May 11, 2025

ಹಳೆ fb ಪೋಸ್ಟ್

(ಬ್ಲಾಗ್ ನಲ್ಲಿ ಹಾಕಿರಲಿಲ್ಲ. ಈಗ ಏನೋ ಹುಡುಕುತ್ತಿದ್ದಾಗ  ಸಿಕ್ಕಿತು) Happy Mother's Day ಎಲ್ಲರಿಗೂ

ಸುಮಾರು ವರ್ಷಗಳೇ ಕಳೆದಿವೆ. ಆದರೂ ಅದನ್ನು ನೆನೆಸಿದರೆ ಈಗಲೂ ಮೈ ಮೇಲೆ ಮುಳ್ಳು ಏಳುತ್ತೆ. ನಿಹಾ ಳ ಮೊದಲನೇ ಹುಟ್ಟಿದ ಹಬ್ಬದ ಆಚರಣೆಗೆ ಅಮ್ಮ, ಅಪ್ಪ, ತಂಗಿ ಮತ್ತು ಒಬ್ಬ ತಮ್ಮ ಮುಂಬೈನಿಂದ ಬೆಳ್ತಂಗಡಿಗೆ ಬಂದಿದ್ದರು. ಅಪ್ಪನ ಹಾಗೂ ಶ್ರೀಕಾಂತ ರ LFC ಪೆಂಡಿಂಗ್ ಇತ್ತು. ಅದಕ್ಕೆ ಎಲ್ಲರೂ ಸೇರಿ ತಿರುಪತಿ-ಮಂತ್ರಾಲಯಕ್ಕೆ ಹೋಗುವುದೆಂದು ಯೋಜನೆ ಹಾಕಿದೆವು. ತಿರುಪತಿಯಲ್ಲಿ ಈಗಿನ ಹಾಗೆ ರಶ್ ಇಲ್ಲದಿದ್ದರೂ ಸಾಕಷ್ಟು ಜನಜಂಗುಳಿ ಇತ್ತು. ನಾನು ನಿಹಾನ ಎತ್ತಿಕೊಂಡಿದ್ದೆ. ಮಾಲವಿಕ ನನ್ನ ಅಪ್ಪನ ಕೈ ಹಿಡಿದುಕೊಂಡಿದ್ದಳು. ಸ್ವಲ್ಪ ಸಮಯ ಬಿಟ್ಟು ನೋಡುತ್ತೇನೆ ಅಪ್ಪನ ಬಳಿ ಮಾಲವಿಕ ಇಲ್ಲ. ನಾನು ,'ಅಪ್ಪ, ಮಾಲವಿಕ ಎಲ್ಲಿ? ಅಂದೆ,,ಅರೇ ನಿನ್ನ ಬಳಿ ಇಲ್ಲವಾ ಅಂತ ಕೇಳಿದ್ರು. ಮೊದಲ ಸಲ ಆ ದಿನ  ನಾನು, ಅಪ್ಪನ, ಶ್ರೀಕಾಂತ ಮುಖದ ಮೇಲೆ panic ನೋಡಿದ್ದು. ಅಪ್ಪ, ಶ್ರೀಕಾಂತ, ತಮ್ಮ ಬೇರೆ ಬೇರೆ ದಿಕ್ಕಿಗೆ ಓಡಿದ್ರು. ನನ್ನ ಅಮ್ಮ ಅಂತು 'ದೇವರ ಮೇಲೆ ನಂಬಿಕೆ ಇರದೇ ದೇವಸ್ಥಾನಕ್ಕೆ ಬಂದರೆ ಹೀಗೆ ಆಗೋದು' ಅಂತೆಲ್ಲ ಶುರು ಮಾಡಿದ್ರು. ನಾನು ನನ್ನ ತಲೆ ಬೇಗ ಓಡಿಸಿದೆ . ಮಾಲವಿಕ ಆ ದಿನ ಕೆಂಪು ಪ್ರೋಕ್  FROCK ಹಾಕಿಕೊಂಡಿದ್ದಳು. ನಾನು ಒಂದು ಸಲ ಕೆಳಕ್ಕೆ ಕೂತೆ..ಮತ್ತೆ ಜನರ ಕಾಲುಗಳ ಎಡೆಯಿಂದ ನೋಡಿದೆ. ಅಷ್ಟು ದೂರ ondu  ಕೆಂಪು ಅಂಗಿ ತೊಟ್ಟ ಪುಟ್ಟ ಆಕೃತಿ ಗೋಚರಿಸಿತು. ಸ್ನೈಪರ್ Sniper ತರಹ ಮುನ್ನುಗ್ಗಿ  ಎಲ್ಲರನ್ನೂ ದೂಡಿ ಓಡಿದೆ. ಅವಳು ಮಾಲವಿಕ ಳೆ ಆಗಿದ್ದಳು. ಮಾಲವಿಕ ಅಂತ ಗಟ್ಟಿಯಾಗಿ ಕೂಗಿಕೊಂಡು, ಬಗ್ಗಿ ಅವಳನ್ನು ತಬ್ಬಿಕೊಂಡೆ. ಅವಳ ಮುದ್ದು ಮುದ್ದು ಭಾಷೆಯಲ್ಲಿ 'ಯಾಕಮ್ಮ ಏನಾಯ್ತು' ಅಂತ ತನ್ನ ಪುಟ್ಟ ಕೈಗಳನ್ನು ನನ್ನ ಕುತ್ತಿಗೆ ಸುತ್ತ ಹಾಕಿ ತಬ್ಬಿಕೊಂಡಳು...ಆಗ ಅವಳಿಗೆ ಎರಡು ವರ್ಷ..ನಾಲ್ಕು ತಿಂಗಳು 
'ಯಾಕೆ ನೀನು ಆಜೋಬಾ ನ ಕೈ ಬಿಟ್ಟು ಒಬ್ಬಳೆ ಹೋಗಿದ್ದು'?
'ಕೈ ಏನೋ ಬಿಟ್ಟಿದ್ದೆ, ಆದರೆ ಅಗೋ ನೋಡು ಅಜೋಬಾ ನ ಹಿಂದೆನೆ ಹೋಗುತ್ತಿದ್ದೆ' ಅರೇ ನೋಡಿದ್ರೆ ಹೌದು ನನ್ನ ತಂದೆ ತರಹ ಶರ್ಟ್ ಹಾಕ್ಕೊಂಡಿರುವ ಒಬ್ಬರು ಮುಂದೆ ನಡೀತಾ ಇದ್ರು..'
ಅಬ್ಬಾ ಎಷ್ಟು ಹೆದರಿಕೊಂಡಿದ್ದೆ ಆದಿನ...ಆ ಮೇಲೆ ತಿರುಪತಿ-ಮಂತ್ರಾಲಯ ಎಲ್ಲ ಕಡೆ ನಾನು ಮಾಲು-ನಿಹಾ ರ ಕೈ ಗಟ್ಟಿ ಹಿಡಿದುಕೊಂಡೆ ಇದ್ದೆ.

:-)
malathi S

No comments: