March 16, 2024

ಹೀಗೊಂದು ಮದುವೆ ಊಟ

 

    ಕುಂದಾಪುರದಿಂದ ಗಂಗೊಳ್ಳಿ ದಾರಿಯಲ್ಲಿ

ಅಮ್ಮನ ಸ್ನೇಹಿತೆಯ ಮಗನ ಮದುವೆಗೆ ಗಂಗೊಳ್ಳಿಗೆ ಹೋಗಿದ್ದೆ ಅಂತ ಆನೆಗುಡ್ಡೆ ಪೋಸ್ಟ್ ನಲ್ಲಿ ಹಾಕಿದ್ದೆ ಅಲ್ಲವಾ? ಅದು ಜೈನ್ ಮತ್ತು ಕೊಂಕಣಿ ಮದುವೆ.

ಮೆಹಂದಿ, ಹಳದಿ ಕಾರ್ಯಕ್ರಮಕ್ಕೆ ನಾರ್ತ್ ಸೌತ್ ತಿಂಡಿ ಊಟಗಳಿದ್ರೆ, ಮದುವೆ ದಿನ ನಮ್ಮ ಕೊಂಕಣಿ ಊಟ, ಪುಲಾವ್ ಒಂದು ಬಿಟ್ರೆ.

ಊಟಕ್ಕೆ ತೀರ ಕಡಿಮೆ ಐಟಂಸ್. ಆದ್ದರಿಂದ ಊಟ ವೇಸ್ಟ್ ಮಾಡಿದವರು ಕಡಿಮೆ ಎನ್ನಬಹುದು.

ಸ್ವೀಟ್ ಕಾರ್ನ್ ಹಾಕಿದ ಖರಾಬ್ ಸಲಾಡ್ ಗಳಿರಲಿಲ್ಲ

ಪೂರಿ, ಸಾಗು, ಪುಲಾವ್, ಚನಾ ಕಡ್ಗಿ ಘಶಿ, ಬಿಬ್ಬೊ- ಟೆಂಡ್ಲ್ - ಬಾಟಾಟ್ಯಾ ಉಪ್ಕರಿ, ಮಿಕ್ಸ್ ತರಕಾರಿ ಉಪ್ಪಿನಕಾಯಿ, ಅನ್ನ, ಸಾರು, ಮಜ್ಜಿಗೆ, ಅಪ್ಪಿಪಾಯಸ, ideal ಅವರ chocolate sundae ಐಸ್ಕ್ರೀಮ್...ಇಷ್ಟೇ

ನನ್ನ ಎಲೆ ನೋಡಿ 😆👍



2 comments:

Anonymous said...

ನಾನೂ ಮೇ ತಿಂಗಳಲ್ಲಿ ನನ್ನ ಗೆಳತಿಯ ಮನೆಗೆ ಊಟಕ್ಕೆ ಹೋಗಿದ್ದೆ ಅಮ್ಮ. ಆಕೆಯ ಮಗಳ ಒಸಗೆ ಕಾರ್ಯಕ್ರಮ. ನಾವು ಊಟ ಮಾಡುವಾಗ ಜನರು ಹಿಂದೆಯೇ ನಿಂತಿದ್ರು.. ನನಗೆ ಎಲ್ಲಾ ತರಹದ ಚೂರು ಚೂರು ಖಾದ್ಯ ಎಷ್ಟೊಂದು ರಾಶಿ ಕಂಡಂತಾಗಿ ಭಯ ಆಗತೊಡಗಿತು. ಹಿಂದಿನವರು ನಮ್ಮ ಎಲೆ ನೋಡ್ತಾ ಬೇರೆ ನಿಂತಿದ್ದಾರೆ. ಸಂಕೋಚಕ್ಕಿಂತ ನನ್ನ ಗಂಟಲು ಅವಸರದಲ್ಲಿ ಕ್ರಿಯಾಶೀಲ ಆಗೋದು ಕಷ್ಟ. ನಾನು ಮತ್ತಷ್ಟು ನಿಧಾನವಾಗಿ ತಿಂದೆ. ಬೋಂಡಾ, ಹಪ್ಪಳ ಬೇಡ ಅಂದ್ರೂನು ಬಡಿಸಿದ್ರು. ಅದನ್ನು ಮೊದಲೇ ಪ್ರಭಾಕರಗೆ ವರ್ಗಾಯಿಸಿದ್ದೆ. ಉಳಿದಂತೆ ಎಲ್ಲಾನೂ ತಿಂದು ಈ ನಿಮ್ಮ ಎಲೆಗಿಂತ ಥಳ ಥಳ ಮಾಡಿ ಎದ್ದೆ. ಹಿಂದೆ ನಿಂತವರು ಊಟ ಮಾಡೂದಂದ್ರ ಹಿಂಗೇ ಏನೋ ಅಂತ ಅಂದ್ಕೊಂಡಿರಬಹುದು.

nenapina sanchy inda said...

ಹೌದು ಸಾವಿತ್ರಿ. ನನಗೂ ಆ ಅನುಭವ ಆಗಿದೆ ಹಲವಾರು ಬಾರಿ. .thank you for the comment ❤️🙏