February 6, 2025

ಛೋಟಿ ಬಚ್ಚಿ ಹೋ ಕ್ಯಾ?

 ಹೌದು ಚಾಕಲೇಟ್ ವಿಷಯದಲ್ಲಿ ನಾನು ಛೋಟಿ ಬಚ್ಚಿ ಅಂದ್ರೆ ಪುಟ್ಟ ಮಗು ನೆ ನಾನು

ಇವತ್ತು ಬೆಳಿಗ್ಗೆ ನಮ್ಮ ಮನೆಗೆ ನಮ್ಮ ಆಫಿಸ್ ನ ಹಿರಿಯರೊಬ್ಬರು ಬಂದಿದ್ದರು. ಅವರು ಟಿ, ಕಾಫಿ ಬಿಡಿ ಅನ್ಯರ ಮನೆಯಲ್ಲಿ ನೀರು ಸಹ ಕುಡಿಯಲ್ಲ. ನಾನು ಇವೆತ್ತು ಕುಚ್ಚಲಕ್ಕಿ ಗಂಜಿ ಮತ್ತು ಬೆಳ್ಳುಳ್ಳಿ ಚಟ್ನಿ ಮಾಡಿದ್ದೆ...ಊಟ ಮುಗಿಸಿದ್ದಷ್ಟೆ. 

ಮಾಮ ಬ್ರೆಕ್ಫಾಸ್ಟ್ ಆಯ್ತಾ ಅಂತ ಕೇಳಿದೆ. ಅವರು ಒಂದರ್ಧ ಗ್ಲಾಸ್ ಕಾಫಿ ಮಾಡಿ ಕೊಡಿ ಮಾಯಿ ಅಂತ ಕೊಂಕಣಿಯಲ್ಲೇ ಹೇಳಿದರು. ಅವರು  ಮಾಧ್ವ ಭ್ರಾಹ್ಮಣರು...ಮನೆ ಮಾತು ಕನ್ನಡ ಆದರೆ ಹಲವಾರು ವರ್ಷ ಬ್ಯಾಂಕ್ ಕೆಲಸದ ನಿಮಿತ್ತ ಉಡುಪಿಯಲ್ಲಿದ್ದುದರಿಂದ ಒಳ್ಳೆಯ ಕೊಂಕಣಿ ಮಾತನಾಡುತ್ತಾರೆ. ಮಾಡಿ ಕೊಟ್ಟ ಕಾಫಿ ತುಂಬಾ ಚೆನ್ನಾಗಿದೆ ಎಂದು ಹೊಗಳಿದರು. ನನಗಂತೂ ಆಶ್ಚರ್ಯ...😁. ಅವರು ನನಗಿಂದು ಪಾರ್ಲ್ ಪೊಪ್ಪಿನ್ಸ್ ಕೊಟ್ಟರು. ನಾನಂತೂ ಖುಷಿಯಿಂದ ತೆಗೊಂಡೆ. ಅದಕ್ಕೆ ಅಕ್ಕ 'ಪುಟ್ಟ ಹುಡುಗಿ ತರಹ ಮುಖ ಎಷ್ಟು ಖುಷಿಯಿಂದ ಅರಳಿದೆ' ಎಂದಳು


ಹೀಗೆ ಹಲವಾರು ವರ್ಷಗಳ ಹಿಂದಿನ ಘಟನೆ ನೆನಪಾಯ್ತು. ತೀರ್ಥಹಳ್ಳಿಗೆ ಚೌತಿ ಯಂದು ಹಲವಾರು ನೆಂಟರು ನಮ್ಮಮನೆಗೆ ಊಟಕ್ಕೆ. ಅವರಲ್ಲೊಬ್ಬರು 'ಪತ್ರೊಡೆ ಬಿಟ್ಟು ಎಲ್ಲ ಅಡುಗೆಗಳನ್ನು ಬಡಿಸಬಹುದು ಅನ್ನೋವ್ರು.  ನನಗೆ ಮದುವೆಯಾಗಿ ತೀರ್ಥಹಳ್ಳಿಗೆ ಸೇರಿ ನಾಲ್ಕು ವರ್ಷವಾಗುವವರೆಗೆ ಇದೆ ಕತೆ ನಡೆಯಿತು. ಆಷ್ಟರೊಳಗೆ ಮುಂಬೈಯ ಪುಟ್ಟ ಕುಟುಂಬದಲ್ಲಿ ಬೆಳೆದ 21 ವರ್ಷದ  ನಾನು ಪೂಜೆಯ ಅಡುಗೆಯ ಸುಮಾರೆಲ್ಲ ಜವಾಬ್ದಾರಿ ನ ವಹಿಸಿಕೊಳ್ಳಲಾರಂಭಿಸಿದ್ದೆ..ಅಕ್ಕ (co sister) ಅವರ ಸರಿ ಸಮಾನ ಅಡುಗೆ ಕೆಲಸ ವಹಿಸುತ್ತ ಮೋದಕ, ಉಂಡಲಕಾಳು, ಸಿಹಿ ಅವಲಕ್ಕಿ, ಪತ್ರೊಡೆ,  ದಪ್ಪ ಮೆಣಸಿನ ಬೋಂಡ ಪೂರ್ತಿ ನನ್ನ ಜವಾಬ್ದಾರಿ. ಆ ವರ್ಷ ಎಲ್ಲರಿಗೂ ಪತ್ರೊಡೆ ಬಡಿಸುತ್ತ, ಅವರ ಬಳಿ ಬಂದಾಗ ಒಂದು ಚಿಕ್ಕ ತುಂಡು ಪತ್ರೊಡೆ ಬಡಿಸಲಾ ಎಂದಾಗ ಅವರು ಹೂ0 ಅಂದರು. ತಿಂದು ಮಲ್ಲಮ್ಮ ಚೆನ್ನಾಗಿದೆ ಪತ್ರೊಡೆ ಅಂದಾಗ, ನಾನೇ ಮಾಡಿದ್ದು ಅಂದೆ...ಅದಕ್ಕೆನನ್ನ ಅಕ್ಕ 'ಚಾನ್ಸ್ ನಿನ್ನದು...ಸೂರ್ಯ ಇವತ್ತು ಬೇರೆ ದಿಕ್ಕಿ ನಲ್ಲಿ ಉದಯಿಸಿರಬಹುದು ಎಂದು ತಮಾಷೆ ಮಾಡಿದ್ದು ನೆನಪಾಯ್ತು. 

😁😁

No comments: