ನನ್ನ ಭೈಯ್ಯ ಅಂದರೆ ಶ್ರೀಕಾಂತ್ ಅಣ್ಣನಿಗೆ liver ಕಾಯಿಲೆ ತುಂಬಾ ತಡವಾಗಿ detect ಆಯ್ತು.. ಶ್ರಮ ಜೀವಿ, ಕತ್ತಲೆ ಮನೆ, ಎಣ್ಣೆ ಕಾಣದ ತಲೆ/ಕೂದಲು, ಹಳೆ ಮನೆಯ ಧೂಳು ಇವೆಲ್ಲರಿಂದ ಕಣ್ಣು ಕೆಂಪು. ಹಳ್ಳಿ ಜೀವನದಲ್ಲಿ ಇದೆಲ್ಲ ಮಾಮೂಲಿ ಅಂತ ನಮ್ಮ attention ಅವರಿಗೆ ಕಾಯಿಲೆ ಇರಬಹುದೆಂದು ಗ್ರಹಿಸಲು ಆಗಲೇ ಇಲ್ಲ. BP ಒಂದಿತ್ತು. ಮತ್ತು liver ಸಂಬಂಧಿ ಕಾಯಿಲೆ ಏನಿದ್ದರೂ ತಡವಾಗಿ ಗೋಚರವಾಗುತ್ತದೆ. liver cirrhosis ನಿಂದ ಸಾವನ್ನಪ್ಪಿದರು ಪಾಪ
ಆದರೆ ಶ್ರೀಕಾಂತ್ ಗೆ liver ತೊಂದರೆಯ ಕ್ಲಾಸಿಕ್ symptoms ಇದ್ದವು. ಗಿಣಿ ಗೆ ಹೇಳಿದ ಹಾಗೆ ಹೇಳಿದೆ. ಒಂದು ಸಲ liver, kidney ಚೆಕ್ ಅಪ್ ಮಾಡಿ ಸುವುದರಲ್ಲಿ ಏನಿದೆ ಅಂತ. ದುಡ್ಡು ಕೊಟ್ಟರೆ , ಮನೆಯಿಂದ ಹೊರ ಹೆಜ್ಜೆ ಹಾಕದೆ, ಮನೆಗೆ ಬಂದು ರಕ್ತ ತಪಾಸಣೆ ಮಾಡುವ ಸೌಕರ್ಯ ಕೂಡ ಇದೆ ನಮ್ಮ ಮನೆ ಬಳಿ.
ಒಂದು ನಾಲ್ಕು ತಿಂಗಳಿಂದ ಅಮ್ಮ, ತಮ್ಮ, ತಂಗಿ ಎಲ್ಲ ಫೋನ್ ಮಾಡಿದಾಗ ಇವರ ಆರೋಗ್ಯದ ಬಗ್ಗೆಯೇ ನನ್ನ complaint ಇರುತ್ತಿತ್ತು.
ಟ್ರಾವೆಲ್ ಮಾಡಿ ಬಂದ ಮೇಲೆ ಕಡಿಮೆಯಾಗದ ಕಾಲಿನ ಊತ,unexplained weight loss ದೊಡ್ಡ ಹೊಟ್ಟೆ, ಗುಣವಾಗದೆ ಇದ್ದ ಕಜ್ಜಿ, ಬಿಳಚಿ ಕೊಂಡ ಮುಖ ಇವೆಲ್ಲ ಲಕ್ಷಣಗಳಿದ್ದವು಼.. ಕೊನೆಗೆ your health, your life ಅಂತ ಹೇಳಿ ಸುಮ್ಮನಾದೆ.
