March 12, 2010

ಚಿತ್ರಸಂತೆ- ಲೇಟ್ ಆಗಿ ನಂದೂ ಒಂದು

ಕಳೆದ ಏಳು ವರ್ಷದಂತೆಯೇ ಈ ವರ್ಷವೂ, ಜನವರಿ 31, 2010 ರಂದು ಚಿತ್ರಸಂತೆ ನಡೆಯಿತು. ಸ್ಥಳ:ಕರ್ನಾಟಕ ಚಿತ್ರಕಲಾ ಪರಿಷತ್ತು , ಸಮಯ ಬೆಳಿಗ್ಗೆ 9.00 ರಿಂದ ಸಂಜೆ 7.00 ಗಂಟೆತನಕ. ರಾಜ್ಯದ ವಿವಿಧೆಡೆಯಿಂದ ಸುಮಾರು 1500 ಕ್ಕಿಂತ (this info i got from newspaper :-))ಹೆಚ್ಚು ಕಲಾವಿದರು ತಮ್ಮ ಚಿತ್ರಕಲೆಯ ಪ್ರದರ್ಶನ ಹಾಗೂ ಮಾರಾಟ ನಡಿಸಿದರು. ಚಿತ್ರಸಂತೆಯಂದ್ರೆ ಥೇಟ್ ಸಂತೆನೇ. ನಾವು 10.30 ಗೆ ತಲುಪಿದಾಗ ಆಗಲೇ ಗಿಜಿಗುಡುವ ಜನ.

spot ನಲ್ಲೇ ಚಿತ್ರ ಬರೆಯುವವರು, ವ್ಯಂಗ್ಯಚಿತ್ರ ಕಲಾವಿದರ ಬಳಿಯಂತು ನೂಕುನುಗ್ಗಲು. ಯಾವುದೋ ಫೈಲ್ ಹುಡುಕ್ತಾ ಇದ್ದಾಗ , ನನಗೆ ಇಷ್ಟವಾದ ಕೆಲವು ಫೊಟೊ ನಾನು cell phone ನಲ್ಲಿ ತಗೆದಿದ್ದು ಸಿಕ್ಕಿದೆ... ಇಲ್ಲಿ ಹಾಕಿದ್ದೇನೆ. ಗೊತ್ತು, ಹಲವಾರು ಜನರು ಇದರ ಬಗ್ಗೆ ಬ್ಲಾಗಿಸಿದ್ದಾರೆ. ಆದರು ನನ್ನದೂ ಒಂದು ಇರಲಿಯಲ್ಲವಾ?

ಕುಮಾರಕೃಪಾ ರಸ್ತೆಯುದ್ದಕ್ಕೂ-ಸಿಗ್ನಲ್ ನಿಂದ ಪ್ರಾರಂಭವಾಗಿ ಆಚೆ -ಹೊಟಲ್ ಲಲಿತ್ ಅಶೋಕ್ ದಾಟಿ ಇನ್ನೂ ಮುಂದೆ... ಕಲಾಕೃತಿಗಳ ಪ್ರದರ್ಶನ.ಎತ್ತ ನೋಡಿದ್ರೂ ಬಣ್ಣವೇ ಬಣ್ಣ. ಒಂದಕ್ಕಿಂತ್ ಒಂದು ಚಂದ. ಅಂದ ಚಂದದ ಈ ಕಲಾಕೃತಿಗಳನ್ನು ನೋಡಿ ಮೇರೆ ತೊ ಹೋಶ್ ಉಡ್ ಗಯೆ. ಮಧ್ಯಾನ್ಹ್ ಬಿಸಿಲಿಗೆ ಸ್ವಲ್ಪ ಕಿರಿಕಿರಿಯಾಯ್ತು. ಅದಲ್ಲದೇ camlin ನವರು stationery item/art/painting ಮಾಡಲು ಬೇಕಾದ ಬ್ರಶ್, ಕಲರ್ಸ್, ಪೇಪರ್/handmade paper /ಬೇರೆ ಬೇರೆಗ್ರೇಡ್ ನ ಪೆನ್ಸಿಲ್ ಮುಂತಾದವುಗಳನ್ನು ಕಡಿಮೆ ಬೆಲೆಗೆ ಮಾರುತ್ತಾ ಇದ್ದರು. ನಮ್ಮ ಮನೆಯಲ್ಲೆ ಮೂರು ಕಲಾವಿದರಿದ್ದಾರೆ, ನನ್ನೊಬ್ಬಳನ್ನು ಬಿಟ್ಟು. ಸುಮಾರು art paraphernelia ತಗೊಂಡ್ರಪ್ಪ. ಈ ವರ್ಷ handicrafts ನ stall ಗಳೂ ಇದ್ದವು.

ಚಿತ್ರಕಲಾ ಪರಿಷದ್ ನ entrance ನಲ್ಲಿದ್ದ ದೊಡ್ಡದಾದ, ಧೂಳೆಬ್ಬಿಸುವ ಆನೆಯ ಚಿತ್ರವಂತು ಸಖತ್ ಆಗಿತ್ತು. ಚಿತ್ರ ತೆಗೆಯಲು ಮೊಬೈಲ್ ತೆಗೆದದ್ದೆ, ಯಾರೋ ನೂಕಿದಂತಾಗಿ, ಮೊಬೈಲ್ ಬಿದ್ದು , ಅದರ parts- ಗಳನ್ನು ಮಕ್ಕಳು ಹುಡುಕಿ ಅದನ್ನು ಪುನ: assemble ಮಾಡುವಷ್ಟರಲ್ಲಿ, ಆ ಫೋಟೊ ತೆಗೆಯುವ ಮೂಡ್ ಹೋಗೇ ಬೆಡ್ತು. :-) ಅದು ಒಂದು ಲಕ್ಷಕ್ಕೆ ಆಗಲೇ ಯಾರೋ ಕೊಂಡು ಆಗಿತ್ತು. ಹಾಗಾಗಿ cell phone ಬೀಳುವ ತನಕ ತೆಗೆದ ಚಿತ್ರಗಳು ಇಲ್ಲಿವೆ.

ವ್ಯಂಗ್ಯಚಿತ್ರ ಕಲಾವಿದರಿಂದ ಮಾಲವಿಕ, ನಿಹಾರಿಕ ಹಾಗು ಥಾನಿಶ್ (ಫೋಟೊದಲ್ಲಿರುವ ಪುಟ್ಟ) ರ ಚಿತ್ರಗಳನ್ನು ಸ್ಥಳದಲ್ಲೇ ಬರೆಸಿ ಕೊಂಡೆವು. ಎರಡು ಐಸ್ ಕ್ರೀಮ್ ತಿಂದು ಊಟಕ್ಕೆ ಹೊರಡುವಾಗ ಆಗಲೇ ನಾಲ್ಕು ಗಂಟೆ, ಎಲ್ಲ ಕಡೆ ಊಟ ಕ್ಲೋಸ್....ಅಲ್ಲೇ ಯವುದೋ ಹೋಟಲ್ (ಹೆಸರು ಮರೆತು ಹೋಯ್ತು)ನಲ್ಲಿ ರಾಗಿ ದೋಸೆ ತಿಂದ್ವಿ. :-)

ಈಗ ಚಿತ್ರಗಳನ್ನು ನೋಡಿ....ನಂತರ ಸುಶ್ರುತರ ಬ್ಲಾಗ್ http://hisushrutha.blogspot.com/2010/02/blog-post.html
 ಗೆ ಭೇಟಿ ನೀಡಿ ಚಿತ್ರಸಂತೆ ಪದ್ಯ ಓದಿ. ಚೆನ್ನಾಗಿದೆ.
:-)



10 comments:

ಸವಿಗನಸು said...

ಚಿತ್ರಸಂತೆ ನಾನು ನೋಡೆ ಇಲ್ಲ....
ಇಲ್ಲಿ ನೋಡಿ ಖುಷಿಯಾಯಿತು....
ಬಣ್ಣದ ಚಿತ್ರಗಳೊಂದಿಗೆ ವಿವರಣೆ ನೀಡಿದ್ದಕ್ಕೆ ಅಭಿನಂದನೆಗಳು...

Subrahmanya said...

ತಡವಾದರೂ , ಉತ್ತಮ ಚಿತ್ರಗಳನ್ನು ಕೊಟ್ಟಿದ್ದೀರಿ..ಧನ್ಯವಾದ :)

ಜಲನಯನ said...

ಚಿತ್ರ ಸಂತೆ...ವಾವ್...ಸಂತೇನೇ..? ಚನ್ನಾಗಿವೆ ನಿಮ್ಮ ಕಲೆಕ್ಶನ್ಸ್...ಮತ್ತೆ ನಿಮ್ಮ ಕಲೆಕ್ಶನ್ಸ್ ಇನ್ನೂ ಇದ್ರೆ ಹಾಕಿ ನೋಡೋಣ....

Raghu said...

ಗುಡ್ ಗುಡ್.. ಒಳ್ಳೆಯ ಕಲೆಕ್ಶನ್ಸ್...
ನಿಮ್ಮವ,
ರಾಘು.

ಮನಸು said...

tumba chennagide santeya chitragaLu

Ramesh said...

nimma taste mattu nimma collection chennagide... Haage nimma mobile camera kuda chennagide...

nenapina sanchy inda said...

thank you everybody for liking my chitrasante pics

:-)

malathi S

ಸೀತಾರಾಮ. ಕೆ. / SITARAM.K said...

nice pictures

Anonymous said...

nim jote to too tooo... naanu blog bareyOdu/nODOdu vipareeta kaDime aagide nija... neewu heege shuru maaDideeni anta yaake hELlilla?? Raghu blog nODi tiLkoLbEkaaytu :(
anyhw, sakhataagide photos. nimma bihaarada nenapugaLanna plz munduvaresi...
nalme,
CheT

ಮಂಸೋರೆ said...

ಚಿತ್ರಸಂತೆ ಮತ್ತೆ ಬಂದಿದೆ... ಇದೇ ಜನವರಿಯ ೩೦ರ ಭಾನುವಾರದಂದು.. ಅದು ಕೆಲವು ವಿಶೇಷತೆಗಳನ್ನೊಳಗೊಂಡ ಚಿತ್ರಸಂತೆ.. ತಪ್ಪದೇ ಭಾಗವಹಿಸಿ.

ಮಂಸೋರೆ.