ನಾನು ಬಸ್ ನಲ್ಲಿ ಪ್ರಯಾಣ ಮಾಡುವಾಗ ನನ್ನ ಬಳಿ ಯಾವಾಗಲೂ ಪುಸ್ತಕ ಇರುತ್ತೆ. ಬಸ್ಸ್ ನಿಂದ ಹೊರ ಇಣುಕಿ ಹೊರಗಿನ ದೃಶ್ಯಗಳನ್ನು ನೋಡುವುದು ನನಗೆ ಇಷ್ಟ, ಆದರೆ ಕೆಲವೊಮ್ಮೆ ತುಂಬ ಮಾತನಾಡುವವರು ಪಕ್ಕದಲ್ಲಿ ಕುಳಿತಾಗ ಹಿಂಸೆಯಾಗುತ್ತೆ. ಅಂತ ಸಮಯದಲ್ಲಿ ನಾನು ಪುಸ್ತಕ ಬ್ಯಾಗ್ ನಿಂದ ಹೊರ ತೆಗೆದು ಓದಲು ಶುರು ಮಾಡಿ ಬಿಡ್ತೇನೆ.
ಮೊನ್ನೆ ಹೀಗಾಯಿತು. ಗಡಿಬಿಡಿಯಲ್ಲಿ ಪುಸ್ತಕ ತರಲು ಮರೆತು ಹೋಯಿತು. ನನ್ನ ಪಕ್ಕದಲ್ಲಿ ಕುಳಿತ ಹೆಂಗಸು , ’ಮ್ಯಾಡಂ, ಟೈಮ್ ಎಷ್ಟು’ ಅನ್ನಲು ನಾನು 12.30 ಅಂದೆ
"ಇಲ್ಲಿಂದ ಮೆಜಿಸ್ಟಿಕ್ ಎಷ್ಟು ಹೊತ್ತು’?"
"ಅರ್ಧ ಗಂಟೆ"
"ವಾಪಸ್ ಬರಲು ನನಗೆ ಇದೇ ಬಸ್ ಸಿಗುತ್ತಾ?"
"ಗೊತ್ತಿಲ್ಲ"
"ಯಾಕೆ ಕೇಳಿದೆ ಅಂದ್ರೆ ಮ್ಯಾಡಂ, ನನ್ನ ತಂದೆ ತಾಯಿ ಊರಿನಿಂದ ಬಂದು ಈಗ ಮೆಜಿಸ್ಟಿಕ್ ನಲ್ಲಿ ಕಾಯ್ತಿದ್ದಾರೆ", ಅವರನ್ನು ಮನೆಗೆ ಕರೆದುಕೊಂಡು ಬಂದು ನಾನು ಅಡಿಗೆ ಮಾಡಬೇಕು"
"ಹೂಂ"
"ನೀವೆಲ್ಲಿಗೆ"
"ಜಯನಗರ"
"ಜಾಬ್ ಮಾಡ್ತೀರಾ ಮ್ಯಾಡಂ"
"ಹೂಂ"
"ಸಂಬಳ ಎಷ್ಟು"
"*********"
"ಹಸ್ಬೆಂಡ್ ಗೆ ಎಷ್ಟು ಸಂಬಳ"
"*******"
ಅಷ್ಟರೊಳಗೆ ನನ್ನ ಸೆಲ್ಲ್ ರಿಂಗ್ ಆಯ್ತು. ಉಸ್ಸಪ್ಪ ಅಂತ ಮಾತಾಡಿ ಇಟ್ಟೆ. ಆಕೆ ಪುನ:
"ನನ್ನ ಹತ್ತಿರ ಮೊಬೈಲ್ ಇಲ್ಲ ಮ್ಯಾಡಂ, ತೆಗೆದುಕೊಳ್ಳಬೇಕಂತ ಇದ್ದೇನೆ, ಯಾವುದು ತೆಗೊಳ್ಲಿ"
grrrrrrrrrrrrrrrrrrrrr. ನನ್ನ ಮುಖದಲ್ಲಿ guarantee ಅಸಹನೆ ಇದ್ದೇ ಇತ್ತು ನನಗೆ ಗೊತ್ತು. ಆದರೂ ಆ ಹೆಂಗಸು ಮೆಜೆಸ್ಟಿಕ್ ಬರೋ ತನಕ ತಲೆ ತಿಂದ್ರು.
