June 29, 2026

ಕೆಸುವಿನ ಗಡ್ಡೆಯ ಬೊಡ್ಕೊ

 ನನ್ನ ಬ್ಲಾಗ್ visitors ಸಂಖ್ಯೆ 3 ಲಕ್ಷ ದಾಟಿದೆ. Thank You 🙏🙏 ಅದಕ್ಕೆ ಒಂದು ಗೋದಿಹಿಟ್ಟು + ಖರ್ಜೂರ ಕೇಕ್ ಮಾಡಿ ಅದಕ್ಕೆ ನೇರಳೆ ಹಣ್ಣಿನ ಕ್ರೀಮ್ ಹಾಕಿ decorate ಮಾಡಿದೆ ❤️


ಈಗ ಒಂದು ನನ್ನ fav ರೆಸಿಪಿ. ಅಮ್ಮ ಇದನ್ನು ಮಾಡ್ತಿದ್ರು. ಸುಮಾರು 25 ವರ್ಷಗಳ ನಂತರ ಇದನ್ನು ಮಾಡಿ ಸವಿದೆ. 🙏🙏

..ಕೆಸುವಿನ ಗೆಡ್ಡೆಯ dry item..

ಕೆಸುವಿನ ಗೆಡ್ಡೆಗಳನ್ನು ಸ್ವಲ್ಪ ಉಪ್ಪು ಸೇರಿಸಿ ಕುಕ್ಕರ್ ನಲ್ಲಿ ಮೂರು ಸೀಟಿ ಬೇಯಿಸಿಕೊಳ್ಳಿ.  ಕಾಲು ಚಮಚೆಯಷ್ಟು ಸಾಸಿವೆ, ಒಂದು ತುಂಡು  ಹಿಂಗು ಪುಡಿಮಾಡಿಟ್ಟುಕೊಳ್ಳಿ.


ಸ್ವಲ್ಪ ಹೆಚ್ಛೇ ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ ಹಾಕಿ ಸಿಡಿದ ಮೇಲೆ ಮಾಡಿಟ್ಟ ಪುಡಿ, ಖಾರದ ಪುಡಿ, ಅರಿಶಿನ ಹಾಕಿ ಕೈಯಾಡಿಸಿ. ಬೆಂದ ಸಿಪ್ಪೆ ಬೇರ್ಪಡಿಸಿ ಕಟ್ ಮಾಡಿದ  ಗೆಡ್ಡೆಗಳನ್ನು ಬೆರೆಸಿ. ಸ್ವಲ್ಪ ಉಪ್ಪು ,ಚಿಟಿಕೆ ಸಕ್ಕರೆ, ಕರಿಬೇವು ಹಾಕಿ ಕ್ಷಣ ಹೊತ್ತು ಕೈಯಾಡಿಸಿ. ಎರಡು ನಿಮಿಷ ಮುಚ್ಚಿಡಿ. ಆಮೇಲೆ ಕಾಲು ಟಿ ಸ್ಪೂನ್ ನಷ್ಟು ಅಕ್ಕಿ ಹುಡಿ ಉದುರಿಸಿ ಚೆನ್ನಾಗಿ ಮಿಕ್ಸ್ ಮಾಡಿ.  ಬೇಕಿದ್ದಲ್ಲಿ ಸ್ವಲ್ಪ ಹುಣಸೆ ರಸ ಬೆರೆಸಬಹುದು. ನನಗಿಷ್ಟ ಈ side dish.. 👍


ಕೆಲವರಿಗೆ ಗಂಟಲಲ್ಲಿ ಕೆರೆತ ಆಗಬಹುದು. ಹೆದರಬೇಕಿಲ್ಲ ಮಜ್ಜಿಗೆ ಕುಡಿಯಿರಿ/ಮೊಸರು ತಿನ್ನಿ. recipe ರೆಡಿ ಮಾಡುವಾಗ ಹುಣಸೆ ರಸ ಹಾಕಿದ್ರೂ ನಡೆಯುತ್ತೆ. 
#stuffsthatkonkaniseat 😁😁❤️
eat at your own risk*

#ಅನ್ನದಾತಾಸುಖೀಭವ

June 25, 2026

ಒಂದರ್ಧಕತೆ 🤔🙂🙂

 ಜೂನ್ 2015 ನಲ್ಲಿ ಬರೆದಿದ್ಫು draft ನಲ್ಲಿತ್ತು : ಓದಿ ನಾನೇ ಬರೆದಿದ್ದಾ ಅಂತ 😎😎

ಆತನಿಗೂ 'ಆಕೆ'ಗೂ ಮೊದಲಿನಿಂದಲೇ ಪರಿಚಯ, ಪ್ರೀತಿ. ಅವನೋ ಪೇಟೆಗೆ ಬಂದ ಹಳ್ಳಿ ಗಮಾರ. 'ಆಕೆ' ಶ್ರೀಮಂತ ಕುಟುಂಬದವಳು. ಅವಳ ಕುಟುಂಬದ ಸದಸ್ಯರ ಆಶಯದಂತೆ ಅವಳು ಒಬ್ಬ ಶ್ರೀಮಂತನನ್ನು ವರಿಸಿದಳು. ಅವನು ಊರಿಗೆ ಹೋಗಿದ್ದ ಅವನ ಕಾಯಿಲೆಯ ಅಮ್ಮನನ್ನು ನೋಡಿಕೊಳ್ಳಲು. ಅವಳಮ್ಮನನ್ನು ನೋಡಿಕೊಳ್ಳುತ್ತಿದ್ದ ಕಸ್ತೂರಿಯ ಜತೆ ಅವನು ಮದುವೆಯಾಗಬೆಕೇಂದು ಅವನ ಅಮ್ಮನ ಕೋರಿಕೆಯಂತೆ ಅವನು ಅವಳನ್ನು ಮದುವೆಯಾದ. ಎರಡು ಮಕ್ಕಳ ತಂದೆಯಾದ. ಅಮ್ಮ ಸತ್ತುಹೋದಮೇಲೆ ಪೇಟೆಗೆ ಮರಳಿದ. ಅಲ್ಲಿ ದೊಡ್ಡದೊಂದು ಸಂಸ್ಥೆಯಲ್ಲಿ ಕೆಲಸ. ಆ ಸಂಸ್ಥೆಯಲ್ಲೇ ಭೇಟಿಯಾದಳು ಅವನ ಹಳೇ ಪ್ರೇಯಸಿ. ಅವಳೀಗ ವಿಧವೆ. ಪುನ: ಅವರ ಮಧ್ಯೆ ಸಂಬಂಧ ಚಿಗುರ ತೊಡಗಿತು. 'ಆಕೆ'ಯ ಗಂಡ ಮದುವೆಯಾದ ಆರನೇ ತಿಂಗಳಿಗೆ ಕ್ಯಾನ್ಸರ್ ಗೆ ತುತ್ತಾಗಿ ತೀರಿಕೊಂಡಿದ್ದ. ಆಘಾತ ತಾಳಲಾಗದೇ ಅಪ್ಪನೂ ತೀರಿಕೊಂಡಿದ್ದ. ಈಗ ಈಕೆ ಒಬ್ಬಂಟಿ. ಮಕ್ಕಳೂ ಇರಲಿಲ್ಲ. ಇವನ ಮಕ್ಕಳ ಮೇಲೆ ವಿಶೇಷ ಒಲವು. ಕಸ್ತೂರಿಗೆ  ತನ್ನ ಮನೆಯ ಕೆಲಸಗಳೇ ಆಗುತ್ತಿತ್ತು. ಪೇಟೆಯ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟವೆನಿಸಿತ್ತು. ಮಕ್ಕಳೂ ಈಗ ಶ್ರೀಮಂತ ಆಕೆಯನ್ನು ಒಗ್ಗಿಕೊಂಡು ಅವಳ ಜತೆ ಅವಳ ದೊಡ್ಡ ಮೆನೆಯಲ್ಲಿ ಇರಲು ಇಷ್ಟಪಡುತ್ತಿದ್ದರು.ಇದರಿಂದ ಅವಳ ಹೃದಯಕ್ಕೆ ದೊಡ್ದ ಗಾಯ. ಅವಳ ಗಂಡ ಮತ್ತು ಆಕೆಯ ಬಗ್ಗೆ ಅವರಿವರಿಂದ ಕೇಳುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕತೆ. ಕಸ್ತೂರಿಗೆ ಅವನ ಬಗ್ಗೆ ಪ್ರೀತಿ. ಆದರೆ ಅವನಿಗೆ ಆಕೆಯ ಮೇಲೆ ಪ್ರೀತಿ

ಇಂತಹ ಸಮಯದಲ್ಲೇ ಆಕೆ ನಡೆಸುತ್ತಿದ್ದ ಕಾರ್, ಇವಳ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾಗ ಅಪಘಾತಕ್ಕೀಡಾಗಿ ಇಬ್ಬರೂ ಮಕ್ಕಳೂ ಸಾವಿಗೀಡಾಗುತ್ತಾರೆ. ಅವನು ಬೇಜಾರಿನಲ್ಲಿ ದೇಶಾಂತರ ಹೋಗುತ್ತಾನೆ. ಇಲ್ಲಿ ದು:ಖತಪ್ತ ಕಸ್ತೂರಿ ಮತ್ತು 'ಆಕೆ'.

June 23, 2026

ಜೈ ಚಾಮುಂಡೇಶ್ವರಿ- Mysore- ranganatittu- belagola

Taking inspiration from my writer friend Vasudhendra, we decided on temple darshan the hard way — 1008 steps straight up. By step 10 I was huffing like an old steam engine 😅 Niha looked at me, concerned, and said “Ammaa, you go ahead and stay down.” I laughed out loud and told her, “No way. I’m the Malathi — one and only. I don’t quit.”


So I climbed. Slow. With lots of pit stops to catch my breath, and to steal moments of cool misty breeze, birdsong, and the city slowly unveiling itself below like a painting. An hour later, legs aching but heart full, I reached the temple. The temple was enveloped in mist. Totally worth every step.

It took us an hour . we gave each other a high 5 and said 'yaay we did it. one of the wish in my bucket list ticked off..












huge slugs in large numbers






big Nandi statue half way up..made up for a breather

mysuru

my nimpi

1000th step


lush greenery

500th step


ruk jaana nahin tu kahin haarake

misty path


Before going to Mysore we visited ranganatittu and belagola



people were more awed by crocs than birds 😁





i stood like this for 10 min for Niha to finish laughing...anything to humor her. missed Malavika, she had cake orders for fathers day


jammon cream cup cakes were a hit ❤️🙏👍



ಬೆಳಗೊಳ


our vehicle stopped at traffic and i could quickly click this 🙂👆
 

June 20, 2026

6th month...yaadon ki baraat

 ನೆನಪಿನ ಅಂಗಳದಿಂದ...6 ತಿಂಗಳು ಕಳೆದು ಹೋದವು. ತುಂಬಾ ತುಂಬಾ regretful ಫೀಲಿಂಗ್...Hoping you  are in peace Srikanth 😭😭❤️

recall ಮಾಡಲು ಕೆಲವು ಚಿತ್ರಗಳು..

           ನಮ್ಮ ಕೊನೆಯ ಪಯಣ sharavati backwaters
                        ಮದುವೆಯ anniversary
  
ತ್ರಾಖಂಡದಲ್ಲೊಂದು selfie.. ಹೊರ ರಾಜ್ಯದ ಕೊನೆ ಪಯಣ 😧
    
ಲೋಹಾಘಾಟ್

ಭೋಪಾಲ್, ಮಧ್ಯಪ್ರದೇಶ..ಇನ್ನಷ್ಟು ತಾಣಗಳು ಉಳಿದಿದ್ದವು



ಕಾರಕಾಳ ದಲ್ಲೊಂದು function

ಗೋಕರ್ಣ

ನಮ್ಮ ತೋಟ






ನಮ್ಮ ತೋಟದ ಬೆಳಗು...so amazing



ಶ್ರೀಕಾಂತ್ ಅಣ್ಣನ ಹೆಂಡತಿ ಅಂದರೆ ನನ್ನ ಒರಗಿತ್ತಿ/ co sister ದೈವಾಧೀನರಾಗಿದ್ದು, ಅವರ ಮಗಳನ್ನು ಧಾರೆಯೆರೆಯಲು ನಮಗೆ ಅವಕಾಶ ಸಿಕ್ಕಿದ್ದಾಗ...ಮೊದಲು ನಾನು ಎಲ್ಲರಿಗೂ ಕೇಳಿದ್ದು ನಾನು ಕಚ್ಛೆ ಹಾಕಿ ಸೀರೆ ಉಟ್ಟರೆ ನಿಮಗೆ ಮುಜುಗರವಾಗುವುದಿಲ್ಲವಷ್ಟೇ ಅಂತ 🙂. ನನ್ನ ಮುದ್ದು ಸೊಸೆ ನನಗೆ ಸಿಂಗಾರ ಮಾಡಿದ್ದು...ಸ್ವಲ್ಪ ಮೇಕಪ್ ಜಾಸ್ತಿಯಾಯಿತೇನೋ....but i thoroughly enjoyed..🙏🙏. ನಮ್ಮಲ್ಲಿ ಮದುವೆಯಾದ ಮೇಲೆ ಕಚ್ಛೆ ಸೀರೆ ಉಡೋದು ಎರಡೇ ಬಾರಿ..ಒಂದು ಮಗನ ಚೌಲು/ಉಪನಯನ ಮತ್ತು ಮಗಳಿಗೆ ಮದುವೆ ಧಾರೆ ಎರೆಯುವಾಗ...ನನ್ನ ಜೀವನದ ಒಂದು ಆಸೆ ಪೂರೈಕೆಯಾಯಿತು...🙏🙏. ಸೀರೆ ಉಟ್ಟ ಪಟ ನನ್ನಲ್ಲಿಲ್ಲ..ಮುಂದೆ ಸಿಕ್ಕಿದರೆ ಹಾಕುತ್ತೇನೆ. ಈಗ ಯಾರಲ್ಲೂ ಕೇಳುವ ಮನಸ್ಸಿಲ್ಲ

ಈ ತರಹ ಒಂದು ಗುಡಲು ಕಟ್ಟುವ ಕನಸು ನನಸಾಗದೆ ಉಳಿದುಬಿಟ್ಟಿತು 😏😏

June 18, 2026

Vasudhendraರ ಅಮ್ಮ ನಮಗೂ ಇಷ್ಟ

so, ನಿಹಾ 'ಅಮ್ಮ, investment ಅಂತ ಬಂಗಾರ ತೆಗೋಳ್ತೇನೆ ಅಂದ್ಲು. ನಾನೂ excite ಆಗಿ ಹೂಂ ಕಣೆ, ಅಂದೆ. ಆದರೆ ನನಗೂ ಮಕ್ಕಳಿಗೂ ಬಂಗಾರದ ಖರೀದಿಯ ಬಗ್ಗೆ ಏನೂ ಅಂದ್ರೆ ಏನೂ ಗೊತ್ತಿಲ್ಲ. ಮದುವೆಯ ನಂತರ ಅಂದ್ರೆ ಈ 38 ವರ್ಷಗಳಲ್ಲಿ ಎರಡೇ ಸಲ ಬಂಗಾರ ಖರೀದಿ ಮಾಡಿದ್ದು. ಎರಡೂ ಸಲ ಅಮ್ಮ ಇದ್ರು...ನಾನು ತಲೆ ಕೆಡಿಸಿಕೊಂಡಿರಲಿಲ್ಲ. ನನ್ನ ತಮ್ಮನಿಗೆ ಮೆಸೇಜ್ ಮಾಡಿದೆ. ಅವನು ಇದರಲ್ಲಿ ನಿಸ್ಸೀಮ. ಅವನು ಏನು ಕೇಳ ಬೇಕು, ಎಲ್ಲಿ ಚೌಕಾಸಿ ಮಾಡಬೇಕು ಅಂತೆಲ್ಲ ಮೆಸೇಜ್ ಕಳಿಸಿದ... ನಾವು ಬೆಪ್ಪು ತಕ್ಕಡಿಗಳು ಹೋಗಿ ಬಂಗಾರ ಖರೀದಿ ಮಾಡಿದೆವು...ಅವರು ಬಿಲ್ ಮಾಡುವಾಗ ಕೌಂಟರ್ ನಲ್ಲಿ ನಮಗೆ ಸಹಾಯ ಮಾಡುತ್ತಿರುವ ಹುಡುಗಿ ಮಾಲವಿಕಾಳಿಗೆ ಕೆಲವಾರು scheme ಬಗ್ಗೆ ಹೇಳುತ್ತಿದ್ದಳು. 

ನಾನು ಆರನೇ ಕ್ಲಾಸ್ ಓದುತ್ತಿದ್ದಾಗ ಅಮ್ಮ , ಬಂಗಾರದ ಅಂಗಡಿಯಲ್ಲಿ ಇಂತಹದೊಂದು  scheme ಗೆ ದುಡ್ಡು ಹಾಕಿದ್ದು...ಮಕ್ಕಳಿಗೆ guess what amma purchased with this scheme, ಅಂದ್ರೆ obviously gold ಅಂದ್ರು...ಅಲ್ಲ ಸ್ಟೀಲ್ ಪ್ಲೇಟ್ s ಅಂದೇ. 😁.  ನಾನು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳುತ್ತಿರಲ್ಲಿ. ಅಜ್ಜನ ಮನೆಯಲ್ಲಿ ಕಂಚು, ಮಣ್ಣಿನ ಪಾತ್ರೆಗಳು... ಅಮ್ಮನ ಮನೆಯಲ್ಲಿ ಸ್ಟೀಲ್ ಲೋಟಗಳಿದ್ರೂ ತಿಂಡಿಗೆ ಮಾತ್ರ ಹಿಂಡಾಲಿಯಂ ತಟ್ಟೆ. ನೆಂಟರು ಬಂದಾಗ ಅದರಲ್ಲಿ ತಿಂಡಿ ಬಡಿಸುವುದು ಮಾತ್ರ  ನನಗೆ ಮುಜುಗರದ ವಿಷಯ. ಅಮ್ಮನಿಗೆ ಹೇಳಿದಾಗ ಅಮ್ಮನಿಗೆ ಸಿಟ್ಟು ಆಶ್ಚರ್ಯ ಒಟ್ಟಿಗೆ ಆದವು. ಬಂಗಾರದ ಅಂಗಡಿಯಲ್ಲಿ ಪ್ರತಿ ತಿಂಗಳು 10 ರೂ ಕಟ್ಟಬೇಕು. 10 ತಿಂಗಳ ನಂತರ ಬಂಗಾರ ಅಥವಾ ಅಲ್ಲಿ display ನಲ್ಲಿರುವ ಯಾವುದೇ ಐಟಂ ತೆಗೋ ಬಹುದಿತ್ತು. ಹಾಲು ಕಾಯಿಸುವ ಮಿಲ್ಕ್ ಕುಕ್ಕರ್  , ಗಾಜಿನ ಟೀ ಸೆಟ್, ಸ್ಟೀಲ್ ಲೋಟ, ತಟ್ಟೆ ಮುಂತಾದವು. ಅದರಲ್ಲಿ ನವಿಲಿನ ಉಬ್ಬು ಕೆತ್ತನೆ ಇರುವ ಒಂದು ಡಜನ್ ಸ್ಟೀಲ್ ಪ್ಲೇಟ್ ಕೂಡ ಇದ್ದವು. ಒಂದು ಹತ್ತು ರೂ extra ಕೊಟ್ಟರೆ ಅದು ಖರೀದಿಸ ಬಹುದಿತ್ತು. ನನ್ನ ಮುಖ ನೋಡುತ್ತಾ ಅಮ್ಮ ಅದನ್ನೇ ಕೊಂಡರು..

ಇಷ್ಟೆಲ್ಲ ವಿಷಯ ಯಾಕಂದ್ರೆ ವಸುಧೇಂದ್ರರ 'ಸ್ಟೀಲ್ ಪಾತ್ರೆಗಳು' ಪ್ರಬಂಧದ ಬಗ್ಗೆ ಮಾತುಕತೆ.........👇👇

ಮೊನ್ನೆ  ಭಾನುವಾರ ಹಲವು ದಿನಗಳ ನಂತರ ಒಂದು ಕಾರ್ಯಕ್ರಮ attend ಮಾಡಿದೆ. ವಸುಧೇಂದ್ರ ರ ಪುಸ್ತಕ 'ನಮ್ಮಮ್ಮಅಂದ್ರೆ ನಮಗಿಷ್ಟ' ಪುಸ್ತಕದ ಆಂಗ್ಲ ಅನುವಾದದ book talk . ಮಾಲವಿಕ register ಮಾಡಿದ್ದಳು.ಅದರ venue 'ಬೇಕು' ಬಗ್ಗೆ ಕೂಡ ಕುತೂಹಲವಿತ್ತು.

. cozy, ಚೆನ್ನಾಗಿತ್ತು ಕಾರ್ಯಕ್ರಮ. ಮನಸ್ಸಿಗೆ ಹಿತವಾಯ್ತು. ನಗು ಮಾತು, ಗಮ್ಮತ್ತು, ಹಾಡು etc...🙂 ಸಮಯ ಸರಿದಿದ್ದೇ ತಿಳಿಯಲಿಲ್ಲ.


ಮಳೆ ಇದ್ದ ಕಾರಣ ನಾವು ಬೆರಳೆಣಿಕೆಯಷ್ಟು ಜನ ಮಾತ್ರ ಇದ್ದೆವು. ಸಭಿಕರಲ್ಲಿ ಒಬ್ಬರು ಕಾರ್ಯಕ್ರಮದ  recording ಮಾಡಿದ್ದಾರೆ. ವಸುಧೇಂದ್ರ ಅವರು ಅದನ್ನು ಶೇರ್ ಮಾಡಬಹುದು. ನಾನು ಕೆಲವು ಚಿತ್ರ ತೆಗೆದೆ...🙂

             ಅವರ ಜತೆ ಒಂದು ಚಿತ್ರ ನಿಹಾ ಕ್ಲಿಕ್ಸ್. ಅಭಿಮಾನಿ ಗಳ ಮಧ್ಯದಲ್ಲಿ ಹೋಗಿ ನಾನೇ ಕೇಳಿ ಚಿತ್ರ ತೆಗಿದಿದ್ದು 🙂🙏
ಅನುವಾದಕರಾದ ನಾರಾಯಣ್ ಶಂಕರನ ಮತ್ತು ಪುಸ್ತಕದ ಬಗ್ಗೆ ಮಾತನಾಡಿದ  ಡಾ. ವನಮಾಲಾ ವಿಶ್ವನಾಥ


'ಬೇಕು' ನಡೆಸುತ್ತಿರುವುದು ಒಬ್ಬಳು ಯುವ ಉದ್ಯಮಿ. ಗ್ರಾಹಕರಿಂದ ತು0ಬಿ ತುಳುಕುತ್ತಿತ್ತು. ಒಂದು TOUCHWOOD  ಹಾರೈಸಿದೆ. ಈ ತರಹ enterprise ನೋಡಿದ್ರೆ  ಮನಸ್ಸಿಗೆ  ಹಿತವಾಗುತ್ತೆ. ❤️❤️