August 31, 2024

ತೋಟದಲ್ಲೊಂದು ವನ ಮಹೋತ್ಸವ

 21.08.2024 ರಂದು 'ಏಕ್ ಪೇಡ್ ಕೆ ನಾಮ್' ಯೋಜನೆಯಡಿ ನಮ್ಮ ತೋಟದಲ್ಲಿ ನಾಲ್ಕು ಗಿಡಗಳನ್ನು ನೆಟ್ಟು ವನಮಹೋತ್ಸವ ಮಾಡಿದೆವು

1. ರುದ್ರಾಕ್ಷಿ ಗಿಡ

2. ಕೆಂಡಸಂಪಿಗೆ

3. ಕೇಸರಿ ಮಾವು

4. ಮುಳ್ಳು ಸಂಪಿಗೆ ಹಣ್ಣು

ಗಿಡಗಳನ್ನು ಸಾಗರದ ಬಳಿಯ ಮಂಜುನಾಥ ಭಟ್ಟರ 'ಮಂಜುಶ್ರೀ'  ನರ್ಸರಿಯಿಂದ ಖರೀದಿಸಿ ನಮ್ಮ ತೋಟದಲ್ಲಿ ನಾನು, ಶೋಭಾ, ಸಾಲಿಮಠ , ರಾಜೇಂದ್ರ,  ಮತ್ತು ನಮ್ಮ ಐ ಡಿ ಎಫ್ ನ ಮಕ್ಕಳು ಸೇರಿ ನೆಟ್ಟಿದೆವು. ತೋಟದ ಪಕ್ಕದಲ್ಲಿ ವಾಸಿಸುವ ಮತ್ತು ತೋಟದ ಮೇಲೆ ಒಂದು ಕಣ್ಣಿ ಡುವ ನಾಗಮ್ಮ ಗಿಡಗಳಿಗೆಲ್ಲ ನೀರುಣಿಸಿದರು..



ನಮ್ಮ ಗಾಡಿಯಲ್ಲಿ ಗಿಡಗಳನ್ನು ತಂಡ ಪರಿ ...😀😀

ಒಳ್ಳೆ ಗಮ್ಮತ್ತಾಯಿತು.








August 30, 2024

ಶ್ವಾನ ಪ್ರೀತಿ

  


ನನಗೆ ನಾಯಿ ಬೆಕ್ಕು ಅಂದ್ರೆ ಸ್ವಲ್ಪ ದೂರ. ಮಗಳು ಯಾವಾಗಲೂ ನನಗೆ insta ದಲ್ಲಿನ ಮುದ್ದು ನಾಯಿಗಳ ಆಟ  ಪಾಠ ಜಾಣತನಗಳ reels ಕಳುಸುತ್ತಿರುತ್ತಾಳೆ....ನಾನೇನಾದ್ರೂ ಸೋ sweet ಅಂದ್ರ 'ಅಮ್ಮ ಇದೊಳ್ಳೆ ಸಮಯ, ನಾವೂ ನಾಯಿ ಸಾಕೋಣಾ' ಜೀವನ ಚೆನ್ನಾಗಿರುತ್ತೆ ಅಂತಾಳೆ...

ಮತ್ತೆ ಅದನ್ನು ಈಸ್ಶಿ, ವಾಕ್ ಎಲ್ಲ ಯಾರು ಕರ್ಕೊಂಡು ಹೋಗ್ತಾರೆ ಅಂದ್ರೆ 'ನೀನೇ..ನಿನಗೆ ಒಳ್ಳೆ ವ್ಯಾಯಾಮ ಅಗುತ್ತೆ' ಅಂತೆ....ಒಳ್ಳೆ ಕತೆ..

ಮೊನ್ನೆ ಸಾಗರದ ಬಳಿಯ 'ಅಜ್ಜನಮನೆ' ಹೋಮ್ ಸ್ಟೇ ದಲ್ಲಿ ಒಂದು ನಾಯಿ ಇತ್ತು. ಅದನ್ನು grandly ignore ಮಾಡಿದ್ದೆ.  ಮರುದಿನ ನಾವು ದೊಡ್ಡ ವಾಕ್ ಹೋಗಿ ಬಂದ ಮೇಲೆ, ಹಾಯಾಗಿ ಕುಳಿತು ನನ್ನ ಚಹಾ ವನ್ನು ಆಸ್ವಾದಿಸುತ್ತಿದ್ದಾಗ, ಬಾಲ ಅಲ್ಲಾಡಿಸಿ ನನ್ನ ಬಳಿ ಬಂತು...ನಾನು ಕ್ಯಾರೆ ಅನ್ನಲಿಲ್ಲ...ಆದರೂ..ನಾನು ಕಾಲು ಮೇಲೆ ಕಾಲು ಇಟ್ಟು ಕೂತಿದ್ದರೂ ಕಾಲ ಬುಡದ ಸಂದಿಯಲ್ಲಿ ಅರಮಾಗಿ ಕೂತಿತು ಮತ್ತು ನನಗೆ ಅಲ್ಲಾಡಲೂ ಜಾಗ ಇರಲಿಲ್ಲ..ಆದರೂ i was comfortable...ಅಷ್ಟೇ ಅಲ್ಲ ಬಿಟ್ಟು ಬಿಟ್ಟು ತಲೆ ಮೇಲೆತ್ತಿ ನನ್ನನ್ನು ನೋಡುವ ಸೇಲೆ ಼಼಼಼ಮುದ್ದು ಬಂದ್ಬಿತು. ಜೋರಾಗಿ ನಕ್ಕು ಬಿಟ್ಟೆ...ನಮ್ಮ ಗಾಡಿಯ ಸಾರಥಿ ಅಜಯ್ ನನ್ನ ಮೊಬೈಲ್ ಇಸ್ಕೊಂಡು ಫೋಟೋ ತೆಗೆದೆ ಬಿಟ್ಟ....

