ಶ್ರೀಕಾಂತ್ ಗೆ ದೈವಾಧೀನ ರಾಗುವ ಎರಡು ತಿಂಗಳ ಹಿಂದೆ, ಪ್ರತೀ ಮೂರು ದಿನಕ್ಕೊಮ್ಮೆ ಹೋಟಲ್ ಇಡ್ಲಿ ತಿನ್ನುವ ಆಸೆ ಆಗ್ತಿತ್ತು. ಚಟ್ನಿ ಮಾತ್ರ ಮನೆದೇ 😁
ನನ್ನ ಇಷ್ಟದ ಒಂದು ಪುಟ್ಟ ಅಂಗಡಿ ಇದೆ. ರುಚಿಕರ ಆಹಾರ ಮಾತ್ರವಲ್ಲ, ಬೆಳಿಗ್ಗೆ ನಾಲ್ಕು ಗಂಟೆಗೆ ತೆರೆಯುತ್ತೆ. ಗ್ಯಾಸ್ ಇಲ್ಲ ಅಂತ ಏನೂ complaint ಇಲ್ಲ. ಮೆನ್ಯು ನಲ್ಲಿ ಯಾವ ಐಟಂ ಕೂಡ ಕಡಿತ ಗೊಳಿಸಿಲ್ಲ. ಮತ್ತೆ ಅವರ ಲಕ್ ಅನ್ನಬಹುದು....ಅಂಗಡಿ ಇರೋ ಜಾಗ ದ ಎದುರು ಅಗಲ ರಸ್ತೆ ಮಾತ್ರವಲ್ಲದೇ ಅಷ್ಟೊಂದು ವಾಹನ ಸಂಚಾರ ಇಲ್ಲ. ವೀಡಿಯೊ ದಲ್ಲಿನ ಹಾಗೆ ರಸ್ತೆ ಪಕ್ಕ ಕಲ್ಲು ಪೇರಿಸಿ ಓಲೆ ಮಾಡಿಕೊಂಡಿದ್ದಾರೆ. ಪಲಾವ್ ರೆಡಿಯಾಗ್ತಿದೆ 😁👍
ನನಗೆ ಒಂದು ಬೇಜಾರಿದೆ. ಯಾಕೆ ನಮ್ಮ ದೇಶ ಸೌರ ಶಕ್ತಿ ಉಪಯೋಗಿಸುತ್ತಿಲ್ಲ ಎಂದು? ನನ್ನ ತಂಗಿ ಮಗಳು ನಾನು ತುಂಬಾ ಪ್ರಯಾಣ ಕೈಗೊಳ್ಳುತ್ತೇನೆಂದು ನನಗೆ ಪುಟ್ಟದೊಂದು ಸೌರ ಟಾರ್ಚ್ ಕೊಟ್ಟಿದ್ದಳು....ಸ್ವಲ್ಪ ಬೆಳಕಿದ್ದರೂ ಸಾಕು ಅದು ತನ್ನಷ್ಟಕ್ಕೇ ಚಾರ್ಜ್ ಆಗ್ತಾ ಇರ್ತದೆ...(ಕಡೆಗೊಂದು ದಿನ ಅದು ಕಾಣೆಯಾಯ್ತು. ಮನೆಯೆಲ್ಲ ಮೇಲೆ ಕೆಳಗೆ ಮಾಡಿ ಹುಡುಕಿದೆ. ಲಾಸ್ಟ್ ಅದು ಶ್ರೀಕಾಂತ್ ಗೆ ಕೊಟ್ಟಿದ್ದ ನೆನಪು..ಆದರೆ ಅವರು ಬಿಲ್ಕುಲ್ ಅದರ ಬಗ್ಗೆ ಗೊತ್ತಿಲ್ಲ ಅಂದರು..ನಾನೂ ಸುಮ್ಮನಾದೆ. ಕೆಲವೊಂದು ತಿಂಗಳ ನಂತರ ಅವರ ಅಕ್ಕನ ಮನೆಗೆ ಹೋದಾಗ ಅಲ್ಲಿತ್ತು. 'ಓ ಇಲ್ಲ8ದೇ ನನ್ನ ಟಾರ್ಚ್, ಹಿಂದಿನ ಸಲ ಇಲ್ಲಿಗೆ ಬಂದಾಗ ಶ್ರೀಕಾಂತ್ ಬಿಟ್ಟು ಹೋಗಿರಬೇಕು' ಅಂದೆ ನನ್ನ ನಾದಿನಿಯ ಬಳಿ. ಅದಕ್ಕೆ ಅವರು ' ಇಲ್ಲ, ನನಗೆ ಟಾರ್ಚ್ ಇಷ್ಟ ಆಗಿದೆ, ನನಗೆ ಕೊಡು' ಅಂತ ಇಸ್ಕೊಂಡೆ ಅಂದ್ರು...🤔🤔)
ಹಾಗೆ ಸೂರ್ಯ ನಿಗೆ ಏಳುವ ಮೂಡ್ ಇಲ್ಲದಿದ್ದರೆ ಸೌರ battery ಗಳನ್ನು ಮಾಡಿ ಇಡಬಹುದು. ನನ್ನ ದಿವಂಗತ ಸ್ನೇಹಿತೆ ಸೂಸಿ ಮನೆಯಲ್ಲಿ ಇಂತಹ ವ್ಯವಸ್ಥೆ ಇತ್ತು...ಬಾವಿಯಿಂದ ನೀರು.ಕೂಡ ಸೌರ ಶಕ್ತಿಯಿಂದಲೆ ಟ್ಯಾ0ಕೆಗೆ ತುಂಬಿಸುತ್ತಿದ್ದರು. ಮಳೆಗಾಲಕ್ಕೆ ಉಪಯೋಗಿಸಲು ಸೌರ ಬ್ಯಾಟರಿ ಕೂಡ ಇತ್ತು. ಆದರೆ ಅದು ಹಾಳಾದ ಮೇಲೆ ರಿಪೇರಿ ಆಗಲಿಲ್ಲ ಅಂದ್ರು.
ಆ ನಿಟ್ಟಿನಲ್ಲಿ ಸ್ವಲ್ಪ research ಮಾಡಿದರೆ ಒಳಿತಿತ್ತು ಸಂತ ನನ್ನ ಅನಿಸಿಕೆ..ನೀವೆನ್ನನ್ನುತ್ತೀರಾ?
ತೀರ್ಥಹಳ್ಳಿಯಲ್ಲಿ ನಾವು ತೋಟದ ಮನೆಗೆ ಸೋಲಾರ್ ಹಾಕಿಸುವಾ ಅಂದಿದ್ದೆ..ಅವರೂ ಹೂಂ ಅಂದಿದ್ರು...
ಅಷ್ಟೇ...ಸುಮ್ನೆ....

No comments:
Post a Comment