ನನ್ನ ತಮ್ಮನ ಮಗಳಿಗೆ fermented ತಿಂಡಿಗಳು ಇಷ್ಟ ಆಗಲ್ಲ. ಅವಳಿಗೆ ಉದ್ದು-ಮೈದಾ ದೋಸೆ, ನೀರು ದೋಸೆ ಮತ್ತು ಕೆಳಗೆ ಕೊಟ್ಟಿರುವ ದೋಸೆ ಇಷ್ಟ.
ಕೊಂಕಣಿಯಲ್ಲಿ ಕರ್ ಕರ್ ಮಚಕಟ್ ಅಂತ ಹೆಸರು...ಸ್ವಲ್ಪ ದಪ್ಪ ಹುಯ್ಯಬೇಕು..
2 ಗ್ಲಾಸ್ ಅಕ್ಕಿ, 2 tb sp ಉದ್ದಿನ ಬೇಳೆ, 2 ಟೇಬಲ್ ಚಮಚ ತಾಜಾ ಕಾಯಿ ತುರಿ
ನಾನು ನಾಲ್ಕು ಗಂಟೆಗೆ ಎದ್ದಿರುತ್ತೇನೆ ಅಂತ ಹಲವಾರು ಬಾರಿ ಬ್ಲಾಗ್ ನಲ್ಲಿ ಹಾಕಿದ್ದೇನೆ....so ನಾಲ್ಕು ಗಂಟೆಗೆ ನೀರಲ್ಲಿ ನೆನೆಸ್ತೀನಿ. ಚಹಾ ಕುಡಿದು..ವಾಕ್ ಹೋಗಿ..6 ಗಂಟೆಗೆ ಎರಡು table spoon ತಾಜಾ ತೆಂಗಿನ ಕಾಯಿ ತುರಿ ಹಾಕಿ ತರಿ ತರಿ ಯಾಗಿ ರುಬ್ಬಿ..ಉಪ್ಪು ಬೆರೆಸಿ, regular ದೋಸೆ ಹಿಟ್ಟಿಗಿಂತ ,ಹಿಟ್ಟು ಸ್ವಲ್ಪ ನೀರು ನೀರಾಗಿರಲಿ batter. ಬಿಸಿ ಬಿಸಿ ದೋಸೆ ಹುಯ್ದು, ಬಿಸಿ ಇರುವಾಗಲೇ ಬೆಣ್ಣೆ ಜತೆ ಜಮಾಯಿಸಿ..ನನಗೆ ಥ್ಯಾಂಕ್ಸ್ ಹೇಳಿ 🙂🙏❤️
ಚಿತ್ರದಲ್ಲಿ salted butter ಮತ್ತು shadrasa cooking channel ನಲ್ಲಿರಿವ, ಮಂಜೇಶ್ವರ ದೇವಸ್ಥಾನದಲ್ಲಿ ಊಟಕ್ಕೆ ಬಡಿಸುವ ಟೊಮೆಟೊ ಗೊಜ್ಜು...ನೋ ನೀರುಳ್ಳಿ ನೋ ಬೆಳ್ಳುಳ್ಳಿ...yet yummy
unfermented : ಹುದುಗು ಬರದ / ಹುಳಿಯಾಗಿರದ

No comments:
Post a Comment