ನೆನಪಿನ ಸಂಚಿಯಿಂದ

September 11, 2026

on a lighter note Meta AI

 ಸುಮ್ನೆ ಟೈಮ್ ಪಾಸ್...

ಪಾಸ್ ಮಾಡ್ಲಿಕ್ಕೆ ಟೈಮ್ ಇದೆಯಾ ಅಂದ್ರೆ ಖಂಡಿತ ಹೌದು! ನಿಹಾ ಊಟ ತೆಗೆದುಕೊಂಡು ಹೋಗ್ತಾಳೆ ಅಂದಿದ್ದೆ...7.45 ಗೆ ಅವಳು ಮನೆ ಬಿಡ ಬೇಕು...ಅಷ್ಟರಲ್ಲಿ ನನ್ನ ಬ್ರೆಕ್ಫಾಸ್ಟ್ ಲಂಚ್ ಎರಡೂ ರೆಡಿ...ಎಷ್ಟೇ ನಿಧಾನಕ್ಕೆ ಕೆಲಸ ಮಾಡಿದ್ರೂ 11.00 ಗಂಟೆಗೆಲ್ಲ ನಾನು ಫ್ರೀ 😁. ಉಪ್ಪಿಟ್ಟಿ ಅವಲಕ್ಕಿ ಮಾಡಿದಾಗ ಮನೆಯ ಹೆಚ್ಚುವರಿ ಕ್ಲೀನಿಂಗ...ಅಂದ್ರೆ ಫ್ಯಾನ್ ಒರೆಸೋದು, ಮನೆ ಇಡೀ ಧೂಳು ಹೊಡೆಯೋದು ಬೆಡ್ ಶೀಟ್ಸ್, ಪಿಲ್ಲೋ ಕವರ್ ತೆಗೆದು wash ಗೆ ಹಾಕೋದು.. etc etc. ಶ್ರೀಕಾಂತ ಆಫಿಸ್ ನವರು ನೋಡಿದ್ರೆ ಅಫಿಸ್ ಗೆ ಬಂದು ಬಿಡಿ ಅನ್ನುತ್ತಾರೆನೋ!! 🤫

ಸರಿ ಟೈಮ್.ಪಾಸ್ ಅಂದೇನಲ್ಲ...

ನನಗೆ ಚಿಕ್ಕವಳಿರುವಾಗ ಹೆಚ್ಚಿನ ಜನರು  ಸಿನಿಮಾ  ತಾರೆ ಸಾಯಿರಾ ಬಾನೋ ಅವರನ್ನು ಹೋಲುತ್ತೇನೆಂದು , ತೀರ್ಥಹಳ್ಳಿಯಲ್ಲಿ ಕೆಲವರು ಮೀನಾಕ್ಷಿ ಶೇಷಾದ್ರಿ ಯವರನ್ನು ಹೋಲುತ್ತೇನೆಂದು ಹೇಳುವರರು ಇದ್ದರು.

ಒಂದು selfie ತೆಗೆದು make me look like saira banu of yesteryears ಅಂತ ಕೊಟ್ಟೆ...ನಾನು ಧರಿಸಿದ ಚೂಡಿದಾರ್ ಟಾಪ್  ನ pattern ನ ಸೀರೆ ಮತ್ತು matching blouse ಮಾಡಿ ಕೊಟ್ಟಿತು....ತುಂಬಾ ಮಜಾ ಅನಿಸಿ ಫ್ಯಾಮಿಲಿ  ಗ್ರೂಪ್ ಗೆ ಕಳುಸಿದೆ...ನನ್ನ ತಮ್ಮ 'have you finished cooking" ಅಂತ ಕಳಿಸಿದ 😁😁

              ಈ ತರಹ ಬೆಳಬೆಳಿಗ್ಗೆ ಖರಾಬ್ selfie ತೆಗೆದಿದ್ಫು 😁


ಮಜಾ with meta

ಮತ್ತೊಮ್ಮೆ ಎಲ್ಲರಿಗೂ ಧನ್ಯವಾದಗಳು. ಬ್ಲಾಗ್ ಗೆ ಭೇಟಿನೀಡಿದವರ ಸಂಖ್ಯೆ 10 ಲಕ್ಷ ದಾಟಿದೆ 🙏🙏🙏🙏❤️❤️





September 4, 2026

ಹಣಕಾಸಿನ ವ್ಯವಹಾರ/ financial management

 ಹಲವಾರು ದಿನ ಆಯ್ತು ಏನೂ ಬರೆದಿಲ್ಲ. ಯಾಕೋ ತುಂಬಾ ಬೇಜಾರು. ನೀವೆಲ್ಲ ಓದಿರುತ್ತೀರಿ, ಟಿ ವಿ ಯಲ್ಲಿ ನೋಡಿರ್ತೀರ... ನಮ್ಮ resident  ಸೈಬರ್  ಕ್ರೈಮ್ ಪೊಲೀಸ್ inspector,  ಶ್ರೀ ರವಿ ಯವರು, ಮಧ್ಯ ಪ್ರದೇಶ ದಲ್ಲಿ ಕಾರ್ಯ ನಿರ್ವಹ8ಸಲು ತೆರಳಿದಾಗ ಅಲ್ಲಿಯ ಭೀಕರ ರಸ್ತೆ ಅಪಘಾತದಲ್ಲಿ ಅಸು ನೀಗಿದರು. 

ನಮ್ಮ ಅಪಾರ್ಟ್ಮೆಂಟ್ ನ whatsapp ಗ್ರೂಪ್ ನಲ್ಲಿ ಹಾಕಿ ದಾಗ ಸುದ್ದಿ ಓದಿ ಒಂದು ಕ್ಷಣ ಮೈ ಮರಗಟ್ಟಿ ಹೋಗಿ, ಎದೆ ಬಡಿತ ಜೋರಾಗಿ, ಮೈ ಎಲ್ಲ ತಣ್ಣಗೆ ಮರು ಕ್ಷಣ ಬಿಸಿ ಯಾಗಿ..ಏನಾಗ್ತಿದೆ  ಅಂತ ಗೊತ್ತಾಗಲಿಲ್ಲ. ಸ್ಥಿಮಿತಕ್ಕೆ ಬರಲು ಸುಮಾರು ಹೊತ್ತಾಯಿತು. ಎರಡು ದಿನ ಮನೆಯಿಂದ ಕದಲಲಿಲ್ಲ. ರವಿಯವರಿಗೆ ಸಣ್ಣ ವಯಸ್ಸು...ಪುಟ್ಟ ಪುಟ್ಟ ಮಕ್ಕಳು...ಛೆ!! ಮೊನ್ನೆ ಮೊನ್ನೆ ಅಷ್ಟೇ ಅವರಿಗೆ  chief minister's gold medal  ಸಿಕ್ಕಿದಕ್ಕೆ ನಾವು ಸನ್ಮಾನ ಮಾಡಿದ್ದೆವು.



******************************************

you tube ನಲ್ಲಿ ಆಶೀಶ್ ಸಾರಡ್ಕ ಎನ್ನುವವರ channel ಅನ್ನು follow ಮಾಡ್ತೇನೆ ಅವರ financial advice ಗೋಸ್ಕರ. ಅವರ ಹೆಂಡತಿ ಕೂಡ ಅಸಿನೀಗಿದ್ದಾರೆ....ಹಾಗೆ ಆಕಸ್ಮಾತಾಗಿ ನಾಗರಾಜ್ ವಸ್ತಾರೆ ಯವರ ಹಲವಾರು interview ಗಳು ನನ್ನ   ಪೇಜ್ ನಲ್ಲಿ ಕಾಣಿಸುತ್ತಿವೆ... randomly ಒಂದನ್ನು ಕ್ಲಿಕ್ ಮಾಡಿದೆ....ಇಬ್ಬರೂ ಹೆಚ್ಚು ಕಡಿಮೆ ಒಂದು ಮಾತು ಹೇಳಿದ್ದಾರೆ...ಅವರ ಜಾಗದಲ್ಲಿ ನಾವಿದ್ದರೆ..ಆಸ್ಪತ್ರೆಯ.ಹಣಕಾಸಿನ ವ್ಯವಹಾರ ನಿಭಾಯಿಸಲು ಅವರು ಕಷ್ಟ ಪಡಬೇಕಾ ಗುತ್ತಿತ್ತು ಅಂತ.

ಹೌದು ನನ್ನ ವಿಷಯದಲ್ಲೂ ಹಾಗೆ.....ಮದುವೆಯಾದ ಹೊಸದರಲ್ಲೇ ಶ್ರೀಕಾಂತ್ 'ಐದು ವರ್ಷ ಮಾತ್ರ ಬ್ಯಾಂಕ್ ನಲ್ಲಿ ಕೆಲಸ ಮಾಡ್ತೇನೆ ಆಮೇಲೆ ತೋಟ ಎಲ್ಲ ನೋಡಿಕೊಳ್ಳೋದು, ನೀನು ಸೆಗಣಿ ಎಲ್ಲ ಬಾಚಲು ರೆಡಿ ಇರ  ರ್ಬೇಕು ಅಂತ.. ಆಗಲೇ ಹೇಳಿ ಬಿಟ್ಟಿದ್ದೆ....ಎಲ್ಲಾ ತರಹದ ಸಹಾಯ/ support ನನ್ನಿಂದ ನಿಮಗೆ ಇದೆ..ಹಣಕಾಸಿ ನ ವ್ಯವಹಾರ ಅಂದರೆ savings/ investment ಎಲ್ಲ ನಿಮ್ಮ department ಅಂತ....ಹಾಗೆ ನಡೆದುಕೊಂಡಿದ್ದೇನೆ ಕೂಡ...ಮನೆ ವ್ಯವಹಾರಕ್ಕೆ ಯಾವುದಕ್ಕೂ ನಾನು ಅವರ ಮೇಲೆ ಡಿಪೆಂಡ್ ಆಗಿರಲಿಲ್ಲ....ನಾನು ಕೆಲಸಕ್ಕೆ ಹೋಗುವಾಗ ನನ್ನ ಸಂಬಳದಲ್ಲಿ ಮನೆ ಖರ್ಚನ್ನು ನಿಭಾಯಿಸುತ್ತಿದ್ದೆ. ಅದೇನು ದೊಡ್ಡ ಮೊತ್ತ ಆಗಿರಲಿಲ್ಲ..ಮತ್ತು ದುಂದು ವೆಚ್ಚ ಏನೂ ಇರಲಿಲ್ಲ....ಜಾಗ  ಇದ್ದ ಕಡೆ ಮನೆಗೆ ಬೇಕಾಗುವ ತರಕಾರಿಯೆಲ್ಲ ಬೆಳೆಸುತ್ತಿದ್ದೆ...ಹೀಗೆ 18 ವರ್ಷ ಬ್ಯಾಂಕ್ ನಲ್ಲಿ continue ಮಾಡಿದರು.  ದೊಡ್ಡ ಮೊತ್ತದ ದುಡ್ಡು ಅಂದ್ರೆ ಬಾಡಿಗೆ ಮನೆ ಲೀಸ್, ಮಕ್ಕಳ ಫೀಸ್ ಮುಂತಾದ್ದು ಅವರು ಕಟ್ಟುತ್ತಿದ್ದರು. ತೋಟ ದಲ್ಲಿ ದುಡ್ಡು ಇನ್ವೆಸ್ಟ್ ಮಾಡುವಷ್ಟರಲ್ಲಿ ಮಕ್ಕಳಿಬ್ಬರೂ ಕೆಲಸಕ್ಕೆ ಸೇರಿಯಾಗಿತ್ತು. 'ಇನ್ನೂ ಪ್ರತಿ ತಿಂಗಳು ಅಣ್ಣನಿಗೆ ದುಡ್ಡು ಕಳಿಸ ಬೇಕು' ಅಂದಾಗ..ಅಗ್ಗ ನಾನು ಕೆಲಸಕ್ಕೆ ಹೋಗ್ತಿರಲಿಲ್ಲ, ನಾನು  ಮೊದಲು ನನಗೆ ಮನೆ ಖರ್ಚಿಗೆ ಎಷ್ಟು ಬೇಕು ಅಂತ ಲೆಕ್ಕ ಹಾಕಿ.... ತಿಂಗಳಿಗೆ ನನಗೆ ಇಷ್ಟು ಕೊಟ್ಟುಬಿಡಿ..ಹಾಗೆ ಬೆಂಗಳೂರಿಗೆ ಬಂದ ಹಾಗೆ ನನ್ನ ಶೇರ್ಸ್  ನ ದುಡ್ಡು ಸೇರಿಸಿ ಒಂದು ಸೈಟ್ ಖರೀದಿಸಿದ್ದೆವು - ಅದು ಮಾರಾಟ ಮಾಡಿದಾಗ ಅದರ ಅರ್ಧ ದುಡ್ಡು ಮಕ್ಕಳಿಬ್ಬರ ಹೆಸರಿಗೆ...ಅದೊಂದೇ ನಾನು ಖಡಾಖಂಡಿತ ವಾಗಿ ಹೇಳಿದ್ದು...then it is your money..u can use it as you feel ರೈಟ್... ಅಂದೆ. ಮತ್ತು project ಹಣ ಸಿಗಲು ವಿಳಂಬವಾದಾಗ ನನ್ನ ಮದುವೆಯಲ್ಲಿ ಹಾಕಿದ ಚಿನ್ನ ಅದೆಷ್ಟು ಬಾರಿ ಬ್ಯಾಂಕ್ ನಲ್ಲಿ   ಅಡವಿಟ್ಟಿದ್ದೇವೆ...

investment , IT ಬಗ್ಗೆ ಎಲ್ಲ ಕಲಿಸ್ತೇನೆ ಅಂದಾಗ 'ಅಯ್ಯೋ ಏನು ಅರ್ಜೆಂಟ್, ಕಲಿತರಾಯ್ತು ಎನ್ನುತ್ತಿದ್ದೆ ವಿನಃ ಅದರ ಸುದ್ದಿಗೆ ಹೋಗುತ್ತಿರಲಿಲ್ಲ. ಅಲ್ವೇ ಬ್ಯಾಂಕ್ ರ್ ಮಗಳು,  ಬ್ಯಾಂಕ್ ರ್ ಹೆಂಡತಿ ಹಣಕಾಸಿನ ಬಗ್ಗೆ ಕಲಿಯಲ್ಲ ಅಂತ ಹೇಳಲಿಕ್ಕೆ ನಾಚಿಕೆ ಆಗಲ್ವಾ...ಮತ್ತೆ ನಾನೇನಾದರೂ ಇಲ್ಲದಿದ್ದರೆ ಏನು ಮಾಡ್ತಿಯಾ ಅಂದಾಗ ' ಅಯ್ಯೋ ಅಂತಹುದ್ದೆನೋ ಆಗಲ್ಲ ಅಂತಿದ್ದೆ 😭😏😏

ಆ ಮೇಲೆ ಬ್ಯಾಂಕ್ ಬಿಟ್ಟು ನಮ್ಮದೇ ಸಂಘ ಸಂಸ್ಥೆ ಅಂತ ಊರಿಗೆ ಈತ್ತೀಚಿನ 5  ವರ್ಷದಲ್ಲಿ ತುಂಬಾ invest ಮಾಡುತ್ತಿದ್ದರು. ಲೀವರ್ ಕಾಯಿಲೆಗೆ ತುಂಬಾ ದುಡ್ಡು ಖರ್ಚಾಗುವಾಗ ಸ್ವಲ್ಪ ದೃತಿಗೆಟ್ಟಿತು...ನನಗೆ ಯಾರಲೂ ದುಡ್ಡು ಕೇಳುವ ಮನಸ್ಸಿರಲಿಲ್ಲ...ಅದೃಷ್ಟವಶಾತ್ ಒಳ್ಳೆ ದುಡ್ಡಿಗೆ ಸೈಟ್ ಮಾರಿದೆವು...ಮನಸ್ಸಿಗೆ ಎಷ್ಟು ನಿರಾಳ ಅನ್ನಿಸಿತು. ಆದರೆ ನಮ್ಮ bad luck... ಲೀವರ್ ಕಸಿ ಗೆ ಲಭವಿದ್ದರೂ, ಇತರೆ complications  ನಿಂದ ಸಾವನ್ನಪ್ಪಿದರು...ಬ್ಯಾಂಕ್ ಮತ್ತು ಆಫಿಸ್ ನಿಂದ ಮಾಡಿದ health insurance ತುಂಬಾ ಸಹಾಯಕ್ಕೆ ಬಂತು...

ಈಗ ತಮ್ಮ ನನಗೆ ದುಡ್ಡಿನ ಬಗ್ಗೆ ಹೇಳಿ ಕೊಡುತ್ತಾನೆ..❤️❤️ .ಮಾಲವಿಕಳಿಗೂ ಇದರ ಬಗ್ಗೆ ಸುಮಾರು  ಜ್ಞಾನ ಇದೆ...ಶ್ರೀಕಾಂತ್ health insurance ಎಲ್ಲಾ ಅವಳೇ ನೋಡಿಕೊಳ್ಳುತ್ತಿದ್ಲು..ನಾನೇನಾದರೊ ಆಸ್ಪತ್ರೆ ವಾಸ, ಸಮಯ ಸಮಯಕ್ಕೆ ಮದ್ಫು ಮತ್ತು healthy ಅಡುಗೆ ವಿಷಯಗಳಲ್ಲಿ ತೊಡಗಿಕೊಂಡಿದ್ದೆ

ಅಷ್ಟೇ.... ಸುಮ್ನೆ ಸ್ವಲ್ಪ  rants & raves..

ಹಾಂ ನನಗೆ 'ಸುಧಾರಾಣಿ' ಅವರ you tube channel ತುಂಬಾ ಇಷ್ಟವಾಗುತ್ತೆ 🙂

August 26, 2026

ಕುಸ್ತಿ ಅಖಾಡಾ / into the world of wrestling

 ಹಿಂದಿನ ಒಂದು ಪೋಸ್ಟ್ ನಲ್ಲಿ ನಿಹಳ ಆಫಿಸ್ ನ ಹೊಸ project ಬಗ್ಗೆ ತಿಳಿಸುತ್ತೇನೆ ಅಂದಿದ್ದೆ.

ಅವಳು ಕೆಲಸ ಮಾಡುವ ಸಂಸ್ಥೆಯ ಹೆಸರು MAP - museum.of art and photography. ಅವಳ ಹುದ್ದೆ  education officer. 

 ಕುಸ್ತಿ ಬಗೆಗಿನ ಹೊಸ ಎಸ್ಹಿಬಿಷನ್ grip, hold, pin ಹೆಸರಿನದಿ ನಡೀತಿದೆ. ನಿಹಾ ಳ ಇಷ್ಟದ ಪ್ರೊಜೆಕ್ಟ್ ಅನ್ನಬಹುದು. ಎಸ್ ಎಲ್ ಭೈರಪ್ಪ ರ 'ಭೀಮಕಾಯ', ದಂಗಲ್ ಸಿನಿಮಾ, ಮತ್ತಿತರ ನೆಟ್ ನಲ್ಲಿ ಸಿಗುವ ಮಾಹಿತಿ ಕಲೆ ಹಾಕಿದ್ದಾಳೆ. ಭೀಮಕಾಯ ನಾನು ಓದಿ ಇಷ್ಟಪಟ್ಟ ಕಾದಂಬರಿ...ಅವಳು ಓದಿ ಬದಿಗಿಟ್ಟಾಗ ನಾನು ಮರು ಓದಿದೆ. ಅಲ್ಲಿ ಅವಳು ಮತ್ತು ಇನ್ನೊಬ ಕಲೀಗ್ ಸೇರಿ ಒಂದು ಆಟ ಪ್ರಸ್ತುತ ಪಡಿಸಿದ್ದಾರೆ. 

ಮಂಗಳವಾರ entry ಉಚಿತ. ಹೋಗಿ ನೀವು ಒಮ್ಮೆ  ನೋಡಿ ಬನ್ನಿ.

ಮತ್ತೆ ಆಗಸ್ಟ್ 30 ರಂದು #familyday ಹಮ್ಮಿಕೊಂಡಿದ್ದಾರೆ. ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ. ದಿನ ವಿಡಿ ವಿವಿಧ ಮನೋರಂಜಕ  ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಉಚಿತ. ಆದರೆ register ಮಾಡಿಕೊಳ್ಳಿ. ಚಿತ್ರದ ಕೊನೆಯಲ್ಲಿ ಮ್ಯಾಪ್ ನ ಲಿಂಕ್ ಕೊಟ್ಟಿರುತ್ತೇನೆ. ❤️🙏👍







😁😁



ಮಜಾವಾದ ಆಟ

ನಾನು ಆರಾಮಾಗಿ 20 kg ವಜನ ಎತ್ತಿದೆ 🙏🙏❤️👍 ಅಕ್ಕ 10kg ಎತ್ತಲಿಕ್ಕೆ ಆಯ್ತು 
👇👇 click below



August 21, 2026

ಬೆಂಡೆಕಾಯಿ ಬಜ್ಜಿ/ಬೋಂಡಾ

 ಬೆಂಡೆಕಾಯಿಗಳನ್ನು ಚಿಕ್ಕದಾಗಿ ಕತ್ತರಿಸಿ. ಇದಕ್ಕೆ ಕತ್ತರಿಸಿದ ನೀರುಳ್ಳಿ, ಅಕ್ಕಿ ಹಿಟ್ಟು, ಕಡಲೆ ಹಿಟ್ಟು, ಉಪ್ಪು, ಕೊತ್ತಂಬರಿ+ಜೀರಿಗೆ ಪುಡಿ, ಹಿಂಗು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು  ಬೆರೆಸಿ,  ಚೆನ್ನಾಗಿ  ಮಿಕ್ಸ್ ಮಾಡಿ , ಉಂಡೆ ಕಟ್ಟಿ, ಎಣ್ಣೆಯಲ್ಲಿ ಕರಿಯುವುದು



ಅಷ್ಟೇ. ನಾಲ್ಕೇ ನಾಕು ಬೆಂಡೆಕಾಯಿ ಇದ್ವು...  ಕತೆ ಇಲ್ಲ ಕಾದಂಬರಿ ಇಲ್ಲ...only recipe 😁😁 ಕ್ಲಿಕ್ ಮಾಡಿ 👇👇

ladyfinger fries



August 20, 2026

8 months without you

 


just the other day there was a message in our apartment group for help on information regarding liver transplant and liver specialists.
ಯಾಕೋ ಎಲ್ಲ ಪುನಃ ನೆನಪಾಯಿತು. ಬೇಗನೆ ಮದುವೆಯಾಗಿ joint family ಸೇರಿದರೂ ನನಗೆ ನಾವು ನಾಲ್ಕು ಜನ ಮಾತ್ರ important ಅನುಸೋದು. ಯಾರನ್ನು ನನ್ನ ಸರ್ಕಲ್ ನಲ್ಲಿ ಸೇರಿಸುತ್ತಿರಲಿಲ್ಲ. ಶ್ರೀಕಾಂತ್ ಗೆ ನಿಹಾ ಗೆ ತುಂಬಾ ಜನ ಸ್ನೇಹಿತರು ಇದ್ದರೆ ನಾನು ಅಕ್ಕ ಸ್ವಲ್ಪ ಹೆಚ್ಛೇ introvert. ಮನೆಗೆ ನೆಂಟರು ಇಷ್ಟರು ಯಾರೇ ಬಂದರೂ ಅವರು ಹೋದ ಮೇಲೆ ನೆಮ್ಮದಿ....
ಮದುವೇಯಾಗಿ 37 ವರ್ಷಗಳೇ ಆದವು...ಶ್ರೀಕಾಂತ್ ಹೇಳಿದ್ದಕ್ಕೆಲ್ಲ yes yes ಅಂತ ಕೋಲೇ ಬಸವನ ತರಹ ತಲೆಯಾಡಿಸಿ, ಉತ್ಸುಕಳಾಗಿ ಎಲ್ಲಾ support ನೀಡಿದ್ದೆ...ಅದೇ ಒಂದು ಡಾಕ್ಟರ್ ಗೆ ತೋರಿಸಿ ಎನ್ನುವ ನನ್ನ ಒಂದೇ ಕೋರಿಕೆ ಅವರು ಮನ್ನಿಸಲೇ ಇಲ್ಲ. ಅದು ನನಗೆ ತುಂಬಾ ಸಿಟ್ಟು ನೋವು ತರಿಸಿದೆ. ಅವರು ಇಲ್ಲದೆ ಏನೋ ಒಂದು ಮಿಸ್ಸಿಂಗ್... ಜಗಳ ಎಲ್ಲ ಮಾಡ್ತಿದ್ದೆವಪ್ಪ...we were not perfect... but we had a good ಥಿಂಗ್ going....financially  ಕೆಲವು ಏರು ಪೇರು ಇದ್ದರೂ ಅದೇನು ನಮ್ಮ ನೆಮ್ಮದಿ ಕೆಡಿಸಲಿಲ್ಲ...ಅದೇ health ವಿಷಯದಲ್ಲಿ ಅವರು ಕೇರ್ ತೆಗೊಳ್ಳಲಿಲ್ಲ...ನಾನು ಅದರ ಬಗ್ಗೆ ಒಂದು ಆರು ತಿಂಗಳು ಕಿರಿ ಕಿರಿ- ಪಿರಿ ಪಿರಿ ಮಾಡಿದ್ದಕ್ಕೆ ಲೆಕ್ಕವೇ ಇಲ್ಲ..ಅಮ್ಮ ತಮ್ಮ ಫೋನ್ ಮಾಡಿದಾಗಲೆಲ್ಲ ನನ್ನ complaints  ಇರುತ್ತಿತ್ತು. ಅವರ ಫೋಟೋ ಕೂಡ ಕಳಿಸ್ತಿದ್ದೆ....ಅಮ್ಮ 'ಯಾಕೆ ಡಾಕಟ್ರ ಹತ್ತಿರ ಹೋಗೋದಿಲ್ಲ ಅಂದ್ರೆ,' ಇಲ್ಲ ಮಾಯಿ ಎಲ್ಲ ಸರಿಯಿದೆ' ಎಂದೇ ಅವರು ಉತ್ತರಿಸುತ್ತಿದ್ದರು..ಇದ್ದ ಬದ್ದ ಲೇಖನಗಳನ್ನು ಗಟ್ಟಿಯಾಗಿ ಓದಿ ಹೇಳುತ್ತಿದ್ದೆ...ಸಧ್ಯ ನನ್ನ ಕಪಾಳಕ್ಕೆ ಎರಡು ಬಿಟ್ಟಿಲ್ಲ ಅಷ್ಟೇ....yes, i was that irritating...
ನನಗೆ ಡಾಕ್ಟರ್ ಹತ್ತಿರ  ಹೋಗಲು ಇಷ್ಟವಿಲ್ಲ ಅಂದಿದ್ದರೂ ನಾನು ಸುಮ್ಮನಿರುತ್ತಿದ್ದೆ.

ಹಳೆ ಪೋಸ್ಟ್ on liver cirrhosid

'ಒಂದು ಚೆಕ್ ಮಾಡಿಸಿ....english ಔಷಧಿ ತೆಗೋ ಬೇಕಿಲ್ಲ... i believe in the power of healing through food.... late ಆಗಬಹುದು ಆದರೆ ಯಾವುದೇ ರೋಗ ಸರಿ ಪಡಿಸ ಬಹುದು ಎನ್ನುತ್ತಿದ್ದೆ.
ಊರಿಗೆ ಹೋಗಿ ಸೆಟ್ಲ್ ಆಗುವುದು...ತೋಟದಲ್ಲಿ ವಯಸ್ಸಾದವರಿಗೆ ಮನೆ ಕಟ್ಟಿ ನೋಡಿಕೊಳ್ಳುವುದು, ಅಂತ ತುಂಬಾ ದುಡ್ಡು ಅಲ್ಲಿ invest ಮಾಡುತ್ತಿದ್ದರು...ಹೀಗೆ ಇಂದು ಸಲ ಲಕ್ಷಕ್ಕೂ ಹೆಚ್ಚಿನ ದುಡ್ಡು ಕಳುಹಿಸಿ ಹತ್ತು ಹಲವಾರು ಗಿಡಗಳನ್ನು ಊರಿಗೆ ಸಾಗಿಸಿದರು. ಇದರ ಮಧ್ಯೆ ಊರಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ಫು rib bone ತರಚಿದಂತಾಯಿತು...ಆವಾಗಲೂ ಗಾಡಿ ಹೈರ್ ಮಾಡಿ ಬನ್ನಿ, ತುಂಬಾ weight ಎತ್ತಬೇಡಿ ಅಂದ್ರೂ ರೈಲ್ ನಲ್ಲೇ ಬಂದ್ರು. ಇಲ್ಲಿ ಬಂದ ಮೇಲೆ ಇನ್ನಷ್ಟು ಆರೋಗ್ಯ ಬಿಗಡಾಯಿಸಿತು... ಡಾಕ್ಟರ್ ಅದೂ ಇದೂ ಅಂತ ಖರ್ಚು.....ಅದು ಸರಿಯಾಗುತ್ತಿದೆ ಅನ್ನುವಾಗ, ನಾನು ಬೇಡ ಬೇಡ ಅಂದ್ರೂ heavy heavy ಅಶೋಕ ವೃಕ್ಷಗಳನ್ನು ಹಿಡಿದುಕೊಂಡು ರೈಲ್ ನಲ್ಲಿ ಅಯೋಧ್ಯೆಗೆ ಹೋದರು ಅಲ್ಲಿ ಗಿಡ ನೆಡಲು....ನನಗೆ ಎಷ್ಟು ಸಿಟ್ಟು ಬಂತೆಂದರೆ ನಾನು ಎರಡು ತಿಂಗಳು ಮಾತು ಬಿಟ್ಟೆ....ಇನ್ನಷ್ಟು ದುಡ್ಡು ತೀರ್ಥಹಳ್ಳಿಗೆ ಕಳುಹಿಸಿದಾಗ ನಾನೊಂದೇ ಮಾತು ಹೇಳಿದೆ 'what is the use of
investing when you don't take.of your health?  ಅದೇ ಸಮಯಕ್ಕೆ ಕಣ್ಣಿನ cataract operation ಗೆ ಮುನ್ನ  ಶುಗರ್ ಟೆಸ್ಟ್ ಗೆ ವೈದ್ಯರ ಬಳಿ ಹೋದಾಗ....ಅವರು 'ಯಾಕೋ ನನಗೆ doubt' ಅಂತ ಟೆಸ್ಟ್ ಬರೆದು ಕೊಟ್ರು....ಆವಾಗಲೇ ಲೇಟ್ ಆಗಿ ಹೋಗಿತ್ತು...Livet Cirrhosis ಆಗಿ ಬಿಟ್ಟಿತ್ತು...ಪತ್ತೆಯಾದ ಏಳು ತಿಂಗಳಿಗೆ ಹೋಗಿಯೂ ಬಿಟ್ರು...😭😭
ಲೀವರ್ ಕಸಿ ಬೇಕೇ ಬೇಕು ಅಂದಾಗ, ಬೇಗ ಬೇಗ ಅದಕ್ಕೆ ಬೇಕಾಗುವ ದುಡ್ಡನ್ನು ರೆಡಿ ಮಾಡಿ, exercise, ಔಷಧ, ಯೋಗಾಸನ ಮಾಡಿ, september october ನಲ್ಲಿ ಆರೋಗ್ಯ improve ಆಗಿತ್ತು.
..   MELD score nalli improvement ಆಗಿ , ನಾನು, ನಮ್ಮ ಮಿತ್ರರಾದ ಸಾಲಿಮಠ ಇವರೆಲ್ಲ, operation ಆದ ಮೇಲೆ ಹೀಗೆ ಮಾಡುವಾ, ಹಾಗೆ ಮಾಡುವ ,ಅದು ಮಾಡುವ ಇದು ಮಾಡುವ ಅಂತ ಸಮಾಧಾನದಿಂದ , ಉತ್ಸಾಹದಿಂದ ಇದ್ವಿ.  ಆದರೆ october second half ನಲ್ಲಿ ಪದೇ ಪದೇ ಮೈಯಲ್ಲಿ ammonia ಜಾಸ್ತಿಯಾಗಿ ಹಲವಾರು ಬಾರಿ ಅಡ್ಮಿಟ್ ಆಗಬೇಕಾಯಿತು...
ಹೀಗೆ cirrhosis ಪತ್ತೆಯಾದ 7 ತಿಂಗಳಿಗೆ, ಯುರಿನರಿ infection ನಿಂದಾಗಿ, ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ, ಕಾರ್ಡಿಎಕ್ ಅರೆಸ್ಟ್ ಆಗಿ ಹೋಗೆ ಬಿಟ್ರು

ಅಷ್ಟೇ....
ನೀರು ಕುಡಿಲಿಕ್ಕೆ ಇಲ್ಲ, ಉಪ್ಪು ಖಾರ ಇಲ್ಲ...ರುಚಿಗೆ ನಿಂಬೆ ಹಣ್ಣಿನ ರಸ, ಕಾಳು ಮೆಣಸು ಜೀರಿಗೆ ಓಂ ಕಾಳು , ಇಂಗು....etc... ಮತ್ತು ಕಾಕಿ ಸೊಪ್ಪು, ಪನೀರ್, ಮಶ್ರೂಮ್ ಇವೆಲ್ಲ ಲೀವರ್ ಗೆ ಸಹಾಯಕ ಅಂತ ಇವೆ ಇವೆ ತಿನ್ನುತ್ತಿದ್ದೆವು..ನಾನು ಅವರು....ಹುಷಾರಾದ ಮೇಲೆ ನಿಮಗೆ ಬೇಕಾದ್ದೆಲ್ಲ ತಿನ್ನ ಬಹುದು...ಈಗ ನಿಮಗೆ ಇಷ್ಟವಾದ ಊಟ ತಿಂಡಿ.imagine ಮಾಡ್ತಾ ನುಂಗಿ ಎನ್ನುತ್ತಿದ್ದೆ 😭😭
ಇವತ್ತು ಅವರ ಇಷ್ಟದ ನೀರು ದೋಸೆ ಮಾಡಿದ್ದೆ...







August 16, 2026

carrot cake

ಹಿಂದಿನ ತಿಂಗಳು ತರಕಾರಿ ಮಾರುಕಟ್ಟೆಗೆ ಹೋದಾಗ, ನಿಹಾಗೆ  ತಾಜಾ ಕ್ಯಾರೆಟ್  ಕಣ್ಣಿಗೆ ಬಿತ್ತು. 'ಅಮ್ಮ ಕ್ಯಾರೆಟ್ ಕೇಕ್ ತಿನ್ನ ಬೇಕೆಂದು ಅನ್ನಿಸ್ತಿದೆ' ಅಂದ್ಲು...ಸಿಕ್ಕಿದ್ದೇ chance ಅಂತ ಕ್ಯಾರೆಟ್ ಕೇಕ್ ಮಾಡಿಯೇ ಬಿಟ್ಟೆ. ದೊಡ್ಡ ಕೇಕ್ ಆದ್ರೆ ಅವಳು office ನ elevenses ಅಂದ್ರೆ ಹನ್ನೊಂದು ಗಂಟೆಗೆ ಅವರಿಗೆ ಚಾಯ್/ಕಾಪಿ ಬ್ರೇಕ್ ಇರ್ತದೆ. ದೊಡ್ಡ ಟೇಬಲ್ ಇರುತ್ತದಂತೆ. employees ಏನಾದರೂ ಶೇರ್ ಮಾಡಬೇಕಾದ್ರೆ, ಒಂದು ದೊಡ್ಡ ಟ್ರೆ ನಲ್ಲಿ ಹಾಕಿದೊಡಂತೆ. ನಾನು ಕೇಕ್ ಎಲ್ಲಾ ಮಾಡಿದಾಗ ಕಳುಹಿಸಿ ಕೊಡ್ತೇನೆ. ಕೇರಳಕ್ಕೆ ಹೋದಾಗ ಬಾಳೆ ಕಾಯಿ ಸಿಹಿ- ಕಾರಾ ಚಿಪ್ಸ್ ಉಡುಪಿಗೆ ಹೋದಾಗ, ಅಲ್ಲಿಯ  braganza ಬೇಕರಿಯಿಂದ ನಾನು ಹಲವಾರು snacks ಖರೀದಿಸಿ ಕಳಿಸಿದ್ದೇನೆ. 😁 ನನಗೆ ಖುಷಿ ಇಂತವಹನೆಲ್ಲ ಮಾಡಲು.

ಅವಳು ಕೆಲಸ ಮಾಡುವ  ಕಡೆ ಇಂದು ಹೊಸ exhibition ನಡೀತಿದೆ. ಇದಕ್ಕೆ ನಿಹಾ ತುಂಬಾ ಎಲ್ಲ ತಯಾರಿ ಮಾಡಿದ್ದಾಳೆ. ನಾನೂ ಅಲ್ಪ ಸ್ವಲ್ಪ feedback ಎಲ್ಲ ಕೊಟ್ಟಿದ್ದೇನೆ. ಏನು ಎತ್ತ ಅಂತ ಮುಂದಿನ ಪೋಸ್ಟ್ ನಲ್ಲಿ...ಆಸಕ್ತಿ ಇದ್ದಲ್ಲಿ ನೀವೂ ಹೋಗಬಹುದು 👍🙏

ಈ ಕ್ಯಾರೆಟ್ ಕೇಕ್ ತುಂಬಾ ಜನ ಲೈಕ್ ಮಾಡಲ್ಲ. ನನಗೆ ಇಷ್ಟ. ಈ ಕೇಕ್ ಗೆ ದಾಲ್ಚಿನಿ ಪುಡಿ is a must. ಆ ದಿನ ಕಡೆದ ತಾಜಾ  ಬೆಣ್ಣೆ ಕೂಡ ಇತ್ತು.  ತುಂಬಾ ರುಚಿಯಾಗಿತ್ತು...ಟೇಬಲ್ ಮೇಲೆ ಇಟ್ಟ ಕೂಡಲೇ ಖಾಲಿ ಆಯ್ತು ಅಂದ್ಲು ಕ್ಯಾರೆಟ್ ಕೇಕ್ ಇಷ್ಟ ಆಗಲ್ಲ, ಆಗಲ್ಲ ಅಂತಲೇ ತಿಂದರು ಅಂತ ವರದಿ ಒಪ್ಪಿಸಿದಳು ನಿಹಾ. ಯಾವತ್ತಿನ ಹಾಗೆ ಮೊಟ್ಟೆರಹಿತ, ಗೋದಿ ಹಿಟ್ಟಿನಿಂದ ನನ್ನ ಕಣ್ಣಳತೆಯಿಂದ ಮಾಡಿದ ಕೇಕ್ 

ಇಂತಿ ಕ್ಯಾರೆಟ್ ಕೇಕ್ ಪುರಾಣ ಸಂಪೂರ್ಣಮ್..🙂🙂


 

August 8, 2026

ಹಲಸಿನ ಹಣ್ಣಿನ ಪಾಯಸ/ ಘರಯಿ

 ಹೆಲ್ಲೋ ಫ್ರೆಂಡ್ಸ್.....ಒಂದು ವಾರಕ್ಕೆ ಇನ್ನೂ ಒಂದು ಲಕ್ಷ ಜನರು ನನ್ನ ಬ್ಲಾಗ್ ಗೆ ವಿಸಿಟ್ ಮಾಡಿದ್ದಾರೆ...ಈಗ ಒಟ್ಟು ಹಿಟ್ ಸಂಖ್ಯೆ6 ಲಕ್ಷ ಚಿಲ್ಲರೆ.....

ಹಾಗಾಗಿ ಇನ್ನೊಂದು ಸಿಹಿ ಅಡುಗೆ ನಿಮ್ಮ ಜತೆ ಶೇರ್ ಮಾಡ್ತೇನೆ. ನನ್ನ ತಂಗಿ ಯು ಎಸ್ ನಿಂದ ಬರುವ ಮುಂಚೆ, ಅವಳಿಗೆ ಏನು ಅಡುಗೆ  ತಿನ್ನ ಬೇಕೆಂದು ಕೇಳಿ ಅದಕ್ಕೆ ಬೇಕಾದುದನ್ನು ರೆಡಿ ಮಾಡಿ ಇಡ್ತೇನೆ...ಅಕ್ಕಿ ರೊಟ್ಟಿ, ನಾನು ಮಾಡುವ ಬೆಂಡೆಕಾಯಿ ಸಾಂಬಾರ್, stuffed ಬದನೆಕಾಯಿ ಅವಳಿಗೆ ಇಷ್ಟ. ಈ ಸಲ ಅವಳು ಹಲಸಿನ ಹಣ್ಣಿನ ಪಾಯಸ ಬೇಕೆಂದು ಹೇಳಿದ್ದಳು. ಹಿಂದಿನ ಸಲ ಒಂದು ಕೇಕ್ ಗೆ ಹಲಸಿನ ಹಣ್ಣು ಬೇಕಿತ್ತು. ತಂದ ಹಣ್ಣಿನಿಂದ ಕೆಲವು ತೊಳೆಗಳನ್ನು freeze ಮಾಡಿದ್ದ



               ಗೋವಾಕ್ಕೆ ಹೋಗುವ flight ನಲ್ಲಿ

ಮಾಡುವ ವಿಧಾನ:

ತುಪ್ಪ ಬಿಸಿ ಮಾಡಿ ಅದರಲ್ಲಿ ಗೇರು ಬೀಜ ಹುರಿದು ಪಕ್ಕಕ್ಕಿಡಿ. ಉಳಿದ ತುಪ್ಪದಲ್ಲಿ ಸಣ್ಣಕ್ಕೆ ಕತ್ತರಿಸಿದ ಹಲಸಿನ ಹಣ್ಣುಗಳನ್ನು ಘಮ್ ಅನ್ನುವಂತೆ ಹುರಿಯಿರಿ. ಬಿಸಿ ನೀರು ಸೇರಿಸಿ 5 ನಿಮಿಷ ಕುದಿಸಿ. ಇದಕ್ಕೆ ಬೆಲ್ಲ ಸೇರಿಸಿ...ಬೆಲ್ಲದ ಹಸಿ ವಾಸನೆ ಹೋದ ಮೇಲೆ ಸಲ್ಪ ಅಕ್ಕಿ ಹಿಟ್ಟಿನ ಮಿಶ್ರಣ ಹಾಕಿ... ಗ್ಯಾಸ್ ಆಫ್ ಮಾಡಿ. ತಣಿದ ಮೇಲೆ ಇದಕ್ಕೆ, ಹುರಿದ ಗೇರು ಬೀಜ, ಏಲಕ್ಕಿ ಪುಡಿ, ತೆಂಗಿನ ಹಾಲು ಬೆರೆಸಿ..

ಹಲಸಿನ ಹಣ್ಣಿನ ಪಾಯಸ


ಅಷ್ಟೇ...❤️👍🙏🙏. ನನ್ನ ತಂಗಿ ತುಂಬಾ ಎಂಜಾಯ್ ಮಾಡಿದಳು

ಥ್ಯಾಂಕ್ಯೂ ಎಲ್ಲರಿಗೂ