August 24, 2012

Ladies ONLY

(ಕ್ಷಮಿಸಬೇಕು . ಕಣ್ತಪ್ಪಿನಿಂದ ಹಿಂದಿನ ವರ್ಷ ಮೇ ನಲ್ಲಿನ ಪೋಸ್ಟ್ no 1 ಪೊಸ್ಟ್ ಅಂತ ಬಂದುಬಿಟ್ಟಿದೆ..ಇನ್ನೊಮ್ಮೆ ಓದಲು ಏನೇನೂ ಅಡ್ಡಿಯಿಲ್ಲ..:-)))
ಒಬ್ಬಳೆ ಜರ್ನೀ ಮಾಡುವಾಗ ರೈಲಿನ on - ಲೈನ್ ಬುಕಿಂಗ್ ನಲ್ಲಿ ಲೇಡೀಸ್ ಅಂತ ಕೊಟ್ಟರೆ ಬೋಗಿಯ ಆ ಸೆಕ್ಷನ್ ನಲ್ಲಿ ಮಹಿಳೆಯರಿಗಾಗೇ ಮೀಸಲಿಡುತ್ತಾರೆ. ಇಲ್ಲಿನ ಅನುಭವಗಳು ಮಜವಾಗಿರುತ್ತೆ. ಇತ್ತೀಚಿಗೆ ನಾನು ಬೆಳಗಾವಿಗೆ ಬೆಳಗ್ಗಿನ ರೈಲಿನಲ್ಲಿ ಹೊರಟಿದ್ದೆ. ಆಗಿನ ಅನುಭವಗಳ ಬಗ್ಗೆ ಸುಮ್ಮನೆ ಒಂದಿಷ್ಟು: 

window seat

ಬಾಡಿ ಫಿಟ್ಟಿಂಗ್ ಜೀನ್ಸ್ ಮತ್ತು ಸ್ಲೀವ್ ಲೆಸ್ಸ್ ಕುರ್ತಿ ಹಾಕ್ಕೊಂಡು ಬಂದ ಮಹಿಳೆ. ಪಟ ಪಟನೆ ಸ್ಯೂಟ್ ಕೇಸ್ ನೆಲ್ಲ ಬರ್ತ್ ಕೆಳಗಡೆ ಇಟ್ಟು, ಲ್ಯಾಪ್ ಟಾಪ್ ಹೊರಗಡೆ ತೆಗೆದು ಅವಳ ಕೆಲಸದಲ್ಲಿ ನಿರತಳಾದಳು. ಅವಳ ಜತೆ ಇದ್ದ ಪುಟ್ಟ ಮಗಳನ್ನೂ ಮರೆತು. ನನ್ನದು ಯಾವಾಗಲೂ ಕಿಟಕಿ ಬಳಿ ಸೀಟ್. ನಾನು ಚಾಕೋಲೇಟ್ ತಿಂದು ಅದರ wrapper ನಿಂದ ಗೊಂಬೆ ಮಾಡ್ತಾ ಇದ್ದೆ. ಆ ಪುಟ್ಟ ಮಗು ಅದನ್ನು ನೋಡ್ತಾ ಇತ್ತು. ಕಿಟಕಿ ಹತ್ತಿರದ ಜಾಗ ತೋರಿಸಿ, ಇಲ್ಲಿ ಬಾ ಅಂತ ಸನ್ನೆ ಮಾಡಿದೆ. ಅವಳು ತನ್ನ ಅಮ್ಮನ ಮುಖ ನೋಡಿದಳು. ಅಮ್ಮನಿಗೆ ಈ ಲೋಕದ ಪರಿವೇ ಇರಲಿಲ್ಲ.ಆಮೇಲೆ ಅಮ್ಮನ ಕೈ ಅಲ್ಲಾಡಿಸುತ್ತ ’ಮೊಮ್ಮಿ, ಆಂಟಿ ಬಳಿ ಹೋಗಲಾ’? ಅಂದಳು. ಅದಕ್ಕೆ ಅವಳ ಅಮ್ಮ ಸಿಡುಕಿ ’ಚಿನ್ನು ಹೌ ಮನಿ ಟೈಮ್ಸ್ ಐ ಟೋಲ್ಡ್ ಯು ನಾಟ್ ಟು ಟಾಕ್ ಇನ್ ಕನ್ನಡ’ ಅಂದಾಗ ಮಗು ಬೆಪ್ಪಾಗಿ ’ಮೊಮ್ಮಿ ಕ್ಯಾನ್ ಐ ಸಿಟ್ ನಿಯರ್ ಆಂಟಿ’ ಅಂದಾಗ ಆ ಅಮ್ಮ ನನ್ನನ್ನು ಒಂದು ಸಲ ಮೇಲಿನಿಂದ ಕೆಳಗೆ ನೋಡ್ತಾ ಇರಬೇಕಾದ್ರೆ ನಾನು ಬೇಗ ಬೇಗ ’ಕ್ಯಾನ್ ಐ ಆಫರ್ ಹರ್ ಎ ಚಾಕೊಲೇಟ್ ’ಅಂತ ಕೇಳಿದೆ. ನನ್ನ ಸಂಪೂರ್ಣವಾಗಿ ಅವಲೋಕಿಸಿ, ನಾನು ಸೇಫ್ ಅಂತ ತಿಳಿದು ಮಗಳಿಗೆ ’ಗೋ’ ಅನ್ನುವ ಆದೇಶವಿಟ್ಟಳು.ಮಗು ನನ್ನ ಬಳಿ ಬಂದ ಮೇಲೆ ಅವಳಿಗೆ eclairs ಚಾಕೊಲೇಟ್ ಕೊಟ್ಟು, ಅವಳ ಹೆಸರು ಕೇಳಿದೆ. ಚಿನ್ಮಯಿ -ಹೆಸರಿನಷ್ಟೆ ಮುದ್ದಾಗಿದ್ದ ಮುದ್ದು ಮಗು’ ಅಜ್ಜಿ ಮನೆಗೆ ಹುಬ್ಬಳ್ಳಿಗೆ ಹೊರಟಿದ್ದಳು. ಅಷ್ಟರೊಳಗೆ ಚಿನ್ಮಯಿ ಅಮ್ಮನ ಅಫಿಸ್ ಕಲೀಗ ಬಂದರು, ಅವರ ಆಫಿಸ್ ನ ಕೆಲವು ಲಾಸ್ಟ್ ಮಿನಿಟ್ ಡೀಟೈಲ್ಸ್ ಡಿಸ್ಕಸ್ ಮಾಡಲು. ಅವರು ಅದೇ ಟ್ರೈನ್ ನ ಬೇರೆ ಕಂಪಾರ್ಟಮೆಂಟ್ ನಲ್ಲಿದ್ದಾರೆ ಅಂತ ಅವರ ಮಾತುಕತೆಯಿಂದ ತಿಳಿಯಿತು.

ಇನ್ನು next passenger, ಕಾಲೇಜು ಹುಡುಗಿ ಅನ್ನಿಸುತ್ತೆ, ಬಂದು ಧಡ ಧಡನೆ ಮೇಲಿನ ಬರ್ತ್ ಮೇಲೆ ಅವಳ ಬ್ಯಾಗ ಬಿಸಾಕಿ, ತಾನು ಚಕಚಕನೆ ಮೇಲೆ ಹತ್ತಿ, ಬ್ಯಾಗಿನಿಂದ ಬೆಡ್ ಶೀಟ್ ತಗೆದು, ಮುಸುಕು ಹಾಕಿ ಮಲಕ್ಕೊಂಡೆ ಬಿಟ್ಲು. :-(

ನಾಲ್ಕೈದು ಸಲ ’ಅಲ್ಲಾಹ್ ಹಾಫೀಜ’ ಹೇಳಿನೂ ಟ್ರೈನ್ ಪಕ್ಕನೆ ನಿಂತ ವಯಸ್ಸಾದ ಅಜ್ಜ, ಅಜ್ಜಿಯನ್ನು ಬಿಟ್ಟು ಹೋಗಲು ಮನಸ್ಸು ಬಾರದೆ ಚಡಪಡಿಸುತ್ತಿದ್ದ.  ಅಭಿ ಆಪ ಘರ್ ಜಾಒ, ಚಿಂತಾ ನಕ್ಕೋ ಕರೂ’ ಅಂತ ಹೇಳ್ತಾನೆ ಇದ್ರು ಅಜ್ಜಿ. ಆಮೇಲೆ ಸ್ವಲ್ಪ ದನಿ ಏರಿಸಿ ಮನೆಗೆ ಹೋಗಲು ಹೇಳಿದಾಗ ಅವರು ಹ್ಯಾಪ್ ಮೋರೆಹಾಕೊಂಡು ’ಫೋನ್ ಕರೋ’ ಪಹುಂಚನೆ ಕೆ  ಬಾದ್ ಫೋನ್ ಕರೋ’ ಅಂತ ಬೋಗಿಯಿಂದ ದೂರ ಕಂಬದ ಮರೆಯಲ್ಲಿ ನಿಂತ ಅವರು ನನಗೆ ಕಾಣಿಸುತ್ತಿದ್ದರು. ಕೆಲ ನಿಮಿಶದ ನಂತರ ನನ್ನ -ಅಜ್ಜಿಯ ಕಣ್ಣು ಸಂಧಿಸಿದಾಗ ಮುಗುಳ್ ನಕ್ಕೆ. ಅದಕ್ಕೆ ಅವರು ’ಮೊದಲ ಸಲ ಒಬ್ಬಳೆ ಮುಂಬಯಿಗೆ ಹೊರಟಿದ್ದೇನೆ- ಮಗನ ಮನೆಗೆ, ನೀವೆಲ್ಲಿ ’ ಅಂತ ಕೇಳಿದ್ರು. ಅದಕ್ಕೆ ನಾನು ಬೆಳಗಾವಿಗೆ ಇಳಿಯುವುದಾಗಿ ಹೇಳಿ,ನಮ್ಮ ಕಂಪಾರ್ಟ್ ಮೆಂಟ್ ನಲ್ಲಿರುವ ಇತರೆ ಎರಡು ಹೆಂಗಸರ ಕಡೆ ಬೆಟ್ಟು ಮಾಡಿ, ಅವರೂ ಮುಂಬಯಿಗೆ ಹೊರಟಿದ್ದಾರೆ, ಹೆದರಿ ಕೊಳ್ಳುವ ಅವಶ್ಯಕತೆ ಇಲ್ಲ ಅಂದೆ. ಅವರಿಗೆ ಸಮಾಧಾನ ಆಗಿದ ಹಾಗೆ ಅನ್ನಿಸಿತು.

ನಾಲ್ಕನೆ ಪ್ಯಾಸೆಂಜರ್, ಇನ್ನೂ ಪ್ಲಾಟ್ ಫಾರ್ಮ್ ಮೇಲೆ ನಿಂತು ಅವಳ ಸ್ನೇಹಿತರ-ಸಂಬಂಧಿಕರ ಹಿಂಡಿನಲ್ಲಿ ಮಾತು ನಗುವಿನಲ್ಲಿ ತೊಡಗಿದ್ದಳು. ಟ್ರೈನ್ ನ ಸಿಳ್ಳೆ ಹೊಡೆದಾಗ ಆಕೆಯ ದೊಡ್ಡ ಕಣ್ಣುಗಳಲ್ಲಿ ದೊಡ್ಡ ದೊಡ್ಡ ಗಾತ್ರದ ಕಣ್ಣೀರು. ಅಲ್ಲಿದ್ದ ಹಿರಿಯರ ಕಾಲಿಗೆ ಎರಗಿ, ಕಂಪಾರ್ಟ್ ಮೆಂಟ್ ಒಳಗೆ ಬಂದು ಟ್ರೈನ್ ಹೊರಟ ಮೇಲೆ ಕೈ ಯನ್ನು ಅಷ್ಟು ಉದ್ದ ಹೊರಗೆ ಹಾಕಿ ಕೈ ಅಲ್ಲಾಡಿಸಿದ್ದೆ ಅಲಾಡಿಸಿದ್ದು. ಕರ್ಚೀಫ್ ನಿಂದ ಕಣ್ಣೂ ಮೂಗು ಒರೆಸಿ, ಅವಳ ಚೀಲಗಳನ್ನೆಲ್ಲ ನೀಟಾಗಿ ಇಟ್ಟಳು.ಒಬ್ಬ ಹುಡುಗಿಗೆ ಅಷ್ಟೊಂದು ಲಗ್ಗೇಜ್, ಸುಮಾರು ಏಳೆಂಟು ಬ್ಯಾಗ್ ಗಳಿದ್ದವು- ನನಗೆ ಅಚ್ಚರಿ ತಂದಿತು. ಅವಳೇ ಮೊದಲು ಮಾತಿಗೆ ಆರಂಭಿಸಿದಳು’ ಎಲ್ಲಿಗೆ ಹೊಂಟಿರ್ರೀ ಆಂಟಿ’?? ನಾನು- ಬೆಳಗಾಂ. ನಂದು ಧಾರವಾಡರೀ. ಆದರೆ ನಾನು ಮುಂಬಯಿಗೆ ಹೊಂಟೇನ್ರೀ. ನನಗೆ ಅಲ್ಲಿ ಕೆಲ್ಸ್ ಸಿಕ್ಕಿದೆ ರೀ. ನಾನು ನರ್ಸ್ ರೀ ಅಂತ ಒಂದೆ ಉಸುರಿಗೆ ಹೇಳಿ ಬಿಟ್ಲು. ಉದ್ದ ಜಡೆಯ, ಉದ್ದ ಮೂಗಿನ ಹುಡುಗಿ ಕ್ಯೂಟ್ ಆಗಿದ್ದಳು . ಆಮೇಲೆ ಮೊಬೈಲ್ ನಲ್ಲಿ ಎಸ್ ಎಮ್ ಎಸ್ ಶುರು ಹಚ್ಕೊಂಡ್ಲು.

ಇನ್ನೋರ್ವ ಹೆಂಗಸಿನ ಪತ್ತೇನೆ ಇರಲಿಲ್ಲ ಒಟ್ಟು ಆರು ಸೀಟ್ ಇರುತ್ತವೆ.

ಟ್ರೈನ್ ಬಿಟ್ಟಿದ್ದರಿಂದ, ನಮ್ಮ ಎದುರಿನ ಅಂದರೆ ಅಡ್ಡಕ್ಕೆ ಇರುವ ಸೀಟ್ ನಲ್ಲಿ ಒಬ್ಬ ಜವಾನ್ ಬಂದು ಕೂತಿದ್ದ. ಸೀಟು ಹುಡುಕುತ್ತಿರುವವರ, ಲಾಸ್ಟ್ ಮಿನಿಟ್ ಟ್ರೈನ್ ಬಿಟ್ಟಿದ್ದಾಗ ಸಿಕ್ಕ ಬೋಗಿಯಲ್ಲಿ ಹತ್ತಿಕೊಂಡವರ ಗಲಾಟೆ ಸಾಕಷ್ಟು ಇತ್ತು. ಅಷ್ಟರಲ್ಲಿ ಚಿನ್ನುಗೆ toilet ಅವಸರ ಆಯಿತು. ಅಮ್ಮನಿಗೆ ಹೇಳಿದಳು. ಅದಕ್ಕೆ ಅವಳ ಅಮ್ಮ ಈ ಸಲ ಕನ್ನಡದಲ್ಲೇ ಅವಳನ್ನು ಬೈದಳು. ’ಚಿನ್ನು ಎಷ್ಟು ಸಳ ಹೇಳೇನಿ, ಇಂಗ್ಲಿಶ್ಲೇ ಮಾತಾಡು ಅಂತ, ಅರ್ಥ ಆಗಂಗಿಲ್ಲೇನು? ಅಂತ ಜಬರಿಸಿ ಟಾಯ್ಲೆಟ್ ಗೆ ಕರೆದುಕೊಂಡು ಹೋದ್ಲು. ವಾಪಸ್ ಬಂದ ಮೇಲೆ ಆ ಜವಾನ್ ಜತೆ ಮಾತು ತೆಗೆದಳು. ಅವನ ಬ್ಯಾಗ್ ಅವಳ ಕಾಲಿಗೆ ತಗುಲಿದ್ದರಿಂದ, ಅವಳು ’ಭೈಯ್ಯ ಸಾಮಾನ್ ಊಪರ್ ರಖ್ಕೋ’ ಅಂದಳು. ಅವನು ಬ್ಯಾಗ್ ನ್ನು ಆಚೆಗೆ ಸರಿಸಿ’ ಅಭಿ ಬೇಟಿ ಕೆ ಸಾಥ್ ಕೌನ್ ಸಿ ಭಾಷಾ ಮೇ ಬಾತ್ ಕರ್ ರಹೆ ಥೆ’? ಅಂತ ಅದಕ್ಕೆ ಅವಳು ಓ ಹಮಾರ ಕರ್ನಾಟಕ್ ಕಾ ಭಾಷಾ ಕನ್ನಡ ಹೈ’ ಅಂತ ಶುರು ಮಾಡಿ, ಅವಳು ಕನ್ನಡ ಮೀಡಿಯಂ ಕಲಿತು, ಆಮೇಲೆ ಕೆಲಸ ಸಿಕ್ಕಾಗ ಅವಳಿಗೆ ಆದ ಕಷ್ಟಗಳನ್ನೆಲ್ಲ ಹೇಳಿಕೊಂಡು, ಕನ್ನಡ ಒಂದು ತರಹ useless ಭಾಷೆ ಅಂದಾಗ ನನಗೆ ನಿಜಕ್ಕೂ ಹಿಂಸೆ ಆಯ್ತು.

ಅಷ್ಟರೊಳಗೆ ಒಬ್ಬ ಧಡೂತಿ ದೇಹದ ಹೆಂಗಸು ಏದುಸಿರು ಬಿಡುತ್ತ ತನ್ನ ಜಾಗ ಹುಡುಕಿಕೊಂದು ನಮ್ಮ ಕಂಪಾರ್ಟ್ ಮೆಂಟ್ ಗೆ ಬಂದರು. ಬೆವರಿನಿಂದ ತೊಪ್ಪೆಯಾಗಿದ್ದರು. ಲೇಟಾಗಿ ತಲುಪಿ, ಯಾವುದೂ ಬೋಗಿ ಹತ್ತಿ ಅಂತು ತಮ್ಮ ಜಾಗಕ್ಕೆ ಬಂದು ತಲುಪಿದರು. ಬ್ಯಾಗ್ ಗಳನ್ನು ಬರ್ತ್ ಕೆಳಗಡೆ ತುರುಕಲು ನಾವೆಲ್ಲರೂ ಆಕೆಗೆ ಸಹಾಯ ಮಾಡಿದೆವು. ಸ್ವಲ್ಪ ಹೊತ್ತಿಗೆ ಟಿಟಿ ಬಂದು ನಮ್ಮ ಟಿಕೆಟ್ ಗಳನ್ನೆಲ್ಲ ಚೆಕ್ ಮಾಡಿ, ನೆಟ್ ನಲ್ಲಿ ಬುಕ್ ಮಾಡಿರುವವರದೆಲ್ಲ ಐ ಡಿ ಚೆಕ್ ಮಾಡಿದ್ರು. ಠಾಸ್ -ಪುಸ್ ಹೆಂಗಸಳ ಬಳಿ ಐಡಿ ನೇ ಇರಲಿಲ್ಲ. ಸುಮಾರೆಲ್ಲ ಸಬೂಬೆಲ್ಲ ಹೇಳಿದಳು. ಫ್ಲೈಟ್ ನಲ್ಲಿ ಹೋಗೋದಿತ್ತು, ಆದರೆ ಮಗಳನ್ನು ಅವಳ ಅಜ್ಜಿಯ ಹತ್ತಿರ ಬಿಡಬೇಕಾಗಿ ಟ್ರೈನ್ ನಲ್ಲಿ ಬಂದಿದ್ದು, ಆಫಿಸ್ ಹುಡುಗ ಟಿಕೆಟ್ ಬುಕ್ ಮಾಡಿದ್ದು, ಆಕೆಯ ಅಫಿಸ್ ಐಡಿ, ಅವಳ ದೊಡ್ಡ ಕಂಪನಿ ಹೆಸರು etc. ಆದರೂ 650/- ರೂ ಫೈನ್ ಬಿತ್ತು ಆಕೆಗೆ. ನಾನಂತೂ ಅವಳ ಮುಖ ನೋಡ್ಲಿಕ್ಕೆ ಹೋಗಲಿಲ್ಲ.

ಸ್ವಲ್ಪ ಹೊತ್ತಿಗೆಲ್ಲ ಧಡೂತಿ ಹೆಂಗಸು ನೋವಿನಿಂದ ಮುಲುಕಲು ಶುರು ಮಾಡಿದಳು. ಗುಜರಾತಿ ಹೆಂಗಸು. ಏನಾಯ್ತು ಅಂದೆ, ಕಾಲಿಗೆ ಕ್ರಾಂಪ್ಸ್ ಬಂದಿರಬೇಕು. ಕಾಲನ್ನು ರಿಲಾಕ್ಸ್ ಮಾಡಲು ಹೇಳಿ, ನವಿರಾಗಿ ಮಾಲಿಶ್ ಮಾಡಿದೆ. ನನ್ನ ಕೈಚೀಲ ದಲ್ಲಿ ಯಾವತ್ತೂ ಇರುವ ಝಂಡು ಬಾಲ್ಮ್ ಅವಳ ಕಾಲಿಗೆ ಲೈಟ್ ಆಗಿ ಹಚ್ಚಿದೆ. ಕಾಲನ್ನು ಸಡಿಲ ಬಿಟ್ಟು ಮಲಗಲು ಹೇಳಿದೆ. ಕೂಡಲೆ ಕಾಲು ನೋವು ಹೋಗಿ, ಅವರ ’ಥ್ಯಾಂಕ್ಯು ಬೇಟ” ಗೆ ಮುಗುಳ್ನಕ್ಕು ನಾನು ನನ್ನ ಪುಸ್ತಕ ಹೊರಗೆ ತೆಗೆದೆ. ಬೆಳಿಗ್ಗೆ ಬೇಗ ಎದ್ದಿದ್ದರಿಂದ ಚಿನ್ನು ಮತ್ತು ಇತರೆ ಪ್ಯಾಸೆಂಜರ್ ಗಳು ಆಗಲೇ ನಿದ್ದೆಗೆ ಹೋದರು. 
ನನ್ನ ಕೈ ಚೀಲದಲ್ಲಿ ಏನೇನು ಇರುತ್ತೆ: ಶ್ರೀಕಾಂತ ನನ್ನ ಹ್ಯಾಂಡ್ ಬ್ಯಾಗ್ ಗೆ handy bag/pandora's box ಅನ್ನೋದು. ಅದರಲ್ಲಿ ಒಂದು ಪುಸ್ತಕ, ನೀರಿನ ಬಾಟಲ್, ಸಾಬೂನಿನ ಸ್ಟ್ರಿಪ್(soap strip),ಹತ್ತಿ, ಬ್ಯಾಂಡ್ ಎಇಡ್,ಸೇಫ್ಟಿ ಪಿನ್,ಝಂಡು ಬಾಲ್ಮ್,, ನೋಟ್ ಪ್ಯಾಡ್, ಪೆನ್ ಮತ್ತು ಎರಡು ಮೂರು ಜ್ವರದ ಗುಳಿಗೆ ಇರುತ್ತೆ.

ಈಗ ಈ ಪೋಸ್ಟ್ ನ ಟೈಟಲ್ ಬಗ್ಗೆ

ಈ ತಿಂಗಳು ನನ್ನ ತಂಗಿ ಎಂಡ್ ಫ್ಯಾಮಿಲಿ ಯು.ಎಸ್ ನಿಂದ ಬರುತ್ತಿದ್ದಾರೆ. ತಂಗಿ ಗಂಡ ಸಂದೀಪ್ ಐದು ದಿನ ಇಲ್ಲಿದ್ದು ವಾಪಸ್ ಹೋಗುತ್ತಿದ್ದಾನೆ. ಆಮೇಲೆ ನನ್ನ ತಂಗಿ ಜ್ಯೋತಿ, ಅವಳ ಮಕ್ಕಳು - ನಿವೇದಿತಾ, ಶ್ರೇಯ, ನಾನು, ಮಾಲವಿಕ, ನಿಹಾರಿಕಾ ನೈನಿತಾಲ್ ಗೆ ಹೋಗ್ತಾ ಇದ್ದೇವೆ. ladies only... :-). ಇಲ್ಲಿಂದ ದೆಹಲಿ ವರೆಗೆ ಫ್ಲೈಟ್, ಅಲ್ಲಿಂದ ಟ್ರೈನ್- ಟ್ಯಾಕ್ಸಿ etc.

ಮೂರು ವರ್ಷದ ಹಿಂದೆ ನಾನು ಮಾಲು, ನಿಹಾ ಮತ್ತು ನನ್ನ ಅಮ್ಮ ಹೀಗೆ ನಾಲ್ಕು ಜನ ನಿರ್ಮಲ ಟ್ರಾವೆಲ್ಸ್ ನಲ್ಲಿ ಕೇರಳ ಕ್ಕೆ ಹೋಗಿದ್ವಿ. ಬಸ್ ನಲ್ಲಿರುವ co passengers ಎಲ್ಲ ಗಂಡ-ಹೆಂಡತಿ, ಮಕ್ಕಳು ಇರುವಂತಹ family ಯವರು,ನಾವು ನಾಲ್ಕು ಜನ ಹೆಣ್ಣು ಮಕ್ಕಳೆ ಅಂತ ಅವರ curiosity ನೋಡಬೇಕು...ಯಾಕೆ ಗಂಡ ಬಂದಿಲ್ಲ...ಮುಂತಾದ direct/indirect ಪ್ರಶ್ನೆಗಳು...ಮತ್ತೆ ನಾನು ಎಲ್ಲರಿಗೂ ಹೇಳಿದೆ, ನನಗೆ ಸೀ ಅಫ್ ಮಾಡಲು ಬಂದಿದ್ದರಲ್ಲ ಅವರು ನನ್ನ husband, ಅವರಿಗೆ ಆಫಿಸ್ ಕೆಲಸದಿಂದ ಪುರುಸತ್ತು ಇರಲಿಲ್ಲ ಅದಕ್ಕೆ ಬಂದಿಲ್ಲ ಅಂತ...ಮತ್ತು ನನ್ನ ತಂದೆ ಇತ್ತೀಚಿಗೆ ಎಲ್ಲೂ ಟ್ರಾವೆಲ್ ಕೈಗೊಳ್ಳಲ್ಲ ಅಂತ, ನನ್ನ ತಾಯಿಯನ್ನು ಜತೆಗಿರಲಿ ಅಂತ ಕರೆದುಕೊಂದು ಬಂದೆ- ಅಂತ  :-)

ಕಂಡಕ್ಟಡ್ ಟೂರ್ ನ ಕೆಲವು ಅಡ್ವಾಂಟೆಜ್ - ಹೋಟಲ್, ಊಟ, ನೋಡುವ ಸ್ಪಾಟ್ ಗಳ ಕಿರಿಕಿರಿಯಿರುವುದಿಲ್ಲವಾದರೂ, ಅವರು ಸೂಚಿಸಿದ ಸಮಯಕ್ಕೆ ಸರಿಯಾಗಿ ವಾಪಸ್ ಆಗಬೇಕು. explore ಮಾಡುವ ಅವಕಾಶ ಇರುವುದಿಲ್ಲ. ಸೋ ಈ ಸಲ ನೈನಿತಾಲ್ ಗೆ ನಾವು ನಾವೇ explore ಮಾಡ್ತಾ ಎಂಜಾಯ್ ಮಾಡ್ತೇವೆ. ಸಧ್ಯಕ್ಕೆ ಬ್ಲಾಗ್ ಗೆ ಬ್ರೇಕ್. ಇನ್ನು ಸೆಪ್ಟೆಂಬರ್ ನಲ್ಲಿ ಮೂಡ್ ಇದ್ದರೆ ಬ್ಲಾಗಿಸುತ್ತೇನೆ.

ನನ್ನ ಜತೆ ದೇಶಕಾಲ -25, ಎಸ್. ಎಲ್. ಭೈರಪ್ಪನವರ ’ಗ್ರಹಣ’ ಮತ್ತು V.S. Ramachandran ಅವರ The tell-tale brain (ಸ್ವಲ್ಪ ಓದಿದ್ದೇನೆ. ತುಂಬ ಕುತೂಹಲಕಾರಿಯಾಗಿದೆ.  ನಿಹಾ ಪರೀಕ್ಷೆ ಮುಗಿದು ಅವಳು ಆ ಪುಸ್ತಕ ಓದುತ್ತಿದ್ದಾಳೆ) ಕೂಡ ಟ್ರಾವೆಲ್ ಮಾಡುತ್ತವೆ. Latest ದೇಶಕಾಲದ ಮುಖ ಪುಟ ನನಗೆ ಇಷ್ಟವಾಗಿದೆ. ಅದನ್ನು ಸ್ಕ್ಯಾನ್ ಮಾಡಿ ಹಾಕುತ್ತೇನೆ. sapna book house ನಲ್ಲಿ ಇನ್ನೂ ಹತ್ತು ಕಾಪಿಗಳಿದ್ದವು. ಆಸಕ್ತಿ ಉಳ್ಳವರು ಖರೀದಿಸಬಹುದು! ಕೇವಲ 100/- ರೂ.


Back cover page
so ಎಲ್ಲರಿಗೂ ಬೈ ಬೈ, ನಮಸ್ಕಾರ
:-)

14 comments:

ಸೀತಾರಾಮ. ಕೆ. / SITARAM.K said...

tumbaa sogasaada nirupane! vaividhyateya janamanasavanna naavu sarvajanika railu bhogiyalli nodabahudu.
innu tamma nainitaaala payanakke shubh korutteve-only for ladies. Dehaliyalli swalpa kaala iruttira?

apara said...

kathe bareyalu sariyaada samaya ansutte. bariri
~apara

Anonymous said...

apara has left a new comment on your post "Ladies ONLY":

kathe bareyalu sariyaada samaya ansutte. bariri
~apara

Publish
Delete
Mark as spam

Moderate comments for this blog.

Posted by apara to ನೆನಪಿನ ಸಂಚಿಯಿಂದ at May 12, 2011 9:49 PM

Anonymous said...

ಸೀತಾರಾಮ. ಕೆ. / SITARAM.K to me
show details May 12 (1 day ago)

ಸೀತಾರಾಮ. ಕೆ. / SITARAM.K has left a new comment on your post "Ladies ONLY":

tumbaa sogasaada nirupane! vaividhyateya janamanasavanna naavu sarvajanika railu bhogiyalli nodabahudu.
innu tamma nainitaaala payanakke shubh korutteve-only for ladies. Dehaliyalli swalpa kaala iruttira?

Publish
Delete
Mark as spam

Moderate comments for this blog.

Posted by ಸೀತಾರಾಮ. ಕೆ. / SITARAM.K to ನೆನಪಿನ ಸಂಚಿಯಿಂದ at May 12, 2011 5:14 PM

nenapina sanchy inda said...

Sitaram and Apara
Blogger.com was under repairs and they lost both ur comments so copy pasted this from my mail.
@Sitaram: No!! we reach Delhi in the morning and it will just be a eating trip. later at noon we leave by train.
thanks for the wishes

@ಅಪಾರ: ಕತೆ ಬರೆಯೋದಾ?? :-)
ಮಾಲತಿ ಎಸ್.

ವನಿತಾ / Vanitha said...

Have a nice Time Akka :)

ಸವಿಗನಸು said...

Train prayanada varnane chennagide....Have a nice time...Enjoy...

Anonymous said...

Malthi neev rail hattodralli nammannu railge hattisbitri. Rilayana tumba chennagidhe.Yake janagalu basha dweshigalagtaro gottilla, adre tumba ascharyavenisuttade.Nimma all ladies prayanakke shuba haraikegalu.Enjoy your tour N have a great time.
Last question yake Sept tanka baryolla June-August poortha rajana?

Veda

ರಾಘವೇಂದ್ರ ಜೋಶಿ said...

ಪುಟ್ಟ ಪುಟ್ಟ ದೃಶ್ಯಗಳು ಎಷ್ಟೊಂದು ಖುಷಿ ಕೊಡ್ತವೆ.
:-)
-RJ

Swarna said...

Nice write up madam.
We will miss you in this space.
Hope you write again soon :-)
Enjoy your holidays
Swarna

K.Usha P. Rai said...

ತುಂಬಾ ಚೆನ್ನಾಗಿತ್ತು ರೈಲು ಪ್ರಯಾಣದ ಅನುಭವ. ಕಥೆನೇ ಬರ್ದುಬಿಡಬಹುದಿತ್ತು.
ಉಷಾ ರೈ

Ahalya said...

Enjoyed the journey:) Ahalya Ballal

neelesh said...

i have read this before hey nanagenu tarthira nainithal ninda have a jolly trip travel madtha neevu gamanisida reethi nodi khushi aaythu

nenapina sanchy inda said...

Dear Neelesh!
this post has come to the first slot by mistake. did not know how to revert it to its original place so i am letting it be
btw our Nainital trip got cancelled. :-)
thanks for reading again
ms