February 28, 2010

ಬನ್ನಿ ನೋಡಿ ನಮ್ಮೂರು- ತೀರ್ಥಹಳ್ಳಿ, ನಮ್ಮ ತೋಟ, ಅಡಿಕೆ ಕೊಯ್ಲು... etc ಎಟಸೆಟ್ರಾ part 1

ತೀರ್ಥಹಳ್ಳಿ :ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಮತ್ತು ಅದರ ಮುಖ್ಯ ಊರು. ಶಿವಮೊಗ್ಗದಿಂದ ಸಾಧಾರಣ 65 ಕಿ.ಮಿ.ದೂರ. ಮಲೆನಾಡಿಗೆ ಸೇರಿದ್ದರಿಂದ ಬೆಟ್ಟ, ಗುಡ್ಡ, ಕಾಡು, ನದಿ, ಝರಿಗಳಿಂದ ಕೂಡಿದ ಕಣ್ಮನ ಸೊರೆಗೊಳ್ಳುವ ರಮ್ಯ ಪ್ರದೇಶ.ಶಿವಮೊಗ್ಗ ಹಾಗೂ ಉಡುಪಿ ಮಧ್ಯದಲ್ಲಿ ಬರುವ ದೊಡ್ಡ ಎನಬಹುದಾದ ಊರು. ಹಾಗಾಗಿ ನೆಂಟರಿಗೆಲ್ಲ ನಮ್ಮ ಮನೆಯಲ್ಲಿ rest stop. ಇಲ್ಲಿವೆ ನಮ್ಮೂರಿನ ಕೆಲವು ಚಿತ್ರಗಳು.

ಇಲ್ಲಿನ ಮುಖ್ಯ ನದಿ- ತುಂಗಾ
ನದಿಗೆ ಹೋಗುವ ದಾರಿ
ರಾಮ ಮಂಟಪ. ಜೋರು ಮಳೆಯಾದಾಗ ಈ ಮಂಟಪ ಮುಳುಗಿ ಹೋಗುತ್ತೆ. ನೀರಿನ ರಭಸಕ್ಕೆ ಬಂಡೆಯಲ್ಲಿ ಕೊರೆಯಲ್ಪಟ್ಟ ಅನೇಕ ಕುಳಿಗಳಿವೆ. ಇದರಲ್ಲಿ ಒಂದು ವಿಶಾಲವಾದ ಕುಳಿ ಕೊಳದ ಆಕಾರ ಪಡೆದಿದೆ. ಈ ಕೊಳದ ನೀರನ್ನು ಪ್ರೋಕ್ಷಿಸಿಕೊಳ್ಳುವುದರಿಂದ ಪಾಪ ನಿರ್ಮೂಲನೆ ಯಾಗುತ್ತವೆ ಎಂಬ ನಂಬಿಕೆಯಿದೆ.




ಈ ಸೇತುವೆಯನ್ನು ಸರ್ ಎಮ್. ವಿಶ್ವೇಶರಯ್ಯನವರು ಕಟ್ಟಿಸಿದ್ದು :-) ಈ ಸೇತುವೆ ಕಂಡ್ರೆ ನನಗೆ ತುಂಬ ಹೆಮ್ಮೆಯನಿಸುತ್ತೆ!



ಶ್ರೀ ಕೋದಂಡರಾಮ ದೇವಸ್ಥಾನಕ್ಕೆ ಹೋಗುವ ದಾರಿ

ಕೋದಂಡರಾಮ ದೇವಸ್ಥಾನ



ರಥ ಬೀದಿ

ರಾಮೇಶ್ವರ ದೇವಸ್ಥಾನ


ಕೊಪ್ಪ circle, Azad ರಸ್ತೆ. ಇಲ್ಲಿ ನಿಂತು ’ಮಾಲತಿ ಶೆಣೈ’ ಅಂತ ಕರೆದರೆ ನನಗೆ ಕೇಳಿಸುತ್ತೆ. ಇಲ್ಲೇ ಹತ್ತಿರದಲ್ಲಿ ನಮ್ಮ ಮನೆ. :-)

ತೀರ್ಥಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸಿದ ಶ್ರೀ ಲಕ್ಷ್ಮಿವೆಂಕಟೇಶ್ವರ ದೇವಸ್ಥಾನ. ಶ್ರೀಕಾಂತ ರ ಅಣ್ಣ (ನನ್ನ ಭೈಯ್ಯ) ದೇವಸ್ಥಾನದ ಅಧ್ಯಕ್ಷರು :-) ಬೆಳಿಗ್ಗೆ ಬೆಳಿಗ್ಗೆ ಇಬ್ಬನಿ ಹನೀತಾ ಇತ್ತು.


the idol in the SLV Temple




ಅಗ್ರಹಾರ.


