February 21, 2025

ಸಂಚಿಯಿಂದ ಒಂದು ನೆನಪು - Netflix docu-series

 


netflix  ನಲ್ಲಿ the roshans annuva documentary ,ಬಂದಿದೆ.ಬಚೆನ್ನಾಗಿ ಮಾಡಿದ್ದಾರೆ. ಹಿರಿಯ ರೋಷನ್ ರಿಂದ ಕಿರಿಯ ಹೃತಿಕ್ ರೋಷನ್ aಅವರ ಇಬ್ಬರು ಮಗಂದಿರ ಪೀಳಿಗೆ, ಅವರ ಸಂಗೀತದ ಪಯಣ. b&wಜಮಾನಾದಿಂದ ಇಲ್ಲಿಯವರೆಗೆ!!! ನಾನು.ಒಬ್ಬಳೇ ಕೂತು ನೋಡಿದೆ. ನಾನು documentary ಎಲ್ಲ ನೋಡೋದು ಕಡಿಮೆ


ಇಲ್ಲಿ ಪ್ರಸ್ತುತ ಪಡೆಸಿರುವ ಎಲ್ಲ ಹಳೆ ಹಾಡುಗಳನ್ನು ಅವರ ಜತೆಗೆ ಹಾಡಿದೆ....ಮುಂಬೈ ನಲ್ಲಿ ಬೆಳೆದರೂ, ಬ್ಯಾಂಕ್ ನಲ್ಲಿ  ತಂದೆ ಫಿಲ್ಮ್ financing ಖಾತೆ ಹೊಂದಿದ್ದರೂ, ತೀರ ಬುದ್ದಿ ಬಂದ ಮೇಲೆ ಸಿನಿಮಾಗೆ ಹೋಗಿದ್ದು, ನೆನಪಿಲ್ಲ ಅಥವಾ ಶಾಲಾ ಕಾಲೇಜಿಗೆ ಓದುತ್ತಿದ್ದಾಗ ನಮಗೆ ಮಿತ್ರರೊಂದಿಗೆ ಸಿನಿಮಾಗೆ ಹೋಗಲು ಅನುಮತಿ ಕೂಡ ಇರಲಿಲ್ಲ. ಶಾಲೆಯಲ್ಲಿ ತೋರಿಸಿದ ಸಿನಿಮಾಗಳು ಬಿಟ್ಟು...

ಆದರೆ ಮನೆಯಲ್ಲಿ ಸದಾ ಕಾಲ ಹಾಡುತ್ತಿದ್ದ ರೇಡಿಯೋ ಮೂಲಕ ಹೆಚ್ಚಿನ ಹಾಡುಗಳು ಬಾಯಿಪಾಠವಾಗಿತ್ತು, ಅಲ್ಲದೆ ಅಮ್ಮ ಸುಶ್ರಾವ್ಯ ಕ0ಠದಿಂದ ದಿಂದ ಹಾಡುಗಳನ್ನು ಹಾಡುತ್ತಿದ್ದರು.
ನಾನು ಆ ಸಮಯ ಹುಟ್ಟಿದ್ದು ನನ್ನ ಸೌಭಾಗ್ಯ ಅಂತಲೇ ಹೇಳ ಬಹುದು. ಆ ಜಮಾನಾಕೆ ಎಳೆದೋಯ್ತು ಈ documentary.  ವಾಪಸ್ ಅಲ್ಲಿಗೆ ಹೋಗುವಾ ಅನ್ನಿಸಿಬಿಡ್ತು 🤔
ಅಮ್ಮ ಅಪ್ಪ ಕೆಲ ಸಮಯ ಅವರ ಮಿತ್ರರೊಂದಿಗೂಡಿ ಲಾಸ್ಟ್ show ಸಿನಿಮಾಗೆ, ನಮ್ಮನ್ನು ಮನೆಯೊಳಗೆ  ಕೊಡಿಟ್ಟು,ಬೀಗ ಹಾಕಿ ಹೋಗುತ್ತಿದ್ದರು.


ಆ ಒಂದು ಸಿನಿಮಾಕೆ ನನ್ನನ್ನು ಕರೆದುಕೊಂಡು ಹೋಗಿದ್ದರು. ನಾನು ಮಲಗಬಹುದು ಎಂಬ ಅಂದಾಜಿತ್ತೇನೋ. ಆದರೆ ಆ ಸಿನಿಮಾದ ಹಾಡುಗಳು ನನ್ನಲ್ಲಿ ಉಳಿದುಕೊಂಡು ಬಿಟ್ಟಿತು. ಅದರಲ್ಲಿನ ಕೆಲ scene ಗಳೂ ನನ್ನಲ್ಲಿ ಉಳಿದುಕೊಂಡು ಬಿಟ್ಟಿತು. ಸಿನಿಮಾದ ಹೆಸರು ಎಲ್ಲ ನೆನಪಿರಲಿಲ್ಲ. ಯು ಟ್ಯೂಬ್ ನಲ್ಲಿ ಒಂದು ಹತ್ತು ವರ್ಷದ ಹಿಂದೆ ಓ ಮಾಯಿ ರಿ ಹಾಡು ಟೈಪ್ ಮಾಡಿ ಗೂಗಲಿಸಿ ಆ ಸಿನಿಮಾ ನೋಡಿದೆ. ರೆಹಾನಾ ಸುಲ್ತಾನ್ ಮತ್ತು ಸಂಜೀವ್ ಕುಮಾರ್ ಮುಖ್ಯ ಪಾತ್ರ, ಸಿನಿಮಾ ಹೆಸರು 'ದಸ್ತಕ್'  ಆ ಕಾಲಕ್ಕೆ ಈ ಸಿನಿಮಾ ಬೋಲ್ಡ್ ಅಂತಲೇ ಹೇಳಬಹುದು. ಅಮ್ಮ ಅಜ್ಜಿಗೆ ಅದರ ಬಗ್ಗೆ ಕೇಳಿದರೆ ನನ್ನ ಬಾಯಿ ಮುಚ್ಚಿಸಿದ್ದರು. 😀
ಅಜ್ಜ ಮನೆಗೆ ಬಂದಿರುವವರ ಜತೆ ನನ್ನ ಆಂಗ್ಲ ಓದಿನ ಪ್ರಾವೀಣ್ಯ ತೋರಿಸಿಕೊಂಡರೆ, ಅಮ್ಮ , ಸಿನಿಮಾದ ನೃತ್ಯ ಹಾಗೂ ಹಾಡನ್ನ ನನ್ನಿಂದ ಮಾಡಿಸುತ್ತಿದ್ದರು.
ಅಕ್ಕ ಕೂಡ ಹಳೆ ಹಾಡುಗಳನ್ನು ಗುನುಗುಣಿಸ್ತಾಳೆ...ನಾನು ಹಾಡೊದನ್ನು ಕೇಳಿ..🙂
ಇಷ್ಟೆಲ್ಲ ನೆನಪಾಯಿತು ಆ docuseries ನಿಂದ

No comments: