December 27, 2011

ದೇಶಕಾಲ ತ್ರೈಮಾಸಿಕ mousepad ಆಗಿದ್ದು

ಆ ದಿನ ಒಂದು ಪ್ರಾಜೆಕ್ಟ್ ಸಬ್ಮಿಟ್ ಮಾಡಲು ಕೊನೆಯ ದಿನ. ಡೆಡ್ ಲೈನ್ ಹತ್ತಿರ ಬರ್ತಿದ್ದ ಹಾಗೆ ಶ್ರೀಕಾಂತ ಗೆ ಟೆನ್ಶನ್.ಯಾಕೆ ಅಂದರೆ ಅದು ಆನ್ ಲೈನ್ ಸಬ್ಮಿಶನ್. ಎರಡು ಮೂರು ಸಲ ಸಿಸ್ಟಮ್ ಹ್ಯಾಂಗ್ ಆಗಿ, ಮಾಡಿರೋದನ್ನ ಪುನಃ ಪುನಃ feed ಮಾಡಬೇಕಾಯಿತು. ಆವಾಗಲೆ ನಮ್ಮ ಹಳೆಯ ಮೌಸ್ ಪ್ಯಾಡ್ ಕೈ ಕೊಟ್ಟಿತು. ಶ್ರೀಕಾಂತ ’get me a book ,fast!!' ಅಂದರು. ಅಲ್ಲೆ ಸಿಕ್ಕ ನಿಹಾನ ನೋಟ್ ಪುಸ್ತಕ ಕೊಟ್ಟೆ. ಆದರೆ ಅದರಲ್ಲಿ ಮೌಸ್  ಸರಿ ಮೂವ್ ಆಗ್ತಾ ಇರಲಿಲ್ಲ. Get me something with a rough texture.ಶ್ರೀಕಾಂತ ಗೆ ಟೆನ್ಶನ್ ಆದಾಗ english ಮಾತಾಡೊದು :-)
ನಾನು ಟೂರ್ ನಿಂದ ಬಂದಿದ್ದಷ್ಟೆ. ಓದಲು ದೇಶಕಾಲ ಪುಸ್ತಕ (issue no 25) ತೆಗೆದುಕೊಂಡು ಹೋಗಿದ್ದೆ. ಆ ಪುಸ್ತಕದ rough texture ನೆನಪಾಗಿ ಅದನ್ನೆ ತಂದು ಕೊಟ್ಟೆ. ಒಹ್ excellent ಅಂದುಬಿಟ್ಟು , ಬೇಗ ಬೇಗ ಪ್ರಾಜೆಕ್ಟ್ ತಾಯಾರು ಮಾಡಿ ಸಬ್ಮಿಟ್ ಮಾಡಿದರು. ಈ ವಿಷಯಕ್ಕೆ ಆಗಲೆ 6 ತಿಂಗಳು ಆಗಿದೆ. ಮತ್ತಿದನ್ನು in a 'spur of the moment' of camaraderie, ವಿವೇಕ ಶಾನಭಾಗ ಅವರ ಜತೆ ಶೇರ್ ಕೂಡ ಮಾಡಿದ್ದೇನೆ. :-)
 ಆ ಪುಸ್ತಕದ ಬೈಂಡ್ ಈಗ ಸವೆದು ಹೋಗಿದೆ. ನಿನ್ನೆ ಇದ್ದಕ್ಕಿದ್ದ ಹಾಗೆ ಶ್ರೀಕಾಂತ ’ಈ ಪುಸ್ತಕ ಹೋಯ್ತು, ಇನ್ನೊಂದು ದೇಶಕಾಲ ಪುಸ್ತಕ ತೆಗೆದುಕೊಂಡು ಬಾ ಅಂದಾಗ, ಒಂದು ಕ್ಷಣ ಶಾಕ್ ಆಗಿ ಜೋರಾಗಿ ನಕ್ಕು ಬಿಟ್ಟೆ. ನನ್ನ ಇಷ್ಟದ ದೇಶಕಾಲ ಮರಾಠಿ ಪುಸ್ತಕ ತಂದುಕೊಟ್ಟೆ.

ಇವತ್ತು ಶ್ರೀಕಾಂತ ಸಪ್ನಾ ಬುಕ್ ಹೌಸ್ ಗೆ ಹೊರಟಿದ್ದಾರೆ.(ಅಲ್ಲಿ ಮೌಸ್ ಪ್ಯಾಡ ವಗೈರಾ ಸಿಗುತ್ತಾ ಗೊತ್ತಿಲ್ಲ)( ಮೌಸ್ ಜತೆ ನನಗೆ ಜೋಗಿಯವರ ಹೊಸ ಪುಸ್ತಕ ತರಲು ಹೇಳಿದ್ದೇನೆ.)
ಅಂದ ಹಾಗೆ ಆ Europian Union ನ ಪ್ರಾಜೆಕ್ಟ್ ನಮಗೆ ಸಿಕ್ಕಿದೆ ಅಂತ ಬೇರೆ ಹೇಳಬೇಕಾಗಿಲ್ಲವಲ್ಲ??
ಸುಮ್ಮನೆ ಒಂದು ಲೈಟ್ ಪೋಸ್ಟ್ ವಿಥ್ ಲಾಟ್ಸ್ ಆಫ್ ಇಂಗ್ಲೀಷ್.:
ಮತ್ತೆ ಈ ಪೋಸ್ಟ special ಆಗಿ ರಾಜು ಶಿರಗುಪ್ಪಿಯವರಿಗೆ!!
ಖಂಡಿತ /promise ಸದ್ಯಕ್ಕಿದ್ದು ಲಾಸ್ಟ್ ಪೋಸ್ಟ್
ಹಾಂ ಅಂದ ಹಾಗೆ ಮೌಸ್ ಪ್ಯಾಡ್ ಗೆ ಕನ್ನಡದಲ್ಲಿ ಇಲಿಮಣೆ ಅನ್ನಬಹುದಾ??
:-)

December 23, 2011

the Face book Fun-das

ಜುಲೈ 2010, ಶ್ರೀಕಾಂತ ಗೆ ಡೆಂಗೆ ಹಾಗೂ ನಿಹಾರಿಕಂಗೆ air borne ವೈರಲ್ ಜ್ವರದಿಂದಾಗಿ 5-6 ದಿನಗಳ ಆಸ್ಪತ್ರೆವಾಸ. ಮನೆಗೆ ಬಂದ ಎರಡು ದಿನ, ನನಗೂ ರೆಸ್ಟ್ ಬೇಕಾಯಿತು..ಆಸ್ಪತ್ರೆ- ಮನೆ ಅಂತ ಓಡಾಡಿ ಬೆನ್ನುಹುರಿಯಲ್ಲಿ ನೋವು. ಮತ್ತೆ ಮನೆಯ ಉಳಿದ ಕ್ಲೀನಿಂಗ್-ಅದೂ-ಇದೂ etc.
gಮೈಲ್ ತೆರೆದರೆ ಅದರಲ್ಲಿ ರಾಶಿ ರಾಶಿ ಮೈಲ್ ಗಳು. ಅದರಲ್ಲಿ ಮೊದಲಿಗೆ ಇದ್ದದ್ದು ಸಹನಾ ಜೋಶಿಯವರ facebook ಆಮಂತ್ರಣ. ಸಾಕಷ್ಟು ಫೇಸ್ ಬುಕ್ ಆಮಂತ್ರಣಗಳಿದ್ದರೂ ನಾನದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಶ್ರೀಕಾಂತ ನನ್ನ ಹಿಂದೆ ನಿಂತು ನನ್ನ ಮೈಲ್ ಗಳನ್ನು ನೋಡುತ್ತ ಇದ್ದರು. ’ನೀನು face book ನಲ್ಲಿ ಇಲ್ಲವಾ’ ಅಂತ ಕೇಳಿದ್ರು. ನಾನು ’ಇಲ್ಲ’ ಅಂದೆ. ಹೇ ಜಾಯಿನ್ ಆಗಿ ನೋಡು ಅದರಲ್ಲೇನಿದೆ ಅಂತ. ಇತ್ತೀಚಿಗೆ ಆಫಿಸ್ ನಲ್ಲಿ ಹೊರ ದೇಶದವರು ಬಂದಾಗಲೆಲ್ಲ r u on facebook ಅಂತ ವಿಚಾರಿಸುತ್ತಾರೆ. ಬುಸಿನೆಸ್ interactions ಗೆ ಅದು ಸೂಕ್ತ ತಾಣ ಅಂತೆಲ್ಲ ಹೇಳುತ್ತಾರೆ ಅಂದ್ರು. ಅದಕ್ಕೆ ನಾನು , ಹುಷಾರಾದ ಕೂಡಲೇ ನೀವೆ ಸೇರಿಕೊಂಡು ಬಿಡಿ, ನನಗೆ ಅದರಲ್ಲಿ ಆಸಕ್ತಿ ಇಲ್ಲ ಅಂದೆ. ಅಷ್ಟರಲ್ಲಿ ಶ್ರೀಕಾಂತ ಆರೋಗ್ಯ ವಿಚಾರಿಸಲು ತಮ್ಮ ಫೋನ್ ಮಾಡಿದಾಗ, ಅವನು ’ಯೇ ನೀನು facebook ಜಾಯಿನ್ ಆಗು, ನಾನು ಆಗ್ತಾ ಇದ್ದೇನೆ ಅಂದ. ಹೂಂ ಅಂತ ಸಹನಾ ಜೋಶಿಯವರ invite ಆಗಲೇ accept ಮಾಡಿ, ಸುಮ್ಮನಿದ್ದು ಬಿಟ್ಟೆ. ಆಮೇಲೆ ಶುರು ಆಯ್ತು invite ಗಳ ಸರಮಾಲೆ. ಗೊತ್ತಿದ್ದವರು, ಇಲ್ಲದವರು ಅಂತ ಒಂದು ರಾಶಿ.ಸ್ವಲ್ಪ ದಿನ ನಾನು ಆ ಕಡೆ ಹೋಗಲೇ ಇಲ್ಲ.

