ಇವತ್ತು ಬೆಳಿಗ್ಗೆ ಬೆಳಿಗ್ಗೆ ನನ್ನ ಮಿಕ್ಸಿ ಢಮಾರ್. ಅರ್ಥಿಂಗ್ ಲೀಕೆಝ್ ಅಂತೆ . ಹಬ್ಬದ ದಿನ ನಾವು ಅಕ್ಕಿ ತಿಂಡಿ ಅಂದರೆ ಅಕ್ಕಿಯಿಂದ ಮಾಡಿದ ಪದಾರ್ಥ ಏನಿದ್ದರೂ ಮಾಧ್ಯಾಹ್ನದ ಪೂಜೆ ಮುಗಿದು, ನೈವೈದ್ಯ ಎಲ್ಲ ಮುಗಿದ ಮೇಲೆ. ನಾಳೆ ವಿಜಯದಶಮಿ. ಹೇಗೂ ಉಪ್ಪಿಟ್ಟು ಅವಲಕ್ಕಿ ಅಂತ ಇವತ್ತು ರವಾ ಇಡ್ಲಿ ಮಾಡಿದೆ. (ಅಳತೆ ಒಂದು ಕಪ್ ಉದ್ದಿನಬೇಳೆಗೆ ಮೂರು ಕಪ್ ಬಾಂಬೆ ರಾವೆ.)
ಇಡ್ಲಿಗೆ ಸ್ವಲ್ಪ ತೊವ್ವೆ, ಆಲೂಗಡ್ಡೆ-ಟೋಮೆಟೋ ಪಲ್ಯ (ಹಬ್ಬದಲ್ಲಿ ನೀರುಳ್ಳಿ-ಬೆಳ್ಳುಳ್ಳಿ ಬಳಸಲ್ಲ) ಮಾಡ್ದೆ. ಚಟ್ನಿ ಮಾಡಲಿಕ್ಕೆ ಮಿಕ್ಸಿ ಆನ್ ಮಾಡಿದಾಗ ಮಿಕ್ಸಿ ಸುಟ್ಟಿಹೋಗಿ ಬಿಡ್ತು. ಇವತ್ತು ಬ್ರೆಕ್ ಫಾಸ್ಟ್ ಸ್ವಲ್ಪ ಲೇಟ್. ನಮಗೆ ಬೇಗ ತಿಂಡಿ ತಿಂದು ಅಭ್ಯಾಸ. ಇವತ್ತು ಕ್ಲೀನೀಂಗ್, ಸ್ನಾನ, ಪೂಜೆ ಅಂತ ಸ್ವಲ್ಪ ಲೇಟ್ ಆಗಿತ್ತು ಆಗಲೇ. ಚಟ್ನೀ ಇಲ್ಲ ಅಂತ ಶ್ರೀಕಾಂತ ರಾಯರು ಸ್ವಲ್ಪ ಡಲ್ ಆದ ಹಾಗೆ ಕಂಡಿತು. ಅದಕ್ಕೆ ಇನ್ನೂ ಹದಿನೈದು ನಿಮಿಷ ಕಾದರೆ ಒರಳು/ರುಬ್ಬೋಕಲ್ಲು ಕ್ಲೀನ್ ಮಾಡಿ ಚಟ್ನೀ ಮಾಡಿಕೊಡ್ತೇನೆ ಅಂದೆ.ರುಬ್ಬುವ ಕಲ್ಲನ್ನು ಉಪಯೋಗಿಸದೆ ಮೂರು ನಾಲ್ಕು ತಿಂಗಳು ಆಗಿತ್ತು. ಹಸಿವೆಯಿಂದ ಕಾಯುವ ಸ್ಥಿತಿಯಲ್ಲಿ ಇರಲಿಲ್ಲ ಯಾರೂ. ಅದಕ್ಕೆ ಇನ್ನೊಂದು suggestion ಮುಜುಗರದಿಂದ ಮುಂದಿಟ್ಟೆ. ಮುಜುಗರ ಯಾಕೆಂದ್ರೆ ಹಬ್ಬ ಆಗಿ ಹೋಟಲ್ ನಿಂದ ತರಿಸುವುದಾ ಅಂತ ಅಷ್ಟೆ!! ಅದಕ್ಕೂ ಮಾಲವಿಕ ನ ಬಳಿ ಸಿದ್ದ ಉತ್ತರ ಇರುತ್ತೆ. ’ಅಮ್ಮ’ ನಾವು ಹಿಂದೆ ಎರಡು ಸಾರಿ ಹಬ್ಬಕ್ಕೆ ತಿರುಗಾಡ್ಲಿಕ್ಕೆ ಹೋಗಿದ್ವಿ..ಆವಾಗೆಲ್ಲ ಹೋಟಲ್ ನಲ್ಲೇ ತಾನೆ ತಿಂದಿದ್ದು’ ಅಂತ ಹೇಳಿದ್ಲು. ಹಾಗಾಗಿ ಶೆಣೈ ಮಾಮನವರಿಗೆ- ಮನೆ ಬಳಿ ಇರುವ ದರ್ಶಿನಿಯಿಂದ ವಡಾ ತನ್ನಿ. ಅದರ ಜತೆಗೆ ಚಟ್ನೀ ಸಿಗುತ್ತೆ ಅಂದೆ. good idea ಅಂತ ಶ್ರೀಕಾಂತ ಹೊರಟು ಬಿಟ್ಟರು. ಅಷ್ಟರಲ್ಲಿ ನೀಹಾ ಫೋನ್ ಮಾಡಿದ್ಲು ಹೆಗ್ಗೋಡಿನಿಂದ. ಅವಳಿಗೆ ಇಲ್ಲಿನ ಕತೆ ಹೇಳಿ ನಗಿಸಿದೆ. ಅದಕ್ಕೆ ಪ್ರತಿಯಾಗಿ ಅವಳು ’ಅಗೈನ್ the day is saved by mommy' ಅಂದ್ಲು. by the way ಅವಳು ಅಲ್ಲಿ ಎಂಜಾಯ್ ಮಾಡ್ತಿದ್ದಾಳೆ ಮತ್ತು ಮುಂದಿನ ವರ್ಷ ನಾನೂ ಸಂಸ್ಕೃತಿ ಶಿಭಿರದಲ್ಲಿ ಪಾಲ್ಗೊಳ್ಳಬೇಕಂತೆ. :-) (ಶಿಭಿರ or ಶಿಬಿರ ಯಾವ ಪದ ಸರಿ??= confusion)
(ಅಂದ ಹಾಗೆ ಈ ಸಲ ಶ್ರೀಕಾಂತ ಗೆ -ರಜೆ ಇದೆ, ಎಲ್ಲಾದರೂ ಹೋಗುವ ಅಂದ್ರೆ ಕಿವಿ ಮೇಲೆ ಹಾಕ್ಕೋಳಿಲ್ಲ. ಮಾಲವಿಕ ಬೇರೆ ಕಾಲಿಗೆ ನೋವು ಮಾದಿಕೊಂಡು ಕೂತಿದ್ದಾಳೆ. ಬಿದ್ದು ಕಾಲಿನ- ankle ligament strain ಆಗಿದೆ ) :-(
(ಅಂದ ಹಾಗೆ ಈ ಸಲ ಶ್ರೀಕಾಂತ ಗೆ -ರಜೆ ಇದೆ, ಎಲ್ಲಾದರೂ ಹೋಗುವ ಅಂದ್ರೆ ಕಿವಿ ಮೇಲೆ ಹಾಕ್ಕೋಳಿಲ್ಲ. ಮಾಲವಿಕ ಬೇರೆ ಕಾಲಿಗೆ ನೋವು ಮಾದಿಕೊಂಡು ಕೂತಿದ್ದಾಳೆ. ಬಿದ್ದು ಕಾಲಿನ- ankle ligament strain ಆಗಿದೆ ) :-(
ಹಾಗೆ ಇವತ್ತು ಬೆಳಿಗ್ಗೆ ನಮಗೆ ಪೊಗದಸ್ಟು ಬ್ರೇಕ್ ಫಸ್ಟ್ ಆಫ್ ಬೆಣ್ಣೆಯನ್ನು ನಾಚಿಸುವಂತ ಮೃದುವಾದ ಇಡ್ಲಿ, ಹೋಟಲ್ ನ ಮೂರು ವಡೆ.ಅದಕ್ಕೆ ನಂಚಿಕೊಳ್ಳಲು ಚಟ್ನಿ,(ಶ್ರೀಕಾಂತ ವಡೆ ಜತೆ ಹೋಟಲ್ ನವರು ಕೊಡುವ ಸಾಂಬಾರು ಬೇಡ, ಜಾಸ್ತಿ ಚಟ್ನೀ ನೆ ಕೊಡಿ ಅಂದುಬಿಟ್ಟು extra ಚಟ್ನಿ ತೆಗೆದುಕೊಂಡು ಬಂದಿದ್ದರು), ಆಲೂಗಡ್ಡೆ ಪಲ್ಯ ಮತ್ತು ತೊವ್ವೆ.
ಮಧ್ಯಾಹ್ನ ಬೂದುಗುಂಬಳಕಾಯಿಯ ಕೊದ್ದೆಲ್ (ಸಿಹಿ-ಹುಳಿ-ಖಾರ..ಚೆನ್ನಾಗಿರುತ್ತೆ ಮಾತ್ರವಲ್ಲ ದಿನವಿಡಿ ಕೈ ಘಂ ಎನ್ನುತ್ತೆ) :-), ಬದನೆಕಾಯಿ-ನುಗ್ಗೆಕಾಯಿ ಪಲ್ಯ, ಸಾರು ಮತ್ತು ಶ್ಯಾವಿಗೆ ಪಾಯಸ.
ನಾನು ರುಬ್ಬುವ ಕೆಲಸ ಒಂದು ಬಿಟ್ಟು ಅಡಿಗೆ ಮಾಡಿ ಮುಗಿಸಿದೆ. ಶ್ರೀಕಾಂತ ಮತ್ತು ಮಾಲವಿಕ ಹೋಗಿ ಹೊಸ ಮಿಕ್ಸಿ ಮಾತ್ರವಲ್ಲ ಅದರ ಜತೆ microwave ಸಹ ತೆಗೆದುಕೊಂಡು ಬಂದಿದ್ದಾರೆ. grand ಅಲ್ವಾ? ಹೊಸ ಮಿಕ್ಸಿನಲ್ಲೇ ರುಬ್ಬಿದ್ದು ಬೂದುಕುಂಬಳ ಕೊದ್ದೇಲಿಗೆ. :-)
ಗಟ್ಟಿಯಾಗಿ ಊಟ ಹೊಡೆದು, ನಾನು ಅಡಿಗೆ ಮನೆ ಕ್ಲೀನಿಂಗ ಕೆಲಸ ಮುಗಿಸಿ ಬರುವಷ್ಟರಲ್ಲಿ, ಅಪ್ಪ-ಮಗಳು ಗೊರಕೆ ಹೋಡಿತಿದ್ದಾರೆ. ನಿಹಾ ಇದ್ರೆ ನಾನು ಅವಳು ಹೊರಗಡೆ ರೂಮ್ ನಲ್ಲಿ ಕುಳಿತು ನಗುವುದೋ, ಅವಳು ಯಾರದ್ದಾದ್ರೂ ಮಿಮಿಕ್ರಿ ಮಾಡುವುದೋ, ಚಿತ್ರ ಬರೆಯುದು ಏನಾದ್ರು ಮಾಡ್ತಾ ನಾವು ಹರಟೆ ಹೊಡಿತೀವಿ. ಅವಳಿಲ್ಲದೆ ಬೇಜಾರು. ಅದಕ್ಕೆ ನಿಮ್ಮ ತಲೇನಾದ್ರೂ ತಿನ್ನುವ ಅಂತ ಇದನ್ನೆಲ್ಲ ಬರೀತಿದ್ದೀನಿ. :-)
ನಿಹಾ ಶಿಭಿರಕ್ಕೆ ಹೊರಡುವ ಮುನ್ನ ’ಅಮ್ಮ, ಸುಮಾರು ದಿನ ಆಯ್ತು ಕ್ಯಾರೆಟ್ ಹಲ್ವ ಮಾಡಿಲ್ಲ. ಇವತ್ತು ಮಾಡಿಕೊಡ್ತಿಯ’ ಅಂತ ಮುದ್ದು ಮುದ್ದಾಗಿ ಕೇಳಿದ್ರೆ, ನಾನು ಇಲ್ಲ ಅಂತ ಹೇಳಕ್ಕಾಗುತ್ಯ್ರೆ??
ಹಾಗಾಗಿ ನಿಮ್ಮ ಮುಂದಿದೆ ಕ್ಯಾರಟ್ ಹಲ್ವ. ಫೋಟೊ ನಿಹಾ ನೆ ತೆಗೆದಿದ್ದು.
