June 6, 2012

ಕಾರ್ಡ್ ನಲ್ಲಿ ಕತೆ ಮಾದರಿಯಲ್ಲಿ ನಂದೂ ಒಂದು

ಅತುಲ್ ಮನೆ ತಲುಪುವಾಗ ರಾತ್ರಿ 11 ಗಂಟೆ. ನಾಯಿ ಟೋಸ್ಟಿ ಬಿಟ್ಟರೆ ಅವನನ್ನು ಸ್ವಾಗತಿಸಲು ಯಾರೂ ಇಲ್ಲ. ಕೆಲಸದವರೂ ಕೂಡ. ಹಾಲ್ ನಲ್ಲಿ ಶೂ ಬಿಚ್ಚಿಟ್ಟು, ಅತುಲ್ ಟಿವಿ ಮುಂದಿದ್ದ ಆರಾಮ ಕುರ್ಚಿಯಲ್ಲಿ ಪವಡಿಸಿದ. ರಿಮೋಟ್ ನಿಂದ ಟಿವಿ ಆನ್ ಮಾಡಿ ಅಲ್ಲೆ ಪಕ್ಕದಲ್ಲಿದ ಮಿನಿ ಬಾರ್ ಕಡೆ ಹೋದ. ಎರಡು peg ಸ್ಕಾಚ್ ವ್ಹಿಸ್ಕಿ ಗೆ , ಕೆಲಸದವನು ಐಸ್ ಬಾಕ್ಸ್ ನಲ್ಲಿ ಅಣಿಮಾಡಿಟ್ಟ ಐಸ್ ನ ನಾಲ್ಕು ತುಂಡುಗಳನ್ನು ಗ್ಲಾಸ್ ಗೆ ಹಾಕಿ ಅದನ್ನು ತಿರುವುತ್ತ ಹುಶ್ ಎಂದು ಟಿವಿ ಮುಂದೆ ಕುಕ್ಕರಿಸಿದ. 11 ಗಂಟೆ ಎಂದ ಮಾತ್ರಕ್ಕೆ ಎಲ್ಲರೂ ಮಲಗಿದ್ದಾರಂತಲ್ಲ. ಹೆಂಡತಿ ತನ್ನ ಮುಖಕ್ಕೆ ಕ್ರೀಮ್ ಹಚ್ಚಿ, ಕೂದಲನ್ನು 100 ಸಲ ಬಾಚಣಿಕೆಯಿಂದ ಬಾಚಿ ಮಲಗುವಾಗ 12 ಆಗುತ್ತೆ. ಮಗಳು ಹೊಟ್ಟೆ ಮೇಲೆ ಮಲಗಿಕೊಂಡು ಅವಳ ರೂಮ್ ನಲ್ಲಿದ್ದ ಟಿವಿ ಯಲ್ಲಿ ಫಿಲ್ಮ್ ನೋಡುತ್ತ, ಮಗ ಫೋನ್ ನಲ್ಲಿ ಫ್ರೆಂಡ್ ಜತೆ ಮಾತಾಡುತ್ತ ಕಾಲ ಕಳೆಯುತ್ತಾರೆ. ಅತುಲ್ ಒಂಟಿಯಾಗಿ ಕುಡಿಯುತ್ತ, ಇಷ್ಟವಿದ್ದಲ್ಲ್ಲಿ ಊಟ ಮಾಡಿ, ಸ್ವಲ್ಪ ಹೊತ್ತು ಬಿಸಿನೆಸ್ ಪತ್ರಿಕೆಯನ್ನು ಓದಿ ಮಲಗುವ ವಾಡಿಕೆ.
ಟಿವಿ ಯ ಚ್ಯಾನೆಲ್ ನ್ನು ಬದಲಿಸುತ್ತಿದ್ದ ಹಾಗೆ ಸ್ಪುರದ್ರೂಪಿ ಚಿರಪರಿಚಿತ ಮುಖವನ್ನು ಕಂಡು ಅತುಲ್ ಬೆಚ್ಚಿಬಿದ್ದ. ನೋಡಿದ್ರೆ ಹೌದು ಅವನ ಮಗ. ಯಾವುದೋ ಪ್ರಶಸ್ತಿ ಸಮಾರಂಭ. ಸ್ಯಾನ್ ಹ್ಯೂಸೆ ಯಲ್ಲಿ ನಡೆಯುತ್ತಿದ ಲೈವ್ ಸಮಾರಂಭ. ಸಭಿಕರೆಲ್ಲ ನಿಂತು ಕರತಾಡನ ಮಾಡುತ್ತಿದ್ದರು. ಕೃಷ್ಣ...ಕ್ರಿಸ್ ಆಗಿ ಬದಲಾಗಿದ್ದ. ಅವನು ತನ್ನ ಯಶಸ್ಸಿನ ನ ಶ್ರೇಯ ತನ್ನ ಅಮ್ಮನಿಗೆ ಅಂತ ಹೇಳಿದಾಗ ಕಾರ್ಯಕ್ರಮದ ಸಂಚಲಾಕರು ಮಿಸ್ ಮೇಖಲ ಪ್ಲೀಸ್ ಕಮ್ ಆನ್ ಸ್ಟೇಜ್ ಅಂದ ಘೋಷಿಸುತ್ತಿದ್ದರು. ಅತುಲ್ ಕೂತ ಕಡೆಯಿಂದಲೆ ಕತ್ತನ್ನು ಚಾಚಿ ಕಾತರ ಕುತೂಹಲದಿಂದ ಮೇಖಲ ಳ ಕಡೆ ನೋಡಿದ. ಅವಳು ಎದ್ದ ಬಂದ ಸ್ಥಳದಲ್ಲಿ ಕೇವಲ ಹೆಂಗಸರೆ ಇದ್ದುದರಿಂದ ಹೆಮ್ಮೆಯಿಂದ ನಸುನಕ್ಕ, 'ಸಧ್ಯ ಅವಳು ಮದುವೆ ಮಾಡಿಕೊಂಡಿಲ್ಲ ಅನ್ನಿಸುತ್ತೆ' I love you and only you' ಅಂತ ಹತ್ತೊಂಬತ್ತು ವರ್ಷದ ಹಿಂದಿನ ಮಾತು ಅವನಿಗೆ ನೆನಪಾಯಿತು
ಅತುಲ್ ಮೇಖಲ ಒಂದೆ ಕಂಪೆನಿಯಲ್ಲಿ ಕೆಲಸಕ್ಕಿದ್ದರು. ಪರಸ್ಪರ ಪರಿಚಯ ಪ್ರೀತಿಯಲ್ಲಿ ತಿರುಗಿ ಮದುವೆ ಕೂಡ ಆಯಿತು. ಅತುಲ್ ತನ್ನದೆ ಗೇರುಬೀಜದ ಎಕ್ಸ್ಪೋರ್ಟ್ ಬಿಸಿನೆಸ್ ಶುರು ಮಾಡಿದ ಮೇಲೆ ಮೇಖಲ ಕೂಡ ಕೆಲಸ ಬಿಟ್ಟು, ಒಳ್ಳೆ ಆದಾಯ ಇರುವುದರಿಂದ ಮನೆಯಲ್ಲೇ ಇರುವುದುದೆಂದು ನಿಶ್ಚಯಿಸಿದಳು. ಮದುವೆಯಾದ ಮೂರು ವರ್ಷದ ನಂತರ ಹುಟ್ಟಿದವನು ಕೃಷ್ಣ. ಚಿಕ್ಕಂದಿನಲ್ಲಿ ಅವನು ಸಾಧಾರಣ ಮಕ್ಕಳಂತೆಯೆ ಇದ್ದ. ಮೊದಲನೇ ತರಗತಿಗೆ ಬಂದ ಮೇಲೆ ಅವನು ಹುಡುಗಿಯರ ಹಾಗೆ ನಡೆದುಕೊಳ್ಳುವುದು, ಸದಾ ಮಲಗಿಕೊಂಡು ಚಿತ್ರ ಬಿಡಿಸುವುದು, ಅಮ್ಮನ ಜತೆ ಯಾವಾಗಲೂ ಅಡಿಗೆಮನೆಯಲ್ಲಿರುವುದು ಮುಂತಾದನ್ನು ರೂಢಿ ಮಾಡಿಕೊಂಡಿದ್ದ ಅಪ್ಪ ಜೋರು ಮಾಡಿದರೆ ಮುಸಿ ಮುಸಿ ಅಳುವುದನ್ನೆಲ್ಲ ಮಾಡುತ್ತಿದ. ಮನೆಗೆ ಬಂದ ಅತಿಥಿಗಳ ಎದುರಿಗೆ ಅತುಲ್ ತುಂಬ ಮುಜುಗರ ಪಡುತ್ತ್ತಿದ. ಸಮಯ ಸಿಕ್ಕಾಗಲೆಲ್ಲ ಕೃಷ್ಣ ನನ್ನು ಹೆಣ್ಣಿಗ, ಸಿಸ್ಸಿ ಅಂತೆಲ್ಲ ಮೂದಲಿಸಿ ಹೊಡೆದು ಬಡಿದು ಮಾಡಲಾರಂಭಿಸಿ ಕುಡಿತಕ್ಕೂ ಮೊರೆ ಹೋದ. ಮೇಖಲ ಆದಷ್ಟು ಸಮಾಧಾನ ಪಡಿಸಲು ಪ್ರಯತ್ನ ಮಾಡಿದಳು. ಆದರೆ ಪರಿಸ್ಥಿತಿ ಬಿಗಡಾಯಿಸಲಾರಂಭವಾಯಿತು. ಮೇಖಲ ಎರಡನೆ ಸಲ ಗರ್ಭಿಣಿಯಾದಳು. ಸಿಕ್ಕಾಪಟ್ಟೇ ಮಾರ್ನಿಂಗ್ ಸಿಕ್ ನೆಸ್ಸ್ ನಿಂದಾಗಿ ಎರಡು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಬೇಕಾಯುತು. ಮನೆಗೆ ವಾಪಸ್ ಬಂದಾಗ ಕೃಷ್ಣ ಕಂಗಾಲಾಗಿದ್ದ, ಜ್ವರದಿಂದ ನರಳಿ ಅಳುತ್ತಿದ್ದ. ಹಿಂದಿನ ದಿನ ಆಫಿಸ್ ನ ಕ್ಲಯಂಟ್ಸ್ ಮನೆಗೆ ಬರುತ್ತಿದ್ದಾರೆಂದು ಅವರ ಎದುರಿಗೆ ಕೃಷ್ಣನಿಂದ ಅವಮಾನವಾಗುತ್ತದೆಂದು ಅವನನ್ನು ರಾತ್ರಿ ಮೂಲೆಯ ಕೋಣೆಯೊಂದರಲ್ಲಿ ಅತುಲ್ ಕೂಡಿ ಹಾಕಿದ್ದ. ರಾತ್ರಿ ಅದರ ಬಗ್ಗೆ ಮರೆತು ಹೋಗಿದ್ದ. 5 ವರ್ಷದ ಕೃಷ್ಣ ಹೆದರಿ ಚಡ್ಡಿಯಲ್ಲೇ ಕಕ್ಕಸು ಮೂತ್ರ ಮಾಡಿಕೊಂಡಿದ್ದ. ಮರು ದಿನ ಬೆಳ್ಳಿಗೆ ಅಪ್ಪನಿಂದ ಹೊಡೆಸಿಕೊಂಡಿದ್ದ. ಮೇಖಲ ಮನೆಗೆ ಬಂದ ಮೇಲೆ ಕೃಷ್ಣನಿಗೆ ಯಾವುದಾದರೂ ಬೋರ್ಡಿಂಗ್ ಸ್ಕೂಲ ಗೆ ಸೇರಿಸುವ ಬಗ್ಗೆ ಅತುಲ್ ಕಿರಿಕಿರಿ ಮಾಡಲಾರಂಭಿಸಿದ. ಇದಾದ ಕೆಲವೇ ದಿನದಲ್ಲಿ ಮೇಖಲ ಳಿಗೆ ಅಬಾರ್ಶನ್ ಆಯಿತು. ಅದರಿಂದ ಚೇತರಿಸಿಕೊಂಡಮೇಲೆ ಮೇಖಲ, ಅತುಲ ಗೆ 'ನಿನ್ನ ಜತೆ ಮಾತನಾಡಬೇಕು, ಇವತ್ತು ಸಂಜೆ ಬೇಗ ಬಾ. ಎಲ್ಲಾದರೂ ಹೊರಗಡೆ ಸುತ್ತಾಡಿಕೊಂಡು ಬರೋಣ' ಅಂತ ಹೇಳಿದಳು. ಹೌದು ಹಲವಾರು ತಿಂಗಳುಗಳೆ ಆಗಿದ್ದವು ಮೂವರು ಜತೆಗೆ ಎಲ್ಲೂ ಹೋಗದೆ. ಸಂಜೆ ಅತುಲ್ ಮನೆಗೆ ಬಂದಾಗ ಮೇಖಲ, ಕೃಷ್ಣ ಇಬ್ಬರೂ ರೆಡಿಯಾಗಿ ಕುಳಿತಿದ್ದರು. ಕೃಷ್ಣನ ಕಡೆ ಅಸಡ್ಡೆಯಿಂದ ನೋಡಿ, 'ಇವನೂ ಬೇಕಾ ನಮ್ಮ ಜತೆ' ಅಂತ ಕೇಳಿದ ಅತುಲ್. ಮೇಖಲಳ ಹೃದಯ ಮುದುಡಿ ಹೋಯಿತು. ಕೃಷ್ಣನ ಮನವೊಲಿಸಿ, ಅವನಿಗೆ ಅವನ ಇಷ್ಟದ ಐಸ್ ಕ್ರೀಮ್ ತಂದು ಕೊಡುವುದಾಗಿ ಹೇಳಿ ಅವನನ್ನು ಮನೆಯ ಕೆಲಸದಾಳಿನ ಜತೆ ಬಿಟ್ಟು ಹೋದರು ಇಬ್ಬರು. ಹೋಟೆಲ್ ಗೆ ಹೋಗಿ ಊಟದ ಆರ್ಡರ್ ಇಟ್ಟು ಮೇಖಲ ಮಾತಿಗೆ ಶುರುಮಾಡಿದಳು. 'ಅತುಲ್, ನಾನಿನ್ನು ನಿನ್ನ ಜತೆ ಇರಕ್ಕಾಗಲ್ಲ. ನೀನು ಕೃಷ್ಣನಿಗೆ ತುಂಬ ಕಿರುಕುಳ ಕೊಡುತ್ತೀಯ. ಅವನು ಹಾಗಾಗಿದ್ದಲ್ಲಿ ಅವನ ತಪ್ಪಿಲ್ಲ. ನನಗೆ ಅವನನ್ನು ಬಿಟ್ಟು ಇರಲು ಆಗುವುದಿಲ್ಲ. ದಯವಿಟ್ಟು ವಿವಾಹ ವಿಚ್ಛೇದನಕ್ಕೆ ಒಪ್ಪು. i love you and only you' ಆದರೆ ದಯವಿಟ್ಟು ಅರ್ಥ ಮಾಡಿಕೋ. ಅವನ ಬೆಳವಣಿಗೆಗೆ ಇದು ಅತ್ಯಂತ ಅವಶ್ಯಕ. ಕೃಷ್ಣನನ್ನು ಬಿಟ್ಟಿರಕ್ಕೆ ನನ್ನಿಂದ ಆಗಲ್ಲ ಮತ್ತು ನೀನು ಅವನನ್ನು ಅಸಡ್ಡೆ ಮಾಡುವುದೂ ಕೂಡ ನನ್ನಿಂದ ನೋಡಲಾಗುವುದಿಲ್ಲ. ಇದರಲ್ಲೆ ನಮ್ಮ ಹಿತವಿದೆ. he needs me. ಅತುಲ್ ಏನೂ ಮಾತನಾಡಲಾರದಾದ. ಆರ್ಡರ್ ಮಾಡಿದ ಊಟ ಹಾಗೇ ಬಿಟ್ಟು ಮನೆಗೆ ಮರಳಿದರು. ರಾತ್ರಿಯಿಡಿ ಆಲೋಚನೆ ಮಾಡಿ ಅವನಿಗೂ ಇದು ಸರಿ ಎನಿಸಿತು. ಪರಸ್ಪರ ಒಪ್ಪಂದದಿಂದ ಬೇರೆಯಾಗುತ್ತಿದ್ದರಿಂದ ಬಹುಬೇಗನೆ ವಿಛೇದನ ಪ್ರಕ್ರಿಯೆ ಮುಗಿಯಿತು. 
ಮೇಖಲ ಕೃಷ್ಣ ಹೊರದೇಶಕ್ಕೆ ಹೋಗಿದ್ದು ಗೊತ್ತು ಆಮೇಲೆ ಅವರ ಸಂಪರ್ಕ ಕಡಿದು ಹೋಯಿತು. ಅತುಲ್ ಬೇರೆ ಮದುವೆಯಾಗಿ ಎರಡು ಮಕ್ಕಳ ತಂದೆಯಾದ.
ಅಳುಮುಂಜಿ, ಹೆಣ್ಣಿಗ ಕೃಷ್ಣ ಈಗ ಬಾಡಿಬಿಲ್ಡರ್ ತರಹ ತುಂಬ ಹ್ಯಾಂಡ್ ಸಮ್ ಆಗಿ ಕಾಣುತ್ತಿದ. ಒಳ್ಳೆಯ ಶಿಲ್ಪಿ ಎಂದು ಹೆಸರುವಾಸಿಯಾಗಿದ್ದ. ಕಾರ್ಯಕ್ರಮ ನಡೆಯುತ್ತಿದ್ದ ಹಾಗೆ ಮೇಖಲಳನ್ನು ಕಾಂಪಿಯರ್ ಕೇಳಿದ 'ಹೇಗನ್ನಿಸುತ್ತಿದೆ ನಿಮಗೆ ಮೇಡಂ ' ಅಂತ ಅದಕ್ಕೆ ಮೇಖಲ 'ಐ ಯಾಮ್ ವೇರೀ ಪ್ರೌಡ್ ಆಫ್ ಮೈ ಸನ್' ಅಂತ ಹೇಳುವಾಗ ಕ್ಲೋಸ್ ಅಪ್ ನಲ್ಲಿ ಅವಳನ್ನು ತೋರಿಸಿದ್ದರು. ಈಗಲೂ ಮೊದಲಿನ ಹಾಗೆ ಕಾಣಿಸುತ್ತಾಳೆ ಮೇಖಲ..ವನ್ಸ್ ಅಪಾನ್ ಎ ಟೈಮ್ ಶೀ ವಾಸ್ ಮೈ ವೈಫ್ ಆಂಡ್ ಹೀ ಇಸ್ ಮೈ ಸನ್ ಎಂದು ಹೆಮ್ಮೆಪಟ್ಟುಕೊಂಡ. ಕಾರ್ಯಕ್ರಮದ ಕೊನೆಯಲ್ಲಿ ನೀಡಿದ ನಂಬರ್ ಅನ್ನು ಬೇಗ ಬೇಗ ಬರೆದುಕೊಂಡು ಅದಕ್ಕೆ ಕಾಲ್ ಮಾಡಿ ಕೃಷ್ಣ ನ ವೈಯಕ್ತಿಕ ಫೋನ್ ನಂಬರ್ ಪಡೆಯುವುದರಲ್ಲಿ ಯಶಸ್ವಿಯಾದ.
ಫೋನ್ ಮಾಡಿದಾಗ ಕೃಷ್ಣನೇ ಫೋನ್ ಎತ್ತಿಕೊಂಡ. ಹೆಮ್ಮೆಯಿಂದ 'ಹಾಯ್ ಸನ್ ದಿಸ್ ಇಸ್ ಯುವರ್ ಫಾದರ್ ' ಅನ್ನುತ್ತಿದ ಹಾಗೆ ಅಲ್ಲಿಂದ 'ರಾಂಗ್ ನಂಬರ್, ಐ ಡೋಂಟ್ ಹ್ಯಾವ್ ಎ ಫಾದರ್ ಎನ್ನುವ ಉತ್ತರ ದೊಂದಿಗೆ ಫೋನ್ ಕಟ್ ಆಯಿತು.
ಪುನ: ಪುನ: ಫೋನ್ ಟ್ರೈ ಮಾಡಿದರೂ ಅಲ್ಲಿಂದ ಯಾರೂ ಎತ್ತಿಕೊಳ್ಳಲಿಲ್ಲ. ಕೊನೆಗೆ ಒಂದು ಎಸ್ ಎಮ್ ಎಸ್ ಕಳಿಸಿದ. 'ಐ ವಾಂಟ್ ಟು ಟಾಕ್ ಟು ಮೇಖಲಾ ಅಂತ. ಮೇಖಲಳ ನಂ ಒಂದನ್ನು ಅವನು ಎಸ್ ಎಮ್ ಎಸ್ ಮಾಡಿದ.
ಮೇಖಲ ಳಿಗೆ ಫೋನ್ ಮಾಡಿದಾಗ, ' ಅವಳು ಅತ್ಯಂತ ಖುಶಿಯಿಂದ ಕಿರುಚಿ' ಅತುಲ್ .ವ್ಹಾಟ್ ಎ ಪ್ಲೆಸೆಂಟ್ ಸರ್ಪ್ರೈಸ್!. ನಾನೇ ಫೋನ್ ಮಾಡಬೇಕೆಂದಿದ್ದೆ. ಅದಕ್ಕೆ ಅವನು 'ಯಾಕೆ? ಮಗನಿಗೆ ಪ್ರಶಸ್ತಿ ಬಂದಿಯಂತಲೆ"?
"ಅಲ್ಲ. ಪ್ರಶಸ್ತಿ  ಕ್ರಿಸ್  ಗೆ ಕಟ್ಟಿಟ್ಟ ಬುತ್ತಿ. ನಮ್ಮ ಮನೆಯಲ್ಲಿ ಒಂದು ಕೋಣೆಯಿಡಿ ಅವನ ಪ್ರಶಸ್ತಿ, ಕಟ್ಟು ಹಾಕಿರುವ ಪ್ರಶಂಸಾ ಪ್ರತಿಗಳಿಗೆ ಮೀಸಲಾಗಿಟ್ಟಿದ್ದೇವೆ'. ಫೋನ್ ಯಾಕೆಂದ್ರೆ  ಕ್ರಿಸ್ ಮುಂದಿನ ತಿಂಗಳು ಮದುವೆಯಾಗಲಿದ್ದಾನೆ'
"ಹೌದಾ? ವ್ಹಾಟ್"
"ಹೌದು, ಅವನು ಕ್ಯಾರೆನ್ ಳನ್ನು ಮದುವೆಯಾಗುತ್ತಿದ್ದಾನೆ. ಅಚ್ಚರಿಯೆನೆಸುತ್ತಿದೆಯಲ್ಲವಾ? ಡಿವೋರ್ಸ್ ನಂತರ ಒಬ್ಬ ತಜ್ಝ ಡಕ್ಟರ ಅನ್ನು ಸಂಪರ್ಕಿಸಿದೆ, ಕ್ರಿಸ್ ಗೆ ಅವರಿಂದ ಪೂರ್ತಿ ಚೆಕ್-ಅಪ್ ನಡೆಯಿತು.. ಅವರು 'ಐ ಕ್ಯಾನ್ ನಾಟ್ ಫೈಂಡ್ ಎನಿಥಿಂಗ್ ರಾಂಗ್ ವಿಥ್ ಕೃಷ್ಣ. ' ಹಿ ಇಸ್ ನಾರ್ಮಲ್'. ಯಾಕೆ ಹಾಗಾಡುತ್ತಾನೆಂದರೆ ಕೆಲವರಲ್ಲಿ ಹೆಂಗುರುಳು ಜಾಸ್ತಿಯಿರುತ್ತೆ. ಆದ್ರೂ ನಿಮಗೆ ಅವನ ಫ್ಯೂಚರ್ ಬಗ್ಗೆ ಕಾಳಜಿ ಎನಿಸಿದ್ದರೆ ನೀವು ಹೊರದೇಶಕ್ಕೆ ಹೋಗಬಹುದು, ಅಲ್ಲಿ ಇಂತಹ ಸಂಗತಿಗಳನ್ನು ಬ್ರಾಡ್ ಮೈಂಡಡನೆಸ್ಸ್ ನಿಂದ ತುಂಬಸೂಕ್ಷ್ಮವಾಗಿ ಹ್ಯಾಂಡಲ್ ಮಾಡುತ್ತಾರೆ'. ಕಾಕತಾಳಿಯ ಎಂಬಂತೆ ನನ್ನ ಫ್ರೆಂಡ್ ಒಂದು ಬೂಟಿಕ್ ಹಾಗೂ ಹೋಟಲ್ ಖರೀದಿಸುವವಳಿದ್ದಳು. ಬೂಟಿಕ್ ನ ಉಸ್ತುವಾರಿ ನೋಡಿಕೊಳ್ಳುತ್ತೀಯ ಅನ್ನುವ ಆಫರ್ ಬಂದಾಗ ನಾನು ಹೆಚ್ಚಿಗೇ ಏನೂ ಯೋಚಿಸದೆ ನಿವಾರ್ಕ್ ಗೆ ಹೊರಟು ಬಿಟ್ಟೆ. ಮೊದಲು ಉಸ್ತುವಾರಿಯಂತ ನೋಡಿಕೊಳ್ಳುತ್ತಿದ್ದ ಬೂಟೀಕ್ ಅನ್ನು ನಾನೆ ಖರೀದಿಸಿದೆ. ಆಶ್ಚರ್ಯ ಎಂಬಂತೆ ಎಂಟನೆ ತರಗತಿಗೆ ಬರುತ್ತಿದ್ದಹಾಗೆ  ಕ್ರಿಸ್  ಮೈ ಕೈ ತುಂಬಿಕೊಂಡು ಮೀಸೆ ಎಲ್ಲ ಬಂತು. ನನಗೂ ಅವನು ನಾರ್ಮಲ್ ಅನಿಸಿತು. ಕೊನೆಗೆ ನಾನೆ ಅವನಿಗೆ ಪುಸುಲಾಯಿಸಿ ಜಿಮ್ ಗೆ ಕಳಿಸಲು ಶುರು ಮಾಡಿದೆ. ನೌ ನೀನೆ ನೋಡು ಹೇಗಾಗಿದ್ದಾನೆ 'ಅಂತ ಖುಶಿಯಿಂದ ಉಲೀತಾ ಇದ್ದಳು ಮೇಖಲ
"ನೀನು ಸ್ವ್ಲಲ್ಪ ಪೇಶನ್ಸ್ ತೋರಿಸಬಹುದಿತ್ತು. ಮತ್ತು ಆಕಸ್ಮಾತ್ ಅವನು transvestite ಆಗಿದ್ದರೂ ಅವನಿಗೆ ನಮ್ಮ ಸಪೋರ್ಟ್ ಇಲ್ಲದಿದ್ದರೆ ಹೇಗೆ?" ನೋಡು ಏನೆಲ್ಲ ನಡೆದು ಹೋಯಿತು ಅಂತ ಕೂಡ ಸೇರಿಸಿದಳು
"ಮತ್ತೆ ನೀನು ಮದುವೆ ಗಿದುವೆ...."
"ಇಲ್ಲ ನನಗೆ ಅದರ ಬಗ್ಗೆ ಆಲೋಚಿಸಲಿಕ್ಕೆ ಪುರುಸೊತ್ತಿರಲಿಲ್ಲ, ಮತ್ತು ಮದುವೆಯಾದರೂ ಅವನು ಕ್ರಿಸ್ ನನ್ನು ಚೆನ್ನಾಗಿ ನೋಡಿಕೊಳ್ಳುತಾನೆಂದು ಏನು ಗ್ಯಾರಂಟಿ. ನನ್ನ ಕೆಲಸ,  ಕ್ರಿಸ್  ನ ದೇಖಿ ರೇಖಿ ಯಲ್ಲೇ ತಪಸ್ಸಿನಂತೆ ದಿನಗಳು ಕಳೆದು ಹೋದವು""ಬರ್ತಿಯಲ್ಲ ಮದುವೆಗೆ?
ಏನನ್ನೂ ಉತ್ತರಿಸಿದೆ ಅತುಲ್ ನಿಟ್ಟುಸಿರು ಬಿಟ್ಟ...

(ನನ್ನ ತಮ್ಮನ ಹೆಂಡತಿ 'ಕರ್ಮವೀರ' ಪತ್ರಿಕೆಯನ್ನು ತರಿಸುತ್ತಾಳೆ. ಅದರಲ್ಲಿನ ಕಾರ್ಡ್ ನಲ್ಲಿ ಕತೆ ಎನ್ನುವ ಪರಿಕಲ್ಪನೆ ನನಗಿಷ್ಟವಾಯ್ತು. ನನ್ನದೂ ಒಂದು ಪ್ರಯತ್ನ ಅಂತ ಬರಿಲಿಕ್ಕೆ ಶುರು ಮಾಡಿ A4 ಸೈಜ್ ನ ಕಾರ್ಡ್ ತುಂಬುವಷ್ಟು ದೊಡ್ಡ ಕತೆಯಾಗಿಬಿಡ್ತು..ಹಿಂದಿನ ಸಲ ಶ್ರೀಕಾಂತ ಮುಂಬೈಗೆ ಹೋದಾಗ ಕತೆ (ಯಂತದ್ದು) ಹುಟ್ಟಿಕೊಂಡಿತ್ತು. ಈ ಸಲ ಅವರು ಹೈದರಾಬಾದಿನಿಂದ ಬರುತ್ತಿದ್ದಾರೆ ಅವರಿಗೆ ಕಾಯ್ತಾ ಇದು a figment of my imagination .............)
:-)

12 comments:

Radhika said...

Good one Malathi. I like the mom in your story (except for she being happy when she gets his call).

Anonymous said...

Good one mal.. channagi bandide story.. nija.. appanige sakhat aagi dose kodabekittu avalu

Srivathsa Joshi said...

ಕತೆ ಇನ್ನೂ ಓದಬೇಕಷ್ಟೇ. ಆದರೆ ಒಂದು ಡೌಟು. ಈ ಕತೆಗೆ ಎಷ್ಟು ದೊಡ್ಡ ಕಾರ್ಡ್ ಬೇಕು!? :-)

nenapina sanchy inda said...

Good question SJ..answer koneyallE ittu..A4 size card anta..hahahaha.
Title koduvaaga i meant a short story but it went on quite a bit...
:-)
ms

nenapina sanchy inda said...

Dear Radhika and JK
It WAS a triumph for her alwaa??
:-)
ms

Srivathsa Joshi said...

ನಾನು ಕತೆ (fiction literature) ಓದುವುದು ಕಡಿಮೆ. ಆದರೂ ಇದನ್ನು ಓದುವ ಸಾಹಸ ಮಾಡಿದೆ :-) ಚೆನ್ನಾಗಿ ಬರೆದಿದ್ದೀರಿ! ಒಂದುಕಡೆ ’ಅಂತ’ ಅನ್ನೋದು ‘ಅಂದ’ಆಗಿ ಮಲಯಾಳಂ ಆಕ್ಸೆಂಟ್ ಬಂದಿದೆ :-) ಮತ್ತೆ, ಈ ಕತೆಯ ಶೀರ್ಷಿಕೆ ಏನು? ನಿಮ್ಮ ಬ್ಲಾಗ್ ಓದುಗರನ್ನು ನೀವು ಕೇಳಬಹುದು, ಒಂದು ಶೀರ್ಷಿಕೆ ಕೊಡುವಂತೆ. ’ದೂರತೀರಯಾನ’, ‘ಕರುಳಿನ ಸಂಬಂಧ’,’ಹೆತ್ತೊಡಲು’ ಮುಂತಾಗಿ ಭಾವನಾತ್ಮಕ ಟೈಟಲ್‌ಗಳು ಬರಬಹುದು!

Badarinath Palavalli said...

ಕಾಯುತಿಹಳು ಊರ್ಮಿಳೆಯಾಗಿ ನೀವು ಬರೆದಿಟ್ಟ ಈ ಕಾರ್ಡ್ ಕಥೆ ನನಗೆ ಇಷ್ಟವಾಯಿತು.

ಪೂರ್ಣ ಸಂವಾದದಂತಿರುವ ಈ ಕಥೆಯು ಎಲ್ಲೂ ಬೋರ್ ಹೊಡೆಸುವುದಿಲ್ಲ.

ಪಾತ್ರಗಳ ಹೆಸರುಗಳೂ ವೈವಿದ್ಯಮಯವಾಗಿದೆ.

Badarinath Palavalli said...

ಕಾಯುತಿಹಳು ಊರ್ಮಿಳೆಯಾಗಿ ನೀವು ಬರೆದಿಟ್ಟ ಈ ಕಾರ್ಡ್ ಕಥೆ ನನಗೆ ಇಷ್ಟವಾಯಿತು.

ಪೂರ್ಣ ಸಂವಾದದಂತಿರುವ ಈ ಕಥೆಯು ಎಲ್ಲೂ ಬೋರ್ ಹೊಡೆಸುವುದಿಲ್ಲ.

ಪಾತ್ರಗಳ ಹೆಸರುಗಳೂ ವೈವಿದ್ಯಮಯವಾಗಿದೆ.

nenapina sanchy inda said...

Srivathsa Joshi: nanna kate Odida nimma sahasakke nannadondu salaam..spelling sari maaDtene....shirshike kOdo kelasa ondu nanage barOde illaa..
badari Bhaiyya nimage 2 thanks ondu illi odi commentisidakke, innondu ee postannu nanna time line nalli haakidakke
:-)
malathi S

Dr.D.T.Krishna Murthy. said...

Nice captivating story. I really feel sick of such men.how can they behave in such a callous way?!I feel sorry about Krish's childhood.
Fatherhood is such a blessing.I fail to understand how a mother can get so excited about a husband's phone call when he has wrecked her son's childhood.kindly find some time to visit my blog.Regards.

Anitha Naresh Manchi said...

nice story :)

K.Usha P. Rai said...

malathiyavare, kathe chennaagide. mansige thattuththade. good narration.
Usha Rai