ಹತ್ತನೇ ತರಗತಿಯಲ್ಲಿದ್ದಾಗಿನಿಂದ ಪೂರಿಗೆ ಹಿಟ್ಟು ಕಲಿಸುವುದು ನನ್ನ ಕೆಲಸ ಆಗಿತ್ತು. ಒಳ್ಳೆ ಗಟ್ಟಿಯಾಗಿ ಕಲೆಸುತ್ತಿದ್ದೆ. ಗಟ್ಟಿ ಹಿಟ್ಟು ಕಲೆಸಿದರೆ ಪೂರಿ ಹೆಚ್ಚು ಎಣ್ಣೆ ಹೀರೋದಿಲ್ಲ. ಮದುವೆಯಾದ ಮೇಲೆ ಮಾವನ ಮನೆಯಲ್ಲೂ ಅದು ನನ್ನ ಪಾಲಿಗೆ ಬಂತು. ಅಮ್ಮನ ಮನೆಗೆ ನನ್ನ ಪದವಿ ಪರೀಕ್ಷೆ, ತಮ್ಮ ತಂಗಿರಯ ಮದುವೆ, ನನ್ನ ಮಕ್ಕಳ ರಜೆಯಲ್ಲಿ ಅಮ್ಮನ ಮನೆಗೆ ಹೋದಾಗ ಒಂದು ದಿನ ನಾನು ಕಲಿಸಿದ ಹಿಟ್ಟಿನ ಪೂರಿ ಮಾಡುವ ಸಂಭ್ರಮ
ಈಗ ವಯಸ್ಸಾಗುತ್ತಿದ್ದ ಹಾಗೆ ಅಷ್ಟು ಗಟ್ಟಿ ಹಿಟ್ಟು ಕಲಿಸಲು ಆಗ್ತಿಲ್ಲ. ಮೊನ್ನೆ ಪೂರಿ ಗೆ ಹಿಟ್ಟು ಕಲಿಸಲು ಅರ್ಧ ಗಂಟೆ ತಗುಲಿತು ..ಬಲಗೈ , ಎಡಗೈ ಪ್ರಯೋಗ ಮಾಡುತ್ತಿದ್ದನ್ನು ನೋಡಿ ಶ್ರೀಕಾಂತ್ ಹೌಹಾರಿ, ಮಧ್ಯಾಹ್ನ ಕ್ಕೆ ಆಫಿಸ್ ಗೆಸ್ಟ್ ಗಳಿಗೆ ನಾನು ಬಿಸಿ ಬೆಳೆ ಭಾತ್ ಮಾಡುವ ಕಾರ್ಯಕ್ರಮ ರದ್ದುಗೊಳಿಸಿ, ಬೇಡ, ಹೊರಗಿನಿಂದ ಆರ್ಡರ್ ಮಾಡ್ತೇನೆ ಅಂದ್ರು... 😁😁ಶ್ರೀಕಾಂತ್ ಅಣ್ಣ ನಮ್ಮಲ್ಲಿದ್ದರು ಕೆಲವು ದಿನ...ಇಡ್ಲಿ, ದೋಸೆ ಉಪ್ಪಿಟ್ಟು ಎಲ್ಲ ಮಾಡಿ ಆಗಿತ್ತು, ಸೋ ಪೂರಿ ಮಾಡುವ ಅಂತ. ಅವರು ಊರಲ್ಲಿ ಒಬ್ಬರೇ ಇರೋದು. ಅವರ ಪತ್ನಿ- ನನ್ನ ಒರಗಿತ್ತಿ ಕಾಲವಾಗಿದ್ದಾರೆ. ಇಬ್ಬರೂ ಹೆಣ್ಣು ಮಕ್ಕಲುಗೆ ಮದುವೆಯಾಗಿ ಬೆಂಗ್ಳೂರಿನಲ್ಲಿದ್ದಾರೆ..


No comments:
Post a Comment