ಉಜಿರೆಯ ಶಿವಾಜಿನಗರದಲ್ಲಿ ನಾವು ಮೊದಲಿಗೆ ವಾಸ ಆಗಿದ್ದೆವು. ಅಲ್ಲಿ ಒಂದು ಪುಟ್ಟ/ಮಿಡಿ ಗೋದಿ ನಾಗರ ಹಾವು ಇತ್ತು. ಚೆಂದದ ಸಾವಯವ ತರಕಾರಿ ತೋಟ ಬೆಳೆಸಿದ್ದೆ. ನನಗೆ ಆಣ್ಣಿ. ಗೌಡ ಎನ್ನುವವರ ಸಹಾಯ ಇತ್ತು. ಅಲಸಂದೆ, ಬೆಂಡೆ, ತೊಂಡೆಕಾಯಿ ಮುಂತಾದವು ಬೆಳೆಸಿದ್ದೆ. independent ಮನೆಯಾಗಿದ್ದು, ಆ ಜಾಗದಲ್ಲಿ ಹಲಸಿನ ಮರ ಆಗಲೇ ಇತ್ತು. ದ್ಧಾರಳವಾಗಿ ಚಿಪ್ಸ್ ಮಾಡಿ ತಿಂಡಿದ್ದೇವೆ...ಈ ಗೋದಿ ನಾಗರ ನನ್ನ ಸುತ್ತ ಮುತ್ತ ತಿರುಗಾಡುತ್ತಿತ್ತು. ಗಾಳಿಗೆ ನನ್ನ ಬಟ್ಟೆ ಹಾರಾಡುವಾಗ ಹೆಡೆ ಎತ್ತುತ್ತಿತ್ತು ಅನ್ನೋದು ಬಿಟ್ಟರೆ ಬಾರಿ ಸಾಧು ಪ್ರಾಣಿ. ನಾನೇ ಕೋಲಿನಿಂದ ಚುಚ್ಚಿ 'ಆ ಕಡೆ ಹೋಗೋ..ನನ್ನ ಕಾಲ ಬುಡ ಬಂದು ಸಾಯ್ತಿಯಾ ಎನ್ನುತ್ತಿದೆ. ಮತ್ತು ಅಡಿಗೆಯಾಗಿ ಒಗ್ಗರಣೆ ಹಾಕುವ ಟೈಮ್ ಗೆ ಅಡುಗೆ ಮನೆಯ ತೊಲೆ ಮೇಲೆ ಹಾಜರ್...ಪುನಃ ಕೋಲಿನಿಂದ..'ನನ್ನ ಸಾರು/ಸಾಂಬಾರ್ ಒಳಗೆ ಬೀಳ್ತಿಯ' ಅಂತ ಕೋಲಿನಿಂದ ಹೊರಗೆ ಹೋಗಲು ಪ್ರೇರೇಪಿಸುತ್ತಿದ್ದೆ.
ಅಮ್ಮ ಅಂತೂ ಹೆದರಿ ದಿನಾ ಫೋನ್ ಮಾಡೋರು...ನಾವು ಜೀವದಿಂದಿವಾ ಇಲ್ಲವಾ ಅಂತ. ಆ ಮೇಲೆ ಮನೆ ಮಾಲೀಕರಿಗೆ ಪುನಃ ಉಜಿರೆ ಗೆ ವರ್ಗವಾದಾಗ, ನಾವು ಕೆ ಟಿ ಗಟ್ಟಿ ಮಾಮನವರ ಬಾಡಿಗೆಗೆ ಇಟ್ಟ, ಮೇಲಿನ ಮನೆಗೆ ಶ್ರೀಕಾಂತ್ shift ಮಾಡಿದರು. ನಾನು ಮುಂಬೈಗೆ ಹೋಗಿದ್ದೆ...ಹಾಗಾಗಿ ನನ್ನ ಪುಟ್ಟ ಮಿಡಿ ನಾಗರ ನಿಗೆ ಬೈ ಹೇಳಲು ಆಗಲಿಲ್ಲ.