1/2 ಕೆ.ಜಿ ಕ್ಯಾರಟ್ ತುರಿದು ಗ್ಲಾಸ್ ಅಥವ ಸಣ್ಣ bowl ನಿಂದ ಅಳೆದು ಬಾಣಲೆಯಲ್ಲಿ ಹಾಕಿ. ಅರ್ಧ ಲೀಟರ್ ಹಾಲು, ತುರಿದ ಕ್ಯಾರಟ್ cover ಆಗುವಷ್ಟು ಹಾಕಿ ಬೇಯಿಸಿ. ಹಾಲು ಆವಿಯಾದಮೇಲೆ, ತುರಿದ ಕ್ಯಾರಟ್ ನ ಅರ್ಧ ಅಳತೆ ಸಕ್ಕರೆ ಬೆರೆಸಿ (ಉದಾಹರಣೆಗೆ ತುರಿದ ಕ್ಯಾರಟ್ ನಾಲ್ಕು ಗ್ಲಾಸ್ ಇದ್ದಲಿ, ಸಕ್ಕರೆ ಎರಡು ಗ್ಲಾಸ್.ಸ್ವಲ್ಪ ಕಡಿಮೆ ಹಾಕಿದ್ರೂ ನಡಿತದೆ. ಗಟ್ಟಿಯಾಗುತ್ತ ಬಂದ ಹಾಗೆ ತುಪ್ಪದಲ್ಲಿ ಹುರಿದ ಗೋಡಂಬಿ-ದ್ರಾಕ್ಷಿ ಹಾಗೂ ಏಲಕ್ಕಿ ಪುಡಿ ಬೆರೆಸಿ. ಒಲೆಯಿಂದ ಕೆಳಗಿಳಿಸಿ ಎರಡು ದೊಡ್ಡ ಸ್ಪೂನ್ ತುಪ್ಪ ಬೆರೆಸಿ. ಬಿಸಿ ಬಿಸಿ ತಿನ್ನಬಹುದು ನಿಹಾ ಹಾಗೆ ಅಥವ ಬಿಸಿ ಹಲ್ವದ ಮೇಲೆ vanilla icecream ಹಾಕಿ ತಿನ್ನಬಹುದು ಮಾಲವಿಕನ ಹಾಗೆ. ನಾನು?? ಎರಡು ದಿನ ಬಿಟ್ಟು- ಉಳಿದ್ರೆ ತಿನ್ನುತ್ತೇನೆ ಅಷ್ಟೆ. ಮತ್ತೆ ಶ್ರೀಕಾಂತ - ಬಿಸಿ ಯಿದ್ದಾಗ ಒಮ್ಮೆ, ತಣ್ಣಗಾದ ಮೇಲೆ ಇನ್ನೊಂದು ಸಲ..ಹೀಗೆ ಕ್ಯಾರಟ್ ಹಲ್ವ ತಿನ್ನುವ ಪರಿ
ನನ್ನ ಕುಟುಂಬದಲ್ಲೆಲ್ಲ ನಾನು ಮಾಡಿದ ಕ್ಯಾರಟ್ ಹಲ್ವ ನೇ ಎಲ್ಲರೂ ಇಷ್ಟ ಪಡೋದು. ನಮ್ಮ ಆಫಿಸ್ ನಲ್ಲಿ ಪಂಜಾಬ್ ನಿಂದ ಒಬ್ಬರು ಬಂದಿದ್ದರು. ಅವರಿಗೋಸ್ಕರ ನಾನು ಕ್ಯಾರಟ್ ಹಲ್ವ ಮಾಡಿದ್ದೆ. ಅವರು ಹೀಗೆ ಹೇಳಿದ್ರು , ’we always prepare carrot halwa there but this halwa is the best one i have tasted' ಅಂದಾಗ ನಾನು ಹಾರುವುದೊಂದೆ ಬಾಕಿ
ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು ಒಂದು ದಿನ ಮುಂಚಿತವಾಗಿ.
ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು ಒಂದು ದಿನ ಮುಂಚಿತವಾಗಿ.
:-)
9 comments:
Malathi, I just love the way you manage any situation. Festive day and the mixie breaks down, you still have an instant solution! Happy festival to you too :-)
ದಸರಾ ಶುಭಾಶಯಗಳು.
ಹಬ್ಬಕ್ಕೆ ಒಳ್ಳೇ ಸ್ವಾದಿಷ್ಟ ಬರಹ.
;-) thank you Radhika and Badari
Have a great festival
malathi S
ಮೆಗೆಲೆ ಬಾಯ್ಲೆನೆ ಕ್ಯಾರೆಟ ಹಲ್ವ ಕೆಲ್ಲ ಆಜಿ :)
ನಿಮ್ಮ ಲೇಖನ ಓದ್ತಾ ಇದ್ರೆ ಪತ್ರವೊಂದನ್ನು ಓದಿದ ಹಾಗೆ ಇರುತ್ತೆ. ಅದರಲ್ಲಿ ಎಲ್ಲವೂ ಇರುತ್ತೆ :)
@ Sandeep Kamath:
ಬಾಮ್ಣಾಕ್ ಲಾಯ್ಕ್ ಜಾಲ್ಲೆವೆ ಹಲ್ವಾ??
i was really bored so just went on typing..and posted it
:-)
ms
ಪ್ರೀತಿಯ ಮಾಲ್ತಕ್ಕಾ
ಮಾನವಮಿಯ ಈ ಪೋಸ್ಟು ಸೂಪರ್ರಾಗಿದೆ. ನೋಡಿ ಎಂತ ಮಜಾ.. ಮಿಕ್ಸಿ ಹೋಗಿದ್ದಕ್ಕೆ ಬೆಳ್ಗೆ ತಿಂಡಿ ಹೋಟೆಲಿಂದ! ರಿಪೇರಿಗೇಂತ ಕಳ್ಸಿದ್ರೆ ಹೊಸ ಮಿಕ್ಸಿ, ಜೊತೆಗೆ ಓವನ್! ಯಾರಿಗುಂಟು ಈ ಭಾಗ್ಯ.
ನಿಮ್ಮ ಕೊದ್ದೇಲು ತಿನ್ನುವ ಆಸೆಯಾಗ್ತಿದೆ. ನೀವು ಡೀಟೈಲ್ ಆಗಿ ಕೊಟ್ಟಿರೋ ಕ್ಯಾರೆಟ್ ಹಲ್ವಾ ಸಕ್ಕತ್ ಅನಿಸ್ತಿದೆ. ಆದ್ರೆ ನಾನು ಕ್ಯಾರೆಟ್ ಹಲ್ವಾ ತಿನ್ನೋಲ್ಲ ಮಾಡೋದೂ ಇಲ್ಲ. :) (ಬಿಟ್ಟುಬಿಟ್ಟಿದೀನಿ)
ಸಂದೀಪ್ ಅವರು ಬರ್ದ ವಿಷ್ಯ ಸರಿ. ನಿಮ್ಮ ಪೋಸ್ಟ್ ಓದ್ತಾ ಇದ್ರೆ ಅಕ್ಕನೊಬ್ಬಳು ನಂಗೆ ಹೇಳಕ್ಕೇ ಅಂತಲೇ ಬರ್ದಿರೋ ಪತ್ರದ ಹಾಗೆ ಇರತ್ತೆ.
ಬರೀತಾ ಇರಿ. ನಾನು ಓದಲು ಕಾಯ್ತಾ ಇರ್ತೇನೆ.
ಪ್ರೀತಿಯಿಂದ,
ಸಿಂಧು
ಪ್ರಿಯ ಸಿಂಧು!!
ಖಂಡಿತ ಒಂದು ಸಲ ನಿಮಗೋಸ್ಕರ ಕೊದ್ದೇಲ್ ಮಾಡುತ್ತೇನೆ,
thanks for all the inspiring words
love
:-)
ಮಾಲತಿ ಎಸ್.
ಕ್ಯಾ-ರೇಟ್ ಹಲ್ವಾ...???
ನನಗೆ ಬೇಕು ಅದಕ್ಕೇ ಕೇಳಿದ್ದು...ಹಹಹ ಯಮ್ಮಿ ಯಮ್ಮಿ....
ಕ್ಯಾರಟ್ ಹಲ್ವಾ?
ನಿಮಗೆ ಅಲ್ವಾ?
ಖಂಡಿತ..ಇಲ್ಲಿ ಬಂದಾಗ!!!
:-)
ಎಮ್ ಎಸ್
Post a Comment