ಊರಿನಲ್ಲಿ ಪ್ಲೇಗ್ ಮಹಾಮಾರಿ ತಗುಲಿದಾಗ, ಈ ರಥವನ್ನು ಹರಕೆಯರೂಪದಲ್ಲಿ ಹೇಳಿಕೊಂಡಿದ್ದು. ಈಗ ಸಂಕ್ರಮಣದಂದು ಈ ತೇರನ್ನು ಎಳೆಯುತ್ತಾರೆ. ಮಾರ್ಗಶಿರಮಾಸಿನಲ್ಲಿ ಮೂರು ದಿನ ರಾಮೇಶ್ವರ ಜಾತ್ರೆ ನಡೆಯುತ್ತದೆ

ಇನ್ನೂ part -2 ಇದೆ. ಫೋಟೊ download ಮಾಡಿ ಸುಸ್ತಾಯ್ತು. :-)

8 comments:

ಜಲನಯನ said...

ಮಾಲತಿ..ನಿಮ್ಮ ಊರನ್ನು ಬಹಳ ಸಲ ನೋಡಿದ್ದೇನೆ ಆದರೆ ಹತ್ತಿರದಿಂದಲ್ಲ...ನಾವು ಮಂಗಳೂರಿಂದ ಶಿವಮೊಗ್ಗೆ ಮೂಲ್ಕ ಭದ್ರ ಜಲಾಶಯಕ್ಕೆ ಮೀನು ಮರಿ ತರಲು ಹೋಗ್ತಿದ್ವಿ..ಆಗ ತೀರ್ಥಹಳ್ಳಿಯಲ್ಲಿ ಚಾ ಕುಡಿದೇ ಮುಂದಕ್ಕೆ ಪ್ರಯಾಣ...ರಸ್ತೆಯಲ್ಲಿ ನೋಡುತ್ತ ಹೋಗುವಾಗಲೇ ಅನ್ನಿಸುತ್ತಿತ್ತು...ರಮಣೀಯ ನಿಸರ್ಗತಾಣ ಇದು ಅಂತ...ಇದರ ದರ್ಶನ ಆಯ್ತು ನಿಮ್ಮ ಬ್ಲಾಗ್ ಪೊಸ್ಟ್ ನಿಂದ...ಧನ್ಯವಾದ

ಸವಿಗನಸು said...

ಮಾಲತಿ,
ಸುಂದರ ನಿಸರ್ಗ...
ಮನಸೂರೆ ಗೊಂಡಿತು...
ನೋಡಬೇಕೆನಿಸುತ್ತಿದೆ ನಿಮ್ಮೂರ.....

ಮನಸು said...

wow tumba chennagide....

ಸುಮ said...

ತೀರ್ಥಹಳ್ಳಿ ನನ್ನಮ್ಮನ ತವರೂರಿಗೆ ಹತ್ತಿರ .ಅಲ್ಲಿಯ ಸುಂದರ ಪರಿಸರ ನನಗಿಷ್ಟ. ನಿಮ್ಮ ಫೋಟೊಗಳು ಎಲ್ಲವನ್ನು ನೆನಪಿಸಿದವು .ಧನ್ಯವಾದಗಳು.

Sushrutha Dodderi said...

ayyo.. noDE irlilvalree nim blogu.. :O

Suresh Nayak said...

Nannannu yavga karkondu hogtira nimma oorige :-)

guru said...

I LV tirthahalli ......................

guru said...

nanage photos nodi mathe yavaga nannuru tirthahalli ge yavaga hogtini antha anstidhe