March 30, 2025

ಯುಗಾದಿ ಹಬ್ಬ - ಥಟ್ ಅಂತ ಹೇಳಿ

 ಮೊನ್ನೆ ಭಾನುವಾರ ನನ್ನ ಮುದ್ದು ಸೊಸೆಯನ್ನು ಕರೆದುಕೊಂಡು 'ರಾಗಿ ಕಣ ಸಂತೆ' ಗೆ ಹೋಗಿದ್ದೆವು. ಏನಾಶ್ಚರ್ಯ ಅಲ್ಲಿ  ಡಾ. ನಾ. ಸೋಮೇಶ್ವರ ಅವರು 'ಥಟ್ ಅಂತ ಹೇಳಿ' ಕಾರ್ಯಕ್ರಮ ನಡೆಸ್ತಾ ಇದ್ರು. ಸ್ವಲ್ಪ ಬೇಗ ಹೋಗಿದ್ದಿದ್ರೆ ನಾನೂ ಭಾಗವಹಿಸುತ್ತಿದ್ದೆ. ಥಟ್ ಅಂತ ಹೇಳಿ ಸುಮಾರು 25ವರ್ಷಗಳ ಹಿಂದೆ ನೋಡುತ್ತಿದ್ದೆ. ಆಮೇಲೆ ಒಂದು 12 ವರ್ಷ ನಮ್ಮಲ್ಲಿ ಟಿ ವಿ ಇರಲಿಲ್ಲ. ಈಗ ನಾನು you tube ನಲ್ಲಿ ನೋಡ್ತೇನೆ. ಒಂಚೂರು ಬದಲಾವಣೆ ಯಾಗಿಲ್ಲ. ಒಂದೆರಡು ಕಂತುಗಳಲ್ಲಿ ಬಜರ್ ಇರಲಿಲ್ಲ..ನನಗೆ ಕಿರಿಕಿರಿ ಅನ್ನಿಸ್ತು. ಪ್ರಶ್ನೆ ಗೆ ಆಯ್ಕೆಗಳು ಬರುವಾಗಿನ ಸೌಂಡ್ ತುಂಬಾ ಕಿರಿ ಕಿರಿ...ಆದರೂ ಜ್ಞಾನದಾಯಕ ಕಾರ್ಯಕ್ರಮ. ಮಗಳು ನಾನು ಸರಿಯಾದ ಉತ್ತರಗಳನ್ನು ನೀಡುವುದು ಕಂಡರೆ 'ಅಮ್ಮ ನೀನು ಭಾಗವಹಿಸಮ್ಮ' ಎನ್ನುತ್ತಾಳೆ. ನಾನು' ಹೋಗೆ, ಒಂದೈದು ಪುಸ್ತಕ ಸಿಗಲಿಲ್ಲ ಅಂದರೆ ನನಗೆ ನಾಚಿಕೆ, ಅಷ್ಟೇ ಅಲ್ಲ ನನಗೆ ಪದ್ಮ ಪುರಸ್ಕೃತರು, grammar ಪ್ರಶ್ನೆ ಬಂದರೆ zero ಅಂಕ ಬರುತ್ತೆ ' ಅನ್ನುವ ನಮ್ಮ ಯಾವತ್ತಿನ dialogue. ಅಕ್ಕ ಆ ದಿನ weaving ಕಲಿಯುತ್ತಿದ್ದಾಗಿನ ದೃಶ್ಯ ಕಾರ್ಯಕ್ರಮದಲ್ಲಿ ಬಂದಿದೆ. ಅಷ್ಟಕ್ಕೇ ನಾನು ಫುಲ್  ಖುಷ್ 😀

ಥಟ್ ಅಂತ ಹೇಳಿ ಯುಗಾದಿ special



ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.  ಒಳ್ಳೆಯದಾಗಲಿ ಎಲ್ಲರಿಗೂ ❤️🙏

ಈ ಸಲದ ವಿಶೇಷ ಅಂದರೆ ತೋರಣಕ್ಕೆ ಮಾವಿನ ಎಲೆ, ಕೊಟ್ಟೆ ಕಡುಬಿಗೆ ಹಲಸಿನ ಎಲೆ, ಚಿತ್ರಾನ್ನಕ್ಕೆ ಮಾವಿನಕಾಯಿ, ತೊಂಡೆಕಾಯಿ + ಎಳೆ ಗೇರುಬೀಜದ ಪಲ್ಯಕ್ಕೆ ಗೇರುಬೀಜ ನಮ್ಮ ತೋಟದಿಂದ ನಾವೇ ಖುದ್ದಾಗಿ ಕೊಯ್ದು ತಂದಿದ್ದು. ನಿಹಾ ಕೂಡ ಬಂದಿದ್ದಾಳೆ. ಗಮ್ಮತ್ತಾಯಿತು ಹಬ್ಬ ಮಸ್ತು, ನಗು, ಹುಸಿ ಜಗಳದೊಂದಿಗೆ...









ನಮ್ಮಲ್ಲಿ ಯುಗಾದಿಗೆ ತೊಂಡೆಕಾಯಿ ಎಳೆಗೇರುಬೀಜದ ಪಲ್ಯ, ಮತ್ತು ಮಡ್ಗಣೆ (ಕಡ್ಲೆ ಬೇಳೆ ಪಾಯಸ) ಕಡ್ಡಾಯ. ಈ ಸಲ ಬೆಲ್ಲ, ರಾಗಿ ಕಣ ದ ಸಂತೆಯಲ್ಲಿ ಜೈವಿಕ ಕ ಸತ್ವ ದಿಂದ ಕೊಂಡಿದ್ದು. ತುಂಬಾ ರುಚಿಯಾಗಿದೆ. ಇವರು ಸಾವಯವ ಕಿರುಧಾನ್ಯ ದ ಉತ್ಪನ್ನಗಳನ್ನು ಮಾರುತ್ತಾರೆ. 




March 29, 2025

ಮೆಂತ್ಯದ ಗಂಜಿ

 ಮೊನ್ನೆ ತೀರ್ಥಹಳ್ಳಿಗೆ  ಹೋಗಿ  ಬಂದೆ ಅಂತ ಹೇಳಿ ದ್ದೇನಲ್ಲಾ? ಏನು ಸೆಖೆ. ತುಂಗಾ ನದಿ almost ಬತ್ತಿದೆ. ನೋಡಿ ಬೇಜಾರಾಯಿತು. ನಾನು ಮದುವೆಯಾಗಿ ತೀರ್ಥಹಳ್ಳಿಗೆ ಸೇರಿದ್ದು 38 ವರ್ಷಗಳಾದವು. ಆಗ ಹೇಗಿತ್ತು , ಒಳ್ಳೆ ಹಿಲ್ station ತರಾ. ಈಗ ಬೆಂಗಳೂರೇ ವಾಸಿ. ನಾಲ್ಕು ಮಳೆ ಹನಿ ಬಿದ್ದು ಬೆಳಿಗ್ಗೆ ಸಂಜೆ ಸ್ವಲ್ಪ ತಣ್ಣಗಿದೆ ವಾತಾವರಣ.

ಈ ಮೆಂತ್ಯದ ಗಂಜಿ recipe ಅಕ್ಕನಿಗೆ instagram ನಲ್ಲಿ ಸಿಕ್ಕಿದ್ದು. ಹೊಟ್ಟೆಗೆ ತುಂಬಾ ಆರಾಮ್ ಎನ್ನಿಸುತ್ತೆ ಇದನ್ನು ಬೆಳಗ್ಗಿನ ಉಪಹಾರಕ್ಕಾಗಿ ಮಾಡಿಡ್ರೆ.

ರಾತ್ರಿ ಅರ್ಧ table spoon ಮೆಂತೆ ಕಾಳು ಗಳನ್ನು ನೀರಲ್ಲಿ ನೆನೆಸಿಡಿ.  ಮುಂಜಾನೆ ಅಕ್ಕಿ ಜತೆಗೆ ಚೆನ್ನಾಗಿ ತೊಳೆದು, ನೀರು ಹಾಕಿ ಮೆತ್ತಗೆ ಆಗುವಂತೆ ಬೇಯಿಸಿ.  ತಾಜಾ ಕಾಯಿ, ಎರಡು ಹಸಿ ಮೆಣಸು, ಅರ್ಧ ಟಿ ಸ್ಪೂನ್ ಅರಿಸಿನ ಪುಡಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಇದನ್ನು ಬೇಯಿಸಿದ ಅನ್ನಕ್ಕೆ ಬೆರೆಸಿ. ಮೇಲೆ ತುಪ್ಪ ಹಾಕಿ ಬಿಸಿ ಬಿಸಿ ತಿನ್ನಿ. ಅದಕ್ಕೆ ನಂಚಿಕೊಳ್ಳಲಿಕ್ಕೆ ಜೀರಿಗೆ ಮಿಡಿ ಉಪ್ಪಿನಕಾಯಿ. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ 😀❤️👍🙏.

