June 26, 2012

ಆಕೃತಿ, ಅಂತರಗಂಗೆ, PMB - ಒಂದಷ್ಟು ramblingsಉ

ಕೆಂಡಸಂಪಿಗೆ, ಅವಧಿಯಲ್ಲೆಲ್ಲ ಅನುದಿನದ ಅಂತರಗಂಗೆಯ (ಅ.ಅ.) excerpts ಓದಿ ಆ ಪುಸ್ತ್ಕಕ ಯಾವಾಗ ಕೊಳ್ಳುತ್ತೇನೋ ಅನ್ನುವ ತವಕ. ಹಾಗೆ ಯು ಆರ್ ಅನಂತಮೂರ್ತಿಯವರ ಪ್ರಿತಿ-ಮೃತ್ಯು-ಭಯ ಕೂಡ ನನಗೆ ಬೇಕಿತ್ತು. ಸರಿ ಭಾನುವಾರ ಸಂಜೆ ನಮ್ಮ ರಾಯರಿಗೆ ಪೂಸಿ ಹೊಡೆದು ನಮ್ಮ ಐರಾವತ ಏರಿ ಆಕೃತಿ ಪುಸ್ತಕಕ್ಕೆ ಹೋದೆವು.
ಅಲ್ಲಿ ಎಂಟ್ರೆನ್ಸ್ ನಲ್ಲಿ ಜನವೋ ಜನ. ನನಗೆ ಖುಶಿ, ಹಾಂ ಇವತ್ತು ಭಾನುವಾರ ತುಂಬ ಜನ ಪುಸ್ತ್ಕಕ ಕೊಳ್ಳಲು ಬಂದಿದ್ದಾರೆ ಅಲ್ಲದೇ ಗುರು ಪುಸ್ತಕಗಳ ಮೇಲೆ ಶೇ 50 % ರಷ್ಟು ರಿಯಾಯಿತಿ ಬೇರೆ ಘೋಷಿಸಿದ್ದರು. ಗಾಡಿ ಪಾರ್ಕ್ ಮಾಡಿಕೊಂಡು ಅಲ್ಲಿಗೆ ಹೋದರೆ ಏನು, ಜನ ಜಮಾಯಿಸಿದ್ದು ಆಕೃತಿ ಎದುರುಗಡೆ ನಿಂತಿದ್ದ ಪಾನಿಪುರಿಯವನ  ಬಳಿ -ತಿನ್ನಲು.
ಮೊದಲೆಲ್ಲ ನಾನು ಪುಸ್ತಕಗಳು ಬೇಕಾದರೆ ಸಪ್ನ ಬುಕ್ ಹೌಸ್, ಗಾಂಧಿನಗರಕ್ಕೆ ಹೋಗುತ್ತಿದೆ, ತಪ್ಪಿದ್ದಲ್ಲಿ, ಅಪರೂಪಕ್ಕೆ ಅಂಕಿತ  - ಗಾಂಧಿ ಬಜಾರ್.ಈಗ ನಮಗೆ ಆಕೃತಿ ಬುಕ್ಸ್ ಮನೆ ಬಳಿಯಾಗುತ್ತೆ, ಹಾಗು ಇಲ್ಲದ ಪುಸ್ತ್ತಕಗಳನ್ನು ಗುರು  ತಂದು ಕಾಯ್ದಿರಿಸುತ್ತಾರೆ. ಹಾಗಾಗಿ ಇತ್ತೀಚಿಗಿನ ಆರು ತಿಂಗಳಲ್ಲಿ ಅವರಿಂದ ಹಲವಾರು ಪುಸ್ತಕಗಳನ್ನು ಖರೀದಿಸಿದ್ದೇವೆ
 ನನಗೆ ಬೇಕಾದ ಎರಡೂ ಪುಸ್ತಕ ಅಲ್ಲಿನ ಸಹಾಯಕರು ಬೇಗನೆ ತೆಗೆದು ಕೊಟ್ಟಿದ್ದರಿಂದ ಅದನ್ನು ಬಿಲ್ಲಿಂಗ್ ಮಾಡುವಲ್ಲಿ ಹೋಗಿ ಒಯ್ದು ಇಡಬೇಕೆಂದು ತಿರುಗಿದಾಗ ಜಯಂತ ಕಾಯ್ಕಿಣಿಯವರ 'ಚಾರಮಿನಾರ್' ಪುಸ್ತಕ ಕಣ್ಣಿಗೆ ಬಿತ್ತು, ಸರಿ ಮೂರೆ ಮೂರು ಪುಸ್ತಕ, ಮನೆಯಲ್ಲಿ ಇನ್ನು ಪುಸ್ತಕ ಇಡಲು ಜಾಗ ಇಲ್ಲ ಅಂತ  ಅತ್ತ ಇತ್ತ ನೋಡದೆ ಬಿಲ್ಲಿಂಗ್ ಮಾಡುವಲ್ಲಿ ಹೋಗಿ ಪುಸ್ತಕಗಳನ್ನು ಇಟ್ಟೆ. ನಮ್ಮ ರಾಯರು ಆ ಮೂಲೆಯಲ್ಲಿ ಇದ್ರು. ಆಯ್ತಾ ನಿಂದು ಅಂತ ಕೇಳಿದ್ರು ನಾನು ಹೂಂ ಅಂದೆ. ನಾವು ಹೋದಾಗ ಗುರು ಅಲ್ಲಿರಲಿಲ್ಲ. ಎದುರಿನ ಕಪಾಟಿನ ಬಳಿ ಬಂದಾಗ, 'ಏ, ನಮ್ಮಲ್ಲಿ ದೇವುಡು ಅವರ ಯಾವ ಪುಸ್ತಕಗಳಿಲ್ಲ ಎಂದು ಕೇಳಿದರು. ನಾನು ಅವರ ಹೆಸರು ಇವತ್ತೆ ಕೇಳ್ತಿರೋದು ಅಂತಂದೆ. ಚೆನ್ನಗಿರುತ್ತೆ ನೀನು ಓದಲೇ ಬೇಕು ಅಂದ್ರು. ನಮ್ಮ ಪಾಡಿಗೆ ನಾವು ಪುಸ್ತಕ ತೆಗೆದುಕೊಂಡು ಬರ್ತಿದ್ವಿ. ಅಷ್ಟ್ರರಲ್ಲಿ ನಮ್ಮ ಗುರು ಅವರ ಸವಾರಿ ಚಿತೈಸಿತು. ಮತ್ತೆ ಸುಮ್ಮನಿದ್ದರಾ? ಇಲ್ಲ. ಮಲ್ಲಿಕಾರ್ಜುನ್ ಮನ್ಸೂರ್ ಅವರ ಸಿ.ಡಿ ಹಾಕಿಬಿಟ್ರು...ಸೈ...ಪುಸ್ತಕಗಳ ಜತೆ ಒಡನಾಡುವಾಗ ಹಿನ್ನೆಲೆಯಲ್ಲು ಒಳ್ಳೆ ಮ್ಯುಸಿಕ್ ಸಿಸ್ಟಂ ನಿಂದ ಚೆಂದದ ಕ್ಲಾಸಿಕಲ್ ಸಂಗೀತ ಕೇಳುವುದು ಏನು ಮಧುರ ಅನುಭವ ಗೊತ್ತ? ನಮ್ಮ ರಾಯರು ನನ್ನ ಇರುವನ್ನು ಮರೆತು, ಸಂಗೀತ ಕೇಳ್ತಾ ಕೇಳ್ತಾ , ನಾಗರಹಾವಿನ ತರಹ ತಲೆ ಓಲಾಡಿಸುತ್ತ, ಒಟ್ಟಿಗೆ ಹದಿನಾಲ್ಕು ಪುಸ್ತಕ ಎರಡು ಕನ್ನಡ ಸಿನಿಮಾಗಳ ಡಿವಿಡಿ ಕೊಂಡು ಬಿಟ್ಟರು. 
ನಾನು?? ನನಗೆ ಕಾಲು ಮಂಡಿ ನೋವು ಶುರು ಆಗಿದೆ. ಅಮ್ಮನ ಮನೆಗೆ ಹೋದಾಗ ಅಮ್ಮ ಬಲವಂತ ವಾಗಿ ಡಾಕ್ಟರ್ ಬಳಿಗೆ ಕರೆದೊಯ್ದಿದ್ದರು. ಬ್ಲಡ್ ಟೆಸ್ಟ್ ಮಾಡ್ಸಿದಾಗ ಸಿಕ್ಕಾಪಟ್ಟೆ ಲೋ ಹೇಮೋಗ್ಲೊಬಿನ್ ಮತ್ತೆ ಲೋ ಕ್ಯಾಲ್ಶಿಯಮ್ ಲೆವೆಲ್ ಅಂತ ಕೂಡಲೆ ಔಷಧಿ ಇನಜೆಕ್ಷನ್ ಶುರು ಮಾಡಿದರು. ಇಷ್ಟು ವರ್ಷ ಯಾವುದೇ ಕಾಯಿಲೆ ಇಲ್ಲದೆ, ಔಷಧಿ ತೆಗೆದುಕೊಂಡಿದಿಲ್ಲದೆ ಈಗ ಔಷಧಿ ಇಂಜೆಕ್ಷನ್ ನನ್ನನ್ನು ಹಿಂಡಿ ಹಿಪ್ಪೆ ಮಾಡಿವೆ. ಸುಸ್ತ್ತಾಗ್ತಿದೆ. ಕಾಲು ಮಂಡಿ ನೋವು ಇದಕ್ಕಿಂತ ಎಷ್ಟೋ ವಾಸಿ...ಸುಮಾರು ಹೊತ್ತು ನನಗೆ ನಿಲ್ಲಲು ಆಗುವುದಿಲ್ಲ, ಅದಕ್ಕೆ ನಾನು ಅಲ್ಲಿದ್ದ ಕುರ್ಚಿ ಮೇಲೆ ಸುಮ್ಮನೆ ಹಾಡು ಕೇಳುತ್ತ, ಪಕ್ಕದಲ್ಲಿದ್ದ ಪುಸ್ತಕಗಳನ್ನು ಎತ್ತಿ ಮಗುಚುತ್ತ ಇನ್ನೊಂದೆರಡು ಇಂಗ್ಲಿಶ ಪುಸ್ತಕಗಳನ್ನು ಎತ್ತಿಟ್ಟೆ.
ರಾತ್ರಿ ಮಲಗುವ ಮುನ್ನ, ಹಾಲು ಕುಡಿಯುತ್ತ (ಅದಕ್ಕೂ ಬೆರೆಸಲುಲು ಏನೋ protein ಪುಡಿ)  ಸುಮ್ಮನೆ ಅನುದಿನದ ಅಂತರಗಂಗೆ ಎತ್ತಿಕೊಂಡೆ. ಓದುತ್ತ  ಓದುತ್ತ ಸಮಯ ಸರಿದದ್ದೆ ಗೊತ್ತಾಗಲಿಲ್ಲ. ಸಾಧಾರಣವಾಗಿ ನನ್ನಲ್ಲಿ ಕೂತುಹಲದ ಸ್ವಭಾವವಿಲ್ಲ. ಪ್ರತಿಭಾ ಅವರ ಕೆಲ ಕವನಗಳನ್ನು ಓದಿ ಇಷ್ಟ ಪಟ್ಟಿದೆ. ಹೆಣ್ಣಿನ ತುಮುಲಗಳನ್ನು ಹೇಗೆ ಕಾವ್ಯ ರೂಪದಲ್ಲಿ ಬೀಡು ಬೀಸಾಗಿ, ನಿರ್ಭೀಡೆಯಿಂದ ಬರೆಯುತ್ತಾರಲ್ಲ್ವೇ ಎಂದು. ರಾತ್ರಿ ಎರಡು ಗಂಟೆ ಹೊತ್ತಿಗೆ ಶ್ರೀಕಾಂತ ಆವಾಜ್ ಹಾಕಿದರು. ಲೈಟ್ ತೆಗಿತೀಯಾ ಹೆಂಗೆ? ಅಂತ. ಬೆಳಿಗ್ಗೆ ಬೇಗನೆ ಹಾಲು ತಂದು ಕಾಯಿಸುತ್ತ, ಹಾಲು ಕೊತಕೊತನೆ ಕುದಿದು, ಅರ್ಧದಷ್ಟಾಗಿ ಬಿಟ್ಟಿತ್ತು. ಆ ದಿನ ಉಪ್ಪಿಟ್ಟು. ಒಗ್ಗರಣೆಯಲ್ಲಿ ರವೆ ಹಾಕಿ ಹುರಿದಿದ್ದೆ ಹುರಿದಿದ್ದು ಯಾಕೆಂದರೆ ಎಡಗೈ ನಲ್ಲಿ ಬುಕ್ಕು. ನೆಕ್ಸ್ಟ್ ಚ್ಯಾಪ್ಟರ್ ನಲ್ಲಿ ಏನಾದರೂ ಹೊಸದು ಬರೆದಿದ್ದಾರ ಅಂತ...ಸುಮಾರು ಸಮಯ ಆಗಿತ್ತು ಈ ತರಹ ಓದದೆ...
ವಕ್ರದಂತೆ ಎಪಿಸೊಡ್ ನಾನು ಮೊದಲು ಓದಿದ್ದು ಮತ್ತು ಇದನ್ನು ಓದಿ ಪ್ರಭಾವಿತಳಾಗಿ ನಾನು ಪುಸ್ತಕ ತೆಗೊಂಡಿದ್ದು. i am a bit self conscious about my crooked nose.. ಬಾಸ್ಕೆಟ್ ಬಾಲ್ ಆಟ ಆಡುವಾಗ ಮೂಗಿನ cartilage ಗೆ ಪೆಟ್ಟಾಗಿ ಸ್ವಲ್ಪ shift ಆಗಿದೆ..ನೇರಕ್ಕಿಲ್ಲ ನನ್ನ ಮೂಗು..:-) ಹಾಗಾಗಿ ಯಾರೂ ನನಗೆ 'ನಿನ್ನ ಮೂಗಿನ ನೇರಕ್ಕೆ ಮಾತಾಡಬೇಡ' ಅನ್ನುವ ಹಾಗಿಲ್ಲ :-)
ಮತ್ತೆ i salute the amazing courage under pressure, she has shown when her husband was ill and had to be hospitalized in Mumbai. ಬೆಂಕಿ ತಗುಲಿ ಅದಕ್ಕೆ ಟ್ರೀಟ್ ಮೆಂಟ್ ತೆಗೊಳ್ಳುವಾಗ  ಪರಿಸ್ಥಿತಿಯನ್ನು ತುಂಬ ಸ್ಪೋರ್ಟಿವ್ (anonymous Ajay help pls for the kannada word)ಆಗಿ ತೆಗೆದುಕೊಂಡಿದ್ದಾರೆ.  Other than that the subject of love and her hankering after'true love' made a disappointing read.
ಪುಸ್ತಕದ ತುಂಬ 'ನಿಜ' ಪ್ರೀತಿಯ ಹುಡುಕಾಟ, ಆತ್ಮಕತೆ ಅಂದ್ರೆ ಇಷ್ಟೇನಾ ಅನ್ನಿಸಿತ್ತು. ನನಗೆ ತುಂಬ ನಿರಾಸೆ ಆಯ್ತು.ಅದರಲ್ಲಿನ ಕವನಗಳನ್ನು ಬಿಟ್ಟರೆ,its an ok ok book. but then i dont know what i was looking for'.  ಖಂಡಿತ ಮೋಡಿ ಮಾಡುವ ಬರಹ ಶೈಲಿಯಿದೆ ಅವರಲ್ಲಿ,
ಅವರೆ ಪುಸ್ತಕದಲ್ಲಿ ಹೇಳಿಕೊಂಡ ಹಾಗೆ -ಅವರ ಕವನಗಳೆ ಅವರ ಆತ್ಮಕತೆ...ಅದೇ ಹೆಚ್ಚು powerful/intense
ಇದೆಲ್ಲ ನನ್ನ ಸ್ವಂತ ಅಭಿಪ್ರಾಯ ಅಷ್ಟೆ, ನನಗನ್ನಿಸಿದ್ದು. 
ಮತ್ತೆ ನನ್ನ ಆಪ್ತ ಸ್ನೇಹಿತ/ತೆಯರ, ಪರಿಚಯದವರ (Facebook) circle ನಲ್ಲಿ guessing games ಶುರು ಆಗಿದೆ..ಅವರು ಅವರಾಗಿರಬಹುದಾ...ಬಹುಶ: ಕನ್ನಡದಲ್ಲಿ ಬೋಲ್ಡ್ ಬರಹ ಇದಿರಬಹುದೇನೋ? (ಅಂದರೆ ನಾನು ಓದಿರೋದ್ರಲ್ಲಿ) ನನ್ನ ಕನ್ನಡ ಪುಸ್ತಕದ ಓದಿಗೆ ನಾನು ಶ್ರೀಕಾಂತ ಬಿಟ್ಟರೆ ಇನ್ನೆರಡು ಮಿತ್ರರ ಮೇಲೆ ಅವಲಂಬಿತೆ .ಮತ್ತೆ ಹೆಚ್ಚು ಓದಿಲ್ಲ ನಾನು...my knowledge of kannada literature is very limited.
ಬಟ್ ಅವರ ಕವಿತೆ ಬಗ್ಗೆ ದುಸರಾ ಮಾತೇ ಇಲ್ಲ. ಐ ಯಾಮ್ totally ಫಿದಾ!
ಈ ಸಾಲು ಯಾಕೋ ನನಗೆ ತುಂಬಾ ಇಷ್ಟ..ತುಂಬ ಸಲ ಓದಿ ಕೊಂಡೆ: ಸಂಯಮದ ಗೂಟ ಕಿತ್ತು ಓಡಿದ ನಿಗ್ರಹದ ಕುದುರೆ..(ಅರ್ಥವಾಗುವುದು ಹೇಗೆ ಭಾಗದಲ್ಲಿ)
ಅನುದಿನದ ಅಂತರಗಂಗೆ ಪುಸ್ತಕ ನೋಡಿ ಆಕೃತಿಯಲಿ  ನನ್ನ -ರಾಯರ ಸಂಭಾಷಣೆ ಕುಛ್ ಹೀಗಿತ್ತು
"Why this book,is she your friend?" (ವಸುಧೇಂದ್ರ ,ಚೇತನಾ ತೀರ್ಥಹಳ್ಳಿ  ಫ್ರೆಂಡ್ ಅಂತ ಅವರ ಪುಸ್ತಕ ತೆಗೆದುಕೊಳ್ಳುತ್ತೇನೆ. ಅದಕ್ಕೆ ಕೇಳಿರಬಹುದು ಪ್ರಶ್ನೆ, ಆದರೆ ವಸುಧೇಂದ್ರರ ಬರಹದ ಬಗ್ಗೆ ನಾನು ಇಷ್ಟ ಪಡಲು ಶ್ರೀಕಾಂತ ಕಾರಣ...ನಮ್ಮಮ್ಮ ಅಂದ್ರೆ ನನಗಿಷ್ಟ ಅವರೆ ತಂದು ಕೊಟ್ಟು, ಉಳಿದದ್ದನ್ನೆಲ್ಲ -ಅಂದರೆ ವಸು ಬರೆದಿದ್ದು, ಹಾಗೂ ಛಂದ ಪ್ರಕಾಶನದಿಂದ ಹೊರಬಂದ ಪುಸ್ತಕ ಗಳು - 'ಗುಣ' ಕಾದಂಬರಿ ಮತ್ತು ಹಕೂನಮಟಾಟಾ ಬಿಟ್ಟು- ಎಲ್ಲ ನಾನೆ ತೆಗೆದುಕೊಂಡು ಬಂದದ್ದು, ಮತ್ತು ಚೇತನಾ ಬರಹ ನನಗೆ ಅವಧಿಯಲ್ಲಿ ಪರಿಚಯವಾಗಿದ್ದು) :-)
"no"
"is it an impulsive buying", everybody is buying this book so i have to buy - kind of feeling??
"no, a few parts of the book were reproduced in Kendasampige. i liked what i read. shall i buy it or not?"
"no no go ahead "
ನನ್ನ ಓದು ಮುಗಿದ ಮೇಲೆ ಪುಸ್ತಕ ಟೀ ಪೋಯ್ ಮೇಲೆ ಇಡುವಾಗ 'ಹೇಗಿತ್ತು' ಅಂತ ಕೇಳಿದರು...ನಾನು 'Ok-ok' ಅಂದೆ ...ಅವರು 'ಹೂಂ' ಅಂದರು. ಅದೇ ನಾನು ಅವರ ಜಾಗದಲ್ಲಿದ್ದರೆ 'i cautioned you' ಅಂತ ನಾಲ್ಕಾರು ಸಲ ಆದರೂ ಹೇಳ್ತಿದ್ದೆ :-)
ಈಗ ಅವರು ಓದ್ತಿದ್ದಾರೆ ಈ ಪುಸ್ತಕ. ಅದರ ಬಗ್ಗೆ ಏನನ್ನುತ್ತಾರೆ ನೋಡೋಣ...
ಸಧ್ಯ ನನ್ನ ಔಷಧಿಗಳೆಲ್ಲ ಖಾಲಿ.ಮಂಡಿ ನೋವು ಗಾಯಬ್. ಆದರೂ ಆ ಡಾಕ್ಟರ್, ಅಮ್ಮನಿಗೆ ಸಿಕ್ಕಿದಾಗ ಅವಳಿಗೆ ಬೆಂಗಳೂರಿನಲ್ಲಿ ಇನ್ನೊಂದು ಸಲ ಚೆಕ್ ಅಪ್ ಮಾಡಲಿಕ್ಕೆ ಹೇಳಿ ಅಂದಿದ್ದಾರಂತೆ...ಡಾ ಅವರಿಗೆ ವಯಸ್ಸಗಿದೆ, ಮಾತ್ರವಲ್ಲ ಅವರಿಗೆ ಪೇಶೆಂಟ್ಸ್ ಯಾವಾಗಲೂ ಕಿಕ್ಕಿರಿದು ತುಂಬಿರುತ್ತಾರೆ, ಅಂತದ್ದರಲ್ಲಿ ನೆನಪಿನಿಂದ ನನಗೆ check-up ಮಾಡಿಸಲು ಹೇಳಿದಾರಲ್ಲ?? ಆಶ್ಚರ್ಯವಾಯಿತು. anyways will go in a day or two..
ನಾನಂತೂ ಫುಲ್ಲೀ ಎಂಜಾಯಿಂಗ್...ನೀವು?...ಒಂದೆರಡು ಜೋರಾದ ಮಳೆ ಬಂದ್ರೆ ಇನ್ನಷ್ಟು ಗಮ್ಮತ್ತಾಗುತ್ತಿತ್ತು....ಬೋಂಡಾ ತಿನ್ನುತ್ತಾ..ಟೀ ಕುಡಿಯುತ್ತ....
ಅಂದ ಹಾಗೆ ನಾನೇನಾದರೂ ಆತ್ಮಕತೆ ಬರೆದರೆ ಅದರಲ್ಲಿ ತುಂಬ my quest in hiring a cook ಅಂತಿರುತ್ತೇನೋ? ಮೊದಲೆಲ್ಲ , ಅಂದರೆ when i was younger, ಸ್ವಂತ ಮನೆ, ಕೈ ತುಂಬ ದುಡ್ಡು, ಓಡಾಡಲು ಕಾರು ಇವೆಲ್ಲ ಇದ್ದರೇನೆ ಸುಖ ಅಂದುಕೊಂಡಿದ್ದೆ. ಈಗ I am contented as i am except that i want a cook.. ನನಗೆ ಒಬ್ಬ ಅಡಿಗೆಯವಳು ಇದ್ರೆ ಅದೇ ಸುಖ ಇರಬಹುದೇನೋ ಅನ್ನಿಸುತ್ತಿದೆ..what says??
ನಾಳೆಯಿಂದ ಯು. ಆರ್. ಅನಂತಮೂರ್ತಿಯವರ ಪ್ರೀತಿ-ಮೃತ್ಯು-ಭಯ....ಆ ಪುಸ್ತಕದ ಮುಖಪುಟ ಒಂದತರಹ ಚೆನ್ನಾಗಿದೆ, ಬಳಸಿದ ಪೇಪರ್ ಕೂಡ...nice feel ಇದೆ...ಆ ಮೇಲೆ ದೇವುಡು ಅವರ 'ಮಹಾಬ್ರಾಹ್ಮಣ'...ಬಹುಶ: ಇದನ್ನು ತೀರ್ಥಹಳ್ಳಿಗೆ ಒಯ್ಯುತ್ತೇನೆ...ತೋಟದಲ್ಲಿ ಮರದ ಕೆಳಗೆ, ಅಥವ ಕೊಳದ ಬಳಿ ಕೂತು ಓದಲು...
(ಓಹ!! ರಾಯರು ಅ.ಅ. ಸ್ವಲ್ಪವೆ ಓದಿ, ಅದನ್ನು ಬಿಟ್ಟು ಈಗ 'ನನ್ನ ತೇಜಸ್ವಿ' ಎತ್ತಿಕೊಂಡಿದ್ದಾರೆ and he is totally engrossed in that:-))
ಈ ತಿಂಗಳಲ್ಲಿ 7ಪೋಸ್ಟ್...ನನಗೇ ಬೇಜಾರು..ಇನ್ನು ಸ್ವಲ್ಪ ದಿನ ಬ್ಲಾಗ್ ಗೆ ಬ್ರೇಕ್....
ನೀವು ಯಾವ್ಯಾವ ಪುಸ್ತಕ ಓದಲಿದ್ದೀರಿ/ಓದಿದ್ದೀರಿ/ ಓದುತ್ತಿದ್ದೀರಿ..ನನ್ನ ಜತೆ share ಮಾಡಿ..

:-)


June 19, 2012

ಗೋಳಿಬಜೆ ಅಥವ ಮಂಗ್ಳೂರ್ ಬೋಂಡ

this is for my face book-  friend Veena Shivanna


Ingredients
2 ಕಪ್ ಮೈದಾ
1 ದೊಡ್ಡ ಚಮಚ ಕಡ್ಲೆ ಹಿಟ್ಟು
1/2 ಕಪ್ ಮೊಸರು
1 ದೊಡ್ಡ ಚಮಚ ಸಕ್ಕರೆ
1/2 ಟೀ ಚಮಚ ಸೋಡಾ ಪುಡಿ
ತುಂಬ ಹಣ್ಣಾದ ಬಾಳೆಹಣ್ಣು (optional)
3 ಹಸಿಮೆಣಸಿನ ಕಾಯಿ, ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು, ಸಣ್ಣ ತುಂಡು ಶುಂಠಿ ಇವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ ನೀರು ಬೆರೆಸಿ, ಆ ಮೇಲೆ ಸೋಸಿ.ಬಾಳೆಹಣ್ಣನ್ನೂ ಮಿಕ್ಸಿಯಲ್ಲಿ ಹಾಕಿ ತಿರುವಿ 
ಇದಕ್ಕೆ ಸಕ್ಕರೆ, ಉಪ್ಪು, ಸೋಡ ಪುಡಿ, ಮೊಸರು,ಬಾಳೆಹಣ್ಣು ಇವನ್ನೆಲ್ಲ ಕ್ರಮವಾಗಿ ಹಾಕಿ, ಇದಕ್ಕೆ ಮೈದಾ ಕಡಲೆ ಹಿಟ್ಟನ್ನು ಹಾಕಿ ಗಂಟಾಗದಂತೆ ಕಲಿಸಿ. ಮಿಶ್ರಣ ಇಡ್ಲಿ ಹಿಟ್ಟಿಗಿಂತ ದಪ್ಪವಾಗಿರಲಿ. 5 ನಿಮಿಶ ಹಾಗೆ ಇಡಿ.
ಬಿಸಿ ಎಣ್ಣೆಯಲ್ಲಿ, ಒದ್ದೆ ಕೈನಿಂದ ಹಿಟ್ಟನ್ನು ಉಂಡೆ ಮಾಡಿ ಹಾಕಿ. ಕೆಂಪಾಗುವ ತನಕ ಕರಿಯಿರಿ...
ತಯಾರು ಮಾಡಿ ನಮ್ಮನ್ನೆಲ್ಲ ಕರೆಯಿರಿ...ತಿನ್ನಕ್ಕೆ...
ಚಟ್ನಿಗೆ ನಾನು fresh ಕಾಯಿ, ಸಣ್ಣ ಚೂರು ಹುಣಸೆ ಹುಳಿ, ಉಪ್ಪು, ಕೊತ್ತಂಬರಿ ಸೊಪ್ಪು...ಮಿಕ್ಸಿ ಯಲ್ಲಿ ಹಾಕಿ ರುಬ್ಬಿ. ಚಟ್ನಿ ರೆಡಿ...
(ಇವತ್ತು ಬೋಂಡಾಗೆ ಸ್ವಲ್ಪ ಜೀರಿಗೆ ಕೂಡ ಹಾಕಿದ್ದೆ ಹಣಿಮೆಣಸಿನಕಾಯಿ ಜತೆ ರುಬ್ಬುವಾಗ)
:-)

June 17, 2012

ಬಾಳೆ ಮೋತೆ ಚಟ್ನಿ

ನಮ್ಮ ತೋಟದಲ್ಲಿನ ಒಂದು ಬಾಳೆಗಿಡ


ಒಂದು ಬಾಳೆ ಮೋತೆ, , ಕಾಯಿ ತುರಿ, ಕೆಂಪು ಮೆಣಸು, ಸಾಸಿವೆ, ಜೀರಿಗೆ, ಹುಣಸೆ, ಉಪ್ಪು , ಬೆಲ್ಲ
ಮಧ್ಯದಲ್ಲಿರುವ ಹೂಗಳನ್ನೂ ಚಟ್ನಿಗೆ ಬೆರೆಸಬಹುದು

ಮೊದಲಿಗೆ ಬಾಳೆ ಮೋತೆಯ ಹೊರಗಿನ ಕವಚಗಳನ್ನೆಲ್ಲ ತೆಗೆಯುತ್ತ ಹೋಗಿ ಕೊನೆಯಲ್ಲಿ ಹೀಗಿರುವ (ಚಿತ್ರದಲ್ಲಿದ್ದಂತೆ) 
ಸಿಗುತ್ತದೆ.


ಅದನ್ನು ಸಣ್ಣಕ್ಕೆ ಕತ್ತರಿಸಿ ನೀರಿನಲ್ಲಿ ಹಾಕಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ ಸಾಸಿವೆ ಹಾಗಿ ಸಿಡಿಸಿ. ಕೆಂಪು ಮೆಣಸಿನಕಾಯಿ ಹಾಕಿ, ಆಮೇಲೆ ನೀರಿನಿಂದ ಹಿಂಡಿತೆಗೆದ ಬಾಳೆಮೋತೆ ಚೂರುಗಳನ್ನು ಬೆರೆಸಿ, ಕೊನೆಯಲ್ಲಿ ಕಾಯಿ ತುರಿ ಬೆರೆಸಿ. ಸ್ವಲ್ಪ ಬಿಸಿಯಾದ ಮೇಲೆ ಕೆಳಗಿಡಿ. ತಣ್ಣಗಾದ ಮೇಲೆ ಇದಕ್ಕೆ ಹುಣಸೆ ಹಣ್ಣು, ಉಪ್ಪು, ಬೆಲ್ಲ ಹಾki ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಚಟ್ನಿ ರೆಡಿ.


ಕೊತ್ತಂಬರಿ ಸೊಪ್ಪು ,ಫೋಟೊ ತೆಗೆಯುವಾಗ ಸುಮ್ಮನೆ contrast ಇರಲಿ ಅಂತ ಇಟ್ಟಿದ್ದು..:-)
(ಬಾಳೆ ಮೂತಿ/ Inflorescence /banana heart  ಸಹ ಅನ್ನುತ್ತಾರೆ..)
ಬಾಳೆಗಿಡ ಒಂದು ತರಹ ಕಲ್ಪವೃಕ್ಷ ವೇ (though Vruksha means tree) ಅದರ ಎಲ್ಲ ಭಾಗಗಳು ಉಪಯೋಗಕ್ಕೆ ಬರುವಂತಹುದು. ಎಲೆ, ದಿಂಡು, ನಾರು, ಹೂ, ಹಣ್ಣು etc...

ಫೊಟೊ : ನಿಹಾರಿಕಾ ಶೆಣೈ

June 13, 2012

What do you think

I meet this lady on my daily walks. A PYT working woman. First time we met she said she was glad to see me always having a smile on my face(well i was not aware of that fact) But i  warned her that i have been medically advised not to take a brisk walk. she said no problem. so she accompanies me on slow walk. after my four rounds of the garden i sit on the available bench. She goes for two more rounds of brisk walk. But yesterday she finished her walk with me and sat with me and suddenly started laughing. I knew there was something afoot when i met her that day..so i told her to come out with it..so this is what she told me...u will enjoy this:

my husband works for a multinational company and has the second most senior position. he is always in awe of his boss's wife. He will say 'she has joined music class, so you too join. She wore this colour dress today..u should buy one such coloured clothes, she has joined golf u too should..so this has been going on for a long time. last week he said i should purchase a bikini. i was wondering, now where did he see her in a bikini, he said his boss showed him the pictures on his cell phone. my husband comes home and tells me, 'u will look better than her in a bikini'. i put my foot down. i have been humoring him now for quite a long time and i said 'NO' i am not wearing one and he did not talk to me for a few days. today i was about to relent and buy a bikini after all, when i heard rumours from his office that the wife left him for somebody else. so as soon as he came home i asked him'should i also have an affair now' he was angry and asked me what  that was supposed to mean.
so i told him u always make me emulate her example..so now she is having an affair..should i too.. but i did not let it at that..'did u not think that i could do the same thing. your boss is good looking, he has three houses in the city, every weekend he goes out of town, once a year he takes his wife abroad for tour, he gifted his wife a  diamond necklace for his wedding anniversary...did i at any point of time tell you, you should do the same thing?

you should have seen his face...finally he said, 'sorry i did not think in those lines, i am sorry. you should have warned me about my nature before hand' so i have been smiling and smiling since evening.

haha what say ladies? i think she needs a standing ovation...

i laughed with her and warned her not to take things too far...to let it go....


( have met many people who always compare with others be it about somebody's household/children etc..) Here is an instance
Many years ago we were in Udupi. Since my girls had to cross a busy highway i used to drop them, and fetch them from school. Since the house was nearby we used to walk. I was accompanied by a few other parents and some of the children were in Malavika's class. Once after the mid-term examinations they have given the math paper and the parents were dicussing/comparing their marks with the other classmate's parents. Two kids from Malavika's class had got more than 90 marks. Malavika did not say anything to me, nor did i ask her. But other parents were curious. they asked her ,why are you quiet malavika? how much did you score? She looked at me and them and said 100 on 100..so there was some screaming back patting etc.. and they asked 'what and why did not say so before' she said cooly what's the big deal...:-) a hug for her...But then what do you think the parents started? scolding their own kids for not getting a 100...
Wish people would stop comparing.

(just a small post in a lighter vein)

:-)

June 7, 2012

ಜಿ. ಕುಮಾರಪ್ಪ ಒಂದು ನೆನಪು

ಇಷ್ಟರವರೆಗೆ ನನ್ನ ಜೀವನದಲ್ಲಿ ಕೆಲವೇ ಕೆಲವು ಸಾವುಗಳಿಂದ ನಾನು ವಿಚಲಿತಳಾಗಿದ್ದೇನೆ. ಜಿ. ಕುಮಾರಪ್ಪ ಅಂತಹವರಲ್ಲಿ ಒಬ್ಬರು. ಪರಿಚಯ ವಾಗಿ ಭೇಟಿಮಾಡಿ ಅವರೊಂದಿಗೆ ಕಳೆದಿದ್ದು ಒಂದೇ ದಿನ. ಆ ಒಂದು ದಿನದಲ್ಲೇ ಅವರು ಅತ್ಯಂತ ಆತ್ಮೀಯರಾದರು. ನಂತರ ನಮ್ಮ ಸಂಪರ್ಕ ಇ-ಮೈಲ್ ಮೂಲಕ. ಮತ್ತು ಯಾರಾದರೂ ಕಲಕತ್ತೆಗೆ ಹೋಗುತ್ತೇನೆ ಅಂದ ಕೂಡಲೆ ನಾನು ಜಿ. ಕುಮಾರಪ್ಪ ಅವರನ್ನು ಭೇಟಿಯಾಗಿ ಅನ್ನುತ್ತಿದ್ದೆ.
ಕುಮಾರಪ್ಪ ನವರೊಂದಿಗೆ ನಾವು.  left to right ಐದನೆಯವರು

ನಾವು ಗ್ಯಾಂಗಟಾಕ್ (Gangtok) ಹೋಗಬೇಕಾದರೆ ಮೊದಲು ಇಲ್ಲಿಂದ ಕಲಕತ್ತ. ಅಲ್ಲಿಂದ ಬಾಗಡೋಗ್ರಾ. ಕಲಕತ್ತಾದಿಂದ ದಿಂದ ಬಾಗಡೋಗ್ರಾದ ಫ್ಲೈಟ್ ಇದ್ದದ್ದೆ ಮರುದಿನ. ಹಾಗಾಗಿ ನಮಗೆ ಒಂದುವರೆ ದಿನದ ಅವಧಿಯಿತ್ತು ಕಲಕತ್ತೆಯಲ್ಲಿ ತಿರುಗಾಡಲು. ಸಾಲಿಮಠ ಕುಟುಂಬ ಮತ್ತು ನಾವು ಒಟ್ಟಿಗೆ ಹೋಗಿದ್ವಿ. ಬೆಂಗಳೂರಿನಿಂದ ನಾವು ಬೆಳಿಗ್ಗೆ 6.00 ಗಂಟೆಗೆ ಹೊರೆಟೆವು. 10.00 ಗಂಟೆಗೆ ನಾವು ನಮ್ಮ ಹೊಟಲ್ ರೂಮ್ ನಲ್ಲಿದ್ದೆವು. ಅಲ್ಲೇ ಹೋಟಲ್ ನಲ್ಲಿ ಬೆಳಗ್ಗಿನ ನಾಸ್ಟಾ ಮುಗಿಸಿ, ಅವರಿಂದ ಒಂದು ಟ್ಯಾಕ್ಸಿ ಬುಕ್ ಮಾಡಿಸಿಕೊಂಡು ಕಲಕತ್ತೆಯ ವಿಕ್ಟೋರಿಯ ಮೆಮೊರಿಯಲ್, ರೈಟರ್ಸ್ ಬಿಲ್ಡಿಂಗ್, ಸುಭಾಷಚಂದ್ರ ಬೋಸ್ ರ ಮನೆ, ಈಡನ್ ಗಾರ್ಡನ್ಸ್ ಮುಂತಾದ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿದೆವು.




Victoria Memorial
Eden Gardens

 ಮಧ್ಯಾಹ್ನ ಯಾವುದಾದರೂ ಒಳ್ಳೆಯ ವೆಜಿಟೇರಿಯನ್ ಹೋಟಲಿಗೆ ಕರೆದುಕೊಂಡು ಹೋಗುವಂತೆ ನಮ್ಮ ಡ್ರೈವರ್ ನಿಗೆ ಸೂಚಿಸಿದೆವು.
ಅಲ್ಲೆ ಹೋಟಲ್ ಒಂದರ ಬಳಿ ನಮ್ಮ ಗಾಡಿ ನಿಲ್ಲಿಸುವಾಗ ಪಕ್ಕದಲ್ಲೆ ಸಿಂಡಿಕೇಟ್ ಬ್ಯಾಂಕ್ ಕಂಡಿತು. ಸೈ..ಇವರಿಬ್ಬರೂ ಸಿಂಡಿಕೇಟ್ ಬ್ಯಾಂಕ್ ಎಕ್ಸ್ ಎಂಪ್ಲಾಯೀ ಗಳು, ಕೇಳ ಬೇಕಾ..ತವರುಮನೆಗೆ ಬಂದಷ್ಟು ಖುಶಿ. ನಮ್ಮವರು ಯಾರಾದರೂ ಇದ್ದಾರಾ ಅಂತ ಒಳ ಹೊಕ್ಕರು. ನಮ್ಮ ಹೊಟ್ಟೆ ತಾಳ ಹಾಕಿ, ಹೊಟ್ಟೆಯಲ್ಲಿನ ಹುಳ ಸತ್ತರೂ ಇವರಿಬ್ಬರ ಪತ್ತೆಯಿಲ್ಲ. ಅವರ ಸಂಭಾಷಣೆಯನ್ನು ನಾವು ಹೊರಗೆ ನಿಂತಲ್ಲೆ ಊಹಿಸಬಹುದಿತ್ತು..ಅವನು ಯಾವ ಬ್ರಾಂಚ ನಲ್ಲಿದ್ದಾನೆ, ಇವನಿಗೆ ಪ್ರೊಮೋಷನ್ ಸಿಕ್ತಾ, he is a good banker...ಅಂತೆಲ್ಲಾ. ಕೊನೆಗೂ ಹೊರ ಬಂದಾಗ ಅವರ ಜತೆ ಇಬ್ಬರು ಪರಿಚಯಸ್ಥರನ್ನೆ ಕರೆದುಕೊಂಡು ಬಂದರು. ಅವರೆ ನಮಗೆ ಒಳ್ಳೆಯ ಹೋಟಲ್ ಸೂಚಿಸಿ, ನಾವು ಕರ್ನಾಟಕದವರೆಂದು, ಅವರ ಬ್ಯಾಂಕ್ ನಲ್ಲಿ ಎಕೌಂಟ್ ಇರುವ ನ್ಯಾಷನಲ್ ಲೈಬ್ರರಿಯ ಕನ್ನಡ ವಿಭಾಗದ ಮೇಲ್ವಿಚಾರಕರಾದ ಶ್ರೀ ಜಿ ಕುಮಾರಪ್ಪನವರ ಫೋನ್ ನಂಬರ್ ಕೊಟ್ರು. ಊಟದ ನಂತರ ನಮ್ಮನ್ನು ಗ್ರಂಥಾಲಯದ ತನಕ ಕಳುಹಿಸಲು ಬಂದರು. ಗಾಡಿ ಪಾರ್ಕ್ ಮಾಡಿದಕಡೆಯಿಂದ ಕಾಲ್ನಡಿಗೆಯಲ್ಲೆ ಕ್ರಮಿಸುವಷ್ಟು ಹತ್ತಿರವಿತ್ತದು. ನಾವು ತಲುಪುವಷ್ಟರಲ್ಲಿ ಕುಮಾರಪ್ಪನವರು ಗ್ರಂಥಾಲಯದ ಹೊರಗೆ ನಮಗೋಸ್ಕರ ಕಾಯುತ್ತಿದ್ದರು. ವಿಸಿಟರ್ಸ್ ಬುಕ್ ನಲ್ಲಿ ನಮ್ಮೆಲರ ಹೆಸರನ್ನು ನೋಂದಾಯಿಸಿ ಒಳಗೆ ಹೋದೆವು.
ಮೊದಲು ಗ್ರೌಂಡ್ ಫ್ಲೋರ್ ಕವರ್ ಮಾಡಿದೆವು. ಅಲ್ಲಿ ಓದುಗರು ಬಂದು ಪುಸ್ತಕಗಳನ್ನು ಎರವಲು ಪಡೆಯಬಹುದು. ಪುಸ್ತಕಗಳನ್ನು ಯಾವ ರೀತಿಯಲ್ಲಿ categorise ಮಾಡಿದ್ದಾರೆ ಅಂತ ತೋರಿಸಿದರು. ಮೇಲಿನ ಅಂತಸ್ತುಗಳಿಗೆ ಹೋಗಲು prior ಪರವಾನಗಿ ಪಡೆಯಬೇಕು ಮತ್ತು ನಮ್ಮ ಜತೆ ಗ್ರಂಥಾಲಯದ ಸಿಬ್ಬಂದಿಯೊಬ್ಬರು ಇರಲೇಬೇಕು. ಆಂಗ್ಲಭಾಷೆಯ ಪುಸ್ತಕವಲ್ಲದೆ, ನಮ್ಮ ದೇಶದ ಹದಿನಾಲ್ಕು ಭಾಷೆಯ ಪುಸ್ತಕಗಳಿಗಾಗಿ ವಿಶೇಷ sections ಗಳಿವೆ. 
ಪುಸ್ತಕಗಳನ್ನು ಕಾಪಿಡುವ ಬಗ್ಗೆ, ಮೈಕ್ರೋ ಫಿಲ್ಮ್ಸ್ ಇಡುವ ಜಾಗ, ವೃತ್ತಪತ್ರಿಕೆ/ಮಾಸಪತ್ರಿಕೆ/ magazines ಮುಂತಾದವುಗಳಿಗೆ ವಿಶೇಷ ಕೊಠಡಿಗಳಿವೆ. ಹಳೆಯ original/handwritten manuscript ಗಳನ್ನಿಡುವ ವಿಶೇಷ ಗುಪ್ತ vault ಒಂದಿದೆ. ಅದರಳೊಗೆ ಯಾರನ್ನೂ ಬಿಡುವುದಿಲ್ಲವಾದರೂ ನಮಗೆ ಅಲ್ಲಿಗೆ ಹೋಗುವ ಸದಾವಕಾಶ ಸಿಕ್ಕಿತು. ನಾನಂತು ತುಂಬ ಭಯಭಕ್ತಿಯಿಂದ ಅದನ್ನೆಲ್ಲ ವೀಕ್ಷಿಸಿದೆ. ಅವರೂ ಒಂದುಚೂರು ಬೇಜಾರು ಪಡಕೊಳ್ಳದೆ ಸಾವಕಾಶವಾಗಿ ಎಲ್ಲವನ್ನೂ ನಮ್ಮಷ್ಟೆ ಕುತೂಹಲದಿಂದ ನಮಗೆ ವಿವರಿಸಿದರು. ನೆಲಮಾಳಿಗೆ, ಗ್ರೌಂಡ್ ಫ್ಲೋರ್ ನಿಂದ ಬೇರೆ ಬೇರೆ ಸೆಕ್ಷನ್ ಗಳಿಗೆ -ಒಟ್ಟಿಗೆ ಮೂರು ಅಂತಸ್ತುಗಳಿವೆ- ಟ್ರಾಲಿ ಲಿಫ್ಟ್ ಮೂಲಕ ಪುಸ್ತಕಗಳನ್ನು ಹೇಗೆ ಕಳುಹಿಸಲಾಗುತ್ತದೆ ಎಂಬುದನ್ನು  ಅವರು ಒಂದು ಪ್ರಾತ್ಯಕ್ಷಿಕೆ ಕೂಡ ಮಾಡಿ ತೋರಿಸಿದರು ನನ್ನ ಸಲುವಾಗಿ. ತಾಳೆಗರಿಯ ಮೇಲಿನ ಬರಹದಿಂದ ಡಿಜಿಟಲೈಸ್ಡ್ ವರ್ಶನ್ ನ ಪುಸ್ತಕಗಳನ್ನು ನೋಡುವ ಭಾಗ್ಯ ನಮ್ಮದಾಯಿತು. ವಿಶೇಷ ಪುಸ್ತಕಗಳ ಪ್ರತಿ ಪುಟವನ್ನು ಫೋಟೊಗ್ರಾಫ್ ಮಾಡಿ ಮೈಕ್ರೋ ಫಿಲ್ಮ್ ಮಾಡಿಡುವ system ಅಲ್ಲಿದೆ
ಅಲ್ಲಿದ್ದ ಅವರ ಸಹೋದ್ಯೋಗಿಗಳಿಗೆ ಬಂಗಾಲಿ ಭಾಷೆಯಲ್ಲೆ ನಮ್ಮನ್ನೆಲ್ಲ ಪರಿಚಯಿಸಿದರು. ಆಮೇಲೆ ಕೆಲ ಹೊತ್ತು ನಾವು ಅವರ ಚ್ಯಾಂಬರ್ ನಲ್ಲಿ ಸಮಯವನ್ನು ಕಳೆದೆವು. ಅವರು ಈಗಾಗಲೇ ಬಂಗಾಲಿಯಿಂದ ಕನ್ನಡಕ್ಕೆ  ಅನುವಾದ ಮಾಡಿದ್ದ, ಮಾಡುತ್ತಿರುವ ಪುಸ್ತಕಗಳನ್ನು ನಮಗೆ ತೋರಿಸಿದರು. ಕನ್ನಡದಿಂದ ಬೆಂಗಾಲಿಗೆ ಅನುವಾದ ಮಾಡಿದ್ದೀರ ಅಂತ ನನ್ನ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಅಷ್ಟರೊಳಗೆ ಟಾಪಿಕ್ ಚೈಂಜ್ ಆಗಿ ಕಲಕತ್ತ ಕನ್ನಡ ಸಂಘದ ಕಡೆ ಹೊರಳಿತ್ತು.
ಈ ಗ್ರಂಥಾಲಯದಲ್ಲಿ ಕನ್ನಡ ವಿಭಾಗ ಆರಂಭಿಸಿದ್ದು ಸನ್ 1963 ನಲ್ಲಂತೆ. ಪ್ರಸ್ತುತ ಅಲ್ಲಿ 33,000 ಸವಿರ ಕನ್ನಡ ಪುಸ್ತಕಗಳಿವೆ ಎಂದರು.
ಅವರು ಮೂಲತ: ಚಿತ್ರದುರ್ಗವರು. 20 ವರ್ಷಕ್ಕಿಂತಲೂ ಹೆಚ್ಚು ಸಮಯ ಕಲಕತ್ತೆಯಲ್ಲಿದ್ದು  ಬಂಗಾಲಿಯನ್ನು ತುಂಬ ಚೆನ್ನಾಗಿ ಮಾತನಾಡುತ್ತಾರೆ. ನಾವು ಬರುವುದು ಮೊದಲೇ ಗೊತ್ತಿದ್ದರೆ ನಾವು ಅವರಿಗೋಸ್ಕರ ಕಾಫಿ ಪುಡಿ ತರಬಹುದಿತ್ತು ಎಂದು ತಮಾಷೆ ಮಾಡಿದರು. ನಾನು ಮಾತ್ರ ಆ ವಿಷಯವನ್ನು ಮರೆತಿರಲಿಲ್ಲ. ನಮ್ಮ ಆಫಿಸ್ ನಿಂದ ಬೇರೆ ಸಹೋದ್ಯೋಗಿಗಳು  ಕಲಕತ್ತೆಗೆ ಹೋಗುವಾಗ ಕಾಫಿ ಪುಡಿಯನ್ನು ತೆಗೆದುಕೊಂಡು ಹೋಗಲು ಹೇಳಿದ್ದೆ.

ನಾವು ವಿನಿಮಯ ಮಾಡಿಕೊಂಡ ಮೊತ್ತ ಮೊದಲ ಮಿಂಚಂಚೆ
ಇತ್ತೀಚಿಗೆ ನಟರಾಜ ನನಗೆ ಫೇಸ್ ಬುಕ್ ನಲ್ಲಿ ಫ್ರೆಂಡ್ ಆಗಿದ್ದಾರೆ. ಅವರು ಕನ್ನಡಿಗರು ಕಲಕತ್ತೆಯಲ್ಲಿರುವವರು ಅಂದ ಕೂಡಲೆ ನಾನು ಕೇಳಿದ ಮೊದಲ ಪ್ರಶ್ನೆ ಕುಮಾರಪ್ಪ ನವರ ಪರಿಚಯ ಇದೆಯಾ ಎಂದು.
ನಾನು ಹುಟ್ಟಾ ಅಂತರ್ಮುಖಿ. ಪುಸ್ತಕಗಳೆ ನನ್ನ ಜಗತ್ತು ನನ್ನ ಆಪ್ತ ಮಿತ್ರರು. ಪುಸ್ತಕಗಳಿದ್ದರೆ ಮುಗಿಯಿತು ನನಗೆ ಊಟ ತಿಂಡಿ ಕೂಡ ಬೇಡ. ಮಾಲವಿಕ ಹುಟ್ಟಿದ ನಂತರ ಅಮ್ಮ ಬರೆದ ಪತ್ರಗಳಲೆಲ್ಲ 'ಓದುತ್ತಾ ಕೂರ ಬೇಡ, ಮಾಲವಿಕಳ ಜತೆ ಮಾತಾಡು, ಇಲ್ಲದಿದ್ದರೆ ಅವಳು ಮಾತನಾಡಲು ಕಲಿಯುವುದು ಹೇಗೆ' ಅನ್ನುವ ಒಕ್ಕಣೆ. ನನ್ನ ಪುಸ್ತಕ ಪ್ರೀತಿಯನ್ನು ನನ್ನ ಮಕ್ಕಳು ಹೊಂದಿದ್ದಾರೆ. ಯಾವುದಾದರು ರಜೆ ದಿನ ನಮ್ಮ ಮನೆಗೆ ಬಂದರೆ ನಾವು ನಾಲಕ್ಕೂ ಜನ ಬೇರೆ ಬೇರೆ ರೂಮ್ ನಲ್ಲಿ ಬೇರೆ ಬೇರೆ ಆಸನಗಳಲ್ಲಿ, ಶವಾಸನ, ಆರಾಮಾಸನ, ಹೊಟ್ಟೆಕೆಳಗಾಸನ ಮುಂತಾದ ಭಂಗಿಯಲ್ಲಿ ಪುಸ್ತಕ ಓದುವುದನ್ನು ನೀವು ಕಾಣಬಹುದು. ಅಡಿಗೆ ಮನೆಯೊಳಗೊಂಡು ನನ್ನ ಮನೆಯ ಪ್ರತ್ಯೇಕ ಕೋಣೆಯಲ್ಲೂ ನಾನು ಪುಸ್ತ್ಕಗಳನ್ನು ಇಟ್ಟಿರುತ್ತೇನೆ. ಆಂಗ್ ಸ್ಯೂ ಕಿ ಯಂತೆ ಎಲ್ಲಾದರೂ house arrest ಆದರೆ ಅಂತ ಭಯ ನನಗೆ. ಅದಕ್ಕೆ ನನ್ನ ಸುತ್ತ ಮುತ್ತಲೂ ಪುಸ್ತಕ.
ತುಂಬ ಚಿಕ್ಕವಳಿದ್ದಗ ನನಗೆ ಗ್ರಂಥಾಲಯದಲ್ಲಿ ಕೆಲಸ ಮಾಡಬೇಕೆಂಬ ಹಂಬಲವಿತ್ತು. ಹಾಗಾಗಿ ಸ್ವಾಭಾವಿಕವಾಗಿ ಈ ಗ್ರಂಥಾಲಯದಲ್ಲಿ ಕಳೆದ ಸಮಯವನ್ನು ನಾನು ಹೆಚ್ಚು ಇಷ್ಟಪಟ್ಟೆ, ಅಷ್ಟಲ್ಲದೆ ತಾನು ಒಬ್ಬ ಸಾಧಾರಣ ಅಲ್ಲಿ ನೌಕರಿಯಲ್ಲಿರುವವ ಅಂತ ಭಾವಿಸದೆ ಎಷ್ಟೊಂದು ಪ್ರೀತಿಯಿಂದ ಆಕರಾಸ್ಥೆಯಿಂದ  ಇಡೀ ಗ್ರಂಥಾಲಯವನ್ನು ತಮ್ಮ ಹೊಸ ಮನೆ ತೋರಿಸುವಂತೆ ತೋರಿಸಿದರು. ತುಂಬ ಅಭಿಮಾನ ಹೊಂದಿದ್ದಾರೆ ಕುಮಾರಪ್ಪನವರು ತಮ್ಮ ಕಾಯಕದ ಪ್ರತಿ .ನಮ್ಮ ಪ್ರಶ್ನೆಗಳಿಗೆ ಒಂಚೂರು ಬೇಸರಿಸದೆ ನಮಗೆ ಎಲ್ಲವನ್ನೂ ನಿಧಾನವಾಗಿ ವಿವರಿಸಿ ಹೇಳಿದರು. ಆದರೂ ಯಾಕೋ ಅವರಲ್ಲಿ ಹೇಳಿಕೊಳ್ಳಲಾರದ ನೋವಿದೆ ಅಂತ ನನಗೆ ಅನಿಸಿತು. (ಸುಮ್ನೆ ನನ್ನ intution.ಶ್ರೀಕಾಂತ ಇದನ್ನು ಓದಿದರೆ ನೀನೂ ನಿನ್ನ intutions ಊ ಅನ್ನುತ್ತಾರೆ ಖಂಡಿತ). ನನಗಂತು ಇನ್ನೊಮ್ಮೆ ಅಲ್ಲಿ ಹೋಗಲೆ ಬೇಕೆನಿಸಿದೆ. ಆದರೆ ಈಗ ಕುಮಾರಪ್ಪನವರು ಅಲ್ಲಿರುವುದಿಲ್ಲವ್ಲಲ್ಲ....
ಅವರ ಅಮೂಲ್ಯ ಸಮಯವನ್ನು ನಮಗೋಸ್ಕರ ಅವರು ಮೀಸಲಿಟ್ಟಿದ್ದಕ್ಕೆ ನಾವು ಅವರನ್ನು ವಂದಿಸಿದಾಗ, 'ಇಲ್ಲಿ ಕನ್ನಡ ಮಾತನಾಡುವವರು ಸಿಗುವುದೇ ಅಪರೂಪ, ಧನ್ಯವಾದಗಳನ್ನು ಹೇಳಬೇಡಿ ಅಂದರು. ನಾವು ಅರ್ಧದಿನ ಅವರ ಜತೆ ಇದ್ದಿದ್ದು ನಮ್ಮ ಸೌಭಾಗ್ಯ. ಬಂದ ನಂತರ ನಾನು ಅವರ ಜತೆ ಇ-ಸಂಪರ್ಕದಲ್ಲಿದ್ದೆ. ನನ್ನ ಸ್ನೇಹಿತೆ ಜ್ಯೋತಿ ಕಡಲಾಡಿಯವರು ನನಗೆ ಕುಮಾರಪ್ಪನವರು ಅನುವಾದ ಮಾಡಿದ ಬೇಬಿ ಹಾಲ್ದಾರ್ ಅವರ `ನೋವು ತುಂಬಿದ ಬದುಕು'  ಪುಸ್ತಕವನ್ನು ನಮ್ಮ ಮೊದಲ ಭೇಟಿಯ ಸವಿನೆನಪಿಗಾಗಿ ನೀಡಿದಾಗ ತುಂಬ ಸಂಭ್ರಮಪಟ್ಟು, ಮನೆಗೆ ಬಂದ ಕೂಡಲೆ ಅವರಿಗೆ ಮೈಲ್ ಕಳುಹಿಸಿದ್ದೆ. 'ಧನ್ಯವಾದಗಳು, ನಿಮಗೆ ನನ್ನಲ್ಲಿ ಎಷ್ಟೊಂದು ಅಭಿಮಾನ' ಅಂತ ಅವರು ಮರು ಮೈಲ್ ಕಳುಹಿಸಿದರು.


ಇವತ್ತು ಶ್ರೀಕಾಂತ ಪ್ರಜಾವಾಣಿ ಓದಿ, ಹೇ..ಕುಮಾರಪ್ಪ ತೀರಿಕೊಂಡ್ರಂತೆ ಅಂದಾಗ ಹೃದಯ ಕಿವುಚಿದ ಅನುಭವ. ಕಣ್ಣು ಹನಿಗೂಡಿದ್ದವು. ಮನೆಯಿಂದ ಎಲ್ಲರೂ ಹೊರಗೆ ಹೋದ ಮೇಲೆ ಸ್ವಲ್ಪ ಹೊತ್ತು ಒಬ್ಬಳೆ ಅತ್ತೆ. ಕೇವಲ 55 ವಯಸ್ಸು. ನಟರಾಜು ಅವರನ್ನು ಸಂಪರ್ಕಿಸಿದಾಗ ಅವರ ಅನಾರೋಗ್ಯದ ಬಗ್ಗೆ ಹೇಳಿಕೊಂಡಿದ್ದರಂತೆ. ಆದರೂ ಇದು ಶಾಕ್
ಗ್ರಂಥಾಲಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ಕಿಸಿ.

ಗ್ಯಾಂಗಟಾಕ್ ನಿಂದ ವಾಪಸ್ ಬರುವಾಗ ಇದೇ ರೂಟ್ ಆಗ ಹೌರಾ ಮೇಲ್ಸೇತುವೆ, ಕಾಲಿಘಾಟ್, ಬಿರ್ಲಾ ಪ್ಲ್ಯಾನೆಟೋರಿಯಮ್ ಮುಂತಾದನ್ನು ನೋಡಿದೆವು.
ಜಿ ಕುಮಾರಪ್ಪ ಅವರನ್ನು ನೆನಸುತ್ತ ನಮ್ಮ ಕಲಕತ್ತ ಟೂರ್ ಕೂಡ ನೆನಪಿಸಿದಂತಾಯಿತು.
ಕುಮಾರಪ್ಪ ಅವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತ
:-(

June 6, 2012

ಕಾರ್ಡ್ ನಲ್ಲಿ ಕತೆ ಮಾದರಿಯಲ್ಲಿ ನಂದೂ ಒಂದು

ಅತುಲ್ ಮನೆ ತಲುಪುವಾಗ ರಾತ್ರಿ 11 ಗಂಟೆ. ನಾಯಿ ಟೋಸ್ಟಿ ಬಿಟ್ಟರೆ ಅವನನ್ನು ಸ್ವಾಗತಿಸಲು ಯಾರೂ ಇಲ್ಲ. ಕೆಲಸದವರೂ ಕೂಡ. ಹಾಲ್ ನಲ್ಲಿ ಶೂ ಬಿಚ್ಚಿಟ್ಟು, ಅತುಲ್ ಟಿವಿ ಮುಂದಿದ್ದ ಆರಾಮ ಕುರ್ಚಿಯಲ್ಲಿ ಪವಡಿಸಿದ. ರಿಮೋಟ್ ನಿಂದ ಟಿವಿ ಆನ್ ಮಾಡಿ ಅಲ್ಲೆ ಪಕ್ಕದಲ್ಲಿದ ಮಿನಿ ಬಾರ್ ಕಡೆ ಹೋದ. ಎರಡು peg ಸ್ಕಾಚ್ ವ್ಹಿಸ್ಕಿ ಗೆ , ಕೆಲಸದವನು ಐಸ್ ಬಾಕ್ಸ್ ನಲ್ಲಿ ಅಣಿಮಾಡಿಟ್ಟ ಐಸ್ ನ ನಾಲ್ಕು ತುಂಡುಗಳನ್ನು ಗ್ಲಾಸ್ ಗೆ ಹಾಕಿ ಅದನ್ನು ತಿರುವುತ್ತ ಹುಶ್ ಎಂದು ಟಿವಿ ಮುಂದೆ ಕುಕ್ಕರಿಸಿದ. 11 ಗಂಟೆ ಎಂದ ಮಾತ್ರಕ್ಕೆ ಎಲ್ಲರೂ ಮಲಗಿದ್ದಾರಂತಲ್ಲ. ಹೆಂಡತಿ ತನ್ನ ಮುಖಕ್ಕೆ ಕ್ರೀಮ್ ಹಚ್ಚಿ, ಕೂದಲನ್ನು 100 ಸಲ ಬಾಚಣಿಕೆಯಿಂದ ಬಾಚಿ ಮಲಗುವಾಗ 12 ಆಗುತ್ತೆ. ಮಗಳು ಹೊಟ್ಟೆ ಮೇಲೆ ಮಲಗಿಕೊಂಡು ಅವಳ ರೂಮ್ ನಲ್ಲಿದ್ದ ಟಿವಿ ಯಲ್ಲಿ ಫಿಲ್ಮ್ ನೋಡುತ್ತ, ಮಗ ಫೋನ್ ನಲ್ಲಿ ಫ್ರೆಂಡ್ ಜತೆ ಮಾತಾಡುತ್ತ ಕಾಲ ಕಳೆಯುತ್ತಾರೆ. ಅತುಲ್ ಒಂಟಿಯಾಗಿ ಕುಡಿಯುತ್ತ, ಇಷ್ಟವಿದ್ದಲ್ಲ್ಲಿ ಊಟ ಮಾಡಿ, ಸ್ವಲ್ಪ ಹೊತ್ತು ಬಿಸಿನೆಸ್ ಪತ್ರಿಕೆಯನ್ನು ಓದಿ ಮಲಗುವ ವಾಡಿಕೆ.
ಟಿವಿ ಯ ಚ್ಯಾನೆಲ್ ನ್ನು ಬದಲಿಸುತ್ತಿದ್ದ ಹಾಗೆ ಸ್ಪುರದ್ರೂಪಿ ಚಿರಪರಿಚಿತ ಮುಖವನ್ನು ಕಂಡು ಅತುಲ್ ಬೆಚ್ಚಿಬಿದ್ದ. ನೋಡಿದ್ರೆ ಹೌದು ಅವನ ಮಗ. ಯಾವುದೋ ಪ್ರಶಸ್ತಿ ಸಮಾರಂಭ. ಸ್ಯಾನ್ ಹ್ಯೂಸೆ ಯಲ್ಲಿ ನಡೆಯುತ್ತಿದ ಲೈವ್ ಸಮಾರಂಭ. ಸಭಿಕರೆಲ್ಲ ನಿಂತು ಕರತಾಡನ ಮಾಡುತ್ತಿದ್ದರು. ಕೃಷ್ಣ...ಕ್ರಿಸ್ ಆಗಿ ಬದಲಾಗಿದ್ದ. ಅವನು ತನ್ನ ಯಶಸ್ಸಿನ ನ ಶ್ರೇಯ ತನ್ನ ಅಮ್ಮನಿಗೆ ಅಂತ ಹೇಳಿದಾಗ ಕಾರ್ಯಕ್ರಮದ ಸಂಚಲಾಕರು ಮಿಸ್ ಮೇಖಲ ಪ್ಲೀಸ್ ಕಮ್ ಆನ್ ಸ್ಟೇಜ್ ಅಂದ ಘೋಷಿಸುತ್ತಿದ್ದರು. ಅತುಲ್ ಕೂತ ಕಡೆಯಿಂದಲೆ ಕತ್ತನ್ನು ಚಾಚಿ ಕಾತರ ಕುತೂಹಲದಿಂದ ಮೇಖಲ ಳ ಕಡೆ ನೋಡಿದ. ಅವಳು ಎದ್ದ ಬಂದ ಸ್ಥಳದಲ್ಲಿ ಕೇವಲ ಹೆಂಗಸರೆ ಇದ್ದುದರಿಂದ ಹೆಮ್ಮೆಯಿಂದ ನಸುನಕ್ಕ, 'ಸಧ್ಯ ಅವಳು ಮದುವೆ ಮಾಡಿಕೊಂಡಿಲ್ಲ ಅನ್ನಿಸುತ್ತೆ' I love you and only you' ಅಂತ ಹತ್ತೊಂಬತ್ತು ವರ್ಷದ ಹಿಂದಿನ ಮಾತು ಅವನಿಗೆ ನೆನಪಾಯಿತು
ಅತುಲ್ ಮೇಖಲ ಒಂದೆ ಕಂಪೆನಿಯಲ್ಲಿ ಕೆಲಸಕ್ಕಿದ್ದರು. ಪರಸ್ಪರ ಪರಿಚಯ ಪ್ರೀತಿಯಲ್ಲಿ ತಿರುಗಿ ಮದುವೆ ಕೂಡ ಆಯಿತು. ಅತುಲ್ ತನ್ನದೆ ಗೇರುಬೀಜದ ಎಕ್ಸ್ಪೋರ್ಟ್ ಬಿಸಿನೆಸ್ ಶುರು ಮಾಡಿದ ಮೇಲೆ ಮೇಖಲ ಕೂಡ ಕೆಲಸ ಬಿಟ್ಟು, ಒಳ್ಳೆ ಆದಾಯ ಇರುವುದರಿಂದ ಮನೆಯಲ್ಲೇ ಇರುವುದುದೆಂದು ನಿಶ್ಚಯಿಸಿದಳು. ಮದುವೆಯಾದ ಮೂರು ವರ್ಷದ ನಂತರ ಹುಟ್ಟಿದವನು ಕೃಷ್ಣ. ಚಿಕ್ಕಂದಿನಲ್ಲಿ ಅವನು ಸಾಧಾರಣ ಮಕ್ಕಳಂತೆಯೆ ಇದ್ದ. ಮೊದಲನೇ ತರಗತಿಗೆ ಬಂದ ಮೇಲೆ ಅವನು ಹುಡುಗಿಯರ ಹಾಗೆ ನಡೆದುಕೊಳ್ಳುವುದು, ಸದಾ ಮಲಗಿಕೊಂಡು ಚಿತ್ರ ಬಿಡಿಸುವುದು, ಅಮ್ಮನ ಜತೆ ಯಾವಾಗಲೂ ಅಡಿಗೆಮನೆಯಲ್ಲಿರುವುದು ಮುಂತಾದನ್ನು ರೂಢಿ ಮಾಡಿಕೊಂಡಿದ್ದ ಅಪ್ಪ ಜೋರು ಮಾಡಿದರೆ ಮುಸಿ ಮುಸಿ ಅಳುವುದನ್ನೆಲ್ಲ ಮಾಡುತ್ತಿದ. ಮನೆಗೆ ಬಂದ ಅತಿಥಿಗಳ ಎದುರಿಗೆ ಅತುಲ್ ತುಂಬ ಮುಜುಗರ ಪಡುತ್ತ್ತಿದ. ಸಮಯ ಸಿಕ್ಕಾಗಲೆಲ್ಲ ಕೃಷ್ಣ ನನ್ನು ಹೆಣ್ಣಿಗ, ಸಿಸ್ಸಿ ಅಂತೆಲ್ಲ ಮೂದಲಿಸಿ ಹೊಡೆದು ಬಡಿದು ಮಾಡಲಾರಂಭಿಸಿ ಕುಡಿತಕ್ಕೂ ಮೊರೆ ಹೋದ. ಮೇಖಲ ಆದಷ್ಟು ಸಮಾಧಾನ ಪಡಿಸಲು ಪ್ರಯತ್ನ ಮಾಡಿದಳು. ಆದರೆ ಪರಿಸ್ಥಿತಿ ಬಿಗಡಾಯಿಸಲಾರಂಭವಾಯಿತು. ಮೇಖಲ ಎರಡನೆ ಸಲ ಗರ್ಭಿಣಿಯಾದಳು. ಸಿಕ್ಕಾಪಟ್ಟೇ ಮಾರ್ನಿಂಗ್ ಸಿಕ್ ನೆಸ್ಸ್ ನಿಂದಾಗಿ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಬೇಕಾಯುತು. ಮನೆಗೆ ವಾಪಸ್ ಬಂದಾಗ ಕೃಷ್ಣ ಕಂಗಾಲಾಗಿದ್ದ, ಜ್ವರದಿಂದ ನರಳಿ ಅಳುತ್ತಿದ್ದ. ಹಿಂದಿನ ದಿನ ಆಫಿಸ್ ನ ಕ್ಲಯಂಟ್ಸ್ ಮನೆಗೆ ಬರುತ್ತಿದ್ದಾರೆಂದು ಅವರ ಎದುರಿಗೆ ಕೃಷ್ಣನಿಂದ ಅವಮಾನವಾಗುತ್ತದೆಂದು ಅವನನ್ನು ರಾತ್ರಿ ಮೂಲೆಯ ಕೋಣೆಯೊಂದರಲ್ಲಿ ಅತುಲ್ ಕೂಡಿ ಹಾಕಿದ್ದ. ರಾತ್ರಿ ಅದರ ಬಗ್ಗೆ ಮರೆತು ಹೋಗಿದ್ದ. 5 ವರ್ಷದ ಕೃಷ್ಣ ಹೆದರಿ ಚಡ್ಡಿಯಲ್ಲೇ ಕಕ್ಕಸು ಮೂತ್ರ ಮಾಡಿಕೊಂಡಿದ್ದ. ಮರು ದಿನ ಬೆಳ್ಳಿಗೆ ಅಪ್ಪನಿಂದ ಹೊಡೆಸಿಕೊಂಡಿದ್ದ. ಮೇಖಲ ಮನೆಗೆ ಬಂದ ಮೇಲೆ ಕೃಷ್ಣನಿಗೆ ಯಾವುದಾದರೂ ಬೋರ್ಡಿಂಗ್ ಸ್ಕೂಲ ಗೆ ಸೇರಿಸುವ ಬಗ್ಗೆ ಅತುಲ್ ಕಿರಿಕಿರಿ ಮಾಡಲಾರಂಭಿಸಿದ. ಇದಾದ ಕೆಲವೇ ದಿನದಲ್ಲಿ ಮೇಖಲ ಳಿಗೆ ಅಬಾರ್ಶನ್ ಆಯಿತು. ಅದರಿಂದ ಚೇತರಿಸಿಕೊಂಡಮೇಲೆ ಮೇಖಲ, ಅತುಲ ಗೆ 'ನಿನ್ನ ಜತೆ ಮಾತನಾಡಬೇಕು, ಇವತ್ತು ಸಂಜೆ ಬೇಗ ಬಾ. ಎಲ್ಲಾದರೂ ಹೊರಗಡೆ ಸುತ್ತಾಡಿಕೊಂಡು ಬರೋಣ' ಅಂತ ಹೇಳಿದಳು. ಹೌದು ಹಲವಾರು ತಿಂಗಳುಗಳೆ ಆಗಿದ್ದವು ಮೂವರು ಜತೆಗೆ ಎಲ್ಲೂ ಹೋಗದೆ. ಸಂಜೆ ಅತುಲ್ ಮನೆಗೆ ಬಂದಾಗ ಮೇಖಲ, ಕೃಷ್ಣ ಇಬ್ಬರೂ ರೆಡಿಯಾಗಿ ಕುಳಿತಿದ್ದರು. ಕೃಷ್ಣನ ಕಡೆ ಅಸಡ್ಡೆಯಿಂದ ನೋಡಿ, 'ಇವನೂ ಬೇಕಾ ನಮ್ಮ ಜತೆ' ಅಂತ ಕೇಳಿದ ಅತುಲ್. ಮೇಖಲಳ ಹೃದಯ ಮುದುಡಿ ಹೋಯಿತು. ಕೃಷ್ಣನ ಮನವೊಲಿಸಿ, ಅವನಿಗೆ ಅವನ ಇಷ್ಟದ ಐಸ್ ಕ್ರೀಮ್ ತಂದು ಕೊಡುವುದಾಗಿ ಹೇಳಿ ಅವನನ್ನು ಮನೆಯ ಕೆಲಸದಾಳಿನ ಜತೆ ಬಿಟ್ಟು ಹೋದರು ಇಬ್ಬರು. ಹೋಟೆಲ್ ಗೆ ಹೋಗಿ ಊಟದ ಆರ್ಡರ್ ಇಟ್ಟು ಮೇಖಲ ಮಾತಿಗೆ ಶುರುಮಾಡಿದಳು. 'ಅತುಲ್, ನಾನಿನ್ನು ನಿನ್ನ ಜತೆ ಇರಕ್ಕಾಗಲ್ಲ. ನೀನು ಕೃಷ್ಣನಿಗೆ ತುಂಬ ಕಿರುಕುಳ ಕೊಡುತ್ತೀಯ. ಅವನು ಹಾಗಾಗಿದ್ದಲ್ಲಿ ಅವನ ತಪ್ಪಿಲ್ಲ. ನನಗೆ ಅವನನ್ನು ಬಿಟ್ಟು ಇರಲು ಆಗುವುದಿಲ್ಲ. ದಯವಿಟ್ಟು ವಿವಾಹ ವಿಚ್ಛೇದನಕ್ಕೆ ಒಪ್ಪು. i love you and only you' ಆದರೆ ದಯವಿಟ್ಟು ಅರ್ಥ ಮಾಡಿಕೋ. ಅವನ ಬೆಳವಣಿಗೆಗೆ ಇದು ಅತ್ಯಂತ ಅವಶ್ಯಕ. ಕೃಷ್ಣನನ್ನು ಬಿಟ್ಟಿರಕ್ಕೆ ನನ್ನಿಂದ ಆಗಲ್ಲ ಮತ್ತು ನೀನು ಅವನನ್ನು ಅಸಡ್ಡೆ ಮಾಡುವುದೂ ಕೂಡ ನನ್ನಿಂದ ನೋಡಲಾಗುವುದಿಲ್ಲ. ಇದರಲ್ಲೆ ನಮ್ಮ ಹಿತವಿದೆ. he needs me. ಅತುಲ್ ಏನೂ ಮಾತನಾಡಲಾರದಾದ. ಆರ್ಡರ್ ಮಾಡಿದ ಊಟ ಹಾಗೇ ಬಿಟ್ಟು ಮನೆಗೆ ಮರಳಿದರು. ರಾತ್ರಿಯಿಡಿ ಆಲೋಚನೆ ಮಾಡಿ ಅವನಿಗೂ ಇದು ಸರಿ ಎನಿಸಿತು. ಪರಸ್ಪರ ಒಪ್ಪಂದದಿಂದ ಬೇರೆಯಾಗುತ್ತಿದ್ದರಿಂದ ಬಹುಬೇಗನೆ ವಿಛೇದನ ಪ್ರಕ್ರಿಯೆ ಮುಗಿಯಿತು. 
ಮೇಖಲ ಕೃಷ್ಣ ಹೊರದೇಶಕ್ಕೆ ಹೋಗಿದ್ದು ಗೊತ್ತು ಆಮೇಲೆ ಅವರ ಸಂಪರ್ಕ ಕಡಿದು ಹೋಯಿತು. ಅತುಲ್ ಬೇರೆ ಮದುವೆಯಾಗಿ ಎರಡು ಮಕ್ಕಳ ತಂದೆಯಾದ.
ಅಳುಮುಂಜಿ, ಹೆಣ್ಣಿಗ ಕೃಷ್ಣ ಈಗ ಬಾಡಿಬಿಲ್ಡರ್ ತರಹ ತುಂಬ ಹ್ಯಾಂಡ್ ಸಮ್ ಆಗಿ ಕಾಣುತ್ತಿದ. ಒಳ್ಳೆಯ ಶಿಲ್ಪಿ ಎಂದು ಹೆಸರುವಾಸಿಯಾಗಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ಹಾಗೆ ಮೇಖಲಳನ್ನು ಕಾಂಪಿಯರ್ ಕೇಳಿದ 'ಹೇಗನ್ನಿಸುತ್ತಿದೆ ನಿಮಗೆ ಮೇಡಂ ' ಅಂತ ಅದಕ್ಕೆ ಮೇಖಲ 'ಐ ಯಾಮ್ ವೇರೀ ಪ್ರೌಡ್ ಆಫ್ ಮೈ ಸನ್' ಅಂತ ಹೇಳುವಾಗ ಕ್ಲೋಸ್ ಅಪ್ ನಲ್ಲಿ ಅವಳನ್ನು ತೋರಿಸಿದ್ದರು. ಈಗಲೂ ಮೊದಲಿನ ಹಾಗೆ ಕಾಣಿಸುತ್ತಾಳೆ ಮೇಖಲ..ವನ್ಸ್ ಅಪಾನ್ ಎ ಟೈಮ್ ಶೀ ವಾಸ್ ಮೈ ವೈಫ್ ಆಂಡ್ ಹೀ ಇಸ್ ಮೈ ಸನ್ ಎಂದು ಹೆಮ್ಮೆಪಟ್ಟುಕೊಂಡ. ಕಾರ್ಯಕ್ರಮದ ಕೊನೆಯಲ್ಲಿ ನೀಡಿದ ನಂಬರ್ ಅನ್ನು ಬೇಗ ಬೇಗ ಬರೆದುಕೊಂಡು ಅದಕ್ಕೆ ಕಾಲ್ ಮಾಡಿ ಕೃಷ್ಣ ನ ವೈಯಕ್ತಿಕ ಫೋನ್ ನಂಬರ್ ಪಡೆಯುವುದರಲ್ಲಿ ಯಶಸ್ವಿಯಾದ.
ಫೋನ್ ಮಾಡಿದಾಗ ಕೃಷ್ಣನೇ ಫೋನ್ ಎತ್ತಿಕೊಂಡ. ಹೆಮ್ಮೆಯಿಂದ 'ಹಾಯ್ ಸನ್ ದಿಸ್ ಇಸ್ ಯುವರ್ ಫಾದರ್ ' ಅನ್ನುತ್ತಿದ ಹಾಗೆ ಅಲ್ಲಿಂದ 'ರಾಂಗ್ ನಂಬರ್, ಐ ಡೋಂಟ್ ಹ್ಯಾವ್ ಎ ಫಾದರ್ ಎನ್ನುವ ಉತ್ತರ ದೊಂದಿಗೆ ಫೋನ್ ಕಟ್ ಆಯಿತು.
ಪುನ: ಪುನ: ಫೋನ್ ಟ್ರೈ ಮಾಡಿದರೂ ಅಲ್ಲಿಂದ ಯಾರೂ ಎತ್ತಿಕೊಳ್ಳಲಿಲ್ಲ. ಕೊನೆಗೆ ಒಂದು ಎಸ್ ಎಮ್ ಎಸ್ ಕಳಿಸಿದ. 'ಐ ವಾಂಟ್ ಟು ಟಾಕ್ ಟು ಮೇಖಲಾ ಅಂತ. ಮೇಖಲಳ ನಂ ಒಂದನ್ನು ಅವನು ಎಸ್ ಎಮ್ ಎಸ್ ಮಾಡಿದ.
ಮೇಖಲ ಳಿಗೆ ಫೋನ್ ಮಾಡಿದಾಗ, ' ಅವಳು ಅತ್ಯಂತ ಖುಶಿಯಿಂದ ಕಿರುಚಿ' ಅತುಲ್ .ವ್ಹಾಟ್ ಎ ಪ್ಲೆಸೆಂಟ್ ಸರ್ಪ್ರೈಸ್!. ನಾನೇ ಫೋನ್ ಮಾಡಬೇಕೆಂದಿದ್ದೆ. ಅದಕ್ಕೆ ಅವನು 'ಯಾಕೆ? ಮಗನಿಗೆ ಪ್ರಶಸ್ತಿ ಬಂದಿಯಂತಲೆ"?
"ಅಲ್ಲ. ಪ್ರಶಸ್ತಿ  ಕ್ರಿಸ್  ಗೆ ಕಟ್ಟಿಟ್ಟ ಬುತ್ತಿ. ನಮ್ಮ ಮನೆಯಲ್ಲಿ ಒಂದು ಕೋಣೆಯಿಡಿ ಅವನ ಪ್ರಶಸ್ತಿ, ಕಟ್ಟು ಹಾಕಿರುವ ಪ್ರಶಂಸಾ ಪ್ರತಿಗಳಿಗೆ ಮೀಸಲಾಗಿಟ್ಟಿದ್ದೇವೆ'. ಫೋನ್ ಯಾಕೆಂದ್ರೆ  ಕ್ರಿಸ್ ಮುಂದಿನ ತಿಂಗಳು ಮದುವೆಯಾಗಲಿದ್ದಾನೆ'
"ಹೌದಾ? ವ್ಹಾಟ್"
"ಹೌದು, ಅವನು ಕ್ಯಾರೆನ್ ಳನ್ನು ಮದುವೆಯಾಗುತ್ತಿದ್ದಾನೆ. ಅಚ್ಚರಿಯೆನೆಸುತ್ತಿದೆಯಲ್ಲವಾ? ಡಿವೋರ್ಸ್ ನಂತರ ಒಬ್ಬ ತಜ್ಝ ಡಕ್ಟರ ಅನ್ನು ಸಂಪರ್ಕಿಸಿದೆ, ಕ್ರಿಸ್ ಗೆ ಅವರಿಂದ ಪೂರ್ತಿ ಚೆಕ್-ಅಪ್ ನಡೆಯಿತು.. ಅವರು 'ಐ ಕ್ಯಾನ್ ನಾಟ್ ಫೈಂಡ್ ಎನಿಥಿಂಗ್ ರಾಂಗ್ ವಿಥ್ ಕೃಷ್ಣ. ' ಹಿ ಇಸ್ ನಾರ್ಮಲ್'. ಯಾಕೆ ಹಾಗಾಡುತ್ತಾನೆಂದರೆ ಕೆಲವರಲ್ಲಿ ಹೆಂಗುರುಳು ಜಾಸ್ತಿಯಿರುತ್ತೆ. ಆದ್ರೂ ನಿಮಗೆ ಅವನ ಫ್ಯೂಚರ್ ಬಗ್ಗೆ ಕಾಳಜಿ ಎನಿಸಿದ್ದರೆ ನೀವು ಹೊರದೇಶಕ್ಕೆ ಹೋಗಬಹುದು, ಅಲ್ಲಿ ಇಂತಹ ಸಂಗತಿಗಳನ್ನು ಬ್ರಾಡ್ ಮೈಂಡಡನೆಸ್ಸ್ ನಿಂದ ತುಂಬಸೂಕ್ಷ್ಮವಾಗಿ ಹ್ಯಾಂಡಲ್ ಮಾಡುತ್ತಾರೆ'. ಕಾಕತಾಳಿಯ ಎಂಬಂತೆ ನನ್ನ ಫ್ರೆಂಡ್ ಒಂದು ಬೂಟಿಕ್ ಹಾಗೂ ಹೋಟಲ್ ಖರೀದಿಸುವವಳಿದ್ದಳು. ಬೂಟಿಕ್ ನ ಉಸ್ತುವಾರಿ ನೋಡಿಕೊಳ್ಳುತ್ತೀಯ ಅನ್ನುವ ಆಫರ್ ಬಂದಾಗ ನಾನು ಹೆಚ್ಚಿಗೇ ಏನೂ ಯೋಚಿಸದೆ ನಿವಾರ್ಕ್ ಗೆ ಹೊರಟು ಬಿಟ್ಟೆ. ಮೊದಲು ಉಸ್ತುವಾರಿಯಂತ ನೋಡಿಕೊಳ್ಳುತ್ತಿದ್ದ ಬೂಟೀಕ್ ಅನ್ನು ನಾನೆ ಖರೀದಿಸಿದೆ. ಆಶ್ಚರ್ಯ ಎಂಬಂತೆ ಎಂಟನೆ ತರಗತಿಗೆ ಬರುತ್ತಿದ್ದಹಾಗೆ  ಕ್ರಿಸ್  ಮೈ ಕೈ ತುಂಬಿಕೊಂಡು ಮೀಸೆ ಎಲ್ಲ ಬಂತು. ನನಗೂ ಅವನು ನಾರ್ಮಲ್ ಅನಿಸಿತು. ಕೊನೆಗೆ ನಾನೆ ಅವನಿಗೆ ಪುಸುಲಾಯಿಸಿ ಜಿಮ್ ಗೆ ಕಳಿಸಲು ಶುರು ಮಾಡಿದೆ. ನೌ ನೀನೆ ನೋಡು ಹೇಗಾಗಿದ್ದಾನೆ 'ಅಂತ ಖುಶಿಯಿಂದ ಉಲೀತಾ ಇದ್ದಳು ಮೇಖಲ
"ನೀನು ಸ್ವ್ಲಲ್ಪ ಪೇಶನ್ಸ್ ತೋರಿಸಬಹುದಿತ್ತು. ಮತ್ತು ಆಕಸ್ಮಾತ್ ಅವನು transvestite ಆಗಿದ್ದರೂ ಅವನಿಗೆ ನಮ್ಮ ಸಪೋರ್ಟ್ ಇಲ್ಲದಿದ್ದರೆ ಹೇಗೆ?" ನೋಡು ಏನೆಲ್ಲ ನಡೆದು ಹೋಯಿತು ಅಂತ ಕೂಡ ಸೇರಿಸಿದಳು
"ಮತ್ತೆ ನೀನು ಮದುವೆ ಗಿದುವೆ...."
"ಇಲ್ಲ ನನಗೆ ಅದರ ಬಗ್ಗೆ ಆಲೋಚಿಸಲಿಕ್ಕೆ ಪುರುಸೊತ್ತಿರಲಿಲ್ಲ, ಮತ್ತು ಮದುವೆಯಾದರೂ ಅವನು ಕ್ರಿಸ್ ನನ್ನು ಚೆನ್ನಾಗಿ ನೋಡಿಕೊಳ್ಳುತಾನೆಂದು ಏನು ಗ್ಯಾರಂಟಿ. ನನ್ನ ಕೆಲಸ,  ಕ್ರಿಸ್  ನ ದೇಖಿ ರೇಖಿ ಯಲ್ಲೇ ತಪಸ್ಸಿನಂತೆ ದಿನಗಳು ಕಳೆದು ಹೋದವು""ಬರ್ತಿಯಲ್ಲ ಮದುವೆಗೆ?
ಏನನ್ನೂ ಉತ್ತರಿಸಿದೆ ಅತುಲ್ ನಿಟ್ಟುಸಿರು ಬಿಟ್ಟ...

