ಯಾವಾಗಲೋ ಒಂದು ದಿನ ಅನ್ನಿಸ್ತು..was i a good parent when my girls were growing up? ಬೆಂಗಳೂರಿಗೆ ಬಂದಾಗ ನನಗೆ 32 ರ ವಯಸ್ಸು. ಶ್ರೀಕಾಂತ್ ಬ್ಯಾಂಕ್ ನ ನೌಕರಿ ಬಿಟ್ಟಿದ್ಫು ಹಲವರಿಗೆ ಇರುಸು ಮುರುಸಾಗಿತ್ತು. ನಾನಂತು ಮದುವೆಯಾಗಿದ್ದು ಇವರು ಬ್ಯಾಂಕ್ ನಲ್ಲಿದ್ದಾರೆ, LFC, transfer ಮುಂದೆ ಬಡ್ತಿ, ಬಂಗಲೆ , ಕಾರು ಅಂತ ಹಾಯಾಗಿ ಇರಬಹುದೆಂದು. frankly ಒಂದು ಮಾತು ಹೇಳ್ತೀನಿ, ನಾನು ಬೆಳೆಯುವಾಗ ಅಪ್ಪ ಬ್ಯಾಂಕ್ ನಲ್ಲಿದ್ದರೂ , ಅಪ್ಪನ ಹೃದಯ ಸಂಬಂಧಿ ಕಾಯಿಲೆ, shares/stock ನಲ್ಲಿ ಹಣ ಹೂಡುವುದೆಂದು..ನಮ್ಮಲ್ಲಿ ಯಾವಾಗಲೂ ಹಣದ ತಾಪತ್ರಯ. ನನ್ನ ಮಾತು ಕಡಿಮೆ, ಆದರೂ ಅಮ್ಮನಿಗೆ ಒಂದೇ ಮಾತು ಅಂದಿದ್ದೆ...ಮದುವೆ ಮಾಡುವುದೇ ಆದರೆ ನನಗೆ ಶ್ರೀಮಂತ ಮನೆತನಕ್ಕೆ ಕೊಡಬೇಕೆಂದು...
ಶ್ರೀಕಾಂತ್ ಬ್ಯಾಂಕ್ ಬಿಡುತ್ತೇನೆ ಎಂದಾಗ ಪಿಚ್ಛೆನಿಸಿದ್ದು ಹೌದು. ಮದುವೆ ನಿಶ್ಚಿತಾರ್ಥದ ಮುಂಚೆ 'ನಾನು ಬ್ಯಾಂಕ್ ನಲ್ಲಿ 5 ವರ್ಷ ಮಾತ್ರ ಮುಂದುವರೆಯುವುದು, ಆಮೇಲೆ ತೋಟ ನೋಡುಕೊಳ್ಳುತ್ತೇನೆ ಸೆಗಣಿ ಎಲ್ಲ ಬಾಚಲಿಕ್ಕೆ ರೇಡಿಯಿದ್ರೆ ಮದುವೆ ಅಂತ....ಆದರೆ 18ವರ್ಷ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ..ಬ್ಯಾಂಕಿಂಗ್ ಅಲ್ಲಿ interest ಇಲ್ಲ ಅಂದಾಗ , ಇರಲಿ whatever he wants ಅಂತ ಒಪಿಗೆ ಇತ್ತಿದ್ದೆ. ಮಾತ್ರವಲ್ಲ ಬೆಂಗಳೂರಿಗೆ ಬಂದ ಸ್ವಲ್ಪ ಸಮಯಕ್ಕೆ ನಮಗೆ ಮಹಿಳಾ ಸ್ವ ಉದ್ಯೋಗ ತರಬೇತಿ ಕೇಂದ್ರ ನಡೆಸುವ 5 ವರ್ಷದ ಪ್ರೊಜೆಕ್ಟ್ ಸಿಕ್ಕಿ ಬಿಟ್ಟಿತು. ನಾನು ಶೋಭಾ ಸಾಲಿಮಠ, ಜಿ ಎಂ ದೇಶಪಾಂಡೆ ಅವರ ನೇತೃತ್ವದಲ್ಲಿ ಅದನ್ನು ನಡೆಸುವುದು ಎಂದಾಯಿತು. ಮಕ್ಕಳು ಚಿಕ್ಕವರು.. ನಾನು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು, ಬೆಳಗಿನ ತಿಂಡಿ, ಮಕ್ಕಳ, ನನ್ನ ಊಟದ ಡಬ್ಬಿ ಎಲ್ಲ ರೆಡಿ ಮಾಡಿ, ಮನೆ ಚೊಕ್ಕ ಗಳಿಸಿ, ಎರಡು ಬಸ್ ಹಿಡಿದು ಜಯನಗರ 4 ನೆಬ್ಲಾಕ್ ತಲುಪಬೇಕಿತ್ತು. ಮಕ್ಕಳ ಜತೆ ಕ್ವಾಲಿಟಿ time spend ಮಾಡಿದ್ದು ನೆನಪಿಲ್ಲ. ನನ್ನದೇ ಲೋಕದಲ್ಲಿ ಇರುತ್ತಿದ್ದೆ. ವಾರ್ಯಅಂತದಲ್ಲಿ cleaning exhibition, ನಾಟಕ ಅಂತ ಬಿಸಿ ಇರ್ತೀದ್ವಿ. ಆಮೇಲೆ ಒಂದಾದ ಮೇಲೆ ಒಂದು project ಗಳು ಬರುತ್ತಾ.. ಪುರುಸೊತ್ತಿಲ್ಲದ ಜೀವನ.