June 26, 2020

ಮನೆಯಲ್ಲೇ ಪಿಕ್ನನಿಕ್



Lockdown : 100 days
ನನ್ನ ತಂಗಿಗೆ ನಾನು ಆವಾಗವಾಗ  ಪಿಕ್ನಿಕ್ ಹೋಗುತ್ತೇನೆಂದು, ಹಿಂದಿನ ವರ್ಷ ಭಾರಾಟಕ್ಕೆ ಬರುವಾಗ ನನಗೋಸ್ಕರ ಪಿಕ್ನಿಕ್ ಮ್ಯಾಟ್  ತಂದು ಕೊಟ್ಟಿದ್ದಳು. ಅದು ಬೆಳಗಾವಿಯಲ್ಲೇ ಉಳಿದಿತ್ತು. ಲಾಕ್ಡೌನ್ ಗಿಂತ ಮುಂಚೆ ಅದನ್ನು ತಂದು ಇಟ್ಟು ಕೊಂಡಿದ್ದೆ. ಆಮೇಲೆ ನಿಹಾ ಭೋಪಾಲ್ ಗೆ ಹೋದ್ಲು...ಅವಳು ವಾಪಸ್ ಬರುವೆ ಎರಡು ದಿನ ಮುಂಚೆ ಲಾಕ್ ಡೌನ್ ಘೋಷಿಸಲಾಯಿತು.

ಇವತ್ತು ಹಾಗೆ ಸುಮ್ಮನೆ ಮನೆಯಲ್ಲಿ ಪಿಕ್ ನಿಕ್ ಹಮ್ಮಿಕೊಂಡೆವು. ತಂಗಿ ವಾಟ್ಸಪ್ಪ್ ವಿಡಿಯೋ ಮೂಲಕ ನಮ್ಮ ಜತೆ ಸೇರಿದಳು. ಅವಳ ಮನೆಯ ಹಿಂದೆ ಭೇಟಿ ನೀಡಿದ ಜಿಂಕೆಯ ಪಟ ನಮ್ಮ ಜತೆ ಶೇರ್ ಮಾಡಿದಳು. ನಗು ಹರತೆಒಂದಿಗೆ ನಮ್ಮ ಪಿಕ್ ನಿಕ್ ಮುಕ್ತಾಯ ವಾಯಿತು .





June 24, 2020

June 18, 2020

Mango jamoon

ನಮ್ಮ ಮನೆಯಲ್ಲಿ ಹಲವಾರು ಅಡುಗೆ ಪುಸ್ತಕಗಳಿವೆ. ಹೆಚ್ಚಿನವು ಶ್ರೀಕಾಂತ್ ಕೊ0ಡಿದ್ದು. ಈಗಲೂ ಹಿಸ ಪುಸ್ತಕ ತಂದಾಗ ನಾನು 'ಗೊತ್ತಿದ್ದದೆ ಮಾಡಲ್ಲ, ಇನ್ನು ಪುಸ್ತಕ ನೋಡಿ ಮಾಡ್ತೀನಾ? ಅನ್ನೋ ಪ್ರಶ್ನೆನೆ ಯಾವಾಗಲೂ
ಅಂಥದ್ದರಲ್ಲಿ ನಿನ್ನೆ ನನಗೆ ಮಾವಿನ ಹಣ್ಣಿನ ಜಾಮೂನು ಮಾಡುವ ಐಡಿಯಾ ಹೊಳೀತು.
ನಿಹಾ ನಾಲ್ಕು ತಿಂಗಳ ನಂತರ ಬೆಂಗಳೂರಿಗೆ ವಾಪಸ್ ಆಗಳು ಟಿಕೆಟ್ ಬುಕ್ ಮಾಡಿದಾಗ ನಾನು ಆನಂದ್ ಭಾವನ್ ನವರ 'ಗುಲಾಬ್ ಜಾಮೂನ್ ಮಿಕ್ಸ್' ತಂದಿಟ್ಟು ಸ್ವಲ್ಪ ಗುಲಾಬ್ ಜಾಮೂನು ಮಾಡಿದ್ದೆ.  ಇನ್ನು ಸ್ವಲ್ಪ ಮಿಕ್ಸ್ ಉಳಿದಿತ್ತು.

ತಡ ಮಾಡದೆ ಉಳಿದ ಜಾಮುನು ಮಿಕ್ಸ್ ಗೆ ಸಕ್ಕರೆ ಪುಡಿ, ಮಾವಿನ ಪಲ್ಪ್ ಸೇರಿಸಿ ಜಾಮೂನು ಮಾಡಿದೆ, ಮಾತ್ರವಲ್ಲ ಕೆಲ ಬಿಸ್ಕೂಟ ಕೂಡ ಮಾಡಿದೆ
ಅಕ್ಕನ ಬಳಿ ಕ್ರೀಮ್ ಪಡೆದು ಅದರಿಂದ ಮಂಗೋ ಕ್ರೀಮ್ ಕೂಡ ಮಾಡಿದೆ
Instagram ಮತ್ತು ವಾಟ್ಸಾಪ್ ನಲ್ಲಿ ಹಾಕಿದ್ದರಿಂದ ಹಲವರಿಗೆ ಇದನ್ನು ಮಾಡುವ ವಿಚಾರ ಬಂದಿದೆ.
ದೊಡ್ಡವಳಿಗೆ ಜಾಮೂನು ಇಷ್ಟವಾದರೆ, ಚಿಕ್ಕವಳಿಗೆ ಬಿಸ್ಕತ್.








June 13, 2020

#biscootfactory cakes

ಇತ್ತೀಚೆಗೆ ಹೋದ ಕೆಲವು ಕೇಕ್ ಗಳು
                         ಹಲಸಿನ ಹಣ್ಣಿನ ಕಪ್ ಕೇಕ್







My micro greens put to good use ..aliv microgreen


June 9, 2020

Home quarantine

ಮೊನ್ನೆ 7 ನೆ ತಾರಿಕಿಗೆ ಮಗಳು ಭೋಪಾಲ್ ನಿಂದ ಬಂದಾಯ್ತು. ಏನೋ ನೆಮ್ಮದಿ. ಅವಳು ಮನೆ ತಲುಪವವರೆಗೆ ಚಿಂತೆಯಿತ್ತು. ಯಾಕೆಂದರೆ ಅವಳಿಗೆ weather ಬದಲಾಗ್ತಾ ಒಣ ಕೆಮ್ಮು ಶುರು ಆಗುತ್ತೆ. ಭೋಪಾಲ್ ದಲ್ಲಿ ಮಳೆ ಹಾಗೂ ಚಳಿ ಇತ್ತಂತೆ. ಕೆಮ್ಮು ಶುರು ವಾಗಿದ್ದು ಮಾತ್ರವಲ್ಲ, fumigation ನಿಂದ ಅದು ಜಾಸ್ತಿಯಾಯ್ತು. ಅವಳ ಪಕ್ಕ ಕುಳಿತಿದ್ದ ಅಜ್ಜನಿಗೂ ವಿಪರೀತ ಕೆಮ್ಮಿತ್ತಂತೆ.

ದೆಹಲಿಯ ವಿಮಾನ ನಿಲ್ದಾಣ ಗಿಂತ ಬೆಂಗಳೂರಿನ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ತುಂಬಾ ಒಳ್ಳೆಯ ಸೌಲಭ್ಯ /quarantine ನಿಯಮಗಳನ್ನು ಚೆನ್ನಾಗಿ ಪಾಲಸುತ್ತಿದೆಯಂತೆ
ಹೊರ ರಾಜ್ಯದಿಂದ ಬಂದ ಎಲ್ಲರಿಗೂ ಈಗ ಕಡ್ಡಾಯ ಮನೆಯಲ್ಲೇ quarantine. ಹಾಗಾಗಿ ಅವಳಿಗೆ ಇಲ್ಲಿ ಬರುವ ಅವಕಾಶ ಇದ್ದರೂ ಇಲ್ಲಿ ತನಕ ಕಾದಿದ್ದು. Institutional quarantine ನ ಕೆಲ ಫೋಟೋ ನೋಡಿ ನಾನು ಹೌಹಾರಿದ್ದೆ. ಸಾಧ್ಯ ಮನೆ quarantine is better. ನಾವು ಅವಳ ಕೋಣೆಗೆ ಕಡಿಮೆ ಹೋಗುವುದು. ನಾನೊಬ್ಬಳೇ ಹೋಗುವುದು. ಅವಳಿಗೆ attached bathroom ಇರುವ ಕೋಣೆ ಬಿಟ್ಟು ಕೊಟ್ಟಿದ್ದೇವೆ. ಅವಳ ತಟ್ಟೆ, ಬಟ್ಟಲು, ಬಟ್ಟೆ ಬೇರೆ ವಾಷ್ ಮಾಡೋದು. ಕೋಣೆಗೆ, ಮನೆ ಬಾಗಿಲಿಿಗೆ quarantine sticker ಅಂಟಿಸಿದ್ದೇವೆ.
ಯಾವಾಗಲಾದರೂ ಹೆಲ್ತ್ ಇನ್ಸ್ಪೆಕ್ಟರ್ ಭೇಟಿ ನೀಡಬಹುದು
ಭೋಪಾಲ್ ದಲ್ಲಿ ಎಲ್ಲರೂ ಅವಳನ್ನು ಚೆಂದ ಮಾಡಿ ನೋಡಿಕೊಂಡಿದ್ದಾರೆ. ಒಟ್ಟು ಹದಿನೈದು ಜನ lock ಡೌನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದರು. ನಿಹಾ ಈಗ ಹದಿನೈದು ಜನರಿಗೆ ಅಡಿಗೆ ಮಾಡುವಷ್ಟು ಪರಿಣಿತಿ ಹೊ0ದ್ದಿದ್ದಾಳಂತೆ. 😀😀
ಅವಳು ವಾಪಸ್ ಬರುವ ಮುಂಚೆ ಅವಳ ಜತೆಗಾತಿಗಳು ಅವಳಿಗೆ ಪುಟ್ಟ ಪುಟ್ಟ gifts, letters ಎಲ್ಲ ಕೊಟ್ಟಿದ್ದಾರೆ.
ಕೆಲವರಿಗೆ ಇನ್ನೂ ಅವರವರ ಮನೆಗೆ ವಾಪಸ್ ಹೋಗಲು ಆಗಿಲ್ಲ. ಅವರ ಪಾಲಕರೆ ಸಧ್ಯಕ್ಕೆ ಮನೆಗೆ ಬರಬೇಡಿ ಅಂದಿದ್ದಾರಂತೆ. ಅವರೆಲ್ಲ ತಮ್ಮ ತಮ್ಮ ಮನೆಗೆ ಬೇಗ ವಾಪಸ್ಸಾಗಲಿ ಎಂದು ಹಾರೈಸುವೆ. ನನ್ನ ಮಗಳನ್ನು ನಾನು ಎಷ್ಟು ಮಿಸ್ ಮಾಡಿದೆ ಅಂತ ನನಗೆ ಮಾತ್ರ ಗೊತ್ತು 😐


June 7, 2020

ಸಿದ್ದು ಹಲಸು

ಎಷ್ಟೋ ಜನ ಸಿದ್ದು ಹಲಸಿನ ಬೀಜ ಇದ್ರೆ ಕೊಡಿ, ಸಸಿ ಮಾಡ್ತೇವೆ ಅಂತ ಕೇಳುವುದನ್ನು ಕೇಳಿದ್ದೆ. ಹಲಸಿನ ಹಣ್ಣು ಅಂದ್ರೆ ಹಲಸಿನ ಹಣ್ಣು, ಸಿದ್ದು ಹಲಸು ಏನಪ್ಪಾ ಅಂತ ಅಂದು ಕೊಳ್ತಾ ಇದ್ದೆ.

ನಿನ್ನೆ ಶ್ರೀಕಾಂತ್ ಚೇಳೂರು ಹhagalavaadi ತಾಲೂಕು..ಹೋಗಿದ್ದರು. ಅಲ್ಲಿನ ರೈತ ಗುಂಪು ನಮಗೊಸಕರ ಹಲಸಿನ ಹಣ್ಣು ಕಳುಹಿಸಿದ್ದರು.
ಇವತ್ತು ಬಿಡಿಸ್ತಾ ಒಂದು ಹನ್ನೆರಡು ಹಣ್ಣು ಗುಳುಂ ಮಾಡಿದೆ. ಏನು ಬಣ್ಣ ಏನು ರುಚಿ. ನಮ್ಮ ಅಪಾರ್ಟ್ಮೆಂಟ್ ವಾಟ್ಸಪ್ಪ್ ಗು0ಪಿನಲ್ಲಿ, first come first served ಅಂತ ಹಾಕಿದ್ದೆ, 10 ನಿಮಿಷದಲ್ಲಿ ಖಾಲಿ. ಒಬ್ಬಬ್ಬರಿಗೆ 10 ತೊಳೆ. 😀😀...8 ಜನರಿಗೆ ಕೊಟ್ಟೆವು

June 3, 2020

Lock Down 5.0 unlock 1.0

Saw the first rainbow of the year 2020...it was visible only for a while. Hence clicked a pic. Can you spot?


Had been to malleshwaram on some bank work. Took a long walk. Visited 8th cross