ನನ್ನ ಹಾಡು ಕೇಳುವ ಸೌಭಾಗ್ಯ ನಿಮಗೆ. ನಾನು ಅಡಿಗೆ ಮನೆಯಲ್ಲಿ ಹಾಡ್ತಾ ಅಡಿಗೆ ಮಾಡೋದು. ಮೊನ್ನೆ ಕೆಳಿಸಿಕೊಂಡ ಶ್ರೀಕಾಂತ್..'ಯಾಕೆ ಹಾಡಲ್ಲ ನೀನು ಚೆನ್ನಾಗಿದೆ ನಿನ್ನ ದನಿ' ಅಂದ್ರು...ಹೌದಾ? ನೀವು ಹೇಳಿ ನನಗೆ....ಹಾಡಿಗೂ, ತಿಂಡಿಗೂ  ಎನೂ ಸಂಬಂಧ ಇಲ್ಲ 😀


March 26, 2025

A quick trip to teerthahalli

 


ನನ್ನ ಮುದ್ದು ಸೊಸೆಗೆ ತೀರ್ಥಹಳ್ಳಿಗೆ drop ಮಾಡಿ, ತೋಟಕ್ಕೆ ಹೋಗಿ ಅಲ್ಲಿಂದ ಗೇರು ಬೀಜ, ಹಣ್ಣು, ಮಾವಿನ ಎಲೆ ಮುಂತಾದವುಗಳನ್ನು ತಂದು ಯುಗಾದಿಗಾಗಿ ಕಾಯುತ್ತಿದ್ದೇವೆ. ಎಳೆ ಗೇರು ಬೀಜದ ಪಲ್ಯವನ್ನು ಆಸ್ವಾದಿಸಲು ಕಾಯುತ್ತಿದ್ದೇವೆ 😀😀





















March 21, 2025

ಹೊಂಗೆ ಮರದ ಬುಡದಲ್ಲಿ



Pongamia flowers are a sight to behold! The trees stand tall, adorned with fresh leaves and vibrant blooms that attract a delightful array of birds, bees, wasps, butterflies, and other charming insects. 


The pavement beneath is transformed into a colorful carpet, adding to the tree's allure. I'm utterly enamored with these trees and our beautiful Bengaluru!




March 15, 2025

Holi 2025

 ಈ ವರ್ಷ ನಮ್ಮ ಬಿಲ್ಡಿಂಗ್ ನಲ್ಲಿ ಹೋಲಿಕಾದಹನಕ್ಕೆ ಅನುಮತಿ ಕೊಟ್ರು. ಉತ್ತರ ಭಾರತದ ಕಡೆಯವರು ಹೋಲಿ ಕಾಮದಹನಕ್ಕೆ ಎಲ್ಲಾ ರೆಡಿ ಮಾಡಿದ್ರು. ನಾವು ಹಾಜರಿ ಹಾಕಿ, ಬೆಂಕಿಯ ಸುತ್ತು ಹೊಡೆದು, ಸಿಹಿ ತಿಂದು ಬಂದೆವು. ಪೂರ್ಣ ಚಂದಿರ ನಿಂದ ಹಾಗೂ ಕುಳಿರ್ಗಾಳಿಯಿಂದ ಕೂಡಿದ ವಾತಾವರಣ ಚೆನ್ನಾಗಿತ್ತು.

ಯು ಎಸ್ ನಿಂದ ತಂಗಿ ಅವರ ಗ್ರಹಣದ ಕೆಂಪು ಚಂದ್ರನ red moon ಚಿತ್ರ ಕಳುಹಿಸಿದಳು. ಅಕ್ಕ ತಂಡಯ್ ಕೇಕ್ ಮಾಡುವಲ್ಲಿ ಬಿಸಿ ಇದ್ದಳು

ಕೆಲವು ಚಿತ್ರಗಳು 👇👇










ನಮ್ಮ ಅಪಾರ್ಟ್ಮೆಮೆಂಟ್ಟ್ನ್ ನಿಂದ ಕಂಡ blood moon. PC : Nimmy



March 13, 2025

cutest video ever

 One of the sweetest cutest videos i have watched. It is so endearing i will share it here so that i can look at this again and again and feel good ,❤️❤️🌿🍁🌺 felt emotional, it warmed the cockles of my heart. forwarded it so many people...i rarely do so 🙂

wishing the couple the very best from the bottom of my heart. 

Tejaswi surya and shivashri

March 11, 2025

The art & craft of ತಟಿಂಗ್ ಜೋಳದ ರೊಟ್ಟಿ

 


ಜೋಳದಲ್ಲಿ gluten ಇಲ್ಲ. ರೊಟ್ಟಿ ಮಾಡುವಲ್ಲಿ ತಟ್ಟುವುದೇ trick ಉ...ಅದೇನೂ ರಾಕೆಟ್ science ಅಲ್ಲ. practice makes perfect. ನನ್ನ motto ಏನಂದ್ರೆ, ಏನಾದ್ರು ತಿನಿಸು ಇಷ್ಟ ಆದ್ರೆ ಅದನ್ನು ಮಾಡಲು ಕಲಿಯಬೇಕು. ನನಗೆ ಜೋಳದ ರೊಟ್ಟಿ ಇಷ್ಟ...ಹಾಗಾಗಿ ಮಾಡಲು ಕಲಿತೆ. ಮುಂಬೈ ನ ಭಾಕ್ರಿಯಷ್ಟೇ ನನಗೆ ತೀರ್ಥಹಳ್ಳಿಯ ಅಕ್ಕಿ ರೊಟ್ಟಿ ಕೂಡ ಇಷ್ಟ, ಹಾಗೆಯೇ ಉತ್ತರಭಾರತದ ಮಕ್ಕಿ ರೋಟಿ ಕೂಡ ಇಷ್ಟ....ಇವೆಲ್ಲವನ್ನೂ ಮನೆಯಲ್ಲಿ ಮಾಡಿ ನಾವು ಎಂಜೋಯಿಸುತ್ತೇವೆ.

ಮೊದಲು ಕಲಿಯುವಾಗ ನಾನು newspaper ಮೇಲೆ ತಟ್ಟುತ್ತಿದ್ದೆ...ಆ ಮೇಲೆ ಅದರ prin


ting ಇಂಕ್ ಒಳ್ಳೆಯದಲ್ಲವೆಂದು ಮನವರಿಕೆಯಾಗಿ brown ಪೇಪರ್ ಮೇಲೆ ತಟ್ಟುತ್ತಿದ್ದೆ. ಈಗ ನಾನು ಹಾಗೆ ತಟ್ಟುತ್ತೇನೆ.

ನಿನ್ನೆ ಜೋಳದ ರೊಟ್ಟಿ ಮತ್ತೆಲ್ಲ ಸೈಡ್ಸ್ ಮಾಡಿದೆ. ಝುಣಕಾ ಒಂದು ಅಕ್ಕ ಮಾಡಿದಳು.

ಜೋಳ, ರಾಗಿ ಅಥವಾ ಕಿರು ಧಾನ್ಯ ಉಪಯೋಗಿಸಿದರೆ ತುಂಬಾ ನೀರು ಕುಡಿಬೇಕು, ಅಥವಾ ಮೊಸರು/ಮಜ್ಜಿಗೆ ಕಡ್ಡಾಯವಾಗಿ ಸೇವಿಸಲೇಬೇಕು. ಹೀಟ್ ಆಗುತ್ತೆ. ಇದು ನಾನೇ ಅನುಭವಿಸಿ ಶೇರ್ ಮಾಡುತ್ತಿದ್ದೇನೆ.

❤️❤️🙂👍🙏

March 5, 2025

ಹೊಸ game / ಪದಬಂಧ

 ತುಂಬಾ addictive ಆಗಿದೆ ಈ ಪದಬಂಧದ ಆಟ. ಈಗ ರಾತ್ರಿ ನಿದ್ದೆ ಬರದೆ ಇದ್ದರೆ,ಸಿಗ್ನಲ್ ನಲ್ಲಿ ಬಸ್/ಆಟೋ ನಿಂತಾಗ, ಮೊನ್ನೆ ವಿಧಾನ ಸೌಧದಲ್ಲಿ ಆಯೋಜಿಸಲಾದ ಪುಸ್ತಕ ಮೇಳಕ್ಕೆ, ಒಳ ಹೋಗಬೇಕಾದರೆ ಉದ್ದ ಸಾಲಿನಲ್ಲಿ ನಿಲ್ಲಬೇಕಾಯಿತು...ಆಗಲೂ ಇದೆ ಆಟ  ಆದಿದ್ದು 😁. ಎಷ್ಟು ಅಡ್ಡಿಕ್ಷನ್ ಆಗಿದೆ ಅಂದ್ರೆ ಮೊಬೈಲ್ ಚಾರ್ಜ್ ಆಗುವಾಗ ಮಾತ್ರ ಪುಸ್ತಕ ಓದುವುದು. 🙂. ರಾತ್ರಿ ನಿದ್ದೆಯಲ್ಲೂ ಇದೆ ಆಟ.. leder board ನಲ್ಲಿ ನಾನೇ ಮೊದಲಿಗಳಾಗಿರಬೇಕೆಂಬ ಹಂಬಲ..ಸುಮಾರು ಮರೆತು ಹೋದ ಆಂಗ್ಲ ಪದಗಳ refresher  ಈ crossword*







👆👆😁
ನಾನೇನಾದರೂ ಮೊಬೈಲ್ ಕೆಲಗಿಟ್ಟರೆ ಅಕ್ಕ ಈ ಆಟವನ್ನು ಮುಂದುವರೆಸುತ್ತಾಳೆ . ನಮ್ಮ building ನಲ್ಲಿ ಸುಮಾರು ಜನರಿಗೆ ಈ ಆಟದ ಹುಳ ತಲೆಯಲ್ಲಿ ಬಿಟ್ಟಿದ್ದೇನೆ 🙂🙏
*not a paid partnership..
yet i am all for promoting this game