May 30, 2025

cake ಲೇಲೋ

 ಮೊನ್ನೆ ಒಂದು ಕೇಕ್ ಗೆ ಆರ್ಡರ್ ಇತ್ತು. 89 ರ ವಯಸ್ಸಿನವರು. ಏನೂ ಆರೋಗ್ಯ ಸಮಸ್ಯೆ ಇಲ್ಲವಂತೆ. ತುಂಬಾ chocolate ಹಾಕಿರುವ ಕೇಕ್ ಬೇಕಂತ ಹೇಳಿದರು. ಖುಷಿ ಆಯ್ತು. i am always appreciative of people who take good care of their health. 

cake ಕೆಳಗಿನ ಕೊಂಡಿ ಕ್ಲಿಕ್ ಮಾಡಿ ನೋಡಿ. ನನ್ನ ತಮ್ಮ ಹೇಳ್ತಾನೆ "ಹೆ ನಿನ್ನ you ಟ್ಯೂಬ್ video ತುಂಬಾ views ಬರುತ್ತೆ. ಅದನ್ನು delete ಮಾಡಬೇಡ" ಅಂತ....

marble cake eggless

ನಮ್ಮ ಬಿಲ್ಡಿಂಗ್ ನ ನದಾಫ್ ಕುಟುಂಬ ಮೊಟ್ಟೆ ಬಳಸಲ್ಲ. ಅವರು ಅಕ್ಕನ ಬಿಸ್ಕುಟ್ ಫ್ಯಾಕ್ಟರಿ ಯ fan. ಅವರ ಮೊಮ್ಮಗಳು SSLC ಯಲ್ಲಿ 95% ಅಂಕ ಗಳಿಸಿದ್ದಾಳೆ. ಅವರು ಆರ್ಡರ್ ಮಾಡಿದ  whole wheat+ jaggery fruit and nut cake ಮತ್ತು  apple cinnamon cake 👍❤️ 👇👇






May 27, 2025

ಸುಮ್ಮನೆ ತಮಾಷೆಗಾಗಿ (2024 May)

 (ನಿದ್ದೆ ಬರಲಿಲ್ಲ. Tried to dramatize an incident that happened at Udupi 🙂👍)

There is a queue for Sri Krishna Darshan at Udupi Krishna Mutt. Srikanth, driver Suresh and me waiting in quite a long line.)


Malathi : (smiling) Oh, the foreigners! They just jumped over the railing to skip i the queue. (chuckles)

(A Telugu-speaking couple tries to slip through the railing, but the husband gets stuck.)

Malathi: (laughing) And look at that couple! The wife slipped through easily, but the husband... well, let's just say he's a bit more... substantial.

(The husband grumbles and trudges through the loooooong queue to reach his wife.)

A still smiling Malathi's   eyes  locked with this foreigner. I could tell he wanted to talk. She wanted to avoid

(The foreigner approaches, asking devotees to move forward.)

Foreigner: Are you from Karnataka?

Malathi: (briefly) Yes.

(Srikanth engages with a group of lady travelers )

Srikanth: ಯಾವೂರು ಯವ್ವಾ?
ಕುಷ್ಟಗಿ ಸರ್!! (Where are you from? From Kushtagi!!)

Traveler: ಹೌದು ಸರ್, ಧರ್ಮಸ್ಥಳ ದಿಂದ ಬಂದೀವಿ. (Yes, sir, we're  here  after a visit to Dharmasthala.)

Srikanth: ಅಲ್ಲೆಲ್ಲಾ ಚೆನ್ನಾಗಿತ್ತು? (How was it there?)

Traveler: ಚೆನ್ನಾಗಿತ್ತು ಸರ್. ಮೂವತ್ತು ರೂಪಾಯಿಗೆ ಉಳಿದು ಕೊಳ್ಳೋ ವ್ಯವಸ್ಥೆ ಆಯ್ತು. (It was good, sir. We got accomodation for 30 rupees.) ಆದರೆ ಇಲ್ಲಿ 500 ರೂ ಕೊಡಬೇಕಂತೆ.
ಶ್ರೀಕಾಂತ್ : ಮೊದಲಿಗೆ ದೇವರ ದರ್ಶನ ಪಡಕೊಂಡು ಪ್ರಸಾದ ಉಣ್ಣಿ. ಆಮೇಲೆ ಉಳಿಯುವ ವ್ಯವಸ್ಥೆ ನೋಡಿಕೊಳ್ಳಿ. ಛತ್ರ ಗಿತ್ರ ಇರತಾಂವ್.

(The foreigner continues talking to the malathi.)

Foreigner: Do you come here every day?

Malathi: No, I'm from Bengaluru.

Foreigner: Oh, you traveled so far to visit Krishna.

Malathi: (smiling) If we're ever in the vicinity, we make it a point to visit the temple.

(The foreigner asks about her profession, and Srikanth becomes interested.)

Foreigner: Are you a teacher?

Malathi: No.

Srikanth: Which part of Russia are you from?

Foreigner: Central Russia.

Srikanth: (mimicking shivers) Oooooh, it's so cold there!

Foreigner: Oh, you've been to Russia?

Srikanth: No.

Foreigner: Then how come you know so much about Russia?

Malathi: (interrupting) He reads a lot. He's quite knowledgeable about stuff.

(The queue moves forward, and Srikanth removes his t-shirt at the behest of the priest)

Srikanth: Oh, you have this thread (ಜನಿವಾರ)around your body. Are you a Brahmin
Srikanth: (answering) Yes.

Foreigner: I visit India every year. ( As he was.parting he said he visits Manali every year to trek)

(A priest arrives and takes the foreigner's group with him, skipping the queue.)

Malathi: (watching) And look, the priest is taking them ahead.
Meanwhile, there's a live bhajan going on in front of the idol... the voice is heavenly, but I couldn't see the singer's face due to the crowd.
ದರ್ಶನ ಪಡೆದು, ಊಟ ಮಾಡಿ, ನಮಗೆ ಕಾಯ್ದಿರಿಸಿದ ಕೊಠಡಿಗೆ ಮರಳಿದೆವು. ಒಂದು ಮದುವೆ ಎಟೆಂಡ್ ಆಗಲು ಹೋಗಿದ್ದೆವು.

May 26, 2025

ಯಕೃತ್ತು / Liver Cirrhosis

 

ನನ್ನ ಭೈಯ್ಯ ಅಂದರೆ ಶ್ರೀಕಾಂತ್ ಅಣ್ಣನಿಗೆ liver  ಕಾಯಿಲೆ ತುಂಬಾ ತಡವಾಗಿ detect ಆಯ್ತು.. ಶ್ರಮ ಜೀವಿ, ಕತ್ತಲೆ ಮನೆ, ಎಣ್ಣೆ ಕಾಣದ ತಲೆ/ಕೂದಲು, ಹಳೆ ಮನೆಯ ಧೂಳು ಇವೆಲ್ಲರಿಂದ ಕಣ್ಣು ಕೆಂಪು. ಹಳ್ಳಿ ಜೀವನದಲ್ಲಿ ಇದೆಲ್ಲ ಮಾಮೂಲಿ ಅಂತ ನಮ್ಮ attention ಅವರಿಗೆ ಕಾಯಿಲೆ ಇರಬಹುದೆಂದು ಗ್ರಹಿಸಲು ಆಗಲೇ ಇಲ್ಲ. BP ಒಂದಿತ್ತು. ಮತ್ತು liver ಸಂಬಂಧಿ ಕಾಯಿಲೆ ಏನಿದ್ದರೂ ತಡವಾಗಿ ಗೋಚರವಾಗುತ್ತದೆ. liver cirrhosis ನಿಂದ ಸಾವನ್ನಪ್ಪಿದರು ಪಾಪ

ಆದರೆ ಶ್ರೀಕಾಂತ್ ಗೆ liver ತೊಂದರೆಯ ಕ್ಲಾಸಿಕ್  symptoms ಇದ್ದವು. ಗಿಣಿ ಗೆ ಹೇಳಿದ ಹಾಗೆ ಹೇಳಿದೆ. ಒಂದು ಸಲ liver, kidney ಚೆಕ್ ಅಪ್ ಮಾಡಿ ಸುವುದರಲ್ಲಿ ಏನಿದೆ ಅಂತ. ದುಡ್ಡು ಕೊಟ್ಟರೆ , ಮನೆಯಿಂದ ಹೊರ ಹೆಜ್ಜೆ ಹಾಕದೆ, ಮನೆಗೆ ಬಂದು ರಕ್ತ ತಪಾಸಣೆ ಮಾಡುವ ಸೌಕರ್ಯ ಕೂಡ ಇದೆ ನಮ್ಮ ಮನೆ ಬಳಿ.
ಒಂದು ನಾಲ್ಕು ತಿಂಗಳಿಂದ ಅಮ್ಮ, ತಮ್ಮ, ತಂಗಿ ಎಲ್ಲ ಫೋನ್ ಮಾಡಿದಾಗ ಇವರ ಆರೋಗ್ಯದ ಬಗ್ಗೆಯೇ ನನ್ನ complaint ಇರುತ್ತಿತ್ತು.
ಟ್ರಾವೆಲ್ ಮಾಡಿ ಬಂದ ಮೇಲೆ ಕಡಿಮೆಯಾಗದ ಕಾಲಿನ ಊತ,unexplained weight loss   ದೊಡ್ಡ ಹೊಟ್ಟೆ,  ಗುಣವಾಗದೆ ಇದ್ದ  ಕಜ್ಜಿ, ಬಿಳಚಿ ಕೊಂಡ ಮುಖ ಇವೆಲ್ಲ ಲಕ್ಷಣಗಳಿದ್ದವು಼.. ಕೊನೆಗೆ your health, your life ಅಂತ ಹೇಳಿ ಸುಮ್ಮನಾದೆ.
what prompted him to go the doctor  ನನಗೆ ಇನ್ನೂ ಗೊತ್ತಿಲ್ಲ. i dont even want to ask anymore. ಬಹುಷ್ಯ ಕಣ್ಣಿನ cataract operation ಗೆ ರಕ್ತ ಪರೀಕ್ಷೆ ಮಾಡಿಸಿದಾಗ sugar ಸಿಕ್ಕಾಪಟ್ಟೆ ಹೆಚ್ಚು ಕಡಿಮೆ ಇತ್ತು. ಕೆಲ parameters ಸರಿಯಿರಲಿಲ್ಲ. ಕೊನೆಗೆ light jaundice ಪತ್ತೆಯಾಯ್ತು. ಇನ್ನೂ ಹೆಚ್ಚಿನ ಪರೀಕ್ಷೆಗೆ ಒಡ್ಡಿದಾಗ liver cirrhosis ಪತ್ತೆಯಾಯ್ತು. 5 ನೆ may ಗೆ result ಬಂತು. ಕೆಲ ಇಂಜೆಕ್ಷನ್, ಔಷಧಿ ಆದ ಮೇಲೆ ಮೂರು ತಿಂಗಳ ನಂತರ ಪುನಃ ಪರೀಕ್ಷೆ ಮಾಡಿ liver ನಲ್ಲಿ ಸುಧಾರಣೆ ಇಲ್ಲದಿದ್ದಲ್ಲಿ ಕೊನೆಯ option liver transplant ಅಂದ್ರು ಡಾಕ್ಟರ್.
15ನೆ ತಾರಿಕು ಬೆಳಿಗ್ಗೆ weakness, dizziness ಅಂತ low BP ಅಂದುಕೊಂಡ್ವಿ. ಡಾ ಬಳಿ ಹೋಗುವಾ ಅಂದ್ರೆ ಬೇಡ ಅಂದ್ರು. ಒಂದು ORS ನೀರು ಕುಡಿದು ಮಲಗಿದ್ರು. ಮಧ್ಯಾಹ್ನ ಸ್ವಲ್ಪ ಊಟ ಮಾಡಿದ್ರು, ಸ್ವಲ್ಪ musk melon ತಿಂದ್ರು.  ಮಲಗಿದ್ರು. ನಾನು ಸಂಜೆ ನನ್ನ ಸುದರ್ಶನ ಕ್ರಿಯಾ ಯೋಗ ಮುಗಿಸಿ crossword ಆಡ್ತಾ ಇದ್ದೆ. ಅವರು ಒಂದು conference ಕಾಲ್ ಮುಗಿಸಿ ಸುಮ್ಮನೆ ಕುತಿದ್ರು. ಆಮೇಲೆ ನೀರಿನ ಗ್ಲಾಸ್ ಬಿದ್ದ ಸದ್ದು ಹಾಗೂ ವಿಚಿತ್ರವಾದ ಕೆಮ್ಮಿನ ಸದ್ದಿಗೆ ರೂಮ್ ಗೆ ಓಡಿದ್ರೆ ಅಲ್ಲೆಲ್ಲ ರಕ್ತ ವಾಂತಿ ಮಾಡಿದ್ದರು. ಅಕ್ಕ, ನಿಂಪಿ ಅಂತ ಕೂಗಿದೆ. ಇಬ್ಬರೂ ಓಡಿ ಬಂದ್ರು, ಅವರು ರಕ್ತ ವಾಂತಿ ಮಾಡ್ತಿರಬೇಕಾದ್ರೆ, ಅಕ್ಕ ಡಾಕ್ಟರ್, ನಿಹಾ ambulance ಗೆ ಫೋನ್ ಮಾಡಿದ್ರು. ನಾನು ಮಿತ್ರ ಸಾಲಿಮಠರಿಗೆ ಫೋನಾಯಿಸಿದೆ. ಇವರು toilet ಗೆ ಹೋಗಬೇಕು ಅಂದ್ರು. ಕರೆದು ಕೊಂಡು ಹೋಗಿ, ಆದಮೇಲೆ, ವಾಂತಿ ಮಾಡಿಕೊಂಡ ಬಟ್ಟೆ ಬದಲಾಯಿಸಿ, ಹೊರಬರಬೇಕಾದರೆ ಪ್ರಜ್ಞೆ ತಪ್ಪಿದರು. ಸಾಧ್ಯವಾದಷ್ಟು ಏಟಾಗದಂತೆ ಹಿಡಿದೆ ಆದರೆ ನನ್ನ ಬಲ ಸಾಕಾಗಲಿಲ್ಲ, ಅಷ್ಟರೊಳಗೆ ಸಾಲಿಮಠರ ಮಗ ನಾಗಭೂಷಣ್ ಬಂದ್ದು ಸಹಾಯ ಮಾಡಿದ. ಪುನಃ ಮುಕ್ಕಾಲು ಬಕೆಟ್ ವಾಂತಿ ಮಾಡಿದ್ರು. ambulance ನವರು ಬಂದ್ರೆ, stretcher ಅಳತೆ ಸರಿಯಿಲ್ಲದೆ, ಇವರನ್ನು ಕಂಪ್ಯೂಟರ್ ಬಳಿ ಬಳಸುವ ತಿರುಗು ಕುರ್ಚಿಯಲ್ಲಿ ಲಿಫ್ಟ್ ನಲ್ಲಿ ಕೆಳಗೆ ಕರೆದು ಕೊಂಡು, ಕೆಲವರ ಸಹಾಯದಿಂದ stretcher ಮೇಲಿರಿಸಿ ambulance ಏರಿಸಿದಾಯಿತು.  ಅಲ್ಲಿಂದ Aster RV emergency room . ಅಲ್ಲಿ ಒಬ್ಬರಿಗೆ ಮಾತ್ರ entry ಆದ್ದರಿಂದ, ಇವರ ವೈದ್ಯಕೀಯ ವಿಷಯಗಳನ್ನು ಅವಳೇ ನಿಭಾಯಿಸುತ್ತಿದ್ದರಿಂದ ಅಕ್ಕ ಅವರ ಜತೆ  ಹೋದಳು. ನಾನು admission formalities, ದುಡ್ಡು ಕಟ್ಟುವುದು, insurance ಮುಂತಾದ್ದರಲ್ಲಿ ಬ್ಯುಸಿ ಆದೆ. ಒಳಗೆ ಒಂದು ಸಲ ವಾಂತಿ ಮಾಡಿದ್ರು ಅಂತ ಅಕ್ಕ  ಹೇಳಿದ್ಲು. ಅಲ್ಲಿಂದ ICU ಕರೆದುಕೊಂಡು ಎರಡು ದಿನ ಇಟ್ರು. endoscopy ಮಾಡಿ ಒಡೆದು ಹೋದ ಗಂಟಲಿನ ರಕ್ತ ನಾಳಕ್ಕೆ banding ಮಾಡಿದ್ರು.
ರಾತ್ರಿ ಅಲ್ಲಿ ಯಾರನ್ನು ಇರಗೊಡಲಿಲ್ಲ. ಮನೆಗೆ ಬಂದು ರಣರಂಗವಾದ ಮನೆ ಕ್ಲೀನ್ ಮಾಡುವ ಕೆಲಸ. ರಕ್ತ ಸಿಕ್ತ ಬಟ್ಟೆಗಳನ್ನೆಲ್ಲ ಬಿಸಾಡಿದೆ.  the stench of clotted blood just would not go. it took two days for the blood to flush through toilet.
ಮೂರು ದಿನ ICU ಎರಡು ದಿನ ವಾರ್ಡ್...ಒಟ್ಟು ಖರ್ಚು 2 ಲಕ್ಷದ 8 ಸಾವಿರ. insurance ಮುಕ್ಕಾಲು ಪಾಲು ಖರ್ಚು ಕವರ್ ಮಾಡಿದೆ

We did what was necessary in the moment, Bur later in the night i got chills thinking of the things we had to go through. All of this could have been avoiided  .the weight of what lies ahead is daunting. I'm still grappling with anger –trauma, no room for forgiveness here. i wake up sometimes with the smell of hospital ,of stale blood. our sleep patterns have changed. i move along with him to which ever part of the home he is comfortable/ wants to sleep in
The path to wellness is long, but we're navigating it together. Malavika's handling the medical aspects, apart from her baking business,I'm focusing on cooking nourishing food, and I'm prioritizing my own health with sudarshana kriya yoga, walks, and self-care. (once in a while i do feel 'why should i look after myself,  only to take care of others). It was a great help that Niha was here. She met with an accident and hurt her neck and i advised her to come to bengaluru for a  thorough check up. I am relieved she is fine.

The liver's resilience gives us hope – it's a peculiar organ, capable of healing, and we're holding onto that..
ಈಗ ಮನೆಯಲ್ಲಿ  ಸ್ವಲ್ಪ ಸದ್ದು ಆದ್ರೂ ಸಾಕು ಎದೆ ಢವ ಢವ ಎನ್ನುತ್ತೆ

Please listen to your family members. Kindly listen to your body. Better be safe than sorry! Let this post serve as a warning to everybody 🙏🙏. Ultimately health is only thing that matters.



ಎಲ್ಲರೂ ಅದದ್ದು ಆಯ್ತ, ಮುಂದಿನದು ನೋಡು ಅಂತ  advice ಮಾಡ್ತಿದ್ದಾರೆ...ನಂಗೆ ಆಗೋದಿಲ್ಲ, ನನಗೆ ಅಷ್ಟು ಸಿಟ್ಟು ಬಂದಿದೆ.  it.is a gross disrespect towards me, towards my words. 😡
family members ,friends  , colleagues  ಎಲ್ಲರ moral support ಇದೆ. ಸಹಾಯ ಮಾಡಿದವರಿಗೆಲ್ಲ ಧನ್ಯವಾದಗಳು. ಆಸ್ಪತ್ರೆ ಸಿಬ್ಬಂದಿಗಳೆಲ್ಲ ತುಂಬಾ ಚೆನ್ನಾಗಿ ನೋಡಿಕೊಂಡರು.
take care please





view from the hospital. got a cute rainbow too 🙂
diet :  ದಿನಕ್ಕೆ 2 ಲೀಟರ್ ನೀರು, 3 egg white ನಾಲ್ಕು ಗ್ರಾಮ್ ಉಪ್ಪು. ನಾನು ಸೆಪ್ಪೆ ಅಡುಗೆ ಮಾಡ್ತೀನಿ. ಉಪ್ಪು ಅವರೇ ಹಾಕಿಕೊಳ್ಳುತ್ತಾರೆ. ನಾನು ಉಪ್ಪಿಲ್ಲದೆ ತಿನ್ನಲು ಆರಂಭಿಸಿದ್ದೇನೆ. ನನಗಿಷ್ಟವಾಗ್ತಿದೆ. one thing that works to my advantage he is never fussy about food. TOUCHWOOD.  ನಾವು ಮೂರು ಜನ ಜಂಕ್ ಫುಡ್ ತಿನ್ನುತ್ತೇವೆ, ಆದರೆ  i always cooked separate food for him.

May 14, 2025

Parenting!!! making memories

  


ಯಾವಾಗಲೋ ಒಂದು ದಿನ ಅನ್ನಿಸ್ತು..was i a good parent when my girls were growing up?  ಬೆಂಗಳೂರಿಗೆ ಬಂದಾಗ ನನಗೆ 32 ರ ವಯಸ್ಸು. ಶ್ರೀಕಾಂತ್ ಬ್ಯಾಂಕ್ ನ ನೌಕರಿ ಬಿಟ್ಟಿದ್ಫು ಹಲವರಿಗೆ ಇರುಸು ಮುರುಸಾಗಿತ್ತು. ನಾನಂತು ಮದುವೆಯಾಗಿದ್ದು ಇವರು ಬ್ಯಾಂಕ್ ನಲ್ಲಿದ್ದಾರೆ, LFC, transfer ಮುಂದೆ ಬಡ್ತಿ, ಬಂಗಲೆ , ಕಾರು ಅಂತ ಹಾಯಾಗಿ ಇರಬಹುದೆಂದು. frankly ಒಂದು ಮಾತು ಹೇಳ್ತೀನಿ, ನಾನು ಬೆಳೆಯುವಾಗ ಅಪ್ಪ ಬ್ಯಾಂಕ್ ನಲ್ಲಿದ್ದರೂ , ಅಪ್ಪನ ಹೃದಯ ಸಂಬಂಧಿ ಕಾಯಿಲೆ, shares/stock ನಲ್ಲಿ ಹಣ ಹೂಡುವುದೆಂದು..ನಮ್ಮಲ್ಲಿ ಯಾವಾಗಲೂ ಹಣದ ತಾಪತ್ರಯ. ನನ್ನ ಮಾತು ಕಡಿಮೆ, ಆದರೂ ಅಮ್ಮನಿಗೆ ಒಂದೇ  ಮಾತು ಅಂದಿದ್ದೆ...ಮದುವೆ ಮಾಡುವುದೇ ಆದರೆ ನನಗೆ ಶ್ರೀಮಂತ ಮನೆತನಕ್ಕೆ ಕೊಡಬೇಕೆಂದು...

ಶ್ರೀಕಾಂತ್ ಬ್ಯಾಂಕ್ ಬಿಡುತ್ತೇನೆ ಎಂದಾಗ ಪಿಚ್ಛೆನಿಸಿದ್ದು ಹೌದು. ಮದುವೆ ನಿಶ್ಚಿತಾರ್ಥದ ಮುಂಚೆ 'ನಾನು ಬ್ಯಾಂಕ್ ನಲ್ಲಿ 5 ವರ್ಷ ಮಾತ್ರ ಮುಂದುವರೆಯುವುದು, ಆಮೇಲೆ ತೋಟ ನೋಡುಕೊಳ್ಳುತ್ತೇನೆ ಸೆಗಣಿ ಎಲ್ಲ ಬಾಚಲಿಕ್ಕೆ ರೇಡಿಯಿದ್ರೆ ಮದುವೆ ಅಂತ....ಆದರೆ 18ವರ್ಷ ಬ್ಯಾಂಕ್ ನಲ್ಲಿ ಸೇವೆ ಸಲ್ಲಿಸಿ ..ಬ್ಯಾಂಕಿಂಗ್ ಅಲ್ಲಿ interest ಇಲ್ಲ ಅಂದಾಗ , ಇರಲಿ whatever he wants ಅಂತ ಒಪಿಗೆ ಇತ್ತಿದ್ದೆ. ಮಾತ್ರವಲ್ಲ  ಬೆಂಗಳೂರಿಗೆ ಬಂದ ಸ್ವಲ್ಪ ಸಮಯಕ್ಕೆ ನಮಗೆ ಮಹಿಳಾ ಸ್ವ ಉದ್ಯೋಗ ತರಬೇತಿ ಕೇಂದ್ರ ನಡೆಸುವ 5 ವರ್ಷದ ಪ್ರೊಜೆಕ್ಟ್ ಸಿಕ್ಕಿ ಬಿಟ್ಟಿತು. ನಾನು ಶೋಭಾ ಸಾಲಿಮಠ, ಜಿ ಎಂ ದೇಶಪಾಂಡೆ ಅವರ ನೇತೃತ್ವದಲ್ಲಿ ಅದನ್ನು ನಡೆಸುವುದು ಎಂದಾಯಿತು. ಮಕ್ಕಳು ಚಿಕ್ಕವರು.. ನಾನು ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು, ಬೆಳಗಿನ ತಿಂಡಿ, ಮಕ್ಕಳ, ನನ್ನ ಊಟದ ಡಬ್ಬಿ ಎಲ್ಲ ರೆಡಿ ಮಾಡಿ, ಮನೆ ಚೊಕ್ಕ ಗಳಿಸಿ, ಎರಡು ಬಸ್ ಹಿಡಿದು ಜಯನಗರ 4 ನೆಬ್ಲಾಕ್ ತಲುಪಬೇಕಿತ್ತು. ಮಕ್ಕಳ ಜತೆ ಕ್ವಾಲಿಟಿ time spend ಮಾಡಿದ್ದು ನೆನಪಿಲ್ಲ. ನನ್ನದೇ ಲೋಕದಲ್ಲಿ ಇರುತ್ತಿದ್ದೆ. ವಾರ್ಯಅಂತದಲ್ಲಿ cleaning exhibition, ನಾಟಕ ಅಂತ ಬಿಸಿ ಇರ್ತೀದ್ವಿ. ಆಮೇಲೆ ಒಂದಾದ ಮೇಲೆ ಒಂದು project ಗಳು ಬರುತ್ತಾ.. ಪುರುಸೊತ್ತಿಲ್ಲದ ಜೀವನ.
ಇತ್ತೀಚಿಗೆ ಒಂದು ದಿನ ನಾನು, ಅಕ್ಕ ಕೇಕ್ ಗೆ ಬೇಕಾದ ಸಾಮಾನು ತರಬೇಕಾದರೆ  'amma, do you know? you are the first person to 'work from home' ಅರೆ ಹೌದಲ್ವಾ? ಬೆಂಗಳೂರಿಗೆ ಬರುವ ಮುಂಚೆ ನಾವು ಉಡುಪಿಯಲ್ಲಿದ್ವಿ. 1998 . ಅಲ್ಲಿ ನಾನು ವನಿತಾ ಜೈನ್ / pai, ನಡೆಸುವ 'southnexus.com' ನಲ್ಲಿ ಕೆಲಸ ಮಾಡುತ್ತಿದೆ. ಅನುವಾದದ ಕೆಲಸ. ನನಗೆ ಗೊತ್ತಿರುವ ಹಾಗೆ ಅದು ಮೊದಲ ವೆಬ್ ಪೋರ್ಟಲ್. ಅನುವಾದ ಮಾಡಬೇಕಾದ ಪುಸ್ತಕಗಳನ್ನು ತರುವುದು,  ಅನುವಾದ ಮಾಡಿದ ಬರಹ floppy disk ನಲ್ಲಿ ಹಾಕಿ ಅದನ್ನು ತೆಗೆದುಕೊಂಡು ಆಫಿಸ್ ಗೆ ಹೋಗುವುದು ಮತ್ತು ಸಂಬಳದ ಚೆಕ್ ತರಲು ಮಾತ್ರ ನಾನು ಮಣಿಪಾಲ್ ಗೆ ಹೋಗುವುದಾಗಿತ್ತು. ಅದರಲ್ಲೂ ಶ್ರೀಕಾಂತ್ ಆಫಿಸ್ ಮಣಿಪಾಲದಲ್ಲಿ, ಅದರ ಹಿಂದಿನ ರಸ್ತೆಯಲ್ಲಿ ಸೌತ್ ನೆಕ್ಸಸ್ ಆಫಿಸ್. ಹೋಗುವಾಗ  ಶ್ರೀಕಾಂತ್ ಜತೆ ಹೋದರೆ, ನಾನು ಬಸ್ ನಲ್ಲಿ ಮನೆಗೆ ವಾಪಸ್.
'ಅಮ್ಮ, ಸಂಬಳ ಬಂದ ದಿನ ನೀನು ನಮಗೋಸ್ಕರ ಸ್ಟೇಷನರಿ ಅಂಗಡಿಯಿಂದ ಹೊಸದಾಗಿ ಬಂದಿರುವ ಪೆನ್ಸಿಲ್, ಇರೆಸರ್ ಅಥವಾ ಏನಾದರೊಂದು...ಮತ್ತು ಬೇಕರಿಯಿಂದ ರೋಲ್ ಎಲ್ಲ ತರುತ್ತಿದ್ದಿ. ನನಗೆ ಖುಶಿಯಾಗ್ತಿತ್ತು. ಬೆಂಗಳೂರಿಗೆ ಬಂದ ಮೇಲೆ ಸಂಬಳ ಸಿಕ್ಕ ದಿನ ನೀನು ಆಪ್ಪಲ್ ಕೇಕ್, ಜಯನಗರ 4 th ಬ್ಲಾಕ್ ನಿಂದ ಸಮೋಸ, ಮಸಾಲಾ ಪುರಿ ತರುತ್ತಿದ್ದಿ...ಸಂಬಳ ದುಡ್ಡು ನಮಗೆ ಖರ್ಚು ಮಾಡಲು ಇಡುತ್ತಿದ್ದೆ. ಮತ್ತು ರಜೆಯಿದ್ದಾಗ  ನಾವು ನಿನ್ನ ಕಾಟನ್ ಸೀರೆ ಟೆಂಟ್ ಮಾಡಿಕೊಂಡು ಬೇಕರಿಯಿಂದ ಚಿಪ್ಸ್, ಕೇಕ್ ತಂದು, ಪಿಕ್ ನಿಕ್ ಮಾಡ್ತಿದ್ವಿ...ಅಂದಾಗ ಅವರಿಗೂ ಕೆಲವಾದರೂ ಒಳ್ಳೆಯ ನೆನಪುಗಳನ್ನು ಉಳಿಸಿದ್ದೇನೆ ಅಂತ ಸಮಾಧಾನವಾಯಿತು. ಯಾಕೆಂದರೆ  i was very strict with them...ಆಮೇಲಾಮೇಲೆ ನಾನು ಅವರ ಫ್ರೆಂಡ್ ತರಹ ಆದೆ...ಈಗ ಅವರು ನನ್ನನ್ನು ಚಿಕ್ಕ  ಮಗು ಎಂದು ಪರಿಗಣಿಸಿ ಬೈ ತಾರೆ 😀😀❤️
belated  mother's Day

ನಿಹಾರಿಕಾಳ ಕುತ್ತಿಗೆಗೆ ಸ್ವಲ್ಪ ಏಟಾಗಿದೆ. ಡಾಕ್ಟರ್ ಗೆ ತೋರಿಸಲು ಇಲ್ಲಿಗೆ ಬಂದಿದ್ದಾಳೆ. ಹಾಗೆ ಒಂದು ಮದರ್ಸ್  ಡೇ ಲೆಕ್ಕದಲ್ಲಿ ಫೋಟೋ. ,🙂❤️🌺🌿🍰

May 11, 2025

ಹಳೆ fb ಪೋಸ್ಟ್

(ಬ್ಲಾಗ್ ನಲ್ಲಿ ಹಾಕಿರಲಿಲ್ಲ. ಈಗ ಏನೋ ಹುಡುಕುತ್ತಿದ್ದಾಗ  ಸಿಕ್ಕಿತು) Happy Mother's Day ಎಲ್ಲರಿಗೂ

ಸುಮಾರು ವರ್ಷಗಳೇ ಕಳೆದಿವೆ. ಆದರೂ ಅದನ್ನು ನೆನೆಸಿದರೆ ಈಗಲೂ ಮೈ ಮೇಲೆ ಮುಳ್ಳು ಏಳುತ್ತೆ. ನಿಹಾ ಳ ಮೊದಲನೇ ಹುಟ್ಟಿದ ಹಬ್ಬದ ಆಚರಣೆಗೆ ಅಮ್ಮ, ಅಪ್ಪ, ತಂಗಿ ಮತ್ತು ಒಬ್ಬ ತಮ್ಮ ಮುಂಬೈನಿಂದ ಬೆಳ್ತಂಗಡಿಗೆ ಬಂದಿದ್ದರು. ಅಪ್ಪನ ಹಾಗೂ ಶ್ರೀಕಾಂತ ರ LFC ಪೆಂಡಿಂಗ್ ಇತ್ತು. ಅದಕ್ಕೆ ಎಲ್ಲರೂ ಸೇರಿ ತಿರುಪತಿ-ಮಂತ್ರಾಲಯಕ್ಕೆ ಹೋಗುವುದೆಂದು ಯೋಜನೆ ಹಾಕಿದೆವು. ತಿರುಪತಿಯಲ್ಲಿ ಈಗಿನ ಹಾಗೆ ರಶ್ ಇಲ್ಲದಿದ್ದರೂ ಸಾಕಷ್ಟು ಜನಜಂಗುಳಿ ಇತ್ತು. ನಾನು ನಿಹಾನ ಎತ್ತಿಕೊಂಡಿದ್ದೆ. ಮಾಲವಿಕ ನನ್ನ ಅಪ್ಪನ ಕೈ ಹಿಡಿದುಕೊಂಡಿದ್ದಳು. ಸ್ವಲ್ಪ ಸಮಯ ಬಿಟ್ಟು ನೋಡುತ್ತೇನೆ ಅಪ್ಪನ ಬಳಿ ಮಾಲವಿಕ ಇಲ್ಲ. ನಾನು ,'ಅಪ್ಪ, ಮಾಲವಿಕ ಎಲ್ಲಿ? ಅಂದೆ,,ಅರೇ ನಿನ್ನ ಬಳಿ ಇಲ್ಲವಾ ಅಂತ ಕೇಳಿದ್ರು. ಮೊದಲ ಸಲ ಆ ದಿನ  ನಾನು, ಅಪ್ಪನ, ಶ್ರೀಕಾಂತ ಮುಖದ ಮೇಲೆ panic ನೋಡಿದ್ದು. ಅಪ್ಪ, ಶ್ರೀಕಾಂತ, ತಮ್ಮ ಬೇರೆ ಬೇರೆ ದಿಕ್ಕಿಗೆ ಓಡಿದ್ರು. ನನ್ನ ಅಮ್ಮ ಅಂತು 'ದೇವರ ಮೇಲೆ ನಂಬಿಕೆ ಇರದೇ ದೇವಸ್ಥಾನಕ್ಕೆ ಬಂದರೆ ಹೀಗೆ ಆಗೋದು' ಅಂತೆಲ್ಲ ಶುರು ಮಾಡಿದ್ರು. ನಾನು ನನ್ನ ತಲೆ ಬೇಗ ಓಡಿಸಿದೆ . ಮಾಲವಿಕ ಆ ದಿನ ಕೆಂಪು ಪ್ರೋಕ್  FROCK ಹಾಕಿಕೊಂಡಿದ್ದಳು. ನಾನು ಒಂದು ಸಲ ಕೆಳಕ್ಕೆ ಕೂತೆ..ಮತ್ತೆ ಜನರ ಕಾಲುಗಳ ಎಡೆಯಿಂದ ನೋಡಿದೆ. ಅಷ್ಟು ದೂರ ondu  ಕೆಂಪು ಅಂಗಿ ತೊಟ್ಟ ಪುಟ್ಟ ಆಕೃತಿ ಗೋಚರಿಸಿತು. ಸ್ನೈಪರ್ Sniper ತರಹ ಮುನ್ನುಗ್ಗಿ  ಎಲ್ಲರನ್ನೂ ದೂಡಿ ಓಡಿದೆ. ಅವಳು ಮಾಲವಿಕ ಳೆ ಆಗಿದ್ದಳು. ಮಾಲವಿಕ ಅಂತ ಗಟ್ಟಿಯಾಗಿ ಕೂಗಿಕೊಂಡು, ಬಗ್ಗಿ ಅವಳನ್ನು ತಬ್ಬಿಕೊಂಡೆ. ಅವಳ ಮುದ್ದು ಮುದ್ದು ಭಾಷೆಯಲ್ಲಿ 'ಯಾಕಮ್ಮ ಏನಾಯ್ತು' ಅಂತ ತನ್ನ ಪುಟ್ಟ ಕೈಗಳನ್ನು ನನ್ನ ಕುತ್ತಿಗೆ ಸುತ್ತ ಹಾಕಿ ತಬ್ಬಿಕೊಂಡಳು...ಆಗ ಅವಳಿಗೆ ಎರಡು ವರ್ಷ..ನಾಲ್ಕು ತಿಂಗಳು 
'ಯಾಕೆ ನೀನು ಆಜೋಬಾ ನ ಕೈ ಬಿಟ್ಟು ಒಬ್ಬಳೆ ಹೋಗಿದ್ದು'?
'ಕೈ ಏನೋ ಬಿಟ್ಟಿದ್ದೆ, ಆದರೆ ಅಗೋ ನೋಡು ಅಜೋಬಾ ನ ಹಿಂದೆನೆ ಹೋಗುತ್ತಿದ್ದೆ' ಅರೇ ನೋಡಿದ್ರೆ ಹೌದು ನನ್ನ ತಂದೆ ತರಹ ಶರ್ಟ್ ಹಾಕ್ಕೊಂಡಿರುವ ಒಬ್ಬರು ಮುಂದೆ ನಡೀತಾ ಇದ್ರು..'
ಅಬ್ಬಾ ಎಷ್ಟು ಹೆದರಿಕೊಂಡಿದ್ದೆ ಆದಿನ...ಆ ಮೇಲೆ ತಿರುಪತಿ-ಮಂತ್ರಾಲಯ ಎಲ್ಲ ಕಡೆ ನಾನು ಮಾಲು-ನಿಹಾ ರ ಕೈ ಗಟ್ಟಿ ಹಿಡಿದುಕೊಂಡೆ ಇದ್ದೆ.

:-)
malathi S

May 5, 2025

ಆಮ್(ರಸ್)ಪೂರಿ

 ಒಳ್ಳೆ ಗಣಿತದ equation ತರಹ ಬರೆದಿದ್ದೀನಿ ಅಲ್ವಾ? 

ಏನಿಲ್ಲ ರಸಪೂರಿ ಮಾವಿನ ಹಣ್ಣಿನಿಂದ ಮಾಡಿದ ಆಮ್ ರಸ್. ಮಾವಿನ ಹಣ್ಣಿನ ತಿರುಳು, ಸಕ್ಕರೆ ಮತ್ತು ಏಲಕ್ಕಿಯನ್ನು ಮಿಕ್ಸಿ ಮಾಡೋದು. ಅಷ್ಟೇ. ಪೂರಿಗೆ ಒಳ್ಳೆಯ ಸಾಥ್.


ಇನ್ನೊಂದು ಅಮೃಖಂಡ್..ಅಂದ್ರೆ ಮಾವಿನ ಹಣ್ಣಿನ ಶ್ರೀಖಂಡ. ಮೊಸರನ್ನು ಬಟ್ಟೆಯಲ್ಲಿ ಕಟ್ಟಿಡಿ. ನೀರೆಲ್ಲ ಬಸಿದ ಮೇಲೆ,ವ ಸಕ್ಕರೆ, ಏಲಕ್ಕಿ, ಮಾವಿನ ತಿರುಳು ಬೆರೆಸಿ ಮಿಕ್ಸಿಯಲ್ಲಿ ಹಾಕಿ, ನಸ್ನು ಸ್ವಲ್ಪ ಗೇರು ಬೀಜ ಕೂಡ ಸೇರಿಸುತ್ತೇನೆ.