ನಿಹಾರಿಕ ಯಾವತ್ತೂ ಕೇಳುತ್ತಾಳೆ, ಅದೇನು ಅವರೆಲ್ಲ ನಿನ್ನ ಹತ್ತಿರ ಅಷ್ಟು ಮಾತಾಡೋದು ಅಂತ ಕೆಲವೊಮ್ಮೆ. ನನಗೆ ಗೊತ್ತಿದ್ದರೆ ತಾನೆ ನಾನು ಅವಳಿಗೆ ಉತ್ತರ ಕೊಡುವುದು. ಇದಕ್ಕೆ ಒಂದು episode ಹೇಳ್ತೇನೆ:
ಮಾಲವಿಕ ನಿಹಾರಿಕ ಕಣ್ಣು ಪರೀಕ್ಷೆ ಮಾಡಲು ಹೋಗಿದ್ವಿ. ಹೊಸ ಕ್ಲಿನಿಕ್. ನಮ್ಮ ಸರದಿ ಪ್ರಕಾರ ಒಳಗೆ ಹೋದ್ವಿ. ಹೊರಗಡೆ ಸಿಕ್ಕಾಪಟ್ಟೆ ರಶ್.
ಮಾಲವಿಕ ಕಣ್ಣು ಪರೀಕ್ಷೆ ಮಾಡುತ್ತ (ಈಗೆಲ್ಲ digitalised eye testing), ಅವಳ ಹೆಸರು, ಅವಳ ಓದಿನ ಬಗ್ಗೆ ಕೇಳಿದರು
whats your name
Malavika
What are you studying
Hotel Management
What?? thats an interesting subject'
ಅಂತ ಹೇಳಿ ನನ್ನ ಹತ್ತಿರ ತಿರುಗಿ
ಎಲ್ಲರು ಇಂಜಿನಿಯರಿಂಗ್, ಮೆಡಿಕಲ್ ಎಲ್ಲ ಮಾಡುವಾಗ ನೀವ್ಯಾಕೆ ಅವಳಗೆ hotel industry ಗೆ ಸೇರಿಸಿದ್ರಿ?
"ಅವಳ ಇಷ್ಟ. ಅವಳ ತಂದೆ-ಅವಳು ಕೂಡಿ ಎನೋ ಹೊಸದಾಗಿ ಮಾಡುವ plans ಇದೆ.
" ನೀವು ಹೇಳೋದು ಸರಿ ಬಿಡಿ.ಹೋಟಲ್ is one business that will not go out of business'. ಆ ಮೇಲೆ ಅವರ ಮಿತ್ರರು partnership ನಲ್ಲಿ ಹೋಟಲ್ ನಲ್ಲಿ ಹಣ ಹೂಡಿ ದುಡ್ದು ಮಾಡಿದ್ದನ್ನು ಹಂಚಿಕೊಂಡರು. ನಿಹಾರಿಕ ನ ಸರದಿ ಬಂದಾಗ ನನಗೆ ಹೊಟ್ಟೆಯಲ್ಲಿ ನಡುಕ ಶುರು ಆಯ್ತು. ನಿಹಾ ಗೆ ಸಿಟ್ಟು ಬರುತ್ತೆ ಅಂತಲೂ ಮೊದಲೆ ಗ್ರಹಿಸಿದೆ. ಸಿಟ್ಟು ಬಂದಾಗ ಆಕೆ ಸುಮ್ಮನಿರಲ್ಲ.
and young lady, whats your name
Niharika
Which class?
PUC 2nd
What?? you look like a 12 year old..ok what subject?
"Arts"
ನಿಜಕ್ಕೂ ಡಾಕ್ಟರ್ ಗೆ ಎಷ್ಟು ಶಾಕ್ ಆಯ್ತೆಂದರೆ, ಸ್ವಲ್ಪ ಹೊತ್ತು ನನ್ನನ್ನು, ನಿಹಾ ನ ಮಿಕಿ ಮಿಕಿ ನೋಡಿ ಸುಮ್ಮನಾದರು. ಸಧ್ಯ ನಾನು ಹಾಂ ಇನ್ನು ಇವರು ಮಾತನಾಡಲಿಕ್ಕಿಲ್ಲ ಅಂದುಕೊಂಡೆ ಖುಶಿ ಪಟ್ಟೆ.ಆದರೆ
"why? how much marks did you get in SSLC' ಅಂತ ಕೇಳಿಬಿಟ್ರು. ನಿಹಾ ಆಗಲೆ ಕೆಂಪು ಕೆಂಪು...ಯಾಕಂದರೆ ಹತ್ತನೆ ಕ್ಲಾಸಿನ ಪರೀಕ್ಷೆ ಮುಗಿದ ಕೂಡಲೆ, ಈಗ pre university college ನ application ಮುಂಚಿತವಾಗಿ ಕೊಡುತ್ತಾರಲ್ಲವಾ? ನನಗೆ ನೀಹಾ ಗೆ ಹಲವಾರು ಕಡೆ bitter experience ಆಗಿದೆ.
"92%"
"then why did you not take science"
ನಿಹಾ rude ಆಗಿ, "Its my wish" ಅಂದಳು
ಡಾ ನನ್ನ ಕಡೆ ತಿರುಗಿ ’ನೀವು ಸಪೋರ್ಟ್ ಮಾಡಿದ್ರಾ" ಅಂದ್ರು
ನಾನು ’ಹೌದು’ ಅವಳಿಗೆ economist ಆಗಬೇಕೆಂದಿದೆ. so she has chosen her stream wisely ಅಂದೆ
ಆ ಮೇಲೆ ಅವರು ನಿಟ್ಟುಸಿರು ಬಿಟ್ಟು ’even i was not interested in being a doctor, i wanted to be a musician, i wanted to play the violin' iam very good at it' But my father forced me to be a doctor and i thought opthalmology was a better choice. at least i can have weekends off. i am a good photographer and every weekend me and friends go outskirts of bangalore' You are such a nice mother.
ಮತ್ತೆ ಶ್ರೀಕಾಂತ ಬಗ್ಗೆ ಮಾತು ಬಂತು, ನಮ್ಮ NGO ಬಗ್ಗೆ...
ಅಲ್ಲೇ ಇದ್ದ ಅವರು ಓದ್ತಾ ಇರೋ ಪುಸ್ತಕದ ಬಗ್ಗೆ, ನಮ್ಮ ಮನೆ, ನಮ್ಮ ಆಫಿಸ್ ಎಲ್ಲಿ ಬರುತ್ತೆ ಇಂತಹುದೆಲ್ಲ ಕೇಳ್ತಿರಬೇಕಾದ್ರೆ ಸುಮಾರು ಹೊತ್ತು ಆಯಿತು.ನನಗೆ ಹೊರಗೆ ಕುಳಿತಿರುವ patients ಬಗ್ಗೆ tension
6 ತಿಂಗಳಾದ ಮೇಲೆ ಇಬ್ಬರು ಕಾಂಟೆಕ್ಟ್ ಲೆನ್ಸ್ ಗೆ ಅಂತ ಆ ಡಾಕ್ಟರ್ ನ್ನು ಭೇಟಿ ಮಾಡಲು ಹೋಗುವಾಗ, ನಿಹಾ ನನಗೆ ,’ಅಮ್ಮ ನೀನು ಬರೋದು ಬೇಡ’ ನೀನು ಬಂದ್ರೆ ಅವರು ತುಂಬ ಮಾತಾಡ್ತಾರೆ, ನಾವು ನಾವೆ (ಈ ಪ್ರಸಂಗ ಆದಮೇಲೆ ಅವರು ಎರಡು ಮೂರು ಸಲ ಅವರ ಕ್ಲಿನಿಕ್ ಗೆ ಹೋಗಿದ್ದರು) ಹೋದಾಗ ಅವರು ಅಷ್ಟು ಮಾತಾಡಲ್ಲ ಅಂದು ಬಿಟ್ರು
:-)
Sweet pongal with bansi Rawa, fried moongdaal , jaggery, coconut and cashewnuts fried in Ghee (homemade :-)) it was awesome
Sweet pongal with bansi Rawa, fried moongdaal , jaggery, coconut and cashewnuts fried in Ghee (homemade :-)) it was awesome
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಳ್ಳು ಬೆಲ್ಲ, ಸಿಹಿ ಪೊಂಗಲ್, ಹುಗ್ಗಿ ನಮ್ಮ ಮನೆಯ ತಿಂಡಿ..ನಿಮ್ಮಲ್ಲಿ??
15 comments:
yella ok sambala yestu antha kelidaga uttarada jagadalli stars yaake.hey nanu tumba mathado manushya i felt sad ok
sambalada bagge nimma prashnege idO uttara........
**********
i am a silent person ok??!!!now at least i talk a bit....my mom used to talk paragraphs with me and i used to answer in monosyllables angering her!!!
:-)
ಹಬ್ಬದ ಶುಭಾಷಯಗಳು
Happy festival to you too!
ಸಂಕ್ರಾಂತಿ ಶುಭಾಶಯಗಳು....
ಏಳ್ಳು ಯಾವ ಅಂಗಡಿಯಿಂದ ತಂದ್ರಿ....
ಬೆಲ್ಲ ಎಷ್ಟು ಹಾಕಿದ್ರಿ....
ಗೋಡಂಬಿ ಯಾವ ತುಪ್ಪದಲ್ಲಿ ಕರಿಯಬೇಕು....
ಹಹಹಹ...ಇನ್ನು ಇದೆ ಪ್ರಶ್ನೆಗಳು.....
good one...
ಕೆಲವೊಮ್ಮೆ ಅತಿ ಮಾತುಗಾರರೂ ತಲೆ ಶೂಲ ಉಂಟು ಮಾಡುತ್ತಾರೆ ನಿಜ ಮಾಲತಿಯವರೇ,
ನಿಮಗೂ ನಿಮ್ಮ ಮನೆ ಮಂದಿಗೂ ಮತ್ತು ನಿಮ್ಮ ಬ್ಲಾಗಿಗೂ ಹಬ್ಬದ ಶುಭಾಶಯಗಳು.
ನನ್ನ ಬ್ಲಾಗಿಗೂ ಸ್ವಾಗತ.
ಚೆನ್ನಾಗಿದೆ ಮಾಳತಿಯವರೇ .... ಆದರೆ ನಿಮ್ಮದು ಮಾತು ಅತಿಯಾಯಿತು :-) ..... ನೀವೇ ಇಷ್ಟು ಮಾತಾಡೋವಾಗ ನಿಮ್ಮ ಪಕ್ಕ ಕೂತವರು ನಿಮ್ಮ ನಗು ಮುಖವನ್ನು ನೋಡಿ ಎಷ್ಟು ಖುಷಿಯಗ್ಲಿಕ್ಕಿಲ್ಲ ... ನಿಮ್ಮ ಮುಖ ನೋಡಿದ್ರೆ ನೋಡುವವರಿಗೆ ಮಾತು ತನ್ನಿಂದ ತಾನೇ ಬರುತ್ತೆ.
ಅಂದ ಹಾಗೆ ನೀವು ನಿಮ್ಮ ಕಣ್ಣು ಎಲ್ಲಿ ಪರೀಕ್ಷೆ ಮಾಡಿದ್ದು? ಹೇಗಿದೆ ನಿಮ್ಮ ದೃಷ್ಟಿ ?
ನಿಮಗೆ ಕನ್ನಡ ಇಷ್ಟು ಚೆನ್ನಾಗಿ ಬರಲು ಕಾರಣವೇನು? ಅಂದ ಹಾಗೆ ನೀವು ಶಾಲೆಯಲ್ಲಿ ಯಾವ ಸಬ್ಜೆಕ್ಟ್ ತಗೊಂಡಿದ್ದು? ನಿಮ್ಮ ಬರಹಗಳನ್ನು ನೋಡಿದ್ರೆ ನೀವು ಶಾಲೆಯಲ್ಲಿ ಬಹಳ ಬುದ್ಧಿವಂತರಗಿದ್ರಿ ಅನ್ಸುತ್ತೆ ..ಅಲ್ವ? ಅದು ಬಿಡಿ , ಈಗ್ಲೂ ಕೂಡ ಬುದ್ಧಿವಂತೆಯೇ .... ಅಲ್ವ?