ಇತ್ತೀಚಿಗೆ ಒಂದು ದಿನ ನಾನು, ಅಕ್ಕ ಕೇಕ್ ಗೆ ಬೇಕಾದ ಸಾಮಾನು ತರಬೇಕಾದರೆ 'amma, do you know? you are the first person to 'work from home' ಅರೆ ಹೌದಲ್ವಾ? ಬೆಂಗಳೂರಿಗೆ ಬರುವ ಮುಂಚೆ ನಾವು ಉಡುಪಿಯಲ್ಲಿದ್ವಿ. 1998 . ಅಲ್ಲಿ ನಾನು ವನಿತಾ ಜೈನ್ / pai, ನಡೆಸುವ 'southnexus.com' ನಲ್ಲಿ ಕೆಲಸ ಮಾಡುತ್ತಿದೆ. ಅನುವಾದದ ಕೆಲಸ. ನನಗೆ ಗೊತ್ತಿರುವ ಹಾಗೆ ಅದು ಮೊದಲ ವೆಬ್ ಪೋರ್ಟಲ್. ಅನುವಾದ ಮಾಡಬೇಕಾದ ಪುಸ್ತಕಗಳನ್ನು ತರುವುದು, ಅನುವಾದ ಮಾಡಿದ ಬರಹ floppy disk ನಲ್ಲಿ ಹಾಕಿ ಅದನ್ನು ತೆಗೆದುಕೊಂಡು ಆಫಿಸ್ ಗೆ ಹೋಗುವುದು ಮತ್ತು ಸಂಬಳದ ಚೆಕ್ ತರಲು ಮಾತ್ರ ನಾನು ಮಣಿಪಾಲ್ ಗೆ ಹೋಗುವುದಾಗಿತ್ತು. ಅದರಲ್ಲೂ ಶ್ರೀಕಾಂತ್ ಆಫಿಸ್ ಮಣಿಪಾಲದಲ್ಲಿ, ಅದರ ಹಿಂದಿನ ರಸ್ತೆಯಲ್ಲಿ ಸೌತ್ ನೆಕ್ಸಸ್ ಆಫಿಸ್. ಹೋಗುವಾಗ ಶ್ರೀಕಾಂತ್ ಜತೆ ಹೋದರೆ, ನಾನು ಬಸ್ ನಲ್ಲಿ ಮನೆಗೆ ವಾಪಸ್.
'ಅಮ್ಮ, ಸಂಬಳ ಬಂದ ದಿನ ನೀನು ನಮಗೋಸ್ಕರ ಸ್ಟೇಷನರಿ ಅಂಗಡಿಯಿಂದ ಹೊಸದಾಗಿ ಬಂದಿರುವ ಪೆನ್ಸಿಲ್, ಇರೆಸರ್ ಅಥವಾ ಏನಾದರೊಂದು...ಮತ್ತು ಬೇಕರಿಯಿಂದ ರೋಲ್ ಎಲ್ಲ ತರುತ್ತಿದ್ದಿ. ನನಗೆ ಖುಶಿಯಾಗ್ತಿತ್ತು. ಬೆಂಗಳೂರಿಗೆ ಬಂದ ಮೇಲೆ ಸಂಬಳ ಸಿಕ್ಕ ದಿನ ನೀನು ಆಪ್ಪಲ್ ಕೇಕ್, ಜಯನಗರ 4 th ಬ್ಲಾಕ್ ನಿಂದ ಸಮೋಸ, ಮಸಾಲಾ ಪುರಿ ತರುತ್ತಿದ್ದಿ...ಸಂಬಳ ದುಡ್ಡು ನಮಗೆ ಖರ್ಚು ಮಾಡಲು ಇಡುತ್ತಿದ್ದೆ. ಮತ್ತು ರಜೆಯಿದ್ದಾಗ ನಾವು ನಿನ್ನ ಕಾಟನ್ ಸೀರೆ ಟೆಂಟ್ ಮಾಡಿಕೊಂಡು ಬೇಕರಿಯಿಂದ ಚಿಪ್ಸ್, ಕೇಕ್ ತಂದು, ಪಿಕ್ ನಿಕ್ ಮಾಡ್ತಿದ್ವಿ...ಅಂದಾಗ ಅವರಿಗೂ ಕೆಲವಾದರೂ ಒಳ್ಳೆಯ ನೆನಪುಗಳನ್ನು ಉಳಿಸಿದ್ದೇನೆ ಅಂತ ಸಮಾಧಾನವಾಯಿತು. ಯಾಕೆಂದರೆ i was very strict with them...ಆಮೇಲಾಮೇಲೆ ನಾನು ಅವರ ಫ್ರೆಂಡ್ ತರಹ ಆದೆ...ಈಗ ಅವರು ನನ್ನನ್ನು ಚಿಕ್ಕ ಮಗು ಎಂದು ಪರಿಗಣಿಸಿ ಬೈ ತಾರೆ 😀😀❤️
belated mother's Day
ನಿಹಾರಿಕಾಳ ಕುತ್ತಿಗೆಗೆ ಸ್ವಲ್ಪ ಏಟಾಗಿದೆ. ಡಾಕ್ಟರ್ ಗೆ ತೋರಿಸಲು ಇಲ್ಲಿಗೆ ಬಂದಿದ್ದಾಳೆ. ಹಾಗೆ ಒಂದು ಮದರ್ಸ್ ಡೇ ಲೆಕ್ಕದಲ್ಲಿ ಫೋಟೋ. ,🙂❤️🌺🌿🍰

No comments:
Post a Comment