(ನನ್ನ ತಮ್ಮನ ಹೆಂಡತಿ 'ಕರ್ಮವೀರ' ಪತ್ರಿಕೆಯನ್ನು ತರಿಸುತ್ತಾಳೆ. ಅದರಲ್ಲಿನ ಕಾರ್ಡ್ ನಲ್ಲಿ ಕತೆ ಎನ್ನುವ ಪರಿಕಲ್ಪನೆ ನನಗಿಷ್ಟವಾಯ್ತು. ನನ್ನದೂ ಒಂದು ಪ್ರಯತ್ನ ಅಂತ ಬರಿಲಿಕ್ಕೆ ಶುರು ಮಾಡಿ A4 ಸೈಜ್ ನ ಕಾರ್ಡ್ ತುಂಬುವಷ್ಟು ದೊಡ್ಡ ಕತೆಯಾಗಿಬಿಡ್ತು..ಹಿಂದಿನ ಸಲ ಶ್ರೀಕಾಂತ ಮುಂಬೈಗೆ ಹೋದಾಗ ಕತೆ (ಯಂತದ್ದು) ಹುಟ್ಟಿಕೊಂಡಿತ್ತು. ಈ ಸಲ ಅವರು ಹೈದರಾಬಾದಿನಿಂದ ಬರುತ್ತಿದ್ದಾರೆ ಅವರಿಗೆ ಕಾಯ್ತಾ ಇದು a figment of my imagination .............)
:-)

June 1, 2012

ಆರ್ಟ್ ಇಮಿಟೇಟ್ಸ್ ಲೈಫ್ ಆ??


ಮೊನ್ನೆ ಅಮ್ಮನ ಮನೆಯಲ್ಲಿ ಮರಾಠಿ ಸೀರಿಯಲ್ ಒಂದನ್ನು ನೋಡುತ್ತ ಇದ್ದೆ. ಅದರಲ್ಲಿ ತಮ್ಮನ ಹೆಂಡತಿಗೆ ಕೆಟ್ಟ ಹೆಸರು ಬರಲಿ ಅಂತ, ಮನೆಗೆ ಬಂದ ಅಕ್ಕ ಸಾರಿನಲ್ಲಿ ಸಿಕ್ಕಾಪಟ್ಟೆ ಕಾರದ ಪುಡಿ ಬರೆಸುತ್ತಾಳೆ.ಅವಳಿಗೆ ತನ್ನ ತಮ್ಮ ಅವನ ಆಫಿಸ್ ನಲ್ಲೆ ಇದ್ದ ಹುಡುಗಿಯನ್ನು ಪ್ರಿತಿಸಿ ಮದುವೆಯಾಗಿದ್ದು, ಅದೂ ಅವಳ ಒಪ್ಪಿಗೆ ಪಡೆಯದೇ ಮದುವೆಯಾಗಿದ್ದು ಸಿಟ್ಟಿಗೇಳಿಸಿತ್ತು. ಅದಲ್ಲದೆ ಮನೆಗೆ ಬಂದ ಕೂಡಲೇ ಅವಳ ತಂದೆ ಹಾಗೂ ತಮ್ಮ ಅವಳ ಗುಣಗಾನ ಮಾಡುವುದುದನ್ನು ಸಹಿಸಿಕೊಳ್ಳಲಾಗುವುದಿಲ್ಲ..ಅದಕ್ಕೆ ತಮ್ಮ ಮತ್ತು ತಮ್ಮನ ಹೆಂಡತಿ ಮಧ್ಯೆ ಜಗಳ ತರಲು ಇದೂ ಒಂದು ಅಸ್ತ್ರ ಉಪಯೋಗಿಸಿದ್ದಳು.

ಇನ್ನೊಂದು ಸೇರಿಯಲ್ ನಲ್ಲಿ ಅತ್ತೆ ಸೊಸೆಯ ಕಾಫಿ ಫ್ಲಾಸ್ಕ್ ನಲ್ಲಿ ಪುಡಿಯುಪ್ಪು ಬೆರೆಸಿಡುತ್ತಾಳೆ...

ಈ ಸೀರಿಯಲ್ ನೋಡ್ತಾ ಬಂದ ಒಂದು ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಮಾಲು-ನೀಹಾ ತುಂಬ ಚಿಕ್ಕವರಿದ್ದಾಗ  ದೂರದ ಸಂಬಂಧಿಕ ಹೆಂಗಸೊಬ್ಬರು ಆವಾಗಾವಾಗ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಅವರಿಗೆ ಚಿಕ್ಕ ಪ್ರಾಯದಲ್ಲೇ ಮದುವೆ ಆಗಿ, ವರ್ಷದೊಳಗೆ ಗಂಡ ತೀರಿಕೊಂಡಿದ್ದರು.ಮಕ್ಕಳಿರಿರಲಿಲ್ಲ.  ಸಾಕಷ್ಟು ಸ್ಥಿತಿವಂತರೇ. ಹೀಗೆ ಒಬ್ಬಂಟಿಯಾಗಿರುತ್ತಿದ್ದರಿಂದ ಅವರು ಒಂದು ವಾರ-ಹದಿನೈದು ದಿನ ಹೀಗೆ ಬೇರೆ ಬೇರೆ ಸಂಬಂಧಿಕರ ಮನೆಗೆ ಹೋಗಿರುತ್ತಿದ್ದರು. ಬಾಣಂತನ, ಹಪ್ಪಳ-ಸಂಡಿಗೆ, ಮನೆಗೆಲಸದಲ್ಲಿ ಸಹಕರಿಸುವುದು ಮುಂತಾದವುಗಳನ್ನು ಮಾಡುತ್ತಿದ್ದರೂ, ಮನೆಯಲ್ಲಿ ಜಗಳ ಹಚ್ಚಿ ಕೊಡುವ ಕೆಲಸ ಕೂಡ ಮಾಡುತ್ತಿದ್ದರು. ಒಂದು ಸಲ ಅವರು ನಮ್ಮ ಮನೆಗೆ ಬಂದಿದ್ದರು ಕೆಲವು ದಿನ ಇದ್ದು ಕೊಂಡು ಹೋಗಲು. ನನ್ನನ್ನು ಅವರು ಯಾವತ್ತೂ 'ಮಾಲತಿ' ಅಂತ ಕರೆದಿದ್ದಿಲ್ಲ. ಶ್ರೀಕಾಂತನ ಹೆಂಡತಿ ಅಂತಲೇ ಕೂಗೋದು. 
ಬೆಳಿಗ್ಗೆ ಒಂದು ದಿನ ನಮ್ಮ ಮನೆಯಲ್ಲಿ ದೋಸೆ ಮಾಡಿದ್ದೆ. ಸೌಟಿಗೆ ಏನೋ ತಾಗಿದ್ದರಿಂದ ಅದನ್ನು ತೊಳೆಯಲೆಂದು ಹೊರಗೆ ಹೋಗಿದ್ದೆ. ವಾಪಸ್ ಬರುವಾಗ ಆ ಹೆಂಗಸು ಮಾಲು-ನೀಹಾ ಬಳಿ 'ಅಮ್ಮನಿಗೆ ನಿಹಾ ಅಂದರೆ ಹೆಚ್ಚು ಪ್ರೀತಿ' ಬೇಕಾದರೆ ನೋಡಿ. ಇಬ್ಬರೂ ಮೊದಲ ದೋಸೆ ನನಗೆ ಅಂತ ಹೇಳಿ' ಅಂತ ಹೇಳಿಕೊಡುವುದನ್ನು ಕೇಳಿಸಿಕೊಂಡು ಸ್ವ್ಲಲ್ಪ್ಸ್ ಇರುಸು-ಮುರುಸಾಯಿತು. ಹಾಗೆ ಮಕ್ಕಳು (ಮಾಲವಿಕ ಆಗ ಎರಡನೆ ಈಯತ್ತೆ ಯಲ್ಲಿದ್ದಳು) first ದೋಸೆ ನನಗೆ ಅನ್ನುವ ಕಿರಿಕಿರಿ ಶುರು ಮಾಡಿದರು. ನನ್ನ ಭೈಯ್ಯ ನನಗೆ ಮಸಾಲೆ ದೋಸೆ ಮಾಡಲು ಆಗುವಂತೆ special ಆರ್ಡರ್ ಕೊಟ್ಟು ಚಚೌಕದ ಒಂದು  ಕಾವಲಿ ಮಾಡಿಸಿಕೊಟ್ಟಿದ್ದರು. ಸಾಕಷ್ಟು ದೊಡ್ಡ ದಾಗಿತ್ತು ಅದು. ಅದರಲ್ಲಿ ಮಧ್ಯಮ ಗಾತ್ರದ ಎರಡು ದೋಸೆಗಳನ್ನು ಹುಯ್ದೆ. ಆ ಮೇಲೆ ಎರಡು ಪ್ಲೇಟ್ ನಲ್ಲಿ ಹಾಕಿಕೊಂಡು 'ಟಾ-ಡಾ ಮ್ಯಾಜಿಕಲ್ ಮೊಮ್ಮಿ ಲವ್ಸ್ ಯು ಬೋಥ್..ಅಂತ ಹೇಳಿ ಇಬ್ಬರಿಗೂ ಕೊಟ್ಟೆ...ಮೂರು ಜನರ ಮುಖ ನೋಡಬೇಕಿತ್ತು. ಈಗಲೂ ನಾನೂ ಮಕ್ಕಳು ಈ ವಿಷಯ ನೆನೆಸಿಕೊಂದು  ನಗುತ್ತಿರುತ್ತೇವೆ.ಶ್ರೀಕಾಂತ ಇದಕ್ಕೆ conflict resolution ಅನ್ನುತ್ತಾರೆ :-)

ಚಿಕ್ಕ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ವಾಗಿರುತ್ತದೆ. ಅಂತ ಸಮಯದಲ್ಲಿ ಅವರಿಗೆ ಇಂತಹ ಉಪಯೋಗಕ್ಕೆ ಬಾರದ ಕೆಟ್ಟ ವಿಚಾರಗಳನ್ನೆಲ್ಲ ತುಂಬ ಬಾರದು. ನನ್ನ ಐಡಿಯ ಸರಿಯಾ ಗಿತ್ತಲ್ಲವಾ? 

ಹಾಗೆ ಇತ್ತ್ತೀಚಿಗೆ ನನ್ನ ಫ್ರೆಂಡ್ ನನ್ನ ಜತೆ ಒಂದು ದಿನ ಕಳೆಯಲು ಬಂದಿದ್ದರು. ಊಟ ಎಲ್ಲ ಮುಗಿಸಿ ಲೋಕಾಭಿರಾಮವಾಗಿ ಮಾತನಾಡುತ್ತ ಇದ್ದೆವು. ಆಗ 'ಆರ್ ' ಗೆ ನಿನ್ನ ಶ್ರೀಕಾಂತ ಮೇಲೆ ತುಂಬ ಆದರಾಭಿಮಾನ ಅಂತ ಹೇಳಿದರು. ಅದಕ್ಕೆ ನಾನು arre we have been friends for so long ..ಇದೇನು ಇದ್ದಕ್ಕಿದ್ದ ಹಾಗೆ ಈ ಮಾತು ಅಂತಂದೆ...ಅದಕ್ಕೆ ಅವರು
"R has a strange habit. ಅದೇನೆಂದರೆ ಒಂದು ಕುಟುಂಬದ ಜತೆ ತುಂಬ ಆತ್ಮೀಯವಾಗುವುದು. ಆಮೇಲೆ ಗಂಡ ಹೆಂಡತಿಯ ನಡುವೆ ಏನಾದರು ಜಗಳ ತರುವುದು..R ಆ ಮೇಲೆ ಸುಬಗನ ತರಹ ಅವರ ಮಧ್ಯೆ ರಾಜಿ ಮಾಡಿಸುವುದು' ಅಂತ. you and Srikanth are the only couple who did not take his bait. ನನಗಂತು ಸೋಜಿಗ. ಯಾವ್ಯಾವ ತರಹದ್ದ ಜನರು ಇರುತ್ತಾರಲ್ಲವಾ?

ಬಹುಶ: -art imitates life ಅಂತ ಇದ್ದಕ್ಕೆ ಹೇಳಿರಬಹುದಲ್ಲವೇ. ಸೀರಿಯಲ್ ನಲ್ಲಿ ತೋರಿಸುವುದು ಅತಿಶಯೋಕ್ತಿ ಅನ್ನಿಸುವುದಿಲ್ಲ
:-)