ಇಲ್ಲಿವೆ...







🙂🙂❤️

August 23, 2024

ಅಜ್ಜನಮನೆ ಹೋಮ್ ಸ್ಟೇ

 ಸಾಗರ ದಲ್ಲಿ ಆಫಿಸ್ ಕೆಲಸದ ನಿಮಿತ್ತ ಹೋಗುತ್ತೇವೆ...ಗಾಡಿ ಖಾಲಿ ಇದೆ, ಸಹೋದ್ಯೋಗಿ ಮಿತ್ರ ಸಾಲಿಮಠ  ಅವರ ಶ್ರೀಮತಿ ನನ್ನ ಸ್ನೇಹಿತೆ ಶೋಭಾ ಅವರಿಗೂ ಆಸಕ್ತಿ ಇದೆ ಎರಡು ದಿನ ಹೋಗಿ ಬರುವಾ ಅಂದಾಗ, ನನ್ನ ಮೈಸೂರಿನ ಪ್ರಯಾಣ ರದ್ದು ಗೊಳಿಸಿ ಇವರ ಜತೆ ಹೊರಟು ಬಿಟ್ಟೆ.

ಸಾಗರದ ಬಳಿಯ ತಲವಾಟ್ ದಲ್ಲಿನ 'ಅಜ್ಜನಮನೆ'ಹೋಮ್ ಸ್ಟೇ ದಲ್ಲಿ ನಮಗೆ ಉಳಿಯುವ ವ್ಯಸ್ಥೆ ಇನ್ನೊರ್ವ್ ಸಹೋದ್ಯೋಗಿ ಶ್ರೀ ರಾಜೇಂದ್ರ ಅವರು ಮಾಡಿದ್ದರು.

Air, Earth & Water ಕೊಠಡಿಗಳ ಹೆಸರು. ಒಂದಲ್ಲಿ ಆರು ಬೆಡ್, ಇನ್ನೆರದರಲ್ಲಿ 4 ಬೆಡ್ each ಗಳ ವ್ಯವಸ್ತೆ. 2550 per head. ವಿಶಾಲವಾದ ಕೊಠಡಿಗಳು, ಸ್ವಚ್ಚ ಬಾತ್ರೂಮ್/ ಟೋಯ್let ಹಸುರಿನಿಂದ ತುಂಬಿದ ಸ್ಥಳ..ಪ್ರೀತಿಯಿಂದ, ರುಚಿಕರವಾದ ಮಲೆನಾಡಿನ ಅಡುಗೆಯನ್ನು ಮಾಡಿ ಬಡಿಸುವ ರತ್ನಾ ಮತ್ತು ಸಂಗಾತಿ. ಪೇಟೆಯ ಕಿರಿ ಕಿರಿಯಿಂದ ಎರಡು ದಿನ ಬ್ರೇಕ್ ಬೇಕಾದರೆ ಖಂಡಿತ ಅಜ್ಜನಮನೆಗೆ ಹೋಗಿದ್ದು ಬನ್ನಿ. Bet  you will not regret it!! 😊❤️

ನಾ ತೆಗೆದ ಕೆಲವು ಚಿತ್ರಗಳು. ಗೂಗಲ್ ಸರ್ಚ್ ನಲ್ಲಿ ಇನ್ನಷ್ಟು ಮಾಹಿತಿ  ಚಿತ್ರಗಳು ನಿಮಗೆ ಸಿಗುತ್ತವೆ

www.ajjanamane.com ಗೆ ಭೇಟಿ ನೀಡಿ
















clean, hygienic and neat open kitchen




August 18, 2024

Escaping the Ordinary



A few days ago,  Feeling overwhelmed being at home,, I embarked on a solo adventure to Cubbon Park, seeking solace in nature's embrace. i quickly  packed a lunch, grabbed a book, and teached cubbon park. basked in the warm sunshine, surrounded by the vibrant energy of school children on a field trip.






As I delved into my book, a playful squirrel became my unlikely companion, sparking a sense of wonder. 


Inspired, I jotted down story ideas, letting my imagination run wild. A leisurely stroll around the park, followed by a visit to the aquarium 













and the Vishweshwaraiah museum, added a delightful touch of tourism to my day.


Returning home, I felt revitalized, with a renewed sense of purpose. This impromptu escape was a reminder that sometimes, all we need is a change of scenery to reignite our spark. I vowed to make such breaks a regular part of my life, embracing the beauty of spontaneity and the joy of discovery."


August 11, 2024

Orienteering

 (15 years of blogging 🙂🙂❤️🙏🙏)


ಕೊನೆಗೂ ಅಕ್ಕನಿಗೆ ಇಷ್ಟವಾಗುವಂತಹ adventure sports ಪರಿಚಯವಾಗಿದೆ. ವಾರ್ಯಾಂತದಲ್ಲಿ ಕೇಕ್ ಆರ್ಡರ್ ಇಲ್ಲದಿದ್ದಲ್ಲಿ ಅವಳು ಭಾಗವಹಿಸುತ್ತಾಳೆ. ಅದರ ಹೆಸರು ಒರಿಯೆಂಟೀಯರಿಂಗ್...orienteering

ಅಕ್ಕನ ಜತೆಗೆ ನಮ್ಮ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿರುವ , ನಮಗೆ ಪರಿಚಯವಿರುವ 73 ವರ್ಷದ ಮಾಲಾ ಹೊನ್ನತ್ತಿ ಕೂಡ ಭಾಗವಹಿಸುವವರಿದ್ದರು. ನಮ್ಮದೇ ಗಾಡಿ ಒಯ್ಯುತಿದ್ದರು, ಅದಕ್ಕೆ ನಾನೂ ಅವರ ಜತೆ ಹೋಗಿ ಪುಸ್ತಕ ಓದುತ್ತ ಚಿಲ್ ಮಾಡ್ತೇನೆ ಅಂದೆ...ದೇವನಹಳ್ಳಿಗಾ? ನಾನು ಬರ್ತೇನೆ, ಅಲ್ಲಿ ಒಂದು ನರ್ಸರಿಗೆ ಭೇಟಿ ನೀಡಲಿಕ್ಕಿದೆ ಅಂದ್ರು ಇವರು..




ಬೆಳೆಗ್ಗೆ ನಾಲ್ಕಕ್ಕೆ ಎದ್ದು ಸಾಂಡ್ವಿಚ್ ರೆಡಿ ಮಾಡ್ದೆ. ಸ್ನಾನ ಎಲ್ಲ ಮುಗಿಸಿ 5 ಕ್ಕೆ ಹೊರೆಟೆವು...6 ಕ್ಕೆ ಅಲ್ಲಿರ ಬೇಕಿತ್ತು
ದೇವನಹಳ್ಳಿಯ century trails ನಲ್ಲಿ ಈ adventure sports ಹಮ್ಮಿಕೊಡಿದ್ದರು. ಅವರದ್ದು advertisement ಕೂಡ ಆಗುತ್ತೆ. ವೆಬ್ ನಲ್ಲಿ search ಕೊಟ್ಟು ನೋಡಿ...ಇನ್ನೂ ಹತ್ತು ವರ್ಷ ಆದ್ರೂ ಬೇಕು ಅದು develop ಆಗೊಕ್ಕೆ.




ಮದ್ಯ ಮಧ್ಯ ಮಳೆಯಿತ್ತಾದರೂ...7.30 ಹೊತ್ತಿಗೆ ಮಳೆ ಎಲ್ಲ ನಿಂತು ಸ್ವಲ್ಪ ಸೆಕೆ ನೆ ಇತ್ತು. ಸ್ವಲ್ಪ ಹೊತ್ತು ಭಾಗವಹಿಸುವವರನ್ನು ಅಟಕ್ಕೆ   ತಯಾರಾಗುವುದನ್ನು ನೋಡುತ್ತಾ ಕಳೆದೆ...ಹಲವಾರು ಜನ ಸೈಕಲ್ ತಂದಿದ್ದರು. ಈ ಆಟದಲ್ಲಿ..ನಡಿಗೆ ಓಟ ಅಥವಾ ಸೈಕಲ್ ಉಪಯೋಗಿಸ ಬಹುದು.  ಒಟ್ಟು 60 ಜನ ಭಾಗವಹಿಸಿದ್ದರು...








                       fertile red soil
   sugandhi my fav flower at the site
              lovely view.of nandi betta

             Teja nursery, Devanahalli
                              👇👇



                 beautiful bamboo
       loved the lighting, hence the click
                                  😁😁👆

                          ಚಕ್ಕೋತ

ಅವರಿಬ್ಬರನ್ನು ಅಲ್ಲಿ ಬಿಟ್ಟು ನಾವು ತೇಜಾ ನರ್ಸರಿ ಯಲ್ಲಿ ಒಂದು ಸುತ್ತು ಹೊಡೆದು, ಕೆಲ ಗಿಡಗಳನ್ನು ಖರೀದಿಸಿ, ದೇವನಹಳ್ಳಿಯ ತರಕಾರಿ ಮಾರುಕಟ್ಟೆಗೆ ಹೋಗಿ ಬಂದೆವು.


ಅಕ್ಕನಿಗೆ 3 ನೆ ಬಹುಮಾನ, ಮಾಲಾ ಹೊನ್ನತ್ತಿಯವರಿಗೆ 2 ನೆ ಬಹುಮಾನ ಬಂತು...

A day well spent