ಅಂದ ಹಾಗೆ ನಾನು ಬಂದದ್ದು ನಿಮ್ಮ ಬಳಿ ಏನೋ ಕೇಳೋಕೆ ಅಂತ ... ಏನು ಕೇಳೋಕೆ ಬಂದೆ ಅಂದ್ರೆ .... ಏನು ಕೇಳೋಕೆ ಬಂದೆ ? ಛೆ ನಿಮ್ಮತ್ರ ಮಾತಾಡ್ತ ಮಾತಾಡ್ತ ನಾನು ಕೇಳಬೇಕು ಅಂದುಕೊಂಡ ವಿಷಯನೇ ಮರೆತು ಹೋಯಿತು .... ಇನ್ನೊಮ್ಮೆ ನೆನಪು ಮಾಡ್ಕೊಂಡು ಕೇಳೋಕೆ ಬರ್ತೇನೆ ... ಅಲ್ಲಿಯವರಗೆ ಟಾಟ ... ಇನ್ನೊಮ್ಮೆ ಸಿಗೋಣ :-)
@ Suresh nayak
neevu first hELi..isTu chennagi joke maaDlikke elli kalitri :-) :-) :-)
ಇದು ಖಂಡಿತ ಜೋಕ್ ಅಲ್ಲ ಮಾಳತಿಯವರೇ....ಹೃದಯಾಂತರಾಳದ ಮಾತು ... :-)
ನಿಮ್ಮ ಇಷ್ಟುದ್ದ ಪ್ರಳಬ್ದ ... ಅಯ್ಯೋ ... ಕ್ಷಮಿಸಿ ಪ್ರಭಂದ .... ಅದನ್ನು ಓದಿ ... ಹಾಗೆ ಮನಸ್ಸಲ್ಲಿ ಮೂಡಿದ ಭಾವನೆಗಳು :-)
:D
ಮಾಲತಿ ಅಕ್ಕಾಆಆಆ
ಸೂಪರ್ ಪೋಸ್ಟು ಮತ್ತೆ!. ಬಹುಶ ಅದಕ್ಕೆ ನಂಗೆ ನಿಮ್ ಪೋಸ್ಟ್ ಓದಿದ ಕೂಡ್ಲೇ ಒಂದು ಕಾಮೆಂಟ್ ಹಾಕನ ಅನ್ಸತ್ತೆ, ಇನ್ನು ಮಾತಾಡಿಸ್ತ ಇರ್ಬೇಕು ಅಂತಃ..!D
ಡಾಕ್ಟರ್ ಶಾಪಿನ ಪ್ರಕರಣ ಓದಿ ನಕ್ಕು ನಕ್ಕು ಸುಸ್ತಾದೆ. ಮೈ sympathy ಇಸ್ ವಿಥ್ ನಿಹಾ.
ಪೊಂಗಲ್ ಸಕತ್ ರುಚಿಕರವಾಗಿ ಕಾಣತ ಇದೆ. ನಿಮ್ಮನೆ ಯಾಕೆ ಅಷ್ಟು ದೂರ ಇದೆ ಅಂತ ಬೇಜಾರು ಮಾಡ್ಕೊತ ಇದ್ದೀನಿ ನಾನು. :)
ನಿಮ್ಮನ್ ಓದಿದರೆ ಬರೋ ಆಹ್ಲಾದದಿಂದಲೇ ನಿಮ್ಮ ಜೊತೆಗಿನ ಕ್ಷಣಗಳು ಎಷ್ಟು ಮಜವಾಗಿರುತ್ತೆ ಅಂತ ಊಹಿಸ್ಕೊಳ್ತಾ ಇದ್ದೀನಿ. ಮಾಲು ಮತ್ತೆ ನಿಹ ಇಬ್ರು ಲಕಿ ಮಕ್ಳು.
ಪ್ರೀತಿಯಿಂದ,
ಸಿಂಧು
ತುಂಬಾ ಮಾತುಗಾರರು ಬಸ್ಸಲ್ಲಿ ಸಿಕ್ಕು ತಲೆ ತಿನ್ನುವುದು ನಾನೂ ಅನುಭವಿಸಿದ್ದೇನೆ. ನಮ್ಮ ಜನ ಈಗಲೂ ವಿಜ್ಞಾನ ಎಂದರೆ ಹೆಚ್ಚು ಅಂಕ ಪಡೆದವರಿಗೆ, ಕಡಿಮೆ ಅಂಕ ಬರುವವರು ಮಾತ್ರ ಕಲೆ, ವಾಣಿಜ್ಯಕ್ಕೆ ಹೋಗಬೇಕು ಎಂಬ ಮೂಢನಂಬಿಕೆ ಇಟ್ಟುಕೊಂಡಿದ್ದಾರೆ.ಇತರ ಕ್ಷೇತ್ರದಲ್ಲೂ ಎಷ್ಟೊಂದು ಉದ್ಯೋಗ ಅವಕಾಶಗಳಿವೆ. ಇಂಜಿನಿಯರಿಂಗ್, ವೈದ್ಯಕೀಯ, ಮತ್ತೆ ಈಗ ಹೆಚ್ಚುತ್ತಿರುವ MBA ಗೀಳು, ಇವು ಮಾತ್ರ ಸುಖಜೀವನಕ್ಕೆ ದಾರಿ ಎಂಬ ಕುರುಡು ನಂಬಿಕೆ ಇನ್ನೂ ಹೋಗಿಲ್ಲ
thank you all for reading and commenting!!
@ Deepasmitha:
Niha joined her PU in Christ College, the principal wanted to meet us personally and even he was surprised at her choice of Arts..
We had been to National College Basavangudi to get admission application where one of the administrators mumbled'Arts aa' and literally threw the Arts application at us and also slapped another application on the table saying 'yaavudakkoo commerce application kooDa irali'..he was so rude!!esTu hurt aaytu gottaa aa dinaa??
She passed out of Christ with very good marks!! Now she is in NMKRV and enjoying!!
ತಡವಾಗಿ ಬಂದರೂ ಪೊಂಗಲ್ ಮತ್ತೆ ಗೋಡಂಬಿ ಸಿಹಿ ವಾಹ್ ವಾ... ಮಾಲ-T ಸಕ್ಕತ್ ಬರೀತೀರ ನೀವು ಘಟನಾವಳಿಗಳನ್ನು ಕಣ್ಣಮುಂದೆ ನೆಡೆದಂತೆ ತೆರೆದಿಡೋದು ಲೇಖನದ ಮೂಲಕ ಸುಲಭದ ಮಾತಲ್ಲ... ಆದ್ರೆ ನನಗೆ ಡೌಟು... ನಾನು ಬಂದಿದ್ದಾಗ ಶ್ರೀ ಸರೇ ಜಾಸ್ತಿ ..ಜಾಸ್ತಿ ಏನು..? ಅವರೇ ಮಾತನಾಡಿದ್ದು... ನಾನು.. ಸ್ಟನ್ನೂ... ಬ್ಲಾಗಲ್ಲಿ ..ಚಾಟಲ್ಲಿ ಚಟಪಟ ಅನ್ನೋ ಮಾಲ-T ಇದೇನಾ?? ಅಥವಾ ಬೇರೆನಾ ಅಂತ...ಹಹಹಹ ಹ್ಯಾಪಿ ಸಂಕ್ರಾಂತಿ...ಲೇಟಾದ್ರೂ..ಸ್ವೀಟ್...
Dear Azad Bhai!!
i had warned u many times before...i dont talk much antaa...sri, malu , niha jate maatra vaTa vaTa...not even in my parents house do i talk much believe me!!
many of my friends who met me are dissappointed with this nature of mine, par kyaa karen...
odidakke commentisidakke thank you with a smile
:-)
ms
Post a Comment