ನನಗೆ ನಾಯಿ ಬೆಕ್ಕು ಅಂದ್ರೆ ಸ್ವಲ್ಪ ದೂರ. ಮಗಳು ಯಾವಾಗಲೂ ನನಗೆ insta ದಲ್ಲಿನ ಮುದ್ದು ನಾಯಿಗಳ ಆಟ ಪಾಠ ಜಾಣತನಗಳ reels ಕಳುಸುತ್ತಿರುತ್ತಾಳೆ....ನಾನೇನಾದ್ರೂ ಸೋ sweet ಅಂದ್ರ 'ಅಮ್ಮ ಇದೊಳ್ಳೆ ಸಮಯ, ನಾವೂ ನಾಯಿ ಸಾಕೋಣಾ' ಜೀವನ ಚೆನ್ನಾಗಿರುತ್ತೆ ಅಂತಾಳೆ...
ಮತ್ತೆ ಅದನ್ನು ಈಸ್ಶಿ, ವಾಕ್ ಎಲ್ಲ ಯಾರು ಕರ್ಕೊಂಡು ಹೋಗ್ತಾರೆ ಅಂದ್ರೆ 'ನೀನೇ..ನಿನಗೆ ಒಳ್ಳೆ ವ್ಯಾಯಾಮ ಅಗುತ್ತೆ' ಅಂತೆ....ಒಳ್ಳೆ ಕತೆ..
ಮೊನ್ನೆ ಸಾಗರದ ಬಳಿಯ 'ಅಜ್ಜನಮನೆ' ಹೋಮ್ ಸ್ಟೇ ದಲ್ಲಿ ಒಂದು ನಾಯಿ ಇತ್ತು. ಅದನ್ನು grandly ignore ಮಾಡಿದ್ದೆ. ಮರುದಿನ ನಾವು ದೊಡ್ಡ ವಾಕ್ ಹೋಗಿ ಬಂದ ಮೇಲೆ, ಹಾಯಾಗಿ ಕುಳಿತು ನನ್ನ ಚಹಾ ವನ್ನು ಆಸ್ವಾದಿಸುತ್ತಿದ್ದಾಗ, ಬಾಲ ಅಲ್ಲಾಡಿಸಿ ನನ್ನ ಬಳಿ ಬಂತು...ನಾನು ಕ್ಯಾರೆ ಅನ್ನಲಿಲ್ಲ...ಆದರೂ..ನಾನು ಕಾಲು ಮೇಲೆ ಕಾಲು ಇಟ್ಟು ಕೂತಿದ್ದರೂ ಕಾಲ ಬುಡದ ಸಂದಿಯಲ್ಲಿ ಅರಮಾಗಿ ಕೂತಿತು ಮತ್ತು ನನಗೆ ಅಲ್ಲಾಡಲೂ ಜಾಗ ಇರಲಿಲ್ಲ..ಆದರೂ i was comfortable...ಅಷ್ಟೇ ಅಲ್ಲ ಬಿಟ್ಟು ಬಿಟ್ಟು ತಲೆ ಮೇಲೆತ್ತಿ ನನ್ನನ್ನು ನೋಡುವ ಸೇಲೆ ಼಼಼಼ಮುದ್ದು ಬಂದ್ಬಿತು. ಜೋರಾಗಿ ನಕ್ಕು ಬಿಟ್ಟೆ...ನಮ್ಮ ಗಾಡಿಯ ಸಾರಥಿ ಅಜಯ್ ನನ್ನ ಮೊಬೈಲ್ ಇಸ್ಕೊಂಡು ಫೋಟೋ ತೆಗೆದೆ ಬಿಟ್ಟ....
ಇಲ್ಲಿವೆ...
🙂🙂❤️







No comments:
Post a Comment