ಉಜಿರೆಯಲ್ಲಿ ಕೊನೆ ದಿನ. ಬೆಳಿಗ್ಗೆ ಬೇಗನೆ ಎದ್ದು ಪಕ್ಕದಲ್ಲಿದ್ದ ಡಾ. ವೀರೇಂದ್ರ ಹೆಗ್ಗಡೆಯವರ ತೋಟಕ್ಕೆ ಹೋದೆ. ನಾವಲ್ಲಿ ಇರುವ ತನಕ ದಿನಾ ಸಂಜೆ ಅಲ್ಲಿ walk. ನೆಂಟರು ಇಷ್ಟರು ಬಂದಾಗ ಅವರನ್ನೆಲ್ಲ ಅಲ್ಲಿ ಕರೆದುಕೊಂಡು ಒಂದು ಫೋಟೋ shoot. ಕೊನೆಯ ತಿಂಗಳು ಅಲ್ಲೊಂದು ಗೋದಿ ನಾಗರ ಹಾವು ಬರುತ್ತಿತ್ತು. ಸುಮ್ಮನೆ ಒಂದು ಕಡೆ ಇರುತ್ತಿತ್ತು. ನಾನು ಅದಕ್ಕೆ ತುಂಬಾ ತೊಂದರೆ ಕೊಟ್ಟಿದ್ದಿದೆ. ಕಡ್ಡಿಯಿಂದ ಕೊರೆದು ನೋಡಿದ್ದಿದ್ದೆ...ಜೀವಂತ ವಾಗಿದೆಯೋ ಅಂತ...ಅದು ಮಿಸುಕಾಡುತಿತ್ತು ವಿನಃ ಭುಸ್ ಅನ್ನಲಿಲ್ಲ, ಹೆಡೆಯು ಎತ್ತುತ್ತಿರಲಿಲ್ಲ. ಪಾಪ ಏನು ಕಾಯಿಲೆಯೊ, ಏಟಾಗಿತ್ತೋ, ವಯಸಾಗಿತ್ತೋ ಏನೋ. ಆಮೇಲೆ ಸುಮ್ಮನೆ ನಾನು ಕೂತ ಕಡೆ ಬಂದು ಸಿಂಬಿ ಸುತ್ತಿ ಅಲ್ಲಿರಿತ್ತುತ್ತು. ಬೆಳಿಗ್ಗೆ ನಮಗೆ ಕೆ ಟಿ ಗಟ್ಟಿ ಮಾಮನವರಲ್ಲಿ ಬೆಳಗಿನ ತಿಂಡಿಗೆ ಆಹ್ವಾನ ವಿತ್ತು. ಅದಕ್ಕೆ ನಾಗೊಬಾ (ನಾನಿಟ್ಟ ಹೆಸರು) ಬೈ ಹೇಳುವಾ ಅಂತ ಹೋದೆ. ಬೆಳಿಗ್ಗೆ ಅಲ್ಲಿ ಬರುತ್ತಾ ಅಂತ ಗೊತ್ತಿರಲಿಲ್ಲ ಆದರೂ ಹೊರಟೆ. ಅದು ಯಾವತ್ತಿನ ಹಾಗೆ ಅಲ್ಲಿ ಕುಳಿತಿತ್ತು. ನಾನು 'ನಾವು ಇಲ್ಲಿಂದ ಹೋಗ್ತಾ ಇದ್ದೇವೆ ನಾಗೋಬಾ...ಬೈ ಅಂದು ಅದರ ತಲೆ ಮೇಲೆ ನೇವರಿಸಿದೆ. ಸ್ವಲ್ಪ ಹೊತ್ತು ಇದ್ದು ನಿಧಾನಕ್ಕೆ ಅಲ್ಲಿಂದ ಹರಿದು ಹೋದ. ಅದು ಮರೆಯಾಗುವ ತನಕ ಅಲ್ಲಿದ್ದೆ. ಆಮೇಲೆ ನಾವು 2 ವರೆ ವರ್ಷ ಉಡುಪಿ...ಆಮೇಲೆ ಶ್ರೀಕಾಂತ್ ಮತ್ತು ಮಿತ್ರರು ಬ್ಯಾಂಕ್ ನ golden hand shake ಪಡೆದು..ಬೆಂಗಳೂರಿಗೆ ಬಂದು, ನಮ್ಮದೇ ಸಂಘ ಸಂಸ್ಥೆ , ಮನೆ ಮಾಡಿ ಕೊಂಡು 25 ವರ್ಷಗಳಾದವು..
ಬಾಲ್ಕನಿ ಗಿಡಗಳೊಂದಿಗೆ ಸಮಯ ಕಳೆಯುವಾಗ ನನಗೆ ಆ ಹಾವಿನ ನೆನಪಾಗುತ್ತೆ ಕೆಲವೊಮ್ಮೆ...
ಇದೆಲ್ಲ ಯಾಕೆ ನೆನಪಾಯಿತು ಎಂದರೆ ಮೊನ್ನೆ you tube ನಲ್ಲಿ ಹಾವು ಹಿಡಿಯುವವ ಯುವಕ ಒಬ್ಬ educating ನೆಪದಲ್ಲಿ ವಿಡಿಯೋ ಮಾಡುತ್ತಿದ್ದಾಗ ನಾಗರ ಹಾವು ಅವನ ಹಿಡಿತದಲ್ಲಿರುವಾಗಲೇ ಸಡನ್ ಟ್ವಿಸ್ಟ್ ಆಗಿ ಅವನ ಕಾಲನ್ನು ಕಚ್ಚಿತು. ಅವನಿಗೆ ಗೊತ್ತಾಗುವಾಗ ವಿಳಂಬವಾಗಿ... ತೀರಿ ಬಿಟ್ಟ. ಪಾಪ 23 ವರ್ಷದ ಹುಡುಗ...
ಅಂದ ಹಾಗೆ ನಮ್ಮ ತೋಟದಲ್ಲಿ ಒಂದು ಮಿರಿ ಮಿರಿ ಮಿಂಚುವ ಕಾಳಿಂಗ ಇದ್ದಾನೆ...❤️🙂
ಚಿತ್ರ from the web...🙏🙏

No comments:
Post a Comment