Badarinath Palavalli said...

ಒಳ್ಳೆಯ ಸಚಿತ್ರ ಲೇಖನ.

Radhika said...

Ananya says: I love butterflies and I love you too!
Malathi, you made my day :-)
Another song that comes to my mind is paataragitti pakka.

Radhika said...

Is it night queen? The flowers look like that.

Sudeepa ಸುದೀಪ said...

sooooo...niceee...flowers...n cutie..butterflies toooo....love the photos pachi.. :)

nenapina sanchy inda said...

thanks Munna!!
:-)
pachchi