ಮೊನ್ನೆ ಸಂಕಷ್ಟಿ ದಿನ ಕುಂದಾಪುರದಲ್ಲಿದ್ದೆವು. ಗಂಗೊಳ್ಳಿಯಲ್ಲಿ ಅಮ್ಮನ ಫ್ರೆಂಡ್ ಮಗನ ಮದುವೆಯಿತ್ತು. ಅಮ್ಮನಿಗೆ ಆ ಮದುವೆಗೆ ಹೋಗಲು ತುಂಬಾ ಆಸೆ ಇತ್ತು ಆದರೆ ಯಾರದ್ದೂ ಸಾಥ್ ಇರಲಿಲ್ಲ. ಅದಕ್ಕೆ ನಾನು ಬರುತ್ತೇನೆ ಅಮ್ಮ, ಬೆಳಗಾವಿಯಿಂದ ಗಾಡಿ ಮಾಡಿಕೊಂಡು ಹೋಗುವಾ ಅಂತಂದೆ. ಮಜಾ ಮಾಡುವಾ ಅಂದೆ.
ಹೋಗುವ ದಿನ ಹತ್ತಿರ ಬರುತ್ತಿದ್ದ ಹಾಗೆ ಮಾಲವಿಕಾ ಹಾಗೂ ತಮ್ಮ ಕೂಡ ಬರುತ್ತೇನೆ ಅಂದ್ರು. ತಮ್ಮನ ಫ್ರೆಂಡ್ ಕಾರಲ್ಲಿ ಹೋಗುವುದೆಂದಾಯಿತು. 😀
ಅಮ್ಮನಿಗೆ ಆ ದಿನ ಸಂಕಷ್ಟಿ ಎಂದು ನೆನಪಾಯಿತು. ಆನೆಗುಡ್ಡೆಗೆ ಹೋಗುವನಾ ಅಂತ ಕೇಳಿದರು. ನಾವು ಉಳಿದುಕೊಂಡ ಹೋಟಲ್ ನವರು ನಮಗೆ ರಿಕ್ಷಾ ಮಾಡಿ ಕೊಡಲು ಮುಂದಾದರು. ತಮ್ಮ ಮತ್ತು ಅವನ ಫ್ರೆಂಡ್ ಗೆ ಬೆಳ್ ಬೆಳಿಗ್ಗೆ ತೊಂದರೆ ಕೊಡುವುದು ಬೇಡ ಅಂತ.
ಬೆಳಿಗ್ಗೆ ನಾವು ಟಿ ಕುಡಿಯಲು ಹೋಗುವಾಗ ಅಲ್ಲೊಂದು ರಿಕ್ಷಾ ಸ್ಟಾಅಂಡ್ ಇತ್ತು. ರೀಕ್ಷದವನು ನಮಗೆ ಆನೆಗುಡ್ಡೆಗೆ ಕರೆದು ಕೊಂಡು ಹೋಗಲು ತಯಾರಾದ. ನಾವು ಹೋಟಲ್ ಗೆ ಮರಳಿ, reception ನಲ್ಲಿ ನಾವು ಬೇರೆ ಆಟೋ ಹಿಡಿದುಕೊಂಡು ಹೋಗುತ್ತೇವೆಂದೆವು.
ಆನೆಗುಡ್ಡೆ ಗಣಪತಿ ದೇವಸ್ಥಾನದಲ್ಲಿ ರಶ್ ಇರಬಹುದೆಂದು ಕೊಂಡಿದ್ದೆ. ಅಮ್ಮ ಪೂಜೆ ಎಲ್ಲ ಸಲ್ಲಿಸಿದರು. ಹೊರಗಡೆ ಬರುತ್ತಿದ್ದ ಹಾಗೆ ಶ್ರೀಕಾಂತ್ ಫೋನ್ ಮಾಡಿದರು, ಬೆಂಗಳೂರಿನಿಂದ...bansi ರವೆ ಯಾವ ಡಬ್ಬಿಯಲ್ಲಿದೆ ಎಂದು ಕೇಳಲು...19 ದಿನ ಆಗಿತ್ತು ನಾನು ಬೆಂಗಳೂರು ಬಿಟ್ಟು 😀. ಮತ್ತೆ ಇತರೆ ವಿಷಯಗಳು ಮಾತಾನಾಡುತ್ತಿದ್ದ ಹಾಗೆ ಒಂದು ಕರು ಬಂದು ನನಗೆ ತೊಂದರೆ ಕೊಡಲಾರಂಭಿಸಿತು.
ನನ್ನ ಬ್ಯಾಗ್ ನೊಳಗೆ ಏನಿದೆ ಅಂತ ಅದಕ್ಕೆ ಕುತೂಹಲ. 'ನೀನು ತಿನ್ನುವಂತದ್ದು ನನ್ನ ಬ್ಯಾಗ್ ನಲ್ಲಿ ಏನೂ ಇಲ್ಲ ಅನ್ನುತ್ತಿದ್ದ ಹಾಗೆ, ಅಮ್ಮ ,ಇರು ಅಂತ ಅಲ್ಲೇ ಇದ್ದ ಅಂಗಡಿ ಬಳಿಗೆ ಸಾರಿದರು, ಬಾಳೆ ಹಣ್ಣು ತರಲು. ಕಷ್ಟಪಟ್ಟು ಬಾಳೆ ಹಣ್ಣು ತಿಂದಿತು ಆ ಕರು. ಮಾಲವಿಕ ಕುಂದಾಪುರದ ಬೀಚ್ ಗೆ ಹೋಗಿದ್ದಳು. ಅವಳಿಗೆ ಆ ಕರು ಅದೆಷ್ಟು ಶೇಲೇ ಮಾಡಿತು ಬಾಳೆ ಹಣ್ಣು ತಿನ್ನಲು ಎಂದಾಗ...'ಅದಕ್ಕೆ ಗೋಬಿ ಮಂಚೂರಿ ಬೇಕಿತ್ತೇನೋ' ಅಂದಾಗ ನಕ್ಕೂ ನಕ್ಕೂ.....
ಅಮ್ಮನಿಗೆ ಗಣಪನನ್ನು ನೋಡಿ ಖುಷಿಯಾಗಿದ್ದು ನನಗೂ ಖುಷಿ 🙏🙏
ಅಲ್ಲಿ ಬೇರೆ ಯಾವ ಫೋಟೋ ತೆಗೆಯಬೇಕೆನಿಸಲಿಲ್ಲ. 👍👍
❤️❤️

No comments:
Post a Comment