February 28, 2011

ಮೇಲುಕೋಟೆಯಲ್ಲಿ ನಾವು

ಯಾವತ್ತಿನ ಹಾಗೆ ಇನ್ನೊಂದು unplanned visit. ಈ ಸಲ ಮೇಲುಕೋಟೆಗೆ.
ಮಂಡ್ಯ ಜಿಲ್ಲೆಯ, ಪಾಂಡವಪುರ ತಾಲೂಕಿನ ಹೋಬಳಿ.ಮೇಲುಕೋಟೆ 3589’ ಎತ್ತರದ ತಾಲೂಕಿನ ಅತಿ ಎತ್ತರದ ಗುಡ್ಡ ಪ್ರದೇಶ. ಗ್ರಾನೈಟ್ ಶಿಲೆಗಳಿಂದ ಕೂಡಿದ ಸಮೃದ್ಧ ಬೆಟ್ಟ. ಬೆಂಗಳೂರಿನಿಂದ ಸಾಧಾರಣ 130 ಕಿ.ಮಿ

ಚೆಲುವನಾರಾಯಣ ಸ್ವಾಮಿ ದೇವಾಲಯ ಮೇಲುಕೋಟೆಯ ಮುಖ್ಯ ದೇವಾಲಯ. ಚಚೌಕಾಕಾರದ ವಿಸ್ತಾರವಾದ ಕಟ್ಟಡ. ಸುತ್ತಲೂ ಕೈ ಸಾಲೆ, ಚಿಕ್ಕ ಗುಡಿಗಳು, ಯjnya ಶಾಲೆಗಳಿವೆ.



ರಾಮಾಯಣ, ಭಾಗವತ ಮತ್ತು ಮಹಾಭಾರತದ ಕಥೆಗಳನ್ನು ಕಂಬಗಳಲ್ಲಿ,ಕಣ್ಣಿಗೆ ಕಟ್ಟುವಂತೆ ಕೆತ್ತಲಾಗಿದೆ. ಇಲ್ಲಿ ಕೆಲವು ಚಿತ್ರಗಳನ್ನು ಹಾಕುತ್ತೇನೆ. ದೇವಸ್ಥಾನದ ವಿವರಗಳು ಜಾಲತಾಣದಲ್ಲಿ ಸಾಕಷ್ಟಿವೆ. ಗರ್ಭಗುಡಿಯಲ್ಲಿ ಚಿತ್ರಿಸುವುದು ನಿಶೇಧಿಸಲಾಗಿತ್ತು.









 





ಕೌಂಸ ವಧೆ
ದೇವಸ್ಥಾನದ ಬೀದಿಯಲ್ಲೆಲ್ಲ ಸುತ್ತ ಮುತ್ತ ಹಲವಾರು ಗುಡಿ, ಮಂಟಪ ಹಾಗೂ ಕೊಳಗಳಿವೆ. this is one of the unfinished manTapa




ಅಕ್ಕ ತಂಗಿ ಕೊಳದ ಎದುರಿಗೆ

ಯೋಗಾನರಸಿಂಹಸ್ವಾಮಿ ದೇವಸ್ಥಾನದ ಒಳಗಿನ ಕಿಟಕಿಯಿಂದ
ಯೋಗಾನರಸಿಂಹ ಸ್ವಾಮಿ ದೇವಸ್ಥಾನದ ಗೋಪುರ
ಮೇಲಕ್ಕೇರುವ ಮೆಟ್ಟಿಲು ಪ್ರದೇಶ


 


ಶ್ರೀಕಾಂತ್ ಅರಸಿನ ಬಣ್ಣದ ದಾರದಲ್ಲಿ ಕಟ್ಟಿದ ಒಂದು ತಾಯಿತ ಕೊಂಡು ಕೊರಳಿಗೆ ಹಾಕ್ಕೊಂಡ್ರು, ಕಾಣಿಸುತ್ತ? :-)



ಬೆಳಿಗ್ಗೆ ದೋಸೆ ತಿಂದು 8.30 ಗೆಲ್ಲ ಮನೆ ಬಿಟ್ಟಿದ್ದು.ಅಡಿಗೆ ಮಾಡಕ್ಕೆ ಪುರುಸೊತ್ತು ಇರಲಿಲ್ಲ. ಮೇಲುಕೋಟೆಯಲ್ಲಿ ಪುಷ್ಕಳವಾಗಿ ಸಿಗುವ ಮಸಾಲಾ ನೀರು ಮಜ್ಜಿಗೆ ಕುಡಿದೆವು, ತುಂಬ ಚೆನ್ನಾಗಿತ್ತು ಬಿಸಿಲಿಗೆ! ಮಧ್ಯಾನ್ಹ  ಅಲ್ಲಿ ಪ್ರಸಾದ ಭೋಜನ ಎಂದು ಬೋರ್ಡ್ ನೋಡಿ ಅಲ್ಲಿಗೆ ಹೋದೆವು.

we had our afternoon lunch in that pink structure!
20ರೂ ನ ಟಿಕೆಟ್ ಪಡೆದು (ಅಂದರೆ ಕೇವಲ ನಲವತ್ತು ಜನರಿಗಾಗಿ)ಊಟ ಮಾಡುವ ವ್ಯವಸ್ಥೆ.ಮೊದಲು ಟಿಕೆಟ್ ಖಾಲಿಯಾಗಿದೆ ಅಂದರೂ, ನಾಲ್ಕೆ ಜನ ತಾನೆ?? ಸಾರು ಪಲ್ಯ adjust ಮಾಡ್ತೀರಾ ಅಂತ ಕೇಳಿ ನಮಗೆ ಪಕ್ಕದ ಬಾಗಿಲಿನಿಂದ ಒಳಗೆ ಬಿಟ್ಟರು. ಆಗಲೇ ಹಾಲ್ ಭರ್ತಿಯಾಗಿತ್ತು.  ಅನ್ನ,ಬಿಸಿ ಬಿಸಿ ಸಾರು, ಸೀಮೆ ಬದನೆ ಪಲ್ಯ ಹಸಿದ ಹೊಟ್ಟೆಗೆ ಸಖತ್ ಆಗಿತ್ತು. adjust ಮಾಡುವ ಪ್ರಮೇಯ ಬರಲೇ ಇಲ್ಲ. ಹೊಟ್ಟೆ ತುಂಬ ಊಟ ಬಡಸಿದರು. ನಮ್ಮ ತಟ್ಟೆ ನಾವೆ ಎತ್ತಿಕೊಂಡು ಹೊರಗಿಡವ ವ್ಯವಸ್ಥೆ. ನಮಗೆ ಟಿಕೆಟ್ ಇಲ್ಲದೇ ಊಟ ಬಡಿಸಿದರು ಅದಕ್ಕೆ ಶ್ರೀಕಾಂತ್ ಅವರಿಗೆ ೨೫ ಕೆ.ಜಿ ಅಕ್ಕಿಗೆ ಆಗುವಷ್ಟು ಹಣ ದೇಣಿಗೆಯ ರೂಪದಲ್ಲಿ ಕೊಟ್ಟರು.
ಪುಷ್ಕರಣಿ/ಕಲ್ಯಾಣಿ ಬಳಿ ಸ್ವಲ್ಪ ಸಮಯ spend ಮಾಡಿ,ಮೂರು ಗಂಟೆಯ ಹೊತ್ತಿಗೆ ನಾವು ಶ್ರೀ ಸುರೇಂದ್ರ ಕೌಲಗಿಯವರನ್ನು ಭೇಟಿ ಮಾಡಲು ಹೋದೆವು. prior appointment ಏನೂ ತೆಗೆದುಕೊಂಡಿರಲಿಲ್ಲ, ಹಾಗೂ ಹಿರಿಯ ಜೀವ ಊಟದ ನಂತರ ವಿಶ್ರಮಿಸುತ್ತಿರಬಹುದೆಂದು ಕೊಂಡು ಅವರ ಮನೆ ಬಾಗಿಲಿನ ತನಕ ಹೋದೆವು. ಬಾಗಿಲು ತೆರೆದೇ ಇತ್ತು. ಸಣ್ಣಕ್ಕೆ ಬಾಗಿಲಿನ ಸದ್ದು ಮಾಡಿದಾಗ ಅವರ ಮಗ ಬಂದರು. ನಮಗೆ ಒಳಗೆ ಕರೆದು, ನಾವು ಬಂದ ವಿಚಾರ ಕೇಳಿದರು. ಅವರ ತಂದೆ ಏಳುವ ಹೊತ್ತಾಯಿತೆಂದು ಕೂತುಕೊಳ್ಳಲಿಕ್ಕೆ ಹೇಳಿದರು. ಹಿರಿಯ ಕೌಲಗಿಯವರು ತಮ್ಮ ಸಂಸ್ಥೆ ಜನಪದ ಸೇವಾ ಟ್ರಸ್ಟ್ ಬಗ್ಗೆ ಹೇಳಿದರು, ನಮ್ಮ ಸಂಸ್ಥೆಗಳ ಬಗ್ಗೆ ತುಂಬ ಆಸ್ಥೆಯಿಂದ ಕೇಳಿಸಿಕೊಂಡರು.


ಹಿರಿಯ ಗಾಂಧಿವಾದಿ,(who follows the sarvodaya way of life)ಜಾನಪದ ಸೇವಾ ಟ್ರಸ್ಟ್ ನ ರುವಾರಿ ಶ್ರೀ ಸುರೇಂದ್ರ ಕೌಲಗಿಯವರ ಮನೆಯಲ್ಲಿ.
ಅವರ ಮನೆಯಲ್ಲಿನ ಹೆಂಗಸರು ಯಾವುದೋ ಕಾರ್ಯಕ್ರಮಕ್ಕೆ ಹೋಗಿದ್ದರಿಂದ, ಶ್ರೀ ಕೌಲಗಿ ಅವರ ಮಗ, ಎಷ್ಟು ಬೇಡವೆಂದರೂ ಸಕ್ಕರೆ ಹಾಕಿದ ಬಿಸಿ ಹಾಲು , ಬಾಳೆ ಹಣ್ಣು ತಂದು ಕೊಟ್ಟರು. ಹಾಲು ಬಿಸಿಯಾಗುತ್ತಿದ್ದ ಹಾಗೆ ನಾವು ಅವರ ಬಳಿಯಿದ್ದ ದೊಡ್ಡ ಅಲ್ಬಂ ನಲ್ಲಿ ಶ್ರೀ ಕೌಲಗಿಯವರು  ದೇಶ ವಿದೇಶದ ಗಣ್ಯರೊಂದಿಗಿನ ಹಳೆಯ ಕಪ್ಪು-ಬಿಳುಪಿನ ಫೋಟೊ ಗಳನ್ನು ನೋಡುತ್ತ ,ಸಮಯ ಸರಿದಿದ್ದೆ ತಿಳಿಯಲಿಲ್ಲ. ಅವರ ಮನೆಯ ಹಿಂಬದಿಯಲ್ಲಿ ಪುಟ್ಟ ಕೈತೋಟವಿದ್ದು, ಅಲ್ಲಿ ಹೂವು ತರಕಾರಿ ಬೆಳೆಸಿದ್ದಾರೆ.  ಮನೆಯೊಳಗಡೆ ತುಂಬ ತಂಪಾಗಿತ್ತು.ಮೊಮ್ಮಗ ಹುಟ್ಟಿದ ಸಂಭ್ರಮದಲ್ಲಿದ್ದರವರು. ನಾವು ಅವರಿಗೋಸ್ಕರ ನಮ್ಮ ಊರಿನ (ತೀರ್ಥಹಳ್ಳಿಯ)ಕೆಂಪು ಅಕ್ಕಿ ತೆಗೆದುಕೊಂಡು ಹೋಗಿದ್ದೆವು.

ಸುರೇಂದ್ರ ಕೌಲಗಿ ಹಾಗೂ ಅವರ ಮಗ ಸಂತೋಷ ಅವರೊಂದಿಗೆ ನಾವು
:-)

7 comments:

Swarna said...

ನಮಸ್ತೆ ಮೇಡಂ,

ನಿಮ್ಮ ಕೆಲವವು ಬರಹಗಳು ತುಂಬಾ ಆಪ್ತವಾಗಿವೆ.
ನಿಮ್ಮ ಗ್ರಾಮ್ಯ ವೆಬ್ಸೈಟ್ ನೋಡಲು ಪ್ರಯತ್ನ ಪತ್ತೆ.
ಆಗಲಿಲ್ಲ, ತಾಂತ್ರಿಕ ದೋಷವಿರಬಹುದು ಮತ್ತೆ ಪ್ರಯತ್ನಿಸುತ್ತೇನೆ.
ನೆಟ್ ನಲ್ಲಿ ಗ್ರಾಮ್ಯದಬಗ್ಗೆ ಒಂದು ಬ್ಲಾಗ್ನಲ್ಲಿ ಓದಿದೆ. ಅದು ತಮ್ಮದೇ
ಸಂಸ್ಥೆ ಅಂಥಂದ್ ಕೊಂಡಿದೆನೆ
ಗ್ರಾಮ್ಯದ ಪ್ರಾಡಕ್ಟ್ಸ್ಗಳನ್ನ ಇಲ್ಲ್ಲಿ ಕೊಳ್ಳಬಹುದು?
ದಯವಿಟ್ಟು ವಿಳಾಸ ಕೊಡಿ.

ಧನ್ಯವಾದಗಳು.
ಸ್ವರ್ಣ

ಅನಂತ್ ರಾಜ್ said...

ಮೇಲುಕೋಟೆ, ಯೋಗಾ ನರಸಿ೦ಹ, ಕೌಜಲಗಿ -ಎಲ್ಲರ(ಎಲ್ಲದರ) ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು. ಉತ್ತಮ ಚಿತ್ರಗಳು ಕೂಡ ಮನಸಿಗೆ ಮುದ ನೀಡಿದವು.

ಅನ೦ತ್

nenapina sanchy inda said...

thank you ananth raj avarige!!
Dear Swarna!!
Presently our showroom is getting reconstructed!! namma office viLasa illide
Gramya turnkey services private limited
K-43,2nd floor
Rajajinagar 2nd block
(near Ananya hospital)
sadhyakke kelavu products ee office nallide. pls contact Hebbal on 9880155332 or Raaghu on 7760970055 and give my reference
www.gramya.co.in
thanks for reading my silly writings!!

Swarna said...

Hello madam,

Thanks for the reply. Will visit the place. Great job.

Your writing on Babri Masjid riots and your memories of childhood make for a wonderful reading.

Keep writing
Swarna

ಸವಿಗನಸು said...

ಪುಕ್ಕಟೆಯಾಗಿ ನಮಗೆ ಮೇಲುಕೋಟೆ ತೋರಿಸಿದ್ದೀರ...
ಚೆನ್ನಾಗಿದೆ ಬರಹ ಹಾಗೂ ಚಿತ್ರಗಳು.......

Anonymous said...

MeluKote parichaya chennagi moodi bandide.gandhivadhi Kaulagiyavara bagge kelidde adre latest photo nodo avakasha sikkiddu eegle. Melukoteya kitaki quiz antu adbuta kanri.Nanna kattu katta kalli natya madidru yenu chitra antha konegu thilililla.Koneyadagi Nimma family photogalella chennagide(Female koteyolagobba Male!!!)-Veda

nenapina sanchy inda said...

Dear Veda!!
male-kote hmmm !
kathakali maaDi kuttige giraffe taraha aagidre khsamisi. eega chitra sariyaagide nODi, matte mooru hosa photogaLannu add maaDiddEne
take care
:-)
ms