ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ವಿಶ್ವ ಸಂಸ್ಕೃತ ಪುಸ್ತಕೋತ್ಸವದಲ್ಲಿ ಭಾಗವಹಿಸೋಣ. ಇವತ್ತು ಕೊನೆಯ ದಿನ. ನಿನ್ನೆ ಭಾನುವಾರದಂದಂತೂ ಜನ ಸಾಗರ...ಎಲ್ಲೆಲ್ಲೂ ಸಂಸ್ಕೃತ ಮಾತನಾಡುವವರು. ಒಂದು novel experience. ಕಾರ್ಯಕ್ರಮದ ನಡುವೆ ಜಯತು ಜಯತು ಸಂಸ್ಕೃತ ಎನ್ನುವ ಉದ್ಘೋಷ. ದಿನೇಶ್ ಕಾಮತ್ ರ ಅಚ್ಚ ಸಂಸ್ಕೃತದ ಭಾಷಣ ಮೈ ಜುಮ್ಮೆನ್ನುವಂತಿತ್ತು.His enthusiam was contagious
ಸಂಸ್ಕೃತ ಗ್ರಾಮದಲ್ಲಿ ಅಂಚೆಕಚೇರಿ, ಶಾಲೆ,ಗರಾಜ್, ಅರಳಿ ಕಟ್ಟೆಮೇಲೆ ನ್ಯಾಯ ಹೇಳುವ ಗ್ರಾಮನ್ಯಾಯಾಲಯ, ಹಿಮಾಚಲ ಪ್ರದೇಶದವರ ಸಂಸ್ಕೃತ ಹಾಡಿಗೆ ತಕ್ಕಂತೆ ಕುಣಿತ, and of course food court...ಗಮನ ಸೆಳೆದವು. ಹೆಚ್ಚಾಗಿ ಯುವಜನತೆಯ ಹುಮ್ಮಸ್ಸು ಕೊಂಡಾಡುವಂತದ್ದು.ಮೇಳದಲ್ಲಂತೂ ಸರ್ವಂ ಸಂಸ್ಕೃತಮಯಂ.
ತಾಳೆಗರಿ ಪ್ರದರ್ಶನ ಮಳಿಗೆಯಲ್ಲಂತೂ ಸಾಸಿವೆ ತೂರಲಿಕ್ಕೂ ಆಗದಂತಹ rush. ಮಹಾಭಾರತದ ಚಕ್ರವ್ಯೂಹವನ್ನು ಮಣ್ಣಿನ ಗೊಂಬೆಗಳ ಮೂಲಕ depict ಮಾಡಿದ್ದು ತುಂಬಾ ಸರಳವಾಗಿತ್ತು-self explanatory. ತುಂಬ ಕಷ್ಟಪಟ್ಟು ಒಳ ನುಸುಳಿ ನೋಡಬೇಕಾಯಿತು.ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮ.
ಸಂಸ್ಕೃತ ಶ್ಲೋಕ ಹೇಳಿ 80 ರೂ ನ sweet ನ್ನು 50 ರೂ ಗೆ ಗಿಟ್ಟಿಸಿಕೊಂಡ್ವಿ. ಮಜಾ ಬಂತು. ನಾನು ’ಅಸತೋಮ ಸದ್ಗಮಯ’ ಮತ್ತು ಅದರ ಅರ್ಥ ಹಿಂದಿಯಲ್ಲಿ ಹೇಳಿದ್ರೆ, ನಿಹಾರಿಕಾ ’ತ್ವಮೇವ ಮಾತಾ ಚ ಪಿತಾ ತ್ವಮೇವ’ ರಾಗವಾಗಿ ಹಾಡಿದಳು...ಶ್ರೀಕಾಂತ್ ಪರವಾಗಿ ನಾನು ’ಕಷ್ಟಂ ಕಷ್ಟಂ ಬಹು ಕಷ್ಟಂ, ಪ್ರಾತ: ಕಾಲೇ ಉತ್ಥಾನಂ...ಹಾಡಿ ಆ ಕಾಶ್ಮೀರಿ ಯುವಕನನ್ನು ನಗಿಸಿದೆ...
ಪುಸ್ತಕ ಮೇಳದಲ್ಲಂತೂ ಉಸಿರು ಕಟ್ಟುವ ಜನಜಾತ್ರೆ. ನನಗೆ ತುಂಬಾ ಇಷ್ಟವಾಗಿದ್ದು ಬ್ರಹತ್ ಗಾತ್ರದ..ನಾಲ್ಕೂ ವೇದಗಳನ್ನೊಳಗೊಂಡ ಪುಸ್ತಕ. ಸಂಸ್ಕೃತ ಮೇಳ ಇವತ್ತು last.
ಇಲ್ಲಿವೆ ಕೆಲವು ಝಲಖ್
ವೇದಿಕೆಯ ಮೇಲಿನ ಗಣ್ಯರು: ನಿವೃತ್ತ ನ್ಯಾಯಮೂರ್ತಿ ಲಾಹೋಟಿ(ಅವರು ಮುಂದಿನ ವರ್ಷದ ಸಮ್ಮೇಳನದಲ್ಲಿ, ಸಂಸ್ಕೃತ ಕಲಿತು ಸಂಸ್ಕೃತದಲ್ಲೇ ಭಾಷಣ ಮಾಡುವ ಆಶ್ವಾಸನೆ ನೀಡಿದ್ದಾರೆ), ನಿ.ನ್ಯಾ ಹಾಗೂ ಮಾಜಿ ರಾಜ್ಯಪಾಲರು ಶ್ರೀಯುತ ರಾಮಾ ಜೊಯಿಸ್, ಕರ್ನಾಟಕ ರಾಜ್ಯ ಸಚಿವರು ಶ್ರೀ ವಿ.ಎಸ್. ಆಚಾರ್ಯ ಮುಂತಾದವರು
The outer decor
the Bagavadgeeta and the Management Principles..one of the many posters by IIM-Bangalore
parts of the motorbike ಸಂಸ್ಕೃತದಲ್ಲಿ for eg ಬ್ರೇಕ್= ವೇಗನಿಯಂತ್ರಕಾ
ಸಂಸ್ಕೃತ ಪಾಠಶಾಲೆ in progress
scene from the Mahabharatha
ಚಕ್ರವ್ಯೂಹ
ವಿ.ಸೂ: ಸಂಸ್ಕೃತ ವಿ.ವಿ ಯ ಲಾಂಛನಕ್ಕೆ 5000 ಹಾಗೂ ಧ್ಯೇಯವಾಕ್ಯಕ್ಕೆ(slogan) ರೂ 1000 ಘೋಷಿಸಲಾಗಿದೆ. interest ಇದ್ದವರು ಭಾಗವಹಿಸಬಹುದು
:-)
4 comments:
ವದತಿ ಸಂಸ್ಕೃತಮ್, ಜಯತು ಭಾರತಮ್,ಶುಭಮಸ್ತು !ಧನ್ಯವಾದಃ
Oh... nice Malathi...
alli ondiDee bhaanuvaara kaLedidde gottaglilla. photos tegeyada korate illi neegitu :)
- CheT
Hi Malati..
Thanks for your sweet words and yes i wonder if we crossed each other during that time . We were covering the Science congress going on at that time ( though i was not a part of the team ) and it was a great experience for me . And the food was yummy ....loved that savory pongal ..
`ವಿಶ್ವ ಸಂಸ್ಕೃತ ಸಮ್ಮೇಳನ 'ದ ಪರಿಚಯ ಲೇಖನ ಚೆನ್ನಾಗಿದೆ. ನಿಮ್ಮೊಡನೆ ನಮ್ಮನ್ನೂ ಒಂದು ಸುತ್ತು ಕರೆದೊಯ್ದಕ್ಕಾಗಿ ಧನ್ಯವಾದಗಳು.
Post a Comment