ಈ ಹಾಡಿನ ರಿಯಾಲಿಟಿ ಶೋ ನಾನು ಮೊದಲಿನಿಂದಲೂ ನೋಡುತ್ತಾ ಬಂದಿದ್ದೇನೆ. ಹಿಂದಿನ ವಿಜೇತರ ಬಳಿ ಪುಟ್ಟ ಮಕ್ಕಳು ಮೆಂಟರಿಂಗ್ ಅಡಿಯಲ್ಲಿ ಹಾಡುವುದು. ಈ 5-6 ತಿಂಗಳಲ್ಲಿ ಹೆಚ್ಚಿನ ಮಕ್ಕಳಲ್ಲಿ ಅಭೂತಪೂರ್ವ improvement ಕಂಡಿದ್ದೇನೆ.
ಎಲ್ಲರಲ್ಲೂ ಒಂದೊಂದು ತರಹದ ದನಿ ಮತ್ತು ಟೆಲೆಂಟ್ ಇದೆ. ಎಲ್ಲರಿಗೂ ಬಹುಮಾನ ಕೊಡಬಹುದಿತ್ತು. ಪುಟ್ಟ ಅವಿರ್ಭವ್ ನನ್ನ ಇಷ್ಟದ ಪುಟ್ಟ ಹುಡುಗ. ಮಾತೃ ಭಾಷೆ ಮಲಯಾಳಿ ಆಗಿದ್ದು, ಮೊದ ಮೊದಲು ಹಿಂದಿ ಶಬ್ದಗಳಲ್ಲಿ ಮಲಯಾಳಿ ಉಚ್ಚಾರ ಕಂಡು ಬರುತ್ತಿತ್ತು. ಅದೂ ತುಂಬಾ improve ಆಗಿದೇ. ಆದರೆ ಪುಟ್ಟ ಹುಡುಗ..ನನ್ನ ಇಷ್ಟದ ಹುಡುಗ ಆದರೂ ಅವನಿಗೆ ಮೊದಲ ಬಹುಮಾನ ಬಂದಿದ್ಫು ಯಾಕೋ ನಾನು ಅಷ್ಟು ಸಂಭ್ರಮ ಪಡಲಿಲ್ಲ.
ದಿಯಾ ಮತ್ತು ಮಿಯಾ ಮೇಹಕ್ ಯಾಕೆ ಕಾರ್ಯಕ್ರಮದಿಂದ ಹೋದರು ಗೊತ್ತಾಗಲಿಲ್ಲ..
ನಿಮ್ಮ ಅಭಿಪ್ರಾಯ ಏನು??

No comments:
Post a Comment