ಸುಮಾರು ಎರಡು ತಿಂಗಳ ನಂತರ ಹೋಗಿ ನನ್ನ ಪ್ರೊಫೈಲ್, ಮುಂತಾದವುಗಳನ್ನು ಸೇರಿಸಿದೆ. ನನ್ನ ಸ್ಕೂಲ್, ಕಾಲೇಜ್ ಫ್ರೆಂಡ್ಸ್ ಗಳನ್ನು ಹುಡುಕುವ ಅಂದ್ರೆ, ನಾನು ಓದಿದದ್ದು ಹೆಣ್ಣುಮಕ್ಕಳ ಶಾಲೆ ಯಲ್ಲಿ. ಎಲ್ಲರ ಮದುವೆಯಾಗಿ ಅಡ್ಡ ಹೆಸರು ಬದಲಾಗಿದ್ದರಿಂದ ಯಾರೂ ಸಿಗಲಿಲ್ಲ. ಒಬ್ಬ ಕಾಲೇಜ್ ಸ್ನೇಹಿತೆ ಮಾತ್ರ ಸಿಕ್ಕಳು, ಅದು ಅವಳು ಮದುವೆಯಾಗಿಲ್ಲದ್ದರಿಂದ. ನನಗೆಷ್ಟು ಖುಶಿಯಾಯ್ತು ಅವಳು ಸಿಕ್ಕಿದ್ದು.ಅವಳು ಅಮೇರಿಕದಲ್ಲಿದ್ದಾಳೆ. ಅವಳಿಗೂ ಬೇರೆ ಯಾರೂ ಕಾಲೇಜ್ ಮೇಟ್ಸ್ ಸಿಕ್ಕಿಲ್ಲ ಅಂತೆ. ಆದರೆ ಅವಳ ಆಫಿಸ್ ನವರೆಲ್ಲ ಫೇಸ್ ಬುಕ್ ನಲ್ಲಿರೋದರಿಂದ, ನಾವು ಇ ಮೈಲ್ ವಿನಿಮಯ ಮಾಡ್ಕೊಿಡು ಸಂಪರ್ಕದಲ್ಲಿದ್ದೇವೆ.
ಇನ್ನು ಸುಮ್ಮನೆ ಕೆಲವು ನನ್ನ random ಅನುಭವಗಳನ್ನು ಹಂಚಿಕೊಳ್ಳುತ್ತೇನೆ.
ಒಬ್ಬರ ಮೆಸೇಜ್ ಹೀಗಿತ್ತು: ನಿಮ್ಮ ಫ್ರೋಫೈಲ್ ಚಿತ್ರ ತುಂಬ ಸುಂದರವಾಗಿದೆ. ನಿಮ್ಮ ಮಕ್ಕಳಿಗಿಂತ ನಿಮ್ಮ ಗಲ್ಲ ಹೆಚ್ಚು ಕೆಂಪಗಿದೆ..
ಇನ್ನೊಂದು: ನೀವು ಫಿಗರ್ ಹೇಗೆ maintain ಮಾಡ್ತೀರಿ ಮ್ಯಾಡಂ??
ಇನ್ನೊಬ್ಬರಂತು : ನನ್ನ ಹೆಸರು ಮಾಲತಿಗಿಂತ ಹರಿಣಾಕ್ಷಿ ಅಂತ ಇರಬೇಕಿತ್ತಂತೆ...ಮತ್ತೆ ಹರಿಣಾಕ್ಷಿ ಬಗ್ಗೆ ಸ್ವಲ್ಪ explanation ಬೇರೆ!!ಇದೆಲ್ಲ ಗಂಡಸರಿಂದ ಬಂದಿದ್ದು ಅಂತ ಬೇರೆ ಹೇಳಬೇಕಿಲ್ಲವಲ್ಲ??
ಇನ್ನೊಂದು ಮೆಸೇಜ್ ಹೀಗಿತ್ತು, ನೀವು ಫೇಸ್ ಬುಕ್ ನಲ್ಲಿ ಬರದಿದ್ದರೆ ಬೇಡ, atleast ನಿಮ್ಮ ಮೈಲ್ ಐಡಿ ಆದರೂ ಕೊಡಿ ಅಂತ.
ಇನ್ನೊಮ್ಮೆ ನನ್ನ ಅತ್ಯಂತ ಪ್ರಿಯ ಸ್ನೇಹಿತೆ ಬಾಸ್ ನ ಮೆಸೇಜ್, ನನ್ನನ್ನು ಕಂಡಾಪಟ್ಟೆ ಹೊಗಳಿ, ನನ್ನ ಅಭ್ಯಂತರ ಏನಿಲ್ಲದಿದ್ದರೆ ಅವರ ಫ್ರೆಂಡ್ ಶಿಫ್ request accept ಮಾಡಲು ಬರೆದಿದ್ದರು. ಹೇಗೂ ಎಲ್ಲ notification ಜಿ ಮೈಲ್ ನಲ್ಲಿ ಬರೋದರಿಂದ, ಆ ಮೈಲ್ ನನ್ನ ಗೆಳತಿಗೆ forward ಮಾಡಿದೆ. ಗೆಳತಿಗೆ ಶಾಕ್ ಮಾತ್ರ ಅಲ್ಲ, ಬಿಸಿ ತುಪ್ಪ, ಯಾಕೆಂದರೆ ಅವರು ಬಾಸ್ ಬೇರೆ!ಗೆಳತಿಗೆ ತೊಂದರೆ ಆಗುವುದು ನನಗೆ ಇಷ್ಟವಿರಲಿಲ್ಲ, ಅದಕ್ಕೆ ಸುಮ್ಮನಾದೆ!ಇತ್ತೀಚಿಗೆ ರಿಟಯರ್ ಆದರು ಅವರು. ಮೊನ್ನೆ ಪುನಃ ಅವರ request ಇತ್ತು. ಈಗ ಅವರನ್ನು ಬ್ಲಾಕ್ ಮಾಡಿದ್ದೇನೆ.
ಮತ್ತೊಬರ ವರಸೆ ಹೀಗೆ ಸಾಗುತ್ತದೆ: ನಾನು ಕಳುಹಿಸಿದ್ದ invite ನೀವು accept ಮಾಡಿಲ್ಲ, atleast ನಿಮ್ಮ ಮುಖ ಕಾಣಿಸುತ್ತಿರುವ ಫ್ರೋಫೈಲ್ ಪಿಕ್ಚರ್ ನಾದ್ರೂ ಹಾಕಿ. ದಿನ ಬೆಳಿಗ್ಗೆ ಒಂದು ಸಲ ನಿಮ್ಮ ಮುಖ ನೋಡಿದ ಹಾಗೆ ಆಗುತ್ತೆ ಅಂದಾಗ ನಾನೇನಾದ್ರು ದೇವತೆ ಗೀವತೆ ಆಗಿಬಿಟ್ಟಣಾ ಅನ್ನಿಸಿಬಿಟ್ಟಿತು. ಆಗ ನಾನು ಫ್ರೋಫೈಲ್ ಚಿತ್ರದಲ್ಲಿ ಲಾಲಬಾಗ್ ನ scenery ಚಿತ್ರ ಹಾಕಿದ್ದೆ.
ನಾನು ಮಕ್ಕಳ ಜತೆ ಇಂತಹ ಮೆಸೇಜ್ ಗಳನ್ನು ಶೇರ್ ಮಾಡಿ ಎಂಜಾಯ್ ಮಾಡ್ತೇನೆ. ಅಂತಹ ವ್ಯಕ್ತಿಗಳನ್ನು block ಮಾಡುವುದನ್ನು ತಿಳಿಸಿಕೊಟ್ಟಿದ್ದಾರೆ.
ನನ್ನ mouse has a mind of its own. ಯಾವುದೇ ವಿಷಯದ ಮೇಲೆ ಕರ್ಸರ್  ಜಾಸ್ತಿ ಹೋವರ್ ಆದ್ರೆ, ತನ್ನಷ್ಟಕ್ಕೆ ಆ ಲಿಂಕ್ ಮೇಲೆ ಕ್ಲಿಕ್ ಮಾಡುತ್ತೆ.  ಅದರ ಮೂಲಕ ನನಗೆ ಆಶಾ ಎನ್ನುವವರು ಪರಿಚಯ ಆಗಿದೆ. ಅವರ ವಾಲ್ ಪೋಸ್ಟ್ ಯಾವತ್ತೂ humorous ಆಗಿರತ್ತೆ. ಇನ್ನೊಬ್ಬರು ಭಾರತಿ ಘನಶ್ಯಾಮ್. ಇವರಿಬ್ಬರೂ ನನಗಿಷ್ಟ. ಮತ್ತೆ ನನ್ನ ಫ್ರೆಂಡ್ಸ್ ಲಿಸ್ಟ್ ನಲ್ಲಿರೋರೆಲ್ಲ ಅವರೆ invite ಮಾಡಿದ್ದು ವಿನ: ನಾನಾಗಿ freindship ಆಮಂತ್ರಣ ಕಳುಹಿಸಿದ್ದು ಶ್ರೀಕಾಂತ ಬೇಡತೂರ ಮತ್ತು ಅನು ಪಾವಂಜೆಯವರಿಗೆ ಮಾತ್ರ.
ಒಬ್ಬ ನನ್ನ ಫೇಸ್ ಬುಕ ಫ್ರೆಂಡ್ ಅಂತೂ ನಾನು ಕಮೆಂಟ್ ಹಾಕಿದ ಕಡೆ ಎಲ್ಲ ಲೈಕ್ ಹಾಕಿ ಬರುತ್ತಾರೆ. ನನ್ನ faithful ಅನುಯಾಯಿ ಅಂತ ಅವರಿಗೆ ನಾನು, ಮಕ್ಕಳು ಹೆಸರಿಟ್ಟಿದ್ದೇವೆ. ಅವರು ನನ್ನ ಬ್ಲಾಗ್ ಓದುಗರು ಕೂಡ. ಈ ಪೋಸ್ಟ್ ಓದಿ ನನ್ನನ್ನು unfriend ಮಾಡಲೂ ಬಹುದು ಆದರೆ ನಿಜ ಹೇಳಿ ಬಿಡ್ತೇನೆ, ಐ ಹೇವ್ ಕಮ್ ಟು ಲೈಕ್ ಹಿಂ ಎ ಲಾಟ್. :-)
ಫೇಸ್ ಬುಕ್ ಸೇರಿಕೊಂಡ ಮೊದಲಿಗೆ ನಾನು 'ಅವರು ಇವರಇವರು ಅವರ  ಫ್ರೆಂಡ್ ಅಂತೆಲ್ಲ accept ಮಾಡ್ಕೊಂಡು ಬಿಡ್ತಿದ್ದೆ.  ಮತ್ತೆ ನನ್ನ ಪರಿಚಯದಿಂದ ಅವರು ನಿಹಾಗೆ friends invtie  ಕಳುಹಿಸಿದ್ದಾಗ, ’ಅಮ್ಮ ಇವರ್ಯಾರು? ನೀನು common friend ಅಂತೆ ಅಂತ ಕೇಳಿದ್ಲು. ನನಗೊತ್ತಿಲ್ಲ ಅಂದೆ. ಮತ್ತೆ ಗೊತ್ತಿಲ್ಲದವರನ್ನೆಲ್ಲ ಫ್ರೆಂಡ್ಸ್ ಮಾಡ್ಕೊಂಡಿದ್ದೀಯಾ?? ಫೇಸ್ ಬುಕ್ ಓಪನ್ ಮಾಡು ನೋಡುವಾ ಅಂತ ಹೇಳಿ, ಇವರು ಯಾರು ಅಂತ ಕೇಳಿದ್ಲು. ನನಗೆ ಗೊತ್ತಿಲ್ಲ ರಘು ಮಾಮನ ಫ್ರೆಂಡ್ ಅಂತ accept ಮಾಡ್ದೆ ಅಂತ ಹೇಳಿದೆ. No, this is not done ಅಂತ ನನಗೆ direct ಪರಿಚಯ ಇಲ್ಲದವರ ಹೆಸರನ್ನೆಲ್ಲ unfriend ಮಾಡಿ ನನ್ನ ಫ್ರೆಂಡ್ಸ್ ಲಿಸ್ಟ್ 300 ರಿಂದ 75 ಕ್ಕೆ ಇಳೀತು, :-)
ಮತ್ತೆ ಕೆಲವರನ್ನೆಲ್ಲ  ಫೇಸ್ ಬುಕ್ ತನ್ನಿಂತಾನೆ ಡಿಲೀಟ್ ಮಾಡಿದೆ ಅದರಲ್ಲಿ ನನ್ನ ಕಸಿನ್ ಜಯಮಾಲ ಕೂಡ. ಅದೂ ಅವಳು ಹೇಳಿಯೇ ನನಗೆ ಗೊತ್ತಾಗಿದ್ದು. ಅವಳು ಅಷ್ಟೊಂದು active ಇಲ್ಲ ಮತ್ತು ನಮ್ಮ ಪರಸನಲ್ ಮೈಲ್ ಐಡಿ ಇರೋದ್ರಿಂದ ನಾವು ಪುನ: ಫೇಸ್ ಬುಕ್ frienship ಮಾಡ್ಕೊಂಡಿಲ್ಲ.
ನನ್ನ ಫೇಸ್ ಬುಕ್ ಅಕೌಂಟ್ ನಲ್ಲಿರುವ ಹೆಚ್ಚಿನವರು ನನ್ನ ಬ್ಲಾಗ್ ಓದುಗರು, ಅವರು ಬಿಟ್ಟರೆ ನನ್ನ family members ಮತ್ತು ಕೆಲವು ಕೊಂಕಣಿ/ತೀರ್ಥಹಳ್ಳಿಯವರು.ಹೆಂಗಸರ ಪ್ರೆಂಡಶಿಪ್ ಆಮಂತ್ರಣ ನಾನು accept ಮಾಡುತ್ತೇನೆ!!:-)
ಕೆಲವರು ಸಿಂಪಲ್ ಮೆಸೆಜ್ ಗಳಾದ good morning/good evening/how are you ಮುಂತಾದವುಗಳನ್ನು, ಅಥವಾ ನಾನು ವಾಲ್ ನಲ್ಲಿ ಬರೆದುದನ್ನು ಓದಿ ಅದರ ಕಮೆಂಟನ್ನು ಮೆಸೇಜ್/ಇನ್ ಬಾಕ್ಸ್ ನಲ್ಲಿ ಕಳಿಸುತ್ತಾರೆ
ಮತ್ತು ಬದರಿನಾಥ ಪಲವಳ್ಳಿ ಯವರು ನನ್ನ ಬ್ಲಾಗ್ ಪೋಸ್ಟ್ ಕೆಲವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದರಿಂದ ನನ್ನ ಬ್ಲಾಗ್ ಗೆ ತುಂಬ visitors ಬಂದು ಹೋಗ್ತಿದ್ದಾರೆ!!
ಒಂದು ಬಾರಿ ನನ್ನ ಮೌಸ್ ಚ್ಯಾಟ್ ಮೇಲೆ ಹೋವರ್ ಆಗಿ ಅದು ಓಪನ್ ಆಗಿ ಒಂದೆ ಸಲಕ್ಕೆ ನಾಲ್ಕು ಜನ ಚ್ಯಾಟ್ ಗೆ ಬಂದು ನಾನು ಹೌಹಾರಿದೆ. ಅದನ್ನು ಹೇಗೆ ಕ್ಲೋಸ್ ಮಾಡೋದು ನನಗೆ ಗೊತ್ತಾಗದೇ, ಓದುತ್ತ ಕೂತ ನೀಹಾ ಗೆ ಹೆಲ್ಪ್ ಮಾಡಲು ಕೂಗ ಬೆಕಾಯಿತು :-(
ನನಗೆ ಇನ್ನೂ 452 ಫ್ರೆಂಡ್ ಶಿಪ್ request ಗಳು ಪೆಂಡಿಂಗ್ ನಲ್ಲಿವೆ. ನನ್ನ ಆಫಿಸ್ ನ ಸಾವಿತ್ರಿಯನ್ನು ಬಿಟ್ಟು, ಯಾರನ್ನು ಫ್ರೆಂಡ್ಸ್ ಮಾಡ್ಕೊಂಡಿಲ್ಲ :-)
ಮತ್ತೀಗ ಗ್ರೂಪ್ ಮಾಡ್ಕೊಂಡು ನಮ್ಮನ್ನು ಕೇಳದೆಯೆ ಅದರಲ್ಲಿ ಸೇರಿಸ್ತಾರೆ, ಅದರಿಂದ ತುಂಬ ಕಿರಿಕಿರಿ ಯಾಗುತ್ತೆ, ಮೈಲ್ ನಲ್ಲಿ ಅದರದ್ದೆ notification ನಿಂದ ಕೆಲವು ಮುಖ್ಯವಾದ ಮೈಲ್ ಕಳೆದುಹೋಗಿ ಬಿಡುತ್ತೆ. ಆದರೂ ಅಂತಃಪುರ ಎಂಬ secret ಗ್ರೂಪ್ ಗೆ ನನ್ನನ್ನು ಸೇರಿಸಿದ್ದಾರೆ, ladies only...ಅದು ನನಗೆ ತುಂಬ cosy, ಇಷ್ಟ ಆಗಿದೆ!!
ಇದೆಲ್ಲರ ನಡುವೆ ಶ್ರೀಕಾಂತ ರಾಯ್ರರು ಫೇಸ್ ಬುಕ್ ಸೇರಿ password ಮರೆತೂ ಆಯಿತು. ನಾನು ಮಕ್ಕಳು ಸುಮಾರು ಪ್ರಯತ್ನ ಮಾಡ್ವಿದ್ದೇವೆ account /paasword recovery ಸರಿ ಪಡಿಸಲು, ಆದರೆ ಅಗಿಲ್ಲ. ನಿಮಗೇನಾದರೂ ಉಪಾಯ ಗೊತ್ತಾ??
ನನಗೆ ಫೇಸ್ ಬುಕ್ ಜಾಯಿನ್ ಆಗಲು ಹೇಳಿದ ತಮ್ಮ, ಅವನು ಫೇಸ್ ಬುಕ್ ಜಾಯಿನ್ ಆಗಲಿಲ್ಲ ಮಾತ್ರವಲ್ಲ, ಅವನ ಆಫಿಸ್ ನಿಂದ ಫೇಸ್ ಬುಕ್ access ಬಂದ್ ಮಾಡುವುದರಲ್ಲಿದ್ದಾನೆ. ನಮ್ಮ ಬೆಂಗಳೂರಿನ ಆಫಿಸ್ ನಲ್ಲೂ ಕೂಡ after office hours ಫೇಸ್ ಬುಕ್ ಮುಂತಾದವುಗಳನ್ನು ನೋಡಬೇಕಂತೆ :-)
ಕೆಲವೊಮ್ಮೆ ವಾಲ್ ಪೋಸ್ಟ್ ಗಳಿಗೆ ಯಾವುದೇ ಕಾಮೆಂಟ್ , like ಮುಂತಾದವುಗಳು ಇರಲ್ಲ. ಫ್ರೆಂಡ್ ಜತೆ ಚಾಟ್ ಮಾಡುವಾಗ ಅವನಿಗೆ ಹೇಳಿದ್ರೆ...ನಮ್ಮ wall post ಗೆ ನಾವೆ 'like' ಹಾಕ್ಕೊಂಡ್ರೆ ಬೇರೆ ಜನರಿಗೆ ಅದು visible ಆಗುತ್ತೆ ಅಂತೇನೋ ಹೇಳ್ದ. yeow , no body can be that desperate ಅಂತ ಸುಮ್ಮನಾದ್ರೂ, ಕೆಲವರು ತಮ್ಮ ತಮ್ಮ ಲಿಂಕ್ ಗೆ ತಾವೇ like ಹಾಕೋದು ನೋಡಿದ್ದೇನೆ!!
ಕೆಲವೊಮ್ಮೆ ನಾನು ಯಾರೂ ಓದಲ್ಲ ಅಂತ ಸುಮ್ಮನೆ ವಾಲ್ ನಲ್ಲಿ ಬರೆದದ್ದಕ್ಕೆ ತುಂಬ ಜನ ಪ್ರತಿಕ್ರಿಯಿಸಿದ್ದಾರೆ!!ಇನ್ನೊಬ್ಬ ಗೆಳತಿ ಬ್ಲಾಗ್ ಮೂಲಕ ಪರಿಚಯವಾದವಳು, graphic artist..ಅವಳಿಗೆ ಅವಳ art ಗಳನ್ನೆಲ್ಲ ಫೇಸ್ ಬುಕ್ ನಲ್ಲಿ ಹಾಕುವ suggestion ನಿಂದಾಗಿ ಈಗ ಅವಳು freelance ಅರ್ಟಿಸ್ಟ್ ಆಗಿ ತುಂಬ demand ನಲ್ಲಿದ್ದಾಳೆ. ಅವಳಿಂದ ಪದೇ ಪದೇ ಥ್ಯಾಂಕ್ಸ್ ಮಲತಿ ಯಕ್ಕ ಇರುತ್ತವೆ.
ನಿನ್ನೆ ಅಪಾರ ರಘು ಅವರ ಕವರ್ ಪೇಜ್ ನೋಡಿ ಅವರಿಗೆ ಫೋನಾಯಿಸಿ, ಚಂದದ ಪುಟಕ್ಕೆ ಅಭಿನಂದಿಸಿ, 'ನಾನು ಫೇಸ್ ಬುಕ್' ವಿಷಯ ನನ್ನ ಬ್ಲಾಗ್ ನಲ್ಲಿ ಹಾಕಬೇಕೆಂದಿದ್ದೆ, ಆದರೆ ಜೋಗಿ ನನ್ನನ್ನು ಬೀಟ್ ಮಾಡಿದ್ರು ಅಂದಾಗ ಅವರು, 'ಮಾಲತಿ, ಅವರು ಬರೆದಿರೋದು fiction, ನೀವು ನಿಮ್ಮ ಅನುಭವಗಳ ಆಧಾರದ ಮೇಲೆ ಬರೆಯುವುದಲ್ಲವಾ? ಬರೀರಿ,  ಅಂದಿದಕ್ಕೆ ಇದನ್ನು ಬರೆದು 25 ಕ್ಕೆ ಜೋಗಿಯವರ ಪುಸ್ತಕ  ಬಿಡುಗಡೆಯಾಗುವ ಮುಂಚೆ ನನ್ನ ಪೋಸ್ಟ್.
ಏನಿದ್ದರು psychological study ಗೆ ಒಳ್ಳೆಯ ವಿಷಯ ಅನ್ನುತ್ತಾಳೆ ನನ್ನ ನಿಹಾರಿಕ...
ಫೇಸ್ ಬುಕ್ ನಲ್ಲಿ ಪರಿಚಯರಾದವರಿಬ್ಬರು ನನಗೆ ತುಂಬ ಆತ್ಮೀಯ ರಾಗಿದ್ದಾರೆ!!
ನಿಮಗೆಲ್ಲರಿಗೂ ಮೆರ್ರಿ ಕ್ರಿಸ್ ಮಸ್ ಮತ್ತು 2012 ಹೊಸ ವರ್ಷದ ಶುಭಾಶಯಗಳು, ನಮ್ಮ ಮುಂದಿನ ಭೇಟಿ ಮುಂದಿನ ವರ್ಷ ನಾನೇ ಡಿಸೈನ್ ಮಾಡುತ್ತಿರುವ ನನ್ನ website ನಲ್ಲಿ
ಬರಲಾ.....:-)
ಮಾಲತಿ ಎಸ್

December 18, 2011

Paneer stuffed crust Pizza


For the Pizza Base
For the base:

Sieve flour, make a bay at the centre and add all the ingredients in the above table, make soft and elastic dough.
keep the dough covered with a wet cloth for 45 min or till it doubles in size
Roll into single round of 1/8 th inch thickness


For the Sauce

tomatoes-pureed, Onions, finely chopped garlic, olive oil/cooking oil, herbs like rosemary/Oregano, salt and pepper to taste.powdered herbs available in super markets like food world/More/Reliance etc
Heat oil, Saute Chopped garlic and onions till the raw smell disappears, add herbs, tomato puree and cook for 10-15 min until the mixture thickens to sauce consistency. This can be prepared beforehand and stored

For the Pizza Topping
Some Tomatoes, Capsicum, Onion, Mushroom, Mozarella Cheese. Paneer chunks for stuffing in the edges

Mushrooms

This is the tricky part. pull out the edges keep the paneer pieces and cover like shown in the picture
On the pizza base spread sauce and the sliced vegetable filling on top, lastly grate the cheese. 

Bake for 10 min. Piping hot pizza's ready to eat
Sauce and dough pic from the Net!!
Pizza made from scratch by Malavika , Niha the official photographer..and me as usual the taste-master. anytime home made is the BEST!!!
:-)

December 14, 2011

ಆ ದಿನ ನಡೆದದ್ದಾದರೂ ಏನು?- ಸಂಚಿಯಿಂದ ತೆಗೆದ ನೆನಪು -8

ಒಳ್ಳೆ ಕ್ರೈಮ್ ಸ್ಟೋರಿ ಟೈಟಲ್ ತರಹ ಇದೆ ಅಲ್ಲವ??
ಆ ತರಹ ಏನಿಲ್ಲ ಮುಂದೆ ಓದಿ....
ಮೂರು ನಾಲ್ಕು ತಿಂಗಳಿಗೊಂದು ಸಲ ನಾನು, ನಾವು ಮಲಗುವ ಮಂಚದ ಕೆಳಗೆಲ್ಲ ಕ್ಲೀನಿಂಗ್ ನಡೆಸ್ತೇನೆ. ಇತ್ತೀಚಿಗೆ 6 ತಿಂಗಳ ಮೇಲಾಗಿತ್ತು ಕ್ಲೀನ್ ಮಾಡ್ದೆ. ಮನೆಹತ್ತಿರದಲ್ಲೆಲ್ಲ ಎರಡು ಮೂರು ಮನೆಗಳನ್ನು extend, ಇನ್ನೊಂದು ಮಹಡಿ ಅಂತೆಲ್ಲ construction ಕೆಲಸ ಭರದಿಂದ ನಡೀತ ಇದೆ. ಸದ್ದಂತೂ ದಿನ ಪೂರ್ತಿ ಇದ್ದೆ ಇರುತ್ತೆ ಅದರ ಜತೆ ಜೆಲ್ಲಿ ಕಲ್ಲು, ಇಟ್ಟಿಗೆ, ಸಿಮೆಂಟು ಅಂತ ಸಿಕ್ಕಾಪಟ್ಟೆ ಧೂಳು ಬೇರೆ.
ಮನೆಯ ಎಲ್ಲ ಕೆಲಸಗಳಾದ ಮೇಲೆ ನಾನು ಮಂಚದ ಕೆಳಗಡೆ ಕ್ಲೀನಿಂಗ್ ಶುರು ಮಾಡೋದು.ನನ್ನ ಇಷ್ಟದ ಹಾಡನ್ನು ಕಂಪ್ಯೂಟರ್ ಅಥವಾ ಪುಟ್ಟ ರೇಡಿಯೋ volume ದೊಡ್ಡದಾಗಿಟ್ಟು ನನ್ನ ಕ್ಲೀನಿಂಗ್ ಶುರು. ಮಂಚದ ಕೆಳಗೆ ಮಹಾ ಎಷ್ಟು ಜಾಗ ಇರತ್ತೆ, ಅದಕ್ಕೆಲ್ಲ ಇಷ್ಟು preparation ಬೇಕಾ ಅಂತ ನಿಮಗೆ ಅನಿಸ ಬಹುದು. ಆದರೆ ಮಂಚದ ಕೆಳಗೆ ಒಂದು ದೊಡ್ಡ ಬ್ಯಾಗ್ ಇದೆ. ಅದರಲ್ಲಿ ತುಂಬ ಹೊಸ ಹಳೆ ಫೋಟೊಗಳ ಆಲ್ಬಂ ಇದೆ. ಅದನ್ನು ತೆರೆದು ಕೂತರೆ ನನಗೆ ಈ ಕಡೆಯ ಪರಿವೆಯೆ ಇರಲ್ಲ.
ಸರಿ ನಿನ್ನೆ ಗೀತಾ ದತ್ ಹಾಡು system ನಲ್ಲಿ ದೊಡ್ಡದಾಗಿ ಹಾಕಿ, ಬ್ಯಾಗ ತೆರೆದೆ. ಮೊದಲ ಸಿಕ್ಕ ಆಲ್ಬಂ ನನ್ನ ಎರಡನೆ ತಮ್ಮನ ಚೌಲದ್ದು. ನಮ್ಮಕುಲದೇವಸ್ಥಾನ  ಗೋವಾ ದಲ್ಲಿನ ಮಹಾಲಸಾ ದೇವಸ್ಥಾನದಲ್ಲಿ ನಡೆದದ್ದು. ಅದರಲ್ಲಿದ್ದ ಅಜ್ಜನ ಫೋಟೊ ನೋಡಿ ಅವರನ್ನು ತುಂಬ ಮಿಸ್ ಮಾಡ್ದೆ.

ನನ್ನ ತಮ್ಮ (ಕೃಷ್ಣ) ಬೇಗ ಹುಟ್ಟಿದ. premature birth. 7 ತಿಂಗಳಿಗೆ ಹುಟ್ಟಿದ್ದ. ನನ್ನ ಮೊದಲನೆ ಹುಟ್ಟು ಹಬ್ಬದ ಮೂರು ತಿಂಗಳ ನಂತರ. ಸಣ್ಣಕ್ಕೆ, ಆಗ ತಾನೆ ಹುಟ್ಟಿದ ಇಲಿ ಮರಿ ಹೇಗಿರುತ್ತೋ ಹಾಗೆ ಇದ್ದ. ಅವನನ್ನು ಹತ್ತಿಯಲ್ಲಿ ಸುತ್ತಿ ಇಡುತ್ತಿದ್ದರು. incubator ನಲ್ಲಿ ಇಡಲಾಗದಷ್ಟು weak ಇದ್ದ. ನರ್ಸ್ ಅವನ ಬೆನ್ನಿಗೆ ಸರಿ ಪೆಟ್ಟು ಕೊಡುತ್ತಿದ್ದರು. ಅವನು ಅತ್ತಷ್ಟೂ ಅವನ lungs ಗಟ್ಟಿಯಾಗಿ ಅವನು ಸರಿಯಾಗಿ ಉಸಿರಾಡಲು ಅನೂಕೂಲ ಅಂತ. ಹಾಲು ಚೀಪಲು ಶಕ್ತಿ ಇರಲಿಲ್ಲ. ಹತ್ತಿಯನ್ನು ಬತ್ತಿಯ ತರಹ ಮಾಡಿ ಅಮ್ಮನ ಹಾಲಿನಲ್ಲಿ ಅದ್ದಿ, ಆ ಹತ್ತಿಯನ್ನು ಅವನ ಬಾಯಲ್ಲಿ ಹಿಂಡುತ್ತಿದ್ದರು.
ಅಜ್ಜ ಅಪ್ಪನನ್ನು ಬೈದಿದ್ದು ಇನ್ನು ನೆನಪಿದೆ. ತಮ್ಮ ಹುಟ್ಟಿದ ತಕ್ಷಣ, ಅವನ ಸ್ಥಿತಿ ನೋಡಿ, (ಯಾಕೆಂದರೆ ಡಾಕ್ಟರ್ ಏನೂ hopes ಕೊಟ್ಟಿರಲಿಲ್ಲ) ಕೆಲಸದವನನ್ನು ಕಳುಹಿಸಿದ್ದರು ಅಪ್ಪನನ್ನು ಬ್ಯಾಂಕ್ ನಿಂದ ಕರೆದು ತರಲು. ಅಪ್ಪ ಅಂತೂ ಗಂಡು ಮಗ ಅಂತ ಕೇಳಿ, ಉಳಿದದ್ದು ಏನು ಕೇಳಿಸಿಕೊಳ್ಳದೆ, ಬ್ಯಾಂಕ್ ಪಕ್ಕದಲ್ಲಿದ ಮಿಠಾಯಿ ಅಂಗಡಿಯಿಂದ ಸ್ವೀಟ್ಸ್ ತೆಗೊಂಡು ಆಫಿಸ್ ಸ್ಟಾಫ್ ಗೆಲ್ಲ ಹಂಚಿ ಆರಾಮಾಗೇ ಬಂದರು. ಅಜ್ಜ, ’ಮಗುವಿನ ಸ್ಥಿತಿ ಹೀಗಿದೆ. ನಿನಗ್ಯಾರು ಮಿಠಾಯಿ ಹಂಚಿ ಬರಲು ಹೇಳಿದ್ದು’? ಅಂತ ಬೈದಿದ್ದರು.
ಡಾಕ್ಟರ್ ಮಗುವನ್ನು ಮನೆಗೆ ಕರೆದುಕೊಂಡು ಹೋಗಬಹುದೆಂದು ಹೇಳಿದ ಮೇಲೆ, ಅಮ್ಮನಿಗೆ ಇಬ್ಬರು ಪುಟ್ಟ ಮಕ್ಕಳನ್ನು ನೋಡಲು ತೊಂದರೆಯಾಗುತ್ತದಂತ, ಅಜ್ಜ ನನ್ನನ್ನು ಅವರ ಬಳಿಗೆ ಕರೆದುಕೊಂಡು ಹೋದರು. ಅಜ್ಜನಿಗೆ ನಮ್ಮಮ್ಮ ಒಬ್ಬಳೆ ಮಗಳು.ಹೀಗೆ ನನಗೆ 14 ವರ್ಷ ಆಗುವ ತನಕ ಅಜ್ಜನ ಬಳಿಯಲ್ಲೇ ಇದ್ದೆ. ಅಜ್ಜ ನನಗೆ ಬೆಳಿಗ್ಗೆ ಬೇಗ ಎಬ್ಬಿಸಿ ಸಂಸ್ಕೃತ ಓದಲು ಹೇಳುತ್ತಿದ್ದರು. ಉಚ್ಛಾರ ಸರಿಯಾಗುತ್ತದೆಂದು, ಅಥವ ಶ್ಲೋಕಗಳನ್ನು ಹೇಳುತ್ತ, ತಟ್ಟಂತ mental ಲೆಕ್ಕಗಳನ್ನು ಮಾಡುತ್ತ, ಬಳಿಯಲ್ಲೇ ಇದ್ದ ಸಮುದ್ರದ ದಂಡೆ ಮೇಲೆ ವಾಕ್ ಹೋಗ್ತಿದ್ವಿ. ಇಲ್ಲದಿದ್ದರೆ ಸಂಜೆ ಅಜ್ಜನ ಕಾರಿನಲ್ಲಿ ಒಂದು ಸುತ್ತು ತಿರುಗಿ ಬರುತ್ತಿದ್ವಿ. ಅಜ್ಜ ಇಂಜಿನಿಯರ್ ಆಗಿದ್ದು, ಹೈ ವೆ ರಸ್ತೆಗಳ ನಿರ್ಮಾಣದಲ್ಲಿ ತೊಡಗಿದ್ರು. ಬೇರೆ ಊರಿಗೆಲ್ಲ ಹೋದಾಗ ನನಗೋಸ್ಕರ ಪುಸ್ತಕಗಳನ್ನೆಲ್ಲ ತರಿಸಿ ಕೊಡುತ್ತಿದ್ದರು. ನನಗೆ ಪುಸ್ತ್ಕಕ ಪ್ರೀತಿ ಬರಲು ಅವರೇ ಕಾರಣರು. ಅದಲ್ಲದೆ ಅವರಿಗೆ ಹಸ್ತಸಾಮುದ್ರಿಕೆ ಕೂಡ ಗೊತ್ತಿತ್ತು. ಅವರ ಜತೆ ಕಳೆದ ಸಮಯ ನನಗೆ ಅತ್ಯಂತ ಪ್ರಿಯ. ಎಷ್ಟೆಲ್ಲ ವಿಷಯಗಳನ್ನು ಚರ್ಚಿಸುತ್ತ ಇದ್ದೆವು. ನಾನೊಬ್ಬಳೆ ಯುವರಾಣಿ ತರಹ ಬೆಳೆದೆ.ಮನೆಯಲ್ಲಿ ತುಂಬ ಆಳು ಕಾಳುಗಳಿದ್ರು.  ಕೇಳಿದ್ದನ್ನೆಲ್ಲ ಕೊಡಿಸುತ್ತಿದ್ದರು.
ನಾನಿ (ಅಜ್ಜಿ) ಗೆ ಕ್ಯಾನ್ಸರ್ ಆದ ಮೇಲೆ ನನಗೆ ಪುನ: ಅಮ್ಮನ ಬಳಿಗೆ ಕಳುಹಿಸಿ ಕೊಟ್ರು. ಅದಾದ ಮೂರು ವರ್ಷಕ್ಕೆ ನನ್ನ ಮದುವೆ ಯಾಯ್ತು. ಮದುವೆಯಾಗಿ ಸ್ವಲ್ಪ ಸಮಯ ತೀರ್ಥಹಳ್ಳಿ, ಆ ಮೇಲೆ ಕೊಪ್ಪ, ಆ ಮೇಲೆ ನನ್ನ ಡಿಗ್ರೀ ಪರೀಕ್ಷೆಗೆ ಮುಂಬಯಿ ಅಂತ ಹೇಳಿ ನಾನು ಒಂದು ಕಡೆ ಯಂತು ಇರುತ್ತಿರಲಿಲ್ಲ. ಮಾಲವಿಕ ಹುಟ್ಟಿದ ಮೇಲೆ, ಅಂದರೆ ನನ್ನ ಮದುವೆಯಾಗಿ 3 ವರ್ಷಗಳ ನಂತರ ಅಜ್ಜ ನನ್ನನ್ನು ನೋಡಲು ಕೊಪ್ಪಕ್ಕೆ ಬಂದಿದ್ದರು. ನಾನಿ, ನನ್ನ ಮದುವೆಗೆ 6 ತಿಂಗಳು ಮುಂಚೆ ತೀರಿಕೊಂಡರು. ನನ್ನ ಮದುವೆ ನೋಡುವ ಆಸೆ ಬಹಳ ಇತ್ತು ಅವರಿಗೆ.
ಸರಿ ಅಜ್ಜ ಬರುತ್ತ್ತಾರೆ ಅಂತ ನನಗೆ ಸಂಭ್ರಮವೋ ಸಂಭ್ರಮ. ನಮ್ಮ ಅಜ್ಜ ರಸ್ತೆ  ನಿರ್ಮಾಣ ಕಾಮಗಾರಿ ನಿಮಿತ್ತ ಭಾರತದ ಉದ್ದಗಲಗಳೆಲ್ಲ ತಿರುಗಿದ್ದರು. ಬಂದ ಕೂಡಲೆ ಅವರು ಹೇಳಿದ್ದು ’ಮಾಲತಿ, ಕೊಪ್ಪದಿಂದ ಎನ್ ಆರ್ ಪುರಕ್ಕೆ ಹೋಗುವ ರಸ್ತೆ ಇದೆಯಲ್ಲ ನಾನೆ ನಿಂತು ಕಟ್ಟಿಸಿದ್ದು. ಈಗಲೂ ಎಷ್ಟು ಚೆನ್ನಾಗಿದೆ ನೋಡು ಅಂದಾಗ ಎಷ್ಟೊಂದು ಹೆಮ್ಮೆ ಪಟ್ಟೆ. ಆ ಮೇಲೆ ಆ ರಸ್ತೆ ಮೇಲೆ ನಡೆಯುವಾಗಲೆಲ್ಲ (ಈಗಲೂ) ಆ ರಸ್ತೆ ಮೇಲೆ ವಿಶೇಷ ಪ್ರೇಮ. ರಸ್ತೆ ಮೇಲೆ ನಿಂತು ಚಪ್ಪಲಿ ತೆಗೆದು ಪಕ್ಕದಲ್ಲಿಟ್ಟು, ರಸ್ತೆಯನ್ನು ಪ್ರೀತಿಯಿಂದ ನೇವರಿಸುತ್ತಿದ್ದೆ. ನನ್ನ ತಮ್ಮ ಬಂದಾಗ ನಾನು ಹಾಗೆ ಮಾಡುವುದನ್ನು ನೋಡಿ, ಮಲಗಿ ನಮಸ್ಕಾರ ಮಾಡಿ ಒಂದು ಚುಮ್ಮ (ಮುತ್ತು) ಕೊಟ್ಟು ಬಿಡು ಅಂತಿದ್ದ,  ಸಿಟ್ಟಿನಿಂದ.:-)
ಅಜ್ಜನಿಗೆ low  ಬಿ ಪಿ ಇತ್ತು. ನಮ್ಮಲ್ಲಿ ಬಂದು ಎರಡು ವಾರ ಆಗಿರಬೇಕು ಒಂದು ದಿನ ಸಡನ್ ಆಗಿ hiccups - ಬಿಕ್ಕಳಿಕೆ ಶುರು ಆಗಿ ಬಿಡ್ತು. ಆ ದಿನ ಅಜ್ಜನಿಗೆ ಇಷ್ಟ ಅಂತ ಹುರುಳಿ ಸಾರು ಮಾಡಿದ್ದೆ. ತುಂಬಾ ರುಚಿಯಾಗಿದೆ ಅಂತ ಸ್ವಲ್ಪ ಹೆಚ್ಚೆ ಊಟ ಮಾಡಿದ್ದರು. ನಮ್ಮಲ್ಲಿ ಒಂದು ನಂಬಿಕೆಯಿದೆ. ಊಟ ರುಚಿಯಾಗಿ ಹೊಟ್ಟೆಗೆ ಹಿತವಾಗಿದ್ದರೆ ಬಿಕ್ಕಳಿಕೆ ಬರುತ್ತೆ ಅಂತ. ಏನು ಮಾಡಿದ್ರು ನಿಲ್ಲಲಿಲ್ಲ. ಸಕ್ಕರೆ ತಿಂದ್ರು, ನೀರು ಕುಡಿದ್ರು, ನಾನು ಹೇಳಿದ ಹಾಗೆ ಉಸಿರು ಬಿಗಿ ಹಿಡಿದ್ರು. ರಾತ್ರಿ, ಬೆಳಿಗ್ಗೆ ಒಂದೆ ಸಮ...ನನಗಂತು ಹೆದರಿಕೆ ಶುರು ಆಯಿತು. ಕೊಪ್ಪದಂತ ಚಿಕ್ಕ ಊರಿನಲ್ಲಿ ಡಾಕ್ಟರ್ ಎಲ್ಲಿ ಹುಡುಕೋದು?? ಶ್ರೀಕಾಂತ್ ಗೆ ಅಂತು ಹಳ್ಳಿಗಳ ತಿರುಗಾಟ. ನನಗೋ ಕನ್ನಡ ಗೊತ್ತಿರಲಿಲ್ಲ. ಸದ್ಯ ಆ ದಿನ ಶ್ರೀಕಾಂತ ಬೇಗ ಬಂದಿದ್ದರು. ಯಾರನ್ನೋ ಸಂಪರ್ಕಿಸಿ ಡಾ. ರಾಮಚಂದ್ರ ಅವರನ್ನು ಬೈಕ್ ನಲ್ಲಿ ಕರೆದುಕೊಂಡು ಬಂದ್ರು. ಅವರು ಬಂದು ಅಜ್ಜನನ್ನು ನೋಡಿ ಯಾವುದೋ ಮಾತ್ರೆ ತರಲಿಕ್ಕೆ ಹೇಳಿದರು. ಅದು ಸಿಗಲಿಲ್ಲ, ಹಾಗಾಗಿ ಅವರ ಶಾಪ್ ಗೆ ಕರೆದುಕೊಂಡು ಅವರ ಬಳಿಯಿದ್ದ ಔಷಧಿ ಕಳುಹಿಸಿಕೊಟ್ಟರು. ಸುಮಾರು ರಾತ್ರಿ ಕಳೆದ ಮೇಲೆ ಔಷಧದ ಪ್ರಭಾವದಿಂದ ಬಿಕ್ಕಳಿಕೆ ಕ್ರಮೇಣ ನಿಂತು ಹೋಯಿತು. ನಾವೆಲ್ಲ ಮಲಗಿದ್ದೆವು. ಸರೀ ರಾತ್ರಿ ’ಧಡಲ್’ ಸದ್ದಿಗೆ ನನಗೆ ಶ್ರೀಕಾಂತ ಗೆ ಎಚ್ಚರ ಆಗಿ ಹೊರಗೆ ಬಂದು ನೋಡಿದ್ರೆ ಅಜ್ಜ ಬಿದ್ದು ಬಿಟ್ಟಿದ್ದರು. ಬಹುಶ: toilet ಹೋಗಲು ಎದ್ದು, ತಲೆ ತಿರುಗಿ, ಬಿದ್ದ ರಭಸಕ್ಕೆ ಡೈನಿಂಗ್ ಟೇಬಲ್ ತಾಗಿದ್ದಿರಬೇಕು. ಮುಖದ ಮೇಲ್ ನೀರು ಚಿಮಿಕಿಸಿ ಅವರನ್ನು ಎಬ್ಬಿಸಿದೆವು. ಎಚ್ಚರ ಏನೋ ಆಯ್ತು, ಆದರೆ ಅವರಿಗೆ ಯಾವುದೇ ನೆನಪು ಇರಲಿಲ್ಲ. ನೀನು ಯಾರು ಅಂತ ಕೇಳಿದರು, ನಾನು ಅಜ್ಜ, ಮಾಲತಿ’ ಅಂದಿದಕ್ಕೆ ನೀನು ನನ್ನ ಮಾಲತಿಯಲ್ಲ’ ಅಂದು ಬಿಟ್ರು. ಅವರನ್ನು ಎಬ್ಬಿಸಿ ಅವರ ರೂಮ ಗೆ ಕರೆದುಕೊಂಡು ಮಲಗಿಸಿದ್ದೆವು. ದಿನೆ ದಿನೆ ಅವರ ಪರಿಸ್ಥಿತಿ ಕೆಡುತ್ತ ಹೋಯಿತು. ಮಲಗಿದ ಕಡೆ ನೆ ಮಲ ಮೂತ್ರ ವಿಸರ್ಜಿಸುತ್ತಿದ್ದರು. ಮಳೆಗಾಲ ಬೇರೆ. ಮಾಲವಿಕ ಸಣ್ಣವಳು. ಶ್ರೀಕಾಂತ ಎಷ್ಟು ದಿನ ರಜೆ ಹಾಕುವುದು? ತಮ್ಮನಿಗೆ ಆಗಷ್ಟೆ ಪರೀಕ್ಷೆ ಮುಗಿದಿದ್ದು ತಿಳಿದು ಬಂತು. ಬರುತ್ತಿಯಾ?? ಅಜ್ಜನನ್ನು ನೋಡಿಕೊಳ್ಳೋದು ನನಗೆ ಕಷ್ಟ ಆಗ್ತದೆ. ನಮ್ಮ ಅಜ್ಜ ಅಜಾನುಭಾಹು, ನಾನೋ ಕಡ್ಡಿ ತರಹ. ಅವರ ರೂಮ್ ಎಲ್ಲ ಕ್ಲೀನ ಮಾಡ್ತಿದ್ದೆ. ಆದರೆ ಅವರನ್ನು ಎತ್ತುವುದು ಅದೆಲ್ಲ ನನ್ನ ಒಬ್ಬಳಿಂದ ಆಗ್ತಿರಲಿಲ್ಲ. ಅಷ್ಟು ಮಾತ್ರವಲ್ಲ ಅಜ್ಜ 2 ನಂಬರ್ ಮಾಡಿ ಕೋಣೆಯ ಗೋಡೆಗೆ ಮೂಲೆಗೆ ಎಲ್ಲ ಹಚ್ಚುವುದು,ಬಟ್ಟೆ ಬಿಚ್ಚಿ ಬೆತ್ತಲಾಗಿ  ಕೂರುವುದು ಇಂತಹುದೆಲ್ಲ ಮಾಡ್ತಿದ್ದರು, ಚಿಕ್ಕ ಮಕ್ಕಳು ರಚ್ಚೆ ಹಿಡಿದ ಹಾಗೆ. ನಾನು ಅವರನ್ನು ಪುಟ್ಟ ಮಗುವಿನ ಹಾಗೆ ನೋಡಿಕೊಂಡಿದ್ದು ಅತ್ಯಂತ ಸಮಾಧಾನ ನನಗೆ. ಅಮ್ಮ ಈಗಲೂ ಹೇಳುತ್ತಾರೆ, ’ನೀನಾಗಿದ್ದಕ್ಕೆ ಮಾಡಿದೆ, ನನ್ನ ಕೈ ನಲ್ಲಿ ಆಗ್ತಿರಲಿಲ್ಲ’ ಅಂತ. ತಮ್ಮ ಬಂದ ಮೇಲೆ ನನಗೆ ಸ್ವಲ್ಪ ಧೈರ್ಯ ಬಂತು. ಡಾಕ್ಟರ್ ದಿನಾ ಬಂದು ನೋಡಿ ಹೋಗುತ್ತಿದ್ದರು.
ನನಗಂತು ತುಂಬ ಸುಸ್ತಾಗಿರುತ್ತಿತ್ತು. ಮಾಲವಿಕನನ್ನು ಮುದ್ದು ಮಾಡಲು ಸಮಯ ಸಿಗುತ್ತಿರಲಿಲ್ಲ.ಹೀಗೆ ಎರಡು ತಿಂಗಳು ಕಳೆದು ಹೋಯಿತು. ಅಜ್ಜ ಸರಿ ಹೋಗುವ ಲಕ್ಷಣ ಒಂದೂ ಕಾಣಲಿಲ್ಲ.
ಆ ದಿನ ಶನಿವಾರ ಮಧ್ಯಾಹ್ನ. ಮನೆಯಲ್ಲಿ ಮೂರು ಹಾವು. ಒಂದು ಮಾಲವಿಕ ನ walker ಬಳಿ ಇತ್ತು. ಅಂಬೆಗಾಲಿಟ್ಟುಕೊಂಡು ಓಡಾಡುವ ವಯಸ್ಸು. ಅಜ್ಜನ ಕೋಣೆಗೆ ಅವಳು ಹೋಗದಿರಲಿ ಅಂತ ಪಾಪ ಅವಳಿಗೆ ಯಾವಾಗಲೂ walker ನಲ್ಲಿ ಹಾಕಿ ಅದನ್ನು ಅಡಿಗೆ ಮನೆ ಬಾಗಿಲಿಗೆ ಕಟ್ಟಿರುತ್ತಿದ್ದೆ. ಶ್ರೀಕಾಂತ ಮತ್ತು ತಮ್ಮ ಪೇಟೆಗೆ ಹೊರಟಿದ್ದರು. ಅವರು ಬೈಕ್ ತೆಗೆದುಕೊಂಡ ಹೋದ ಮೇಲೆ ನಾನು ಗೇಟ್ ಹಾಕಿಕೊಂಡು ಮನೆಯೊಳಗೆ ಬರಬೇಕಾದರೆ ಹಾವು ಸರ ಸರನೆ ಮಾಲವಿಕ ಬಳಿ ಹೋಯ್ತು. ಅವಳಿಗೊ ಹರಿದಾಡುವ ಪ್ರಾಣಿಗಳ ಮೇಲೆ ವಿಶೇಷ ಆಸಕ್ತಿ. ಅದನ್ನು ಕೈ ಮುಷ್ಠಿಯಲ್ಲಿ ಹಿಡಿದು, ಬಾಯಲ್ಲಿ ಹಾಕುವ ಉಮ್ಮೆದು. ಹಾವು ಮನೆಯ ನೆಲದ ಟೈಲ್ ಮೇಲೆ ಜಾರುತ್ತ ಹರಿದಾಡುತ್ತಿತ್ತು. ಮಾಲು ಸುಮ್ಮನಿರು ಅಂದೆ. ಅವಳಿಗೆ  ಅರ್ಥ ಆದ ಹಾಗೆ ಪಾಪ ಸುಮ್ಮನೆ walker ನಲ್ಲಿ ಕುಳಿತಿದ್ದಳು. ನಾನು ಬಟ್ಟೆ ಒಣಗಿಸುವ ಕೋಲಿನಿಂದ ಆ ಹಾವನ್ನು, ಹಿಂದಿನ ಬಾಗಿಲಿನಿಂದ ಹೊರಹಾಕಿದೆ. ಕಪ್ಪು ಬಣ್ಣದ non ವಿಷಕಾರಿ ಹಾವು. ಹಾವು ಹರಿದು ಮುಂದೆ ಹೋಗಿದ್ದನ್ನು ನೋಡಿ ಹಿಂದಿನ ಬಾಗಿಲು ಹಾಕಿ ಒಳ ಬರಬೇಕಿದ್ದರೆ ಗೋದಿ ಬಣ್ಣದ ನಾಗರ ಹಾವು ಗೋಡೆ ಹತ್ತುತ್ತಿರುವುದನ್ನು ನೋಡಿದೆ. ಏನೂ ಮಾಡಬೇಕೆಂದು ತೋಚಲಿಲ್ಲ ಅದು ಮಾಡಿನ ಎಡೆಯಲ್ಲಿ ಹೋಗಿ ಕುಳಿತುಕೊಂಡಿತು. ನಾನು ಅದನ್ನು ನೋಡುತ್ತ ಕೂತುಕೊಂಡೆ. ಒಳಗೆ ಅಜ್ಜ ಎರಡಕ್ಕೆ ಮಾಡಿಕೊಂಡು ಗಲಾಟೆ ಮಾಡುತ್ತ ಇದ್ದರು. ಪಕ್ಕದ ಮನೆಯಲ್ಲಿರುವ ಮಾಲತಿ (ಅವರೂ ಮಾಲತಿ) ಯವರಿಗೆ ಕಿಟಕಿಯಿಂದ ಕೂಗಿ ಕರೆದೆ. ಅವರು ಹಾವನ್ನು ನೋಡಿ ಹೆದರಿ ಅಕ್ಕ ಪಕ್ಕದವರನ್ನೆಲ್ಲ ಕರೆದುಕೊಂಡು ಬಂದರು. ಅವರೆಲ್ಲರ ಗಲಾಟೆ ನೋಡಿ ಹಾವು ಒಂದೆರಡು ಸಲ ಬುಸುಗುಟ್ಟಿ, ಹೆದರಿ ಇನ್ನಷ್ಟು, ಮಾಡು ಮತ್ತು ತೊಲೆಗಳಲ್ಲಿ ಸಿಕ್ಕಿ ಹಾಕಿ ಕೊಂಡಿತು. ಬಂದವರದೆಲ್ಲ ತರ ತರದ ಸಲಹೆ. ಅಂತೂ ಹೊರಗೆ ಹೋಗಿದ್ದ ಶ್ರೀಕಾಂತ ಮತ್ತು ತಮ್ಮ ಬಂದರು. ನಾನು ಒಳಗೆ ಹೋಗಿ ಅಜ್ಜನ ರೂಮ್ ಕ್ಲೀನ್ ಮಾಡಿ ಸ್ನಾನ ಮಾಡಿ ಬಂದೆ. ಇಷ್ಟೆಲ್ಲ ನಡೆದು ಆಗಲೆ ಸಂಜೆ ಯಾಗುತ್ತ ಬಂದಿತ್ತು. ಮಾಲವಿಕ ನಿಗೆ ಊಟ ಮಾಡಿಸುತ್ತ ನೋಡಿದ್ರೆ ಯಾಕೋ ಅವಳ ಮೈ ಬಿಸಿಯಾಗಿದೆ ಅನ್ನಿಸಿ, thermometer  ಅವಳ ಕುಂಕಳದಲ್ಲಿ ಹಾಕಿ ಸುಮ್ಮನೆ ಕಿಟಕಿಯಿಂದ ಹೊರ ನೋಡ್ತಾ ಇದ್ದರೆ ಇನ್ನೊಂದು ಹಾವು ತಲೆ ಒಳಗೆ ಹಾಕಿಕೊಂಡು ಒಳ ಬರಲು ನೋಡುತ್ತ ಇತ್ತು. ಬೇಗ ಎದ್ದು ಅದನ್ನು ಓಡಿಸಿ ಕಿಟಕಿ ಬಾಗಿಲು ಹಾಕಿದೆ. ಇಲ್ಲಿ ಉಳಿದ ಜನ ನಾಗರ ಹಾವನ್ನು ಓಡಿಸುವ ಹುನ್ನಾರದಲ್ಲೆ ಇದ್ರು. ಬಂದವರಿಗೆಲ್ಲ ಹೊರಗೆ ಕಳುಹಿಸಿ, ಶ್ರೀಕಾಂತ ಮತ್ತು ತಮ್ಮನಿಗೆ ಬಲವಂತ ವಾಗಿ ಊಟಕ್ಕೆ ಕೂರಿಸಿ, ನಾನು ಹಾವನ್ನು ನೋಡುತ್ತ ಕೂತೆ :-). ಯಾರದ್ದೋ  ಉಪಾಯ ಅಂತ ಶ್ರೀಕಾಂತ ಮನೆಯ ಮೂಲೆ ಮೂಲೆಯಲ್ಲಿ ಹಿಂಗಿನ ತುಂಡನ್ನು ಇಟ್ಟಿದ್ದರು ಮನೆ ತುಂಬ ಹಿಂಗಿನ ವಾಸನೆ, ವಾಕರಿಕೆ ಬರುವಷ್ಟು. ಅದಾದ ಮೇಲೆ ಸುಮಾರು ದಿನ ನಾನು ಹಿಂಗನ್ನು ತಿನ್ನಲಿಲ್ಲ. ಹರಿಹರಪುರದ ಮಠದಿಂದ ಒಳ್ಳೆ quality ಹಿಂಗನ್ನು ಶ್ರೀಕಾಂತ ತರುತ್ತಿದ್ದರು. ಸಾರಿಗೆ, ತೊವ್ವೆಗೆ ಬಳಸಿದರೆ ಗಮ್ಮೆನ್ನುವ ಪರಿಮಳ :-)
ಅವರು ಒಳಗೆ ಊಟಮಾಡುತ್ತಿರುವಾಗ ನನಗೊಂದು ಉಪಾಯ ಹೊಳೀತು. ನನ್ನ ಬಟ್ಟೆ ಒಣಗಿಸುವ ಕೋಲು ಸಾಕಷ್ಟು ದೊಡ್ಡದಿತ್ತು. ಅದನ್ನು ಮಾಡಿಗೆ ಸಿಕ್ಕಿಸಿ , ಇನ್ನೊಂದು ತುದಿಯನ್ನು ಕಿಟಕಿಯ ಹೊರಗೆ ಬರುವ ಹಾಗೆ ನಿಲ್ಲಿಸಿದೆ. ಜನರ ಗಲಾಟೆ ಇಲ್ಲದಿದ್ದುದರಿಂದ ಹಾವು ನಿಧಾನವಾಗಿ ಮಿಸುಕಾಡಲು ಶುರು ಮಾಡಿತ್ತು. ಸಧ್ಯಕ್ಕೆ ಕೆಳ ಬರುವ ವಿಚಾರ ಏನೂ ಮಾಡಿದ ಹಾಗೆ ಕಾಣಲಿಲ್ಲ. ಶ್ರೀಕಾಂತ ಗೆ ತಮ್ಮನಿಗೆ ಒಳಗೆ ಮಲಗಲು ಹೇಳಿದೆ. ಹಾವು ಹೋಗುವ ತನಕ ನಾನು ಕಾಯ್ದಿರುತ್ತೇನೆ ಅಂದೆ. ಮಧ್ಯ ರಾತ್ರಿ ನಂತರ ಹಾವು ನಿಧಾನವಾಗಿ ಕೆಳಗೆ ಸರಿದು ಹೋಯಿತು. ನಾನು ಕಿಟಕಿ ಬಾಗಿಲು ಮುಚ್ಚಿ , ಮಲಗಿದೆ. ಒಳ್ಳೆ adventure.
ಮರುದಿನ ತುಂಬ ಸುಸ್ತು.ನಿಧಾನವಾಗಿ ಮನೆಕೆಲಸಗಲನ್ನೆಲ್ಲ ಮುಗಿಸಿದೆ. ಸಂಜೆ ನಾಲ್ಕು ಗಂಟೆಗೆ ಶ್ರೀಕಾಂತ ಮತ್ತು ಪಾಂಡು, ನನ್ನ ತಮ್ಮ, ಪುನ: ಹೊರಗೆ ಹೋಗಿದ್ರು. ಅಜ್ಜ ಮತ್ತು ಮಾಲವಿಕ ಮಲಗಿದ್ರು. ನಾನು ಮನೆ ಹೊರಗೆ ಮೆಟ್ಟಿಲ ಮೇಲೆ ಸುಮ್ಮನೆ ಮಂಕಾಗಿ ಕೂತಿದ್ದೆ. ಕುಂಕುಮ ವಿಭೂತಿ ಎಲ್ಲ ಹಚ್ಚಿದ ಒಬ್ಬ ವಯಸ್ಸಾದ ವ್ಯಕ್ತಿ ಗೇಟ್ ಬಳಿ ನಿಂತ್ರು. ನಾನು ಅವರನ್ನು ಮಾತನಾಡಿಸಲಿಲ್ಲ, ಸುಮ್ಮನೆ ಮುಂದೆ ಹೋಗಬಹುದೆಂದು. ಅವರೆ ಮಾತು ಶುರು ಮಾಡಿದರು ’ನಿನ್ನ ಮನೆಯಲ್ಲಿ ಯಾರಿಗೋ ಹುಷಾರಿಲ್ಲವಲ್ಲ?? ತಗೊ ಈ ಕುಂಕುಮ ಅವರಿಗೆ ಹಚ್ಚು. ನನಗೊತ್ತು ನಿನಗೆ ಇದರಲ್ಲಿ ನಂಬಿಕೆಯಿಲ. ಹೋಗಿ ಹಚ್ಚು ಒಮ್ಮೆ ಅಂದರು. ಇದೊಳ್ಳೆ ಅಜ್ಜನ ಕಾಟ ಅಂತ ಗೇಟ್ ಬಳಿ ಹೋಗಿ ಅವರು ಕೊಟ್ಟ ಕುಂಕುಮದ ಪೊಟ್ಟಣ ತೆಗೆದುಕೊಂಡೆ. ಒಳಗೆ ಹೋಗಿ ಪರ್ಸ್ ನಿಂದ ಏನಾದರೂ ದುಡ್ಡು ಕೊಡುವ ಅಂತ ಹೊರಗೆ ಬಂದ್ರೆ ಆ ಆಸಾಮಿ ನಾಪತ್ತೆ. 
ಅಷ್ಟರಲಿ ಅಜ್ಜ ’ಮಾಲತಮ್ಮ’ ಕಾಪಿ ಮಾಡಿ ಕೊಡು ಅಂತ ಗಲಾಟೆ ಶುರು ಮಾಡಿದರು. ಅವರಿಗೆ ಕಾಫಿ ಮಾಡಿಕೊಟ್ಟು, ನಾನು ಅವರ ಬಳಿ ಸುಮ್ಮನೆ ಮಾತಾಡ್ತಾ ಇದ್ದೆ. ಅವರಿಗೆ ಪ್ರಶ್ನೆಗಳನ್ನು ಹಾಕುತ್ತಿದೆ, ಏನಾದರೂ ನೆನಪು ಬರುತ್ತ ಅಂತ. sudden ಆಗಿ ಆ ಅಜ್ಜ ಕೊಟ್ಟ ಕುಂಕುಮದ ಪೊಟ್ಟಣ ನೆನಪಿಗೆ ಬಂತು. ಅಜ್ಜನತ್ರ ತಮಾಷೆ ಮಾಡ್ತಾ ಹಚ್ಚಲಾ? ಅಂತ ಕೇಳಿದೆ. ಅವರು ತಮ್ಮಷ್ಟಕ್ಕೆ ಏನೋ ಮಾತನಾಡುತ್ತ ಇದ್ದರು. ನಾನು ಹೋಗಿ ಅವರ ಹಣೆಗೆ ದುಂಡಗೆ ಕುಂಕುಮ ಹಚ್ಚಿದೆ. ಎರಡೆ ನಿಮಿಷ. ಅಜ್ಜ ಹುಷಾರ್ ಆದ್ರು ಅಂದ್ರೆ ನಂಬುತ್ತೀರಾ?? ’ಅರೇ’ ಏನಾಯಿತು? ನಾನ್ಯಾಕೆ ಹಿಗಿದ್ದೀನಿ ಅಂತ ಅಜ್ಜ ಮುಜುಗರ ಪಟ್ಟರು. ನಾನಂತು ಖುಶಿಯಿಂದ ಶ್ರೀಕಾಂತ ಮತ್ತು ಪಾಂಡು ಬರುವುದನ್ನು ಕಾಯುತ್ತ ಇದ್ದೆ. ಅವರಿಗೆ ನಡೆದದ್ದನ್ನೆಲ್ಲ ಹೇಳಿದೆ. ಅವರು ನಂಬಲಿಕ್ಕು ಅಲ್ಲ ಬಿಡಲಿಕ್ಕೂ ಅಲ್ಲ ಅನ್ನುವ state ನಲ್ಲಿದ್ದರು, but ಎರಡು ತಿಂಗಳಿನಿಂದ ಕಾಯಿಲೆಬಿದ್ದ, ಅಜ್ಜ ಹುಷಾರಗಿದ್ದು ಸಿನಿಮಾದಲ್ಲಿ ತೋರಿಸುತ್ತಾರಲ್ಲವಾ ಹಾಗೇನೆ... miraculously ಸರಿಹೊಂದಿದ್ದರು. ಅದಾದ ಮೂರು ನಾಲ್ಕು ದಿನದ ಮೇಲೆ Taxi ಮಾಡಿ ಶ್ರೀಕಾಂತ ಹಾಗೂ ತಮ್ಮ, ಅಜ್ಜನನ್ನು, ಅವರ ಇಷ್ಟದಂತೆ ನಾನಿಯ ತವರು ಮನೆಗೆ ಬಿಟ್ಟು ಬಂದರು.
ಹೇಂಗೆ?? ಏನಿದ್ದಿರಬಹುದು ಆ ಕುಂಕುಮದಲ್ಲಿ??
ಹೀಗೆ ಕ್ಲೀನ ಮಾಡ್ತ ಸಿಕ್ಕಿದ ಒಂದು ಫೋಟೊನಿಂದ ಎಷ್ಟೆಲ್ಲ ನೆನಪು??
:-)

December 10, 2011

ಗ್ರಹಣಕ್ಕೆ ಒಂದು special



Special ಅಂದ ಕೂಡಲೆ ತಿಂಡಿ ಅಂತ ತಿಳಿದುಕೊಳ್ಳಬೇಡಿ ಮತ್ತೆ. of course i live to eat..ಯಾರು ಏನು ಬೇಕಾದ್ರು ಹೇಳಲಿ. ಮತ್ತು ನನ್ನ ತಿಂಡಿಫೋತ ಫ್ರೆಂಡ್ಸ್ ಮೇಲೆ ನನಗೆ ವಿಶೇಷ ಆಸ್ಥೆ. foodies ಅಂತಾರಲ್ಲವಾ??
ಅಮ್ಮನಿಗೆ ಬೋರ್ ಆಗುತ್ತೆ ಅಂತ ಫೋನ್ ಮಾಡಿದ್ರು ಈಗ. ನಮ್ಮ ಸಂಭಾಷಣೆ ಹೀಗಿತ್ತು
ಅಮ್ಮ: ಏನು ಮಾಡ್ತಾ ಇದ್ದೆ?
ನಾನು : ನಾಳೆ ತಿಂಡಿಗೆ ರೆಡಿ ಮಾಡ್ತಾ ಇದ್ದೆ
ಅಮ್ಮ: ಇವತ್ತು ಗ್ರಹಣ ಗೊತ್ತಾ?? ಯಾರಾದರೂ ತಿಂಡಿ ಮಾಡ್ತಾರಾ? ಮಧ್ಯಾಹ್ನ್ 1.30 ನಂತರ ಬಾಯಿಗೆ ನೀರು ಕೂಡ ಹನಿಸಬಾರದು.
ನಾನು: ನನಗೆ ಗೊತ್ತಿರಲಿಲ್ಲ ಅಮ್ಮ.
(ಬೆಳಗ್ಗಿನ newspapers ಗಳನ್ನು ಶ್ರೀಕಾಂತ ರಾಯರು ಕುಣಿಗಲ್ ಗೆ ಹೋಗ್ತಾ ದಾರಿಯಲ್ಲಿ ಓದಲು ತೆಗೆದುಕೊಂಡು ಹೋಗಿದ್ದರು. ನಾನು ಇಂಟರನೆಟ್ ಕೂಡ ಹಾಕಿರಲಿಲ್ಲ ಮುಂಜಾನೆ. ಕ್ಲೀನಿಂಗ್ ಮಾಡ್ತಾ ಗೀತಾ ದತ್ತ್ ಹಾಡು ಗಟ್ಟಿಯಾಗಿ ಹಾಕಿಕೊಂಡು ಕೇಳ್ತಾ ಇದ್ದೆ.)
ಅಮ್ಮ: ನಿನ್ನ ತಲೆ ಎಲ್ಲಿರುತ್ತೆ ಅದು?
ನಾನು: as usual ಆಕಾಶದಲ್ಲೇ...
ಅಮ್ಮ: ಆಕಾಶದಲ್ಲಿದ್ದು ನಿನಗೆ ಗ್ರಹಣ ಕಾಣಿಸಲಿಲ್ಲವಾ ಅಂದ್ರು...
well that was a good one from my mom :-)
(ಅಮ್ಮ ಮತ್ತು ಶ್ರೀಕಾಂತ ಯಾವಗಲೂ ನನಗೆ ನಿನ್ನ ತಲೆ ಯಾವತ್ತೂ ಆಕಾಶದಲ್ಲೇ ಇರುತ್ತೆ. ಸ್ವಲ್ಪ ಕೆಳಗಡೆ ನೋಡೋದನ್ನ ಕಲಿ.....ಅಂತ. ನನಗೆ ದೇವರ ಮೇಲೆ ನಂಬಿಕೆಯಿಲ್ಲ, ಆದರೂ ದೇವರಾಣೆಗೂ ಹೇಳ್ತೇನೆ ಆಕಾಶದಲ್ಲಿರೋದು ಅಂದ್ರೆ ಏನು ಅಂತ ಗೊತ್ತಿಲ್ಲ, ಈವರೆಗೂ ನಾನು ಅದನ್ನು ಕೇಳಲು ಇಲ್ಲ..)
ಸುಮ್ನೆ ಒಂದು ಸಣ್ಣ ಪೋಸ್ಟ
:-)

December 7, 2011

Niha is Nineteen today

I was badly in need of a break and me and Niha (she had holidays after her first semester)had a good trip to Goa, mostly Old Goa.Now i am feeling fresh and this post is for my Nymphs. I had promised a few friends that i would blog about my trip. But Niharika wants to write about it so i am leaving it to her!!
When Niha was in pre school i remember, one day she had brought home a slate belonging to her classmate. I thought it must have come into her bag by mistake. But i was surprised when she said she got it on purpose. 'I liked the orange border' so i got it home. I had a tough time explaining  to her that one  just does not bring things belonging to other people. She also went on to say that she always took colourful eatables (those garish coloured things from Bakery usually in villages where they do not know that most of the food colours are harmful)from her classmate's tiffin box. I was a bit worried and hastened to the school to talk to the teacher and i was sure the complaint would be long...and i was not much wrong there. What do i see there? Niha was talking to her classmates, gyrating from her seat, nineteen to the dozen!! i would have run out from the class but alas!! the teacher saw me and beckoned to me!!
Teacher complained that Niharika would not write the proper spelling of words. after she came home i asked her why she did that..she said if the word is 'silent' what is the point of writing and wasting my time' hehehehe...of course i did not tell her teacher that...Instead we got into this game 'English is a silly language so we have to 'write' the silent letters.. her words usually ran like this first - fist, as long it is pronounced like this what is the point in writing  'r.:-). Later on she got all cent percent on her spellings!! and now her english is very good and she loves to read... a lot!!
this is her blog http://nihamemories.blogspot.com/
She and Malavika, both, used to observe us and the visitors to our home and mimic them to a perfection. To the people they were just two silent spectators..well behaved and all that...but once they left home all hell broke loose and we used to guffaw...even now they do that...
Then Niha would perceive of people in terms of colour and numbers.....just last month i learnt of the word 'synaesthesia' She says she still does that but is quiet about it.
She is a kindred soul....easily moved to tears at the sad plight of others....human or animal. At the same time time injustice angers her!!
Just the other day i found her crying silently. on asking the reason she said the stray dog on our street is going to die. It has huge cancerous tumerous on its body. some of the tumours were ruptured and oozing. I went out and looked at the dog which was licking itself all over. so i told her we have two options. one- i will sit  and cry with you. second-come we will take it to the vet. but i doubt whether he will really care for a stray dog. some how i dont really know why i thought the dog would cure itself. It was licking its sores vigourlously. strangely i proved to be true. gradually the dog cured itself...and i was glad to see the sunny smile back on Niha. :-)
The other day i got a call. 'Mom a bike just ran over a kitten and its hind part is all goner' what shall i do?? i asked her what she had in her mind..'she said she would take it to the vet and get it home' i said 'yes'. After she  returned what do i see..a tiny kitten its hind portion totally mangled. The Vet had cleaned and given it an injection and also given her the address of a pet care.
I love dogs and cats when they belong to others...but not in my home.  and Srikanth would never touch them with a barge pole.Our kitten was brave and adventurous..I clearly told Niha, the kitten would be kept in a box outside the home. She said 'yes, after feeding it i will let it out' So i got some milk and powdered a few glucose biscuit and fed it to the kitten' It gobbled it up and looked at me in such a way that my heart melted and i fell in love with it. i told it' well you can be inside for a short while' i found Niha and Malavika giggling and giving a high five 'see, i told you mum will relent and let us keep the kitten home' Well somehow the cleaning and looking after part fell on me.
Kitty was adventurous and started going about the house with its front paws dragging the useless hind part behind leaving a trail of blood and fluid all over my floor. it just would not sit in the box i had kept for it. soon i was tired cleaning the house with soap and phenyl. Next day Niha had to attend the IIT entrance exams and i accompanied her. On returning we found Srikanth Livid. he said our kitty got a bit more adventurous and gave a visit to our owners climbing all the 30 steps and dirtying their house. :-) They were really pissed off!!

I told niha and Srikanth to take the kitty and leave it someplace. Niha made it as comfortable as possible and left it with a watchman near the garden where we usually go for our walks..phew...
She is always out there teaching the tiny kids about our civic responsibilities, helping the blind cross the road, helping old people alight the bus and such small things that make the world a better place to live in. To me the sun absolutely shines out of her. She has a sunny and fun nature, keeping us in splits. She especially likes to trouble akka aka Malavika.
Today she will celebrate her 19th birthday. We are planning to present her with a good camera, for we think she has all the trappings of a good photographer. Other than that she writes stories, blogs once in a while, likes to experiment in the kitchen, is a budding guitarist, has not only composed music for a kannada play but also designed its banner all in two days time. She skipped college for an year to pursue a course in counselling!!She is also in the NSS and the college Netball and ball badminton team!!
Love you Nymphs and Happy Birthday to YouMay you realize all your dreams. This is the last year you get to be a teenager, next year you are an Adult :-)

http://malathisanchiyinda.blogspot.com/2009/12/blog-post.html where i have tried to capture some tense moment when Niha was born..the babri masjid demolition and events that followed....
:-)

December 4, 2011

Kati Rolls / ಕಾಟಿ ರೋಲ್ಸ್

 ಚಳಿಗಾಲ ಶುರುವಾಗಿದೆ. ಸಂಜೆ ಮಾಲವಿಕ  ಕೆಲಸದಿಂದ  ಬರುವಾಗ, ವಾರಕ್ಕೆರಡು ಸಲವಾದರೂ ಅವಳಿಗೆ  ಬಿಸಿ ಬಿಸಿ  ತಿಂಡಿ, ಅವಳ ಇಷ್ಟದ್ದು ಏನಾದರೂ ಮಾಡುತ್ತೇನೆ. ಕಾಟಿ ರೋಲ್ಸ್ ಅವಳ favorite. ಅವಳು ಬಂದು ನನ್ನನ್ನು ಹಗ್ ಮಾಡಿ oh mommy u r so sweeet!! thank you!! ಅಂದಾಗ ನನಗೂ ತುಂಬ ಖುಶಿಯಾಗುತ್ತೆ!! :-)
ಕಾಟಿ ರೋಲ್ಸ್ ಗೆ ಬೇಕಾಗುತ್ತದೆ
ಚಪಾತಿ, ಯಾವುದಾದರೊಂದು ಫಿಲ್ಲಿಂಗ್, ಹಸಿರು ಚಟ್ನಿ, ಕಾಲಾ ನಮಕ್, ಹಸಿ ನೀರುಳ್ಳಿ + ಕೊತ್ತಂಬರಿ ಸೊಪ್ಪು

3 ಲೋಟ ಗೋದಿ ಹಿಟ್ಟಿಗೆ ಅರ್ಧ ಲೋಟ ಮೈದಾ , ಒಂದು ಟೆಬಲ್ ಚಮಚ ಎಣ್ಣೆ ಬೆರೆಸಿ  ಚಪಾತಿ ಹಿಟ್ಟಿನಂತೆ ಕಲಿಸಿಡಿ.

ಫಿಲ್ಲಿಂಗ್ ನಿಮಗೆ ಬೇಕಾದ ಹಾಗೆ ಮಾಡ ಬಹುದು. ನಾನು ಮಾಲವಿಕನ ಇಷ್ಟದ ಪನೀರ್ ನ ಫಿಲ್ಲಿಂಗ್ ಮಾಡಿದ್ದೆ. ಅದಕ್ಕೆ ಬೇಕಾಗುವ ಸಾಮಗ್ರಿ:
1 ಪ್ಯಾಕೆಟ್ ನಂದಿನಿ ಪನೀರ್
1 ದೊಡ್ಡ ಈರುಳ್ಳಿ, ಮೂರು ಬೆಳ್ಳುಳ್ಳು ಎಸಳು, ಟೋಮೇಟೋ, ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು.
ಎಣ್ಣೆಯಲ್ಲಿ ,ಸಣ್ಣಗೆ ಕತ್ತರಿಸಿದ ಈರುಳ್ಳಿ ಯನ್ನು ಹಾಕಿ ಬಾಡಿಸಿ. ಕೆಂಪು ಬಣ್ಣ ಬರುತ್ತಿದ್ದ ಹಾಗೆ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಬೆರೆಸಿ. 2 ನಿಮಿಷ ಬಿಟ್ಟು ಗರಂ ಮಸಾಲೆ ಪುಡಿ, ಖಾರದ ಪುಡಿ, ಅರಿಸಿನ ಪುಡಿ ಬೆರೆಸಿ ಆಮೇಲೆ ಸಣ್ಣ ಹಚ್ಚಿದ ಟೊಮೇಟೊ ಹಾಕಿ. 2 ನಿಮಿಷ ಬಿಟ್ಟು ಪನೀರ್ ನ ಚೂರು ಮತ್ತು ಕೊತ್ತಂಬರಿ ಸೊಪ್ಪು ಹಾಕಿ, ಸ್ವಲ್ಪ ಹೊತ್ತು ಕೈಯಾಡಿಸಿ ಕೆಳಗಿಡಿ.

ಹಸಿರು ಚಟ್ನಿಗೆ : ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು, 2-3 ಪುದೀನಾ ಎಲೆ, 3-4 ಹಸಿ ಮೆಣಸಿನಕಾಯಿ, ಉಪ್ಪು. ಇವೆಲ್ಲವನ್ನು ರುಬ್ಬಿ ಅರ್ಧ ಲಿಂಬೆ ಹಣ್ಣಿನ ರಸ ಬೆರೆಸಿಡಿ
ಹದ ಗಾತ್ರದ ಚಪಾತಿ ಲಟ್ಟಿಸಿ ಕಾವಲಿ ಮೇಲೆ ಬೇಯಿಸಿ. ಹಿಟ್ಟು ಕಲಸುವಾಗ ಎಣ್ಣೆ ಹಾಕಿದ್ದರಿಂದ, ಚಪಾತಿ ಕಾಯಿಸುವಾಗ ಬೇಕಾದರೆ ಮಾತ್ರ ಎಣ್ಣೆ ಬಳಸಿ.
ಆ ಮೇಲೆ ಚಿತ್ರದಲ್ಲಿನ ಹಾಗೆ ಸ್ಟಫ್ಫಿಂಗ್ ಸೇರಿಸಿ, ರೋಲ್ಸ್ ನ ಫೋಲ್ಡ್ ಮಾಡಿ.
ಚಟ್ನಿ ತುಂಬ ಖಾರವಾಗಿದ್ದರಿಂದ ನಾನು ಸ್ವಲ್ಪ ನೆ spread ಮಾಡಿದ್ದೇನೆ
filling  ಚಪಾತಿ ಮಧ್ಯದಲ್ಲಿ 
ಸಣ್ಣಗೆ ಕತ್ತರಿಸಿದ ನೀರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು filling na ಮೇಲೆ ಹಾಕಿ, ಮತ್ತದರ ಮೇಲೆ rock salt ಕಾಲಾನಮಕ್ ಸಿಂಪಡಿಸಿ
ಚಪಾತಿ ಮಡಚುವ ವಿಧಾನ:
 step 1
step 2
step 3
ಕಾಟಿ ರೋಲ್ಸ್ ರೆಡಿ ಟು ಈಟ್. ಮೊದಲೆ ಏನಾದರೂ ಮಾಡಿಟ್ಟರು ಪರವಾಗಿಲ್ಲ, ಪುನ: ಕಾವಲಿಯಲ್ಲಿ ಅಥವಾ ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಹುದು. ಫಿಲ್ಲಿಂಗ್ ಸ್ವಲ್ಪ dry-dry ಆಗಿರಲಿ!
ಸ್ಟಫಿಂಗ್ ನ ಬೇರೆ choice  : Cauliflower + ಆಲುಗಡ್ಡೆ ಅಥವಾ ಮಿಶ್ರ ತರಕಾರಿ (ಬಟಾಣಿ-ಕ್ಯಾರೆಟ್- ಆಲುಗಡ್ಡೆ ಇತ್ಯಾದಿ). ಮಾಡುವ ವಿದಾನ ಮೇಲಿನದ್ದೆ. ತರಕಾರಿ ಬೇಯಿಸಬೇಕಾಗುತ್ತೆ ಅಷ್ಟೆ.
:-)
ಫೋಟೊ :  ನಿಹಾರಿಕಾ

December 1, 2011

ಮಿನಿ ಕತೆ ಹಾಗೂ ಒಂದು ನಿಜ ಘಟನೆ

ದಿನ್ನು- ದಿನೇಶ  ಗೆ ಕೆಲಸ ಸಿಕ್ಕಿತು. ತುಂಬ ಖುಶಿಯಲ್ಲಿದ್ದ ಅಂವ. ಈ ಸಲ ಮನೆಗೆ ಹೋದಾಗ ಎದುರು ಮನೆ ಮಿನ್ನಿ- ಮೃಣಾಲಿನಿಯನ್ನು ಮದುವೆ ಮಾಡಿಕೊಳ್ಳುವುದರ ಬಗ್ಗೆ ತಂದೆ ತಾಯಿ ಹತ್ತಿರ ಮಾತಾಡಬೇಕು ಅಂದು ಕೊಂಡ. 
ಮನೆ ತಲುಪಿದಾಗ ಮಿನ್ನಿಯ ಮನೆ ತಳಿರು ತೋರಣ- ಶಾಮಿಯಾನ ದಿಂದ ಅಲಂಕರಿಸಲಾಗಿತ್ತು. ಅದೇನು ಹೊಸ ವಿಷಯವಾಗಿರಲಿಲ್ಲ ಯಾಕೆಂದರೆ ಮಿನ್ನಿಯ ತಂದೆ ರಾಜಕೀಯ ಪುಢಾರಿ, ಏನಾದರು ಸಭೆ -ಸನ್ಮಾನ- ಸಮಾರಂಭ ನಡೆಯುತ್ತಲಿರುತಿತ್ತು ಯಾವಾಗಲೂ
ಹಾಗಂತ ಒಂದು ದಿನವು ದಿನು-ಮಿನ್ನಿ ಮುಖಕ್ಕೆ ಮುಖ ಕೊಟ್ಟು ಮಾತಾನಾಡೋದು ಬಿಡಿ,ಒಬ್ಬರ ಮುಖ ಇನ್ನೊಬ್ಬರು ಸರಿಯಾಗಿ ನೋಡಲು ಇರಲಿಲ್ಲ ಈ ವರೆಗೂ. ತುಂಬ ಚಿಕ್ಕವರಿರುವಾಗ, ಅಂದರೆ ಬಾಲವಾಡಿಗೆ ಹೋಗುವಾಗ ಜಾನಿಬಾಯಿ ಒಂದು ಕೈಯಲ್ಲಿ , ಶಾಲೆಗೆ ಹೋಗುವುದಿಲ್ಲ ಎನ್ನುವ ಮಿನ್ನಿ (ಮೄಣಾಲಿನಿ ಗೆ ಯಾರಾದರು ಅವಳ ಹೆಸರು ಕೇಳಿದರೆ ಅವಳು ಮಿನ್ನಿಲಿನ್ನಿ ಅಂತ ಹೇಳುತ್ತಿದ್ದಳು. ಅವಳಿಗೆ ಮೄಣಾಲಿನಿ ಎನ್ನಲು ನಾಲಿಗೆ ತಿರುಗುತ್ತಿರಲಿಲ್ಲ . ಹಾಗಾಗಿ ಅವಳ ಹೆಸರು ಮುದ್ದಿನಿಂದ ಎಲ್ಲರೂ ಮಿನ್ನಿ ಅಂತ ಕರೆಯುತ್ತಿದ್ದರು)) ಯನ್ನು ಮತ್ತು ಇನ್ನೊಂದು ಕೈಯಲ್ಲಿ ದಿನ್ನು ವಿನ ರಟ್ಟೆ  ಹಿಡಿದುಕೊಂಡು ದರದರನೆ ಶಾಲೆಗೆ ಎಳೆದುಕೊಂಡು ಹೋಗುವುದು, ಮಧ್ಯಾಹ್ನ ಮನೆಗೆ ತಂದು ಬಿಡುವುದು- ಆಗ ಒಟ್ಟಿಗೆ ಇದ್ದರು ಅಷ್ಟೆ. ಆ ಮೇಲೆ ಸ್ತ್ರೀ ರೋಗ ತಜ್ಝೆಯಾದ ದಿನ್ನು ತಾಯಿ ಹಾಗೂ industrialist ತಂದೆ - ಇಬ್ಬರೂ ಅವರವರ ಕೆಲಸದಲ್ಲಿ ಸದಾಕಾಲ busy- ಅವನನ್ನು ಗಂಡು ಮಕ್ಕಳ ಕಾನ್ವೆಂಟ್ ಶಾಲೆಗೆ ಸೇರಿಸಿದರು. ಅವನು ಸಂಜೆ ಶಾಲೆ ಮುಗಿದ ಮೇಲೆ ಶಾಲೆಯ ಆಟದ ಮೈದಾನದಲ್ಲೇ ಆಟ ಆಡಿಕೊಂಡು, ಕತ್ತಲಾದಾಗ ಮನೆ ಸೇರುತ್ತಿದ್ದನು. ಮನೆ ತುಂಬ ಆಳು ಕಾಳುಗಳು. ಏಳನೆ ತರಗತಿ ಮುಗಿಯುತ್ತಿದ್ದಹಾಗೆ ಅವನಿಗೆ ಉತ್ತರ ಭಾರತದ ಪತಿಷ್ಟಿತ residential ಶಾಲೆಗೆ ಸೇರಿಸಲಾಯಿತು. ಅಲ್ಲೇ ಕಾಲೇಜು ಕೂಡ ಇತ್ತು. ಆ ಶಾಲೆಯಲ್ಲಿ ವಾರ್ಷಿಕ ರಜೆ ಜೂನ್ ನಲ್ಲಿ ಕೊಡುತ್ತಿದ್ದರಿಂದ ಅವನು ಊರಿಗೆ ಮರಳಿದಾಗ ಅವನ ಹಳೆ ಶಾಲೆಯ ಸ್ನೇಹಿತರು ಕೂಡ ಸಿಗುತ್ತಿರಲಿಲ್ಲ.ಅವನ residential ಶಾಲೆಯ ಕೆಲ ಸಹಪಾಠಿಗಳು ಅವನ ಜತೆ ಬಂದು ಒಂದು ವಾರ ಇವರ ಮನೆಗೆ ತಂಗಿದ್ದು ವಾಪಸ್ ಅವರವರ ಊರಿಗೆ ತೆರಳುತ್ತಿದ್ದರು, ಹಾಗಾಗಿ ಮನೆಯಲ್ಲಿ ಒಂಟಿಯಾಗಿಯೇ ಓದುವುದು ಬರೆಯುವುದು ರೂಢಿ ಮಾಡಿಕೊಂಡ. ಆದರೆ ಸಂಜೆ ಮಿನ್ನಿ ಶಾಲೆಯಿಂದ ಮರಳುವ ಸಮಯಕ್ಕೆ ಸರಿಯಾಗಿ ಅವನು ಮನೆಯ ಎದುರಿನ ಬಾಲ್ಕನಿಯಲ್ಲಿ ನಿಂತಿರುತ್ತಿದ್ದ. ಸ್ಕರ್ಟ್ ತೊಡುತ್ತಿದ ಮಿನ್ನಿ, ಚೂಡಿದಾರ- ಪ್ಯಾಂಟ್ ಹಾಕುವರೆಗಿನ,ಎಣ್ಣೆಹಾಕಿ ಎರಡು ಜಡೆಯಿಂದ -ಬಾಬ್ ಕಟ್,  ಸೈಕಲ್ ಬಿಟ್ಟು- ಸ್ಕೂಟಿ ಓಡಿಸುವ ಮಿನ್ನಿಯ ಬೆಳವಣಿಗೆ/ ಬದಲಾವಣೆಗಳನ್ನೆಲ್ಲ ನೋಡುತ್ತಿದ್ದ. ಮಿನ್ನಿಗೆ ಒಭ್ಬ ತಂಗಿ ಹಾಗೂ ತಮ್ಮ ಇದ್ದುದರಿಂದ ಅವರ ಮನೆಯಯಲ್ಲಿ ನಡೆಯುವ ಆಟ, ಜಗಳ, ಗಲಾಟೆಯೆಲ್ಲ ದಿನ್ನುವಿಗೆ ಕೇಳಿಸುತ್ತಿದ್ದವು. ಉಳಿದಂತೆ ಕೆಲಸದ ಆಳು ಅವರ ಮನೆಯ ವಿಷಯ ಮಾತಾಡಿಕೊಳ್ಳುತ್ತಿದ್ದರಾದರೂ, ದಿನ್ನು ಮಿನ್ನಿಯ ನಡುವೆ ಮಾತು ಮಾತ್ರ ಇಲ್ಲವೇ ಇಲ್ಲ. ದಿನ್ನು ತನ್ನನ್ನು ನೋಡುತ್ತಿದ್ದಾನೆ ಎನ್ನುವ ವಿಚಾರ ಅವಳಿಗೆ ಹೊಳೆಯುವುದಾದರೂ ಹೇಗೆ? ಹತ್ತನೆ ಹಾಗೂ ಹನ್ನೆರಡನೆ  ತರಗತಿಯಲ್ಲಿ ಇಬ್ಬರೂ ಒಳ್ಳೆಯ ಅಂಕಗಳಿಂದ ಪಾಸಾಗಿ, ದಿನ್ನು ಇಂಜಿನಿಯರಿಂಗ್ ಓದಲು ಪುಣೆಗೆ ಹೋದರೆ, ಮಿನ್ನಿ ಅವಳ ಊರಲ್ಲೇ ಇಂಜಿನಿಯರಿಂಗ ವ್ಯಾಸಂಗ್ ಮುಂದುವರೆಸಿದಳು. ಈಗ ದಿನ್ನುಗೆ ಕೆಲಸ ಸಿಕ್ಕಿದೆ.
ಮನೆ ಒಳಗೆ ಹೋದಾಗ ದಿನ್ನುವಿನ ಅಪ್ಪ-ಅಮ್ಮ ತುಂಬ ಸಂಭ್ರಮದಿಂದ ಸಿಂಗರಿಸಿಕೊಂಡು ಎಲ್ಲಿಗೋ ಹೋಗುವ ತಯಾರಿ ನಡೆಸಿದ್ದರು. ದಿನ್ನು ಬಂದಿದ್ದನ್ನು ನೋಡಿ, ಬೇಗ ಕೈ ಕಾಲು ಮುಖ ತೊಳೆದು ಕೊ, ಇವತ್ತು ಮಿನ್ನಿಯ ಎಂಗೇಜಮೆಂಟ್. ಎಲ್ಲರೂ ಒಟ್ಟಿಗೆ ಹೋಗುವ ಅಂತ ಹೇಳಿದರು. ದಿನ್ನುವಿಗೆ ತಲೆ ಮೇಲೆ ಐಸ್ ನೀರು ಚೆಲ್ಲಿದ ಅನುಭವ. ಮನೆಗೆ ಬರುವಾಗಿನ ಉತ್ಸಾಹ ಕಳೆದುಕೊಂಡು, ಪ್ರಯಾಣದ ಆಯಾಸ ಅವನನ್ನು ಈಗ ಕಾಡಿತು. ತಾನು ಬರುವುದುಲ್ಲ ಎಂದು ನಯವಾಗಿ ಹೇಳಿದ. ಅವರು ಮನೆಯಿಂದ ಹೊರಟ ಮೇಲೆ, ದಿನ್ನು ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರ ಬಂದ. ಸುಮಾರು ವರ್ಷಗಳಿಂದ ಹೊರ ಊರಿನಲ್ಲೇ ಓದಿದ್ದರಿಂದ, ಅವನಿಗೆ ಅವನ ಊರಿನಲ್ಲಿ   ಹೇಳಿಕೊಳ್ಳುವಂತ ಯಾವ ಸ್ನೇಹಿತರೂ ಇರಲಿಲ್ಲ. ತುಂಬ ದೂರದ ವರೆಗೆ ವೇಗದ ನಡಿಗೆಯಿಂದ ಹೋಗಿ, ಸುಸ್ತಾದಾಗ ಸಿಕ್ಕಿದ ಒಂದು ಉದ್ಯಾನವನದಲ್ಲಿ ಮಕ್ಕಳ ಆಟ ನೋಡುತ್ತ ಕುಳಿತುಕೊಂಡ. ಮನೆಗೆ ಹೋಗಲೂ ಬೇಸರ, ಕುಳಿತ ಕಡೆಯೂ ಬೇಸರ, ಹೇಳಲಾಗದ ಸಂಕಟ. ಮಧ್ಯಾಹ್ನದ ಊಟ ಸರಿಯಾಗಿರದೇ ಹೊಟ್ಟೆ ಹಸಿವಿನಿಂದ ಕಂಗಾಲಾದ ದಿನ್ನು, ಸುಮಾರು ರಾತ್ರಿ ಕಳೆದ ಮೇಲೆ ಮನೆಗೆ ತೆರಳಿದ. 
ಸರಿ ರಾತ್ರಿಯಾಗಿದ್ದರೂ ಮಿನ್ನಿಯ ಮನೆಯ ಮುಂದೆ ಇನ್ನೂ ಜನರು ಜಮಾಯಿಸಿ, ಗುಸು ಪಿಸಿ ಮಾತಲ್ಲಿ ತೊಡಗಿದರು. ಮನೆ ಒಳಗೆ ಬಂದಾಗ ದಿನ್ನುವಿನ ತಂದೆ ತಾಯಿ ಗಂಭೀರ ಮುಖ -ಮುದ್ರೆ ಹೊಂದಿ ಸುಮ್ಮನೆ ಕೂತುಕೊಂಡಿದ್ದರು. ದಿನ್ನುವನ್ನು ನೋಡಿ ’ಮಿನ್ನಿಯ ಮನೆಗೆ ಬರಬೇಕಾದ ವರನ ಕುಟುಂಬ ರಸ್ತೆ ಅಪಘಾತದಲ್ಲಿ ಹಲವಾರು ಮಂದಿ ತೀರಿಕೊಂಡರು, ಹುಡುಗನೂ ಅದರಲ್ಲಿ ಸೇರಿದ್ದ’ ಅನ್ನುವ ಸುದ್ದಿ ಅರುಹಿದರು.
ದಿನ್ನುವಿಗೆ ಹೇಗೆ ಪ್ರತಿಕ್ರಯಿಸಬೇಕೆಂದು ತಿಳಿಯಲಿಲ್ಲ............................................
( ನನ್ನ ತಂಗಿ ಕಳೆದ 9 ವರ್ಷಗಳಿಂದ ಅಮೇರಿಕದಲ್ಲಿದ್ದಾಳೆ. ಅಲ್ಲೆ ಕೂಗಳತೆ ದೂರದಲ್ಲಿ ನಮ್ಮ ಕಸಿನ್ sister (cousin  ಚಿಕ್ಕಪ್ಪನ ಮಗಳು) ಕಳೆದ 6 ವರ್ಷಗಳಿಂದ ಇದ್ದದ್ದು,  ಇತ್ತೀಚಿಗೆ  ಎರಡು ಕಿಮಿ ದೂರದಲ್ಲಿರೋ mall ಒಂದರಲ್ಲಿ ಇಬ್ಬ್ಬರೂ ಸಿಕ್ಕಾಗ ತಿಳಿಯಿತಂತೆ. ಸುಮ್ಮನೆ ಅದರಿಂದ ಪ್ರೇರಿತವಾಗಿ ಬರೆದೆ ಈ ಕತೆ.)

ಮತ್ತೀಗ ನಿಜವಾಗಿ ನಡೆದ ಒಂದು ಘಟನೆ
ಅಮ್ಮ ನ ಫ್ರೆಂಡ್ ನ ಪರಿಚಯದವರ ತಂಗಿಯ ಮಗಳು. ಆರ್ಥಿಕವಾಗಿ ತುಂಬ ಕಷ್ಟದಲ್ಲಿದ್ದಾರೆ. ಗಂಡ ಹಾಗೂ ಮಗನಿಗೆ ಒಳ್ಳೆಯ ಕೆಲ್ಸ ಇಲ್ಲ. ಹುಡುಗಿಗೆ 19 ವರ್ಷ ವಯಸ್ಸು. ಪರಿಚಯದ ಪುರೋಹಿತರು ಆ ಹುಡುಗಿಗೆ ಒಂದು ಗಂಡು ಹುಡುಕಿದ್ದರು. ಹುಡುಗ ದುಬೈನ ಆಭರಣದ ಮಳಿಗೆಯಲ್ಲಿ ಕೆಲಸಕ್ಕಿದ್ದವನು ಇತ್ತೀಚಿಗೆ ಬೆಂಗಳೂರಿನ ಪ್ರತಿಷ್ಟಿತ ವಜ್ರದ ಮಳಿಗೆಯಲ್ಲಿ ಸಿನೀಯರ್ ಸೇಲ್ಸ್ ಪರ್ಸನ್. ತಿಂಗಳಿಗೆ 20,000 ಸಾವಿರ ಸಂಬಳ. ದುಬೈನಲ್ಲಿ ಸಿಗುತ್ತಿದ್ದ ಸಂಬಳದಲ್ಲಿ ಉಳಿತಾಯ ಮಾಡಿ ಅವನು ಬೆಂಗಳೂರಿನಲ್ಲಿ ಒಂದು ಚಿಕ್ಕ flat ಖರೀದಿಸಿದ್ದಾನೆ. ಹುಡುಗನಿಗೆ ಅಪ್ಪ ಅಮ್ಮ ಇಲ್ಲ. ಇರುವ ಒಬ್ಬ ಅಕ್ಕನಿಗೆ ಮದುವೆಯಾಗಿ, ಸ್ವಲ್ಪ ಅನೂಕೂಲದಲ್ಲಿದ್ದಾರೆ. ಅವನು ಹುಡುಗಿಗಿಂತ 13 ವರ್ಷಕ್ಕೆ ದೊಡ್ಡವನು. ನೋಡಲು ಸುಮಾರಾಗಿದ್ದು, ತಲೆಯಲ್ಲಿ ಅಲ್ಲಲ್ಲಿ ಕೂದಲು ಉದುರಿವೆ. ಮತ್ತು ಹುಡುಗಿ, ಹಲ್ಲುಬ್ಬಿ ಕಣ್ಣಿಗೆ ಸೋಡಾ ಗ್ಲಾಸ್ ಬೇರೆ. ಎಂಗೇಜಮೆಂಟ ಎರಡು ತಿಂಗಳ ಹಿಂದೆ ನಡೆದಿದೆ. ಮದುವೆ ಅವರ ಕುಲದೇವರ ದೇವಸ್ಥಾನದಲ್ಲಿ - ಗೋವೆಯಲ್ಲಿ ನಡೆಸುವುದು  ಅಂತ decide ಮಾಡಲಾಗಿತ್ತು.
ಎಂಗೇಜಮೆಂಟ್ ಆದ ಮೇಲೆ ಹುಡುಗ , ಹುಡುಗಿಯ ಮನೆಯವರ ಪರವಾನಗಿ ತೆಗೆದುಕೊಂಡು ಅವಳನ್ನು ಒಂದು ರೌಂಡ್ ಹೊರಗೆ ಸುತ್ತಾಡಿಸಿಕೊಂಡು, ಪರಸ್ಪರ ಇಬ್ಬರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ನೆವದಿಂದ, ಹುಡುಗಿಯನ್ನು ಕರೆದ. ಅವಳು ಸುತಾರಾಂ ಅವನ ಜತೆ ಹೋಗಲು ಒಪ್ಪಲಿಲ್ಲ. ಬಹುಶ: ಹುಡುಗಿಗೆ ನಾಚಿಕೆ ಇರಬಹುದೆಂದು ಸುಮ್ಮನಾದ. ಹೀಗೆ ಎರಡು ಮೂರು ಸಲ ಹುಡುಗ ಬೆಂಗಳೂರಿನಿಂದ ರಜೆ ಇದ್ದಾಗಲೆಲ್ಲ ಊರಿಗೆ ಹೋಗಿ ಆ ಹುಡುಗಿಯ ಮನೆಗೆ ಹೋಗಿ ಬರುತ್ತಿದ್ದ. ಮೊನ್ನೆ ಒಂದು ದಿನ ಹೀಗೆ ಹೋದಾಗ, ಅವಳಿಗೆ ಹಲ್ಲನ್ನು ಸರಿಪಡಿಸಲು ಹಾಗೂ ಕಣ್ಣಿಗೆ ಕಾಂಟೆಕ್ಟ್ ಲೆನ್ಸ್ ಹಾಕಿಸಿಕೊಳ್ಳಲು ದುಡ್ಡು ಕೊಟ್ಟಾಗ, ಆ ಹುಡುಗಿ ದುಡ್ಡನ್ನು ಅವನ ಮುಖಕ್ಕೆ ಎಸೆದು, ನೀನು ಮುದುಕ ನನಗೆ ನಿನ್ನ ಜತೆ ಮದುವೆ ಮಾಡಿ ಕೊಳ್ಳಲು ಇಷ್ಟವಿಲ್ಲ ಅಂದಳಂತೆ. ಅಮ್ಮ ನನಗೆ ಇದೆಲ್ಲ ಫೋನ್ ನಲ್ಲಿ ಹೇಳಿದಾಗ, ಸಧ್ಯ ಮದುವೆ ಮುಂಚೆನೆ ಹೀಗಾಯ್ತಲ್ಲ  ಒಳ್ಳೆಯದಾಯ್ತು ಅಂದೆ. ಅದಕ್ಕೆ ಅಮ್ಮ ’ಆ ಹುಡುಗಿಯ ಸೊಕ್ಕು ನೋಡು, ನೋಡಕ್ಕೆ ಒಂಚೂರು ಚೆನ್ನಾಗಿಲ್ಲ. ಆ ಹುಡುಗ ಅವಳನ್ನು ಮದುವೆಯಾಗಲು ಒಪ್ಪಿದ್ದೆ ದೊಡ್ಡ ವಿಷಯ’ ಅಂತ ಹೇಳಿದರು. ಪುರೋಹಿತರು ರಾಜಿ ಮಾಡಲು ಪ್ರಯತ್ನಿಸಿದಾಗ ಆ ಹುಡುಗಿಯ ಅಮ್ಮ ,’ ಏನು!? ನನ್ನ ಹುಡುಗಿಗೆ ಇನ್ನು 19 ವರ್ಷ ವಯಸ್ಸು, ಯಾರಾದರು ಗಂಡು ಸಿಗುತ್ತಾರೆ. ನೀವೆಲ್ಲ ಸೇರಿ ನಮ್ಮನ್ನು ತೊಂದರೆ ಕೊಟ್ಟಿರಿ ಅಂತ ಅವರ ಮೇಲೆ ಆರೋಪ ಮಾಡಿದರಂತೆ.  ಹುಡುಗ ಮಾತ್ರ ನಿಶ್ಚಿಂತೆಯಿಂದ, ’ಸಧ್ಯ ಮದುವೆ ಮುಂಚೆನೆ ಅವಳು ಹೇಳಿದ್ದು ಒಳ್ಳೆಯದಾಯ್ತು. ಇಲ್ಲದಿದ್ದರೆ ನಾನು ತುಂಬ ಕಷ್ಟ ಪಡಬೇಕಾಗುತ್ತಿತ್ತು ಅಂದ . ಎಂಗೇಜಮೆಂಟ್ ಗೆ ಹುಡುಗನು ಹುಡುಗಿಗೆ ಕೊಟ್ಟ ಬಂಗಾರದ ಉಂಗುರ, ಹಲ್ಲು ಹಾಗು ಕಣ್ಣು ಸರಿಪಡಿಸಲು ಕೊಟ್ಟ ದುಡ್ಡು ಹೀಗೆ ಎಲ್ಲವನ್ನೂ ಹುಡುಗಿಯ ಮನೆಯವರು ಹಿಂದಕ್ಕೆ ಕೊಟ್ಟಿದ್ದಾರಂತೆ
.....ನನಗಂತು ಆಗಿದ್ದು ಸರಿಯಾಗಿದೆ ಅನ್ನಿಸ್ತು. ಎಂಗೇಜಮೆಂಟ್ ಮೊದಲೆ ಇದೆಲ್ಲ ನಡೆದಿದ್ದರೆ ಆ ಖರ್ಚು ಹಾಗೂ ಮುಜುಗರ ಆಗುವುದು ಕೂಡ ಉಳಿಯುತ್ತಿತ್ತು. ಹುಡುಗ ಹುಡುಗಿಯರಿಗೆ ಇಷ್ಟವಿಲ್ಲದಿದ್ದಾಗ ಪುರೋಹಿತರು ಹಾಗೂ ಉಳಿದ ಸಂಬಂಧಿಗಳು ಹೀಗೆ ಮುಂದುವರೆಯಬಾರದಿತ್ತು....ಏನಂತೀರಾ??
:-)

November 28, 2011

ಭೇಟಿಯಾಗುವ ಮುನ್ನ ಕಣ್ಮರೆಯಾದ ಶ್ರೀ ನಾಗರಾಜ ಜವಳಿ

ಇವತ್ತು ಮಧ್ಯಾಹ್ನ  ನೀಲೇಶ ಜವಳಿ ಎಸ್ ಎಮ್ ಎಸ್ ’my chikkappa Nagaraj Javali expired today' ಓದಿದಾಗ ನನಗೆ ಅದು ತಲೆಗೆ ಹೋಗಲು ಎರಡು ನಿಮಿಷ ಗಳೆ ಬೇಕಾದವು.sms ಎಷ್ಟು ಹೊತ್ತಿಗೆ ಕಳುಹಿಸಿದ್ದು ಅಂತ ನಾನು ನೋಡಲಿಲ್ಲ. ಭಾನುವಾರ ಅಂದ್ರೆ ಒಂದಷ್ಟು ಕೆಲಸಗಳು, ಹಾಗೂ ನಾನು ಪ್ರವಾಸ ಕೈಗೊಂಡು ಮನೆಗೆ ಬಂದು ಕೆಲವು ದಿನಗಳಾಗಿವೆ, ಆದ್ದರಿಂದ ಕ್ಲೀನಿಂಗ್, ಅದು-ಇದು.... ಶ್ರೀಕಾಂತ ಗೆ ಹೇಳಿದಾಗ ಸ್ವಲ್ಪ ಹೊತ್ತು ಅವರೂ ಗರಬಡಿದವರಂತಾಗಿ ’what!! so sad' ಅಂದರು
ನಿನ್ನೆ ರಾತ್ರಿಯಷ್ಟೆ ನಾವು ಅವರ ಬಗ್ಗೆ ಮಾತನಾಡುತ್ತಿದ್ದೆವು. ತೀರ್ಥಹಳ್ಳಿಯಲ್ಲಿರುವ ಶ್ರೀಕಾಂತ ಕಸಿನ್ ಮಗಳು  ಅಪೂರ್ವ ಸಧ್ಯಕ್ಕೆ ನಮ್ಮ ಮನೆಯಲ್ಲಿ ಇದ್ದಾಳೆ. ಊಟ ಮಾಡ್ತಾ ಲೋಕಾಭಿರಾಮವಾಗಿ ತೀರ್ಥಹಳ್ಳಿ, ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು,ನಾಟಕ-ಸಂಗೀತ ಕಾರ್ಯಕ್ರಮಗಳು, ಅದಕ್ಕೆ ಜನರ ಪ್ರತಿಕ್ರಿಯೆ, ಹೀಗೆ ಮಾತು ಬಂದಾಗ ನೀಲೇಶ ಜವಳಿಯ ನಾಟಕ ತಂಡ ’ನಟಮಿತ್ರರು’ ಅವರ ಚಿಕ್ಕಪ್ಪ ನಾಗರಾಜ ಜವಳಿ. ಇವರೆಲ್ಲ  ಮಾತಲ್ಲಿ ಹಾದು ಬಂದಿದ್ದರು, ಇವತ್ತು sms ಬಂದಾಗ ಒಂದು ಕ್ಷಣ ಮನಸ್ಸು ಹೌಹಾರಿದ್ದು  ಹೌದು.
ಅವರು ನನ್ನ ಬ್ಲಾಗ್ ಓದುಗರೂ ಕೂಡ. ಶ್ರೀಕಾಂತ ಭಾವ ಯೋಗೇಶ ಜೋಯಿಸ್ ಮತ್ತು ನಾಗರಾಜ ಜವಳಿ ಆಪ್ತ ಮಿತ್ರರು. ಮಂಗಳೂರಿನ Canara College ನ ಪ್ರಾಂಶುಪಾಲರಾಗಿದ್ದ ಅವರು ವಿಶ್ರಾಂತ ಜೀವನವನ್ನು ಅವರ ಊರಾದ ತೀರ್ಥಹಳ್ಳಿಯಲ್ಲಿ ಕಳೆಯುತ್ತಿದ್ದರು. ಹಲವು ಮಿತ್ರರೊಡಗೂಡಿ ಪ್ರತಿ ದಿನ ಸಂಜೆ  ಇನ್ನೋರ್ವ ಮಿತ್ರರ ಮನೆಯ ಜಗಲಿಯಲ್ಲಿ ಅವರ ಬೈಠಕ್. ಶ್ರೀಕಾಂತ ಭಾವನವರಿಂದಲೆ ನನಗೆ ಗೊತ್ತಾಗಿದ್ದು ಅವರು ನನ್ನ ಬ್ಲಾಗ್ ಓದುಗರೆಂದು. ತೀರ್ಥಹಳ್ಳಿಯ ಬಗ್ಗೆ ಬರೆದಾಗಲೆಲ್ಲ ಅವರು ಯೋಗೇಶ ಅಣ್ಣನಿಗೆ ಓದಿ ಹೇಳುತ್ತಿದ್ದರಂತೆ. ಯೋಗೇಶ ಅಣ್ಣನವರಲ್ಲಿ ಕಂಪ್ಯೂಟರ್ ಇಲ್ಲ.ಅವರು ನನ್ನ ಬ್ಲಾಗ್ ಓದುತ್ತಾರೆಂದು ನಾನು ಮುಜುಗರ ಪಟ್ಟಿದ್ದೆ. ನಾಗರಾಜ ಜವಳಿಯವರಿಗೆ ಇಷ್ಟವಾದ ನನ್ನ ಪೋಸ್ಟ್ ’ಬಕುಳಾಬಾತ್ ಎಂಬ thriller' 
ನೀಲೇಶ ಪರಿಚಯ ನನಗೆ ಇತ್ತೀಚಿಗೆ facebook ನಲ್ಲಿ ಆಗಿದ್ದು.ಅವನು ಒಂದು ದಿನ ’ಈಗಷ್ಟೆ ವಸುಧೇಂದ್ರ ರ ’ನಮ್ಮಮ್ಮ ಅಂದ್ರೆ ನಂಗಿಷ್ಟ”ಪುಸ್ತಕ ಓದಿದೆ. ನೀವು ಓದಿದಿರಾ ಅಂತ ಕೇಳಿದಾಗ, ನನ್ನ ಬಳಿ ಅವರ ಎಲ್ಲ ಪುಸ್ತಕ ಇದೆ, ಎಲ್ಲವನ್ನೂ ನಾನು ಓದಿ ಇಷ್ಟ ಪಟ್ಟಿದ್ದೇನೆ ಅಂತ ಹೇಳಿ  ನನ್ನ ಪುಸ್ತಕದ collection ಬಗ್ಗೆ ಜಂಬ ಕೊಚ್ಚಿಕೊಳ್ತಾ ಇದ್ರೆ, ಅವನು, ನನ್ನ ಚಿಕ್ಕಪ್ಪನ ಬಳಿ 3000 ಸಾವಿರಕ್ಕಿಂತ ಹೆಚ್ಚು ಪುಸ್ತಕ ಇದೆ ಅಂತ ಹೇಳಿದಾಗ ನಾನು ಸುಮ್ಮನಾಗಿ ಬಿಟ್ಟೆ. ಆಗಿನಿಂದ ನನಗೆ ನಾಗರಾಜ ಜವಳಿಯವರ ಪುಸ್ತ್ಕಕಗಳನ್ನು ನೋಡಬೇಕು ಎಂಬ ಕುತೂಹಲ. ಹಾಗು ದೇಶಕಾಲ ಸಂಚಿಕೆಗಳೆಲ್ಲವೂ ಅವರಲ್ಲಿ ಲಭ್ಯವೆಂದು ಗೊತ್ತಾದ್ದರಿಂದ ನಾನು ಇಲ್ಲಿ ಆ ಪುಸ್ತಕಗಳನ್ನು subscribe ಮಾಡಿಲ್ಲ. ತೀರ್ಥಹಳ್ಳಿಗೆ ಹೋದಮೇಲೆ ಅವರಿಂದ ಪಡಕೊಂಡು ಓದಿದರಾಯಿತೆಂದು.
ತೀರಾ ಇತ್ತೀಚಿಗೆ ಹೆಗ್ಗೋಡಿನಲ್ಲಿ ನೀನಾಸಂ ಸಾಂಸ್ಕೃತಿಕ ಶಿಭಿರಕ್ಕೆ ನೀಹಾರಿಕ ಕೂಡ ಭಾಗವಹಿಸಿದ್ದಳು. ನಾನು ಶ್ರೀಕಾಂತ ಆ ಸಮಯ ತೀರ್ಥಹಳ್ಳಿಗೆ ಹೋಗುವುದಿತ್ತು. ಆಗ ನಾವು ಯಾವುದಾರರೊಂದು ಒಂದು ದಿನ  ನಾಟಕ ನೋಡಿ , ಮತ್ತು ನೀಹಾ ಳನ್ನು ಭೆಟಿಯಾದಾಗೂ ಆಯಿತೆಂದು ಅಲ್ಲಿಗೆ ಹೋಗಿ ಬರುವುದೆಂದು ತೀರ್ಮಾನಿಸಿದ್ದೆವು. ಆದರೆ ಇಲ್ಲಿಯ ಆಫಿಸಿನ ಹಲವು ಕೆಲಸಗಳ ಒತ್ತಡದಿಂದ ಹೋಗಲಾಗಲಿಲ್ಲ. ನೀಲೇಶ ಜವಳಿ ನನಗೆ ಕಾರ್ಯಕ್ರಮದ ಪಟ್ಟಿ ಕಳುಹಿಸುತ್ತೇನೆ ಅಂದಾಗ ನಾನು, ’ಬೇಡ, ನನ್ನ ಬಳಿ ಇದೆ, ಮತ್ತು ನಿಹಾ ಅಲ್ಲಿದ್ದಾಳೆ ಎಂದಾಗ, ನಾನು ಚಿಕ್ಕಪ್ಪ ಹೆಗ್ಗೋಡಿಗೆ ಹೋಗ್ತಾ ಇದ್ದೇವೆ, ನನಗೆ ಗೋರಾ ನೋಡ ಬೇಕಿತ್ತು ಆದರೆ ಚಿಕ್ಕಪ್ಪನಿಗೆ ಮರಾಠಿ ಸಂಗೀತ ನಾಟಕ”ಕತ್ಯಾರ್ ಕಾಳ್ಜಾತ್ ಘುಸ್ಲಿ’ ನೋಡಬೇಕಂತೆ, ನಾಳೆ ಹೋಗ್ತಾ ಇದ್ದೇವೆ ಅಂತ sms ಮಾಡಿದಾಗ, ನಾನು ’ನೋಡಿ ಹೇಳು ತಮ್ಮ, ಹಾಗೆ ನಿಹಾ ಗೆ ಹಾಯ್ ಹೇಳು’ ಚೆನ್ನಾಗಿದ್ದರೆ ನಾನು  ಎರಡು ದಿನ ಬಿಟ್ಟು ರಂಗಶಂಕರದಲ್ಲಿ  ಆ ನಾಟಕ ಪ್ರದರ್ಶನ ಇದೆ , ನೋಡುತ್ತೇನೆ’ ಅಂದಿದ್ದೆ. ಯಾಕಂದರೆ ನನಗೆ ಮರಾಠಿ ನಾಟಕಗಳು ಇಲ್ಲಿ ಸಿಗುವುದು ಕಡಿಮೆ. ಬಂದಾಗ ನಾನು ಆ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. ನಮ್ಮ ಮನೆಯಿರೋದು ಮಹಾಲಕ್ಷ್ಮಿಪುರಂ ನಲ್ಲಿ, ಜೆ.ಪಿ. ನಗರಕ್ಕೆ ಹೋಗೋದು ಒಂದು ದೊಡ್ಡ ಸಾಹಸ.ಆದರೂ ತಪ್ಪಿಸಿಕೊಳ್ಳಲ್ಲ.
ನಾಟಕ ನೋಡಿದ ಮೇಲೆ ನೀಲೇಶ ಹಾಗೂ ನಿಹಾರಿಕಾ sms ಒಟ್ಟೊಟ್ಟಿಗೆ ಬಂದಿತ್ತು..
ನೀಲೇಶ: ನಾಟಕ ಸಕತ್ ಅಕ್ಕ...dont miss
ನಿಹಾರಿಕ: mommy marathi drama was awesome. you should watch ಅಂದಾಗ ಕೂಡಲೆ indianstage ನಲ್ಲಿ ಆನ್ ಲೈನ್ ಟಿಕೆಟ್ ಗೆ ಟ್ರೈ ಮಾಡಿದೆ, ಆದರೆ ಯಾಕೋ ಅದು ಸರಿ operate ಆಗ್ತಾ ಇರಲಿಲ್ಲ.ಮರುದಿನ ಬೆಳಿಗ್ಗೆ 9 ಗಂಟೆಯಿಂದ 9.30 ತನಕ ಕಿರಣ ವಟಿ ಯವರ ಸೆಲ್ ನಂಬರ್ ಗೆ (ನಾಟಕದ ಟಿಕೆಟ್ ಅವರಲ್ಲಿ ಲಭ್ಯವೆಂದು ನನಗೆ ಇ-ಮೈಲ್ ನಲ್ಲಿ ಬಂದಿತ್ತು) ಪ್ರಯತ್ನಿಸಿ, ಅವರು ಫೋನ್ ಎತ್ತುಕೊಳ್ಳದಿದ್ದಾಗ, ಏನಾದರಾಗಲಿ ರಂಗಶಂಕರಕ್ಕೆ ಹೋಗಿ ನೋಡುವುದು, ಟಿಕೆಟ್ ಸಿಕ್ಕರೆ ಸಿಗುತ್ತದೆ, ಇಲ್ಲದಿದ್ದರೆ shankaras ನಲ್ಲಿ ಯಾವುದಾದರು ಪುಸ್ತ್ತಕ, ಸಿ.ಡಿ ಕೊಂಡು, ಜಯನಗರ 4th ಬ್ಲಾಕ್ ಒಂದು ರೌಂಡ್ ಹಾಕಿ ಬರುವುದು ಅಂತ. 9.30 ವರೆ ಸುಮಾರಿಗೆ ಕಿರಣ ವಟಿಯವರೆ ಫೋನ್ ಮಾಡಿದಾಗ ನಾನು ಎರಡು ಟಿಕೆಟ್ ಬುಕ್ ಮಾಡಿದೆ.
ನಾಟಕ ನಾನು ಮಾತ್ರ ಅಲ್ಲ ಮಾಲವಿಕ ಕೂಡ ಎಂಜಾಯ್ ಮಾಡಿದಳು.ರಂಗಶಂಕರ jampacked. ಮರಾಠಿ ಮಾತನಾಡುವುವವರನ್ನು ಕಂಡು ನನಗೆ ಮುಂಬೈ ಗೆ ಹೋಗಿ ಬಂದಷ್ಟೇ ಖುಶಿ. ಮನೆಗೆ ಬಂದು ನಿಹಾ ಹಾಗು ನೀಲೇಶ ಇಬ್ಬರಿಗೂ ನನಗೆ ನಾಟಕ, ಅದರಲ್ಲಿನ ಹಾಡು ಎಲ್ಲವೂ ಇಷ್ಟವಾಯಿತು, ಮಾತ್ರವಲ್ಲ ಎಲ್ಲರ ಜತೆ ನಾನು ’once more’ ಕೂಗು ಹಾಕಿದ್ದನ್ನು sms ಮಾಡಿದೆ.
ನಿಹಾ smiley ಕಳಿಸಿದ್ದರೆ, ನೀಲೇಶ, ’ಅಕ್ಕ, ನನಗೆ ಅದರಲ್ಲಿನ ಎಲ್ಲ ಹಾಡುಗಳು ಬಾಯಿ ಪಾಠ ಆಗಿದೆ. ನಾನು ಚಿಕ್ಕಪ್ಪ ಹೆಗ್ಗೋಡಿಗೆ ಜೀಪ್ ಮಾಡಿಕೊಂಡು ಹೋಗಿದ್ವಿ. ದಾರಿಯಲ್ಲೆಲ್ಲ, ಹೋಗ್ತಾ ಬರುತ್ತಾ ಆ ಸಂಗೀತ ನಾಟಕದ ಆಡಿಯೋ ಕೇಳ್ತಾ ಹೋದ್ವಿ’ ಅಂತ ಮರು sms ಮಾಡಿದ. ನಾನು ನಾಗರಾಜ ಜವಳಿಯವರು ತಲೆದೂಗುತ್ತ, ವಾಹ!! ಅಂತ ಕೈ ಮೇಲೆತ್ತಿದ್ದು, ಪ್ರಯಾಣದ ಮಧ್ಯದಲ್ಲಿ ಗೋಳಿ ಬಜೆ ತಿಂದಿದ್ದು ಇಲ್ಲಿ ಕೂತು imagine ಮಾಡ್ತಾ ಇದ್ದೆ. ಮನಸ್ಸು ಎಷ್ಟು ವಿಚಿತ್ರ ಅನ್ನುವುದಕ್ಕೆ ಇದೂ ಕೂಡ ಒಂದು ನಿದರ್ಶನ- ನಾನು ನಾಗರಾಜ ಜವಳಿಯವರ ಬಗ್ಗೆ ಕೇಳಿದ್ದೇನೆ, ಅವರನ್ನು ನೋಡಿಲ್ಲ.. ಅವರ ಸಾಂಸ್ಕೃತಿಕ ಚಟುವಟಿಕೆ, ಅವರ ಅಗಾಧ ಪುಸ್ತಕದ collection, ಓದುವ ಹವ್ಯಾಸದ ಬಗ್ಗೆ ಯೋಗೇಶ ಅಣ್ಣನವರಿಂದ ಕೇಳಿದ್ದೇನೆ, ಆದರೆ ಅವರನ್ನು ಭೇಟಿಯಾಗುವುದನ್ನು ಮುಂದಕ್ಕೆ  ಹಾಕುತ್ತ ಬಂದಿದ್ದೆ. ತೀರ್ಥಹಳ್ಳಿಗೆ ಹೋದಾಗ ತೋಟದ ಕೆಲಸ, ಶ್ರೀಕಾಂತ ಅಕ್ಕನಿಗೆ (ಅವರಿಗೂ ವಯಸ್ಸಾಗಿದೆ) ಸ್ವಲ್ಪ ಮನೆ ಕೆಲಸದಲ್ಲಿ ಸಹಾಯ ಮಾಡುವುದು ಇದರಲ್ಲೇ ಸಮಯ ಹೋಗುತ್ತಿತ್ತು. ಈಗ ’ಛೆ’ ಅನ್ನಿಸುತ್ತಿದ್ದೆ.
 ಇದು ನನ್ನಕಡೆಯಿಂದ ಒಂದು ಪುಟ್ಟ  ಬ್ಲಾಗ್ ನಮನ ಕಣ್ಮರೆಯಾದ ನಾಗರಾಜ ಜವಳಿ ಮಾಮನವರಿಗೆ. ಮುಂದಿನ ಸಲ ತೀರ್ಥಹಳ್ಳಿಗೆ ಹೋದಾಗ ಅವರನ್ನು ಭೇಟಿಯಾಗಬೇಕೆಂದಿದ್ದೆ!!!
:-(

November 24, 2011

ತಿಂಗಳ break ke baad :-)

’ನಮ್ಮ ಸಂಸ್ಥೆಯ welfare fund” ಪೋಸ್ಟ್ ಬರೆದ ಮೇಲೆ ಒಂದು ತಿಂಗಳು ನಿಮ್ಮ ಮೆದುಳು ತಿನ್ನಲ್ಲ ಅಂತ ರಜೆ ಸಾರಿದ್ದೆ. ಹಳೆ ಪೋಸ್ಟ್ ನಲ್ಲಿ ಕೆಲವೊಂದು ಕಾಗುಣಿತದ ತಪ್ಪುಗಳಿದ್ದವು. ಅದನ್ನು ಸರಿ ಪಡಿಸಲು ಎಡಿಟ್ ಮೋಡ್ ನಲ್ಲಿಟ್ಟಿದ್ದಷ್ಟೆ, ಅಷ್ಟರಲ್ಲಿ ಎಲ್ ಪಿ ಜಿ ಗ್ಯಾಸ್ ರಿಫಿಲ್ ನವನು ಬಂದಿದ್ದ. ಬಾಗಿಲು ತೆರೆದಿದ್ದರಿಂದ ಮೇಲಿನ ಮನೆ ಪುಟ್ಟು ದಿಶಾಂತ ಕೂಡ ಒಳಗೆ ಬಂದು ಸೀದ ಕಂಪ್ಯೂಟರ್ ಬಳಿ ಬಂದು ಕೂತ. ಅವನ ಗೇಮ್ಸ್ ಯಾವ ಫೋಲ್ಡರ್ ನಲ್ಲಿದೆ ಅಂತ ಅವನಿಗೆ ಗೊತ್ತು. ಅದನ್ನು ತೆರೆದು ಅವನು ಆಟ ಆಡಿ ಕೊಳ್ಳುತ್ತಿರುತ್ತಾನೆ. ನನಗೂ ನನ್ನ ಬ್ಲಾಗ್ ಸೈನ್ ಇನ್ ಆಗಿಟ್ಟಿದ್ದು ಮರೆತು ಹೋಯ್ತು. ಅವನು ಆಟ ಆಡುವಾಗಲೆ ’ಒಂದು ನಿಮಿಶ ಪುಟ್ಟಣ್ಣ; ನನ್ನ ಫೈಲ್ ಕ್ಲೋಸ್ ಮಾಡ್ತೀನಿ, ಆಮೇಲೆ ಆಡು ಅಂತ ಹೇಳಿ ನಾನು ಪಬ್ ಲಿಶ್ ಪೋಸ್ಟ್ ಕೊಟ್ಟು ಬಿಟ್ಟೆ. ಮರುದಿನದ ಪ್ರಯಾಣದ ಪ್ಯಾಕಿಂಗ್ ಮಾಡಿದೆ. ಅವನು, - ಇನ್ನೊಂದು ರುಂ ನಲ್ಲಿ ಬ್ಲಾಕ್ ಬೋರ್ಡ್ ಇದೆ. ಅಲ್ಲಿ chalk ನಿಂದ ಚಿತ್ರ ಬಿಡಿಸ್ತಾ ಇದ್ದ. ನಾನು ಪುನ: ಬ್ಲಾಗ್ ತೆರೆದು ನೋಡಿದ್ರೆ ಅದರಲ್ಲಿ ಅರ್ಧಕ್ಕಿಂತ ಜಾಸ್ತಿ delete ಆಗಿ ಬಿಟ್ಟಿತ್ತು. ಒಂದೆ ಸಲ ’ಪುಟ್ಟು’ ಅಂತ ಕಿರುಚಿದೆ. ಅವನು ಓಡೋಡಿ ಬಂದ ’ಯಾಕೋ ಆಂಟಿ ಬರೆದಿದ್ದೆಲ್ಲ delete ಮಾಡಿದ್ದಿ’ ಅಂದೆ...ನನಗೆ ಕಂಡಾಪಟ್ಟೆ ಸಿಟ್ಟು ಬಂದಿತ್ತು. ಅವನು ಮುಖ ಚಿಕ್ಕದು ಮಾಡಿ ನನ್ನ ಕಡೆ ನೋಡ್ತಾ ನಿಂತು ಬಿಟ್ಟ, ನಾನು ಸಿಟ್ಟಿಗೆದ್ದದ್ದು ಅವನು ನೋಡೇ ಇಲ್ಲ. ಕೂಡಲೆ ನನಗೆ ’ಛೆ’ ಅನ್ನಿಸ್ತು. ಮಹಾ ನಾನೇನು ಮಹಾ ದೊಡ್ಡ ಬರಹಗಾರಳೇನಲ್ಲ. ಹೋದರೆ ಹೋಯ್ತು. ಮತ್ತು ನೀಹಾ ಯಾವತ್ತೂ ಹೇಳ್ತಾಳೆ ಸಿಟ್ಟು ಬಂದಾಗ ಆಲೋಚನೆ ಮಾಡು. ಸಿಟ್ಟು ಯಾಕೆ ಬರುತ್ತೆ ಅಂದರೆ ತಪ್ಪು ನಮ್ಮದಿರುತ್ತೆ, ’ ಅವಳು ಹೇಳೋದು ಎಷ್ಟು ನಿಜ ಅಲ್ಲವಾ? ನಾನು ಸಿಸ್ಟಮ್ ನಿಂದ ಏಳುವ ಮುಂಚೆ save ಮಾಡಿ, ಸೈನ್ ಔಟ್ ಆಗಬೇಕಿತ್ತು. ನಾನು ಅವನಿಗೆ sorry ಹೇಳಿ ತಬ್ಬಿಕೊಂಡು ಬಿಟ್ಟೆ. ಅವನೂ ಅಷ್ಟೆ ಜೋರಾಗಿ ತಬ್ಬಿ sorry aunty ಅಂದ. ನಾನು ಅವನಿಗೋಸ್ಕರ ಅವನ ಇಷ್ಟದ್ದ ಚಾಕೊಲೇಟ್ ಐಸ್ಕ್ರೀಮ್ ತಂದು ಕೊಟ್ಟೆ.

:-)
ಒಂದು ತಿಂಗಳ ಟೂರ್ ಅಂತ ಹೋಗಿದ್ದೆ. ಆದರೆ ಶ್ರೀಕಾಂತ ರಾಯರು ಆಫ್ರಿಕಾ ಗೆ ಹೊರಟಿದ್ದಾರೆಂದು ಬೇಗ ಬರಬೇಕಾಯಿತು. ಅಷ್ಟೆ ಅಲ್ಲ ಶ್ರೀಕಾಂತ ಎರಡೆರಡು ದಿನಕ್ಕೆ ಫೋನ್ ಮಾಡ್ತಾ ಇದ್ರು. ಬೇಗ ಬಾ..ನೀನಿಲ್ಲದೆ ಇಲ್ಲಿ ಬೇಜಾರಾಗುತ್ತೆ ಅಂತ. ಅದಕ್ಕೆ ನಾನು ’ಮಹಾ ಮನೆಯಲ್ಲಿದ್ದಾಗ ಎದುರಿಗೆ ಇದ್ರು ಮಾತಾಡಕ್ಕೆ ಪುರುಸೊತ್ತು ಇರಲ್ಲ, ಯಾವಾಗ್ಲೂ ಮೊಬೈಲ್ ನಲ್ಲೆ ಮಾತಿಗೆ ತೊಡಗಿರ್ತೀರಾ ಅಂತ ನಾನು ಮುನಿಸು ತೋರಿಸಿದೆ. ಅದಕ್ಕೆ ನೀನು ಮನೆಯಲ್ಲಿದ್ದಾಗ ನಿನ್ನ ಹಾಡು, ಅಡಿಗೆ ಮನೆಯಲ್ಲಿ ಪಾತ್ರೆ-ಪರಡಿ ಕುಕ್ಕುವುದು, ಮಕ್ಕಳ ಜತೆ ಪ್ರೀತಿ-ಜಗಳ, ಅಮ್ಮ-ತಮ್ಮಂದಿರ ಜತೆ ಫೋನ್ ನಲ್ಲಿ ಮಾತಾಡುವುದೆಲ್ಲ, ತಮ್ಮನ ಮಗಳ ಜತೆ ಲಲ್ಲೆಗರೆಯುವುದು...ಇವೆಲ್ಲ ನನಗೆ background music  ತರಹ ಇರುತ್ತೆ, ಅದೇ ನನಗೆ ಸಮಾಧಾನ. ನೀನಿಲ್ಲದಾಗ ಎಲ್ಲ ಕಡೆ silence. ಮಕ್ಕಳು ತಮ್ಮಷ್ಟಕ್ಕೆ ಓದಿಕೊಂಡೊ ಏನೋ ಮಾಡುತ್ತಿರುತ್ತಾರೆ.....of course ನನಗೆ ಖುಶಿ ಯಾಗುತ್ತೆ ಅವರು ಆ ತರಹ ಹೇಳುವಾಗ.....ಅದಕ್ಕೆ ಬಂದು ಬಿಟ್ಟೆ. ಅಮ್ಮ ಮಾತ್ರ ಸಿಟ್ಟು ಮಾಡಿದ್ರು. ಮಕ್ಕಳು ದೊಡ್ಡವರಾಗಿದ್ದಾರೆ. ಅವರು ಮ್ಯಾನೇಜ್ ಮಾಡ್ತಾರೆ ನೀನು ತಿಂಗಳ ಕೊನೆಗೆ ಹೋಗು ಅಂತ :-)
ನನ್ನ fishbowl ನಲ್ಲಿರೋ ಮೀನು ಕೂಡ ನನ್ನನ್ನು ಮಿಸ್ ಮಾಡಿದ್ವು  ಅನ್ನಿಸುತ್ತೆ. ತುಂಬ ಚಟುವಟಿಕೆಯಿಂದ ನೀರಲ್ಲೇ ಸದ್ದಿನೊಂದಿಗೆ ತಿಪ್ಪರಲಾಗ ಹಾಕ್ತಾ ಇದ್ರು, ರಾತ್ರಿ ನಾನು fishbowl ಬಳಿ ಕೂತು ಓದುತ್ತಿರುವಾಗ (One hundred shades of White by Preeti Nair..ತುಂಬ ಚೆನ್ನಾಗಿದೆ ಅವರ ನಿರೂಪಣಾ ಶೈಲಿ). ನನಗೆ ತುಂಬ disturb ಆಗ್ತಾ ಇತ್ತು ಮೀನಿನ ಆಟದ ಸದ್ದು. ಅದಕ್ಕೆ ಅವರನ್ನು ಬೆಕ್ಕಿಗೆ ಆಹಾರವಾಗಿ ಕೊಡುತ್ತೇನೆಂದು ಹೆದರಿಸಿದೆ...:-) ನಿಹಾ ಮಲಗಿದ್ದಳು..ಇಲ್ಲದಿದ್ದರೆ ನನಗೆ sadist      ಅನ್ನುತ್ತಿದ್ದಳೋ ಏನೋ.
ಟೂರ್ ನ ಹೈ ಲೈಟ್ ಹಳೇ ಗೋವಾ ನೋಡಿದ್ದು. ಅದನ್ನು ಫೋಟೊ ಸಮೇತ ಇನ್ನೊಂದು ಪೋಸ್ಟ್ ನಲ್ಲಿ ಹಾಕ್ತೇನೆ.
ಸಧ್ಯಕ್ಕೆ ಇಷ್ಟೆ. Delete ಆಗಿದ್ದ ಹಳೆ ಪೋಸ್ಟ್ ಗೆ ಕಮೆಂಟ್ ಹಾಕಿದವರಿಗೆಲ್ಲ ಧನ್ಯವಾದಗಳು ಮತ್ತು sorry!!!

October 22, 2011

A whirlwind trip to Chennai & Mahabalipuram

When Dr. Ram Ramarathnam of Chennai invited us over to have a 'dekko' at eco friendly e-cycle he had designed we grabbed this opportunity to turn this visit into official cum pleasure trip. It had been a long time since we all four had travelled together. Hence we decided on chennai and mahabalipuram. Our association with Gayathri Travels , Rajajinagar has been from the past 9 years.We have a favorite driver Ravi. Ravi is from chennai, but he is been in bangalore for many years. he speaks kannada and tamil very well , with splattering of Hindi and English too. what more could we ask??
We left early at 5.45 am.  It was cold and i had the window rolled down getting my ears, nose and cheek ice cold, until Srikanth ordered me to close the window. Oh!! how i love winter....
good morning Bengalooru...and the sun comes to see us off
Not much traffic. Niha shot this from the moving vehicle. She is quite good na?
Muddu Ganapa on the dashboard and Ravi in the rearview mirror...:-)
a view through the windshield (all above photos by Niha)
Just on a whim we got to discussing about the famous golden temple of vellore and he said if take a short detour we can include it in our itinerary....
So he took us golden temple, Siripuram, Vellore. The temple is named Shakti amma Laxmi Narayani . since we purchased the Special darshanam pass we could watch the deity up close. the temple is made of solid gold plates with intricate designs. though it was not much to my liking , i loved its reflection in the water.The temple is located on 100 acres of land on a natural landscaping lush with greenery and resting places for devotees for the trudge to the main temple is quite a distance away. The pathway to the temple is star-shaped designed to calm the nerves (so it says) (photography prohibited)

Sri Sakti Amma  with the deity Laxmi Narayani (my girls were curious why the founder was called Shakti amma instead of appa)
Whenever we were hungry (which happens a lot whenever we travel ;-))Ravi  stopped at the road side  eateries, where the ambience was so- so but the food was good and cheap. we had quite a generous amount of pongal in Chennai at the famous Saravana Bhavan. Ravi is warehouse of information. politics is his favorite subject. He talked about all his former employers from politician to people in the film line. Its a pleasure to hear him talk. there is never a dull moment. But above all he is a very careful driver.
Next stop was the Jalakanteshwara temple at Vellore fort  nearby
.Some details on the temple

YES!!!! I am frowning cos he is ALWAYS on the phone!! Hrrrmmmp!!
Jalakanteshwara Temple 
father -daughter
An act of valour etched  on the pillar
Malavika  posing besides a pillar
 Muruga
the rearing horse
After the fort temple we had lunch in a hotel and proceeded to meet Dr. Ram Ramarathnam at his office cum workshop in Chennai. Dr Ram is a wonder. with like minded youngsters he is on to many new eco-friendly inventions. He showed us the e-bicycle and Ravi had a test drive on it..he was quite impressed by the geared cycle which ran on battery.
with Dr Ram and the e cycle
We stayed at a hotel , the name i forgot.( i will check the bill and enter it at a later date).and early next morning with a grand breakfast at Hotel Saravana Bhavan we left for Mahabalipuram. on the way we cruised slowly along the marina beach where the beach was rife with early morning walkers, exercisers, strollers etc :-)




malathi-the water bottle carrier
the main deity of mamallapuram
Shot by a westerner. she was a fun lady :-)

The beach in the morning.. not many tourists
Westerners  feeling and studying the sand stormed temple walls



Srikanth in his comfort attire 'the mundu' and me in my favorite colour 'BLACK' :-)
this was very exciting..waking up Lord Nataraja in the wee hours of morning with classical morning raga...Chidamabaram

Rangamatapa at the Nataraja Temple. fell in love
Srikanths favorite form of Photography - silhoutte
Next stop was the famous Kamakashi temple at Kanchipuram before returning to Bangalore. There was some religious celebration with homa etc...hundreds of devotees thronged the temple. Ravi was very keen on helping us buy Kanchi Sarees, saying he knew where we could purchase Kanchipuram Sarees at discounted rates..but i was not interested and he was surprised and dejected at how can one say no to saree, hehehe...
On the way to Kancheepuram, Srikanth was interested in the round tiled roofs so got down to make enquiries but could not get much info..

spire (Gopuram) of the Kamakshi Temple

There we some more pictures in Srikanths mobile which he lost before i could download the photos ,owing to my laziness :-(. Sant Kabir das  is right in saying 'kal karo so aaj karo..aaj karo so ab'....The most memorable spot was the IIT-Chennai where the deers were roaming about freely. Its one of the loveliest IIT campus according to me. Fell in love with it..We also made a quick visit to the crocodile and snake park.

This was a funny sight. a turtle piggy-backing on the crocodile
We reached Bangalore around 11.00 in the night. Two days of absolutely jam-packed unplanned fun...
:-)