June 21, 2025

ಮಾವಿನ ಹಣ್ಣಿನ ಸೀಸನ್ ನಲ್ಲಿ 700th post

 


ಇದೊಂದು ಟ್ರೆಂಡ್ ಹಿಂದಿನ ವರ್ಷ ಇನ್ಸ್ಟಾಗ್ರಾಮ್ ನಲ್ಲಿ (ಈಗ ಅಲ್ಲಿ ನಾನಿಲ್ಲ) ಈಗೀಗ you tube ನಲ್ಲಿ ಮಾತ್ರವಲ್ಲ, ನನ್ನ ಅಳಿಯ (srikanth's sister's son-in-law) ಕೂಡ ಇದರ ವಿಡಿಯೋ ಹಾಕಿದ್ದಾರೆ. ನನಗೂ ಮಾಡುವ ಹುಮ್ಮಸ್ಸು, ಆದರೆ ಅಲಸಿತನ. ಸುಮಾರು ಮಾವಿನ ಹಣ್ಣು ಒಂದೇ ಸಲಕ್ಕೆ ಹಣ್ಣಾಗಿವೆ. ಶ್ರೀಕಾಂತ್ ತಿನ್ನುವ ಹಾಗಿಲ್ಲ, ಅಕ್ಕ ಅಷ್ಟೊಂದು ತಿನ್ನೋದಿಲ್ಲ, ನಿಹಾ ಗೆ ಇಲ್ಲಿಗೆ ಬರಲು ಪುರುಸೊತ್ತಿಲ್ಲ.....



ಮೊದಲ ಹಣ್ಣಿನ ಒಳಗೆ ಚಾಕು ಹಾಕಿದೆ, ಅದು ಸೀದಾ ನನ್ನ ಕೈಗೆ (palm)ಚುಚ್ಚಿ ಬಿಡ್ತು. ನಮ್ಮನೆಯಲ್ಲಿ ಚಾಕು sharp ಮಾಡುವ ಕೆಲಸ ಶ್ರೀಕಾಂತ್ ದ್ದು. ಅಷ್ಟೊಂದು ಚೂಪು (ಬೇರೆ ಪದ ಇದ್ದಲ್ಲಿ ಹೇಳಿ sharp ಗೆ), ಮಾಡಬೇಡಿ, ವಯಸ್ಸಾಗಿದೆ ನನಗೆ, ನಿಮಗೆ ಶುಗರ್ ಇದೇ ಅಂದ್ರೂ ಕೇಳಲ್ಲ. ಸರಿ, ರಕ್ತ ನಿಲ್ಲಬೇಕಾದರೆ.  ಸುಮಾರು ಸಮಯ ಆಯ್ತು...

ಅಂತೂ ಇಂತೂ ಮಾಡಿದೆ. ಕೆಳಗಿನ ಕೊಂಡಿಯಲ್ಲಿ ನೋಡಿ ಮಾವಿನ ಹಣ್ಣಿನ ಕುಲ್ಫಿ. ನಾಳೆ ನಾಡಿದ್ದರಲ್ಲಿ ಒಂದು ಕೇಕ್ ಮಾಡುವ ಅಂತ ಯೋಚನೆ. ಮಾಡಿದ್ರೆ ಈ ಪೋಸ್ಟ್ ನಲ್ಲೇ  ಚಿತ್ರ ಹಾಕುತ್ತೇನೆ. 🙂👍

the entire process by Sudarshan Bhat

Mango Kulfi

ನನ್ನ shorts

mango ಕುಲ್ಫಿ



No comments: