ಮೊನ್ನೆ ಅಮ್ಮನ ಮನೆಯಲ್ಲಿ ಮರಾಠಿ ಸೀರಿಯಲ್ ಒಂದನ್ನು ನೋಡುತ್ತ ಇದ್ದೆ. ಅದರಲ್ಲಿ ತಮ್ಮನ ಹೆಂಡತಿಗೆ ಕೆಟ್ಟ ಹೆಸರು ಬರಲಿ ಅಂತ, ಮನೆಗೆ ಬಂದ ಅಕ್ಕ ಸಾರಿನಲ್ಲಿ ಸಿಕ್ಕಾಪಟ್ಟೆ ಕಾರದ ಪುಡಿ ಬರೆಸುತ್ತಾಳೆ.ಅವಳಿಗೆ ತನ್ನ ತಮ್ಮ ಅವನ ಆಫಿಸ್ ನಲ್ಲೆ ಇದ್ದ ಹುಡುಗಿಯನ್ನು ಪ್ರಿತಿಸಿ ಮದುವೆಯಾಗಿದ್ದು, ಅದೂ ಅವಳ ಒಪ್ಪಿಗೆ ಪಡೆಯದೇ ಮದುವೆಯಾಗಿದ್ದು ಸಿಟ್ಟಿಗೇಳಿಸಿತ್ತು. ಅದಲ್ಲದೆ ಮನೆಗೆ ಬಂದ ಕೂಡಲೇ ಅವಳ ತಂದೆ ಹಾಗೂ ತಮ್ಮ ಅವಳ ಗುಣಗಾನ ಮಾಡುವುದುದನ್ನು ಸಹಿಸಿಕೊಳ್ಳಲಾಗುವುದಿಲ್ಲ..ಅದಕ್ಕೆ ತಮ್ಮ ಮತ್ತು ತಮ್ಮನ ಹೆಂಡತಿ ಮಧ್ಯೆ ಜಗಳ ತರಲು ಇದೂ ಒಂದು ಅಸ್ತ್ರ ಉಪಯೋಗಿಸಿದ್ದಳು.
ಇನ್ನೊಂದು ಸೇರಿಯಲ್ ನಲ್ಲಿ ಅತ್ತೆ ಸೊಸೆಯ ಕಾಫಿ ಫ್ಲಾಸ್ಕ್ ನಲ್ಲಿ ಪುಡಿಯುಪ್ಪು ಬೆರೆಸಿಡುತ್ತಾಳೆ...
ಈ ಸೀರಿಯಲ್ ನೋಡ್ತಾ ಬಂದ ಒಂದು ನೆನಪನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
ಮಾಲು-ನೀಹಾ ತುಂಬ ಚಿಕ್ಕವರಿದ್ದಾಗ ದೂರದ ಸಂಬಂಧಿಕ ಹೆಂಗಸೊಬ್ಬರು ಆವಾಗಾವಾಗ ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಅವರಿಗೆ ಚಿಕ್ಕ ಪ್ರಾಯದಲ್ಲೇ ಮದುವೆ ಆಗಿ, ವರ್ಷದೊಳಗೆ ಗಂಡ ತೀರಿಕೊಂಡಿದ್ದರು.ಮಕ್ಕಳಿರಿರಲಿಲ್ಲ. ಸಾಕಷ್ಟು ಸ್ಥಿತಿವಂತರೇ. ಹೀಗೆ ಒಬ್ಬಂಟಿಯಾಗಿರುತ್ತಿದ್ದರಿಂದ ಅವರು ಒಂದು ವಾರ-ಹದಿನೈದು ದಿನ ಹೀಗೆ ಬೇರೆ ಬೇರೆ ಸಂಬಂಧಿಕರ ಮನೆಗೆ ಹೋಗಿರುತ್ತಿದ್ದರು. ಬಾಣಂತನ, ಹಪ್ಪಳ-ಸಂಡಿಗೆ, ಮನೆಗೆಲಸದಲ್ಲಿ ಸಹಕರಿಸುವುದು ಮುಂತಾದವುಗಳನ್ನು ಮಾಡುತ್ತಿದ್ದರೂ, ಮನೆಯಲ್ಲಿ ಜಗಳ ಹಚ್ಚಿ ಕೊಡುವ ಕೆಲಸ ಕೂಡ ಮಾಡುತ್ತಿದ್ದರು. ಒಂದು ಸಲ ಅವರು ನಮ್ಮ ಮನೆಗೆ ಬಂದಿದ್ದರು ಕೆಲವು ದಿನ ಇದ್ದು ಕೊಂಡು ಹೋಗಲು. ನನ್ನನ್ನು ಅವರು ಯಾವತ್ತೂ 'ಮಾಲತಿ' ಅಂತ ಕರೆದಿದ್ದಿಲ್ಲ. ಶ್ರೀಕಾಂತನ ಹೆಂಡತಿ ಅಂತಲೇ ಕೂಗೋದು.
ಬೆಳಿಗ್ಗೆ ಒಂದು ದಿನ ನಮ್ಮ ಮನೆಯಲ್ಲಿ ದೋಸೆ ಮಾಡಿದ್ದೆ. ಸೌಟಿಗೆ ಏನೋ ತಾಗಿದ್ದರಿಂದ ಅದನ್ನು ತೊಳೆಯಲೆಂದು ಹೊರಗೆ ಹೋಗಿದ್ದೆ. ವಾಪಸ್ ಬರುವಾಗ ಆ ಹೆಂಗಸು ಮಾಲು-ನೀಹಾ ಬಳಿ 'ಅಮ್ಮನಿಗೆ ನಿಹಾ ಅಂದರೆ ಹೆಚ್ಚು ಪ್ರೀತಿ' ಬೇಕಾದರೆ ನೋಡಿ. ಇಬ್ಬರೂ ಮೊದಲ ದೋಸೆ ನನಗೆ ಅಂತ ಹೇಳಿ' ಅಂತ ಹೇಳಿಕೊಡುವುದನ್ನು ಕೇಳಿಸಿಕೊಂಡು ಸ್ವ್ಲಲ್ಪ್ಸ್ ಇರುಸು-ಮುರುಸಾಯಿತು. ಹಾಗೆ ಮಕ್ಕಳು (ಮಾಲವಿಕ ಆಗ ಎರಡನೆ ಈಯತ್ತೆ ಯಲ್ಲಿದ್ದಳು) first ದೋಸೆ ನನಗೆ ಅನ್ನುವ ಕಿರಿಕಿರಿ ಶುರು ಮಾಡಿದರು. ನನ್ನ ಭೈಯ್ಯ ನನಗೆ ಮಸಾಲೆ ದೋಸೆ ಮಾಡಲು ಆಗುವಂತೆ special ಆರ್ಡರ್ ಕೊಟ್ಟು ಚಚೌಕದ ಒಂದು ಕಾವಲಿ ಮಾಡಿಸಿಕೊಟ್ಟಿದ್ದರು. ಸಾಕಷ್ಟು ದೊಡ್ಡ ದಾಗಿತ್ತು ಅದು. ಅದರಲ್ಲಿ ಮಧ್ಯಮ ಗಾತ್ರದ ಎರಡು ದೋಸೆಗಳನ್ನು ಹುಯ್ದೆ. ಆ ಮೇಲೆ ಎರಡು ಪ್ಲೇಟ್ ನಲ್ಲಿ ಹಾಕಿಕೊಂಡು 'ಟಾ-ಡಾ ಮ್ಯಾಜಿಕಲ್ ಮೊಮ್ಮಿ ಲವ್ಸ್ ಯು ಬೋಥ್..ಅಂತ ಹೇಳಿ ಇಬ್ಬರಿಗೂ ಕೊಟ್ಟೆ...ಮೂರು ಜನರ ಮುಖ ನೋಡಬೇಕಿತ್ತು. ಈಗಲೂ ನಾನೂ ಮಕ್ಕಳು ಈ ವಿಷಯ ನೆನೆಸಿಕೊಂದು ನಗುತ್ತಿರುತ್ತೇವೆ.ಶ್ರೀಕಾಂತ ಇದಕ್ಕೆ conflict resolution ಅನ್ನುತ್ತಾರೆ :-)
ಚಿಕ್ಕ ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ ವಾಗಿರುತ್ತದೆ. ಅಂತ ಸಮಯದಲ್ಲಿ ಅವರಿಗೆ ಇಂತಹ ಉಪಯೋಗಕ್ಕೆ ಬಾರದ ಕೆಟ್ಟ ವಿಚಾರಗಳನ್ನೆಲ್ಲ ತುಂಬ ಬಾರದು. ನನ್ನ ಐಡಿಯ ಸರಿಯಾ ಗಿತ್ತಲ್ಲವಾ?
ಹಾಗೆ ಇತ್ತ್ತೀಚಿಗೆ ನನ್ನ ಫ್ರೆಂಡ್ ನನ್ನ ಜತೆ ಒಂದು ದಿನ ಕಳೆಯಲು ಬಂದಿದ್ದರು. ಊಟ ಎಲ್ಲ ಮುಗಿಸಿ ಲೋಕಾಭಿರಾಮವಾಗಿ ಮಾತನಾಡುತ್ತ ಇದ್ದೆವು. ಆಗ 'ಆರ್ ' ಗೆ ನಿನ್ನ ಶ್ರೀಕಾಂತ ಮೇಲೆ ತುಂಬ ಆದರಾಭಿಮಾನ ಅಂತ ಹೇಳಿದರು. ಅದಕ್ಕೆ ನಾನು arre we have been friends for so long ..ಇದೇನು ಇದ್ದಕ್ಕಿದ್ದ ಹಾಗೆ ಈ ಮಾತು ಅಂತಂದೆ...ಅದಕ್ಕೆ ಅವರು
"R has a strange habit. ಅದೇನೆಂದರೆ ಒಂದು ಕುಟುಂಬದ ಜತೆ ತುಂಬ ಆತ್ಮೀಯವಾಗುವುದು. ಆಮೇಲೆ ಗಂಡ ಹೆಂಡತಿಯ ನಡುವೆ ಏನಾದರು ಜಗಳ ತರುವುದು..R ಆ ಮೇಲೆ ಸುಬಗನ ತರಹ ಅವರ ಮಧ್ಯೆ ರಾಜಿ ಮಾಡಿಸುವುದು' ಅಂತ. you and Srikanth are the only couple who did not take his bait. ನನಗಂತು ಸೋಜಿಗ. ಯಾವ್ಯಾವ ತರಹದ್ದ ಜನರು ಇರುತ್ತಾರಲ್ಲವಾ?
ಬಹುಶ: -art imitates life ಅಂತ ಇದ್ದಕ್ಕೆ ಹೇಳಿರಬಹುದಲ್ಲವೇ. ಸೀರಿಯಲ್ ನಲ್ಲಿ ತೋರಿಸುವುದು ಅತಿಶಯೋಕ್ತಿ ಅನ್ನಿಸುವುದಿಲ್ಲ
:-)
5 comments:
ನಾನು ಸಾಮಾನ್ಯವಾಗಿ ಸೀರಿಯಲ್ಸ್ ನೋಡೋಲ್ಲಾ.ಆದರೂ ಸೀರಿಯಲ್ಸ್ ನಲ್ಲಿ ಎಫೆಕ್ಟ್ ಬರಲಿ ಅಂತ ಸ್ವಲ್ಪ exaggerate ಮಾಡ್ತಾರೇನೋ ಎನಿಸುತ್ತದೆ.ಆದರೆ ನಿಜ ಜೀವನದಲ್ಲಿ ಇಂತಹ ಘಟನೆಗಳು ಎದುರಾದಾಗ,fact is stranger than fiction ಎನಿಸುತ್ತದೆ!ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.
ನಿಜ ಸ್ವಲ್ಪ ಟೀವಿ ಮತ್ತು ಸಿನಿಮಾಗಳು ಇಂತಹ ಆಷಾಡಭೂತಿಗಳನ್ನು ಹುಟ್ಟಿಸಬಹುದು.
ಇಂತಹ ಮನೆ ಮುರುಕರು ಕುಟುಂಬ ಭಂಜಕರು. ಇವರಿಂದ ಎಷ್ಟು ಹುಷಾರಾಗಿದ್ದರೂ ಸಾಲದು!!!
Malathi you are saved as you don't watch serials. Every other serial is full of plots to spoil someone's happiness.
ನಿಜ ಮಾಮ್, ಸೀರಿಯಲ್ಸ್ ಗಳಲ್ಲಿ ನಿತ್ಯ ಜೀವನದ ನಾನಾ ಸಮಸ್ಯೆಗಳನ್ನು ತೋರಿಸುತ್ತಾರೆ. ಕಾಲ್ಪನಿಕ ಕಥಾ ಹೆಣಿಕೆಗಳಿದ್ದರೂ ವಾಸ್ತವ ಬದುಕಿಗೆ ಹತ್ತಿರವಾದ ಅಂಶಗಳು ಜಾಸ್ತಿ ಇರ‍್ತವೆ.
ನಾನು ಸೀರಿಯಲ್ಸ್ ಯಾವಾಗಲೋ ಒಮ್ಮೊಮ್ಮೆ ನೋಡ್ತೀನಿ ಮನೆಗೆ ಹೋದಾಗ. ಈ ಮಧ್ಯೆ ಮಿಸ್ ಮಾಡಿದ ಎಪಿಸೋಡ್ ಗಳ ಸಾರಾಂಶವನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕು ಅನ್ನಿಸಿದರೆ ಕೇಳುವೆ. ಅದಕ್ಕಿಂತ ಮಜಾ ಸಂಗತಿ ಏನಂದ್ರೆ ಜಾಸ್ತಿ ಮಾತಾಡಿಸದಿದ್ದರೂ ನೆರೆ-ಹೊರೆಯ ಜನರ ವರ್ತನೆಗಳನ್ನು ವೀಕ್ಷಿಸುವುದು, ಗಮನಿಸುವುದು ಒಂಥರಾ ಸೀರಿಯಲ್ ನೋಡಿದಂಗೆ ಆಗುತ್ತದೆ. :-)
ನಿಮ್ಮ ಡಬಲ್ ದೋಸಾ ಐಡಿಯಾ ಆ ಸಮಯಕ್ಕೆ ಅತ್ಯುತ್ತಮ ಮನಃಶಾಸ್ತ್ರೀಯ ಕೆಲಸ ಮಾಡಿದೆ. ಧನ್ಯವಾದಗಳು ಮಾಮ್.:-)
ನಾವು ಸ್ವಲ್ಪ ಎಚ್ಚರಿಕೆಯಿಂದ ಇದ್ದು ತಲೆ ಓಡಿಸುತ್ತಿದ್ದರೆ ನಿಮ್ಮ ಹಾಗೆ ಡಬ್ಬಲ್ ತ್ರಿಬಲ್ ದೋಸೆ ಐಡಿಯಾ ಬಂದು ನಮ್ಮ ಸಂಸಾರ ಒಡೆಯದ ಹಾಗೆ ನೋಡ್ಕೋ ಬಹುದು ಮಾಲತಿ.
ಮಾತ್ರ ತಲೆ ಒಡೆಯೋಕ್ಕಿಂತ ಖತರ್ನಾಕ ಕೆಲಸ ಮನೆಯೊಳಗೆ ಜಗಳ ತಂದು ಮಜಾ ನೋಡೋದು..
ಇನ್ನು ಕೆಲವರು ತಮಗೆ ದಕ್ಕದೆ ಇದ್ದದ್ದು ಬೇರೆಯವರಿಗೆ ಸಿಗುವಾಗ ಬಯುಶಃ ಕೀಳರಿಮೆಯಿಂದ ಈ ರೀತಿ ವರ್ತಿಸಿತ್ತಾರೋ ಏನೋ..
Post a Comment