ದೀಪಾವಳಿ ಹತ್ತಿರ ಬಂತು. ಅಡಿಗೆ ಎಲ್ಲ ಬೇಗ ಮುಗಿಸಿ ದೀಪಾವಳಿ ಕೇಕ್, ಬಿಸ್ಕತ್, ಚಾಕೊಲೇಟ್ wholesale ಹ್ಯಾಮ್ಪರ್ sample ನೋಡಲು ಚಿಕ್ಕಪೇಟೆ ಹೇ ಹೋದೆವು. ಜನವೋ ಜನ. ಬಿ ವಿ ಕೆ ಐಯಂಗಾರ್ ರಸ್ತೆ ರಿಪೇರಿ ಕಾಮಗಾರಿ ನಡೀತಿದೆ
ಚಿಕ್ಕಪೇಟೆಯ ಕಾಶಿ ವಿಶ್ವನಾಥ ದೇವಸ್ಥಾನ ದ ರಸ್ತೆ ಬದಿಯಲ್ಲಿ ಈ ಕೆಳಗಿನಂತೆ ಪಿತೃಗಳಿಗೆ ಪೂಜೆ/ತರ್ಪಣ ನೀಡುವ ದ್ರಶ್ಯ ನೋಡಿ ಬೆರಗಾಯಿತು
ಶ್ರೀಕಾಂತ್ ತೀರ್ಥಹಳ್ಳಿಗೆ ಹೋಗಿದ್ದಾರೆ. ಹಾಗಾಗಿ ನಮ್ಮದು ಸೀದಾ ಸಾದಾ ಅಡುಗೆ.
ಎಷ್ಟು ಸೆಕೆಯಿತ್ತೆಂದರೆ ನಿಜಕ್ಕೂ ಮನೆ ತಲುಪುವಷ್ಟರಲ್ಲಿ ಸುಸ್ತಾದೆ. 😀😀
ಸಂಜೆ ಮಳೆಗೆ ಮುಂಚೆ ಇಂದು ಕಾಮನಬಿಲ್ಲು ಮೂಡಿತು.
ನಿಹಾ ಗೆ ಚಿತ್ರ ಕಳಿಸಿದೆ. ಅವಳು ಮೈಸೂರು ಅರಮನೆ ಬಳಿಯಲ್ಲಿ ಮೂಡಿದ ಕಾಮನಬಿಲ್ಲು ಕಳುಸಿದಳು 😀❤️











No comments:
Post a Comment