January 25, 2020

ನಮ್ಮ ಮನೆಯ ಗೋದ್ರೇಜ್ ಕಪಾಟು (450th post)

 ಬ್ಲಾಗ್ ಬರೆಯಲು ಶುರು ಮಾಡಿ 11 ವರ್ಷ ಆಯ್ತು ಮೊನ್ನೆ ಆಗಸ್ಟ್ 5 ಕ್ಕೆ..ಹಾಗೆ ಇದು ನನ್ನ 450 ನೆ ಬರಹ..hard to believe 😊😊
ಚಿಕ್ಕವರಿದ್ದಾಗ ಆಗಾಗ ತೀರ್ಥಯಾತ್ರೆ ಗೆ ಅಜೋಬ ನಾನಿ, ನಮ್ಮನ್ನೆಲ್ಲ ಹೊರಡಿಸ್ತಿದ್ರು ಅಂತ ಹಳೆ ಪೋಸ್ಟ್ ಒಂದರಲ್ಲಿ ಬರೆದಿದ್ದೆ. 
ಒಂದು ಸಲ ಬಾಡಿಗೆ ಮನೆಯಿಂದ ಹೀಗೆ ರಾಮೇಶ್ವರ ಕಡೆ ಹೋಗಿದ್ದೆವು. ಮನೆ owner ಮನೆಯಲ್ಲಿ ಮದುವೆ. ಹಾಗಾಗಿ ಮನೆ ಇಡೀ ಪೈಂಟಿಂಗ್ ನಡೀತಿತ್ತು. ನಾವು ನಮ್ಮ ಕಾರಲ್ಲಿ ಹೊರಟ್ವಿ. ನಾಲ್ಕೈದು ದಿನಗಳ ಪ್ರವಾಸ
ವಾಪಸ್ ಬಂದು ನೋಡ್ತೀವಿ ಮನೆಯಲ್ಲಿ ಸಾಮಾನು ಚಿಲ್ಲಾಪಿಲ್ಲಿ. ಸಿನಿಮಾದಲ್ಲಿ ಐ ಟಿ ರೈಡ್ ಆದಾಗ ತೋರಿಸುತ್ತಾರ ಲ್ಲವಾ ಹಾಗೆ, ಪುಸ್ತಕದ ಕಪಾಟು, ಅಡಿಗೆಮನೆ ಕಪಾಟು  ಅದರಲ್ಲಿನ ಸಾಮಾನು, ಪುಸ್ತಕ, ಪಾತ್ರೆ ಎಲ್ಲ ನೆಲದಮೇಲೆ. ಅಷ್ಟೇ ಅಲ್ಲ ದೇವರ ಪೀಠ ಕೂಡ ಜರುಗಿಸಲಾಗಿತ್ತು..ಇಷ್ಟೆಲ್ಲ ಯಾಕಂದ್ರೆ ನಮ್ಮಲ್ಲಿರುವ made to order ಕಬ್ಬಿಣದ ಬೀರು (bureau) ಬೀಗದ ಕೈ ಹುಡುಕಿದ್ದು. ಅದು ಸಿಗದೆ ಬಲವಾದ ಚೂಪಾದ ವಸ್ತುವಿನಿಂದ  ಬೀರುವಿನ ಬಾಗಿಲು ಒಡೆಯುವ ಪ್ರಯತ್ನ ಮಾಡಿದ ಕುರುಹೂ ಇತ್ತು.
ದೇವರ ಚಿಕ್ಕ ಪುಟ್ಟ ಬೆಳ್ಳಿಯ ಮೂರ್ತಿ ಒಯ್ದಿದ್ದರು. ಸೂಟ್ಕೇಸ್ ನಲ್ಲಿ ಲ್ಯಾವೆಂಡರ್, ಕರ್ಪೂರ ಇಟ್ಟು ಜೋಪಾನವಾಗಿಟ್ಟ ನನ್ನ ನಾನಿಯ ಬೆಲೆಬಾಳುವ ಸೀರೆಗಳನ್ನೆಲ್ಲ ಒಯ್ದು, ಖಾಲಿ ಸೂಟ್ಕೇಸನ್ನು ಯಾರದ್ದೋ ಪಾಯಿಖಾನೆಯಲ್ಲಿ ಬಿಸಾಕಿದ್ರು. 
ಪೊಲೀಸ್ ಗೆಲ್ಲ ಹೇಳಿದ್ದಾಯ್ತು. ನಮ್ಮ ಮನೆಯ ಒಂದು ಜತೆ ಬೀಗದ ಕೈ , owner ಮನೆಗೆ ಕೊಟ್ಟಿದ್ವಿ. ಬಹುಶ ಅಲ್ಲಿಂದ ಬೀಗದ ಕೈ ಪೈಂಟ್ ಮಾಡುವವರು ಕದ್ದು ಮನೆಯೊಳಗೆ ಬಂದಿರಬಹುದೆಂದು ಅನುಮಾನ
ಮೊನ್ನೆ ಬೆಳಗಾವಿಗೆ ಹೋದಾಗ ಆ ಕಪಾಟು- ಈಗಲೂ ನಮ್ಮಲ್ಲಿ ದೆ ನನಗೆ 52 ಆಯ್ತು, ಕಪಾಟು ಇನ್ನೂ ಹಳೆದು.. ಅಮ್ಮ, ' ನೀನು facebook ನಲ್ಲಿ ಹಾಕ್ತಿ ಅಂತ ಪಾಂಡು ಹೇಳಿದ್ದ...ಫೋಟೋ ತೆಗೆದು ಹಾಕಬೇಡ ಅಂದ್ರು...
ಆ ಕಪಾಟಿಗೆ ದೊಡ್ಡ ಕನ್ನಡಿ ಇದ್ದುದ್ದು ಇನ್ನೊಂದು ವಿಶೇಷತೆ. ಎಲ್ಲಾದರೂ ಹೊರಗೆ ಹೋಗಲಿಕ್ಕಿದ್ರೆ, ಅಮ್ಮ ಅದುರ ಎದುರು ನಿಂತು ತಯಾರು ಆಗೋದು ನೋಡುವುದು ನನಗೆ ತುಂಬಾ ಖುಷಿ. ಮೊಫಲಿಗೆ ಮುಖಕ್ಕೆ ಸ್ನೋ, ಆಮೇಲೆ ಪೌಡರ್, kukmkumada ಬಟ್ಟು, -ಲಾಲಗಂದ್ ಅನ್ನುತ್ತಿದ್ವಿ ಆಗ...ಮೊಣಕಾಲಿಗಿಂತ ಉದ್ದನೆಯ ಕೂದಲು, ಜಡೆ ಹಣೆಯುವುದು, ಆಮೇಲೆ ಸೀರೆ ಉಡುವುದು....ಅಮ್ಮನ ಆಪ್ತ ಸ್ನೇಹಿತೆ ವಿಜಯ..ಮನೆಯ ಮಹಡಿ ಮೇಲೆ ವಾಸ...ಅವರ ಗಂಡನಿಗೆ ಅಂತರರಾಷ್ಟ್ಟ್ರ್ರ್ಈಈಎಯ ಕಂಪೆನಿಯಲ್ಲಿ ದೊಡ್ಡ ಹುದ್ದೆ, ಅಮ್ಮನಿಗಿಂತ ಸ್ವಲ್ಪ ಹಿರಿಯರು...ಇನ್ನೂ ಮಕ್ಕಳಾಗಿರಲಿಲ್ಲ...ಅಮ್ಮನಿಗೆ ನಾವು ಮೂರು ಮಕ್ಕಳು ಹುಟ್ಟಿಯಾಗಿತ್ತು 😊...ವಿಜಯ ಆಂಟಿ ಸೀರೆ ಉಡಲು ನಮ್ಮ ಮನೆಗೆ ಬರುತ್ತಿದ್ದರು. ಉದ್ದನೆಯ ದೊಡ್ಡ ಕನ್ನಡಿ ಇದ್ದುದ್ದಕ್ಕೆ. ಅವರೊ ತುಂಬಾ ಉದ್ದನೆಯ ವ್ಯಕ್ತಿ... ಗುಂಗುರು ಕೂದಲಿನ ಮೋಟು ಜಡೆ, ಕಿವಿಗೆ ದೊಡ್ಡ ದೊಡ್ಡ ರಿಂಗ್...ನಾನು ಮಂಚದ ಮೇಲೆ ಬೋರಲು ಮಲಗಿ ಇವನ್ನೆಲ್ಲ ನೋಡುತ್ತಿದ್ದೆ
ಆ ಮೇಲೆ ನನ್ನ ಪುಟ್ಟ ತಂಗಿಯ ಸರದಿ....ದಿನದ ಮುಕ್ಕಾಲು ಪಾಲು ಅವಳು ಕನ್ನಡಿ ಎದುರಿಗೆ. ಅಲ್ಲೇ ಅವಳ ಮಾತು ಕತೆ, ಇಂಗ್ಲಿಷ್ ಅಂತ ಏನೋ ಕಚೀಪಿಚಿ ಭಾಷೆ...ಅಳು ನಗು ಮುಂತಾದ ತರಹಾವೇರಿ ಮುಖಗಳನ್ನು ಕನ್ನಡಿಯಲ್ಲಿ ನೋಡಿ ಮಾಡುತ್ತಿದ್ದಳು.  ಯಾವಾಗಲೂ canada ಗೆ ಹೋಗಿ ಇರುವುದಾಗಿ ಮಾತನಾಡುತ್ತಿದ್ದಳು.

ಅದಕ್ಕೆ ಕತೆ ಅಷ್ಟೇ..no photo..ಈಗ ಅಷ್ಟು ಗಟ್ಟಿಮುಟ್ಟಾದ ಕಪಾಟು ಇರೋದೇ ಅನುಮಾನ
ಯಾತ್ರೆಗೆ ಹೋದಾಗ ತೆಗೆದುಕೊಂಡು ಹೋಗಿದ್ದರಿಂದ ಕೆಲವು ರೇಷ್ಮೆ ಸೀರೆಗಳಲ್ಲಿ ಇದೂ ಒಂದು. 80 +ವರ್ಷ ಹಳೆಯ ಈ ಸೀರೆ ಈಗ ನನ್ನಲ್ಲಿ 👍😊🤗




January 20, 2020

ಮನೆ ಬಾಗಿಲಿಗೆ ತಾಜಾ ಮೀನು ಬೇಕೆ?

ಹೆಸರು ಫೈಯಾಜ್
30 ವರ್ಷಗಳಿಂದ ಮೀನು ಮಾರಾಟ
ಮೊದಲು ರಸೆಲ್ ಮೀನು ಮಾರುಕಟ್ಟೆಯಲ್ಲಿ ಮೀನು ಕೊಂಡು ಅಲ್ಲಿಯೇ ತಳ್ಳು ಗಾಡಿಯಲ್ಲಿ ಮಾರುತ್ತಿದ್ದರಂತೆ. ಆದರೆ ಇವರು ಮಾರುಕಟ್ಟೆಗೆ ಹೋಗಿ ಒಂದು ತರಹದ ಮೀನು ತಂದು ಗಾಡಿಯಲ್ಲಿ ಇತ್ತು ಪುನಃ ಮೀನು ತರುವುದಷ್ಟರಲ್ಲಿ ಎಷ್ಟೋ ಸಲ ಮೀನು ಕದ್ದು ಒಯ್ದರಂತೆ. ಒಂದು ಸಲ weighing scale ಕದ್ದು ಹೋದ ನಂತರ, ಮೊದಲು ಸೈಕಲ್, ಈಗ ಮೊಪೆಡ್ ನಲ್ಲಿ ಅಪಾರ್ಟ್ಮೆಂಟ್ ಗಳಿಗೆ ಕೆ ಆರ್ ಮಾರ್ಕೆಟ್ ನಿಂದ ತಂದು ಮಾರುತ್ತಾರೆ

ಮನೆಯಲ್ಲಿ ಹೆಂಡತಿ, 5 ಜನ ಮಕ್ಕಳು. 3 ಹೆಣ್ಣು, 2 ಗಂಡು. ಒಬ್ಬ ಮಗಳ ಮದುವೆ ಮೊನ್ನೆ ಡಿಸೆಂಬರ್ ನಲ್ಲಿ ನಡೆಯಿತಂತೆ. ಹೆಂಡತಿ ಗ್ರಹಿಣಿ
ದಿನಕ್ಕೆ 6000 ದುಡಿಮೆ. ಶನಿವಾರ ಭಾನುವಾರ 8000 + ದುಡಿಮೆ. ಬೆಳಿಗ್ಗೆ ಮೀನು credit ಮೇಲೆ ತರೋದು, ಸಂಜೆ ಅವರು ಕೇಳಿದ ದುಡ್ಡು ಅವರಿಗೆ ಕೊಟ್ಟು, ಉಳಿದದ್ದು ಇವರಿಗೆ. ಇವರು 7.30 ಗೆ ಮೀನು ತಂದು ಕೊಂಡು ಮಾರುತ್ತಿರುತ್ತಾರೆ, ಮಧ್ಯಾನ್ಹ 12.00 ಗಂಟೆ ಮೀನಿನ ರೇಟ್ ಫಿಕ್ಸ್ ಆಗುತ್ತದಂತೆ
ಒಂಡ್ದುಈ ಸಲ ಮಸ್ತ್ರ ಲಾಸ್ ಆಗಿದೆಯಂತೆ
ಆರ್ಥಿಕ ಸ್ಥಿತಿ ಮಧ್ಯಮ ಮಟ್ಟ- ಒಂದೇ ಲೆಕ್ಕದಲ್ಲಿ ನಡೆಫಿದೆಯಂತೆ
'30 ವರ್ಷದಿಂದ ಈ ಲೈನ್ ನಲ್ಲಿದ್ದೀನಿ ಮ್ಯಾಡಂ ಅವರೇ, ಒಂದು ನಾಲ್ಕು ದಿನ ನಾ ಬರದಿದ್ರೆ 'ಏನಾಯ್ತು, ಎಲ್ಲ ಸರಿಯಾಗಿದೆಯಲ್ಲ್ವಾ' ಅಂತ ಫೋನ್ ಮಾಡ್ತಾರೆ
ನೀಯತಾಗಿ ದುಡೀತೀನಿ ಅಮ್ಮಾವ್ರೇ...ಅಲ್ಲಾ ಮಿಯಾ ಯಾವುದಕ್ಕೂ ಕಾಫಿಮೆ ಮಾಡಿಲ್ಲ...ಇಷ್ಟರಲ್ಲೇ ಸಂತೋಷವಾಗಿದ್ದೇನೆ. ಸ್ದುವಾಂತದ್ದು ಒಂದು ಸಣ್ಣ ಮನೆಯಿದೆ. ಯಾವುದೇ ಸಾಲ ಇಲ್ಲ
CAA ಬಗ್ಗೆ : ನಮಗೇನು ತೊಂದರೆ ಆಗಿಲ್ಲ, ಅದರ ಬಗ್ಗೆ ತಲೆ ಕೆಡಿಸ್ಕೊಂಡಿಲ್ಲ
ಕೊಂಡ ಮೀನನ್ನು ಕ್ಲೀನ್ ಮಾಡಿ ಕೊಡುತ್ತಾರೆ. ಅದರ ಅವಶೇಷಗಳನ್ನು I A S ಕಾಲೊನಿಯವರು ಒಬ್ಬರು ಅದನ್ನು ತೆಗೊಂಡು ಕಾಂಪೋಸ್ಟ್ ಗೆ ಬಳಸುತ್ತಾರಂತೆ. 'ದೂಡ ದೊಡ್ಡ ಮನೆ, ಸಾಕಷ್ಟು ಜಾಗ ಇದೆ ಮ್ಯಾಡಂ'
ಫೋಟೋ ತೆಗಿಬಹುದಾ ಅಂದ್ರೆ ಏನು ನಾಚಿಕೆ...





ಅವರನ್ನು ಮಾತಾಡಿಸಿ ದಿಲ್ ಖುಷ್ ಹೋಗಯಾ

January 16, 2020

ವನ ಭೋಜನ

ಶ್ರೀಕಾಂತರ agri ಕಾಲೇಜು ಸಹಪಾಠಿ ಶ್ರೀ ಜೈರಾಮ ರೆಡ್ಡಿ ಯವರು, ಬ್ಯಾಂಕ್ ನೌಕರಿಯಿಂದ ಹಿಂದಿನ ವರ್ಷ ನಿವೃತ್ತರಾಗಿ, ಗುಡಿಬಂಡೆ ತಾಲೂಕಿನ ಊಚಲಹಳ್ಳಿಯಲ್ಲಿ 6ವರೆ ಎಕರೆ ಜಮೀನು ಕೊಂಡು, ಅದರಲ್ಲಿ ಮನೆ ಕಟ್ಟಿಸಿ, ತೋಟದಲ್ಲಿ ಸೀಬೆ, ನೇರಳೆ, ಹಲಸು, ಮಾವು, ನುಗ್ಗೆ ಮುಂತಾದ ಸಸಿ ನೆಟ್ಟಿದ್ದಾರೆ...wow ಎಷ್ಟು ದೊಡ್ಡ ವಾಕ್ಯ!!!
ಹಾಗೆ ಅವರ ಆಮಂತ್ರಣದ ಮೇರೆಗೆ ಇನ್ನೂ ಕೆಲವು ಸಹಪಾಠಿಗಳ ಒಟ್ಟಿಗೆ ಅವರ ಊರಿಗೆ ಹೋಗಿ, ಮುಂಚಿತವಾಗಿ ಸಂಕ್ರಾಂತಿ ಹಬ್ಬ ಆಚರಿಸಿ ಮಧ್ಯಾಹ್ನ ವನ ಭೋಜನ ಮುಗಿಸಿ ಬಂದೆವು. ಅವರ ಶ್ರೀಮತಿಯವರು ಜ್ಯೋತಿ ರೆಡ್ಡಿ ಹಲವಾರು ಪಕವಾನ್ನಗಳನ್ನು ತಯಾರಿಸಿದರೆ, ನಾವು ಕೆಲವೊ0ದು ಭಕ್ಷ್ಯಗಳನ್ನು ಕಟ್ಟಿಕೊಂಡು ಹೋಗಿದ್ದೆವು.
ಬೆಳಿಗ್ಗೆ ಏಳಕ್ಕೆ ಹೊರಟ ನಮ್ಮ ಸವಾರಿ ರಾತ್ರಿ ಹತ್ತಕ್ಕೆ ಮನೆ ತಲುಪಿದ್ದು. ಕೆಲಗಿವೆ ಕೆಲವು ಚಿತ್ರಗಳು.
ನಿಮಗೆಲ್ಲರಿಗೂ ಒಂದು ದಿನ ತಡವಾಗಿ ಸಂಕ್ರಾಂತಿ ಹಬ್ಬದ ಶುಭಾಶಯಗಳು. 😊😊
ಜೈರಾಮ ರೆಡ್ಡಿ +ಜ್ಯೋತಿ ದಂಪತಿಯ ಈ enterprise ಗೆ ಎಲ್ಲರೂ ಶುಭ ಕೋರಿ.
ಮಧ್ಯಾಹ್ನ ಅಲ್ಲಿಗೆ ಶ್ರೀ ಶ್ರೀಧರ್ ಸಾಗರ್ ಅವರು ಆಗಮಿಸಿದರು. 78 ವಯಸ್ದಿನ ಇವರು ಆರ್ ಎಸ್ ಎಸ್ ನ ಪ್ರಮುಖ ಶಾಖಾಧಿಕಾರಿಯಾಗಿದ್ದವರು, Hindu Seva Prathishtan’s Director Sridhar Sagar, 6 ತಿಂಗಳ ಹಿಂದೆ ಗುಡಿಬಂಡೆ ಹಳ್ಳಿಯನ್ನು ದತ್ತು ಪಡೆದು ಅಲ್ಲಿ 'ಗ್ರಾಮ ವಿಕಾಸ' ಹೆಸರಿನ ಸಂಸ್ಥೆಯಡಿ ಹಲವಾರು ಸುಧಾರಣಾ ಕಾರ್ಯಗಳನ್ನು ಹಮ್ಮಿಕೊಂಡಿದ್ದಾರೆ.. ಸಂಜೆ ನಾವು ಅವರ ಸಂಸ್ಥೆಗೆ ಭೇಟಿ ನೀಡಿದೆವು.
                     ನಮ್ಮಮನೆಯ  ಸಂಕ್ರಾಂತಿ ಹಬ್ಬ
ಅಂಗಳದಲ್ಲಿ ಸೆಗಣಿ ಸಾರಿಸಿ, ರಂಗೋಲಿ ಹಾಕಿ ಪೊಂಗಲ್ ತಯಾರಿಸಲು ಮಡಿಕೆ ಸಜ್ಜಾಗಿ ಕುಳಿತಿದ್ದು
ಪೊಂಗಲ್ ತಯಾರು (ಚಿತ್ರ ಸ್ವಲ್ಪ ಹಿಂದೆ ಮುಂದೆ ಯಾಗಿವೆ)
ನಮ್ಮ mid morning ಚಹಾ ಮತ್ತು ಶೇಂಗಾ
ಗಂಡಸರೆಲ್ಲ ನಮ್ಮ ಮೇಲ್ವಿಚಾರಿಕೆಯಲ್ಲಿ ಪೊಂಗಲ್ ತಯಾರಿಸುತ್ತಿರುವುದು
ಹಲವಾರು ಹೂಗಳಲ್ಲಿ ಒಂದು
ವನ ಮಹೋತ್ಸವ.. ಎಲ್ಲ ದಂಪತಿಗಳು ಒಂದೊಂದು ಸಸಿ ನೆಟ್ಟೆವು
ಜೋಳದ ರೊಟ್ಟಿ ಮತ್ತು sides
ಊಟದ ಸಮಯ
 ತಮ್ಮ ಕಾರ್ಯ ಚಟುವಟಿಕೆಗಳ ಬಗ್ಗೆ ತಿಳುವಳಿಕೆ ನೀಡುತ್ತಿರುವ ಸಾಗರ್ ಅವರು
ತೋಟದಲ್ಲಿ ಒಂದು ಸುತ್ತು
ಪೊಂಗಲ್ ಆಚರಿಸಿದ್ದು...ಅಗ್ನಿ ನೀಡುತ್ತಿರುವ ಜೈರಾಮ ರೆಡ್ಡಿ ಹಾಗೂ ಜ್ಯೋತಿ
ಬೆಳಗ್ಗಿನ ಉಪಹಾರದ ನಂತರ
ಶ್ರೀ ಶ್ರೀಧರ್ ಸಾಗರ್ ಜತೆ ಮಹಿಳಾಮಣಿಗಳು...,😀😀










January 6, 2020

ಹೀಗೊಂದು ಸೋಮವಾರ

ನಾನು ದಿನಾ ಹಾಲು ತರಲ್ಲ. ದಿನ ಬಿಟ್ಟು ದಿನ ತರೋದು. ಮಕ್ಕಳು ಸಾದಾ ಚಹಾ ಕುಡಿಯೋದು, ಅಂದರೆ black tea, ಶ್ರೀಕಾಂತ ಗೆ ಬೆಳಗ್ಗಿನ ತಿಂಡಿ ಜತೆಗೆ ಒಂದು ಕಾಫಿ ಅಷ್ಟೇ. ನಾನು ದಿನದಲ್ಲಿ ಮೂರು ಬಾರಿ ಚಹಾ , ಅದೂ ಹಾಲಿಂದಲೇ ಅಂತ ಅಲ್ಲ, ಸ್ವಲ್ಪ ಹಾಲು ಕಾಣಿಸಿದರಾಯಿತು ,😁😁...ಹಾಗಾಗಿ .ಮನೆಗೆ ನೆಂಟರು ಬಂದ ಹೊರತು ಇದೆ ನನ್ನ ಪರಿಪಾಠ.
ಬೆಳಿಗ್ಗೆ 4.45 ರಿಂದ 6 ತನಕ ನನ್ನ ವಾಕಿಂಗ್ ಆಮೇಲೆ ಹಾಲು ತರೋದು...ಹಾಲು ತರಲಿಕ್ಕೆ ಇಲ್ಲದಿದ್ದ ದಿನ 6 ಗಂಟೆಗೆ ವಾಕ್ ಮುಗಿಸಿ ಮನೆಗೆ ಬಂದು ಟಿ ಮಾಡಿ ಬಾಲ್ಕನಿ ಮೇಲೆ ಕೂತು ಟಿ ಹೀರೋದು ನನ್ನ ದಿನಚರಿ. ಇವತ್ತು ವಾಕ್ ಮುಗಿಸಿ ಟಿ ಗೆ ಇಟ್ಟಿದ್ದೆ, ಹಾಲು ಒಡೆದು ಹೋಯ್ತು. ನಿನ್ನೆ ಯಾರೋ ಫ್ರಿಜ್ ಬಾಗಿಲು ಸರಿ ಹಾಕಿರಲಿಲ್ಲ. ಹಾಗಾಗಿ ಬೆಳಗ್ಗಿನ ಉಪಹಾರಕ್ಕೆ ಸ್ವಲ್ಪ ಎಲ್ಲ ತಯಾರು ಮಾಡಿ, ಹಾಲು ತರಲು ಹೊರಟೆ
ದಿನಾಲು ಬೆಳಿಗ್ಗೆ ನಾನು ವಾಕ್ ಹೋಗಿ ಹಾಲು ತರಲು ಹೋಗುವಾಗ ರಸ್ತೆ ಖಾಲಿ ಖಾಲಿ...ಐದು ನಿಮಿಷ ಸಾಕು. ಇವತ್ತು ಬೆಳಿಗ್ಗೆ ಗೇಟಿನ ಬಳಿ ಗಡಿಬಿಡಿ. ಶಾಲೆಗೆ ಹೋಗುವ ಮಕ್ಕಳು, ಅವರ ತಂದೆ ತಾಯಿ, ಆಯಾ ಗಳು, ಗೇಟ್ ಮುಂದೆ ನಿಂತಿದಂತಹ ಶಾಲಾ ವಾಹನಗಳ ಭರಾಟೆ...ರಸ್ತೆ ಆ ಕಡೆ ಈ ಕಡೆ ಕಾಣಿಸದಷ್ಟು...ರಸ್ತೆ ಕ್ರಾಸ್ ಮಾಡಲು ಒಂದೈದು ನಿಮಿಷ ಕಾಯ ಬೇಕಾಯ್ತು. ಇನ್ನು ಹಾಲು ತರುವ ರಸ್ತೆ ಬಳಿ ಸಿಗ್ನಲ್ ಇಲ್ಲ, ಬಿಡುವಿಲ್ಲದ ವಾಹನಗಳ ಓಡಾಟ, ಇದ್ದ ಬದ್ದ ಕಡೆಯಿಂದೆಲ್ಲ ಬರುವ two wheeler ಗಳು..ಆ ಮೇಲೆ ಹಾಲಿನವಳ ಪ್ರಶ್ನೆ ಗಳು...ಯಾಕೆ ಲೇಟು ಇತ್ಯಾದಿ

ಸುಮಾರು ಹದಿನೈದು ನಿಮಿಷ ಬೇಕಾಯ್ತು ಮನೆಗೆ ಬರಲು..
ಇದೊಂದು ಹೊಸ ಅನುಭವ 😁😁