(15 years of blogging 🙂🙂❤️🙏🙏)
ಕೊನೆಗೂ ಅಕ್ಕನಿಗೆ ಇಷ್ಟವಾಗುವಂತಹ adventure sports ಪರಿಚಯವಾಗಿದೆ. ವಾರ್ಯಾಂತದಲ್ಲಿ ಕೇಕ್ ಆರ್ಡರ್ ಇಲ್ಲದಿದ್ದಲ್ಲಿ ಅವಳು ಭಾಗವಹಿಸುತ್ತಾಳೆ. ಅದರ ಹೆಸರು ಒರಿಯೆಂಟೀಯರಿಂಗ್...orienteering
ಅಕ್ಕನ ಜತೆಗೆ ನಮ್ಮ ಅಪಾರ್ಟ್ಮೆಂಟ್ ಸಮುಚ್ಚಯದಲ್ಲಿರುವ , ನಮಗೆ ಪರಿಚಯವಿರುವ 73 ವರ್ಷದ ಮಾಲಾ ಹೊನ್ನತ್ತಿ ಕೂಡ ಭಾಗವಹಿಸುವವರಿದ್ದರು. ನಮ್ಮದೇ ಗಾಡಿ ಒಯ್ಯುತಿದ್ದರು, ಅದಕ್ಕೆ ನಾನೂ ಅವರ ಜತೆ ಹೋಗಿ ಪುಸ್ತಕ ಓದುತ್ತ ಚಿಲ್ ಮಾಡ್ತೇನೆ ಅಂದೆ...ದೇವನಹಳ್ಳಿಗಾ? ನಾನು ಬರ್ತೇನೆ, ಅಲ್ಲಿ ಒಂದು ನರ್ಸರಿಗೆ ಭೇಟಿ ನೀಡಲಿಕ್ಕಿದೆ ಅಂದ್ರು ಇವರು..
ಬೆಳೆಗ್ಗೆ ನಾಲ್ಕಕ್ಕೆ ಎದ್ದು ಸಾಂಡ್ವಿಚ್ ರೆಡಿ ಮಾಡ್ದೆ. ಸ್ನಾನ ಎಲ್ಲ ಮುಗಿಸಿ 5 ಕ್ಕೆ ಹೊರೆಟೆವು...6 ಕ್ಕೆ ಅಲ್ಲಿರ ಬೇಕಿತ್ತು
ದೇವನಹಳ್ಳಿಯ century trails ನಲ್ಲಿ ಈ adventure sports ಹಮ್ಮಿಕೊಡಿದ್ದರು. ಅವರದ್ದು advertisement ಕೂಡ ಆಗುತ್ತೆ. ವೆಬ್ ನಲ್ಲಿ search ಕೊಟ್ಟು ನೋಡಿ...ಇನ್ನೂ ಹತ್ತು ವರ್ಷ ಆದ್ರೂ ಬೇಕು ಅದು develop ಆಗೊಕ್ಕೆ.
ಮದ್ಯ ಮಧ್ಯ ಮಳೆಯಿತ್ತಾದರೂ...7.30 ಹೊತ್ತಿಗೆ ಮಳೆ ಎಲ್ಲ ನಿಂತು ಸ್ವಲ್ಪ ಸೆಕೆ ನೆ ಇತ್ತು. ಸ್ವಲ್ಪ ಹೊತ್ತು ಭಾಗವಹಿಸುವವರನ್ನು ಅಟಕ್ಕೆ ತಯಾರಾಗುವುದನ್ನು ನೋಡುತ್ತಾ ಕಳೆದೆ...ಹಲವಾರು ಜನ ಸೈಕಲ್ ತಂದಿದ್ದರು. ಈ ಆಟದಲ್ಲಿ..ನಡಿಗೆ ಓಟ ಅಥವಾ ಸೈಕಲ್ ಉಪಯೋಗಿಸ ಬಹುದು. ಒಟ್ಟು 60 ಜನ ಭಾಗವಹಿಸಿದ್ದರು...
fertile red soil
sugandhi my fav flower at the site
lovely view.of nandi betta
Teja nursery, Devanahalli























2 comments:
Congrats
thank you Swarna 🙂🙂🙏
Post a Comment