ನಿನ್ನೆ ಮಂಗಳೂರು ಸ್ಟೋರ್ಸ್ ಗೆ ಹೋಗಿದ್ದೆ. ಅಲ್ಲಿ ಕಜೆ ಅಕ್ಕಿ ನೋಡಿದೆ. ಹಿಂದಿನ ವರ್ಷ ವಸಂತ್ ಕಜೆ ಯವರ ತೋಟಕ್ಕೆ ಭೇಟಿ ನೀಡಿದಾಗ ಅವರ ತಾಯಿ ಮಾಡಿ ಬಡಿಸಿದ ಕಜೆ ಅಕ್ಕಿ ಅನ್ನದ ನೆನಪಾಗಿ ಬಾಯಲ್ಲಿ ನೀರೂರಿತು. ಯಾರಾದರೂ ಪ್ರೀತಿಯಿಂದ ಊಟ ಬಡಿಸಿದರೆ ನಾನು ಭಯ ಭಕ್ತಿಯಿಂದ ಅವರನ್ನು ಸ್ಮರಿಸಿ ಊಟ ಮಾಡುವುದು ನನ್ನ ಅಭ್ಯಾಸ...ಊಟ ಹೇಗೆ ಇರಲಿ ನಾನು waste ಮಾಡದೆ ಊಟ ಮಾಡುವುದು ನನ್ನ ಯಾವತ್ತಿನ ಪರಿಪಾಠ.. ಕಜೆ ಯವರ ಮನೆ ಊಟ ಸಿಂಪಲ್ ಆದ್ರೂ ತುಂಬಾ ರುಚಿಕರವಾಗಿತ್ತು. ಅನ್ನ ಅಂತೂ ಮಲ್ಲಿಗೆ ಹೂವಿನ ತರಹ ಅರಳಿತ್ತು.
ಅದರ ನೆನಪಾಗಿ, ಮಧ್ಯಾನ್ಹ ವೇ ಅಕ್ಕಿ ನೆನೆಸಿಟ್ಟು, ರಾತ್ರಿ ಗಂಜಿ ಮಾಡಿದೆ. ಚೆನ್ನಾಗಿ ಏನೋ ಬೆಂದಿತ್ತು, ಆದರೆ ಅರಳಿರಲಿಲ್ಲ. 🙂ಅದಕ್ಕೆ ಶ್ರೀಕಾಂತ್ , 'ಅವರು ಕುದಿ ಬಂದ ಮೇಲೆ ಥರ್ಮೋಕೋಲ್ ಡಬ್ಬಿಯಲ್ಲಿ ಗಟ್ಟಿ ಮುಚ್ಚಿಡುತ್ತಾರೆ' ಅಂದ್ರು. ಯಾಕೋ ಅಮ್ಮ ದುಡ್ಡು ಉಳಿಸಲು ಮಾಡುತ್ತಿದ್ದ ಕುಸ್ತಿ ನೆನಪಾಗಿ ಅತ್ತು ಬಿಟ್ಟೆ. ಊಟ ಮಾಡುವಾಗ ಅಳಬಾರದೆಂದು ಹೇಳುತ್ತಾರೆ. ಮತ್ತು ನಾನು ಅಳುವ ಪೈಕಿಯಲ್ಲ. ಸಧ್ಯ ಅಪ್ಪ ಮಗಳಿಗೆ ಇದು ಗೊತ್ತಾಗಲಿಲ್ಲ.
ಗ್ಯಾಸ್ ಉಳಿಸಲು ಅಮ್ಮ ಮತ್ತು ತಮ್ಮ ಸೇರಿ ಒಂದು ಥರ್ಮೋಕಾಲ್ ಡಬ್ಬಿ ತಯಾರಿಸಿ ಅದರಲ್ಲಿ ಹುಲ್ಲು ಹಾಕಿಟ್ಟಿ ದ್ದರು. ಅದರಲ್ಲಿ ಕುದಿ ಬಂದ ಅನ್ನದ ಪಾತ್ರೆ ಇಡುತ್ತಿದ್ದು. 20 ನಿಮಿಷದ ನಂತರ ಅದನ್ನು ಬಸಿದು, ಪುನಃ ಆ ಡಬ್ಬಿಯಲ್ಲೇ ಇಡುತ್ತಿದ್ದರು. ಮಧ್ಯಾಹ್ನದ ಊಟದ ತನಕ ಅನ್ನ, ಇತರ ಅಡಿಗೆ ಬಿಸಿಯಾಗುರುತ್ತಿತ್ತು. ಇವೆಲ್ಲ ಬಹುತೇಕ ದಕ್ಷಿಣ ಕನ್ನಡ ಜಿಲ್ಲೆಯ ಮನೆಗಳಲ್ಲಿ ಸಾಮಾನ್ಯ ಪರಿಪಾಠ.
ಚಟ್ನಿ recipe
ಸ್ವಲ್ಪ ಎಣ್ಣೆಯಲ್ಲಿ ಕಡಲೆ ಬೇಳೆ, ಹಿಂಗೂ, ಕರಬೇವು ಹುರಿಯಿರಿ. ಕಡಲೆ ಬೇಳೆ ಕೆಂಪಾಗಬೇಕು. ಕಾಯಿ ತುರಿ, ಹುರಿದ ಕೆಂಪು ಮೆಣಸು, ಹುಣಸೆ ಉಪ್ಪಿನ ಜತೆ ನುಣ್ಣಗೆ ರುಬ್ಬಿ. ಶ್ರೀಕಾಂತ್ ಗೆ ಖಾರ, ಉಪ್ಪು ತಿನ್ನಲಿಕ್ಕೆ ಇಲ್ಲ ಆದ್ದರಿಂದ ಮೇಲಿನ ಚಟ್ನಿ dull ಕಾಣ್ತಿದೆ.. ಆದರೆ ರುಚಿಗೆ ಏನೂ ಮೋ ಸ ಇಲ್ಲ ❤️🙏



No comments:
Post a Comment