what prompted him to go the doctor ನನಗೆ ಇನ್ನೂ ಗೊತ್ತಿಲ್ಲ. i dont even want to ask anymore. ಬಹುಷ್ಯ ಕಣ್ಣಿನ cataract operation ಗೆ ರಕ್ತ ಪರೀಕ್ಷೆ ಮಾಡಿಸಿದಾಗ sugar ಸಿಕ್ಕಾಪಟ್ಟೆ ಹೆಚ್ಚು ಕಡಿಮೆ ಇತ್ತು. ಕೆಲ parameters ಸರಿಯಿರಲಿಲ್ಲ. ಕೊನೆಗೆ light jaundice ಪತ್ತೆಯಾಯ್ತು. ಇನ್ನೂ ಹೆಚ್ಚಿನ ಪರೀಕ್ಷೆಗೆ ಒಡ್ಡಿದಾಗ liver cirrhosis ಪತ್ತೆಯಾಯ್ತು. 5 ನೆ may ಗೆ result ಬಂತು. ಕೆಲ ಇಂಜೆಕ್ಷನ್, ಔಷಧಿ ಆದ ಮೇಲೆ ಮೂರು ತಿಂಗಳ ನಂತರ ಪುನಃ ಪರೀಕ್ಷೆ ಮಾಡಿ liver ನಲ್ಲಿ ಸುಧಾರಣೆ ಇಲ್ಲದಿದ್ದಲ್ಲಿ ಕೊನೆಯ option liver transplant ಅಂದ್ರು ಡಾಕ್ಟರ್.
15ನೆ ತಾರಿಕು ಬೆಳಿಗ್ಗೆ weakness, dizziness ಅಂತ low BP ಅಂದುಕೊಂಡ್ವಿ. ಡಾ ಬಳಿ ಹೋಗುವಾ ಅಂದ್ರೆ ಬೇಡ ಅಂದ್ರು. ಒಂದು ORS ನೀರು ಕುಡಿದು ಮಲಗಿದ್ರು. ಮಧ್ಯಾಹ್ನ ಸ್ವಲ್ಪ ಊಟ ಮಾಡಿದ್ರು, ಸ್ವಲ್ಪ musk melon ತಿಂದ್ರು. ಮಲಗಿದ್ರು. ನಾನು ಸಂಜೆ ನನ್ನ ಸುದರ್ಶನ ಕ್ರಿಯಾ ಯೋಗ ಮುಗಿಸಿ crossword ಆಡ್ತಾ ಇದ್ದೆ. ಅವರು ಒಂದು conference ಕಾಲ್ ಮುಗಿಸಿ ಸುಮ್ಮನೆ ಕುತಿದ್ರು. ಆಮೇಲೆ ನೀರಿನ ಗ್ಲಾಸ್ ಬಿದ್ದ ಸದ್ದು ಹಾಗೂ ವಿಚಿತ್ರವಾದ ಕೆಮ್ಮಿನ ಸದ್ದಿಗೆ ರೂಮ್ ಗೆ ಓಡಿದ್ರೆ ಅಲ್ಲೆಲ್ಲ ರಕ್ತ ವಾಂತಿ ಮಾಡಿದ್ದರು. ಅಕ್ಕ, ನಿಂಪಿ ಅಂತ ಕೂಗಿದೆ. ಇಬ್ಬರೂ ಓಡಿ ಬಂದ್ರು, ಅವರು ರಕ್ತ ವಾಂತಿ ಮಾಡ್ತಿರಬೇಕಾದ್ರೆ, ಅಕ್ಕ ಡಾಕ್ಟರ್, ನಿಹಾ ambulance ಗೆ ಫೋನ್ ಮಾಡಿದ್ರು. ನಾನು ಮಿತ್ರ ಸಾಲಿಮಠರಿಗೆ ಫೋನಾಯಿಸಿದೆ. ಇವರು toilet ಗೆ ಹೋಗಬೇಕು ಅಂದ್ರು. ಕರೆದು ಕೊಂಡು ಹೋಗಿ, ಆದಮೇಲೆ, ವಾಂತಿ ಮಾಡಿಕೊಂಡ ಬಟ್ಟೆ ಬದಲಾಯಿಸಿ, ಹೊರಬರಬೇಕಾದರೆ ಪ್ರಜ್ಞೆ ತಪ್ಪಿದರು. ಸಾಧ್ಯವಾದಷ್ಟು ಏಟಾಗದಂತೆ ಹಿಡಿದೆ ಆದರೆ ನನ್ನ ಬಲ ಸಾಕಾಗಲಿಲ್ಲ, ಅಷ್ಟರೊಳಗೆ ಸಾಲಿಮಠರ ಮಗ ನಾಗಭೂಷಣ್ ಬಂದ್ದು ಸಹಾಯ ಮಾಡಿದ. ಪುನಃ ಮುಕ್ಕಾಲು ಬಕೆಟ್ ವಾಂತಿ ಮಾಡಿದ್ರು. ambulance ನವರು ಬಂದ್ರೆ, stretcher ಅಳತೆ ಸರಿಯಿಲ್ಲದೆ, ಇವರನ್ನು ಕಂಪ್ಯೂಟರ್ ಬಳಿ ಬಳಸುವ ತಿರುಗು ಕುರ್ಚಿಯಲ್ಲಿ ಲಿಫ್ಟ್ ನಲ್ಲಿ ಕೆಳಗೆ ಕರೆದು ಕೊಂಡು, ಕೆಲವರ ಸಹಾಯದಿಂದ stretcher ಮೇಲಿರಿಸಿ ambulance ಏರಿಸಿದಾಯಿತು. ಅಲ್ಲಿಂದ Aster RV emergency room . ಅಲ್ಲಿ ಒಬ್ಬರಿಗೆ ಮಾತ್ರ entry ಆದ್ದರಿಂದ, ಇವರ ವೈದ್ಯಕೀಯ ವಿಷಯಗಳನ್ನು ಅವಳೇ ನಿಭಾಯಿಸುತ್ತಿದ್ದರಿಂದ ಅಕ್ಕ ಅವರ ಜತೆ ಹೋದಳು. ನಾನು admission formalities, ದುಡ್ಡು ಕಟ್ಟುವುದು, insurance ಮುಂತಾದ್ದರಲ್ಲಿ ಬ್ಯುಸಿ ಆದೆ. ಒಳಗೆ ಒಂದು ಸಲ ವಾಂತಿ ಮಾಡಿದ್ರು ಅಂತ ಅಕ್ಕ ಹೇಳಿದ್ಲು. ಅಲ್ಲಿಂದ ICU ಕರೆದುಕೊಂಡು ಎರಡು ದಿನ ಇಟ್ರು. endoscopy ಮಾಡಿ ಒಡೆದು ಹೋದ ಗಂಟಲಿನ ರಕ್ತ ನಾಳಕ್ಕೆ banding ಮಾಡಿದ್ರು.
ರಾತ್ರಿ ಅಲ್ಲಿ ಯಾರನ್ನು ಇರಗೊಡಲಿಲ್ಲ. ಮನೆಗೆ ಬಂದು ರಣರಂಗವಾದ ಮನೆ ಕ್ಲೀನ್ ಮಾಡುವ ಕೆಲಸ. ರಕ್ತ ಸಿಕ್ತ ಬಟ್ಟೆಗಳನ್ನೆಲ್ಲ ಬಿಸಾಡಿದೆ. the stench of clotted blood just would not go. it took two days for the blood to flush through toilet.
ಮೂರು ದಿನ ICU ಎರಡು ದಿನ ವಾರ್ಡ್...ಒಟ್ಟು ಖರ್ಚು 2 ಲಕ್ಷದ 8 ಸಾವಿರ. insurance ಮುಕ್ಕಾಲು ಪಾಲು ಖರ್ಚು ಕವರ್ ಮಾಡಿದೆ
We did what was necessary in the moment, Bur later in the night i got chills thinking of the things we had to go through. All of this could have been avoiided .the weight of what lies ahead is daunting. I'm still grappling with anger –trauma, no room for forgiveness here. i wake up sometimes with the smell of hospital ,of stale blood. our sleep patterns have changed. i move along with him to which ever part of the home he is comfortable/ wants to sleep in
The path to wellness is long, but we're navigating it together. Malavika's handling the medical aspects, apart from her baking business,I'm focusing on cooking nourishing food, and I'm prioritizing my own health with sudarshana kriya yoga, walks, and self-care. (once in a while i do feel 'why should i look after myself, only to take care of others). It was a great help that Niha was here. She met with an accident and hurt her neck and i advised her to come to bengaluru for a thorough check up. I am relieved she is fine.
The liver's resilience gives us hope – it's a peculiar organ, capable of healing, and we're holding onto that..
ಈಗ ಮನೆಯಲ್ಲಿ ಸ್ವಲ್ಪ ಸದ್ದು ಆದ್ರೂ ಸಾಕು ಎದೆ ಢವ ಢವ ಎನ್ನುತ್ತೆ
Please listen to your family members. Kindly listen to your body. Better be safe than sorry! Let this post serve as a warning to everybody 🙏🙏. Ultimately health is only thing that matters.
ಎಲ್ಲರೂ ಅದದ್ದು ಆಯ್ತ, ಮುಂದಿನದು ನೋಡು ಅಂತ advice ಮಾಡ್ತಿದ್ದಾರೆ...ನಂಗೆ ಆಗೋದಿಲ್ಲ, ನನಗೆ ಅಷ್ಟು ಸಿಟ್ಟು ಬಂದಿದೆ. it.is a gross disrespect towards me, towards my words. 😡
family members ,friends , colleagues ಎಲ್ಲರ moral support ಇದೆ. ಸಹಾಯ ಮಾಡಿದವರಿಗೆಲ್ಲ ಧನ್ಯವಾದಗಳು. ಆಸ್ಪತ್ರೆ ಸಿಬ್ಬಂದಿಗಳೆಲ್ಲ ತುಂಬಾ ಚೆನ್ನಾಗಿ ನೋಡಿಕೊಂಡರು.
take care please
view from the hospital. got a cute rainbow too 🙂
diet : ದಿನಕ್ಕೆ 2 ಲೀಟರ್ ನೀರು, 3 egg white ನಾಲ್ಕು ಗ್ರಾಮ್ ಉಪ್ಪು. ನಾನು ಸೆಪ್ಪೆ ಅಡುಗೆ ಮಾಡ್ತೀನಿ. ಉಪ್ಪು ಅವರೇ ಹಾಕಿಕೊಳ್ಳುತ್ತಾರೆ. ನಾನು ಉಪ್ಪಿಲ್ಲದೆ ತಿನ್ನಲು ಆರಂಭಿಸಿದ್ದೇನೆ. ನನಗಿಷ್ಟವಾಗ್ತಿದೆ. one thing that works to my advantage he is never fussy about food. TOUCHWOOD. ನಾವು ಮೂರು ಜನ ಜಂಕ್ ಫುಡ್ ತಿನ್ನುತ್ತೇವೆ, ಆದರೆ i always cooked separate food for him.





1 comment:
ಮಾಲತಿ, ಬದುಕು ಅದೆಷ್ಟು ಅನಿಶ್ಚಿತ! ನಮ್ಮ ನಮ್ಮ ಚಿಂತನೆಗಳಷ್ಟೇ ನಮಗೆ ಧೈರ್ಯ ಒದಗಿಸಬಲ್ಲುದು.
ಭಾವನಾತ್ಮಕ ಬದುಕು ಒಬ್ಬರಿಗೊಬ್ಬರು ಆಸರೆಯಾಗಿರಲಷ್ಟೇ ಸಹಕಾರಿ, ಅದು ಬೇಕು. ಆದರೆ ಈ ಅನಿರೀಕ್ಷಿತ ಹೊಡೆತಗಳನ್ನು ಎದುರಿಸಲು ಬೇಕಾದ ಆಧ್ಯಾತ್ಮ ಚಿಂತನೆಗೆ, ಭಾವುಕ ಮನಸ್ಸು ಸಲ್ಲದ Ingredient. Attachment & detachment ಗಳನ್ನು ಬಹಳ ತೌಲನಿಕವಾಗಿ ತಾತ್ವಿಕ ನೆಲೆಯಲ್ಲಿ ಬಳಸಿಕೊಳ್ಳುವುದಷ್ಟೇ ನಮ್ಮ ಅಸ್ತಿತ್ವಕ್ಕೆ ದಾರಿ. ಆದರೆ ಇಷ್ಟು ಕಾಲ ನಾವೇ ಸಾಕಿಕೊ.ಡ ಭಾವುಕ ಭಾವನಾತ್ಮಕ ಜಗತ್ತಿನಿಂದ ನಮ್ಮನ್ನು ಬಿಡಿಸಿಕೊಳ್ಳುವುದೇ ನಿಜವಾದ ಸವಾಲು. ಈಗ ಶ್ರೀಕಾಂತ್ ಸರ್‌ಗೆ ಬೇಕಿರುವುದು emotional support. ನಿಮ್ಮನ್ನು ನೀವು ಸಂಬಾಳಿಸಿಕೊಳ್ಳಲು ಬೇಕಿರುವ ಆಧ್ಯಾತ್ಮ ಬಹು ಎತ್ತರದ್ಸು. ಇವೆಲ್ಲವನ್ನೂ ನಿಭಾಯಿಸುವ ಶಕ್ತಿ ನಿಮಗೆ ಒದಗಿ ಬರಲಿ. ಅವರು ಬೇಗ ಗುಣಮುಖರಾಗಲಿ 🙏
Post a Comment