June 12, 2010

ಕಪ್ಪು ಬಿಳುಪು

ನಮ್ಮ ಮನೆಯಲ್ಲಿ ಮೊದಲ ಟೆಲಿವಿಷನ್ ತಂದಿದ್ದು 1985 ನಲ್ಲಿ, ಅದೂ second hand. ಕೆಲವರ ಮನೆಯಲ್ಲಿ ಆಗಲೇ ಬಣ್ಣದ ಟಿ.ವಿ. ಬಂದಿತ್ತು. ನನ್ನ ತಮ್ಮ excite ಆಗಿ ಎಲ್ಲರಿಗೂ ಹೇಳಿ ಬಂದಿದ್ದ. ಯಾರೋ ಒಬ್ಬರು ಕಲರ್ ಟಿ.ವಿ. ನಾ ಅಂತ ಕೇಳಿದ್ದಕ್ಕೆ ಹೌದು, ಆದರೆ ಅದರಲ್ಲಿ ಇರೋದೇ ಎರಡೆ ಬಣ್ಣ - ಕಪ್ಪು ಬಿಳುಪು ಅಂದಿದ್ದ. ಅವನು ನಮ್ಮ ಮನೆಯ official ಹಾಸ್ಯಗಾರ. ಯಾವಾಗಲೂ ನಗಿಸುತ್ತಿರುತ್ತಾನೆ. ಅವನಿದ್ದರೆ ಮನೆಯಲ್ಲಾ ಗೌಜು ಗದ್ದಲ. ನನ್ನ favorite ತಮ್ಮ ಅಂತ ಬೇರೆ ಹೇಳಬೇಕಿಲ್ಲವಲ್ಲ.

ಇಷ್ಟೆಲ್ಲ ಪೀಠಿಕೆ ಯಾಕೆಂದರೆ ನನಗೆ ಕಪ್ಪು-ಬಿಳುಪು ಬಣ್ಣ ಇವತ್ತಿಗೂ ಇಷ್ಟ. ನನ್ನ ಬಟ್ಟೆಯ ಕಪಾಟಿನ ಬಾಗಿಲು ತೆರೆದರೆ ಅಲ್ಲಿರೋದೆ ಕಪ್ಪು / ಬಿಳಿ ಬಣ್ಣದ various shades ನ ಚೂಡಿದಾರ- ಸೀರೆಗಳು. ಅಮ್ಮ ಏನಾದರೂ shopping ಗೆ ನನ್ನ ಜತೆ ಬರುವುದಾದರೆ ಮೊದಲೇ ತಾಕೀತು ಮಾಡಿ ಬಿಡುತ್ತಾರೆ- ಕಪ್ಪು / ಬಿಳಿ ಬಣ್ಣದ ಬಟ್ಟೆ ತೆಗೆದುಕೊಳ್ಳಲಿಕ್ಕಿಲ್ಲ ಅಂತ. ಅಲ್ಲಿ ಹೋದ ಮೇಲೆ ಅಮ್ಮನೇ ನನಗೋಸ್ಕರ ಕಪ್ಪುಬಿಳಿ ಮಿಶ್ರಿತ ಬಣ್ಣದ್ದೆ ಬಟ್ಟೆ ತೆಗೆದುಕೊಳ್ಳೋದು. ಶ್ರೀಕಾಂತ್ ಕೂಡ ಅಕಸ್ಮಾತ್ ನನಗೆ ಬಟ್ಟೆ ತಂದರೆ ಅದೂ ಕಪ್ಪು-grey ಬಣ್ಣದ್ದಾಗಿರುತ್ತದೆ.

ಮತ್ತು black & white ಸಿನಿಮಾಗಳ ಬಗ್ಗೆ ಹೇಳಬೇಕೆ?? ಒಂದು ಸಂತಸದ ಸಂಗತಿಯೆಂದರೆ, ನನ್ನ ಇಬ್ಬರೂ teenage ಮಕ್ಕಳಿಗೂ ಕಪ್ಪು-ಬಿಳುಪು ಸಿನಿಮಾಗಳೆಂದರೆ ಇಷ್ಟ. ಒಟ್ಟಾಗಿ ನೋಡುವುದರೆಂದರೆ ಏನೋ ಒಂದು ಸಂಭ್ರಮ.

ಮತ್ತೆ ಎಲ್ಲದಕ್ಕಿಂತ ನನಗೆ ಜಾಸ್ತಿಇಷ್ಟ ನಮ್ಮ ಹಳೆಯ black & white ಫೊಟೊಗಳು. ಯಾಕೋ ಕಪ್ಪು ಬಿಳುಪು ಚಿತ್ರಗಳು sesnses ಗೆ comfortable ಆಗಿರುತ್ತೆ. ಮತ್ತು ಅಮ್ಮನ ಮನೆಗೆ ಹೋದಾಗಲೆಲ್ಲ ಅಪ್ಪ-ಅಮ್ಮನ ಮದುವೆ ಆಲ್ಬಮ್, ನನ್ನ ಮೊದಲನೆ ಹುಟ್ಟು ಹಬ್ಬದ ಆಲ್ಬಂ ನೋಡುವುದು ಇವತ್ತಿಗೂ ನನ್ನ favorite ಕೆಲಸ. ಒಂದು ಇಡೀ ದಿನ ಅದಕ್ಕೇ ಮೀಸಲು.ಅಮ್ಮ ತಮಾಶೆ ಮಾಡುವುದುಂಟು ’ಅಲ್ವೇ ನನ್ನ ಮದುವೆ ಸಮಯದಲ್ಲಿ(1966), ಫೋಟೊ ತೆಗೆದದ್ದೇ ವಿಶೇಷ, ಆದರೂ, ನಿನ್ನಷ್ಟು ನಾನೇ ಆ ಅಲ್ಬಂಗಳನ್ನು ನೋಡಿಲ್ಲ’ ಅಂತ

ಇಲ್ಲಿವೆ ಕೆಲವು ನನ್ನ ಮನೇದು. ಹೆಚ್ಚಿನದು ತೀರ್ಥಹಳ್ಳಿಯ ಶ್ರೀಕಾಂತ್ ಮನೆಯವರದ್ದು . ತೀರ್ಥಹಳ್ಳಿಯ ಕೆಲವು ಫೋಟೊಗಳನ್ನು  frame ನಿಂದ ಹೊರತೆಗೆದು scan ಮಾಡಿದ್ದೇನೆ.  ವಾಪಸ್ ಅದರಲ್ಲಿ ಕೂಡಿಸಲು ನನಗೆ ಬರುವುದಿಲ್ಲ. :-) ಇನ್ನು ಹೊಸ ಕಟ್ಟು ಹಾಕಿಸಬೇಕಷ್ಟೆ.
 


ನನ್ನ ಮೊದಲನೇ ಹುಟ್ಟಿದ ಹಬ್ಬದಂದು


ನನ್ನ ತಂದೆ ತಾಯಿ ಜತೆ

ಮುಂಬಯಿನ ಘಾಟಕೋಪರ್ ನ ನಮ್ಮ ಪಕ್ಕದ ಮನೆಯ ಹುಡುಗ. ಬೇಡ್ spread ಹಾಗೂ pillow case ಮೇಲೆ ಅಮ್ಮ ಹಾಕಿದ ಕಸೂತಿ


ನಮ್ಮ ಪದ್ದತಿಯಲ್ಲಿ ಆರತಿ ಬೆಳಗಿಸಿ ನನ್ನ ಮೊದಲನೆ ಹುಟ್ಟು ಹಬ್ಬದ ಆಚರಣೆ, ನನ್ನ ನಾನಿ, ಅಮ್ಮ, ಅಪ್ಪ ಮತ್ತು ಆಜೋಬಾ. ನಾನು ಕೃಷ್ಣನ get-up ನಲ್ಲಿ. :-)


ಶ್ರೀಕಾಂತ ರ ಮೊದಲನೆ ಅಣ್ಣ ನವರ ಮದುವೆಯಂದು. ಶ್ರೀಕಾಂತ್ ಗೆ ಒಟ್ಟು ಮೂರು ಅಣ್ಣಂದಿರು


ಶ್ರೀಕಾಂತ್ ಅಕ್ಕ -ಅನುರಾಧ ಹಾಗೂ ಭಾವ ಯೋಗೇಶ ಜೋಯಿಸ್. ಈ ಮದುವೆ ದಿನದಂದು ಶ್ರೀಕಾಂತ್ ಉಪನಯನ ಕೂಡ.


ಎಡಬದಿಗಿರುವವರು ನನ್ನ ಅತ್ತೆ -ಅವರೊಂದಿಗೆ ಅವರ co-sisters


ಶ್ರೀಕಾಂತ್ cousin ರಾಧಾಕೃಷ್ಣ...ತಾಜ್ ಮಹಲ್ ಎದುರಿಗೆ


ಶ್ರೀಕಾಂತ್ ಅಕ್ಕ ಶ್ಯಾಮಲ..ಮೊದಲ ಸಲ sunglasses ಹಾಕಿಕೊಂಡಾಗ ತೆಗೆದ ಚಿತ್ರ.... ಇತ್ತೀಚಿಗೆ ದೈವಾಧೀನರಾದರು. :-(


ಶ್ರೀಕಾಂತ್ ಸೋದರತ್ತೆ, ಸೋದರಮಾವ..ಅವರ ಮಗ ನರಸಿಂಹಮೂರ್ತಿ


MSc agri friends ಜತೆ ಶ್ರೀಕಾಂತ್...ಕೂತುಕೊಂಡವರಲ್ಲಿ ಮಧ್ಯದವರು..:-) :-)



ಶ್ರೀಕಾಂತ್ ಸೋದರತ್ತೆ ಲಲ್ಲಮ್ಮ..ಸೋದರ ಮಾವ ಬಿ.ಎನ್. ಕಾಮತ್- ಶಿವಮೊಗ್ಗದವರು. ಸೋದರತ್ತೆ ಹಿಂದಿನ ತಿಂಗಳು ದೈವಾಧೀನರಾದರು. :-(


ನಮ್ಮ ಮಾವನವರು home guards ಸೇವೆಯಲ್ಲಿದ್ದಾಗ.

ಉದ್ದಿನ ಮೂಹೂರ್ತ.. ಶ್ರೀಕಾಂತ್ ಅಣ್ಣನ ಮದುವೆ


ವಧು-ವರರ ಕುಟುಂಬ ಎದುರುಗಾಣಿಸುವುದು..ಶ್ರೀಕಾಂತ್ ಅಣ್ಣನ ಮದುವೆ


ಮಾಲವಿಕ- photography trainee subbu cameraದಲ್ಲಿ




ಮಾಲು-ನೀಹಾ ಖ್ಯಾತ ಛಾಯಾಗ್ರಾಹರಾದ ಹಾಸನದ ಕೆ.ಪಿ. ಸತ್ಯನಾರಾಯಣ್ ನಮ್ಮಲ್ಲಿ ಬಂದಾಗ ತೆಗೆದಿದ್ದು.





:-)

10 comments:

ಸುಮ said...

ನಿಮ್ಮ ಹಳೆಯ ಫೋಟೊ ಕಲೆಕ್ಷನ್ ಯಾವುದೋ ಲೋಕಕ್ಕೆ ಕರೆದೊಯ್ಯಿತು ಅಕ್ಕ . ಹಾಂ ಅಮ್ಮನ ಮನೆಗೆ ಹೋದಾಗ ಹಳೆಯ ಫೋಟೊ ಹರವಿಕೊಂಡು ಕುಳಿತುಕೊಳ್ಳುವುದು ನನ್ನ ಪ್ರಿಯ ಹವ್ಯಾಸ ಕೂಡ.

ಜಲನಯನ said...

ಮಾಲತಿ, ನಿಮ್ಮ ಹಳೆ ಬ್ಲಾ.ವೈ. ನೋಡಿ ನನ್ನ ಮನಸ್ಸೂ ೮೦ ರ ದಶಕಕ್ಕೆ ಓಡಿತು...ಹಹಹ...ಎಂಥ ಮಧುರ ನೆನಪುಗಳು ಅಲ್ಲವೇ..? but U seem to be the same Mala-T...ಮುಖ ಬದಲಾವಣೆಯಾಗಿಲ್ಲ....Am I right?

ಸವಿಗನಸು said...

ಕಪ್ಪುಬಿಳುಪು ನೋಡಲು ಬಲು ಸೊಗಸು....
ಫೋಟೋಗಳು ಬಹಳ ಚೆನ್ನಾಗಿದ್ದವು....
ಸುಬ್ಬು ಕ್ಯಾಮೆರಾದಲ್ಲಿ ಮಾಳವಿಕ ಹಾಗೂ ಶ್ರೀಕಾಂತ್ MSc agri friends ಜೊತೆ ಸೂಪರ್....

ದೀಪಸ್ಮಿತಾ said...

ಹಳೆ ನೆನಪುಗಳ ಯಾವಾಗಲೂ ಮಧುರ. ಈಗ ಫೋಟೋ ತಂತ್ರಜ್ಞಾನ ಎಷ್ಟೇ ಮುಂದುವರೆದಿರಬಹುದು, ಆದರೆ ಆಗಿನ ಕಪ್ಪು ಬಿಳುಪಿನ ಚಿತ್ರಗಳ ಸೊಗಸೇ ಬೇರೆ, ಆ ನೆನಪುಗಳೇ ಸುಂದರ. ಇನ್ನೊಂದು ನೋಡಿ, ಈ ಕಪ್ಪು ಬಿಳುಪು ಚಿತ್ರಗಳಲ್ಲಿರುವ clarity ಎಷ್ಟಿದೆ ಎಂದು. ನಮ್ಮ ಮನೆಯಲ್ಲಿರುವ ಅಲ್ಬಮ್‍ನಲ್ಲೂ ಆಗ ತೆಗೆದ ಚಿತ್ರಗಳಿವೆ. ತೆಗೆದು ಅನೇಕ ವರ್ಷಗಳಾಗಿದ್ದರೂ ಸ್ವಲ್ಪವೂ ಮಾಸದೆ ಇನ್ನೊ perfect clarity ಇದೆ

ಮನಸು said...

wow!!!! ಎಲ್ಲಿ ಹುಡುಕಿದಿರಿ.......ಈ ಫೋಟೋಗಳೆಲ್ಲ ತುಂಬಾ ಚೆನ್ನಾಗಿದೆ.......

ಮನದಾಳದಿಂದ............ said...

ಮಾಲತಿ ಮೇಡಂ,
ಕಪ್ಪು ಬಿಳುಪು ನೆನಪುಗಳ ಬಗ್ಗೆ ಏನು ಹೇಳಲಿ?
ಅಮರ ಮಧುರ ನೆನಪು.........
ಕಪ್ಪು ಬಿಳುಪಿನ ಒನಪು...........

ಸೀತಾರಾಮ. ಕೆ. / SITARAM.K said...

NICE PHOTOS

ಶಿವಪ್ರಕಾಶ್ said...

Nice Photos..

Even i have few black and white of my parents. i feel crazy by seeing those photos..

ದಿವ್ಯಾ ಮಲ್ಯ ಕಾಮತ್ said...

wah!ನೆನಪುಗಳ ಮಾತು ಮಧುರ! Beautiful photos :)

ವನಿತಾ / Vanitha said...

abbabba..eshtu old collections..very nice:))

ayyo..nim blog ge naanu barade thumbaa dina aythu antha kaansatte..!!..very sorry:)